ಹೊಸ ಮಹೀಂದ್ರ XUV400 EL ಪ್ರೊ ವೇ ರಿಯಂಟ್ ಅನ್ನು 15 ಚಿತ್ರಗಳಲ್ಲಿ ವಿವರಿಸಲಾಗಿದೆ
ಮಹೀಂದ್ರ XUV400 EV ಗಾಗಿ shreyash ಮೂಲಕ ಜನವರಿ 12, 2024 05:17 pm ರಂದು ಪ್ರಕಟಿಸಲಾಗಿದೆ
- 480 Views
- ಕಾಮೆಂಟ್ ಅನ್ನು ಬರೆಯಿರಿ
ಮಹೀಂದ್ರಾ XUV400 EV ಯ ಹೊಸ ಪ್ರೊ ವೇರಿಯಂಟ್ ಗಳು ಈ ಹಿಂದೆ ಲಭ್ಯವಿರುವ ವೇರಿಯಂಟ್ ಗಳಿಗಿಂತ ರೂ.1.5 ಲಕ್ಷದವರೆಗಿನ ಕಡಿಮೆ ಬೆಲೆಯಲ್ಲಿ ಸಿಗಲಿದೆ.
ಮೊದಲಿನ ವೇರಿಯಂಟ್ ಶ್ರೇಣಿಗಳಾದ EC ಮತ್ತು EL ನಲ್ಲಿ ಇನ್ನೂ ಲಭ್ಯವಿರುವ ಮಹೀಂದ್ರಾ XUV400 EV, ಈಗ ಅದರ ಹೆಸರಿನ ಮುಂದೆ 'ಪ್ರೊ' ಪದವನ್ನು ಸೇರಿಸಲಾಗಿದೆ. ಪ್ರಮುಖ ಬದಲಾವಣೆಗಳಲ್ಲಿ ಅಪ್ಡೇಟ್ ಆಗಿರುವ ಡ್ಯಾಶ್ಬೋರ್ಡ್ ಡಿಸೈನ್, ದೊಡ್ಡದಾದ ಟಚ್ಸ್ಕ್ರೀನ್ ಮತ್ತು ಸಂಪೂರ್ಣ ಡಿಜಿಟಲ್ ಡ್ರೈವರ್ಸ್ ಡಿಸ್ಪ್ಲೇ ಅನ್ನು ಪಡೆದಿದೆ. ಈ ಲೇಖನದಲ್ಲಿ, ನಾವು XUV400 EV ಯ ಟಾಪ್-ಸ್ಪೆಕ್ EL ಪ್ರೊ ವೇರಿಯಂಟ್ ಅನ್ನು 15 ಚಿತ್ರಗಳಲ್ಲಿ ವಿವರಿಸಿದ್ದೇವೆ.
ಪ್ರೊ ವೇರಿಯಂಟ್ನ ಪರಿಚಯದೊಂದಿಗೆ ಮಹೀಂದ್ರಾ ತನ್ನ XUV400 EV ಯ ಹೊರಭಾಗಕ್ಕೆ ಯಾವುದೇ ಪ್ರಮುಖ ಡಿಸೈನ್ ಬದಲಾವಣೆಗಳನ್ನು ಮಾಡಿಲ್ಲ. ಇದರ ಫೆಸಿಯದಲ್ಲಿ ಈಗಲೂ ಕೂಡ ಕ್ಲೋಸ್ಡ್-ಆಫ್ ಗ್ರಿಲ್ನಲ್ಲಿ ಕಾಪರ್ ಇನ್ಸರ್ಟ್ ಅನ್ನು ಹೊಂದಿದೆ ಮತ್ತು LED DRL ಗಳೊಂದಿಗೆ ಪ್ರೊಜೆಕ್ಟರ್ ಹೆಡ್ಲೈಟ್ಗಳನ್ನು ಪಡೆದಿದೆ.
ಪ್ರೊಫೈಲ್ನಲ್ಲಿ ನೋಡಿದರೆ, ಈ ಹೊಸ ವೇರಿಯಂಟ್ ನಲ್ಲಿ ಯಾವುದೇ ಗಮನಾರ್ಹ ಬದಲಾವಣೆಗಳನ್ನು ಮಾಡಲಾಗಿಲ್ಲ. ಹಿಂಭಾಗದಲ್ಲಿ, ಇದು ಮೊದಲಿನಂತೆಯೇ ಇದ್ದ LED ಟೈಲ್ ಲ್ಯಾಂಪ್ಗಳನ್ನು ಹೊಂದಿದೆ. ಹೊರಭಾಗದ ಅಪ್ಡೇಟ್ ಗಳಲ್ಲಿ ಶಾರ್ಕ್-ಫಿನ್ ಆಂಟೆನಾ ಮತ್ತು ಟೈಲ್ಗೇಟ್ನಲ್ಲಿ EV ಬ್ಯಾಡ್ಜ್ ಮಾತ್ರ ಒಳಗೊಂಡಿದೆ.
ಇದನ್ನು ಕೂಡ ಓದಿ: ಟಾಟಾ ಪಂಚ್ EV ಇಂಟೀರಿಯರ್ ಅನ್ನು ಬಹಿರಂಗಗೊಳಿಸಲಾಗಿದೆ, ಡ್ಯುಯಲ್ 10.25-ಇಂಚಿನ ಡಿಸ್ಪ್ಲೇಗಳು ಮತ್ತು ಅಪ್ಡೇಟ್ ಆಗಿರುವ ಸೆಂಟರ್ ಕನ್ಸೋಲ್ ಅನ್ನು ಪಡೆದಿದೆ
XUV400 EV EL ಪ್ರೊ ವೇರಿಯಂಟ್ ಈಗ ದೊಡ್ಡದಾದ 10.25-ಇಂಚಿನ ಟಚ್ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಮ್ ಅನ್ನು ಪಡೆದಿದೆ. ಕ್ಲೈಮೇಟ್ ಕಂಟ್ರೋಲ್ ಪ್ಯಾನೆಲ್ ಅನ್ನು ಅಪ್ಡೇಟ್ ಮಾಡಲಾಗಿದೆ ಮತ್ತು ಈಗ ಡ್ಯುಯಲ್-ಝೋನ್ ಫ್ಯಾಂಕ್ಷನಾಲಿಟಿಯನ್ನು ಹೊಂದಿದೆ.
ಇದನ್ನು ಕೂಡ ಓದಿ: ಮಾರುತಿ eVX ಎಲೆಕ್ಟ್ರಿಕ್ SUV 2024 ರ ಅಂತ್ಯದ ವೇಳೆಗೆ ಮಾರುಕಟ್ಟೆಗೆ ಬರಲಿದೆ ಎಂದು ದೃಢಪಡಿಸಲಾಗಿದೆ
ಕ್ಲೈಮೇಟ್ ಕಂಟ್ರೋಲ್ ಪ್ಯಾನೆಲ್ ಕೆಳಗೆ ಎರಡು ಚಾರ್ಜಿಂಗ್ ಪೋರ್ಟ್ಗಳು ಮತ್ತು ವೈರ್ಲೆಸ್ ಸ್ಮಾರ್ಟ್ಫೋನ್ ಚಾರ್ಜರ್ ಇವೆ. ಡ್ರೈವ್ ಮೋಡ್ ಸೆಲೆಕ್ಟರ್ ಲಿವರ್ ಮೊದಲಿನಂತೆಯೇ ಇರುತ್ತದೆ ಮತ್ತು ಅದರ ಹಿಂದೆ ಎರಡು ಕಪ್ ಹೋಲ್ಡರ್ಗಳನ್ನು ಸಹ ಒದಗಿಸಲಾಗಿದೆ.
ಮತ್ತೊಂದು ಪ್ರಮುಖ ಬದಲಾವಣೆಯೆಂದರೆ ಮಹೀಂದ್ರಾ XUV700 ನಿಂದ ಪಡೆಯಲಾಗಿರುವ ಹೊಸ 10.25-ಇಂಚಿನ ಡಿಜಿಟಲ್ ಡ್ರೈವರ್ ಡಿಸ್ಪ್ಲೇ. ಆಂಡ್ರಾಯ್ಡ್ ಆಟೋ ಅಥವಾ ಆಪಲ್ ಕಾರ್ ಪ್ಲೇ ಮೂಲಕ ಮ್ಯಾಪ್ ಗಳ ಫೀಡ್ ಅನ್ನು ಪ್ಲೇ ಮಾಡಲು ಈ ಡ್ರೈವರ್ನ ಡಿಸ್ಪ್ಲೇಯನ್ನು ಇನ್ಫೋಟೈನ್ಮೆಂಟ್ ಸಿಸ್ಟಮ್ನೊಂದಿಗೆ ಸಿಂಕ್ ಮಾಡಬಹುದು.
ಅಪ್ಹೋಲಿಸ್ಟ್ರೀಯನ್ನು ಆಲ್ ಬ್ಲಾಕ್ ಥೀಮ್ನಿಂದ ಬ್ಲಾಕ್ ಮತ್ತು ಬೀಜ್ ಥೀಮ್ಗೆ ರಿವೈಸ್ ಮಾಡಲಾಗಿದೆ. ಸನ್ರೂಫ್ ಮತ್ತು ಎತ್ತರ ಅಡ್ಜಸ್ಟ್ ಮಾಡಬಹುದಾದ ಡ್ರೈವರ್ ಸೀಟ್ನಂತಹ ಸೌಕರ್ಯಗಳನ್ನು ಉಳಿಸಿಕೊಳ್ಳಲಾಗಿದೆ.
ಹಿಂಬದಿಯ ಸೀಟಿನಲ್ಲಿ ಕುಳಿತಿರುವವರ ಸುಖಕರ ಅನುಭವಕ್ಕಾಗಿ ಈಗಾಗಲೇ ಇರುವ ಅಡ್ಜಸ್ಟ್ ಮಾಡಬಹುದಾದ ಹೆಡ್ರೆಸ್ಟ್ಗಳ ಜೊತೆಗೆ ಎಸಿ ವೆಂಟ್ಗಳನ್ನು ಕೂಡ ನೀಡಲಾಗಿದೆ.
ಹಿಂಬದಿಯ ಸೀಟನ್ನು ಬಳಸಿದಾಗ, XUV400 EV 378 ಲೀಟರ್ಗಳ ಬೂಟ್ ಜಾಗವನ್ನು ನೀಡುತ್ತದೆ. ಹೆಚ್ಚುವರಿ ಸ್ಥಳವನ್ನು ನೀಡಲು ಸೀಟ್ ಗಳನ್ನು 60:40 ಅನುಪಾತದಲ್ಲಿ ಸ್ಪ್ಲಿಟ್ ಮಾಡಬಹುದು.
XUV400 EV EL ಪ್ರೊ ವೇರಿಯಂಟ್ ಎರಡು ಬ್ಯಾಟರಿ ಪ್ಯಾಕ್ ಆಯ್ಕೆಗಳನ್ನು ನೀಡುತ್ತದೆ: 34.5 kWh ಮತ್ತು 39.4 kWh, ಕ್ರಮವಾಗಿ 375 ಕಿಮೀ ಮತ್ತು 456 ಕಿಮೀ ವ್ಯಾಪ್ತಿಯನ್ನು ಹೊಂದಿದೆ. ಈ ಬ್ಯಾಟರಿಗಳನ್ನು 150 PS ಮತ್ತು 310 Nm ಉತ್ಪಾದಿಸುವ ಏಕೈಕ ಎಲೆಕ್ಟ್ರಿಕ್ ಮೋಟರ್ನೊಂದಿಗೆ ಜೋಡಿಸಲಾಗಿದೆ.
ಬೆಲೆಯ ಶ್ರೇಣಿ ಮತ್ತು ಪ್ರತಿಸ್ಪರ್ಧಿಗಳು
ಮಹೀಂದ್ರಾ XUV400 EV ಬೆಲೆಯು ಈಗ ರೂ 15.49 ಲಕ್ಷದಿಂದ ಶುರುವಾಗಿ ರೂ 17.49 ಲಕ್ಷದವರೆಗೆ (ಎಕ್ಸ್ ಶೋರೂಂ ಭಾರತದಾದ್ಯಂತ) ಇದೆ. ಇದು MG ZS EV ಮತ್ತು ಹ್ಯುಂಡೈ ಕೋನಾ ಎಲೆಕ್ಟ್ರಿಕ್ಗೆ ಬದಲಾಗಿ ಕೈಗೆಟುಕುವ ಬೆಲೆಯಲ್ಲಿ ಸಿಗುವ ಮೂಲಕ ಟಾಟಾ ನೆಕ್ಸಾನ್ EV ಗೆ ಪ್ರತಿಸ್ಪರ್ಧಿಯಾಗಿ ಮುಂದುವರಿಯುತ್ತದೆ.
ಇನ್ನಷ್ಟು ಓದಿ: ಮಹೀಂದ್ರ XUV400
0 out of 0 found this helpful