• English
  • Login / Register

ಟಾಟಾ ಪಂಚ್ ಮತ್ತು ನೆಕ್ಸಾನ್ ಜೊತೆಗೆ ಮಾರುತಿ ಫ್ರಾಂಕ್ಸ್ ಬೆಲೆ ಹೋಲಿಕೆ

ಟಾಟಾ ನೆಕ್ಸಾನ್‌ 2020-2023 ಗಾಗಿ sonny ಮೂಲಕ ಏಪ್ರಿಲ್ 27, 2023 10:00 pm ರಂದು ಪ್ರಕಟಿಸಲಾಗಿದೆ

  • 14 Views
  • ಕಾಮೆಂಟ್‌ ಅನ್ನು ಬರೆಯಿರಿ

ಮೂರು ಸಬ್-ಫೋರ್ ಮೀಟರ್ ವೇರಿಯೆಂಟ್‌ವಾರು ವಿಷಯದಲ್ಲಿ ಹೇಗೆ ಹೋಲಿಕೆಯನ್ನು ಹೊಂದಿವೆ? ಇದನ್ನು ನಾವೀಗ ನೋಡೋಣ

Fronx vs Nexon and Punch

ಈ ಮಾರುತಿ ಫ್ರಾಂಕ್ಸ್ ಅಧಿಕೃತವಾಗಿ ಪ್ರೀಮಿಯಂ ಸಬ್-4m ಕ್ರಾಸ್ಓವರ್‌ನ ಸ್ಥಾನಕ್ಕೆ ಮಾರುಕಟ್ಟೆಯನ್ನು ಪ್ರವೇಶಿಸಿದೆ. ಇದು ಪ್ರೀಮಿಯಂ ಹ್ಯಾಚ್‌ಬ್ಯಾಕ್‌ಗಳು ಮತ್ತು ಸಬ್‌ಕಾಂಪ್ಯಾಕ್ಟ್ ಎಸ್‌ಯುವಿಗಳಿಗೆ ಪರ್ಯಾಯವಾದ ಸ್ಥಾನವನ್ನು ಗಳಿಸಿದೆ. ಈ ಫ್ರಾಂಕ್ಸ್ ಬಲೆನೊದ ಫೀಚರ್-ಸೆಟ್‌ನ ಒಂದೆರಡು ಸೇರ್ಪಡೆಗಳನ್ನು ಪಡೆದಿದೆ ಮತ್ತು ಮಾರುತಿಯ ಪ್ರಸ್ತುತ ಫ್ಲ್ಯಾಗ್‌ಶಿಫ್‌ನ ಗ್ರ್ಯಾಂಡ್ ವಿಟಾರಾ ‌ಎಸ್‌ಯುವಿಯಿಂದ ವಿನ್ಯಾಸದ ಸ್ಫೂರ್ತಿಯನ್ನು ಪಡೆದಿದೆ. ಅದರ ಸಂಭಾವ್ಯ ಪ್ರತಿಸ್ಪರ್ಧಿಗಳಲ್ಲಿ ಟಾಟಾದಿಂದ ಹೆಚ್ಚು ಜನಪ್ರಿಯವಾದ ಸಬ್-4m ಕೊಡುಗೆಗಳೆಂದರೆ - ಪಂಚ್ ಮತ್ತು ನೆಕ್ಸಾನ್. ಎಲ್ಲಾ ಮೂರೂ ಪೆಟ್ರೋಲ್ ವೇರಿಯೆಂಟ್‌ಗಳ ಬೆಲೆಗಳ ಹೋಲಿಕೆಯನ್ನು ನೋಡೋಣ:

ಬೆಲೆ ಪರಿಶೀಲನೆ

ಮ್ಯಾನ್ಯುವಲ್

ಮಾರುತಿ ಫ್ರಾಂಕ್ಸ್

ಟಾಟಾ ಪಂಚ್

ಟಾಟಾ ನೆಕ್ಸಾನ್

-

ಅಡ್ವೆಂಚರ್ - ರೂ 6.85 ಲಕ್ಷ

-

ಸಿಗ್ಮಾ - ರೂ 7.46 ಲಕ್ಷ

ಅಕಂಪ್ಲಿಶ್ಡ್ -  ರೂ 7.65 ಲಕ್ಷ

XE – ರೂ. 7.8 ಲಕ್ಷ

ಡೆಲ್ಟಾ -ರೂ 8.33 ಲಕ್ಷ

ಕ್ರಿಯೇಟಿವ್ – ರೂ. 8.47 ಲಕ್ಷ

-

ಡೆಲ್ಟಾ+ - 8.73 ಲಕ್ಷ

ಕ್ರಿಯೇಟಿವ್ iRA – ರೂ. 8.77 ಲಕ್ಷ

XM - ರೂ 8.8 ಲಕ್ಷ

-

-

XM S - ರೂ 9.4 ಲಕ್ಷ

ಡೆಲ್ಟಾ+ ಟರ್ಬೋ – ರೂ. 9.73 ಲಕ್ಷ

-

XM+ S - ರೂ 9.95 ಲಕ್ಷ

ಝೆಟಾ ಟರ್ಬೋ - ರೂ 10.56 ಲಕ್ಷ

-

XZ+ - ರೂ 10.5 ಲಕ್ಷ

-

-

XZ+ ಡಾರ್ಕ್ – ರೂ. 10.8 ಲಕ್ಷ

ಆಲ್ಫಾ ಟರ್ಬೋ – ರೂ. 11.48/ ರೂ. 11.64 (DT)

-

XZ+ S – ರೂ. 11.4 ಲಕ್ಷ

-

-

XZ+ S ಡಾರ್ಕ್ - ರೂ 11.55 ಲಕ್ಷ

-

-

XZ+ ಲಕ್ಸ್ - ರೂ 11.6 ಲಕ್ಷ

ಸಂಬಂಧಿತ: ಮಾರುತಿ ಫ್ರಾಂಕ್ಸ್ ವರ್ಸಸ್ ಟಾಟಾ ಪಂಚ್: ವಿಶೇಷಣಗಳ ಹೋಲಿಕೆ

ಪ್ರಮುಖಾಂಶಗಳು

  • ಫ್ರಾಂಕ್ಸ್ ಪಂಚ್‌ಗಿಂತ ಹೆಚ್ಚು ಬೆಲೆಬಾಳುತ್ತದೆ ಆದರೆ ನೆಕ್ಸಾನ್ ವಿರುದ್ಧ ಸ್ಪರ್ಧಾತ್ಮಕ ಬೆಲೆಯನ್ನು ಹೊಂದಿದೆ. ಇದು ಪಂಚ್‌ಗಿಂತ ರೂ. 1.46 ಲಕ್ಷಗಳಷ್ಟು ಹೆಚ್ಚು ಬೆಲೆಯನ್ನು ಹೊಂದಿದೆ ಮತ್ತು ಟಾಟಾ ಮೈಕ್ರೋ-ಎಸ್‌ಯುವಿಯ ಮಿಡ್-ಸ್ಪೆಕ್ ವೇರಿಯೆಂಟ್‌ಗೆ ಹತ್ತಿರದಲ್ಲಿದೆ. ಆದಾಗ್ಯೂ, ನೆಕ್ಸಾನ್ ಈ ಮೂರರಲ್ಲಿ ಹೆಚ್ಚಿನ ಆರಂಭಿಕ ಬೆಲೆಯನ್ನು ಹೊಂದಿದೆ.

  • ಈ ಫ್ರಾಂಕ್ಸ್ ಮತ್ತು ಪಂಚ್ ಎರಡನ್ನೂ 1.2-ಲೀಟರ್ ಪೆಟ್ರೋಲ್ ಎಂಜಿನ್‌ನೊಂದಿಗೆ ನೀಡಲಾಗುತ್ತದೆ. ಮಾರುತಿ ಕ್ರಾಸ್ಓವರ್ 1-ಲೀಟರ್ ಟರ್ಬೋ-ಪೆಟ್ರೋಲ್ ಎಂಜಿನ್ ಆಯ್ಕೆಯನ್ನು ಪಡೆದರೆ ನೆಕ್ಸಾನ್ 1.2-ಲೀಟರ್ ಟರ್ಬೋಚಾರ್ಜ್ಡ್ ಪೆಟ್ರೋಲ್ ಎಂಜಿನ್‌ನೊಂದಿಗೆ ಪ್ರಮಾಣಿತವಾಗಿ ಬರುತ್ತದೆ.

Tata Punch Side

  • ಮುಂದಿನ ಟ್ರಿಮ್ ಲೇವಲ್‌ಗೆ ಹೋಗದೆಯೇ ಪ್ರತಿಯೊಂದು ವೇರಿಯೆಂಟ್‌ನಲ್ಲಿ ಈ ಪಂಚ್ ಒಂದು ಅಥವಾ ಎರಡು ಫೀಚರ್‌ಗಳ ಕಸ್ಟಮೈಸೇಶನ್ ಪ್ಯಾಕ್ ಆಯ್ಕೆಯನ್ನು ಪಡೆಯುತ್ತದೆ. ಇವುಗಳನ್ನು ಮೇಲಿನ ಬೆಲೆ ಪಟ್ಟಿಯಲ್ಲಿ ಸೇರಿಸಲಾಗಿಲ್ಲ.
  •  ಎಲ್ಲಾ ಮೂರೂ ಮಾಡೆಲ್‌ಗಳು ಸಾಕಷ್ಟು ಸುಸಜ್ಜಿತವಾಗಿವೆ ಆದರೆ ಫ್ರಾಂಕ್ಸ್ ದೊಡ್ಡ ಟಚ್‌ಸ್ಕ್ರೀನ್ ಇನ್‌ಫೋಟೈನ್‌ಮೆಂಟ್ ಯೂನಿಟ್, ಹೆಡ್-ಅಪ್ ಡಿಸ್‌ಪ್ಲೇ, ಮತ್ತು 360-ಡಿಗ್ರಿ ಪಾರ್ಕಿಂಗ್ ಕ್ಯಾಮರಾವನ್ನು ಪಡೆಯುತ್ತದೆ.
  •  ಈ ಪಂಚ್ ಅನ್ನು ಸೆಮಿ-ಡಿಜಿಟಲ್ ಇನ್‌ಸ್ಟ್ರೂಮೆಂಟ್ ಕ್ಲಸ್ಟರ್, ಕ್ರೂಸ್ ಕಂಟ್ರೋಲ್, ಆಟೋ ಹೆಡ್‌ಲೈಟ್‌ಗಳು ಮತ್ತು ಸಂಪರ್ಕಿತ ಕಾರ್ ಟೆಕ್ನಾಲಜಿಯೊಂದಿಗೆ ಸಜ್ಜುಗೊಳಿಸಲಾಗಿದೆ.

 ಸಂಬಂಧಿತ: ಮಾರುತಿ ಫ್ರಾಂಕ್ಸ್ ವರ್ಸಸ್ ಸಬ್‌ಕಾಂಪ್ಯಾಕ್ಟ್ ಎಸ್‌ಯುವಿ ಪ್ರತಿಸ್ಪರ್ಧಿಗಳು: ಇಂಧನ ದಕ್ಷತೆ ಹೋಲಿಕೆ

  •  ನೆಕ್ಸಾನ್‌ನ ಮಿಡ್-ಸ್ಪೆಕ್ ವೇರಿಯೆಂಟ್‌ಗೆ ಹೋಲಿಸಿದರೆ ಈ ನೆಕ್ಸಾನ್ ಸನ್‌ರೂಫ್ ಪ್ರಯೋಜನವನ್ನು ಪಡೆಯುತ್ತದೆ. ಏತನ್ಮಧ್ಯೆ, ಫ್ರಾಂಕ್ಸ್‌ನ ಟಾಪ್‌-ಸ್ಪೆಕ್ ಆಗಿರುವ ಆಲ್ಫಾಗೆ ಹೋಲಿಸಿದರೆ ಟಾಪ್-ಸ್ಪೆಕ್ XZ+ ಲಕ್ಸ್ ವೇರಿಯೆಂಟ್ ವೆಂಟಿಲೇಟೆಡ್ ಫ್ರಂಟ್ ಸೀಟುಗಳು ಮತ್ತು ಮಳೆ ಸೆನ್ಸಿಂಗ್ ವೈಪರ್‌ಗಳನ್ನು ಹೊಂದಿದೆ.

 

ಆಟೋಮ್ಯಾಟಿಕ್

ಮಾರುತಿ ಫ್ರಾಂಕ್ಸ್

ಟಾಟಾ ಪಂಚ್

ಟಾಟಾ ನೆಕ್ಸಾನ್

-

ಅಡ್ವೆಂಚರ್ AMT – ರೂ. 7.45 ಲಕ್ಷ

-

-

ಅಕಂಪ್ಲಿಶ್ಡ್ AMT – ರೂ. 8.25 ಲಕ್ಷ

-

ಡೆಲ್ಟಾ AMT- ರೂ. 8.88 ಲಕ್ಷ

ಕ್ರಿಯೇಟಿವ್ AMT – ರೂ. 9.07 ಲಕ್ಷ

-

ಡೆಲ್ಟಾ+ AMT – ರೂ. 9.28 ಲಕ್ಷ

ಕ್ರಿಯೇಟಿವ್ iRA AMT – ರೂ. 9.37 ಲಕ್ಷ

XMA AMT - ರೂ 9.45 ಲಕ್ಷ

-

-

XMA S AMT - ರೂ 10 ಲಕ್ಷ

-

-

XMA+ S AMT - ರೂ 10.6 ಲಕ್ಷ

-

-

XZA+ AMT - ರೂ 11.15 ಲಕ್ಷ

-

-

XZA+ ಡಾರ್ಕ್ AMT - ರೂ 11.45 ಲಕ್ಷ

ಝೆಟಾ ಟರ್ಬೋ AT - ರೂ 12.06 ಲಕ್ಷ

-

XZA+ S AMT - ರೂ 11.9 ಲಕ್ಷ

-

-

XZA+ S Dark AMT - ರೂ 12.2 ಲಕ್ಷ

-

-

XZA+ LUX AMT - ರೂ 12.25 ಲಕ್ಷ

-

-

XZA+ LUX ಡಾರ್ಕ್ AMT - ರೂ 12.55 ಲಕ್ಷ

-

-

XZA+ LUX S AMT - ರೂ 12.75 ಲಕ್ಷ

ಆಲ್ಫಾ ಟರ್ಬೋ AT - ರೂ 12.98 ಲಕ್ಷ / ರೂ 13.14 ಲಕ್ಷ (DT)

-

XZA+ LUX S ಡಾರ್ಕ್ AMT - ರೂ 12.95 ಲಕ್ಷ

ಪ್ರಮುಖಾಂಶಗಳು

  •  ಮತ್ತೊಮ್ಮೆ, ಫ್ರಾಂಕ್ಸ್‌ಗಿಂತ ಪಂಚ್ ಹೆಚ್ಚು ಕೈಗೆಟುವ ಬೆಲೆಯನ್ನು ಹೊಂದಿದ್ದರೆ ನೆಕ್ಸಾನ್ ಆಟೋಮ್ಯಾಟಿಕ್ ವೇರಿಯೆಂಟ್‌ಗಾಗಿ ಅತ್ಯಂತ ದುಬಾರಿ ಪ್ರವೇಶ ಪಾಯಿಂಟ್ ಅನ್ನು ಹೊಂದಿದೆ.
  •  ಎರಡೂ ಟಾಟಾ ಮಾಡೆಲ್‌ಗಳು ಎಎಂಟಿಯನ್ನು ಹೊಂದಿವೆ ಆದರೆ ಮಾರುತಿಯು 1.2-ಲೀಟರ್ ಪೆಟ್ರೋಲ್ ಎಂಜಿನ್ ಆಯ್ಕೆಗೆ ಮಾತ್ರ ಸೀಮಿತವಾಗಿದೆ. ಎರಡನೆಯದು ಟರ್ಬೋಚಾರ್ಜ್ಡ್ ಎಂಜಿನ್ ಪ್ರೀಮಿಯಂ ಆರು-ಸ್ಪೀಡ್ ಟಾರ್ಕ್ ಕನ್ವರ್ಟರ್ ಆಟೋಮ್ಯಾಟಿಕ್ ಆಯ್ಕೆಯನ್ನು ಪಡೆಯುತ್ತದೆ. ಫ್ರಾಂಕ್ಸ್‌ನ ಎಎಂಟಿ ಮತ್ತು ಎಟಿ ವೇರಿಯೆಂಟ್‌ಗಳ ನಡುವೆ ರೂ. 2.7 ಲಕ್ಷಕ್ಕಿಂತ ಹೆಚ್ಚಿನ ಬೆಲೆಯ ಅಂತರವಿದೆ.

Maruti Fronx Turbo-petrol Engine

 ಇದನ್ನೂ ಓದಿ: ಮಾರುತಿ ಫ್ರಾಂಕ್ಸ್ ವರ್ಸಸ್ ಮಾರುತಿಯ ಇತರ ಕಾಂಪ್ಯಾಕ್ಟ್‌ಗಳು: ಬೆಲೆ ಬಾತ್

  •  ಈ ಪ್ರವೇಶ ಮಟ್ಟದ ಫ್ರಾಂಕ್ಸ್ ಟರ್ಬೋ-ಎಟಿ ಟ್ರಿಮ್ ಟಾಪ್-ಸ್ಪೆಕ್ ಪಂಚ್ ಎಎಂಟಿ ಮತ್ತು ಮಿಡ್-ಸ್ಪೆಕ್ ನೆಕ್ಸಾನ್ ಎಎಂಟಿಗಿಂತ ರೂ. 2.6 ಲಕ್ಷಕ್ಕಿಂತ ದುಬಾರಿಯಾಗಿದೆ.
  •  ಕ್ಸ್‌ನ ಟಾಪ್-ಸ್ಪೆಕ್ ಟರ್ಬೋ-ಎಟಿ ವೇರಿಯೆಂಟ್, ಟಾಪ್-ಸ್ಪೆಕ್ ನೆಕ್ಸಾನ್ ಎಎಂಟಿಯಂತೆಯೇ ಬೆಲೆಯನ್ನು ಹೊಂದಿದೆ ಮತ್ತು ಎರಡನೆಯದು ಒಂದೆರಡು ಹೆಚ್ಚಿನ ಫೀಚರ್‌ಗಳನ್ನು ಪಡೆಯುತ್ತದೆ. 
  •  ಎಎಂಟಿ ತಂತ್ರಜ್ಞಾನವು ಕಾಲಾಂತರದಲ್ಲಿ ಉತ್ತಮವಾಗಿದ್ದರೂ ಇದು ಫೀಚರ್‌-ಭರಿತ ಫ್ರಾಂಕ್ಸ್‌ನೊಂದಿಗೆ ನೀಡಲಾದ ಟಾರ್ಕ್ ಕನ್ವರ್ಟರ್ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್‌ನಂತೆಯೇ ಪರಿಷ್ಕೃತವಾಗಿಲ್ಲ. 

ಇನ್ನಷ್ಟು ಇಲ್ಲಿ ಓದಿ ನೆಕ್ಸಾನ್ ಎಎಂಟಿ

ಅವರಿಂದ ಪ್ರಕಟಿಸಲಾಗಿದೆ
was this article helpful ?

0 out of 0 found this helpful

Write your Comment on Tata ನೆಕ್ಸಾನ್‌ 2020-2023

Read Full News

explore similar ಕಾರುಗಳು

ಕಾರು ಸುದ್ದಿ

  • ಟ್ರೆಂಡಿಂಗ್ ಸುದ್ದಿ
  • ಇತ್ತಿಚ್ಚಿನ ಸುದ್ದಿ

trending ಎಸ್‌ಯುವಿ ಕಾರುಗಳು

  • ಲೇಟೆಸ್ಟ್
  • ಉಪಕಮಿಂಗ್
  • ಪಾಪ್ಯುಲರ್
×
We need your ನಗರ to customize your experience