ಎಕ್ಸ್‌ಕ್ಲೂಸೀವ್‌: ಜೂನ್‌ ತಿಂಗಳ ಬಿಡುಗಡೆಗೂ ಮುನ್ನ ರಸ್ತೆಗಳಲ್ಲಿ ಕಾಣಿಸಿಕೊಂಡ Tata Altroz Racer

published on ಮೇ 16, 2024 10:54 am by rohit for ಟಾಟಾ ಆಲ್ಟ್ರೋಜ್ ರೇಸರ್

  • 27 Views
  • ಕಾಮೆಂಟ್‌ ಅನ್ನು ಬರೆಯಿರಿ

ಪ್ರತ್ಯಕ್ಷವಾದ ಮೊಡೆಲ್‌ ಭಾರತ್‌ ಗ್ಲೋಬಲ್‌ ಮೊಬಿಲಿಟಿ ಎಕ್ಸ್‌ಪೋ 2024 ರಲ್ಲಿ ಪ್ರದರ್ಶನಗೊಂಡ ರೀತಿಯಲ್ಲೇ ಆರೆಂಜ್‌ ಹಾಗೂ ಕಪ್ಪು ಪೇಂಟ್‌ ಆಯ್ಕೆಗಳ ಫಿನಿಶಿಂಗ್‌ ಅನ್ನು ಹೊಂದಿದೆ.

Tata Altroz Racer spied undisguised

  • ಟಾಟಾ ಕಂಪನಿಯು ಭಾರತ್ ಮೊಬಿಲಿಟಿ ಗ್ಲೋಬಲ್ ಎಕ್ಸ್‌ಪೋ 2024 ರಲ್ಲಿ ಆಲ್ಟ್ರೋಜ್ ರೇಸರ್‌ನ ನವೀಕರಿಸಿದ ಆವೃತ್ತಿಯನ್ನು ಪ್ರದರ್ಶಿಸಿತ್ತು.
  • ಇದು ಪೇಂಟ್ ಸ್ಟ್ರೈಪ್‌ಗಳು ಮತ್ತು ಹೊಸ ಅಲಾಯ್ ಚಕ್ರಗಳಂತಹ ಸ್ಟೈಲಿಶ್‌ ವಿನ್ಯಾಸದ ಸ್ಪರ್ಶವನ್ನು ಹೊಂದಿರುವ ಸಾಧ್ಯತೆಯಿದೆ.
  • ಕ್ಯಾಬಿನ್‌ ಆಲ್‌-ಬ್ಲಾಕ್‌ ಥೀಮ್‌ನಲ್ಲಿ ಬರುವ ಜೊತೆಗೆ,  ಸುತ್ತಲೂ ಕಿತ್ತಳೆ ಬಣ್ಣದ ಹೈಲೈಟ್‌ಗಳನ್ನು ಹೊಂದಿರಲಿದೆ.
  • 10.25-ಇಂಚಿನ ಟಚ್‌ಸ್ಕ್ರೀನ್, ಹೆಡ್ಸ್-ಅಪ್ ಡಿಸ್ಪ್ಲೇ ಮತ್ತು ಆರು ಏರ್‌ಬ್ಯಾಗ್‌ಗಳು
  • ಇದು ಮ್ಯಾನುಯಲ್ ಮತ್ತು ಸ್ವಯಂಚಾಲಿತ ಆಯ್ಕೆಗಳೊಂದಿಗೆ ನೆಕ್ಸಾನ್‌ನ 120 PS ಟರ್ಬೊ-ಪೆಟ್ರೋಲ್ ಎಂಜಿನ್ ಅನ್ನು ಪಡೆಯುವ ಸಾಧ್ಯತೆಯಿದೆ.
  • ಜೂನ್ 2024 ಕ್ಕೆ ಬಿಡುಗಡೆ ; ಬೆಲೆಗಳು ರೂ. 10 ಲಕ್ಷ (ಎಕ್ಸ್ ಶೋ ರೂಂ)ದಿಂದ ಪ್ರಾರಂಭವಾಗುವ ಸಾಧ್ಯತೆ

 ಟಾಟಾ ಅಲ್ಟ್ರೋಜ್‌ ರೇಸರ್  ಅನ್ನು 2024ರ ಜೂನ್‌ನಲ್ಲಿ ಬಿಡುಗಡೆಗೊಳ್ಳಲಿದೆ ಎಂಬುದು ಇತ್ತೀಚಿಗೆ ದೃಢಪಟ್ಟಿದೆ. ಬಿಡುಗಡೆಗೂ ಮುನ್ನ ನಾವು ಈಗ ಅದರ ಪರೀಕ್ಷಾ ವಾಹನಗಳಲ್ಲಿ ಒಂದು ಕಾರನ್ನು ಯಾವುದೇ ಮುಚ್ಚಮರೆಯಿಲ್ಲದೆ ರಸ್ತೆಯಲ್ಲಿ ಸಂಚರಿಸಿರುವುದನ್ನು  ಗುರುತಿಸಿದ್ದೇವೆ. ಆಟೋ ಎಕ್ಸ್‌ಪೋ 2023 ರಲ್ಲಿ ಆಲ್ಟ್ರೋಜ್ ರೇಸರ್ ಬಗ್ಗೆ  ನಮಗೆ ಮೊದಲಿಗೆ ಮಾಹಿತಿ ನೀಡಲಾಗಿತ್ತು ಮತ್ತು ಸ್ಪೋರ್ಟಿಯರ್ ಹ್ಯಾಚ್‌ಬ್ಯಾಕ್ ಅನ್ನು ಭಾರತ್ ಮೊಬಿಲಿಟಿ ಎಕ್ಸ್‌ಪೋ 2024 ರಲ್ಲಿ ಮತ್ತೊಮ್ಮೆ ಪ್ರದರ್ಶಿಸಲಾಗಿತ್ತು.

 ಏನು ಕಾಣಿಸಿತು?

ಇತ್ತೀಚಿನ ಪತ್ತೆಯಾದ ದೃಶ್ಯಗಳಲ್ಲಿ ಸ್ಟ್ಯಾಂಡರ್ಡ್ ಟಾಟಾ ಆಲ್ಟ್ರೋಜ್‌ನ ಬದಲಾದ ಆವೃತ್ತಿಯು ಯಾವುದೇ ಮುಚ್ಚಮರೆಯಿಲ್ಲದ ರಸ್ತೆಯಲ್ಲಿ ಪ್ರಯಾಣಿಸುತ್ತಿರುವುದು ಕಂಡು ಬಂದಿದೆ. ಇದು ಭಾರತ್ ಮೊಬಿಲಿಟಿ ಗ್ಲೋಬಲ್ ಎಕ್ಸ್‌ಪೋ 2024 ರಲ್ಲಿ ಪ್ರದರ್ಶಿಸಲಾದ ಮಾದರಿಯಲ್ಲೇ  ಕಿತ್ತಳೆ ಮತ್ತು ಕಪ್ಪು ಬಣ್ಣದ ಫಿನಿಶಿಂಗ್‌ ಅನ್ನು ಹೊಂದಿದೆ. ಅದರ ಪ್ರದರ್ಶಿತ ಆವೃತ್ತಿಯಲ್ಲಿ ಕಂಡಂತೆ ಬಾನೆಟ್‌ನಿಂದ ರೂಫ್‌ನ ಅಂತ್ಯದವರೆಗೆ ಎರಡು ಬಿಳಿ ಪಟ್ಟಿಗಳನ್ನು ಸಹ ನೀವು ಇದರಲ್ಲಿ ಗುರುತಿಸಬಹುದು.

Tata Altroz Racer side spied undisguised

 ಇತರ ಗಮನಾರ್ಹ ಮುಖ್ಯಾಂಶಗಳೆಂದರೆ,  ಸ್ಟ್ಯಾಂಡರ್ಡ್ ಮಾದರಿಯ ರೀತಿಯಂತೆಯೇ ಅದೇ ಮಿಶ್ರಲೋಹದ ಚಕ್ರಗಳಿರಲಿವೆ ಮತ್ತು ಇದು ಟೈಲ್‌ಗೇಟ್‌ನಲ್ಲಿನ 'ಐಟರ್ಬೋ' ಬ್ಯಾಡ್ಜ್ ಅನ್ನು ಹೊಂದಿರಲಿದೆ. ಆಟೋ ಈವೆಂಟ್‌ನಲ್ಲಿ ಪ್ರದರ್ಶನಗೊಂಡ  ಆಲ್ಟ್ರೊಜ್ ರೇಸರ್ ಹೊಂದಿದ್ದ ವಿಭಿನ್ನವಾದ 16-ಇಂಚಿನ ಮಿಶ್ರಲೋಹದ ಚಕ್ರಗಳನ್ನು ಅಂತಿಮ ಉತ್ಪಾದನಾ ಮಾದರಿಯಲ್ಲೂ ಕೂಡ ನೋಡಬಹುದು. ಕೊನೆಯದಾಗಿ, ಮುಂಭಾಗದ ಫೆಂಡರ್‌ಗಳಲ್ಲಿ ʼರೇಸರ್‌ʼ ಬ್ಯಾಡ್ಜ್ ಅನ್ನು ಅಳವಡಿಸಲಾಗಿದೆ.

ಅಪ್‌ಡೇಟ್‌ ಆಗಿರುವ ಕ್ಯಾಬಿನ್‌ ಪಡೆಯಲು

ಪರೀಕ್ಷಾ ವಾಹನದ ಕ್ಯಾಬಿನ್ ಒಳಗಿನ ವೈಶಿಷ್ಟ್ಯಗಳನ್ನು ಕ್ಯಾಮರಾದಲ್ಲಿ ಸೆರೆಹಿಡಿಯಲು ನಮಗೆ  ಸಾಧ್ಯವಾಗದಿದ್ದರೂ, ಅದು ಪ್ರದರ್ಶನಗೊಂಡ ಮಾದರಿಯ ಹೋಲಿಕೆಯನ್ನು ಹೊಂದಿದೆ ಎಂಬುದನ್ನು ನಿರೀಕ್ಷಿಸಬಹುದಾಗಿದೆ.  ಟಾಟಾ ಆಲ್‌-ಬ್ಲಾಕ್‌ ಕ್ಯಾಬಿನ್‌ ಥೀಮ್‌ ಮತ್ತು  ಕಪ್ಪು ಲೆಥೆರೆಟ್ ಸೀಟ್ ಅಪ್ಹೋಲ್ಸ್ಟರಿಯನ್ನು ಹೊಂದಿರುವ ಕಾರನ್ನು ಪ್ರದರ್ಶಿಸಿತ್ತು. ಇದರ ಕ್ಯಾಬಿನ್ ಸೀಟ್‌ಗಳು ಮತ್ತು ಸ್ಟೀರಿಂಗ್ ವೀಲ್‌ನಲ್ಲಿ ವ್ಯತಿರಿಕ್ತ ಕಿತ್ತಳೆ ಹೈಲೈಟ್‌ಗಳನ್ನು ಹೊಂದಿದೆ.

2024 Tata Altroz Racer cabin

ಉಪಕರಣಗಳ ವಿಷಯದಲ್ಲಿ, ಈಗಾಗಲೇ ಪ್ರದರ್ಶನಗೊಂಡ ಆಲ್ಟ್ರೊಜ್ ರೇಸರ್  ವೈರ್‌ಲೆಸ್ ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್ಪ್ಲೇ, ಹೆಡ್-ಅಪ್ ಡಿಸ್ಪ್ಲೇ, 7-ಇಂಚಿನ ಸಂಪೂರ್ಣ ಡಿಜಿಟಲ್ ಡ್ರೈವರ್ಸ್‌, ಆರೆಂಜ್‌ ಆಂಬಿಯೆಂಟ್‌ ಲೈಟಿಂಗ್‌, ಮತ್ತು ವೆಂಟಿಲೇಟೆಡ್‌ ಮುಂಭಾಗದ ಆಸನಗಳೊಂದಿಗೆ ದೊಡ್ಡ 10.25-ಇಂಚಿನ ಟಚ್ ಸ್ಕ್ರೀನ್‌ ಅನ್ನು ಹೊಂದಿದೆ. ಟಾಟಾ ನೆಕ್ಸಾನ್ ಹೊಸ ವೇರಿಯಂಟ್‌ಗಳೊಂದಿಗೆ ಬರಲಿದ್ದು, ಇದರ ದರ 7.99 ಲಕ್ಷ ರೂ.ಗಳಿಂದ ಪ್ರಾರಂಭವಾಗುತ್ತದೆ.  ಇದರಲ್ಲಿ ಆರು ಏರ್‌ಬ್ಯಾಗ್‌ಗಳು, 360-ಡಿಗ್ರಿ ಕ್ಯಾಮೆರಾ (ಪರೀಕ್ಷಾ ವಾಹನದಲ್ಲಿಯೂ ಕಾಣಬಹುದು), ISOFIX ಚೈಲ್ಡ್ ಸೀಟ್ ಆಂಕಾರೇಜ್‌ಗಳು ಮತ್ತು ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್ (ESC) ನಂತಹ ಸುರಕ್ಷತಾ ಫೀಚರ್‌ಗಳನ್ನು ಒಳಗೊಂಡಿರುತ್ತದೆ.

ಇದನ್ನೂ ಓದಿ: ಹೊಸ ವೇರಿಯಂಟ್‌ ಗಳನ್ನು ಪಡೆಯಲಿರುವ ಟಾಟಾ ನೆಕ್ಸನ್‌, ಈಗ ಆರಂಭಿಕ ಬೆಲೆ ರೂ. 7.99 ಲಕ್ಷ

 ಹೆಚ್ಚು ಶಕ್ತಿಯುತ ಟರ್ಬೋ-ಪೆಟ್ರೋಲ್‌ ಇಂಜಿನ್

ಟಾಟಾ ಕಂಪನಿಯು ನೆಕ್ಸಾನ್‌ ಟರ್ಬೋ-ಪೆಟ್ರೋಲ್‌ ಇಂಜಿನ್‌ನೊಂದಿಗೆ ಆಲ್ಟ್ರೋಜ್‌ ರೇಸರ್‌ ಅನ್ನು ಒದಗಿಸಲಿದೆ, ವಿವರಗಳನ್ನು ಕೆಳಗಿನಂತಿವೆ:

 ವೈಶಿಷ್ಟ್ಯಗಳು

 1.2-ಲೀಟರ್‌ ಟರ್ಬೋ-ಪೆಟ್ರೋಲ್‌ ಇಂಜಿನ್‌

 ಸಾಮರ್ಥ್ಯ

 120 ಪಿಎಸ್‌

 ಟಾರ್ಕ್‌

 170 ಎನ್‌ಎಂ

 ಟ್ರಾನ್ಸ್‌ ಮಿಶನ್

 6-ಸ್ಪೀಡ್‌ ಎಂಟಿ, 7-ಸ್ಟೀಪ್‌ ಡಿಸಿಟಿ (ನಿರೀಕ್ಷಿತ)

 ಆಲ್ಟ್ರೋಸ್‌ ರೇಸರ್,  ಸ್ಟ್ಯಾಂಡರ್ಡ್ ಆಲ್ಟ್ರೋಸ್‌ 5-ಸ್ಪೀಡ್ ಮ್ಯಾನುವಲ್ ಶಿಫ್ಟರ್ ಬದಲಿಗೆ 6-ಸ್ಪೀಡ್ ಮ್ಯಾನ್ಯುವಲ್ ಪ್ರಸರಣದೊಂದಿಗೆ ಬರಲಿದೆ ಮತ್ತು ನಿಯಮಿತ ಮಾದರಿಗಳಲ್ಲಿ ನೀಡಲಾಗುವ 6-ಸ್ಪೀಡ್ ಡಿಸಿಟಿ ಬದಲಿಗೆ 7-ಸ್ಪೀಡ್ ಡ್ಯುಯಲ್-ಕ್ಲಚ್ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್ (DCT) ಆಯ್ಕೆಯನ್ನು ಸಹ ಪಡೆಯಬಹುದು. 

 ಟಾಟಾ ಈಗಾಗಲೇ 'ಆಲ್ಟ್ರೋಜ್ ಐಟರ್ಬೊ' ಎಂದು ಕರೆಯಲ್ಪಡುವ  ಟರ್ಬೊ-ಪೆಟ್ರೋಲ್ ವೇರಿಯಂಟ್‌ನ ಹ್ಯಾಚ್‌ಬ್ಯಾಕ್‌ ಅನ್ನು ನೀಡುತ್ತದೆ; ಇದು ನು 5-ಸ್ಪೀಡ್ ಮ್ಯಾನುವಲ್ ಟ್ರಾನ್ಸ್‌ಮಿಷನ್‌ಗೆ ಸಂಯೋಜಿತಗೊಂಡ1.2-ಲೀಟರ್ ಟರ್ಬೊ-ಪೆಟ್ರೋಲ್ ಎಂಜಿನ್ (110 PS/140 ಎನ್‌ಎಂ) ಅನ್ನು ಕೂಡ ಬಳಸುತ್ತದೆ. ಆಲ್ಟ್ರೋಸ್‌ ಐಟರ್ಬೋ ಅನ್ನು ಆಲ್ಟ್ರೋಸ್‌ ರೇಸರ್ ಜೊತೆಗೆ ಕೈಗೆಟಕುವ ದರದ ಪರ್ಯಾಯವಾಗಿ ಮಾರಾಟ ಮಾಡುವ ಸಾಧ್ಯತೆಯಿದೆ.

 ನಿರೀಕ್ಷಿತ ದರ ಮತ್ತು ಸ್ಪರ್ಧೆ

Tata Altroz Racer rear spied undisguised

ಟಾಟಾ ಆಲ್ಟ್ರೋಸ್‌ ರೇಸರ್‌ ದರ 10 ಲಕ್ಷ ರೂ. (ಎಕ್ಸ್‌-ಶೋರೂಂ) ಇರಬಹುದು ಎಂದು ಅಂದಾಜಿಸಲಾಗುತ್ತಿದೆ. ಇದು ಹ್ಯುಂಡೈ i20 N ಲೈನ್‌ ಗೆ ನೇರ ಸ್ಪರ್ಧಿಯಾಗಿದೆ.

 ಹೆಚ್ಚಿನ ಓದಿಗೆ : ಟಾಟಾ ಅಲ್ಟ್ರೋಜ್‌ ಆನ್‌ ರೋಡ್‌ ಬೆಲೆ

ಅವರಿಂದ ಪ್ರಕಟಿಸಲಾಗಿದೆ
was this article helpful ?

0 out of 0 found this helpful

Write your Comment ನಲ್ಲಿ ಟಾಟಾ ಆಲ್ಟ್ರೋಝ್ Racer

Read Full News

ಕಾರು ಸುದ್ದಿ

  • ಟ್ರೆಂಡಿಂಗ್ ಸುದ್ದಿ
  • ಇತ್ತಿಚ್ಚಿನ ಸುದ್ದಿ

trendingಹ್ಯಾಚ್ಬ್ಯಾಕ್ ಕಾರುಗಳು

  • ಲೇಟೆಸ್ಟ್
  • ಉಪಕಮಿಂಗ್
  • ಪಾಪ್ಯುಲರ್
×
We need your ನಗರ to customize your experience