• login / register
 • ಹುಂಡೈ ಕ್ರೆಟಾ front left side image
1/1
 • Hyundai Creta
  + 15ಚಿತ್ರಗಳು
 • Hyundai Creta
  + 9ಬಣ್ಣಗಳು
 • Hyundai Creta

ಹುಂಡೈ ಕ್ರೆಟಾ

ಕಾರು ಬದಲಾಯಿಸಿ
468 ವಿರ್ಮಶೆಗಳುಈ ಕಾರಿಗೆ ಅಂಕಗಳನ್ನು ನೀಡಿ
Rs.9.99 - 17.2 ಲಕ್ಷ*
*ಎಕ್ಸ್ ಶೋ ರೂಂ ಬೆಲೆಯು ನವ ದೆಹಲಿ
ವೀಕ್ಷಿಸಿ <stringdata> ಕೊಡುಗೆ
ಈ ತಿಂಗಳ ಹಬ್ಬದ ಆಫರ್ ಅನ್ನು ಕಳೆದುಕೊಳ್ಳಬೇಡಿ

ಹುಂಡೈ ಕ್ರೆಟಾ ನ ಪ್ರಮುಖ ಸ್ಪೆಕ್ಸ್

ಮೈಲೇಜ್ (ಇಲ್ಲಿಯವರೆಗೆ)21.4 ಕೆಎಂಪಿಎಲ್
ಇಂಜಿನ್ (ಇಲ್ಲಿಯವರೆಗೆ)1497 cc
ಬಿಹೆಚ್ ಪಿ138.0
ಟ್ರಾನ್ಸ್ಮಿಷನ್ಹಸ್ತಚಾಲಿತ/ಸ್ವಯಂಚಾಲಿತ
ಸೀಟುಗಳು5
ಸೇವೆಯ ಶುಲ್ಕRs.3,571/yr

ಕ್ರೆಟಾ ಇತ್ತೀಚಿನ ಅಪ್ಡೇಟ್

ಹೊಸ ಅಪ್ ಡೇಟ್: ಹ್ಯುಂಡೈ ಕ್ರೆಟಾದ ಹೊಸ ಟಾಪ್-ಸ್ಪೆಕ್ ವೇರಿಯೆಂಟ್ ಬಿಡುಗಡೆ ಮಾಡಿದೆ. ಎಸ್ಎಕ್(ಒ) ಎಕ್ಸಿಕ್ಯೂಟಿವ್ ಎಂದು ಕರೆಯಲ್ಪಡುವ ಇದರ ಬೆಲೆ ರೂ.14.14 ಲಕ್ಷ ಪೆಟ್ರೋಲ್  ಹಾಗೂ ರೂ.15.63 ಲಕ್ಷ ಡೀಸೆಲ್ (ಎಕ್ಸ್-ಶೋರೂಂ ದೆಹಲಿ) ಮಾದರಿಗಳಿಗೆ ಹೊಂದಿದೆ. ಈ ಕುರಿತು ಹೆಚ್ಚು ತಿಳಿಯಲು ಇಲ್ಲಿ ನೋಡಿ. 

ಹ್ಯುಂಡೈ ಕ್ರೆಟಾ ಎಂಜಿನ್: ಹ್ಯುಂಡೈ ಕ್ರೆಟಾ ಮೂರು ಎಂಜಿನ್ ಆಯ್ಕೆಗಳಲ್ಲಿ ಪಡೆಯಬಹುದು: 1.6-ಲೀಟರ್ ಪೆಟ್ರೋಲ್ ಯೂನಿಟ್(123ಪಿಎಸ್/151ಎನ್ಎಂ), 1.4-ಲೀಟರ್ ಡೀಸೆಲ್ ಯೂನಿಟ್(90ಪಿಎಸ್/220ಎನ್ಎಂ) ಮತ್ತು 1.6-ಲೀಟರ್ ಡೀಸೆಲ್ ಯೂನಿಟ್(128ಪಿಎಸ್/260ಎನ್ಎಂ). ಎಲ್ಲ ಎಂಜಿನ್ ಗಳೂ 6-ಸ್ಪೀಡ್ ಮ್ಯಾನ್ಯುಯಲ್ ಗೇರ್ ಬಾಕ್ಸ್ ನೊಂದಿಗೆ ಲಭ್ಯವಿವೆ ಮತ್ತು ಡೀಸೆಲ್ ಯೂನಿಟ್ ಗಳು 6-ಸ್ಪೀಡ್ ಆಟೊಮ್ಯಾಟಿಕ್ ಟ್ರಾನ್ಸ್ ಮಿಷನ್ ನೊಂದಿಗೆ ಇವೆ. 

ಹ್ಯುಂಡೈ ಕ್ರೆಟಾ ವಿಶೇಷತೆಗಳು: ಕ್ರೆಟಾದ ಟಾಪ್-ಸ್ಪೆಕ್ ಎಸ್ಎಕ್ಸ್(ಒ) ವೇರಿಯೆಂಟ್ ಸನ್ ರೂಫ್ ಪಡೆದಿದೆ, 7-ಇಂಚು ಟಚ್ ಸ್ಕ್ರೀನ್ ಇನ್ಫೊಟೈನ್ ಮೆಂಟ್ ಸಿಸ್ಟಂ ಆಪಲ್ ಕಾರ್ ಪ್ಲೇ ಮತ್ತು ಆಂಡ್ರಾಯಿಡ್ ಆಟೊದೊಂದಿಗೆ, ವೈರ್ ಲೆಸ್ ಮೊಬೈಲ್ ಚಾರ್ಜಿಂಗ್ ಡಾಕ್, 6-ವೇ ಎಲೆಕ್ಟ್ರಿಕಲಿ ಅಡ್ಜಸ್ಟಬಲ್ ಡ್ರೈವರ್ಸ್ ಸೀಟ್, ವೆಂಟಿಲೇಟೆಡ್ ಫ್ರಂಟ್ ಸೀಟ್ಸ್, ಪುಷ್-ಬಟನ್ ಸ್ಟಾರ್ಟ್, ಸ್ಮಾರ್ಟ್ ಕೀ ಬ್ಯಾಂಡ್, ಸೆನ್ಸರ್ ಗಳೊಂದಿಗೆ ರಿವರ್ಸ್ ಪಾರ್ಕಿಂಗ್ ಕ್ಯಾಮರಾ, ಕ್ರೂಸ್ ಕಂಟ್ರೋಲ್, ಆಟೊ-ಡಿಮ್ಮಿಂಗ್ ಇನ್ಸೈಡ್ ರಿಯರ್ ವ್ಯೂ ಮಿರರ್(ಐ.ಆರ್.ವಿ.ಎಂ) ಮತ್ತು ರಿಯರ್ ಎಸಿ ವೆಂಟ್ ಗಳೊದಿಗೆ ಆಟೊ ಕ್ಲೈಮೇಟ್ ಕಂಟ್ರೋಲ್ ಹೊಂದಿದೆ. 

ಸುರಕ್ಷತೆಗೆ ಕ್ರೆಟಾ ಡ್ಯುಯಲ್ ಫ್ರಂಟ್ ಏರ್ ಬ್ಯಾಗ್ ಗಳು ಮತ್ತು ಇಬಿಡಿಯೊಂದಿಗೆ ಎಬಿಎಸ್ ಎಲ್ಲ ವೇರಿಯೆಂಟ್ ಗಳಿಗೂ ಸ್ಟಾಂಡರ್ಡ್ ಆಗಿರುತ್ತದೆ. ಟಾಪ್-ಸ್ಪೆಕ್ ವೇರಿಯೆಂಟ್ ನಲ್ಲಿ ಕ್ರೆಟಾ ಬದಿಯ ಹಾಗೂ ಕರ್ಟನ್ ಏರ್ ಬ್ಯಾಗ್ಸ್ ಹೊಂದಿದೆ, ವೆಹಿಕಲ್ ಸ್ಟೆಬಿಲಿಟಿ ಕಂಟ್ರೋಲ್, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್ ಮತ್ತು ಹಿಲ್ ಲಾಂಚ್ ಅಸಿಸ್ಟ್ ಹೊಂದಿದೆ. ಐಸೊಫಿಕ್ಸ್ ಚೈಲ್ಡ್ ಸೀಟ್ ಆಂಕರ್ ಗಳು ಎಸ್ಎಕ್ಸ್ ಎಟಿ ಟ್ರಿಮ್ ಗೆ ಮಾತ್ರ ಸೀಮಿತವಾಗಿವೆ. 

ಸ್ಪರ್ಧಿಗಳು: ಕ್ರೆಟಾಗೆ ಸ್ಪರ್ಧಿಗಳು ಮಾರುತಿ ಎಸ್-ಕ್ರಾಸ್, ರೆನಾಲ್ಟ್ ಡಸ್ಟರ್ ಮತ್ತು ರೆನಾಲ್ಟ್ ಕ್ಯಾಪ್ಟರ್. 

ದೊಡ್ಡ ಉಳಿತಾಯ !!
<interestrate>% ! find best deals ನಲ್ಲಿ used <modelname> ವರೆಗೆ ಉಳಿಸು

ಹುಂಡೈ ಕ್ರೆಟಾ ಬೆಲೆ ಪಟ್ಟಿ (ರೂಪಾಂತರಗಳು)

ಇ ಡೀಸಲ್1493 cc, ಹಸ್ತಚಾಲಿತ, ಡೀಸಲ್, 21.4 ಕೆಎಂಪಿಎಲ್ Rs.9.99 ಲಕ್ಷ*
ಇಎಕ್ಸ್1497 cc, ಹಸ್ತಚಾಲಿತ, ಪೆಟ್ರೋಲ್, 16.8 ಕೆಎಂಪಿಎಲ್ Rs.9.99 ಲಕ್ಷ*
ಇಎಕ್ಸ್ ಡೀಸಲ್1493 cc, ಹಸ್ತಚಾಲಿತ, ಡೀಸಲ್, 21.4 ಕೆಎಂಪಿಎಲ್ Rs.11.49 ಲಕ್ಷ*
ಎಸ್‌1497 cc, ಹಸ್ತಚಾಲಿತ, ಪೆಟ್ರೋಲ್, 16.8 ಕೆಎಂಪಿಎಲ್ Rs.11.72 ಲಕ್ಷ*
ಎಸ್‌ ಡೀಸಲ್1493 cc, ಹಸ್ತಚಾಲಿತ, ಡೀಸಲ್, 21.4 ಕೆಎಂಪಿಎಲ್ Rs.12.77 ಲಕ್ಷ *
ಎಸ್‌ಎಕ್ಸ್1497 cc, ಹಸ್ತಚಾಲಿತ, ಪೆಟ್ರೋಲ್, 16.8 ಕೆಎಂಪಿಎಲ್ Rs.13.46 ಲಕ್ಷ*
ಎಸ್‌ಎಕ್ಸ್ ಡೀಸಲ್1493 cc, ಹಸ್ತಚಾಲಿತ, ಡೀಸಲ್, 21.4 ಕೆಎಂಪಿಎಲ್ Rs.14.51 ಲಕ್ಷ*
ಎಸ್‌ಎಕ್ಸ್ ivt1497 cc, ಸ್ವಯಂಚಾಲಿತ, ಪೆಟ್ರೋಲ್, 16.9 ಕೆಎಂಪಿಎಲ್ Rs.14.94 ಲಕ್ಷ*
ಹ್ಯುಂಡೈ ವೆನ್ಯೂ ಎಸ್‌ಎಕ್ಸ್ ಆಪ್ಟ್ ಡೀಸೆಲ್1493 cc, ಹಸ್ತಚಾಲಿತ, ಡೀಸಲ್, 21.4 ಕೆಎಂಪಿಎಲ್ Rs.15.79 ಲಕ್ಷ*
ಎಸ್‌ಎಕ್ಸ್ ಡೀಸಲ್ ಎಟಿ1493 cc, ಸ್ವಯಂಚಾಲಿತ, ಡೀಸಲ್, 18.5 ಕೆಎಂಪಿಎಲ್ Rs.15.99 ಲಕ್ಷ*
ಎಸ್‌ಎಕ್ಸ್ opt ivt1497 cc, ಸ್ವಯಂಚಾಲಿತ, ಪೆಟ್ರೋಲ್, 16.9 ಕೆಎಂಪಿಎಲ್ Rs.16.15 ಲಕ್ಷ*
ಹ್ಯುಂಡೈ ವೆನ್ಯೂ ಎಸ್‌ಎಕ್ಸ್ ಟರ್ಬೊ1353 cc, ಸ್ವಯಂಚಾಲಿತ, ಪೆಟ್ರೋಲ್, 16.8 ಕೆಎಂಪಿಎಲ್ Rs.16.16 ಲಕ್ಷ*
ಎಸ್‌ಎಕ್ಸ್ opt ಡೀಸಲ್ ಎಟಿ1493 cc, ಸ್ವಯಂಚಾಲಿತ, ಡೀಸಲ್, 18.5 ಕೆಎಂಪಿಎಲ್ Rs.17.2 ಲಕ್ಷ*
ಹ್ಯುಂಡೈ ವೆನ್ಯೂ ಎಸ್‌ಎಕ್ಸ್ ಆಪ್ಟ್ ಟರ್ಬೊ1353 cc, ಸ್ವಯಂಚಾಲಿತ, ಪೆಟ್ರೋಲ್, 16.8 ಕೆಎಂಪಿಎಲ್ Rs.17.2 ಲಕ್ಷ*
ಎಲ್ಲಾ ರೂಪಾಂತರಗಳು ವೀಕ್ಷಿಸಿ
Ask Question

Are you Confused?

Ask anything & get answer ರಲ್ಲಿ {0}

ಪ್ರಶ್ನೆಗಳು & ಉತ್ತರಗಳು

 • ಇತ್ತೀಚಿನ ಪ್ರಶ್ನೆಗಳು

ಹುಂಡೈ ಕ್ರೆಟಾ ಇದೇ ಕಾರುಗಳೊಂದಿಗೆ ಹೋಲಿಕೆ

ನವ ದೆಹಲಿ ರಲ್ಲಿ ಎಕ್ಸ್ ಶೋ ರೂಂ ಬೆಲೆ

ಹುಂಡೈ ಕ್ರೆಟಾ ವಿಮರ್ಶೆ

ಹ್ಯುಂಡೈ ಕ್ರೆಟಾದ ಮಿಡ್-ಲೈಫ್ ರಿಫ್ರೆಶ್ಡ್/ಫೇಸ್ ಲಿಫ್ಟ್ ಮಾದರಿಯನ್ನು ಪರಿಚಯಿಸಿದೆ. ಈ ಅಪ್ ಡೇಟೆಡ್ ಮಾದರಿಯನ್ನು ಪ್ರಿ-ಫೇಸ್ ಲಿಫ್ಟ್ ಕಾಂಪ್ಯಾಕ್ಟ್ ಎಸ್.ಯು.ವಿಯ ಬಿಡುಗಡೆಯ ಮೂರು ವರ್ಷಗಳ ನಂತರ ಬಿಡುಗಡೆ ಮಾಡಲಾಗಿದೆ. ಕ್ರೆಟಾ ಯಾಂತ್ರಿಕವಾಗಿ ಸದೃಢ ಪ್ಯಾಕೇಜ್ ಆಗಿದೆ, ಆದ್ದರಿಂದ ಅದರ ಪವರ್ ಟ್ರೈನ್ ಆಯ್ಕೆಗಳು ಹಾಗೆಯೇ ಉಳಿದಿವೆ. ಈ 2018ರ ಫೇಸ್ ಲಿಫ್ಟ್ ನೊಂದಿಗೆ ಈ ಹೊರನೋಟದ ಬದಲಾವಣೆಗಳು ಹೊಸ ಆಕರ್ಷಣೆ ನೀಡಿವೆ. 

ನಮ್ಮ ದಾಖಲೆಗಳಂತೆ, ಕ್ರೆಟಾ ಫೇಸ್ ಲಿಫ್ಟ್ ನಗರ, ಹೆದ್ದಾರಿ ಮತ್ತು ಒರಟಾದ ರಸ್ತೆಗಳಲ್ಲಿ ಕಾಂಪ್ಯಾಕ್ಟ್ ಎಸ್.ಯು.ವಿ. ವಿಭಾಗದಲ್ಲಿ ಅತ್ಯುತ್ತಮ ಆಯ್ಕೆಗಳಲ್ಲಿ ಒಂದಾಗಿ ಮುಂದುವರೆದಿದೆ. ಇದು ಸ್ಪರ್ಧಾತ್ಮಕ ಪವರ್ ಟ್ರೈನ್ ಆಯ್ಕೆಗಳು ಹಾಗೂ ಈ ವಿಭಾಗದಲ್ಲಿ ನೀವು ಕೇಳುವುದಕ್ಕಿಂತ ಹೆಚ್ಚಿನ ಪ್ಯಾಕ್ ಗಳನ್ನು ನೀಡುತ್ತದೆ. ಹ್ಯುಂಡೈ ಫೇಸ್ ಲಿಫ್ಟ್ ಮಾದರಿಯ ಪೂರ್ವಕ್ಕಿಂತ ಅಪ್ ಡೇಟೆಡ್ ಕ್ರೆಟಾದ ಹಲವಾರು ಮಿಡ್-ಸ್ಪೆಕ್ ವೇರಿಯೆಂಟ್ ಗಳ ದರಗಳನ್ನು ಇಳಿಸಿದೆ. 

ಎಕ್ಸ್‌ಟೀರಿಯರ್

ಹ್ಯುಂಡೈ ಕ್ರೆಟಾದ ವಿನ್ಯಾಸದಲ್ಲಿ ನಿಮಗೆ ಕಣ್ಣಿಗೆ ಎದ್ದು ಕಾಣುವ ಮೊದಲ ಅಂಶ ಅದು ಹೇಗೆ ಸಾಂಪ್ರದಾಯಿಕ, ಬಾಕ್ಸಿ ಎಸ್.ಯು.ವಿ ರೀತಿ ಕಾಣುತ್ತದೆ ಎನ್ನುವುದು. ಪ್ರತಿಸ್ಪರ್ಧಿಗಳಾದ ಮಾರುತಿ ಸುಝುಕಿ ಎಸ್-ಕ್ರಾಸ್ ಮತ್ತು ರೆನಾಲ್ಟ್ ಕಾಪ್ಟರ್ ಕ್ರಾಸೋವರ್ ಗಳಾಗಿದ್ದು ಕ್ರೆಟಾದ ಚೌಕಾಕಾರದ ಅಂಚುಗಳು ಅದಕ್ಕೆ ವಿಶಿಷ್ಟ ನೋಟ ನೀಡಿವೆ. ಇಷ್ಟೇ ಅಲ್ಲ, 1630ಎಂಎಂ ಎತ್ತರದೊಂದಿಗೆ, ಹ್ಯುಂಡೈ ಕ್ರೆಟಾ ಈ ವಲಯದಲ್ಲಿ ಅತ್ಯಂತ ಎತ್ತರದ ಎಸ್.ಯು.ವಿಯಾಗಿದ್ದು ನೀವು ಬಯಸುವ ರಸ್ತೆಯ ಹಾಜರಿ ನೀಡುತ್ತದೆ. 190ಎಂಎಂ ಗ್ರೌಂಡ್ ಕ್ಲಿಯರೆನ್ಸ್ ಮೂಲಕ ನೀವು ಅಗತ್ಯವಿದ್ದಾಗ ಒರಟು ಪ್ರದೇಶದಲ್ಲಿಯೂ ನಿಭಾಯಿಸಬಹುದು. 

ಅಲ್ಲದೆ ಹೊಸ ಕ್ರೆಟಾ ಹ್ಯುಂಡೈ ಫ್ಯಾಮಿಲಿ ಗ್ರಿಲ್ ಹೊಂದಿದೆ. ಈ ನವೀಕೃತ ಗ್ರಿಲ್ ಅದರ ಸುತ್ತಲೂ ವಿಸ್ತಾರ ಕ್ರೋಮ್ ಅಕ್ಸೆಂಟ್ ಪಡೆಯುತ್ತದೆ ಅದು ಮೇಲ್ಭಾಗದ ಮೂಲೆಗಳಲ್ಲಿ ಹೆಡ್ ಲ್ಯಾಂಪ್ ಗಳೊಂದಿಗೆ ವಿಲೀನವಾಗುತ್ತದೆ. ಅವು ಅದೇ ಜೋಡಣೆಗಳಿಗೆ ಹೊಂದಿಕೊಂಡರೂ ಹೆಡ್ ಲ್ಯಾಂಪ್ ಗಳು ಸಂಪೂರ್ಣ ಹೊಸ ವಿನ್ಯಾಸವಾಗಿವೆ. ಡಿ.ಆರ್.ಎಲ್.ಗಳು ಈಗ ಕೆಳಕ್ಕೆ ವರ್ಗಾವಣೆಯಾಗಿದ್ದು ಮರು ವಿನ್ಯಾಸಗೊಳಿಸಿದ ಮುಂಬದಿಯ ಬಂಪರ್ ಮತ್ತು ಫಾಗ್ ಲ್ಯಾಂಪ್ ಗಳನ್ನು ಸುತ್ತುವರೆದಿದೆ. ಬದಿಯಿಂದ ನೋಡಿದಾಗ ಆಕರ್ಷಕವಾದ 17-ಇಂಚು ಫೈವ್ ಸ್ಪೋಕ್ ಮೆಷಿನ್ ಕಟ್ ಅಲಾಯ್ ವ್ಹೀಲ್ಸ್ ಹೊಸ ಗುಚ್ಛ ಮಾತ್ರ ಬದಲಾವಣೆ ಮತ್ತು ರೂಫ್ ರೈಲ್ಸ್ ಈಗ ತಾರಸಿಯ ಮೇಲೆ ಸೂಕ್ತ ರೀತಿಯಲ್ಲಿ ಜೋಡಣೆಯಾಗಿವೆ. 

ರಿಯರ್ ನಂತರ ಬದಲಾವಣೆಗಳು ಸೂಕ್ಷ್ಮವಾಗಿದ್ದು ಟೈಲ್ ಲೈಟ್ ಯೂನಿಟ್ ಗಳು ಮತ್ತು ಬಂಪರ್ ನೇರ ರೇಖೆಯಂತೆ ಜೋಡಣೆಯಾಗುವುದಿಲ್ಲ, ಅಂಚುಗಳಲ್ಲಿ ಹೊರ ಅಂಚುಗಳೊಂದಿಗೆ ಸದೃಢ ಪ್ಲಾಸ್ಟಿಕ್ ಕ್ಲಾಡಿಂಗ್ ಇದೆ. ಹ್ಯುಂಡೈ ತನ್ನ ಫೇಸ್ ಲಿಫ್ಟ್ ಗೆ ಹೆಡ್ ಲ್ಯಾಂಪ್ಸ್ ಅಥವಾ ಟೈಲ್ ಲ್ಯಾಂಪ್ಸ್ ಗೆ ಎಲ್ಇಡಿ ಅಂಶಗಳನ್ನು ಅಳವಡಿಸುವ ಮೂಲಕ ವಿನ್ಯಾಸಕ್ಕೆ ಮತ್ತಷ್ಟು ಮೆರುಗು ನೀಡಬಹುದಾಗಿತ್ತು. ಒಟ್ಟಾರೆ ಹೊಸ ಹ್ಯುಂಡೈ ಕ್ರೆಟಾದ ಅಲಂಕಾರಿಕ ಅಪ್ ಡೇಟ್ ಗಳು ಸೂಕ್ಷ್ಮವಾಗಿದ್ದರೂ ಅವು ಎಸ್.ಯು.ವಿಯನ್ನು ಅದರಲ್ಲಿಯೂ ನೀವು ನ್ಯೂ ಪ್ಯಾಷನ್ ಆರೇಂಜ್ ಮತ್ತು ಮರಿನಾ ಬ್ಲೂ ಪೇಂಟ್ ಶೇಡ್ ಗಳನ್ನು ಆಯ್ಕೆ ಮಾಡಿಕೊಂಡಾಗ ಅನನ್ಯ ರೀತಿಯಲ್ಲಿ ಕಾಣುವಂತೆ ಮಾಡುವಲ್ಲಿ ನೆರವಾಗಿಲ್ಲ. 

Exterior Comparison

Ford EcoSport
Length (mm)3998mm
Width (mm)1765mm
Height (mm)1647mm
Ground Clearance (mm)200mm
Wheel Base (mm)2519mm
Kerb Weight (kg)1261Kg

Boot Space Comparison

Ford EcoSport
Volume352-litres

ಇಂಟೀರಿಯರ್

ಅದು ಮುರಿದರೆ ಅದನ್ನು ಜೋಡಿಸದಿರಿ. ಹೊಸ ಕ್ರೆಟಾದ ಒಳಾಂಗಣಕ್ಕೆ ಮಾಡಿರುವ ಬದಲಾವಣೆಗಳನ್ನು ಇದು ಸರಳವಾಗಿ ವಿವರಿಸುತ್ತದೆ. ಉದಾಹರಣೆಗೆ, ಇದು ನೆಲದಿಂದ ಬಹಳ ಎತ್ತರದಲ್ಲಿ ಕೂರದೇ ಇರುವುದರಿಂದ ಕ್ರೆಟಾದ ಒಳ ಪ್ರವೇಶ ಹಾಗೂ ಹೊರಕ್ಕೆ ಬರುವುದು ಬಹಳ ಸುಲಭ, ಆದರೆ ಸೈಡ್ ಸಿಲ್ಸ್ ಹಿರಿಯ ನಾಗರಿಕರಿಗೆ ಕಾರಿನ ಒಳಪ್ರವೇಶ ಮತ್ತು ಹೊರಕ್ಕೆ ಬರುವುದನ್ನು ಕೊಂಚ ಬಿಕ್ಕಟ್ಟಾಗಿಸಿವೆ. ಬ್ಲಾಕ್ ಮತ್ತು ಬೀಜ್ ಹೊಂದಿದ ಟು-ಟೋನ್ ಇಂಟೀರಿಯರ್ ಅನ್ನು ಈಗಲೂ ನೀಡಲಾಗುತ್ತಿದೆ ಮತ್ತು ಎಸ್.ಎಕ್ಸ್.ಡ್ಯುಯಲ್ ಟೋನ್ ಬಯಸುವವರಿಗೆ ಆಲ್-ಬ್ಲಾಕ್ ಇಂಟೀರಿಯರ್ ಪಡೆಯಬಹುದು. ಸೀಟುಗಳು, ಆರ್ಮ್ ರೆಸ್ಟ್, ಸ್ಟೀರಿಂಗ್ ಮತ್ತು ಗೇರ್ ಲಿವರ್ ಮೇಲಿನ ಲೆದರ್ ನ ಪ್ರೀಮಿಯಂ ಸ್ಪರ್ಶ ಸುಸಜ್ಜಿತ ಮತ್ತು ಮೃದುಸ್ಪರ್ಶದ ಪ್ಲಾಸ್ಟಿಕ್ ಗಳೊಂದಿಗೆ ಸೇರಿ ನಿಮಗೆ ಅಪ್ ಮಾರ್ಕೆಟ್ ಅನುಭವ ನೀಡುತ್ತವೆ. ನೀವು ನಿಮ್ಮ ಹಣಕ್ಕೆ ತಕ್ಕ ಮೌಲ್ಯ ಪಡೆದ ಭಾವನೆ ಹೊಂದುತ್ತೀರಿ. 

ಮೇಲ್ಭಾಗದಲ್ಲಿರುವ ಚೆರಿ ಎಸ್.ಯು.ವಿಯ ಸ್ಟೈಲಿಂಗ್ ಪಡೆಯುವುದಲ್ಲದೆ ಇದು ಅದರ ಪ್ರಭಾವಶಾಲಿ ಚಾಲನೆಯ ಸ್ಥಾನ ಪಡೆದುಕೊಂಡಿದೆ, ಇದರಿಂದ ನೀವು ಚಾಲಕರ ಸೀಟಿನಲ್ಲಿ ಬಾನೆಟ್ ಮೇಲೆ ನೋಡಬಹುದು. ಕಾರು ದಕ್ಷತಾಶಾಸ್ತ್ರದಿಂದ ಸದೃಢವಾಗಿರುವುದರಿಂದ ಚಾಲಕನಿಗೆ ಬಳಕೆಯಲ್ಲಿ ತಡೆರಹಿತ ಅನುಭವ ನೀಡುತ್ತದೆ. ಪ್ರತಿ ಬಟನ್, ಡಯಲ್ ಮತ್ತು ಪ್ರತಿ ಸ್ಟಾಕ್ ಕೂಡಾ ಎಲ್ಲಿರಬೇಕೆಂದು ನೀವು ನಿರೀಕ್ಷಿಸುತ್ತೀರೋ ಅಲ್ಲಿಯೇ ಇವೆ ಮತ್ತು ಹ್ಯುಂಡೈ ಕಾರುಗಳಿಗೆ ಹೊಸಬರಿಗೆ ಕೂಡಾ ಪರಿಚಯಕ್ಕೆ ಹೆಚ್ಚು ಸಮಯ ಬೇಕಾಗಿಲ್ಲ. ಚಾಲನೆಯ ಸ್ಥಾನವನ್ನು ಸುಲಭಗೊಳಿಸಿಕೊಳ್ಳಲು ಹ್ಯುಂಡೈ ನಾವು ಕೂಡಾ ರೀಚ್ ಮತ್ತು ಟಿಲ್ಟ್ ಸ್ಟೀರಿಂಗ್ ಅಡ್ಜಸ್ಟ್ ಮೆಂಟ್ ಬಯಸುತ್ತೇವೆ. ಬರೀ ಟಿಲ್ಟ್ ಅಲ್ಲ. 

ಕ್ರೆಟಾ ವಿಶಾಲ ಕಾರು ಕೂಡಾ ಆಗಿದೆ ಮತ್ತು  ಒಟ್ಟಾರೆ ಸಾಕಷ್ಟು ಹೆಡ್ ರೂಮ್, ಲೆಗ್ ರೂಮ್ ಮತ್ತು ನೀ ರೂಮ್ ನೀಡುತ್ತದೆ, ಸೀಟುಗಳು ಮತ್ತಷ್ಟು ದೊಡ್ಡ ಫ್ರೇಮ್ ಗಳೊಂದಿಗೆ  ಪೂರಕವಾಗಿವೆ. ಆರು ಅಡಿ ಉದ್ದವಿರುವವರು ಒಬ್ಬರ ಹಿಂದೆ ಕುಳಿತುಕೊಳ್ಳುವುದು ಸುಲಭ. ರಿಯರ್ ಶೌಲ್ಡರ್ ರೂಮ್ ಸಾಮಾನ್ಯವಾಗಿದ್ದು ಹ್ಯುಂಡೈ  ವರ್ನಾಗಿಂತ ಕಡಿಮೆ ಇದೆ. ಆದ್ದರಿಂದ ಕ್ರೆಟಾ ಅತ್ಯುತ್ತಮ 5-ಸೀಟರ್ ಅಲ್ಲ, ಆದರೆ ಒಳ್ಳೆಯ 4-ಸೀಟರ್ ಆಗಿದೆ. 

ಇದು ಪ್ರಾಯೋಗಿಕವಾಗಿ ಅಳವಡಿಸಿದ ಕ್ಯಾಬಿಕ್ ಹೊಂದಿದ್ದು ಮುಂಬದಿಯ ಪ್ರಯಾಣಿಕರ ನಡುವೆ ಕಪ್ ಹೋಲ್ಡರ್ ಗಳಿವೆ, ಫ್ರಂಟ್ ಆರ್ಮ್ ರೆಸ್ಟ್ ಕೆಳಗೆ ಸ್ಟೋರೇಜ್, 1-ಲೀಟರ್ ಬಾಟಲಿಗಳನ್ನು ಇರಿಸಿಕೊಳ್ಳಬಲ್ಲ ಡೋರ್ ಬಿನ್ ಗಳು ಮತ್ತು 402-ಲೀಟರ್ ಬೂಟ್ ಇದೆ. ಹೆಚ್ಚುವರಿ ಸಂಗ್ರಹಕ್ಕೆ ರಿಯರ್ ಸೀಟ್ ಫೋಲ್ಡ್ಸ್ ಕೂಡಾ ಇವೆ. 

MEASUREMENTS - FRONT SEAT- ಅಳತೆಗಳು- ಮುಂಬದಿ ಸೀಟು
Parameter-ಮಾನದಂಡ  
ಲೆಗ್ ರೂಮ್(ಕನಿಷ್ಠ-ಗರಿಷ್ಠ) 925-1120ಎಂಎಂ
ನೀ ರೂಮ್(ಕನಿಷ್ಠ-ಗರಿಷ್ಠ) 610-840 ಎಂಎಂ
ಸೀಟ್ ಬೇಸ್ ಉದ್ದ 595 ಎಂಎಂ
ಸೀಟ್ ಬೇಸ್ ಅಗಲ 505 ಎಂಎಂ
ಸೀಟ್ ಬ್ಯಾಕ್ ಎತ್ತರ 645 ಎಂಎಂ
ಹೆಡ್ ರೂಮ್(ಕನಿಷ್ಠ-ಗರಿಷ್ಠ) 920-980 ಎಂಎಂ
ಕ್ಯಾಬಿನ್ ಅಗಲ 1400 ಎಂಎಂ  

 

MEASUREMENTS - REAR SEAT ಅಳತೆಗಳು- ಹಿಂಬದಿ ಸೀಟು ಮಾನದಂಡ   ಶೌಲ್ಡರ್ ರೂಮ್ 1250 ಎಂಎಂ ಹೆಡ್ ರೂಮ್ 980 ಎಂಎಂ ಸೀಟ್ ಬೇಸ್ ಉದ್ದ 450 ಎಂಎಂ ಸೀಟ್ ಬೇಸ್ ಅಗಲ 1260 ಎಂಎಂ ಸೀಟ್ ಬ್ಯಾಕ್ ಎತ್ತರ 640 ಎಂಎಂ ನೀ ರೂಮ್(ಕನಿಷ್ಠ-ಗರಿಷ್ಠ) 615-920 ಎಂಎಂ

 

ಡ್ಯಾಶ್ ನಲ್ಲಿ ಚಾಲಕರ ಎಡಗಡೆ ಸ್ಟಾರ್ಟ್ ಸ್ಟಾಪ್ ಬಟನ್ ಇದೆ ಮತ್ತು ಬಲಭಾಗದಲ್ಲಿ ಟ್ರಾಕ್ಷನ್ ಕಂಟ್ರೋಲ್ ನಲ್ಲಿ ಕಂಟ್ರೋಲ್ ಸ್ವಿಚ್ ಗಳು, ಇನ್ಸ್ ಟ್ರುಮೆಂಟ್ ಕ್ಲಸ್ಟರ್ ಇಲ್ಯುಮಿನೇಷನ್ ಮತ್ತು ಹೆಡ್ ಲ್ಯಾಂಪ್ಸ್ ಲೆವೆಲ್ಲಿಂಗ್ ಇದ್ದು ಅವುಗಳ ಬೆಳಕು ಬೀರುವುದನ್ನು ಹೊಂದಿಸಬಹುದು. ಕೀ ಲೆಸ್ ಸಿಸ್ಟಂ ನಿಜಕ್ಕೂ ಸ್ಮಾರ್ಟ್ ಯೂನಿಟ್ ಆಗಿದ್ದು ಇದು ಸುತ್ತಮುತ್ತಲಲ್ಲಿ ಕೀ ಇರುವುದನ್ನು ಕಂಡುಕೊಳ್ಳುವುದಲ್ಲದೆ ಅದು ಕ್ಯಾಬಿನ್ ಒಳಗಿದೆಯೋ ಹೊರಗಡೆ ಇದೆಯೋ ಎಂದು ಪತ್ತೆ ಹಚ್ಚುತ್ತದೆ. ಚಾಲಕರ ಬದಿಯ ಬಾಗಿಲಿನ ಮೇಲಿರುವ ರಿಕ್ವೆಸ್ಟ್ ಸೆನ್ಸರ್ ನಿಂದ ಕಾರನ್ನು ಬಳಸಬಹುದು. ಹಿಂಬದಿಯ ಗುಂಡಿ ಒತ್ತಿರಿ ಮತ್ತು ಅದು ಕಾರಿನ ಸುತ್ತಲೂ ಕೀಯನ್ನು ಪತ್ತೆ ಮಾಡುತ್ತದೆ. ನಿಮ್ಮ ಜೇಬಿನಿಂದ ಕೀ ಹೊರತೆಗೆಯುವ ಅಗತ್ಯವಿಲ್ಲ. ಒಮ್ಮೆ ಒಳ ಪ್ರವೇಶಿಸಿದ ಕೂಡಲೇ ಸ್ಟಾರ್ಟ್-ಸ್ಟಾಪ್ ಬಟನ್ ನೊಂದಿಗೆ ಕ್ಲಚ್ ಒತ್ತುವ ಮೂಲಕ ಕಾರು ಚಾಲನೆಗೊಳಿಸಿ. 

ತಂತ್ರಜ್ಞಾನ

ಹ್ಯುಂಡೈನಲ್ಲಿ ನೀವು ನಿರೀಕ್ಷಿಸಿದಂತೆ ಕ್ರೆಟಾ 2018 ಅಸಂಖ್ಯ ವಿಶೇಷತೆಗಳ ಪಟ್ಟಿಯೊಂದಿಗೆ ಬಂದಿದೆ. ಪ್ರತ್ಯೇಕವಾಗಿ ನಿಲ್ಲುವ ವಿಶೇಷತೆಗಳಲ್ಲಿ ವೈರ್ ಲೆಸ್ ಫೋನ್ ಚಾರ್ಜಿಂಗ್, ಸ್ಮಾರ್ಟ್ ಕೀ ಬ್ಯಾಂಡ್, ಪವರ್ಡ್ ಡ್ರೈವರ್ ಸೀಟು ಮತ್ತು ಎಲೆಕ್ಟ್ರಿಕ್ ಸನ್ ರೂಫ್ ಇವೆ. ಇದಲ್ಲದೆ ನೀವು ಸ್ಟೀರಿಂಗ್-ಮೌಂಟೆಡ್ ಆಡಿಯೊ ಮತ್ತು ಫೋನ್ ಕಂಟ್ರೋಲ್ಸ್, ಕ್ರೂಸ್ ಕಂಟ್ರೋಲ್, ರಿಯರ್ ಎಸಿ ವೆಂಟ್ ಗಳೊಂದಿಗೆ ಆಟೊ ಎಸಿ, ಪುಷ್ ಬಟನ್ ಸ್ಟಾರ್ಟ್ ನೊಂದಿಗೆ ಪುಷ್ ಬಟನ್ ಮತ್ತು ಆಟೊ-ಡಿಮ್ಮಿಂಗ್ ಇಂಟೀರಿಯರ್ ರಿಯರ್ ವ್ಯೂ ಮಿರರ್ ಹೊಂದಿದೆ. 

ಬೇಸ್ ಇ ಮತ್ತು ಡೀಸೆಲ್ ಇ+ ಯಾವುದೇ ಮ್ಯೂಸಿಕ್ ಸಿಸ್ಟಂ ಪಡೆಯುವುದಿಲ್ಲ, ಆದರೆ ಇ+ ಪೆಟ್ರೋಲ್ ಮತ್ತು ಎಸ್ 5-ಇಂಚು ಟಚ್ ಸ್ಕ್ರೀನ್ ಇನ್ಫೊಟೈನ್ ಮೆಂಟ್ ಸಿಸ್ಟಂ ಹೊಂದಿವೆ. ಎಸ್.ಎಕ್ಸ್ ಅಥವಾ ಎಸ್.ಎಕ್ಸ್(ಒ) ಆಯ್ಕೆ ಮಾಡಿಕೊಳ್ಳಿ ಮತ್ತು ನೀವು 7-ಇಂಚು ಟಚ್ ಸ್ಕ್ರೀನ್ ಇನ್ಫೊಟೈನ್ ಮೆಂಟ್ ಸಿಸ್ಟಂ ಅನ್ನು ಆಪಲ್ ಕಾರ್ ಪ್ಲೇ, ಆಂಡ್ರಾಯಿಡ್ ಆಟೊ ಮತ್ತು ಮಿರರ್ ಲಿಂಕ್, ನ್ಯಾವಿಗೇಷನ್ ನೊಂದಿಗೆ ಬಂದಿದೆ. 

ಆದರೆ, ಕೆಲವು ವಿಶೇಷತೆಗಳನ್ನು ಕೈ ಬಿಡಲಾಗಿದೆ. ಆಟೊ ಹೆಡ್ ಲ್ಯಾಂಪ್ಸ್ ಮತ್ತು ಆಟೊ ವೈಪರ್ಸ್ ಯಾವುದೇ ವೇರಿಯೆಂಟ್ ನಲ್ಲಿ ನೀಡಲಾಗಿಲ್ಲ, ಐಸೊಫಿಕ್ಸ್ ಚೈಲ್ಡ್ ಸೀಟ್ ಮೌಂಟ್ ಗಳು ಎಸ್.ಎಕ್ಸ್ ಆಟೊಮ್ಯಾಟಿಕ್ ವೇರಿಯೆಂಟ್ ಗಳಲ್ಲಿ ಮಾತ್ರವಿದೆ. 

ಕಾರ್ಯಕ್ಷಮತೆ

1.6 ಪೆಟ್ರೋಲ್ 

ಕ್ರೆಟಾದಲ್ಲಿರುವ ಪೆಟ್ರೋಲ್ ಎಂಜಿನ್ 1.6ಎಲ್ ವಿಟಿವಿಟಿ ಯೂನಿಟ್ ವರ್ನಾದಿಂದ ತರಲಾಗಿದೆ. ಈ ಎಂಜಿನ್ 123ಪಿಎಸ್ ಶಕ್ತಿ ಮತ್ತು 151ಎನ್ಎಂ ಟಾರ್ಕ್ ನೀಡುತ್ತದೆ. ಡೀಸೆಲ್ ಹ್ಯುಂಡೈ ಕ್ರೆಟಾ ನಮಗೆ ಅದರ ಸುಧಾರಣೆಯ ಮಟ್ಟಗಳಿಂದ ಪ್ರಭಾವಿಸುತ್ತದೆ, ಆದರೆ ಪೆಟ್ರೋಲ್ ನಿಜಕ್ಕೂ ಅಸಾಧಾರಣವಾಗಿದೆ. ಸ್ಟಾರ್ಟಪ್ ನಲ್ಲಿ ಕೂಡಾ ಬೆಣ್ಣೆಯಂಥ ಮೃದುವಿನಿಂದ ಮೋಟಾರ್ ಓಡುತ್ತಿದೆ ಎಂದು ಹೇಳಲೇ ಸಾಧ್ಯವಿಲ್ಲ. 

ಈ ಎಂಜಿನ್ ಸಾಕಷ್ಟು ಕಾರ್ಯಕ್ಷಮತೆ ನೀಡುತ್ತದೆ. ವರ್ನಾದಲ್ಲಿರುವಂತೆಯೇ ಎಂಜಿನ್ ಯಾವುದೇ ಉತ್ಸಾಹಿಯಾದುದನ್ನು ಮಾಡುವುದಿಲ್ಲ. ಇದು ನಗರದಲ್ಲಿ ಸುಲಭ ಚಾಲನೀಯತೆ ನೀಡುತ್ತದೆ ಆದರೆ ನೀವು ಚಾಲನೆಯ ಶೈಲಿಯಲ್ಲಿ ಅಚಲತೆ ಇರಿಸಬೇಕು. ಈ ಮೋಟಾರ್ ನಿಂದ ನಿಜಕ್ಕೂ ಕಾರ್ಯಕ್ಷಮತೆ ಹೊರತೆಗೆಯಲು ನೀವು ಅದನ್ನು ನೂಕಬೇಕು, ಆದರೆ ಅದು ಇಂಧನಕ್ಷಮತೆಯ ಮೇಲೆ ಪರಿಣಾಮ ಬೀರುತ್ತದೆ. 

ಹೆದ್ದಾರಿಯಲ್ಲೂ ಒಂದು ಲೇನ್ ಆಯ್ಕೆ ಮಾಡಿಕೊಂಡು ಅದಕ್ಕೆ ಬದ್ಧರಾಗಿರುವುದು ಸೂಕ್ತ. ಹೈ-ಸ್ಪೀಡ್ ಓವರ್ ಟೇಕ್ ಗಳಿಗೆ ಕೊಂಚ ಯೋಜನೆ ಅಗತ್ಯ ಮತ್ತು ಓಲಿಸಲು ಅದರಲ್ಲೂ ಪ್ರಯಾಣಿಕರಿರುವಾಗ ಕಡಿಮೆ ಗೇರ್ ಗಳಲ್ಲಿರಬೇಕು. 1.6-ಲೀಟರ್ ಡೀಸೆಲ್ ನಂತೆ, ಈ ಎಂಜಿನ್ 6-ಸ್ಪೀಡ್ ಮ್ಯಾನ್ಯುಯಲ್ ಗೇರ್ ಬಾಕ್ಸ್ ಅನ್ನು ಸ್ಟಾಂಡರ್ಡ್ ಆಗಿ ನೀಡುತ್ತದೆ, ಆದರೆ 6-ಸ್ಪೀಡ್ ಆಟೊಮ್ಯಾಟಿಕ್ ಟ್ರಾನ್ಸ್ ಮಿಷನ್ ತನ್ನಲ್ಲಿಯೇ ಇರಬಹುದು. 

Performance Comparison (Petrol)

Ford EcoSport
Power98.96bhp@3750rpm
Torque (Nm)215Nm@1750-2500rpm
Engine Displacement (cc)1498 cc
TransmissionManual
Top Speed (kmph)
0-100 Acceleration (sec)
Kerb Weight (kg)1261Kg
Fuel Efficiency (ARAI)21.7kmpl
Power Weight Ratio-

1.6 ಡೀಸೆಲ್ 

ಹ್ಯುಂಡೈ ಎಂಜಿನ್ ನಲ್ಲಿ ಟ್ಯೂನ್-ಅಪ್ ಹೊರತಾಗಿಸಿ ಹೆಚ್ಚೇನೂ ಬದಲಾವಣೆಯಾಗಿಲ್ಲ, ಇದರಿಂದ ಇಂಧನಕ್ಷಮತೆ ಶೇ.4ರಷ್ಟು ಸುಧಾರಿಸಿದ್ದು 20.5ಕೆಎಂಪಿಎಲ್(ಹಳೆಯ ಕಾರು 19.67ಕೆಎಂಪಿಎಲ್) ನೀಡುತ್ತದೆ. ಕಾರ್ಯಕ್ಷಮತೆಗೆ ಬಂದರೆ 1.6 ಲೀಟರ್ ಡೀಸೆಲ್ ಎಂಜಿನ್ ಈ ವರ್ಗದಲ್ಲಿ ಅತ್ಯಂತ ಶಕ್ತಿಯುತವಾಗಿದ್ದು 128ಪಿಎಸ್@4000ಆರ್.ಪಿ.ಎಂ ಮತ್ತು 260 ಎನ್ಎಂ@1500-300ಆರ್.ಪಿ.ಎಂ ನೀಡುತ್ತದೆ ಮತ್ತು ಆದ್ದರಿಂದ ಹ್ಯುಂಡೈಗೆ ಅದನ್ನು ಬದಲಾಯಿಸಲು ಅಗತ್ಯ ಅತ್ಯಂತ ಕಡಿಮೆ. 

ಪಟ್ಟಣದಲ್ಲಿ ಎಂಜಿನ್ 2ನೇ ಅಥವಾ 3ನೇ ಗೇರ್  ಬದಲಾವಣೆಗೆ ತಕ್ಕಷ್ಟು ಶಕ್ತಿ ಅಗತ್ಯವಾಗಿದ್ದಲ್ಲಿ ಮೃದುವಾಗಿ ಆಕ್ಸಲರೇಟ್ ಆಗಲು ನೀಡುತ್ತದೆ. ಹೆದ್ದಾರಿಯಲ್ಲಿ ಎಂಜಿನ್ 2000ಆರ್.ಪಿ.ಎಂನಲ್ಲಿ ತಿರುಗುವಿಕೆ ನೀಡುತ್ತದೆ ಮತ್ತು ತಕ್ಕಷ್ಟು ಶಕ್ತಿ ಅಗತ್ಯವಿದ್ದಾಗ ತಕ್ಷಣದ ಓವರ್ ಟೇಕಿಂಗ್ ಗೆ ಅನುಕೂಲ ಕಲ್ಪಿಸುತ್ತದೆ. ರಿಯಲ್-ವರ್ಲ್ಡ್ ಪರೀಕ್ಷೆಗಳಲ್ಲಿ ಕ್ರೆಟಾ 0-100 ಕೆಎಂಪಿಎಚ್ ತೆಗೆದುಕೊಳ್ಳಲು 10.83 ಸೆಕೆಂಡುಗಳನ್ನು ತೆಗೆದುಕೊಳ್ಳುತ್ತದೆ, 30-80ಕೆಎಂಪಿಎಚ್(3ನೇ ಗೇರ್ ನಲ್ಲಿ) ಕೇವಲ 8 ಸೆಕೆಂಡುಗಳು ತೆಗೆದುಕೊಳ್ಳುತ್ತದೆ. 

1.4 ಡೀಸೆಲ್ 

1.4 -ಲೀಟರ್ ಡೀಸೆಲ್ ಕ್ರೆಟಾ ಪ್ರಾಥಮಿಕವಾಗಿ ನಗರದ ಕಾರು. ಇದು ಕಡಿಮೆ ವೇಗದ ಟಾರ್ಕ್ ನೀಡುತ್ತದೆ ಮತ್ತು ಇದು ನಿಮಗೆ ಬೇಗನೆ ಅಪ್ ಶಿಫ್ಟ್ ಗೆ ಅವಕಾಶ ನೀಡುತ್ತದೆ. ಇದು ಉತ್ತಮ ದೈನಂದಿನ ಚಾಲನೀಯತೆ ನೀಡುತ್ತದೆ, ಆದರೆ ಇದು ಇನ್ನೂ ಕಮ್ಯೂಟರ್ ಎಂಜಿನ್ ಹೊರತು ಹೆಚ್ಚೇನೂ ಅಲ್ಲ. ಹೆದ್ದಾರಿಯಲ್ಲಿ ಮೋಟಾರ್ ಉಸಿರು ಕಳೆದುಕೊಳ್ಳುತ್ತದೆ ಮತ್ತು 6-ಸ್ಪೀಡ್ ಮ್ಯಾನ್ಯುಯಲ್ ಗೇರ್ ಬಾಕ್ಸ್ ಬದಲಾಯಿಸುವುದು ಮತ್ತು ಅದನ್ನು ಕಠಿಣವಾಗಿ ಪರಿಷ್ಕರಿಸುವುದು ನಿರರ್ಥಕ.  ಈ ಎಂಜಿನ್ ನಲ್ಲಿ ಕ್ರೂಸಿಂಗ್ ಆನಂದಿಸುವುದು ಉತ್ತಮ. 

Performance Comparison (Diesel)

Ford EcoSport
Power98.96bhp@3750rpm
Torque (Nm)215Nm@1750-2500rpm
Engine Displacement (cc)1498 cc
TransmissionManual
Top Speed (kmph)
0-100 Acceleration (sec)
Kerb Weight (kg)1261Kg
Fuel Efficiency (ARAI)21.7kmpl
Power Weight Ratio-
 

ಚಾಲನೆ ಮತ್ತು ನಿರ್ವಹಣೆ

ಕ್ರೆಟಾದಲ್ಲಿ ಯಾವುದೇ ಯಾಂತ್ರಿಕ ಬದಲಾವಣೆಗಳು ಇಲ್ಲದಿರುವ ಕಾರಣ, ಇದು ಒಂದೇ ಬಗೆಯ ಡ್ರೈವಿಂಗ್ ಡೈನಮಿಕ್ಸ್ ಪ್ರದರ್ಶಿಸುತ್ತದೆ. ನಗರದ ಳಗಡೆ ಸಸ್ಪೆನ್ಷನ್ ಒಳಗಿರುವವರನ್ನು ಸಣ್ಣ ಹಾಗೂ ಮಧ್ಯಮ ಏರಿಳಿತದೊಂದಿಗೆ ಪರವಾಗಿಲ್ಲ ಎನಿಸುತ್ತದೆ. ದೊಡ್ಡ ಸ್ಪೀಡ್ ಬ್ರೇಕರ್ ಗಳಿಗೆ ಯಾವುದೇ ಗದ್ದಲ ಅಥವಾ ತಗುಲಿದ ಶಬ್ದವಿಲ್ಲದೆ ಕೊಂಡೊಯ್ಯಲು ಸಸ್ಪೆನ್ಷನ್ ಸಾಕಾಗುವುದಿಲ್ಲ. ಅಂದರೆ, ಕ್ರಾಶ್ ಬಂಪ್ ಗಳಲ್ಲಿ ಲೆವೆಲ್ ಬದಲಾವಣೆ, ವಿಸ್ತರಣೆಯ ಅಂತರಗಳು ಮತ್ತು ರಸ್ತೆಯ ಕುಳಿಗಳಲ್ಲಿ ಕೆಲ ಏರಿಳಿತಗಳಿಂದ ಕೆಲ ದೂರುಗಳಿಂದಾಗಿ ನೀವು ಸಸ್ಪೆನ್ಷನ್ ಕೊಂಚ ಒಂದು ಕಡೆಗಿದೆ ಎಂದು ಹೇಳಬಹುದು. ಸ್ಟೀರಿಂಗ್ ಮತ್ತು ಕ್ಲಚ್ ಹಗುರವಾಗಿವೆ ಮತ್ತು ಹ್ಯುಂಡೈನ ರೀತಿಯಲ್ಲಿವೆ ಆದ್ದರಿಂದ ನಗರದಾದ್ಯಂತ ಚಾಲನೆ ಪ್ರಯತ್ನರಹಿತ ಕೆಲಸವಾಗಿದೆ. ಸಾಕಷ್ಟು ಸ್ಟಾಪಿಂಗ್ ಪವರ್ ಲಭ್ಯವಿದ್ದು ನಮ್ಮ ಬ್ರೇಕಿಂಗ್ ಪರೀಕ್ಷೆಗಳಲ್ಲಿ ಕ್ರೆಟಾ 100-0 ಕೆಎಂಪಿಎಚ್ 43.43 ಮೀಟರ್ ಗಳಲ್ಲಿ ಚಲಿಸುತ್ತದೆ. ಆದರೆ ಹ್ಯುಂಡೈಗಳಿಗೆ ಸೀಮಿತವಾದ  ಇದು ಅಷ್ಟು ನಿಖರವಾಗಿಲ್ಲ. ಇದು ಹೆಚ್ಚಿನ ವೇಗಗಳಲ್ಲಿ ಅತ್ಯಂತ ಪ್ರಗತಿಶೀಲವಾಗಿದ್ದು ನೀವು ಮಾರುತಿ ಎಸ್-ಕ್ರಾಸ್ ಗಿಂತ ಹೆಚ್ಚು ಕಠಿಣವಾಗಿ ಪೆಡ್ ಒತ್ತಬೇಕು. 

ಸುರಕ್ಷತೆ

ಡ್ಯುಯಲ್ ಏರ್ ಬ್ಯಾಗ್ಸ್ ಮತ್ತು ಇಬಿಡಿಯೊಂದಿಗೆ ಎಬಿಎಸ್ ಎಲ್ಲ ಶ್ರೇಣಿಗೂ ಸ್ಟಾಂಡರ್ಡ್ ಆಗಿದ್ದು ಎಸ್ಎಕ್ಸ್(ಒ) ವೇರಿಯೆಂಟ್ಸ್ ಆರು ಏರ್ ಬ್ಯಾಗ್ಸ್ ಹೊಂದಿವೆ. ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್, ವೆಹಿಕಲ್ ಸ್ಟೆಬಿಲಿಟಿ ಮ್ಯಾನೇಜ್ ಮೆಂಟ್ ಕಂಟ್ರೋಲ್ ಹಿಲ್ ಸ್ಟಾರ್ಟ್ ಅಸಿಸ್ಟ್ ಕಂಟ್ರೋಲ್ ಎಸ್ಎಕ್ಸ್(ಒ)ದಲ್ಲಿ ಮಾತ್ರ ಲಭ್ಯ. ಸೊಫಿಕ್ಸ್ ಚೈಲ್ಡ್ ಸೀಟ್ ಮೌಂಟ್ ಗಳು ಎಸ್ಎಕ್ಸ್ ಎಟಿ ಪೆಟ್ರೋಲ್ ಮತ್ತು ಡೀಸೆಲ್ ವೇರಿಯೆಂಟ್ ಕಾರುಗಳಲ್ಲಿ ಮಾತ್ರ ಲಭ್ಯ. 

ರೂಪಾಂತರಗಳು

ಹ್ಯುಂಡೈ ಕ್ರೆಟಾದಲ್ಲಿ ಆರು ವೇರಿಯೆಂಟ್ ಗಳಿವೆ, , ಇ, ಇ+, ಎಸ್, ಎಸ್ಎಕ್ಸ್, ಎಸ್ಎಕ್ಸ್(ಡ್ಯುಯಲ್ ಟೋನ್) ಮತ್ತು ಎಸ್ಎಕ್ಸ್(ಒ). 6-ಸ್ಪೀಡ್ ಕನ್ವೆನ್ಷನಲ್ ಆಟೊಮ್ಯಾಟಿಕ್ ಟ್ರಾನ್ಸ್ ಮಿಷನ್ ಗಳು ಎಸ್ ಮತ್ತು ಎಸ್ಎಕ್ಸ್ ಡೀಸೆಲ್ ಮತ್ತು ಎಸ್ಎಕ್ಸ್ ಪೆಟ್ರೋಲ್ ಗಳಲ್ಲಿ ಲಭ್ಯ. 

ಹುಂಡೈ ಕ್ರೆಟಾ

ನಾವು ಇಷ್ಟಪಡುವ ವಿಷಯಗಳು

 • 6-ಸ್ಪೀಡ್ ಆಟೊಮ್ಯಾಟಿಕ್ ಟ್ರಾನ್ಸ್ ಮಿಷನ್ ಆಯ್ಕೆಯನ್ನು 1.6 ಲೀಟರ್ ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್ ಎರಡರಲ್ಲೂ ನೀಡಲಾಗುತ್ತದೆ. ನಿಮ್ಮ ಆಯ್ಕೆ ಮಾಡಿಕೊಳ್ಳಿ!
 • ಪ್ರಬಲ ಮತ್ತು ಸುಧಾರಿತ ಎಂಜಿನ್ ಆಯ್ಕೆಗಳು. ಹ್ಯುಂಡೈ ಕ್ರೆಟಾ 2018 ತನ್ನ ವಲಯದಲ್ಲಿ ಅತ್ಯಂತ ಶಕ್ತಿಯುತ ಎಸ್.ಯು.ವಿಯಾಗಿ ಮುಂದುವರೆದಿದೆ.
 • ಕ್ರೆಟಾ ಅತ್ಯಂತ ಉತ್ತಮ ನೋಟದ ಕಾಂಪ್ಯಾಕ್ಟ್ ಎಸ್.ಯು.ವಿ.ಗಳಲ್ಲಿ ಒಂದಾಗಿದೆ, ಹ್ಯುಂಡೈನ ಅತ್ಯಾಧುನಿಕ ಕ್ಯಾಸ್ಕೇಡಿಂಗ್ ಫ್ಯಾಮಿಲಿ ಗ್ರಿಲ್ ಈ ನೋಟ ಮತ್ತಷ್ಟು ಹೆಚ್ಚಿಸಿದೆ
 • ಹ್ಯುಂಡೈ ಕ್ರೆಟಾ ಅತ್ಯಂತ ಹೆಚ್ಚು ಫೀಚರ್-ಲೋಡೆಡ್ ಎಸ್.ಯು.ವಿ.ಯಾಗಿದೆ. ಇದು ಸನ್ ರೂಫ್, ಪವರ್ಡ್ ಡ್ರೈವರ್ಸ್ ಸೀಟ್, ವೈರ್ ಲೆಸ್ ಚಾರ್ಜಿಂಗ್ ಮತ್ತು 17-ಇಂಚು ವ್ಹೀಲ್ಸ್ ಮತ್ತಿತರೆ ಹೊಂದಿದೆ
 • 2018 ಕ್ರೆಟಾ ಪ್ರಿ-ಫೇಸ್ ಲಿಫ್ಟ್ ಮಾದರಿಯ ಗುಣಲಕ್ಷಣಗಳಾದ ಸುಸಜ್ಜಿತ ಸಸ್ಪೆನ್ಷನ್ ಸೆಟಪ್ ಮತ್ತು ಮೆಚೂರ್ ರೈಡ್ ಗುಣಮಟ್ಟವನ್ನು ಮುಂದುವರೆಸಿದೆ

ನಾವು ಇಷ್ಟಪಡದ ವಿಷಯಗಳು

 • 2018 ಹ್ಯುಂಡೈ ಕ್ರೆಟಾ ಅಸಂಖ್ಯ ವಿಶೇಷತೆಗಳಾದ ಪವರ್ಡ್ ಟೈಲ್ ಗೇಟ್, ವೆಂಟಿಲೇಟೆಡ್ ಫ್ರಂಟ್ ಸೀಟುಗಳು ಮತ್ತು ಎಸಿ ಓಡರ್ ಎಲಿಮಿನೇಟರ್ ಹೊಂದಿಲ್ಲ, ಇವುಗಳನ್ನು ಹೆಚ್ಚು ಕೈಗೆಟುಕುವ ಹ್ಯುಂಡೈ ವರ್ನಾದಲ್ಲಿ ನೀಡಲಾಗುತ್ತಿದೆ
 • ಐಸೊಫಿಕ್ಸ್ ಚೈಲ್ಡ್ ಸೀಟ್ ಆಂಕರ್ಸ್ ಮತ್ತು ಪಾರ್ಕಿಂಗ್ ಸೆನ್ಸರ್ ಗಳು 2018 ಹ್ಯುಂಡೈ ಕ್ರೆಟಾದಲ್ಲಿ ಸ್ಟಾಂಡರ್ಡ್ ಆಗಿ ಬಂದಿಲ್ಲ. ಫೋರ್ಡ್ ಫ್ರೀಸ್ಟೈಲ್, ಇಕೊಸ್ಪೋರ್ಟ್ ಮತ್ತು ಮಾರುತಿ ಸುಝುಕಿ ವಿತಾರಾ ಬ್ರೆಝಾ ಅವುಗಳನ್ನು ಸ್ಟಾಂಡರ್ಡ್ ಆಗಿ ನೀಡುತ್ತಿವೆ.
 • ಎಡಬ್ಲ್ಯೂಡಿ (ಆಲ್-ವ್ಹೀಲ್-ಡ್ರೈವ್) ವೇರಿಯೆಂಟ್ ಲಭ್ಯವಿಲ್ಲ. ಹಲವು ರೆನಾಲ್ಟ್ ಡಸ್ಟರ್ ಒಳಗೊಂಡು ಇತರೆ ಅದೇ ಬೆಲೆಯ ಎಸ್.ಯು.ವಿ.ಗಳು 4ಡಬ್ಲ್ಯೂಡಿ/ಎಡಬ್ಲ್ಯೂಡಿ ಆಯ್ಕೆ ನೀಡುತ್ತವೆ.
 • ನೀವು ರೇಂಜ್-ಟಾಪಿಂಗ್ ಹ್ಯುಂಡೈ ಕ್ರೆಟಾ ಎಸ್ಎಕ್ಸ್(ಒ) ವೇರಿಯೆಂಟ್ ನಲ್ಲಿ ಆಟೊಮ್ಯಾಟಿಕ್ ಗೇರ್ಬಾಕ್ಸ್ ಇಲ್ಲ ಇದು ಸೈಡ್ ಮತ್ತು ಕರ್ಟನ್ ಏರ್ ಬ್ಯಾಗ್ಸ್ ನೊಂದಿಗೆ ಬಂದಿದೆ

ಉತ್ತಮ ವೈಶಿಷ್ಟ್ಯಗಳು

 • Pros & Cons of Hyundai Creta

  ವೈರ್ ಲೆಸ್ ಚಾರ್ಜಿಂಗ್: ಈ ವರ್ಗದ ವಿಶೇಷವಾದ ಫೀಚರ್ ಆಗಿದ್ದು ನಿಮ್ಮ ಫೋನ್ ಅನ್ನು ಕೇಬಲ್ ಗಳ ಅಗತ್ಯವಿಲ್ಲದೆ ಚಾರ್ಜ್ ಮಾಡುತ್ತದೆ(ವೈರ್ ಲೆಸ್ ಚಾರ್ಜಿಂಗ್ ಬೆಂಬಲಿಸುವ ಆಯ್ದ ಫೋನ್ ಗಳು). 

 • Pros & Cons of Hyundai Creta

  7-ಇಂಚು ಇನ್ಫೊಟೈನ್ ಮೆಂಟ್ ಸಿಸ್ಟಂ: ಐಪಿಎಸ್ ಡಿಸ್ಪ್ಲೇ ಹೊಂದಿರುವ ವಿಸ್ತಾರ ನೋಟದ ಕೋನಗಳನ್ನು ಆಂಡ್ರಾಯಿಡ್ ಆಟೊ ಮತ್ತು ಆಪಲ್ ಕಾರ್ ಪ್ಲೇ ಕನೆಕ್ಟಿವಿಟಿಯೊಂದಿಗೆ ನೀಡಲಾಗಿದೆ. 

 • Pros & Cons of Hyundai Creta

  ಎಲೆಕ್ಟ್ರಿಕ್ ಸನ್ ರೂಫ್: ಕ್ರೆಟಾದ ಸ್ಟೈಲ್ ಮತ್ತು ಕ್ಯಾಬಿನ್ ಏರ್ ಲೈನ್ಸ್ ಗೆ ಸೇರ್ಪಡೆಯಾಗುತ್ತದೆ

 • Pros & Cons of Hyundai Creta

  ಪವರ್ಡ್ ಡ್ರೈವರ್ ಸೀಟು: ಈ ವರ್ಗದ ವಿಶೇಷ ಫೀಚರ್ ಆಗಿದ್ದು ಕ್ರೆಟಾ ಫೇಸ್ ಲಿಫ್ಟ್ ನ ಪ್ರೀಮಿಯಂ ಕೋಷೆಂಟ್ ಹೆಚ್ಚಿಸುತ್ತದ

space Image

ಹುಂಡೈ ಕ್ರೆಟಾ ಬಳಕೆದಾರರ ವಿಮರ್ಶೆಗಳು

4.2/5
ಆಧಾರಿತ468 ಬಳಕೆದಾರರ ವಿಮರ್ಶೆಗಳು
Write a Review and Win
An iPhone 7 every month!
Iphone
 • All (220)
 • Looks (80)
 • Comfort (59)
 • Mileage (30)
 • Engine (19)
 • Interior (34)
 • Space (4)
 • Price (12)
 • More ...
 • ಇತ್ತೀಚಿನ
 • ಸಹಾಯಕವಾಗಿದೆಯೆ
 • CRITICAL
 • Awesome Car With Greta Features.

  Awesome Car with great features. New Hyundai Creta is much better than the previous Creta, the base variant of this car also gives good package especially interior of new...ಮತ್ತಷ್ಟು ಓದು

  ಇವರಿಂದ yash nandu
  On: Apr 07, 2020 | 314 Views
 • Awesome Car with Greta features

  New Hyundai Creta is much better than the previous Creta, the base variant of this car also gives good package specially interior of new Creta looks premium. It also look...ಮತ್ತಷ್ಟು ಓದು

  ಇವರಿಂದ gautam
  On: Apr 06, 2020 | 231 Views
 • Creta Is The Best Powerful SUV

  Creta is the best powerful SUV because muscular and mighty and it has BS6 petrol and Turbo petrol and 1.5l diesel engine.

  ಇವರಿಂದ ambarish gupta
  On: Apr 07, 2020 | 42 Views
 • Good Looking And New Rear Look

  The best car 2020 Creta low price good looking and new trending young age people nice look driving cool.

  ಇವರಿಂದ sasi
  On: Apr 07, 2020 | 76 Views
 • Awesome Car with Great Features

  Value for money SX manual is value for money. Features given are good as compared to other products in the market. Pricing is decent but it can be more inexpensive and it...ಮತ್ತಷ್ಟು ಓದು

  ಇವರಿಂದ sanjeev sengar
  On: Apr 06, 2020 | 100 Views
 • ಎಲ್ಲಾ ಕ್ರೆಟಾ ವಿರ್ಮಶೆಗಳು ವೀಕ್ಷಿಸಿ
space Image

ಹುಂಡೈ ಕ್ರೆಟಾ ವೀಡಿಯೊಗಳು

 • All New Hyundai Creta In The Flesh! | Interiors, Features, Colours, Engines, Launch | ZigWheels.com
  6:9
  All New Hyundai Creta In The Flesh! | Interiors, Features, Colours, Engines, Launch | ZigWheels.com
  mar 17, 2020
 • Hyundai Creta 2020 vs Kia Seltos | How Do I Pick One? | Zigwheels.com
  3:46
  Hyundai Creta 2020 vs Kia Seltos | How Do I Pick One? | Zigwheels.com
  apr 02, 2020
 • 2020 Hyundai Creta Launched| Price, Features, Engine Details #in2mins | CarDekho.com
  2:21
  2020 Hyundai Creta Launched| Price, Features, Engine Details #in2mins | CarDekho.com
  mar 25, 2020
 • 2020 Hyundai Creta Detailed Walkaround | Kia Seltos  ?| Cardekho.com
  10:45
  2020 Hyundai Creta Detailed Walkaround | Kia Seltos ?| Cardekho.com
  mar 08, 2020

ಹುಂಡೈ ಕ್ರೆಟಾ ಬಣ್ಣಗಳು

 • ಗ್ಯಾಲಕ್ಸಿ-ನೀಲಿ-ಲೋಹೀಯ
  ಗ್ಯಾಲಕ್ಸಿ-ನೀಲಿ-ಲೋಹೀಯ
 • ಟೈಫೂನ್ ಸಿಲ್ವರ್
  ಟೈಫೂನ್ ಸಿಲ್ವರ್
 • ಕೆಂಪು mulberry
  ಕೆಂಪು mulberry
 • ಫ್ಯಾಂಟಮ್ ಬ್ಲಾಕ್
  ಫ್ಯಾಂಟಮ್ ಬ್ಲಾಕ್
 • ಲಾವಾ ಆರೆಂಜ್ ಡ್ಯುಯಲ್ ಟೋನ್
  ಲಾವಾ ಆರೆಂಜ್ ಡ್ಯುಯಲ್ ಟೋನ್
 • ಪೋಲಾರ್ ವೈಟ್ ಡ್ಯುಯಲ್ ಟೋನ್
  ಪೋಲಾರ್ ವೈಟ್ ಡ್ಯುಯಲ್ ಟೋನ್
 • ಡೀಪ್ ಫಾರೆಸ್ಟ್
  ಡೀಪ್ ಫಾರೆಸ್ಟ್
 • ಪೋಲಾರ್ ವೈಟ್
  ಪೋಲಾರ್ ವೈಟ್

ಹುಂಡೈ ಕ್ರೆಟಾ ಚಿತ್ರಗಳು

 • ಚಿತ್ರಗಳು
 • Hyundai Creta Front Left Side Image
 • Hyundai Creta Rear Left View Image
 • Hyundai Creta Front View Image
 • Hyundai Creta Grille Image
 • Hyundai Creta Headlight Image
 • CarDekho Gaadi Store
 • Hyundai Creta Wheel Image
 • Hyundai Creta Exterior Image Image
space Image

ಹುಂಡೈ ಕ್ರೆಟಾ ಸುದ್ದಿ

ಹುಂಡೈ ಕ್ರೆಟಾ ರಸ್ತೆ ಪರೀಕ್ಷೆ

Second Hand ಹುಂಡೈ ಕ್ರೆಟಾ ಕಾರುಗಳು in

ನವ ದೆಹಲಿ
 • ಹುಂಡೈ ಕ್ರೆಟಾ 1.4 ಸಿಆರ್ಡಿಐ ಬೇಸ್
  ಹುಂಡೈ ಕ್ರೆಟಾ 1.4 ಸಿಆರ್ಡಿಐ ಬೇಸ್
  Rs6.5 ಲಕ್ಷ
  20151,25,000 Kmಡೀಸಲ್
  ವಿವರಗಳ ವೀಕ್ಷಣೆ
 • ಹುಂಡೈ ಕ್ರೆಟಾ 1.4 ಸಿಆರ್ಡಿಐ ಎಸ್‌ ಪ್ಲಸ್
  ಹುಂಡೈ ಕ್ರೆಟಾ 1.4 ಸಿಆರ್ಡಿಐ ಎಸ್‌ ಪ್ಲಸ್
  Rs7.75 ಲಕ್ಷ
  201555,000 Kmಡೀಸಲ್
  ವಿವರಗಳ ವೀಕ್ಷಣೆ
 • ಹುಂಡೈ ಕ್ರೆಟಾ 1.6 ವಿಟಿವಿಟಿ ಎಸ್
  ಹುಂಡೈ ಕ್ರೆಟಾ 1.6 ವಿಟಿವಿಟಿ ಎಸ್
  Rs7.9 ಲಕ್ಷ
  201545,456 Kmಪೆಟ್ರೋಲ್
  ವಿವರಗಳ ವೀಕ್ಷಣೆ
 • ಹುಂಡೈ ಕ್ರೆಟಾ 1.6 ವಿಟಿವಿಟಿ ಎಸ್
  ಹುಂಡೈ ಕ್ರೆಟಾ 1.6 ವಿಟಿವಿಟಿ ಎಸ್
  Rs8.25 ಲಕ್ಷ
  201631,000 Kmಪೆಟ್ರೋಲ್
  ವಿವರಗಳ ವೀಕ್ಷಣೆ
 • ಹುಂಡೈ ಕ್ರೆಟಾ 1.6 ವಿಟಿವಿಟಿ ಎಸ್
  ಹುಂಡೈ ಕ್ರೆಟಾ 1.6 ವಿಟಿವಿಟಿ ಎಸ್
  Rs8.3 ಲಕ್ಷ
  201645,000 Kmಪೆಟ್ರೋಲ್
  ವಿವರಗಳ ವೀಕ್ಷಣೆ
 • ಹುಂಡೈ ಕ್ರೆಟಾ 1.6 ವಿಟಿವಿಟಿ ಎಸ್‌ಎಕ್ಸ್ ಪ್ಲಸ್ dual tone
  ಹುಂಡೈ ಕ್ರೆಟಾ 1.6 ವಿಟಿವಿಟಿ ಎಸ್‌ಎಕ್ಸ್ ಪ್ಲಸ್ dual tone
  Rs8.3 ಲಕ್ಷ
  201540,000 Kmಪೆಟ್ರೋಲ್
  ವಿವರಗಳ ವೀಕ್ಷಣೆ
 • ಹುಂಡೈ ಕ್ರೆಟಾ 1.4 ಸಿಆರ್ಡಿಐ ಎಸ್‌ ಪ್ಲಸ್
  ಹುಂಡೈ ಕ್ರೆಟಾ 1.4 ಸಿಆರ್ಡಿಐ ಎಸ್‌ ಪ್ಲಸ್
  Rs8.4 ಲಕ್ಷ
  201670,000 Kmಡೀಸಲ್
  ವಿವರಗಳ ವೀಕ್ಷಣೆ
 • ಹುಂಡೈ ಕ್ರೆಟಾ 1.4 ಸಿಆರ್ಡಿಐ ಎಸ್‌
  ಹುಂಡೈ ಕ್ರೆಟಾ 1.4 ಸಿಆರ್ಡಿಐ ಎಸ್‌
  Rs8.4 ಲಕ್ಷ
  201660,000 Kmಡೀಸಲ್
  ವಿವರಗಳ ವೀಕ್ಷಣೆ

Write your Comment on ಹುಂಡೈ ಕ್ರೆಟಾ

3 ಕಾಮೆಂಟ್ಗಳು
1
u
user
Mar 16, 2020 12:41:05 PM

it is best car for low price its is look very fantastic it is very shony car .

  ಪ್ರತ್ಯುತ್ತರ
  Write a Reply
  1
  K
  karan
  Feb 2, 2020 8:55:23 PM

  We are thinking to buy a car creta.Can u tell us that which model is best old version or new version.

   ಪ್ರತ್ಯುತ್ತರ
   Write a Reply
   1
   s
   sudhakar
   Dec 24, 2019 5:33:58 PM

   Dear Buyers, Creta is car where you will feel the comfort and driver safe car. Who ever buying the car they should go blindly and buy. its worth taking car in SUV models

    ಪ್ರತ್ಯುತ್ತರ
    Write a Reply
    space Image
    space Image

    ಭಾರತ ರಲ್ಲಿ ಹುಂಡೈ ಕ್ರೆಟಾ ಬೆಲೆ

    ನಗರಹಳೆಯ ಶೋರೂಮ್ ಬೆಲೆ
    ಮುಂಬೈRs. 9.99 - 17.2 ಲಕ್ಷ
    ಬೆಂಗಳೂರುRs. 9.98 - 17.19 ಲಕ್ಷ
    ಚೆನ್ನೈRs. 9.99 - 17.2 ಲಕ್ಷ
    ಹೈದರಾಬಾದ್Rs. 9.99 - 17.2 ಲಕ್ಷ
    ತಳ್ಳುRs. 9.99 - 17.2 ಲಕ್ಷ
    ಕೋಲ್ಕತಾRs. 9.99 - 17.2 ಲಕ್ಷ
    ಕೊಚಿRs. 10.09 - 17.35 ಲಕ್ಷ
    ನಿಮ್ಮ ನಗರವನ್ನು ಆರಿಸಿ

    ಟ್ರೆಂಡಿಂಗ್ ಹುಂಡೈ ಕಾರುಗಳು

    • ಪಾಪ್ಯುಲರ್
    • ಉಪಕಮಿಂಗ್
    ×
    ನಿಮ್ಮ ನಗರವು ಯಾವುದು?