ಮಾರುತಿ ಫ್ರಾಂಕ್ಸ್ ಡೆಲ್ಟಾ+ ನ ಇಮೇಜ್ ಗ್ಯಾಲರಿ: ಈ ವೇರಿಯಂಟ್‌ನ ವಿಶೇಷತೆಗಳ ಬಗ್ಗೆ ತಿಳಿಯಿರಿ

published on ಏಪ್ರಿಲ್ 27, 2023 08:47 pm by shreyash for ಮಾರುತಿ ಫ್ರಾಂಕ್ಸ್‌

  • 19 Views
  • ಕಾಮೆಂಟ್‌ ಅನ್ನು ಬರೆಯಿರಿ

ಫ್ರಾಂಕ್ಸ್‌ನ ಎರಡೂ ಪೆಟ್ರೋಲ್ ಎಂಜಿನ್‌ಗಳ ಆಯ್ಕೆ ಲಭ್ಯವಿರುವ ಮಾರುತಿಯ ಏಕೈಕ ವೇರಿಯಂಟ್

Maruti Fronx Delta+ Front

ಮಾರುತಿ ಬಲೆನೊ ಆಧಾರಿತ ಕ್ರಾಸ್ಓವರ್ ಎಸ್‌ಯುವಿ ಫ್ರಾಂಕ್ಸ್ ಅನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ. ಇದರ ಬೆಲೆ 7.46 ಲಕ್ಷ ರೂ.ದಿಂದ (ಎಕ್ಸ್ ಶೋರೂಂ) ಪ್ರಾರಂಭವಾಗುತ್ತದೆ. ಇದು ಸಿಗ್ಮಾ, ಡೆಲ್ಟಾ, ಡೆಲ್ಟಾ ಪ್ಲಸ್, ಝೀಟಾ ಮತ್ತು ಆಲ್ಫಾ ಎಂಬ ಒಟ್ಟು ಐದು ವೇರಿಯಂಟ್‌ಗಳಲ್ಲಿ ಲಭ್ಯವಿದೆ. ಈ ಕ್ರಾಸ್ಓವರ್ ಎಸ್‌ಯುವಿ ಶೋರೂಮ್‌ಗಳನ್ನು ತಲುಪಿದೆ, ನಿರ್ದಿಷ್ಟವಾಗಿ ಮಾರುತಿ ಡೆಲ್ಟಾ ಪ್ಲಸ್ ಎ‌ಎಂಟಿ ವೇರಿಯಂಟ್‌ನ ವಿಶೇಷತೆಗಳ ಬಗ್ಗೆ ನಾವು ಇಲ್ಲಿ ತಿಳಿದುಕೊಳ್ಳೋಣ:

Maruti Fronx Delta+ Front

ಇದು ಫ್ರಾಂಕ್ಸ್‌ನ ಡೆಲ್ಟಾ+ ಎ‌ಎಂಟಿ ವೇರಿಯಂಟ್ ಆಗಿರುವುದರಿಂದ, ಇದು ಎಲ್ಇಡಿ ಡೇಟೈಮ್ ರನ್ನಿಂಗ್ ಲೈಟ್‌ಗಳೊಂದಿಗೆ ಆಟೋಮ್ಯಾಟಿಕ್ ಎಲ್ಇಡಿ ಹೆಡ್‌ಲ್ಯಾಂಪ್‌ಗಳನ್ನು (ಮಲ್ಟಿ-ರಿಫ್ಲೆಕ್ಟರ್) ಪಡೆಯುತ್ತದೆ. ಕ್ರೋಮ್ ಗ್ರಿಲ್ ಬಾರ್ ಅನ್ನು ಎಲ್ಲಾ ವೇರಿಯಂಟ್‌ಗಳಲ್ಲಿ ಪ್ರಮಾಣಿತವಾಗಿ ನೀಡಲಾಗುತ್ತದೆ, ಜೊತೆಗೆ ಬಂಪರ್‌ನ ಕೆಳ ಭಾಗದಲ್ಲಿ ಸಿಲ್ವರ್ ಸ್ಕಿಡ್ ಪ್ಲೇಟ್ ಅನ್ನು ನೀಡಲಾಗುತ್ತದೆ.

Maruti Fronx Delta+ Profile

 ಪ್ರೊಫೈಲ್‌ನ ಅತ್ಯಂತ ಗಮನಾರ್ಹವಾದ ವಿಷಯಗಳೆಂದರೆ ಡೆಲ್ಟಾ + ವೇರಿಯಂಟ್‌ನಿಂದ ನೀಡಲಾದ ಕಪ್ಪು-ಬಣ್ಣದ 16-ಇಂಚಿನ ಅಲಾಯ್‌ಗಳು. ರೂಫ್ ರೈಲ್‌ನಂತಹ ಅಂಶಗಳು, ಬಾಡಿ ಕ್ಲಾಡಿಂಗ್‌ಗಳೊಂದಿಗೆ ಸ್ಕ್ವೇರ್ಡ್ ವ್ಹೀಲ್ ಆರ್ಚ್‌ಗಳು ಕ್ರಾಸ್‌ಓವರ್‌ನ ಆಕರ್ಷಕ ನೋಟದ ಮೆರುಗನ್ನು ಹೆಚ್ಚಿಸುತ್ತವೆ. ಈ ಮಾಡೆಲ್ ಟರ್ನ್ ಇಂಡಿಕೇಟರ್‌ಗಳೊಂದಿಗೆ ಬಾಡಿ-ಕಲರ್ ಒಆರ್‌ವಿಎಂಗಳನ್ನು ಸಹ ಪಡೆಯುತ್ತದೆ, ಅವುಗಳು ಎಲೆಕ್ಟ್ರಿಕಲಿ ಫೋಲ್ಡಬಲ್ ಆಗಿವೆ.

ಇದನ್ನೂ ಓದಿ: ಮಾರುತಿ ಫ್ರಾಂಕ್ಸ್ ಬೆಲೆಗಳ ಹೋಲಿಕೆ ವರ್ಸಸ್ ಟಾಟಾ ಪಂಚ್ ಮತ್ತು ನೆಕ್ಸಾನ್

Maruti Fronx Delta+ Rear

 ವಾಹನದ ರಿಯರ್ ಎಂಡ್‌ನಲ್ಲಿ, ಇದು ಸಂಪರ್ಕಿತ ಎಲ್‌ಇಡಿ ಟೈಲ್ ಲ್ಯಾಂಪ್‌ಗಳನ್ನು ಪಡೆಯುತ್ತದೆ ಆದರೆ ಡೆಲ್ಟಾ+ ಟ್ರಿಮ್ ಇಲ್ಯುಮಿನೇಟೆಡ್ ಮಧ್ಯ ವಿಭಾಗವನ್ನು ಹೊಂದಿಲ್ಲ. ರಿಯರ್ ಗ್ಲಾಸ್‌ನ ಮೇಲೆ ರಿಯರ್ ವೈಪರ್ ಇಲ್ಲದಿರುವುದರಿಂದ ಇದು ಮಿಡ್-ಸ್ಪೆಕ್ ಟ್ರಿಮ್ ಆಗಿರುವ ಸಾಧ್ಯತೆಯಿದೆ. ಇತರ ಪ್ರಮಾಣಿತ ವಿವರಗಳು ರೂಫ್ ಮೇಲೆ ಶಾರ್ಕ್-ಫಿನ್ ಆಂಟೆನಾ ಮತ್ತು ಬಂಪರ್‌ನ ಕೆಳ  ಭಾಗದಲ್ಲಿ ಸಿಲ್ವರ್ ಸ್ಕಿಡ್ ಪ್ಲೇಟ್ ಅನ್ನು ಒಳಗೊಂಡಿವೆ.

 Maruti Fronx Delta+ Interior

 ಒಳಗಡೆ ಇದು ಮರೂನ್ ಆಕ್ಸೆಂಟ್‌ಗಳೊಂದಿಗೆ ಅದೇ ಡ್ಯಾಶ್‌ಬೋರ್ಡ್ ವಿನ್ಯಾಸವನ್ನು ಪಡೆಯುತ್ತದೆ, ಆದರೆ ಮಿಡ್-ಸ್ಪೆಕ್ ವೇರಿಯಂಟ್ ಏಳು-ಇಂಚಿನ ಇನ್ಫೋಟೈನ್‌ಮೆಂಟ್ ಸಿಸ್ಟಮ್‌ ಅನ್ನು ಮಾತ್ರ ಹೊಂದಿದೆ. ಅದೇನೇ ಇದ್ದರೂ, ಟಚ್‌ಸ್ಕ್ರೀನ್ ಯುನಿಟ್ ಇನ್ನೂ ವೈರ್‌ಲೆಸ್ ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್‌ಪ್ಲೇ ಅನ್ನು ಬೆಂಬಲಿಸುತ್ತದೆ ಆದರೆ ಸಂಪರ್ಕಿತ ಕಾರು ವೈಶಿಷ್ಟ್ಯಗಳನ್ನು ಹೊಂದಿಲ್ಲ. ಫ್ರಾಂಕ್ಸ್ ಆಟೊಮ್ಯಾಟಿಕ್ ಎಸಿ ಮತ್ತು ಆಂಟಿ-ಪಿಂಚ್ ಫಂಕ್ಷನ್‌ನೊಂದಿಗೆ ಆಟೋ ಅಪ್/ಡೌನ್ ಡ್ರೈವರ್‌ನ ಸೈಡ್ ಪವರ್ ವಿಂಡೋದೊಂದಿಗೆ ಪ್ರಮಾಣಿತವಾಗಿ ಬರುತ್ತದೆ.

 ಫ್ರಾಂಕ್ಸ್‌ನ ಈ ನಿರ್ದಿಷ್ಟ ವೇರಿಯಂಟ್ ಉನ್ನತ ವೇರಿಯಂಟ್‌ನಲ್ಲಿ ಲಭ್ಯವಿರುವ ಡಿಜಿಟಲ್ ಟಿಎಫ್‌ಡಿ ಎಂಐಡಿ, ರಿಯರ್ ಎಸಿ ವೆಂಟ್‌ಗಳು, ಹೈಟ್ ಅಡ್ಜಸ್ಟ್‌ಮೆಂಟ್ ಡ್ರೈವರ್ಸ್ ಸೀಟು, ಕ್ರೂಸ್ ಕಂಟ್ರೋಲ್, ರಿಯರ್-ವ್ಯೂ ಕ್ಯಾಮೆರಾ ಮತ್ತು ವೈರ್‌ಲೆಸ್ ಫೋನ್ ಚಾರ್ಜರ್‌ಗಳನ್ನು ಹೊಂದಿಲ್ಲ. ಈ ಮಾಡೆಲ್‌ನಲ್ಲಿ ಸ್ಟೀರಿಂಗ್ ಚಕ್ರವು ವ್ಹೀಲ್ ಟಿಲ್ಟ್ ಅಡ್ಜಸ್ಟಬಲ್ ಆಗಿದೆ ಮತ್ತು ಅದನ್ನು ಟೆಲಿಸ್ಕೋಪಿಕಲಿ ಅಡ್ಜಸ್ಟ್ ಮಾಡಲು ಸಾಧ್ಯವಿಲ್ಲ.

ಇದನ್ನೂ ಓದಿ: ಮಾರುತಿ ಫ್ರಾಂಕ್ಸ್ ವರ್ಸಸ್ ಇತರ ಮಾರುತಿ ಕಾಂಪ್ಯಾಕ್ಟ್‌ಗಳು: ಬೆಲೆ ಬಾತ್

Maruti Fronx Delta+ Interior

 ಫ್ರಾಂಕ್ಸ್‌ನ ಡೆಲ್ಟಾ ಪ್ಲಸ್ ಟ್ರಿಮ್ ಒಳಭಾಗದಲ್ಲಿ ಕ್ರೋಮ್ ಡೋರ್ ಹ್ಯಾಂಡಲ್‌ಗಳನ್ನು ಹೊಂದಿಲ್ಲ. ಸುರಕ್ಷತೆಯ ದೃಷ್ಟಿಯಿಂದ, ಇದು ಡ್ಯುಯಲ್ ಫ್ರಂಟ್ ಏರ್‌ಬ್ಯಾಗ್‌ಗಳು, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್ (ಇಎಸ್‌ಸಿ), ಹಿಲ್-ಹೋಲ್ಡ್ ಅಸಿಸ್ಟ್ ಮತ್ತು ರಿಯರ್ ಪಾರ್ಕಿಂಗ್ ಸೆನ್ಸರ್‌ಗಳನ್ನು ಹೊಂದಿದೆ.

ಎಂಜಿನ್ ಮತ್ತು ಟ್ರಾನ್ಸ್‌ಮಿಷನ್ 

ಅದರ ಎಂಜಿನ್ ಬಗ್ಗೆ ಹೇಳುವುದಾದರೆ, ಫ್ರಾಂಕ್ಸ್ 1.2-ಲೀಟರ್ ಡ್ಯುಯಲ್ ಜೆಟ್ ಪೆಟ್ರೋಲ್ ಎಂಜಿನ್ (90PS/113Nm) ಫೈವ್-ಸ್ಪೀಡ್ ಎ‌ಎಂಟಿ ಟ್ರಾನ್ಸ್‌ಮಿಷನ್‌ಗೆ ಸಂಯೋಜಿತವಾಗಿದೆ. ಈ ಎಂಜಿನ್ ಫೈವ್-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್‌ನೊಂದಿಗೆ ಸಹ ಲಭ್ಯವಿದೆ.

 ಇದರ ಹೊರತಾಗಿ, ಮಾರುತಿಯು 1.0-ಲೀಟರ್ ಟರ್ಬೊ ಪೆಟ್ರೋಲ್ ಎಂಜಿನ್ (100PS / 148Nm) ಆಯ್ಕೆಯನ್ನು ಸಹ ಇಟ್ಟುಕೊಂಡಿದೆ, ಇದರೊಂದಿಗೆ 5-ಸ್ಪೀಡ್ ಮ್ಯಾನುವಲ್ ಮತ್ತು 6-ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಆಯ್ಕೆಯನ್ನು ನೀಡಲಾಗಿದೆ. ಮ್ಯಾನ್ಯುವಲ್ ಟ್ರಾನ್ಸ್‌ಮಿಷನ್‌ನೊಂದಿಗೆ ಎರಡೂ ಎಂಜಿನ್‌ಗಳ ಆಯ್ಕೆಯನ್ನು ಪಡೆಯುವ ಏಕೈಕ ವೇರಿಯಂಟ್  ಇದಾಗಿದೆ, ಆದರೆ ಈ ವೇರಿಯಂಟ್ ಟರ್ಬೊ-ಆಟೋಮ್ಯಾಟಿಕ್ ಆಯ್ಕೆಯನ್ನು ಪಡೆದುಕೊಂಡಿಲ್ಲ.

 

ಬೆಲೆ ಮತ್ತು ಪ್ರತಿಸ್ಪರ್ಧಿಗಳು

ಫ್ರಾಂಕ್ಸ್‌ನ ಡೆಲ್ಟಾ+ ವೇರಿಯಂಟ್‌ನ ಬೆಲೆ 8.72 ಲಕ್ಷ ರೂ.ದಿಂದ 9.72 ಲಕ್ಷ ರೂ.ವರೆಗೆ ಇದೆ. ಫ್ರಾಂಕ್ಸ್‌ನ ಒಟ್ಟಾರೆ ಬೆಲೆಗಳು  7.46 ರೂ.ದಿಂದ 13.14 ರೂ.ವರೆಗೆ ಇರುತ್ತದೆ (ಎಲ್ಲವೂ ಎಕ್ಸ್ ಶೋರೂಂ ಬೆಲೆಗಳಾಗಿವೆ). ಭಾರತದಲ್ಲಿ ಫ್ರಾಂಕ್ಸ್ ಯಾವುದೇ ನೇರ ಪ್ರತಿಸ್ಪರ್ಧಿಗಳನ್ನು ಹೊಂದಿಲ್ಲದಿದ್ದರೂ, ಇದು ಮಾರುತಿ ಬ್ರೆಝಾ, ಟಾಟಾ ನೆಕ್ಸಾನ್, ಹ್ಯುಂಡೈ ವೆನ್ಯೂ, ರೆನಾಲ್ಟ್ ಕಿಗರ್, ನಿಸ್ಸಾನ್ ಮ್ಯಾಗ್ನೈಟ್ ಮತ್ತು ಬಲೆನೊ ಮತ್ತು i20 ಯಂತಹ ಪ್ರೀಮಿಯಂ ಹ್ಯಾಚ್‌ಬ್ಯಾಕ್‌ಗಳಂತಹ ಸಬ್‌ಕಾಂಪ್ಯಾಕ್ಟ್ ಎಸ್‌ಯುವಿಗಳೊಂದಿಗೆ ಸ್ಪರ್ಧಿಸುತ್ತದೆ.

 ಇನ್ನಷ್ಟು ಓದಿ: ಮಾರುತಿ ಫ್ರಾಂಕ್ಸ್ ಎ‌ಎಂಟಿ

ಅವರಿಂದ ಪ್ರಕಟಿಸಲಾಗಿದೆ
was this article helpful ?

0 out of 0 found this helpful

Write your Comment ನಲ್ಲಿ ಮಾರುತಿ ಫ್ರಾಂಕ್ಸ್‌

Read Full News

Similar cars to compare & consider

ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ

ಕಾರು ಸುದ್ದಿ

  • ಟ್ರೆಂಡಿಂಗ್ ಸುದ್ದಿ
  • ಇತ್ತಿಚ್ಚಿನ ಸುದ್ದಿ

trendingಎಸ್‌ಯುವಿ ಕಾರುಗಳು

  • ಲೇಟೆಸ್ಟ್
  • ಉಪಕಮಿಂಗ್
  • ಪಾಪ್ಯುಲರ್
×
We need your ನಗರ to customize your experience