• English
  • Login / Register

ಪ್ರತಿಯೊಬ್ಬ ಭಾರತೀಯರಿಗೂ ಕಾರುಗಳನ್ನು ಕೈಗೆಟಕುವಂತೆ ಮಾಡಿದ್ದ ನಮ್ಮ ಹೆಮ್ಮೆಯ ಮನಮೋಹನ್ ಸಿಂಗ್..

ಡಿಸೆಂಬರ್ 27, 2024 08:28 pm ರಂದು ajit ಮೂಲಕ ಪ್ರಕಟಿಸಲಾಗಿದೆ

  • 3 Views
  • ಕಾಮೆಂಟ್‌ ಅನ್ನು ಬರೆಯಿರಿ

ಮಾಜಿ ಪ್ರಧಾನಿಯವರ ಆರ್ಥಿಕ ಸುಧಾರಣೆಗಳು ಕೇವಲ ಭಾರತದ ಆರ್ಥಿಕತೆಯನ್ನು ಉಳಿಸಲಿಲ್ಲ, ಅವರು ಮಧ್ಯಮ ವರ್ಗದ ಆಕಾಂಕ್ಷೆಗಳನ್ನು ಮರು ವ್ಯಾಖ್ಯಾನಿಸಿದರು ಮತ್ತು ಲಕ್ಷಾಂತರ ಜನರಿಗೆ ಕಾರು ಮಾಲೀಕತ್ವವನ್ನು ಕನಸನ್ನು ನನಸಾಗುವಂತೆ ಮಾಡಿದರು

Manmohan Singh car revolution

ಭಾರತವು ತನ್ನ ಅತ್ಯಂತ ಲೆಜೆಂಡರಿ ಪ್ರಧಾನ ಮಂತ್ರಿಗಳಲ್ಲಿ ಒಬ್ಬರಾದ ಡಾ. ಮನಮೋಹನ್ ಸಿಂಗ್‌ರನ್ನು ಕಳೆದುಕೊಂಡು ಶೋಕಿಸುತ್ತಿರುವಾಗ, ಅವರ ಆರ್ಥಿಕ ಸುಧಾರಣೆಗಳು, ಪ್ರತಿಷ್ಠೆಯ ಮಾನದಂಡವಾಗಿದ್ದ ಕಾರುಗಳನ್ನು ಲಕ್ಷಾಂತರ ಭಾರತೀಯರ ಆಕಾಂಕ್ಷೆ ಮತ್ತು ಪ್ರಗತಿಯ ಸಂಕೇತವಾಗಿ ಪರಿವರ್ತಿಸಿದ ಸುಧಾರಣೆಗಳು ಇಂದಿನ ಯುವ ಪೀಳಿಗೆಯ ಅನೇಕರಿಗೆ ತಿಳಿದಿರುವುದಿಲ್ಲ. ಇಂದು, ನಾವು ಭಾರತೀಯ ರಸ್ತೆಗಳಲ್ಲಿ ಹಲವಾರು ಆಧುನಿಕ ಕಾರುಗಳನ್ನು ನೋಡುತ್ತಿದ್ದರೆ, ಅದು ಈ ಅಸಾಮಾನ್ಯ ರಾಜಕಾರಣಿಯ ದೂರದೃಷ್ಟಿ ಮತ್ತು ಶಾಂತ ಕ್ರಾಂತಿಯಿಂದ ಸಾಧ್ಯವಾಗಿದೆ. ಆದರೆ ನಿಖರವಾಗಿ ಅವು ಏನು ಮಾಡಿದರು ಮತ್ತು ಅವರ ದೂರದೃಷ್ಟಿಯು ಆಟೋಮೊಬೈಲ್‌ ಕ್ಷೇತ್ರದಲ್ಲಿ ರಾಷ್ಟ್ರದ ಅಭಿವೃದ್ಧಿಯನ್ನು ಹೇಗೆ ಮರುರೂಪಿಸಿತು?

ಆರ್ಥಿಕ ಸುಧಾರಣೆಗೆ ಹಂತಗಳ ಜೋಡಣೆ

Manmohan Singh 1991 Budget

1991ನೇ ವರ್ಷ ಆಗಿತ್ತು. ಭಾರತವು ಆರ್ಥಿಕ ಬಿಕ್ಕಟ್ಟಿನ ಅಂಚಿನಲ್ಲಿ ನಿಂತಿತ್ತು, ದೇಶದ ವಿದೇಶಿ ಬಂಡವಾಳ ಎಷ್ಟು ಪ್ರಮಾಣದಲ್ಲಿ ಖಾಲಿಯಾಗುತ್ತಿವೆ ಎಂದರೆ ನಮ್ಮಲ್ಲಿ ಮುಂದಿನ ವಾರಗಳ ಆಮದುಗಳಿಗೆ ಸಾಕಾಗುವಷ್ಟು ಹಣವಿರಲಿಲ್ಲ. ಆ ಕಷ್ಟದ ಸಮಯದಲ್ಲಿ, ಪ್ರಧಾನ ಮಂತ್ರಿ ನರಸಿಂಹ ರಾವ್ ಅವರ ಸರ್ಕಾರದಲ್ಲಿ ಆಗಿನ ಹಣಕಾಸು ಸಚಿವರಾಗಿದ್ದ ಡಾ. ಸಿಂಗ್ ಅವರು ಕೇಂದ್ರ ಬಜೆಟ್ ಅನ್ನು ಮಂಡಿಸುವ ಸಂದರ್ಭವಾಗಿತ್ತು,  ಈ ಬಜೆಟ್‌ ಉದಾರೀಕರಣದ ಕಡೆಗೆ ಭಾರತದ ದಿಟ್ಟ ಹೆಜ್ಜೆ ಎಂದು ಇತಿಹಾಸದಲ್ಲಿ ದಾಖಲಾಗುತ್ತದೆ. ಅವರ ಸುಧಾರಣೆಗಳು ಭಾರತೀಯ ವಾಹನೋದ್ಯಮದಲ್ಲಿ ಕ್ರಾಂತಿಯನ್ನು ಹುಟ್ಟುಹಾಕಿದವು.

ಆಟೋಮೋಟಿವ್ ಕ್ಷೇತ್ರದಲ್ಲಿ ಬದಲಾವಣೆ

1991 ರ ಮೊದಲು, ಭಾರತದಲ್ಲಿ ಕಾರು ಖರೀದಿಸುವುದು ಶ್ರೀಮಂತರಿಗೆ ಹೆಚ್ಚಾಗಿ ಮೀಸಲಾದ ಐಷಾರಾಮಿಯಾಗಿತ್ತು. ಹಿಂದೂಸ್ತಾನ್ ಅಂಬಾಸಿಡರ್ ಮತ್ತು ಪ್ರೀಮಿಯರ್ ಪದ್ಮಿನಿಯಂತಹ ಬೆರಳೆಣಿಕೆಯ ಮೊಡೆಲ್‌ಗಳೊಂದಿಗೆ ಆಯ್ಕೆಗಳು ಕಡಿಮೆಯಿದ್ದವು, ಅವುಗಳು ಹಳೆಯದಾದ ಮತ್ತು ದುಬಾರಿಯಾಗಿದ್ದವು. ಇದಲ್ಲದೆ, ಮಾರುತಿ 800 ಗಾಗಿ ದೀರ್ಘಾವಧಿಯ ಕಾಯುವ ಅವಧಿಯು ವಿಷಯಗಳಿಗೆ ಸಹಾಯ ಮಾಡಲಿಲ್ಲ, ಇದು ಅತ್ಯಂತ ಉತ್ಸಾಹಿ ಕಾರು ಖರೀದಿದಾರರ ತಾಳ್ಮೆಯನ್ನು ಪರೀಕ್ಷಿಸುತ್ತದೆ. ತದನಂತರ ಸಿಂಗ್ ಅವರ ಆರ್ಥಿಕ ಸುಧಾರಣೆಗಳು ಬಂದವು.

"ಯಾರ ಸಮಯ ಬಂದಿರುತ್ತೋ ಅವರ ಕಲ್ಪನೆಯನ್ನು ಭೂಮಿಯ ಮೇಲಿನ ಯಾವುದೇ ಶಕ್ತಿಯಿಂದಲೂ ತಡೆಯಲು ಸಾಧ್ಯವಿಲ್ಲ" ಎಂದು ಸಿಂಗ್ ಸಂಸತ್ತಿನಲ್ಲಿ ಹೆಮ್ಮೆಯಿಂದ ಘೋಷಿಸಿದರು, ಈ ಮೂಲಕ ವಿದೇಶಿ ಹೂಡಿಕೆದಾರರಿಗೆ ಭಾರತದ ಆರ್ಥಿಕತೆಯನ್ನು ತೆರೆಯುವ ಯೋಜನೆಯನ್ನು ಅನಾವರಣಗೊಳಿಸಿದರು. ಆಟೋ ಉದ್ಯಮಕ್ಕೆ, ಇದು ನಿರ್ಣಾಯಕ ಕ್ಷಣವಾಗಿತ್ತು. ಆಮದು ಸುಂಕಗಳನ್ನು ಕಡಿತಗೊಳಿಸುವ ಮೂಲಕ, ಅಬಕಾರಿ ಸುಂಕಗಳನ್ನು ಕಡಿಮೆ ಮಾಡುವ ಮೂಲಕ ಮತ್ತು 100 ಪ್ರತಿಶತ ವಿದೇಶಿ ನೇರ ಹೂಡಿಕೆಯನ್ನು (ಎಫ್‌ಡಿಐ) ಸ್ವಾಗತಿಸುವ ಮೂಲಕ ಸಿಂಗ್, ಹ್ಯುಂಡೈ, ಹೋಂಡಾ ಮತ್ತು ಫೋರ್ಡ್‌ನಂತಹ ಜಾಗತಿಕ ದೈತ್ಯರ ಪ್ರವೇಶಕ್ಕೆ ಭಾರತದ ಬಾಗಿಲು ತೆರೆದರು. ಮುಂದಿನ ಒಂದು ದಶಕದಲ್ಲಿ, ಭಾರತೀಯ ನಗರಗಳ ರಸ್ತೆಗಳು ಹ್ಯುಂಡೈ ಸ್ಯಾಂಟ್ರೋ, ಹೋಂಡಾ ಸಿಟಿ ಮತ್ತು ಡೇವೂ ಮಾಟಿಜ್ ಕಾರುಗಳಿಂದ ಝೇಂಕರಿಸಲು ಪ್ರಾರಂಭಿಸಿದವು, ಇದು ಒಂದು ರೀತಿಯಲ್ಲಿ ಟಾಟಾ ಇಂಡಿಕಾ ಮತ್ತು ಮಹೀಂದ್ರಾ ಸ್ಕಾರ್ಪಿಯೊದಂತಹ ಕಾರ್‌ಗಳನ್ನು ರಸ್ತೆಗೆ ಪರಿಚಯಿಸಲು ಭಾರತೀಯ ಕಾರು ತಯಾರಕರನ್ನು ಒತ್ತಾಯಿಸಿತು. ವಾಸ್ತವವಾಗಿ, ಸ್ಯಾಂಟ್ರೋ, 1998 ರಲ್ಲಿ ಬಿಡುಗಡೆಗೊಂಡ ಕೇವಲ ಎರಡು ವರ್ಷಗಳಲ್ಲಿ 1 ಲಕ್ಷಕ್ಕೂ ಹೆಚ್ಚು ಕಾರುಗಳನ್ನು ಮಾರಾಟ ಮಾಡುವ ಮೂಲಕ ಎಲ್ಲರ ಮನೆಮಾತಾಗಿತ್ತು. ಇದು ಸಿಂಗ್ ಅವರ ಸುಧಾರಣೆಗಳ ನಂತರದ ಊಹಿಸಲಾಗದ ಸಾಧನೆಯಾಗಿದೆ. 1980ರ ದಶಕದ ಅಂತ್ಯದಲ್ಲಿ ಕೇವಲ 3 ಲಕ್ಷಕ್ಕೆ ಹೋಲಿಸಿದರೆ, 2005ರ ಹೊತ್ತಿಗೆ, ಭಾರತವು ವಾರ್ಷಿಕವಾಗಿ 12 ಲಕ್ಷ ಕಾರುಗಳನ್ನು ಉತ್ಪಾದಿಸುತ್ತಿತ್ತು.

ಸಿಂಗ್ ಅವರ ಅಧಿಕಾರಾವಧಿಯಲ್ಲಿ, ಭಾರತೀಯ ವಾಹನ ಉದ್ಯಮವು 2002 ಮತ್ತು 2012 ರ ನಡುವೆ 10.5% ರಷ್ಟು ಸಂಯುಕ್ತ ವಾರ್ಷಿಕ ಬೆಳವಣಿಗೆ ದರದಲ್ಲಿ (CAGR) ಬೆಳೆಯಿತು. ರಫ್ತು ಕೂಡ ದೊಡ್ಡ ಜಿಗಿತವನ್ನು ಕಂಡಿತು, ಭಾರತವು ಸಣ್ಣ ಕಾರು ಉತ್ಪಾದನೆಯ ಕೇಂದ್ರವಾಯಿತು. 2010 ರ ವೇಳೆಗೆ, ಭಾರತವು ವಾರ್ಷಿಕವಾಗಿ ಸುಮಾರು 4.50 ಲಕ್ಷ ಕಾರುಗಳನ್ನು ರಫ್ತು ಮಾಡಿತು, ಜಾಗತಿಕ ಆಟೋಮೋಟಿವ್ ಕ್ಷೇತ್ರದಲ್ಲಿ ತನ್ನ ಭದ್ರವಾದ ಸ್ಥಾನವನ್ನು ಮುದ್ರೆಯೊತ್ತಿತ್ತು. 

ಮಧ್ಯಮ ವರ್ಗದ ಕನಸುಗಳು ನನಸಾಯಿತು

Manmohan Singh Car

ಸಿಂಗ್ ಅವರ ನೀತಿಗಳು ಕೇವಲ ತಯಾರಕರಿಗೆ ಲಾಭವನ್ನು ನೀಡಲಿಲ್ಲ; ಅವರು ಲಕ್ಷಾಂತರ ಭಾರತೀಯರ ಜೀವನವನ್ನು ಬದಲಾಯಿಸಿತು. ಮಧ್ಯಮ ವರ್ಗದವರಿಗೆ ಕಾರು ಹೊಂದುವುದು ದೂರದ ಕನಸಾಗಿರಲಿಲ್ಲ. 2000ರಲ್ಲಿ 15 ನೇ ಸ್ಥಾನದಲ್ಲಿದ್ದ ಭಾರತವು, 2010ರ ಹೊತ್ತಿಗೆ ಏಳನೇ-ಅತಿದೊಡ್ಡ ಕಾರು ಮಾರುಕಟ್ಟೆಯಾಗಿದೆ. ಕಾರುಗಳ ಮಾರಾಟವು ಸುಮಾರು 19 ಲಕ್ಷ ಯುನಿಟ್‌ಗಳಿಗೆ ಏರಿತ್ತು ಮತ್ತು ದ್ವಿಚಕ್ರ ವಾಹನಗಳ ಮಾರಾಟವು ಮೊದಲ ಬಾರಿಗೆ 1 ಕೋಟಿ ಯುನಿಟ್‌ಗಳನ್ನು ದಾಟಿತ್ತು. ಒಂದು ಕಾಲದಲ್ಲಿ ಮೂರು ಅಥವಾ ನಾಲ್ಕು ಜನರೊಂದಿಗೆ ಅಸುರಕ್ಷಿತವಾಗಿ ಸ್ಕೂಟರ್‌ಗಳಲ್ಲಿ ಪ್ರಯಾಣಿಸುತ್ತಿದ್ದ ಕುಟುಂಬಗಳು ಈಗ ಮಾರುತಿ ಆಲ್ಟೊ, ಸ್ವಿಫ್ಟ್ ಮತ್ತು ಹ್ಯುಂಡೈ ಐ20 ನಂತಹ ಕಾರುಗಳನ್ನು ಹೊಂದಿದ್ದಾರೆ ಮತ್ತು ಹೆಚ್ಚಿನ ಖರೀದಿ ಸಾಮರ್ಥ್ಯ ಹೊಂದಿರುವವರು ಮರ್ಸಿಡಿಸ್, ಬಿಎಂಡಬ್ಲ್ಯು ಮತ್ತು ರೋಲ್ಸ್ ರಾಯ್ಸ್‌ನಂತಹ ಐಷಾರಾಮಿ ಕಾರುಗಳನ್ನು ಖರೀದಿಸಿದರು.

ಯಶಸ್ವಿಯಾಗದ ಯೋಜನೆಗಳು

ಆದರೆ ಸಿಂಗ್ ಅವರ ಎಲ್ಲಾ ನೀತಿಗಳು ಯಶಸ್ವಿಯಾಗಲಿಲ್ಲ. ಉದಾಹರಣೆಗೆ ಡೀಸೆಲ್ ಸಬ್ಸಿಡಿಯನ್ನು ತೆಗೆದುಕೊಳ್ಳಿ. ರೈತರು ಮತ್ತು ಟ್ರಾನ್ಸ್‌ಪೋರ್ಟ್‌ ಉದ್ಯಮದವರಿಗೆ ಇಂಧನವನ್ನು ಕೈಗೆಟುಕುವಂತೆ ಮಾಡಲು ವಿನ್ಯಾಸಗೊಳಿಸಲಾಗಿದೆ, ಇದು ಕಡಿಮೆ ಚಾಲನೆಯ ವೆಚ್ಚದ ಕಾರಣದಿಂದಾಗಿ ನಗರ ಗ್ರಾಹಕರಲ್ಲಿ ಡೀಸೆಲ್ ಕಾರುಗಳನ್ನು ಜನಪ್ರಿಯ ಆಯ್ಕೆಯನ್ನಾಗಿ ಮಾಡಿತ್ತು. ಆದರೆ, ಇದಕ್ಕೆ ದೊದ್ದ ಬೆಲೆಯನ್ನು ತೆರಬೇಕಾಯಿತು ಮತ್ತು ಅವರ ಸರ್ಕಾರವು ದೆಹಲಿಯಂತಹ ನಗರಗಳಲ್ಲಿ ವಾಯುಮಾಲಿನ್ಯ ಹೆಚ್ಚಳಕ್ಕೆ ಕಾರಣವಾಯಿತು ಎಂದು ಆರೋಪವನ್ನು ಎದುರಿಸಬೇಕಾಯಿತು. ಅವರು ತಮ್ಮ ಅಧಿಕಾರಾವಧಿಯಲ್ಲಿ ಡೀಸೆಲ್ ಬೆಲೆಗಳನ್ನು ಹೆಚ್ಚಿಸುವ ಮೂಲಕ ಈ ಸಮಸ್ಯೆಯನ್ನು ಪರಿಹರಿಸಲು ಪ್ರಯತ್ನಿಸಿದರೂ, ಆ ಕ್ರಮವೂ ಟೀಕೆಗೆ ಗುರಿಯಾಯಿತು.

ಭವಿಷ್ಯಕ್ಕಾಗಿ ರಸ್ತೆಗಳ ನಿರ್ಮಾಣ

Manmohan Singh Golden Quadrilateral

ಮೂಲಸೌಕರ್ಯ ಅಭಿವೃದ್ಧಿ, ಆದಾಗ್ಯೂ, ಸಿಂಗ್‌ಗೆ ಮತ್ತೊಂದು ಕೇಂದ್ರೀಕೃತ ಕ್ಷೇತ್ರವಾಗಿದೆ ಮತ್ತು ಅವರು ಒಮ್ಮೆ ಕ್ಯಾಬಿನೆಟ್ ಸಭೆಯಲ್ಲಿ "ಹೆದ್ದಾರಿಗಳು ಆರ್ಥಿಕತೆಯ ಅಪಧಮನಿಗಳು" ಎಂದು ಹೇಳಿದ್ದರು. ಸುವರ್ಣ ಚತುಷ್ಪಥ ಮತ್ತು ಇತರ ಆಧುನಿಕ ಹೆದ್ದಾರಿ ಯೋಜನೆಗಳಿಗೆ ಸಂಬಂಧಿಸಿದಂತೆ ಹಿಂದಿನ ವಾಜಪೇಯಿ ಸರ್ಕಾರ ಪ್ರಾರಂಭಿಸಿದ ಕೆಲಸವನ್ನು ಅವರ ಸರ್ಕಾರ ಪೂರ್ಣಗೊಳಿಸಿತ್ತು. 2014 ರ ಹೊತ್ತಿಗೆ, ಭಾರತದ ಹೆದ್ದಾರಿ ನೆಟ್‌ವರ್ಕ್ ಗಮನಾರ್ಹವಾಗಿ ಬೆಳೆದಿತ್ತು, ಸಂಪರ್ಕವನ್ನು ಹೆಚ್ಚಿಸಿದವು ಮತ್ತು ಸರಾಸರಿ ಭಾರತೀಯ ಕುಟುಂಬಕ್ಕೆ ರಸ್ತೆ ಪ್ರವಾಸಗಳನ್ನು ಕಾರ್ಯಸಾಧ್ಯ, ಹಾಗೆಯೇ ಆನಂದಿಸಬಹುದಾದ ಅನುಭವವನ್ನಾಗಿ ಮಾಡಿದೆ.

ಬಿಟ್ಟುಹೋದ ಹೆಮ್ಮೆಯ ಪರಂಪರೆ

Manmohan Singh Maruti 800

ಅವರ ಅತ್ಯುನ್ನತ ಸಾಧನೆಗಳ ಹೊರತಾಗಿಯೂ, ಡಾ. ಸಿಂಗ್ ಅವರು ಗಮನಾರ್ಹವಾದ ವಿನಮ್ರ ವ್ಯಕ್ತಿಯಾಗಿದ್ದರು. ಪ್ರಧಾನ ಮಂತ್ರಿಯಾಗಿದ್ದರೂ ಸಹ ಅವರ ವೈಯಕ್ತಿಕ ಕಾರು ಸಾಧಾರಣ ಮಾರುತಿ 800 ಆಗಿತ್ತು. ಹಾಗೆಯೇ, ಅವರ ಅಧಿಕೃತ ಕಾರು, ಶಸ್ತ್ರಸಜ್ಜಿತ ಬಿಎಂಡಬ್ಲ್ಯು 7 ಸಿರೀಸ್ ಆಗಿತ್ತು, ಮಾಜಿ ಪ್ರಧಾನಿ ವಾಜಪೇಯಿ ಅವರು ಬಳಸುತ್ತಿದ್ದ ಅದೇ ಕಾರು ಎಂಬ ಮಾಹಿತಿಯಿದೆ. 

ಅಕ್ಟೋಬರ್‌ನಲ್ಲಿ ಕೈಗಾರಿಕೋದ್ಯಮಿ ರತನ್ ಟಾಟಾ ಅವರ ನಿಧನದ ಸಮಯದಲ್ಲಿ, ಡಾ. ಸಿಂಗ್ ತಮ್ಮ ನಿಕಟ ವೃತ್ತಿಪರ ಸಂಬಂಧವನ್ನು ನೆನಪಿಸುತ್ತಾ, "ಅವರು ಅಧಿಕಾರದಲ್ಲಿರುವ ಪುರುಷರೊಂದಿಗೆ ಸತ್ಯವನ್ನು ಮಾತನಾಡಲು ಧೈರ್ಯವನ್ನು ಹೊಂದಿದ್ದರು" ಎಂದರು. 

ಭಾರತೀಯ ವಾಹನೋದ್ಯಮವು ಎಲೆಕ್ಟ್ರಿಕ್ ಮತ್ತು ಪ್ರಾಯಶಃ ಆಟೋನೊಮಸ್‌ ಭವಿಷ್ಯದತ್ತ ಸಾಗುತ್ತಿರುವಾಗ, ಡಾ. ಮನಮೋಹನ್ ಸಿಂಗ್ ಅವರ ಸುಧಾರಣೆಗಳಿಂದ ಸುಸಜ್ಜಿತವಾದ ರಸ್ತೆಗಳಿಂದಾಗಿ ಅದು ಇನ್ನಷ್ಟು ಸುಲಭವಾಗಲಿದೆ.ಅವರನ್ನು ಸ್ಮರಿಸುವ ಮೂಲಕ, ನಾವು ಸ್ಥಿತಿಸ್ಥಾಪಕತ್ವ, ಸುಧಾರಣೆ ಮತ್ತು ಶಾಂತ ಕ್ರಾಂತಿಯ ಪರಂಪರೆಯನ್ನು ಆಚರಿಸುತ್ತೇವೆ. ಹೆಮ್ಮೆಯ ಸಿಂಗ್ ಸರ್‌ ಅವರಿಗೆ ಭಾವಪೂರ್ಣ ಶ್ರದ್ಧಾಂಜಲಿ. ಪ್ರಗತಿಯ ಎಂಜಿನ್ ಅನ್ನು ದಹಿಸಿ ಅದನ್ನು ಚಾಲನೆಯಲ್ಲಿ ಬಿಟ್ಟಿದ್ದಕ್ಕಾಗಿ ಧನ್ಯವಾದಗಳು.

was this article helpful ?

Write your ಕಾಮೆಂಟ್

ಕಾರು ಸುದ್ದಿ

  • ಟ್ರೆಂಡಿಂಗ್ ಸುದ್ದಿ
  • ಇತ್ತಿಚ್ಚಿನ ಸುದ್ದಿ

trending ಕಾರುಗಳು

  • ಲೇಟೆಸ್ಟ್
  • ಉಪಕಮಿಂಗ್
  • ಪಾಪ್ಯುಲರ್
×
We need your ನಗರ to customize your experience