ಸಿಟ್ರಾನ್ eC3 ವರ್ಸಸ್ ಪ್ರತಿಸ್ಪರ್ಧಿಗಳು: ಇದು “ಬೆಲೆ ಬಾತ್ ”!

modified on ಮಾರ್ಚ್‌ 02, 2023 07:47 pm by shreyash for ಸಿಟ್ರೊಯೆನ್ ಇಸಿ3

  • 36 Views
  • ಕಾಮೆಂಟ್‌ ಅನ್ನು ಬರೆಯಿರಿ

ಮೂರು ಇವಿಗಳಲ್ಲಿ, ಈ eC3 ಯು 29.2kWh ನ ಅತಿದೊಡ್ಡ ಬ್ಯಾಟರಿ ಪ್ಯಾಕ್ ಸಾಮರ್ಥ್ಯವನ್ನು ಹೊಂದಿದೆ ಮತ್ತು 320km ರೇಂಜ್ ಅನ್ನು ಕ್ಲೈಮ್ ಮಾಡಿದೆ.

ಸಿಟ್ರಾನ್ ಭಾರತದಲ್ಲಿ ತನ್ನ ಮೊದಲ ಸಂಪೂರ್ಣ-ಎಲೆಕ್ಟ್ರಿಕ್ ಹ್ಯಾಚ್‌ಬ್ಯಾಕ್ eC3 ಯ ಬೆಲೆಯನ್ನು ಬಹಿರಂಗಪಡಿಸಿದ್ದು, ಇದು ರೂ.11.50 ಲಕ್ಷದಿಂದ ಪ್ರಾರಂಭವಾಗುತ್ತದೆ. ಆರಂಭಿಕ ಹಂತದ ಇವಿ ಕೊಡುಗೆಯಾಗಿ, ಅದರ ಪ್ರತಿಸ್ಪರ್ಧಿಗಳು ಟಾಟಾ ಟಿಯಾಗೋ ಇವಿ ಮತ್ತು ಟಿಗೋರ್ ಇವಿ. ಬೆಲೆಯ ವಿಷಯಗಲ್ಲಿ ಅವುಗಳನ್ನು ಹೋಲಿಕೆಯನ್ನು ನೋಡೋಣ.

ಬೆಲೆ ಪರಿಶೀಲನೆ

ಸಿಟ್ರಾನ್ eC3

ಟಾಟಾ ಟಿಯಾಗೋ ಇವಿ

ಟಾಟಾ ಟಿಗೋರ್ ಇವಿ

 

3.3kW ಚಾರ್ಜರ್‌ನೊಂದಿಗೆ 19.2kWh

 

XE – ರೂ. 8.69 ಲಕ್ಷ

XT - ರೂ 9.29 ಲಕ್ಷ

3.3kW ಚಾರ್ಜರ್‌ನೊಂದಿಗೆ 24kWh

XT - ರೂ 10.19 ಲಕ್ಷ

XZ+ - ರೂ 10.99 ಲಕ್ಷ

XZ+ Tech Lux - 11.49 ಲಕ್ಷ

29.2kWh ಬ್ಯಾಟರಿ ಪ್ಯಾಕ್

7.2kW ಚಾರ್ಜರ್‌ನೊಂದಿಗೆ 24kWh

26kWh ಬ್ಯಾಟರಿ ಪ್ಯಾಕ್

ಲೈವ್ – ರೂ. 11.50 ಲಕ್ಷ

XZ+ - ರೂ. 11.49 lakh

 

ಫೀಲ್ – ರೂ. 12.13 ಲಕ್ಷ

XZ+ ಟೆಕ್ ಲಕ್ಸ್ - 11.99 ಲಕ್ಷ

XE – ರೂ. 12.49 ಲಕ್ಷ

ಫೀಲ್ ವೈಬ್ ಪ್ಯಾಕ್ – ರೂ. 12.28 ಲಕ್ಷ

   

ಫೀಲ್ ಡ್ಯುಯಲ್-ಟೋನ್ ವೈಬ್ ಪ್ಯಾಕ್ – ರೂ. 12.43 ಲಕ್ಷ

XT – ರೂ. 12.99 ಲಕ್ಷ

 

XZ+ - ರೂ .13.49 ಲಕ್ಷ

XZ+ ಲಕ್ಸ್ - ರೂ 13.75 ಲಕ್ಷ

Citroen eC3

  • eC3 ಗೆ ಹೋಲಿಸಿದರೆ ಟಿಯಾಗೋ ಇವಿಯು ಆರ್ಥಿಕವಾಗಿ ಕೈಗೆಟಕುವ ಬೆಲೆಯಲ್ಲಿದೆ. ಎರಡೂ ಮಾಡೆಲ್‌ಗಳ ಮೂಲ ವೇರಿಯೆಂಟ್‌ಗಳ ನಡುವೆ ರೂ. 2.81 ಲಕ್ಷ ರೂಪಾಯಿಗಳ ಬೆಲೆಯ ಅಂತರವಿದೆ. ಟಿಯಾಗೋ ಇವಿಯ ಹೋಲಿಸಬಹುದಾದ ದೀರ್ಘ-ರೇಂಜ್ ವೇರಿಯೆಂಟ್ ಸಹ ರೂ. 1.31 ಲಕ್ಷಗಳಷ್ಟು ಅಗ್ಗವಾಗಿದೆ.
  • ಈ ಟಿಗೋರ್ ಇವಿ ಉಳಿದೆರಡು ಹ್ಯಾಚ್‌ಬ್ಯಾಕ್‌ಗಳಿಗಿಂತ ಗಣನೀಯವಾಗಿ ಹೆಚ್ಚಿನ ಆರಂಭಿಕ ಬೆಲೆಯನ್ನು ಹೊಂದಿದೆ. ಇದರ ಬೇಸ್-ವೇರಿಯೆಂಟ್ ಟಾಪ್ ಸ್ಪೆಕ್ eC3 ಗಳಿಗಿಂತ ರೂ. 6,000 ಗಳಷ್ಟು ಅಧಿಕ ಬೆಲೆಯನ್ನು ಹೊಂದಿದೆ.
  • ಪರಾಮರ್ಶೆಗಾಗಿ, ಈ ಟಾಟಾ ನೆಕ್ಸಾನ್ ಇವಿ ಪ್ರೈಮ್ ಎಲೆಕ್ಟ್ರಿಕ್ ಎಸ್‌ಯುವಿಯು eC3 ನಷ್ಟೇ (312km) ರೇಂಜ್ ಅನ್ನು ಹೊಂದಿದೆ ಆದರೆ ಶಕ್ತಿಶಾಲಿ ಮೋಟಾರ್ ಮತ್ತು ಹೆಚ್ಚುವರಿ ಫೀಚರ್‌ಗಳನ್ನು ಒಳಗೊಂಡು ರೂ. 14.49 ಲಕ್ಷಗಳ ಆರಂಭಿಕ ಬೆಲೆಯನ್ನು ಹೊಂದಿದೆ. ಇದು ಟಾಪ್-ಸ್ಪೆಕ್ eC3 ಗಿಂತ ಕೇವಲ ರೂ. 2 ಲಕ್ಷಕ್ಕಿಂತ ಹೆಚ್ಚಿನ ಬೆಲೆ ಹೊಂದಿದೆ.

ಇದನ್ನೂ ಓದಿ: ಹೊಸ ದಾಖಲೆ ಸೃಷ್ಟಿಸಲು ತಯಾರಾದ ಟಾಟಾ ನೆಕ್ಸಾನ್ ಇವಿ 

Tata Tiago EV

  • 3.3kW ಚಾರ್ಜಿಂಗ್ ಆಯ್ಕೆಯನ್ನು ಹೊಂದಿರುವ ಈ ಟಿಯಾಗೋ ಇವಿಯ XZ+ ಟೆಕ್ ಲಕ್ಸ್ ವೇರಿಯೆಂಟ್, ಆಟೋಮ್ಯಾಟಿಕ್ ಎಸಿ, ಪವರ್- ORVMಗಳು ಮತ್ತು ಪುಶ್-ಬಟನ್ ಸ್ಟಾರ್ಟ್-ಸ್ಟಾಪ್ ಫೀಚರ್‌ಗಳನ್ನು ಸಹ ಒಳಗೊಂಡಿದ್ದು ಅತ್ಯಲ್ಪ ಮೊತ್ತ ರೂ. 1,000 ಗಳ ವ್ಯತ್ಯಾಸದೊಂದಿಗೆ eC3 ನ ಬೇಸ್-ಸ್ಪೆಕ್ ಟ್ರಿಮ್‌ನ ಬೆಲೆಯನ್ನು ಬಹುತೇಕ ಹೋಲುತ್ತದೆ.
  • 24kWh ಬ್ಯಾಟರಿ ಪ್ಯಾಕ್ ಮತ್ತು 7.2kW  ಚಾರ್ಜಿಂಗ್ ಆಯ್ಕೆಯನ್ನು ಹೊಂದಿರುವ ಟಾಟಾ ಟಿಯಾಗೋ XZ+ ಟ್ರಿಮ್ ಕೂಡ eC3ನ ಫೀಲ್ ವೇರಿಯೆಂಟ್‌ಗಿಂತ ರೂ. 1.13 ಲಕ್ಷಗಳಷ್ಟು ಕಡಿಮೆ ಬೆಲೆಯನ್ನು ಹೊಂದಿದೆ ಮಾತ್ರವಲ್ಲದೇ ಹೆಚ್ಚಿನ ಫೀಚರ್‌ಗಳನ್ನು ಸಹ ಒಳಗೊಂಡಿದೆ.
  • eC3ಯ ಟಾಪ್-ಸ್ಪೆಕ್ ಆಗಿರುವ ಫೀಲ್ ವೇರಿಯೆಂಟ್ 10.2-ಇಂಚಿನ ಟಚ್‌ಸ್ಕ್ರೀನ್ ಇನ್‌ಫೊಟೈನ್‌ಮೆಂಟ್ ಸಿಸ್ಟಮ್, ಆ್ಯಂಡ್ರಾಯ್ಡ್ ಆಟೋ ಮತ್ತು ಆ್ಯಪಲ್ ಕಾರ್‌ಪ್ಲೇ, ಸಂಪರ್ಕಿತ ಕಾರ್ ಟೆಕ್ ಮತ್ತು ನಾಲ್ಕು-ಸ್ಪೀಕರ್ ಸೌಂಡ್ ಸಿಸ್ಟಮ್ ಅನ್ನು ಒಳಗೊಂಡಿದೆ.
  • ವೈಬ್ ಪ್ಯಾಕ್ ತನ್ನ ಪ್ರೀಮಿಯಂಗೆ ಎಕ್ಸ್‌ಟೀರಿಯರ್ ಕಸ್ಟಮೈಸೇಷನ್‌ಗಳನ್ನು ಮಾತ್ರ ಸೇರಿಸಿದ್ದು ಫೀಚರ್‌ಗಳ ಸೌಕರ್ಯಗಳ ವಿಷಯದಲ್ಲಿ eC3 ಅನ್ನು ಟಿಯಾಗೋ ಇವಿಗೆ ಹೋಲಿಸಲಾಗದು.
  • ಸುರಕ್ಷತೆಯ ವಿಷಯದಲ್ಲಿ, ಎಲ್ಲಾ ಮೂರು ಇವಿಗಳು ಡ್ಯುಯಲ್-ಫ್ರಂಟ್ ಏರ್‌ಬ್ಯಾಗ್‌ಗಳು, EBD ಜೊತೆ ABS ಮತ್ತು ರಿಯರ್-ಪಾರ್ಕಿಂಗ್ ಸೆನ್ಸಾರ್‌ಗಳನ್ನು ಒಳಗೊಂಡಿವೆ.

ಮೇಲೆ ಉಲ್ಲೇಖಿಸಲಾದ ಎಲ್ಲಾ ಬೆಲೆಗಳು ಎಕ್ಸ್‌-ಶೋರೂಮ್ ಬೆಲೆಗಳು

ಇದನ್ನೂ ಓದಿ: eC3 ಎಲೆಕ್ಟ್ರಿಕ್ ಹ್ಯಾಚ್‌ಬ್ಯಾಕ್‌ನೊಂದಿಗೆ ಫ್ಲೀ ಮಾರುಕಟ್ಟೆ ಪ್ರವೇಶಿಸಲಿದೆ ಸಿಟ್ರಾನ್ 

ಪವರ್‌ಟ್ರೇನ್ ವಿವರಗಳು

ಸ್ಪೆಕ್‌ಗಳು

ಸಿಟ್ರಾನ್ eC3

ಟಾಟಾ ಟಿಯಾಗೊ EV

ಟಾಟಾ ಟಿಗೋರ್ EV

ಬ್ಯಾಟರಿ ಪ್ಯಾಕ್

29.2kWh

19.2kWh/24kWH

26kWh

ಪವರ್

57PS

61PS/75PS

75PS

ಟಾರ್ಕ್

143Nm

110Nm/114Nm

170Nm

ರೇಂಜ್

320km (MIDC ರೇಟೆಡ್)

250km/315km

315km

  • ಈ eC3 ಯು ಅತಿದೊಡ್ಡ ಬ್ಯಾಟರಿ ಪ್ಯಾಕ್ ಅನ್ನು ಹೊಂದಿದ್ದು ಅತಿ ಹೆಚ್ಚು ಡ್ರೈವಿಂಗ್ ರೇಂಜ್ ಅನ್ನು ನೀಡುತ್ತದೆ, ಆದರೆ ಉಳಿದದ್ದಕ್ಕಿಂತ ಕೇವಲ 5km ಹೆಚ್ಚು.
  • ಟಿಯಾಗೊ ಎರಡು ಬ್ಯಾಟರಿ ಪ್ಯಾಕ್‌ಗಳ ಆಯ್ಕೆಯೊಂದಿಗೆ ಬರುತ್ತದೆ - ಮಧ್ಯ-ಶ್ರೇಣಿಯ 19.2kWh ಮತ್ತು ದೀರ್ಘ-ಶ್ರೇಣಿಯ 24kWh - ಕ್ರಮವಾಗಿ 250km ಮತ್ತು 315km ನಡುವಿನ ವ್ಯಾಪ್ತಿಯನ್ನು ಹೊಂದಿದೆ. ಇದು ಎರಡೂ ರೂಪಗಳಲ್ಲಿ ಹೆಚ್ಚಿನ ಶಕ್ತಿಯನ್ನು ನೀಡುತ್ತದೆ, ಆದರೆ eC3 ಗೆ ಹೋಲಿಸಿದರೆ ಟಾರ್ಕ್‌ನಲ್ಲಿ ಕಡಿಮೆಯಾಗಿದೆ.

Tata Tigor EV

  • ಈ ಟಿಗೋರ್ ಇವಿ 315km ನ 26kWh ಬ್ಯಾಟರಿ ಪ್ಯಾಕ್ ಅನ್ನು ಹೊಂದಿದೆ, ಮತ್ತು ಈ ಹೋಲಿಕೆಯನ್ನು ಗಣನೆಗೆ ತೆಗೆದುಕೊಂಡರೆ ಇದು ಅತ್ಯಂತ ಶಕ್ತಿಶಾಲಿ ಇವಿಯಾಗಿದೆ.

ಚಾರ್ಜಿಂಗ್ ವಿವರಗಳು

ಚಾರ್ಜರ್

ಸಿಟ್ರಾನ್ eC3

ಟಾಟಾ ಟಿಯಾಗೊ ಇವಿ

ಟಾಟಾ ಟಿಗೋರ್ ಇವಿ

 

29.2kWh

19.2kWh

24kWh

26kWh

15A ಪ್ಲಗ್ ಪಾಯಿಂಟ್ (10 ರಿಂದ 100%)

10 ಗಂಟೆ ಮತ್ತು 30 ನಿಮಿಷಗಳು

6.9 ಗಂಟೆಗಳು

8.7 ಗಂಟೆಗಳು

9.4 ಗಂಟೆಗಳು

3.3kW ಎಸಿ (10 ರಿಂದ 100%)

NA

5.1 ಗಂಟೆಗಳು

6.4 ಗಂಟೆಗಳು

NA

7.2kW ಎಸಿ (10 ರಿಂದ 100%)

NA

2.6 ಗಂಟೆಗಳು

3.6 ಗಂಟೆಗಳು

NA

DC ವೇಗದ ಚಾರ್ಜಿಂಗ್ (10 ರಿಂದ 80%)

57 ನಿಮಿಷಗಳು

57 ನಿಮಿಷಗಳು

57 ನಿಮಿಷಗಳು

59 ನಿಮಿಷಗಳು (25kW)

  • ಇದರಿಂದ ಅರ್ಥವಾಗುವುದೇನೆಂದರೆ, ಬ್ಯಾಟರಿಯ ಗಾತ್ರವು ದೊಡ್ಡದಾಗಿರುವ ಕಾರಣ 15A ಪ್ಲಗ್ ಪಾಯಿಂಟ್ ಅನ್ನು ಬಳಸಿಕೊಂಡು eC3 ಯು 10 ರಿಂದ 100 ಪ್ರತಿಶತದಷ್ಟು ಚಾರ್ಜ್ ಮಾಡಲು ದೀರ್ಘ ಸಮಯವನ್ನು ತೆಗೆದುಕೊಳ್ಳುತ್ತದೆ. ಆದರೂ  DC ವೇಗದ ಚಾರ್ಜಿಂಗ್ ವಿಷಯಕ್ಕೆ ಬಂದಾಗ, ಈ ಇವಿಗಳ ಚಾರ್ಜಿಂಗ್ ಸಮಯದ ನಡುವೆ ಯಾವುದೇ ವ್ಯತ್ಯಾಸವಿಲ್ಲ.

ಅಂತಿಮವಾಗಿ

Tata Tiago EV rear

ಬೆಲೆಯ ಪಟ್ಟಿಯನ್ನು ನೋಡುವ ಮೂಲಕ ಮತ್ತು ಎಲ್ಲಾ ಮೂರು ಇವಿಯ ವಿಶೇಷಣಗಳನ್ನು ಹೋಲಿಸುವ ಮೂಲಕ ಟಿಯಾಗೊ ಇವಿಯು ನೀಡುವ ಹಣಕ್ಕೆ ಹೆಚ್ಚು ಮೌಲ್ಯಯುತ ಆಯ್ಕೆಯಾಗಿದೆ ಎಂದು ತಿಳಿಯುತ್ತದೆ, ಏಕೆಂದರೆ ಇದು ಉತ್ತಮ ಫೀಚರ್‌ಗಳನ್ನು ಹೊಂದಿದ್ದು ಮತ್ತು eC3 ಗಿಂತ ಕೇವಲ 5km ಕಡಿಮೆಯಾದ 315km ರೇಂಜ್ ಅನ್ನು ನೀಡುತ್ತದೆ.

 ಹೆಚ್ಚು ಬೂಟ್ ಸ್ಪೇಸ್ ಮತ್ತು ಪವರ್ ಹೊಂದಿರುವ ಸೆಡಾನ್ ಬಯಸುವವರು, ಈ ಹೋಲಿಕೆಯಲ್ಲಿ ಅತಿ ದುಬಾರಿ ಎನಿಸಿದರೂ ಟಿಗೋರ್ ಇವಿಯನ್ನು ಖರೀದಿಸುವ ಯೋಚನೆ ಮಾಡಬಹುದು. ಏತನ್ಮಧ್ಯೆ, eC3 ವಿಶಾಲವಾದ ಕ್ಯಾಬಿನ್, ಪ್ರೀಮಿಯಂ ಇನ್‌ಫೊಟೈನ್‌ಮೆಂಟ್ ಸಿಸ್ಟಮ್ ಮತ್ತು ಅದರ ಫ್ರೆಂಚ್ ಸ್ಟೈಲಿಂಗ್‌ನೊಂದಿಗೆ ಹೆಚ್ಚು ಗಮನಾರ್ಹವಾದ ರೋಡ್ ಪ್ರೆಸೆನ್ಸ್ ಅನ್ನು ಹೊಂದಿದೆ.

ಇನ್ನೂ ಹೆಚ್ಚಿನದನ್ನು ಇಲ್ಲಿ ಓದಿ : ಸಿಟ್ರಾನ್ eC3 ಆಟೋಮ್ಯಾಟಿಕ್

ಅವರಿಂದ ಪ್ರಕಟಿಸಲಾಗಿದೆ
was this article helpful ?

0 out of 0 found this helpful

Write your Comment ನಲ್ಲಿ ಸಿಟ್ರೊನ್ ಇಸಿ3

Read Full News

explore similar ಕಾರುಗಳು

Similar cars to compare & consider

ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ

ಕಾರು ಸುದ್ದಿ

  • ಟ್ರೆಂಡಿಂಗ್ ಸುದ್ದಿ
  • ಇತ್ತಿಚ್ಚಿನ ಸುದ್ದಿ

trending ಎಲೆಕ್ಟ್ರಿಕ್ ಕಾರುಗಳು

  • ಪಾಪ್ಯುಲರ್
  • ಉಪಕಮಿಂಗ್
×
We need your ನಗರ to customize your experience