ಈ 8 ಚಿತ್ರಗಳಲ್ಲಿ ಹೊಸ Maruti Swift Vxi (ಒಪ್ಶನಲ್‌) ಆವೃತ್ತಿಯ ವಿವರಗಳು

published on ಮೇ 15, 2024 05:00 pm by shreyash for ಮಾರುತಿ ಸ್ವಿಫ್ಟ್

  • 36 Views
  • ಕಾಮೆಂಟ್‌ ಅನ್ನು ಬರೆಯಿರಿ

ಹೊಸ-ಜನರೇಶನ್‌ ಸ್ವಿಫ್ಟ್‌ನ Vxi (ಒಪ್ಶನಲ್‌) ಆವೃತ್ತಿಯು ಪುಶ್-ಬಟನ್ ಎಂಜಿನ್ ಸ್ಟಾರ್ಟ್/ಸ್ಟಾಪ್, 7-ಇಂಚಿನ ಟಚ್‌ಸ್ಕ್ರೀನ್ ಮತ್ತು ಎಲೆಕ್ಟ್ರಿಕಲ್ ಫೋಲ್ಡಬಲ್ ORVM ಗಳಂತಹ ವೈಶಿಷ್ಟ್ಯಗಳನ್ನು ಪಡೆಯುತ್ತದೆ.

Maruti Swift Vxi (O)

2024ರ ಮಾರುತಿ ಸ್ವಿಫ್ಟ್ ಇತ್ತೀಚೆಗೆ ಭಾರತದಲ್ಲಿ ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ, ಹೊಸ ವಿನ್ಯಾಸ, ಹೆಚ್ಚುವರಿ ತಂತ್ರಜ್ಞಾನಗಳು ಮತ್ತು ತಾಜಾ ಪವರ್‌ಟ್ರೇನ್ ಅನ್ನು ಒಳಗೊಂಡಿದೆ. ಈ ಹ್ಯಾಚ್‌ಬ್ಯಾಕ್‌ನ ಆವೃತ್ತಿಗಳ ಲೈನ್‌ಆಪ್‌ನ Vxi ಮತ್ತು Zxi ಆವೃತ್ತಿಗಳ ನಡುವೆ Vxi (ಒಪ್ಶನಲ್‌) ಎಂಬ  ಹೊಸ ಮಿಡ್-ಸ್ಪೆಕ್ ಆವೃತ್ತಿಯನ್ನು ಸಹ ಪಡೆದುಕೊಂಡಿದೆ. ಈ ಹೊಸ ಸ್ವಿಫ್ಟ್ Vxi (ಒಪ್ಶನಲ್‌) ಆವೃತ್ತಿಯು ಇನ್ಫೋಟೈನ್‌ಮೆಂಟ್ ಸಿಸ್ಟಮ್ ಮತ್ತು ಪುಶ್-ಬಟನ್ ಸ್ಟಾರ್ಟ್/ಸ್ಟಾಪ್‌ನಂತಹ ಅಗತ್ಯ ವೈಶಿಷ್ಟ್ಯಗಳನ್ನು ಒಳಗೊಂಡಿದೆ, ಇದರ ಬೆಲೆ 7.57 ಲಕ್ಷ ರೂ.ನಿಂದ  (ಎಕ್ಸ್-ಶೋರೂಂ) ಪ್ರಾರಂಭವಾಗಲಿದೆ. ಸ್ವಿಫ್ಟ್‌ನ Vxi (ಒಪ್ಶನಲ್‌) ಆವೃತ್ತಿಯು ಬಿಡುಗಡೆಯಾದ ನಂತರ ತೆಗೆದ 8   ಫೋಟೊಗಳಲ್ಲಿ ಹೇಗೆ ಕಾಣುತ್ತದೆ ಎಂಬುದು ಇಲ್ಲಿದೆ.

ಮುಂಭಾಗ

Maruti Swift Vxi (O) Front
Maruti Swift Vxi (O) Headlights

Vxi (ಒಪ್ಶನಲ್‌) ಆವೃತ್ತಿಯ ಮುಂಭಾಗದ ಬಂಪರ್‌ ರೆಗುಲರ್‌ ವಿಎಕ್ಸ್‌ಐ ಆವೃತ್ತಿಯಂತೆಯೇ ಕಾಣುತ್ತದೆ. ಇದು ಹ್ಯಾಲೊಜೆನ್ ಪ್ರೊಜೆಕ್ಟರ್ ಹೆಡ್‌ಲೈಟ್‌ಗಳನ್ನು ಪಡೆಯುತ್ತದೆ ಆದರೆ ಎಲ್‌ಇಡಿ ಡಿಆರ್‌ಎಲ್‌ಗಳನ್ನು (ಎಲ್-ಆಕಾರದ ಕ್ರೋಮ್ ಸ್ಟ್ರಿಪ್‌ನಿಂದ ಬದಲಾಯಿಸಲಾಗಿದೆ) ಮತ್ತು ಮುಂಭಾಗದ  ಫಾಗ್‌ ಲ್ಯಾಂಪ್‌ಗಳನ್ನು ಪಡೆಯುವುದಿಲ್ಲ. ಇದಕ್ಕೆ ವ್ಯತಿರಿಕ್ತವಾಗಿ, ಟಾಪ್‌-ಸ್ಪೆಕ್ Zxi ಟ್ರಿಮ್‌ಗಳು ಎಲ್‌ಇಡಿ ಡಿಆರ್‌ಎಲ್‌ಗಳೊಂದಿಗೆ ಎಲ್‌ಇಡಿ  ಹೆಡ್‌ಲೈಟ್‌ಗಳನ್ನು ಪಡೆಯುತ್ತವೆ, ಆದರೆ ಎಲ್‌ಇಡಿ ಫಾಗ್ ಲ್ಯಾಂಪ್‌ಗಳು ಟಾಪ್‌-ಸ್ಪೆಕ್ Zxi ಪ್ಲಸ್ ಟ್ರಿಮ್‌ಗೆ ಸೀಮಿತವಾಗಿವೆ.

ಇದನ್ನು ಸಹ ಓದಿ: ಈ ವಿವರವಾದ ಗ್ಯಾಲರಿಯಲ್ಲಿ 2024ರ Maruti Swift Vxi ಕುರಿತು ತಿಳಿಯೋಣ

ಸೈಡ್‌

Maruti Swift Vxi (O) Side

ಸೈಡ್‌ನಿಂದ ಗಮನಿಸುವಾಗ, ಸ್ವಿಫ್ಟ್ Vxi (ಒಪ್ಶನಲ್‌) ಸ್ಟ್ಯಾಂಡರ್ಡ್‌ Vxi ಟ್ರಿಮ್‌ನಂತೆಯೇ ಕಾಣುತ್ತದೆ. ಆದಾಗಿಯೂ ಇದು ಎಲೆಕ್ಟ್ರಿಕಲಿ ಫೊಲ್ಡ್‌ ಮಾಡಬಹುದಾದ ಒಆರ್‌ವಿಎಮ್‌ಗಳನ್ನು ಮತ್ತು ಮುಂಭಾಗದ ಡೋರ್‌ ಹ್ಯಾಂಡಲ್‌ನಲ್ಲಿ ಲಾಕ್/ಅನ್ಲಾಕ್ ಬಟನ್ ಅನ್ನು ಪಡೆಯುತ್ತದೆ. Vxi ಯಂತೆಯೇ, Vxi (ಒಪ್ಶನಲ್‌) ಆವೃತ್ತಿಯು ವೀಲ್‌ ಕವರ್‌ಗಳೊಂದಿಗೆ 14-ಇಂಚಿನ ಸ್ಟೀಲ್‌ನ ಚಕ್ರಗಳನ್ನು ಪಡೆಯುತ್ತದೆ. ಟಾಪ್‌-ಮೊಡೆಲ್‌ Zxi ಟ್ರಿಮ್‌ಗಳು ದೊಡ್ಡ 15-ಇಂಚಿನ ಅಲಾಯ್‌ ವೀಲ್‌ಗಳೊಂದಿಗೆ ಬರುತ್ತವೆ.

ಹಿಂಭಾಗ

Maruti Swift Vxi (O) Rear

ಸ್ವಿಫ್ಟ್ Vxi (ಒಪ್ಶನಲ್‌) ಹಿಂಭಾಗದಿಂದ ಟಾಪ್‌-ಸ್ಪೆಕ್ ಟ್ರಿಮ್‌ಗಳಂತೆಯೇ ಕಂಡುಬಂದರೂ, ಇದು ಹಿಂಭಾಗದ ವೈಪರ್ ಮತ್ತು ವಾಷರ್ ಅನ್ನು ನೀಡುವುದಿಲ್ಲ. ಎಲ್‌ಇಡಿ ಟೈಲ್ ಲೈಟ್‌ಗಳು ಮತ್ತು ಹಿಂಭಾಗದ ಬಂಪರ್‌ನಂತಹ ಅಂಶಗಳು ಒಂದೇ ಆಗಿರುತ್ತವೆ.

ಇಂಟೀರಿಯರ್ 

Maruti Swift Vxi (O) Interior

ಒಳಭಾಗವು, 2024 ಸ್ವಿಫ್ಟ್‌ನ Vxi (O) ಆವೃತ್ತಿಯು ಕಪ್ಪು ಬಟ್ಟೆಯ ಸೀಟ್ ಅಪ್ಹೋಲ್‌ಸ್ಟರಿಯೊಂದಿಗೆ ಸಂಪೂರ್ಣ ಕಪ್ಪು ಡ್ಯಾಶ್‌ಬೋರ್ಡ್‌ನೊಂದಿಗೆ ಬರುತ್ತದೆ.

Maruti Swift Vxi (O) Touchscreen
Maruti Swift Vxi (O) Push button start/stop

 

ತಂತ್ರಜ್ಞಾನವನ್ನು ಗಮನಿಸುವಾಗ, ಹೊಸ-ಜೆನ್ ಸ್ವಿಫ್ಟ್‌ನ Vxi (ಒ) ಆವೃತ್ತಿಯು ಸಣ್ಣ 7-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ವೈರ್‌ಲೆಸ್ ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್ಪ್ಲೇ, ಸ್ಟೀರಿಂಗ್-ಮೌಂಟೆಡ್ ಕಂಟ್ರೋಲ್‌ಗಳು, 4-ಸ್ಪೀಕರ್ ಸೌಂಡ್ ಸಿಸ್ಟಮ್ ಮತ್ತು ಮ್ಯಾನ್ಯುವಲ್ ಎಸಿಯೊಂದಿಗೆ ಬರುತ್ತದೆ. ರೆಗುಲರ್‌ Vxi ಟ್ರಿಮ್‌ಗಿಂತ, ಈ ನಿರ್ದಿಷ್ಟ ಆವೃತ್ತಿಯು ಪುಶ್-ಬಟನ್ ಸ್ಟಾರ್ಟ್/ಸ್ಟಾಪ್ ವೈಶಿಷ್ಟ್ಯವನ್ನು ಸಹ ಪಡೆಯುತ್ತದೆ.

ಇದನ್ನು ಸಹ ಓದಿ: 2024 ಮಾರುತಿ ಸ್ವಿಫ್ಟ್ Vs ಹುಂಡೈ ಗ್ರಾಂಡ್ i10 ನಿಯೋಸ್: ಸಂಪೂರ್ಣ ಹೋಲಿಕೆ 

ಪವರ್‌ಟ್ರೈನ್ ಆಯ್ಕೆಗಳು

ಮಾರುತಿಯು ಸ್ವಿಫ್ಟ್ Vxi (O) ಅನ್ನುಆಟೋಮ್ಯಾಟಿಕ್‌ ಮತ್ತು ಮ್ಯಾನುಯಲ್‌ ಗೇರ್‌ಬಾಕ್ಸ್‌ ಆಯ್ಕೆಗಳಲ್ಲಿ ನೀಡುತ್ತಿದೆ. ಪವರ್‌ಟ್ರೇನ್ ವಿಶೇಷಣಗಳನ್ನು ಕೆಳಗೆ ವಿವರಿಸಲಾಗಿದೆ.

ಎಂಜಿನ್‌

1.2-ಲೀಟರ್ 3 ಸಿಲಿಂಡರ್‌ ಪೆಟ್ರೋಲ್

ಪವರ್‌

82 ಪಿಎಸ್‌

ಟಾರ್ಕ್‌

112 ಎನ್‌ಎಮ್‌

ಗೇರ್‌ಬಾಕ್ಸ್‌

5-ಸ್ಪೀಡ್‌ ಮ್ಯಾನುಯಲ್‌ / 5-ಸ್ಪೀಡ್‌ ಎಎಮ್‌ಟಿ

ಕ್ಲೈಮ್‌ ಮಾಡಲಾದ ಇಂಧನ ದಕ್ಷತೆ

 

ಬೆಲೆ ಮತ್ತು ಪ್ರತಿಸ್ಪರ್ಧಿಗಳು

 2024ರ ಮಾರುತಿ ಸ್ವಿಫ್ಟ್‌ನ Vxi (ಒಪ್ಶನಲ್‌) ಆವೃತ್ತಿಗಳ ಪರಿಚಯಾತ್ಮಕ, ಎಕ್ಸ್-ಶೋರೂಂ ಬೆಲೆಯು 7.57 ಲಕ್ಷ ರೂ.ನಿಂದ 8.07ಲಕ್ಷ ರೂ.ಗಳ ನಡುವೆ ಇದೆ. ಈ ಮಧ್ಯಮ ಗಾತ್ರದ ಹ್ಯಾಚ್‌ಬ್ಯಾಕ್ ಹ್ಯುಂಡೈ ಗ್ರಾಂಡ್ ಐ10 ನಿಯೋಸ್‌ಗೆ ನೇರ ಪ್ರತಿಸ್ಪರ್ಧಿಯಾಗಿದೆ ಮತ್ತು ಇದನ್ನು ಮಾರುತಿ ಇಗ್ನಿಸ್, ಮಾರುತಿ ವ್ಯಾಗನ್ ಆರ್, ರೆನಾಲ್ಟ್ ಟ್ರೈಬರ್ ಮತ್ತು ಹ್ಯುಂಡೈ ಎಕ್ಸ್‌ಟರ್ ಮತ್ತು ಟಾಟಾ ಪಂಚ್‌ನಂತಹ ಕೆಲವು ಮೈಕ್ರೋ-ಎಸ್‌ಯುವಿಗಳಿಗೆ ಪರ್ಯಾಯವಾಗಿ ಪರಿಗಣಿಸಬಹುದು.

ಚಿತ್ರ ಕೃಪೆ: ವಿಪ್‌ರಾಜೇಶ್ (ಆಟೋ ಟ್ರೆಂಡ್)

ಇನ್ನಷ್ಟು ಓದಿ: ಸ್ವಿಫ್ಟ್ ಎಎಮ್‌ಟಿ

ಅವರಿಂದ ಪ್ರಕಟಿಸಲಾಗಿದೆ
was this article helpful ?

0 out of 0 found this helpful

Write your Comment ನಲ್ಲಿ ಮಾರುತಿ ಸ್ವಿಫ್ಟ್

1 ಕಾಮೆಂಟ್
1
L
laxmi narsimharao n
May 18, 2024, 8:20:04 AM

Safety measures, ,how much rating this new car gets

Read More...
    ಪ್ರತ್ಯುತ್ತರ
    Write a Reply
    Read Full News

    Similar cars to compare & consider

    ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ

    ಕಾರು ಸುದ್ದಿ

    • ಟ್ರೆಂಡಿಂಗ್ ಸುದ್ದಿ
    • ಇತ್ತಿಚ್ಚಿನ ಸುದ್ದಿ

    trendingಹ್ಯಾಚ್ಬ್ಯಾಕ್ ಕಾರುಗಳು

    • ಲೇಟೆಸ್ಟ್
    • ಉಪಕಮಿಂಗ್
    • ಪಾಪ್ಯುಲರ್
    ×
    We need your ನಗರ to customize your experience