• English
  • Login / Register

ಅಕ್ಟೋಬರ್ 17 ರಂದು ಟಾಟಾ ಹ್ಯಾರಿಯರ್, ಸಫಾರಿ ಫೇಸ್‌ಲಿಫ್ಟ್‌ಗಳ ಬಿಡುಗಡೆ

published on ಅಕ್ಟೋಬರ್ 13, 2023 04:32 pm by rohit for ಟಾಟಾ ಹ್ಯಾರಿಯರ್

  • 39 Views
  • ಕಾಮೆಂಟ್‌ ಅನ್ನು ಬರೆಯಿರಿ

ಅವುಗಳ ಬುಕಿಂಗ್‌ಗಳು ರೂ 25,000 ಬೆಲೆಗೆ ಆನ್‌ಲೈನ್ ಹಾಗೂ ಟಾಟಾದ ಪ್ಯಾನ್-ಇಂಡಿಯಾ ಡೀಲರ್ ನೆಟ್‌ವರ್ಕ್‌ ಎರಡರಲ್ಲಿಯೂ ಈಗಾಗಲೇ ತೆರೆದಿವೆ 

Tata Harrier facelift and Tata Safari facelift

  • ಟಾಟಾ ಹ್ಯಾರಿಯರ್ ಮತ್ತು ಟಾಟಾ ಸಫಾರಿ ಮೊದಲ ಪ್ರಮುಖ ನವೀಕರಣವನ್ನು ಪಡೆದಿವೆ.
  •  ಎರಡರಲ್ಲಿಯೂ ಮುಂಭಾಗದಲ್ಲಿ ಸಂಪರ್ಕಿತ LED DRL, 19-ಇಂಚು ಅಲಾಯ್ ವ್ಹೀಲ್‌ಗಳು ಮತ್ತು ಸಂಪರ್ಕಿತ ಟೇಲ್‌ಲೈಟ್‌ಗಳು ಇವೆ.
  •  ಒಳಭಾಗದಲ್ಲಿ, ಎರಡರಲ್ಲಿಯೂ 4-ಸ್ಪೋಕ್ ಸ್ಟೀರಿಂಗ್ ವ್ಹೀಲ್ ಜೊತೆಗೆ ಬ್ಯಾಕ್‌ಲಿಟ್ ‘ಟಾಟಾ’ ಲೋಗೋ ಮತ್ತು ಮರುವಿನ್ಯಾಸಗೊಳಿಸಲಾದ ಡ್ಯಾಶ್‌ಬೋರ್ಡ್ ಅನ್ನು ಕಾಣಬಹುದು.
  •  12.3-ಇಂಚು ಟಚ್‌ಸ್ಕ್ರೀನ್, 10.25-ಇಂಚು ಡಿಜಿಟಲ್ ಡ್ರೈವರ್ ಡಿಸ್‌ಪ್ಲೇ ಮತ್ತು ಡ್ಯುಯಲ್-ಝೋನ್ AC ಫೀಚರ್‌ಗಳನ್ನು ಪಡೆದಿವೆ
  • ಸುರಕ್ಷತಾ ಫೀಚರ್‌ಗಳು, ಏಳು ಏರ್‌ಬ್ಯಾಗ್‌ಗಳು, 360-ಡಿಗ್ರಿ ಕ್ಯಾಮರಾ ಮತ್ತು ADAS ಅನ್ನು ಒಳಗೊಂಡಿದೆ.
  •  ಎರಡೂ ಕಾರುಗಳು ಪ್ರಸ್ತುತ ಬೆಲೆಗಳಿಗಿಂತ ರೂ ಒಂದು ಲಕ್ಷದಷ್ಟು ದುಬಾರಿಯಾಗಿರುವ ಸಂಭವ ಇದೆ.

ಟಾಟಾ ಹ್ಯಾರಿಯರ್ ಫೇಸ್‌ಲಿಫ್ಟ್ ಮತ್ತು ಟಾಟಾ ಸಫಾರಿ ಫೇಸ್‌ಲಿಫ್ಟ್ ಅನಾವರಣಗೊಂಡಾಗ, ಕಾರುತಯಾರಕರು ಈ ನವೀಕೃತ  SUV ಜೋಡಿಯ ಬೆಲೆಯನ್ನು ಹೊರತುಪಡಿಸಿ ಉಳಿದಂತೆ ಸುಮಾರಿಗೆ ಎಲ್ಲದರ ವಿವರಗಳನ್ನೂ ಹಂಚಿಕೊಂಡಿದ್ದಾರೆ. ಈ ಹೊಸ ಟಾಟಾ ಹ್ಯಾರಿಯರ್ ಮತ್ತು ಟಾಟಾ ಸಫಾರಿ ಅಕ್ಟೋಬರ್ 17ಕ್ಕೆ ಮಾರಾಟಕ್ಕೆ ಬರುತ್ತದೆ ಎಂಬುದು ದೃಢಪಟ್ಟಿದೆ. ಟಾಟಾ, ಈ ಜೋಡಿಯ ಬುಕಿಂಗ್‌ಗಳನ್ನು ತೆರೆದಿದ್ದು, ಇವುಗಳನ್ನು ಆನ್‌ಲೈನ್ ಮತ್ತು ಪ್ಯಾನ್ ಇಂಡಿಯಾ ಡೀಲರ್‌ಶಿಪ್‌ಗಳೆರಡರಲ್ಲಿಯೂ ರೂ 25000 ಬೆಲೆಗೆ ಕಾಯ್ದಿರಿಸಬಹುದಾಗಿದೆ. ಈ ನವೀಕೃತ SUVಗಳ ಸಂಕ್ಷಿಪ್ತ ವಿವರಗಳನ್ನು ಈ ಕೆಳಗೆ ನೀಡಲಾಗಿದೆ:

 

ಹೊಚ್ಚಹೊಸ ಎಕ್ಸ್‌ಟೀರಿಯರ್‌ಗಳು

Tata Harrier and Safari facelifts

 ಎರಡು SUVಗಳಿಗೂ ಒಂದೇ ರೀತಿಯ ಡಿಸೈನ್ ಸುಧಾರಣೆಗಳನ್ನು ನೀಡಲಾಗಿದೆ. ಈ ಪರಿಷ್ಕರಣೆಗಳು ನವೀಕೃತ ಗ್ರಿಲ್, ಚೂಪಾದ ಇಂಡಿಕೇಟರ್‌ಗಳು ಮತ್ತು ಲಂಬವಾಗಿ ಜೋಡಿಸಲಾದ ಸ್ಪ್ಲಿಟ್- LED ಹೆಡ್‌ಲೈಟ್‌ಗಳನ್ನು ಒಳಗೊಂಡಿದೆ. ಮುಂಚೂಣಿಯಲ್ಲಿರುವ ಈ SUV ಜೋಡಿ ಮುಂಭಾಗದಲ್ಲಿ ಉದ್ದನೆಯ LED DRL ಸ್ಟ್ರಿಪ್ ಅನ್ನು ಹೊಂದಿವೆ.

ಇವುಗಳ ಬದಿಯಲ್ಲಿ, ಮುಂಭಾಗದ ಡೋರ್‌ಗಳ ಕೆಳಭಾಗದಲ್ಲಿ ಅನುಕ್ರಮವಾಗಿ ‘ಹ್ಯಾರಿಯರ್’ ಮತ್ತು ‘ಸಫಾರಿ’ ಮೋನಿಕರ್‌ಗಳನ್ನು ಕಾಣಬಹುದು, ಜೊತೆಗೆ ಎರಡೂ SUV ಗಳು 17ರಿಂದ 19-ಇಂಚುಗಳ ಅಲಾಯ್ ವ್ಹೀಲ್‌ಗಳನ್ನು ಪಡೆದಿವೆ. ಎರಡು SUVಯ ಹಿಂಭಾಗದಲ್ಲಿ ಸಂಪರ್ಕಿತ LED ಟೇಲ್‌ಲೈಟ್ ಸೆಟಪ್ ಮತ್ತು ಆಯಾ ನೇಮ್ ಬ್ಯಾಡ್‌ಗಳಿಗೆ ನವೀಕೃತ ಫಾಂಟ್ ಅನ್ನು ನೀಡಲಾಗಿದೆ. ಎರಡು SUVಗಳೂ ಮುಂಭಾಗದಲ್ಲಿ ಮತ್ತು ಹಿಂಭಾಗದಲ್ಲಿ ಚಂಕಿ ಸ್ಕಿಡ್ ಪ್ಲೇಟ್‌ಗಳನ್ನು ಪಡೆದಿವೆ.

A post shared by CarDekho India (@cardekhoindia)

 

ಎಕ್ಸ್‌ಟೀರಿಯರ್‌ಗೆ ಪೂರಕವಾದ ಇಂಟೀರಿಯರ್

Tata Harrier facelift cabin
Tata Safari facelift cabin

 ಈ ಎರಡು SUVಗಳ ಕ್ಯಾಬಿನ್ ಅನ್ನು ಟಾಟಾ ಸಂಪೂರ್ಣವಾಗಿ ಪರಿಷ್ಕರಿಸಿದ್ದು, ಎರಡೂ ಕೂಡಾ ಸ್ತರಗಳಂತಹ ಡ್ಯಾಶ್‌ಬೋರ್ಡ್ ಡಿಸೈನ್, ಪರಿಷ್ಕರಿಸಿದ ಸೆಂಟ್ರಲ್ ಎಸಿ ವೆಂಟ್‌ಗಳು ಮತ್ತು ಸ್ಪರ್ಶ ಆಧಾರಿತ ಕ್ಲೈಮೇಟ್-ಕಂಟ್ರೋಲ್ ಪ್ಯಾನೆಲ್ ಅನ್ನು ಪಡೆದಿವೆ. ಅಲ್ಲದೇ ಹೊಸ ಹ್ಯಾರಿಯರ್ ಮತ್ತು ಸಫಾರಿ ಬ್ಯಾಕ್‌ಲಿಟ್ ‘ಟಾಟಾ’ ಲೋಗೋ ಹೊಂದಿರುವ 4-ಸ್ಪೋಕ್ ಸ್ಟೀರಿಂಗ್ ವ್ಹೀಲ್ ಅನ್ನೂ ಪಡೆದಿವೆ. ಈ ಕ್ಯಾಬಿನ್ ಈಗ ಬಣ್ಣ ಸಂಯೋಜನೆಯಿಂದ ನೀವು ಆರಿಸುವ ‘ಪರ್ಸೋನಾ’ ಆಧರಿಸಿ ಇರಲಿದೆ.

ಇದನ್ನೂ ಓದಿ: 2023 ಟಾಟಾ ಹ್ಯಾರಿಯರ್ ವೇರಿಯೆಂಟ್‌ವಾರು ಫೀಚರ್‌ಗಳ ವಿವರ 

 

ಫೀಚರ್‌ಗಳ ಉದ್ದನೆಯ ಪಟ್ಟಿ

Tata Harrier and Safari facelifts 12.3-inch touchscreen

ಎರಡೂ ಟಾಟಾ ಕಾರುಗಳು ಈಗ ಇನ್ನಷ್ಟು ಹೆಚ್ಚಿನ ಫೀಚರ್‌ಗಳನ್ನು ಪಡೆದಿದ್ದು ಇದರಲ್ಲಿ, ದೊಡ್ಡದಾದ 12.3-ಇಂಚು ಟಚ್‌ಸ್ಕ್ರೀನ್ ಸಿಸ್ಟಮ್, 10.25-ಇಂಚು ಡಿಜಿಟಲ್ ಡ್ರೈವರ್ ಡಿಸ್‌ಪ್ಲೇ, ಡ್ಯುಯಲ್-ಝೋನ್ ಕ್ಲೈಮೇಟ್ ಕಂಟ್ರೋಲ್, ಮಲ್ಟಿ ಕಲರ್ ಆ್ಯಂಬಿಯೆಂಟ್ ಲೈಟಿಂಗ್ ಮತ್ತು ವಿಹಂಗಮ ಸನ್‌ರೂಫ್ ಅಡಕವಾಗಿದೆ. ಅಲ್ಲದೇ ಇವುಗಳು ವಾತಾಯನದ ಮುಂಭಾಗದ ಸೀಟುಗಳು (ಸಫಾರಿಯ 6-ಸೀಟರ್ ಆವೃತ್ತಿಯಲ್ಲಿ ಮಧ್ಯದ ಸಾಲು ಕೂಡಾ ಸೇರಿದೆ), ಕ್ರೂಸ್ ಕಂಟ್ರೋಲ್ ಮತ್ತು ವೈರ್‌ಲೆಸ್ ಫೋನ್ ಚಾರ್ಜಿಂಗ್ ಕೂಡಾ ಪಡೆದಿದೆ.

ಪ್ರಯಾಣಿಕ ಸುರಕ್ಷತೆಯು ಏಳು ಏರ್‌ಬ್ಯಾಗ್‌ಗಳು (ಡ್ರೈವರ್-ಬದಿಯ ಮೊಣಕಾಲಿನ ಏರ್‌ಬ್ಯಾಗ್ ಸೇರಿದಂತೆ), 360 ಡಿಗ್ರಿ ಕ್ಯಾಮರಾ, ISOFIX ಚೈಲ್ಡ್ ಸೀಟ್ ಮೌಂಟ್‌ಗಳು, ಇಲೆಕ್ಟ್ರಾನಿಕ್ ಸ್ಟೆಬಿಲಿಟಿ ಪ್ರೋಗ್ರಾಂ (ESP), ಮತ್ತು ಹಿಲ್-ಹೋಲ್ಡ್ ಅಸಿಸ್ಟ್ ಇತ್ಯಾದಿಗಳಿಂದ ವರ್ಧಿಸಿದೆ. ಅವುಗಳ ಸುಧಾರಿತ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಮ್‌ಗಳು (ADAS) ಕೂಡಾ ಅಡಾಪ್ಟಿವ್ ಕ್ರೂಸ್ ಕಂಟ್ರೋಲ್, ಪಾರ್ವರ್ಡ್ ಕೊಲಿಶನ್ ವಾರ್ನಿಂಗ್ ಮತ್ತು ಬ್ಲೈಂಡ್ ಸ್ಪಾಟ್ ಮಾನಿಟರಿಂಗ್ ಅನ್ನು ಪಡೆದಿವೆ.

 ಇದನ್ನೂ ಓದಿ: 2023 ಟಾಟಾ ಸಫಾರಿ ಫೇಸ್‌ಲಿಫ್ಟ್‌ಗಳ ವೇರಿಯೆಂಟ್‌ವಾರು ಫೀಚರ್‌ಗಳು ಬಹಿರಂಗ

 

ಇಷ್ಟೆಲ್ಲ ಇದ್ದರೂ ಡೀಸೆಲ್ ಇಂಜಿನ್‌ ಮಾತ್ರ ಲಭ್ಯ

 ಟಾಟಾ ಈಗ ಹ್ಯಾರಿಯರ್ ಮತ್ತು ಸಫಾರಿ ಫೇಸ್‌ಲಿಫ್ಟ್‌ಗಳನ್ನು 2-ಲೀಟರ್ ಡೀಸೆಲ್ ಇಂಜಿನ್ (170PS/350Nm) ಜೊತೆಗೆ ನೀಡುವ ಆಯ್ಕೆ ಮಾತ್ರವೇ ಮಾಡಿದ್ದು, ಇದನ್ನು 6-ಸ್ಪೀಡ್ ಮ್ಯಾನುವಲ್ ಮತ್ತು ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್ ಆಯ್ಕೆಗಳೊಂದಿಗೆ ಪಡೆಯಬಹುದಾಗಿದೆ.

 

ನಿರೀಕ್ಷಿತ ಬೆಲೆ ಮತ್ತು ಪ್ರತಿಸ್ಪರ್ಧಿಗಳು

Tata Harrier and Safari facelifts rear

ಎರಡೂ SUVಗಳನ್ನು ಪರಿಷ್ಕೃತ ವೇರಿಯೆಂಟ್ ಲೈನ್‌ಅಪ್‌ನಲ್ಲಿ ಮಾರಾಟ ಮಾಡಲಾಗುತ್ತದೆ ಮತ್ತು ಅವುಗಳು ಈ ಕೆಳಗಿನಂತಿವೆ: ಹ್ಯಾರಿಯರ್-ಸ್ಮಾರ್ಟ್ ಪ್ಯೂರ್, ಅಡ್ವೆಂಚರ್ ಮತ್ತು ಫಿಯರ್‌ಲೆಸ್ ಮತ್ತು ಸಫಾರಿ-ಸ್ಮಾರ್ಟ್, ಪ್ಯೂರ್, ಅಡ್ವೆಂಚರ್ ಆಂಡ್ ಅಕಾಂಪ್ಲಿಶ್ಡ್. ಈ ಹೊಸ ಹ್ಯಾರಿಯರ್ ಮತ್ತು ಸಫಾರಿಯು ಪ್ರಸ್ತುತ ಬೆಲೆಗಿಂತ ರೂ 1 ಲಕ್ಷದಷ್ಟು ದುಬಾರಿಯಾಗಿರಬಹುದು ಎಂಬುದು ನಮ್ಮ ನಿರೀಕ್ಷೆಯಾಗಿದೆ. ಉಲ್ಲೇಖಕ್ಕಾಗಿ, ಪ್ರಸ್ತುತ ಹ್ಯಾರಿಯರ್ ಬೆಲೆ ರೂ15.20 ಲಕ್ಷದಿಂದ ರೂ 24.27 ಲಕ್ಷದ ತನಕ ಇದ್ದು, ಸಫಾರಿಯ ಪ್ರಸ್ತುತ ಬೆಲೆಯು ರೂ 15.85 ಲಕ್ಷ ಮತ್ತು 25.21 ಲಕ್ಷದ (ಎಕ್ಸ್-ಶೋರೂಂ, ದೆಹಲಿ) ನಡುವೆ ಇರಲಿದೆ.

 ಈ 5-ಸೀಟಿನ SUVಯು MG ಹೆಕ್ಟರ್ ಮತ್ತು ಮಹೀಂದ್ರಾ XUV700 ಅದೇ ರೀತಿ ಹ್ಯುಂಡೈ ಕ್ರೆಟಾ ಹಾಗೂ ಕಿಯಾ ಸೆಲ್ಟೋಸ್‌ನ ಟಾಪ್-ಸ್ಪೆಕ್ ವೇರಿಯೆಂಟ್‌ಗಳಿಗೆ ಪ್ರತಿಸ್ಪರ್ಧಿಯಾಗಲಿದೆ. ಸಫಾರಿ ಫೇಸ್‌ಲಿಫ್ಟ್ ಹ್ಯುಂಡೈ ಅಲ್ಕಾಝಾರ್, ಮಹೀಂದ್ರಾ XUV700 ಮತ್ತು MG ಹೆಕ್ಟರ್ ಪ್ಲಸ್‌ಗೆ ಪೈಪೋಟಿ ನೀಡಲಿದೆ.

ಇನ್ನಷ್ಟು ಓದಿ : ಹ್ಯಾರಿಯರ್ ಡೀಸೆಲ್

ಅವರಿಂದ ಪ್ರಕಟಿಸಲಾಗಿದೆ
was this article helpful ?

0 out of 0 found this helpful

Write your Comment ನಲ್ಲಿ ಟಾಟಾ ಹ್ಯಾರಿಯರ್

Read Full News

Similar cars to compare & consider

ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ

ಕಾರು ಸುದ್ದಿ

  • ಟ್ರೆಂಡಿಂಗ್ ಸುದ್ದಿ
  • ಇತ್ತಿಚ್ಚಿನ ಸುದ್ದಿ

trendingಎಸ್‌ಯುವಿ ಕಾರುಗಳು

  • ಲೇಟೆಸ್ಟ್
  • ಉಪಕಮಿಂಗ್
  • ಪಾಪ್ಯುಲರ್
×
We need your ನಗರ to customize your experience