Maruti Swift: 6 ಏರ್‌ಬ್ಯಾಗ್‌ಗಳನ್ನು ಪ್ರಮಾಣಿತವಾಗಿ ಪಡೆಯಲಿರುವ ಮಾರುತಿಯ ಅತ್ಯಂತ ಕಡಿಮೆ ಬೆಲೆಯ ಕಾರು

published on ಮೇ 06, 2024 10:23 pm by rohit for ಮಾರುತಿ ಸ್ವಿಫ್ಟ್

  • 31 Views
  • ಕಾಮೆಂಟ್‌ ಅನ್ನು ಬರೆಯಿರಿ

ಹೊಸ ಸ್ವಿಫ್ಟ್ ಮೇ 9 ರಂದು ಮಾರುಕಟ್ಟೆಗೆ ಬರಲಿದೆ, ಇದರ ಬೆಲೆಯು ರೂ 6.5 ಲಕ್ಷದಿಂದ ಪ್ರಾರಂಭವಾಗುವ ನಿರೀಕ್ಷೆಯಿದೆ (ಎಕ್ಸ್ ಶೋರೂಂ)

2024 Maruti Swift to get 6 airbags as standard

  •  ಮಾರುತಿಯು ರೂ. 11,000 ಕ್ಕೆ ಹೊಸ ಸ್ವಿಫ್ಟ್‌ ಬುಕ್ಕಿಂಗ್‌ಗಳನ್ನು ತೆಗೆದುಕೊಳ್ಳುತ್ತಿದೆ.
  •  ಕೆಲವು ಯೂನಿಟ್ ಗಳು ಈಗಾಗಲೇ ಡೀಲರ್‌ಶಿಪ್‌ಗಳನ್ನು ತಲುಪಿದೆ, ಇದರ ಜೊತೆಗೆ ಆನ್‌ಲೈನ್‌ನಲ್ಲಿ ಕೂಡ ವಿವರಗಳು ಲೀಕ್ ಆಗಿವೆ.
  •  ಜಪಾನ್-ಸ್ಪೆಕ್ ಮಾಡೆಲ್ 4-ಸ್ಟಾರ್ ಸುರಕ್ಷತಾ ರೇಟಿಂಗ್ ಅನ್ನು ಹೊಂದಿದೆ ಮತ್ತು ADAS ಅನ್ನು ಕೂಡ ಪಡೆಯುತ್ತದೆ, ಆದರೆ ಅದನ್ನು ಭಾರತದಲ್ಲಿ ನೀಡಲಾಗುವುದಿಲ್ಲ.
  •  ಇತರ ಫೀಚರ್ ಗಳಲ್ಲಿ ESP ಮತ್ತು ರಿವರ್ಸಿಂಗ್ ಕ್ಯಾಮೆರಾವನ್ನು ನಿರೀಕ್ಷಿಸಲಾಗಿದೆ.
  •  ಇದು ಹೊಸ 1.2-ಲೀಟರ್ 3-ಸಿಲಿಂಡರ್ ಪೆಟ್ರೋಲ್ ಎಂಜಿನ್ ಜೊತೆಗೆ  5-ಸ್ಪೀಡ್ MT ಮತ್ತು AMT ಆಯ್ಕೆಗಳೊಂದಿಗೆ ಪಡೆಯುತ್ತದೆ.

 ನಾಲ್ಕನೇ ಜನರೇಷನ್ ಮಾರುತಿ ಸುಜುಕಿ ಸ್ವಿಫ್ಟ್ ಮಾರುಕಟ್ಟೆಗೆ ಬರಲು ಇನ್ನೂ ಸ್ವಲ್ಪ ಸಮಯವಿದ್ದರೂ, ಇದು ಕೆಲವು ಡೀಲರ್‌ಶಿಪ್‌ಗಳನ್ನು ಈಗಾಗಲೇ ತಲುಪಿದೆ ಮತ್ತು ಹ್ಯಾಚ್‌ಬ್ಯಾಕ್‌ನ ಹೊಸ ವಿವರಗಳು ಆನ್‌ಲೈನ್‌ನಲ್ಲಿ ಲೀಕ್ ಆಗಿವೆ. ನಮ್ಮ ಮೂಲಗಳ ಪ್ರಕಾರ, ಈ ಜನಪ್ರಿಯ ಮಾರುತಿ ಹ್ಯಾಚ್‌ಬ್ಯಾಕ್‌ಗೆ ಒಂದು ಪ್ರಮುಖ ಸುರಕ್ಷತಾ ಅಪ್ಡೇಟ್ ಅನ್ನು ನೀಡಲಾಗುವುದು ಎಂದು ತಿಳಿದುಬಂದಿದೆ.

 ಎಲ್ಲಾ ವೇರಿಯಂಟ್ ಗಳಿಗೆ 6 ಏರ್‌ಬ್ಯಾಗ್‌ಗಳು

2024 Maruti Swift to get 6 airbags as standard

 ಹೊಸ ಸ್ವಿಫ್ಟ್ ಆರು ಏರ್‌ಬ್ಯಾಗ್‌ಗಳನ್ನು ಸ್ಟ್ಯಾಂಡರ್ಡ್ ಆಗಿ ಪಡೆಯಲಿದೆ, ಹಾಗಾಗಿ ಇದು ಹಳೆ ಮಾಡೆಲ್ ಗಿಂತ ಹೆಚ್ಚು ಸುರಕ್ಷಿತವಾಗಿದೆ. ಹಳೆಯ ಮಾಡೆಲ್ ಗಿಂತ ಇದನ್ನು ಸುರಕ್ಷಿತವಾಗಿರಿಸಲು ಮಾರುತಿ ಸುಜುಕಿಯು ಈ ಹೊಸ ಹ್ಯಾಚ್‌ಬ್ಯಾಕ್ ಅನ್ನು ಬಲಿಷ್ಠಗೊಳಿಸಿದೆ ಎಂದು ನಾವು ಭಾವಿಸುತ್ತೇವೆ.

 ನೆನಪಿರಲಿ, ಇದು ಇತ್ತೀಚೆಗೆ ಜಪಾನ್ NCAP ಕ್ರ್ಯಾಶ್ ಪರೀಕ್ಷೆಗಳಲ್ಲಿ 4-ಸ್ಟಾರ್ ರೇಟಿಂಗ್ ಅನ್ನು ಪಡೆದುಕೊಂಡಿದೆ. ಇಲ್ಲಿ ಗಮನಿಸಬೇಕಾದ ಒಂದು ಪ್ರಮುಖ ವಿಷಯವೆಂದರೆ ಜಪಾನ್‌ನಲ್ಲಿನ ಸ್ವಿಫ್ಟ್ ಅಡ್ವಾನ್ಸಡ್ ಡ್ರೈವರ್ ಅಸ್ಸಿಸ್ಟಂಸ್ ಸಿಸ್ಟಮ್ (ADAS) ಅನ್ನು ಹೊಂದಿದೆ, ಆದರೆ ಭಾರತದ ಸ್ವಿಫ್ಟ್ ನಲ್ಲಿ ಅವುಗಳನ್ನು ನೀಡಲಾಗಿಲ್ಲ.

 ಇತರ ಸುರಕ್ಷತಾ ಫೀಚರ್ ಗಳು

 ಮಾರುತಿಯು ತನ್ನ ಹೊಸ ಸ್ವಿಫ್ಟ್ ಗೆ ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಪ್ರೋಗ್ರಾಂ (ESP), ರಿವರ್ಸಿಂಗ್ ಕ್ಯಾಮೆರಾ, ಮತ್ತು ಬಹುಶಃ 360-ಡಿಗ್ರಿ ಕ್ಯಾಮೆರಾ ಮತ್ತು ಬ್ಲೈಂಡ್ ಸ್ಪಾಟ್ ಡಿಟೆಕ್ಷನ್‌ನಂತಹ ಸುರಕ್ಷತಾ ತಂತ್ರಜ್ಞಾನವನ್ನು ನೀಡುವ ನಿರೀಕ್ಷೆಯಿದೆ.

 ಹೊಸ ಪೆಟ್ರೋಲ್ ಎಂಜಿನ್

2024 Maruti Swift

 2024 ಸ್ವಿಫ್ಟ್ ಹೊಸ 1.2-ಲೀಟರ್ 3-ಸಿಲಿಂಡರ್ Z ಸೀರೀಸ್ ಪೆಟ್ರೋಲ್ ಎಂಜಿನ್ (82 PS/112 Nm ವರೆಗೆ) ಜೊತೆಗೆ 5-ಸ್ಪೀಡ್ MT ಮತ್ತು 5-ಸ್ಪೀಡ್ AMT ಆಯ್ಕೆಯೊಂದಿಗೆ ಬರಲಿದೆ. ಇದನ್ನು ಹಳೆಯ 1.2-ಲೀಟರ್ 4-ಸಿಲಿಂಡರ್ K ಸೀರೀಸ್ ಪೆಟ್ರೋಲ್ ಎಂಜಿನ್ ಬದಲಿಗೆ ನೀಡಲಾಗುತ್ತಿದೆ. ಇದು ಸದ್ಯಕ್ಕೆ CNG ಪವರ್‌ಟ್ರೇನ್ ಆಯ್ಕೆಯನ್ನು ಹೊಂದಿರುವುದಿಲ್ಲ ಆದರೆ ನಂತರದ ದಿನಗಳಲ್ಲಿ ಪಡೆಯುವ ನಿರೀಕ್ಷೆಯಿದೆ.

 ನಿರೀಕ್ಷಿಸಲಾಗಿರುವ ಬೆಲೆ ಮತ್ತು ಪ್ರತಿಸ್ಪರ್ಧಿಗಳು

2024 Maruti Swift rear

 ಹೊಸ ಮಾರುತಿ ಸ್ವಿಫ್ಟ್ ಬೆಲೆಯು 6.5 ಲಕ್ಷದಿಂದ (ಎಕ್ಸ್ ಶೋರೂಂ) ಶುರುವಾಗುವ ನಿರೀಕ್ಷೆಯಿದೆ. ಇದು ಹ್ಯುಂಡೈ ಗ್ರಾಂಡ್ ಐ10 ನಿಯೋಸ್ ಗೆ ನೇರ ಸ್ಪರ್ಧಿಯಾಗಿದೆ, ಹಾಗೆಯೇ ರೆನಾಲ್ಟ್ ಟ್ರೈಬರ್, ಟಾಟಾ ಪಂಚ್ ಮತ್ತು ಹ್ಯುಂಡೈ ಎಕ್ಸ್‌ಟರ್‌ಗೆ ಪರ್ಯಾಯ ಆಯ್ಕೆಯಾಗಲಿದೆ.

 ಸಂಬಂಧಿಸಿದ ಲೇಖನ: ಬಿಡುಗಡೆಗೆ ಮುಂಚೆ ಪಡೆಯಿರಿ ಹೊಸ ಮಾರುತಿ ಸ್ವಿಫ್ಟ್ ನ ಸಂಪೂರ್ಣ ವಿವರ

 ಇನ್ನಷ್ಟು ಓದಿ: ಸ್ವಿಫ್ಟ್ AMT

ಅವರಿಂದ ಪ್ರಕಟಿಸಲಾಗಿದೆ
was this article helpful ?

0 out of 0 found this helpful

Write your Comment ನಲ್ಲಿ ಮಾರುತಿ ಸ್ವಿಫ್ಟ್

Read Full News

Similar cars to compare & consider

ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ

ಕಾರು ಸುದ್ದಿ

  • ಟ್ರೆಂಡಿಂಗ್ ಸುದ್ದಿ
  • ಇತ್ತಿಚ್ಚಿನ ಸುದ್ದಿ

trendingಹ್ಯಾಚ್ಬ್ಯಾಕ್ ಕಾರುಗಳು

  • ಲೇಟೆಸ್ಟ್
  • ಉಪಕಮಿಂಗ್
  • ಪಾಪ್ಯುಲರ್
×
We need your ನಗರ to customize your experience