Login or Register ಅತ್ಯುತ್ತಮ CarDekho experience ಗೆ
Login

ಮಾರುತಿ ಬ್ರೆಝಾಗಿಂತ 5 ಹೆಚ್ಚುವರಿ ಫೀಚರ್‌ಗಳನ್ನು ಪಡೆಯಲಿರುವ ಹೊಸ Tata Nexon

ಟಾಟಾ ನೆಕ್ಸಾನ್‌ ಗಾಗಿ ansh ಮೂಲಕ ಸೆಪ್ಟೆಂಬರ್ 07, 2023 07:05 pm ರಂದು ಪ್ರಕಟಿಸಲಾಗಿದೆ

ವೆಂಟಿಲೇಟಡ್ ಫ್ರಂಟ್ ಸೀಟುಗಳು ಮತ್ತು ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್‌ನಂತಹ ಫೀಚರ್‌ಗಳು ಈ ಹಿಂದೆ ಫೇಸ್ ಲಿಫ್ಟ್ ಆಗಿದ್ದ ನೆಕ್ಸಾನ್‌ನಲ್ಲಿ ಇದ್ದವು

ನವೀಕೃತ ಟಾಟಾ ನೆಕ್ಸಾನ್ ಅನ್ನು ಅನಾವರಣಗೊಳಿಸಲಾಗಿದ್ದು, ಇದರ ಫೀಚರ್‌ಗಳ ವಿವರಗಳನ್ನು ಬಹಿರಂಗಪಡಿಸಲಾಗಿದೆ. ಮಾರುತಿ ಬ್ರೆಝಾ, ನೆಕ್ಸಾನ್‌ನ ಅತಿ ದೊಡ್ಡ ಪ್ರತಿಸ್ಪರ್ಧಿಗಳಲ್ಲಿ ಒಂದಾಗಿದ್ದು, ಎರಡೂ ಕೂಡಾ ತಮ್ಮದೇ ವಿಭಾಗದಲ್ಲಿ ಬೇರೆ ಬೇರೆ ಸಮಯದಲ್ಲಿ ಅತ್ಯುತ್ತಮ ಮಾರಾಟಗಾರ ಎಂಬ ಬಿರುದನ್ನು ಪಡೆದಿವೆ. ಎರಡನೆಯದನ್ನು 2022 ರಲ್ಲಿ ಹೊಸ ಫೀಚರ್‌ಗಳು ಮತ್ತು ಸುಧಾರಣೆಗಳೊಂದಿಗೆ ಸಂಪೂರ್ಣವಾಗಿ ಅಪ್‌ಡೇಟ್ ಮಾಡಲಾಗಿದೆ. ಈಗ, ನೆಕ್ಸಾನ್ ಫೇಸ್‌ಲಿಫ್ಟ್ ಇನ್ನಷ್ಟು ಫೀಚರ್‌ಭರಿತವಾಗಿದ್ದು, ಮಾರುತಿ SUVಗಿಂತ ಹೆಚ್ಚಿನದೇನನ್ನು ಪಡೆದಿದೆ ಎಂಬುದರ ವಿವರ ಇಲ್ಲಿದೆ.

ದೊಡ್ಡದಾದ ಟಚ್‌ಸ್ಕ್ರೀನ್

ಈ ನವೀಕೃತ ನೆಕ್ಸಾನ್ ಹ್ಯಾರಿಯರ್ ಮತ್ತು ಸಫಾರಿಯಿಂದ 10.25-ಇಂಚು ಟಚ್‌ಸ್ಕ್ರೀನ್ ಅನ್ನು ಪಡೆದಿದೆ. ಈ ಹೊಸ ಡಿಸ್‌ಪ್ಲೇ, ಸ್ಲಿಮ್ ಫಾರ್ಮ್ ಫ್ಯಾಕ್ಟರ್‌ ಅನ್ನು ಹೊಂದಿದ್ದು, ವೈರ್‌ಲೆಸ್ ಆ್ಯಂಡ್ರಾಯ್ಡ್ ಆಟೋ ಮತ್ತು ಆ್ಯಪಲ್ ಕಾರ್‌ಪ್ಲೇ ಅನ್ನು ಬೆಂಬಲಿಸುತ್ತದೆ. ಇನ್ನೊಂದೆಡೆ ಬ್ರೆಝಾ ಕೂಡಾ ವೈರ್‌ಲೆಸ್ ಕನೆಕ್ಟಿವಿಟಿಯನ್ನು ಪಡೆದಿದ್ದು, ಇದರಲ್ಲಿ ಕೇವಲ 9-ಇಂಚು ಇನ್ಫೋಟೇನ್‌ಮೆಂಟ್ ಸಿಸ್ಟಮ್ ಮಾತ್ರ ಇರುತ್ತದೆ.

ಸಂಪೂರ್ಣ ಡಿಜಿಟಲ್ ಡ್ರೈವರ್ ಡಿಸ್‌ಪ್ಲೇ

ಬ್ರೆಝಾಗೆ ಹೋಲಿಸಿದರೆ, ನೆಕ್ಸಾನ್‌ನ ಡಿಜಿಟಲ್ ಉತ್ಕೃಷ್ಟತೆಯು ಹೊಸ 10.25-ಇಂಚು ಸಂಪೂರ್ಣ ಡಿಜಿಟಲ್ ಡ್ರೈವರ್ ಡಿಸ್‌ಪ್ಲೇನೊಂದಿಗೆ ಮುಂದುವರಿಯುತ್ತದೆ. ಈ ಯುನಿಟ್, ಟೈರ್ ಪ್ರೆಶರ್, ಮೀಡಿಯಾ, ಡ್ರೈವ್ ಮಾಹಿತಿ ಮತ್ತು ಕಾಂಪಸ್ ಅನ್ನು ಒಳಗೊಂಡ ಎಲ್ಲಾ ಮಾಹಿತಿಯನ್ನು ಡಿಸ್‌ಪ್ಲೇ ಮಾಡುತ್ತದೆ. ಅಲ್ಲದೇ, ಇದು ಕೇವಲ ಐಷಾರಾಮಿ ವಿಭಾಗಕ್ಕೆ ಮಾತ್ರ ಸೀಮಿತವಾಗಿದ್ದ ಸಂಪೂರ್ಣ ಡಿಸ್‌ಪ್ಲೇ ಅನ್ನು ನ್ಯಾವಿಗೇಷನ್‌ಗಾಗಿ ಬಳಸುವ ಫೀಚರ್ ಅನ್ನೂ ಪಡೆದಿದೆ. ಆದರೆ ಬ್ರೆಝಾ ಅನಾಲಾಗ್ ಡಯಲ್‌ಗಳ ಮಧ್ಯದಲ್ಲಿ TFT ಕಲರ್ ಡಿಸ್‌ಪ್ಲೇ ಮಾತ್ರ ಪಡೆದಿದೆ.

ಇದನ್ನೂ ಓದಿ: Tata Nexon EV Facelift ಇಂದು ಅನಾವರಣ: ಇಲ್ಲಿಯವರೆಗಿನ ಬೆಳವಣಿಗೆಗಳ ಬಗ್ಗೆ ಒಂದು ಮೆಲುಕು

ವೆಂಟಿಲೇಟಡ್ ಫ್ರಂಟ್ ಸೀಟುಗಳು

ಎರಡೂ SUVಗಳು ತಮ್ಮ ಟಾಪ್ ವೇರಿಯೆಂಟ್‌ಗಳಲ್ಲಿ ಲೆದರೆಟ್ ಅಪ್‌ಹೋಲ್ಸ್‌ಟ್ರಿಯನ್ನು ಪಡೆದಿದ್ದು, ಈ ಹೊಸ ನೆಕ್ಸಾನ್ ಮುಂಭಾಗದ ಸೀಟುಗಳಿಗೆ ವೆಂಟಿಲೇಷನ್ ಕಾರ್ಯವನ್ನು ಪಡೆದಿದೆ. ಟಾಟಾ SUV ತನ್ನ ಪೂರ್ವ ನವೀಕೃತ ಆವೃತ್ತಿಯಲ್ಲೂ ಇದನ್ನು ಪಡೆದಿದ್ದು, ಇಲ್ಲೂ ಕೂಡಾ ಇದೇ ಮುಂದುವರಿದಿದೆ.

ಇನ್ನಷ್ಟು ಶುದ್ಧ ಗಾಳಿ

ಬ್ರೆಝಾಗೆ ಹೋಲಿಸಿದರೆ ಹೊಸ ನೆಕ್ಸಾನ್ ಪಡೆದಿರುವ ಇನ್ನೊಂದು ಒಪ್ಪವಾದ ಫೀಚರ್ ಎಂದರೆ PM2.5 ಏರ್ ಫಿಲ್ಟರ್ ಮತ್ತು ಪ್ಯೂರಿಫೈಯರ್. ಗಾಳಿಯ ಗುಣಮಟ್ಟವನ್ನು ಇನ್ಫೋಟೇನ್‌ಮೆಂಟ್ ಸಿಸ್ಟಮ್‌ನಲ್ಲಿ ಪರಿಶೀಲಿಸಬಹುದು.

ಇದನ್ನೂ ಓದಿ: ಪರಿಶೀಲಿಸಿ, ಟಾಟಾ ನೆಕ್ಸಾನ್ ಫೇಸ್‌ಲಿಫ್ಟ್‌ನ ವೇರಿಯೆಂಟ್‌ವಾರು ಪವರ್‌ಟ್ರೇನ್‌ಗಳು ಮತ್ತು ಕಲರ್ ಆಯ್ಕೆಗಳು

ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್

ಎರಡೂ ಕಾರುಗಳು ಸುರಕ್ಷತಾ ಫೀಚರ್‌ಗಳ ಉದ್ದದ ಪಟ್ಟಿಯನ್ನೇ ಹೊಂದಿದ್ದು, ಇದರಲ್ಲಿ 6 ಏರ್‌ಬ್ಯಾಗ್‌ಗಳು, ABS ಜೊತೆಗಿನ EBD, ಮತ್ತು 360-ಡಿಗ್ರಿ ಕ್ಯಾಮರಾ ಕೂಡಾ ಸೇರಿದೆ. ಆದರೆ ಬ್ರೆಝಾದಲ್ಲಿ ಇಲ್ಲದಿರುವ ಒಂದು ಫೀಚರ್ ಎಂದರೆ ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್ (TPMS). ನೆಕ್ಸಾನ್ ಈ ಫೀಚರ್ ಅನ್ನು ಪಡೆದಿದ್ದು, ಪ್ರತಿ ಟೈರ್‌ನ ಪ್ರೆಶರ್ ಬಗೆಗಿನ ವಿವರವನ್ನು ಡಿಜಿಟಲ್ ಡ್ರೈವರ್ ಡಿಸ್‌ಪ್ಲೇನಲ್ಲಿ ನೋಡಬಹುದಾಗಿದೆ.

ಬೋನಸ್: ಧ್ವನಿ-ಆಧಾರಿತ ಸನ್‌ರೂಫ್

ಯಾವುದೇ SUV ನಲ್ಲಿ ಈಗ ಸಾಮಾನ್ಯವಾಗಿರುವ ಫೀಚರ್ ಎಂದರೆ ಸನ್‌ರೂಫ್, ಈ ಎರಡೂ ಕಾರುಗಳ ಸನ್‌ರೂಫ್ ಸಿಂಗಲ್-ಪೇನ್ ಯೂನಿಟ್ ಅನ್ನು ಪಡೆದಿವೆ. ಆದರೆ ಇಲ್ಲಿ ನೆಕ್ಸಾನ್ ಬ್ರೆಝಾಗಿಂತ ವಿಭಿನ್ನ ಯಾಕೆಂದರೆ ಇದರಲ್ಲಿ ಸನ್‌ರೂಫ್ ಅನ್ನು ವಾಯ್ಸ್ ಕಮಾಂಡ್‌ಗಳ ಮೂಲಕ ಆಪರೇಟ್ ಮಾಡಬಹುದು, ಮತ್ತು ಇಲ್ಲಿ ಕ್ಲಿಕ್ ಬಟನ್ ಇಲ್ಲದೆಯೇ ಸನ್‌ರೂಫ್ ಅನ್ನು ತೆರೆಯಬಹುದಾಗಿದೆ. ಚಾಲಕರು ತಮ್ಮ ಕೈಗಳನ್ನು ವ್ಹೀಲ್‌ಗಳ ಮೇಲೆ ಇಟ್ಟುಕೊಂಡು ಹಿಂಬದಿ ಪ್ರಯಾಣಿಕರತ್ತ ಕೈಚಾಚುವುದಕ್ಕೆ ಇದು ಉತ್ತಮ ಪರ್ಯಾಯವಾಗಿದೆ.

ಬಿಡುಗಡೆ ಮತ್ತು ಪ್ರತಿಸ್ಪರ್ಧಿಗಳು

ಈ ಟಾಟಾ ನೆಕ್ಸಾನ್ ಫೇಸ್‌ಲಿಫ್ಟ್ ಅನ್ನು ಸೆಪ್ಟೆಂಬರ್ 14 ರಂದು ಬಿಡುಗಡೆ ಮಾಡಲಾಗುತ್ತಿದ್ದು, ಇದರ ಬೆಲೆ ರೂ 8 ಲಕ್ಷದಿಂದ (ಎಕ್ಸ್-ಶೋರೂಂ) ಪ್ರಾರಂಭವಾಗಲಿದೆ. ಇದು ಮಾರುತಿ ಬ್ರೆಝಾ, ಹ್ಯುಂಡೈ ವೆನ್ಯೂ, ಕಿಯಾ ಸೋನೆಟ್, ಮಹೀಂದ್ರಾ XUV300, ನಿಸ್ಸಾನ್ ಮ್ಯಾಗ್ನೈಟ್ ಮತ್ತು ರೆನಾಲ್ಟ್ ಕೈಗರ್‌ಗೆ ಪ್ರತಿಸ್ಪರ್ಧಿಯಾಗಿಯೇ ಮುಂದುವರಿಯಲಿದೆ.

ಇನ್ನಷ್ಟು ಓದಿ : ನೆಕ್ಸಾನ್ ಆಟೋಮ್ಯಾಟಿಕ್

Share via

Write your Comment on Tata ನೆಕ್ಸಾನ್‌

explore similar ಕಾರುಗಳು

ಮಾರುತಿ ಬ್ರೆಜ್ಜಾ

ಪೆಟ್ರೋಲ್19.89 ಕೆಎಂಪಿಎಲ್
ಸಿಎನ್‌ಜಿ25.51 ಕಿಮೀ / ಕೆಜಿ
ಟ್ರಾನ್ಸ್ಮಿಷನ್ಮ್ಯಾನುಯಲ್‌/ಆಟೋಮ್ಯಾಟಿಕ್‌
ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ

Enable notifications to stay updated with exclusive offers, car news, and more from CarDekho!

trending ಎಸ್‌ಯುವಿ ಕಾರುಗಳು

  • ಲೇಟೆಸ್ಟ್
  • ಉಪಕಮಿಂಗ್
  • ಪಾಪ್ಯುಲರ್
ಹೊಸ ವೇರಿಯೆಂಟ್
ಹೊಸ ವೇರಿಯೆಂಟ್
Rs.15.50 - 27.25 ಲಕ್ಷ*
ಹೊಸ ವೇರಿಯೆಂಟ್
Rs.15 - 26.50 ಲಕ್ಷ*
ಹೊಸ ವೇರಿಯೆಂಟ್
ಹೊಸ ವೇರಿಯೆಂಟ್
Rs.6.20 - 10.51 ಲಕ್ಷ*
ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ