ಈ ವಿವರವಾದ ಗ್ಯಾಲರಿಯಲ್ಲಿ 2024ರ Maruti Swift Vxi ಕುರಿತು ತಿಳಿಯೋಣ

published on ಮೇ 14, 2024 04:25 pm by ansh for ಮಾರುತಿ ಸ್ವಿಫ್ಟ್

  • 36 Views
  • ಕಾಮೆಂಟ್‌ ಅನ್ನು ಬರೆಯಿರಿ

ಸ್ವಿಫ್ಟ್ Vxi ಆವೃತ್ತಿಯ ಬೆಲೆಗಳು 7.29 ಲಕ್ಷ ರೂ.ನಿಂದ (ಎಕ್ಸ್ ಶೋ ರೂಂ) ಪ್ರಾರಂಭವಾಗುತ್ತದೆ ಮತ್ತು ಮ್ಯಾನುವಲ್ ಮತ್ತು AMT ಟ್ರಾನ್ಸ್‌ಮಿಷನ್ ಆಯ್ಕೆಗಳನ್ನು ಪಡೆಯುತ್ತವೆ.

2024 Maruti Swift Vxi

 2024ರ Maruti Swift  ಅನ್ನು ನವೀಕರಿಸಿದ ವಿನ್ಯಾಸ, ಮರುವಿನ್ಯಾಸಗೊಳಿಸಲಾದ ಕ್ಯಾಬಿನ್, ಹೊಸ ಎಂಜಿನ್ ಮತ್ತು ಹೊಸ ವೈಶಿಷ್ಟ್ಯಗಳೊಂದಿಗೆ ಪರಿಚಯಿಸಲಾಗಿದೆ. ಹೊಸ-ಜನರೇಶನ್‌ನ ಹ್ಯಾಚ್‌ಬ್ಯಾಕ್ ಅನ್ನು Lxi, Vxi, Vxi (O), Zxi, ಮತ್ತು Zxi+ ಎಂಬ ಐದು ವಿಶಾಲವಾದ ಆವೃತ್ತಿಗಳಲ್ಲಿ ನೀಡಲಾಗುತ್ತಿದೆ. ಮತ್ತು ನೀವು ಅದರ  ಬೇಸ್‌ ಮೊಡೆಲ್‌ಗಿಂತ ಒಂದು ಮೇಲಿನ ಆವೃತ್ತಿಯಾಗಿರುವ Vxi ಅನ್ನು ಖರೀದಿಸಲು ಯೋಜಿಸುತ್ತಿದ್ದರೆ,  ನೀವು ಈ ವಿವರವಾದ ಗ್ಯಾಲರಿಯಲ್ಲಿ ಅದರ ಕುರಿತು ವಿವರವಾಗಿ ತಿಳಿಯಬಹುದು.

ಹೊರಭಾಗ

2024 Maruti Swift Vxi Front

ಮುಂಭಾಗದಿಂದ ಗಮನಿಸುವಾಗ, ವಿಶೇಷತೆಗಳು ಕಡಿಮೆ ಅನಿಸಬಹುದು, ಆದರೆ ಟಾಪ್-ಸ್ಪೆಕ್ ಸ್ವಿಫ್ಟ್‌ಗೆ ಹೋಲಿಸಿದರೆ ಗಮನಾರ್ಹ ಬದಲಾವಣೆಗಳಿವೆ. ಇದು ಎಲ್‌ಇಡಿ ಬದಲಿಗೆ ಹ್ಯಾಲೊಜೆನ್ ಹೆಡ್‌ಲೈಟ್‌ಗಳನ್ನು ಪಡೆಯುತ್ತದೆ ಮತ್ತು ಡಿಆರ್‌ಎಲ್ ಸ್ಟ್ರಿಪ್‌ನಂತೆ ಕಾಣುವುದು ವಾಸ್ತವವಾಗಿ ಕೇವಲ ಕ್ರೋಮ್ ಆಗಿದೆ. ಅಲ್ಲದೆ, ಈ ಆವೃತ್ತಿಯು ಫಾಗ್‌ ಲ್ಯಾಂಪ್‌ಗಳನ್ನು ಪಡೆಯುವುದಿಲ್ಲ.

2024 Maruti Swift Vxi Side

ಬದಿಯಿಂದ ಗಮನಿಸುವಾಗ, ಇದು ಮತ್ತು ಟಾಪ್-ಸ್ಪೆಕ್ ಆವೃತ್ತಿಯ ನಡುವೆ ಇರುವ ಒಂದೇ ಒಂದು ವ್ಯತ್ಯಾಸವೆಂದರೆ ಇದರ ಚಕ್ರಗಳು. Vxi ಆವೃತ್ತಿಯು 14-ಇಂಚಿನ ಸ್ಟೀಲ್‌ ವೀಲ್‌ಗಳನ್ನು ಪಡೆಯುತ್ತದೆ, ಇದನ್ನು ವೀಲ್ ಕವರ್‌ಗಳೊಂದಿಗೆ ನೀಡಲಾಗುತ್ತದೆ.

2024 Maruti Swift Vxi Rear

ಹಿಂಭಾಗದಲ್ಲಿ, ಎಲ್‌ಇಡಿ ಟೈಲ್ ಲೈಟ್‌ಗಳನ್ನು ಒಳಗೊಂಡಂತೆ ವಿನ್ಯಾಸದ ಅಂಶಗಳು ಒಂದೇ ಆಗಿರುತ್ತವೆ, ಆದರೆ ಈ ಆವೃತ್ತಿಯಲ್ಲಿ ಹಿಂಭಾಗದ ವೈಪರ್ ಮತ್ತು ವಾಷರ್ ಲಭ್ಯವಿರುವುದಿಲ್ಲ.

ಇಂಟಿರೀಯರ್‌

2024 Maruti Swift Vxi Cabin

ಸ್ವಿಫ್ಟ್ ಕಪ್ಪು ಡ್ಯಾಶ್‌ಬೋರ್ಡ್‌ನೊಂದಿಗೆ ಸಂಪೂರ್ಣ ಕಪ್ಪು ಕ್ಯಾಬಿನ್ ಅನ್ನು ಪಡೆಯುತ್ತದೆ ಮತ್ತು ಈ ಆವೃತ್ತಿಯು ಡ್ಯಾಶ್‌ಬೋರ್ಡ್ ಮತ್ತು ಡೋರ್ ಪ್ಯಾಡ್‌ಗಳಲ್ಲಿ ಯಾವುದೇ ಕ್ರೋಮ್ ಅಂಶಗಳನ್ನು ಪಡೆಯುವುದಿಲ್ಲ. ಇದು ಸ್ಟೀರಿಂಗ್ ವೀಲ್‌ನಲ್ಲಿನ ಹೊಳಪಿನ ಕಪ್ಪು ಅಂಶಗಳನ್ನು ಸಹ ಪಡೆಯುದಿಲ್ಲ.

2024 Maruti Swift Vxi Rear Seats

ಸೀಟುಗಳು ಅದರ ಟಾಪ್-ಸ್ಪೆಕ್ ಆವೃತ್ತಿಯಂತೆಯೇ ಇರುತ್ತವೆ ಮತ್ತು ಫ್ಯಾಬ್ರಿಕ್ ಅಪ್ಹೋಲ್ಸ್‌ಟೆರಿಯೊಂದಿಗೆ ಬರುತ್ತವೆ. ಟಾಪ್-ಸ್ಪೆಕ್ ವೇರಿಯಂಟ್‌ನಲ್ಲಿ ಸಹ ಹಿಂದಿನ ಸೀಟ್‌ಗಳು ಸೆಂಟರ್ ಆರ್ಮ್‌ರೆಸ್ಟ್ ಅನ್ನು ಪಡೆಯುವುದಿಲ್ಲ.

ತಂತ್ರಜ್ಞಾನ ಮತ್ತು ಸುರಕ್ಷತೆ

2024 Maruti Swift Vxi 7-inch Touchscreen

ತಂತ್ರಜ್ಞಾನಗಳ ವಿಷಯದಲ್ಲಿ, Vxi ಆವೃತ್ತಿಯು 7-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ವೈರ್‌ಲೆಸ್ ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್‌ಪ್ಲೇ, ಸ್ಟೀರಿಂಗ್ ಮೌಂಟೆಡ್ ಕಂಟ್ರೋಲ್‌ಗಳು, 4-ಸ್ಪೀಕರ್ ಸೌಂಡ್ ಸಿಸ್ಟಮ್, ಮ್ಯಾನ್ಯುವಲ್ ಕ್ಲೈಮೇಟ್ ಕಂಟ್ರೋಲ್, ಕೀಲೆಸ್ ಎಂಟ್ರಿ, ಎಲೆಕ್ಟ್ರಿಕಲಿ ಅಡ್ಜಸ್ಟ್ ಮಾಡಬಹುದಾದ ORVM ಗಳು ಮತ್ತು ಹಿಂಭಾಗದ ಡಿಫಾಗರ್ ಅನ್ನು ಪಡೆಯುತ್ತದೆ.

ಇದನ್ನು ಓದಿ: 2024 ಮಾರುತಿ ಸ್ವಿಫ್ಟ್ Vs ಹುಂಡೈ ಗ್ರಾಂಡ್ i10 ನಿಯೋಸ್: ಸಂಪೂರ್ಣ ಹೋಲಿಕೆ

ಇದರ ಸುರಕ್ಷತಾ ಕಿಟ್ 6 ಏರ್‌ಬ್ಯಾಗ್‌ಗಳು, EBD ಜೊತೆಗೆ ABS, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಪ್ರೋಗ್ರಾಂ (ESP), ಹಿಲ್ ಹೋಲ್ಡ್ ಅಸಿಸ್ಟ್, ಎಲ್ಲಾ ಪ್ರಯಾಣಿಕರಿಗೆ 3-ಪಾಯಿಂಟ್ ಸೀಟ್‌ಬೆಲ್ಟ್‌ಗಳು, ಹಿಂಭಾಗದ ಪಾರ್ಕಿಂಗ್ ಸೆನ್ಸಾರ್‌ಗಳು ಮತ್ತು ISOFIX ಚೈಲ್ಡ್ ಸೀಟ್ ಆಂಕರ್‌ಗಳನ್ನು ಒಳಗೊಂಡಿದೆ.

ಇದನ್ನು ಓದಿ: 2024ರ ಹೊಸ Maruti Swiftನ ರೇಸಿಂಗ್‌ ರೋಡ್‌ ಸ್ಟಾರ್‌ ಆಕ್ಸೆಸರಿ ಪ್ಯಾಕ್‌ ಕುರಿತು 7 ಚಿತ್ರಗಳಲ್ಲಿ ವಿವರಣೆ

ಹೈಯರ್-ಸ್ಪೆಕ್ ಮೊಡೆಲ್‌ಗಳು 9-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, 6-ಸ್ಪೀಕರ್ ARKAMYS ಸೌಂಡ್ ಸಿಸ್ಟಮ್, ಕ್ರೂಸ್ ಕಂಟ್ರೋಲ್, ವೈರ್‌ಲೆಸ್ ಫೋನ್ ಚಾರ್ಜರ್, ಹಿಂಭಾಗದ AC ವೆಂಟ್‌ನೊಂದಿಗೆ ಆಟೋಮ್ಯಾಟಿಕ್‌ ಕ್ಲೈಮೇಟ್‌ ಕಂಟ್ರೋಲ್‌ ಮತ್ತು ರಿಯರ್‌ವ್ಯೂ ಕ್ಯಾಮೆರಾದಂತಹ ವೈಶಿಷ್ಟ್ಯಗಳನ್ನು ನೀಡುತ್ತವೆ.

ಪವರ್‌ಟ್ರೇನ್‌

2024 Maruti Swift Vxi Manual Transmission

ಹೊಸ ಸ್ವಿಫ್ಟ್ ಹೊಸ 1.2-ಲೀಟರ್ 3-ಸಿಲಿಂಡರ್ ಪೆಟ್ರೋಲ್ ಎಂಜಿನ್‌ನೊಂದಿಗೆ ಬರುತ್ತದೆ ಅದು 82 PS ಮತ್ತು 112 Nm ವರೆಗೆ ಔಟ್‌ಪುಟ್‌ ಅನ್ನು ಉತ್ಪಾದಿಸುತ್ತದೆ. ಈ ಎಂಜಿನ್‌ ಅನ್ನು 5-ಸ್ಪೀಡ್ ಮ್ಯಾನ್ಯುವಲ್ ಟ್ರಾನ್ಸ್‌ಮಿಷನ್ ಅಥವಾ 5-ಸ್ಪೀಡ್ AMT (ಆಟೋಮ್ಯಾಟಿಕ್‌ ಮ್ಯಾನುವಲ್ ಟ್ರಾನ್ಸ್‌ಮಿಷನ್) ಗೆ ಜೋಡಿಸಲಾಗಿದೆ. Vxi ಆವೃತ್ತಿಯು ಈ ಎರಡೂ ಗೇರ್‌ಬಾಕ್ಸ್‌ ಆಯ್ಕೆಯನ್ನು ಪಡೆಯುತ್ತದೆ. 

ಬೆಲೆ ಮತ್ತು ಪ್ರತಿಸ್ಪರ್ಧಿಗಳು

2024 Maruti Swift Vxi

2024ರ ಮಾರುತಿ ಸ್ವಿಫ್ಟ್ ಬೆಲೆಗಳು 6.49 ಲಕ್ಷ ರೂ.ನಿಂದ 9.65 ಲಕ್ಷ ರೂ.ವರೆಗೆ (ಎಕ್ಸ್ ಶೋರೂಂ) ಇದೆ ಮತ್ತು Vxi ಆವೃತ್ತಿಯ ಬೆಲೆಯು 7.29 ಲಕ್ಷ ರೂ.ನಿಂದ 7.80 ಲಕ್ಷ ರೂ. ವರೆಗೆ (ಎಕ್ಸ್ ಶೋರೂಂ) ಆಗಿರುತ್ತದೆ. ಇದು ಹ್ಯುಂಡೈ ಗ್ರಾಂಡ್ i10 ನಿಯೋಸ್‌ಗೆ ನೇರ ಪ್ರತಿಸ್ಪರ್ಧಿಯಾಗಿದೆ ಮತ್ತು ರೆನಾಲ್ಟ್ ಟ್ರೈಬರ್‌ಗೆ ಪರ್ಯಾಯವಾಗಿ ಪರಿಗಣಿಸಬಹುದು.

ಇನ್ನಷ್ಟು ಓದಿ : ಮಾರುತಿ ಸ್ವಿಫ್ಟ್‌ ಎಎಮ್‌ಟಿ

ಅವರಿಂದ ಪ್ರಕಟಿಸಲಾಗಿದೆ
was this article helpful ?

0 out of 0 found this helpful

Write your Comment ನಲ್ಲಿ ಮಾರುತಿ ಸ್ವಿಫ್ಟ್

Read Full News

Similar cars to compare & consider

ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ

ಕಾರು ಸುದ್ದಿ

  • ಟ್ರೆಂಡಿಂಗ್ ಸುದ್ದಿ
  • ಇತ್ತಿಚ್ಚಿನ ಸುದ್ದಿ

trendingಹ್ಯಾಚ್ಬ್ಯಾಕ್ ಕಾರುಗಳು

  • ಲೇಟೆಸ್ಟ್
  • ಉಪಕಮಿಂಗ್
  • ಪಾಪ್ಯುಲರ್
×
We need your ನಗರ to customize your experience