• login / register
 • ಹೋಂಡಾ ಸಿವಿಕ್‌ front left side image
1/1
 • Honda Civic
  + 79ಚಿತ್ರಗಳು
 • Honda Civic
 • Honda Civic
  + 4ಬಣ್ಣಗಳು
 • Honda Civic

ಹೋಂಡಾ ಸಿವಿಕ್‌

ಕಾರು ಬದಲಾಯಿಸಿ
266 ವಿರ್ಮಶೆಗಳುಈ ಕಾರಿಗೆ ಅಂಕಗಳನ್ನು ನೀಡಿ
Rs.17.93 - 21.24 ಲಕ್ಷ *
*ಎಕ್ಸ್ ಶೋ ರೂಂ ಬೆಲೆಯು ನವ ದೆಹಲಿ
ವೀಕ್ಷಿಸಿ <stringdata> ಕೊಡುಗೆ
ಈ ತಿಂಗಳ ಹಬ್ಬದ ಆಫರ್ ಅನ್ನು ಕಳೆದುಕೊಳ್ಳಬೇಡಿ

ಹೋಂಡಾ ಸಿವಿಕ್‌ ನ ಪ್ರಮುಖ ಸ್ಪೆಕ್ಸ್

ಮೈಲೇಜ್ (ಇಲ್ಲಿಯವರೆಗೆ)16.5 ಕೆಎಂಪಿಎಲ್
ಇಂಜಿನ್ (ಇಲ್ಲಿಯವರೆಗೆ)1799 cc
ಬಿಹೆಚ್ ಪಿ139.46
ಟ್ರಾನ್ಸ್ಮಿಷನ್ಸ್ವಯಂಚಾಲಿತ
ಸೀಟುಗಳು5
boot space430

ಸಿವಿಕ್‌ ಇತ್ತೀಚಿನ ಅಪ್ಡೇಟ್

ಇತ್ತೀಚಿನ ವಿಷಯಗಳು :ಹೋಂಡಾ ಪರಿಚಯಿಸಿದೆ 'ಎನಿ ಟೈಮ್ ವಾರಂಟಿ ' ಒಟ್ಟು 10 ವರ್ಷ /1,20,000km ವರೆಗೆ ತನ್ನ ಕಾರ್ ಗಳ ಮೇಲೆ

ಹೋಂಡಾ ಸಿವಿಕ್ ಬೆಲೆ ಹಾಗು ವೇರಿಯೆಂಟ್ ಗಳು: ಅದನ್ನು ಮೂರು ವೇರಿಯೆಂಟ್ ಗಳಲ್ಲಿ ಕೊಡಲಾಗಿದೆ :  V (ಪೆಟ್ರೋಲ್ ಮಾತ್ರ ), VX ಹಾಗು ZX. ಪೆಟ್ರೋಲ್ ವೇರಿಯೆಂಟ್ ಗಳ ಬೆಲೆ ರೂ 17.93 ಲಕ್ಷ ಹಾಗು ರೂ  21.24 ಲಕ್ಷ ನಡುವೆ ಇರಲಿದೆ. ಹಾಗು ಡೀಸೆಲ್ ವೇರಿಯೆಂಟ್ ಗಳ ಬೆಲೆ ರೂ 20.54 ಲಕ್ಷ ಹಾಗು ರೂ 22.34 ಲಕ್ಷ ನಡುವೆ ಇರಲಿದೆ (ಎಲ್ಲ ಬೆಲೆ ಗಳು ಎಕ್ಸ್ ಶೋ ರೂಮ್ ಭಾರತಾದ್ಯಂತ )

ಹೋಂಡಾ ಸಿವಿಕ್ ಎಂಜಿನ್ ಹಾಗು ಟ್ರಾನ್ಸ್ಮಿಷನ್: ಎರೆಡು ಎಂಜಿನ್ ಆಯ್ಕೆ ಗಳನ್ನು ಕೊಡಲಾಗಿದೆ 1.8-ಲೀಟರ್ ಪೆಟ್ರೋಲ್ ಎಂಜಿನ್ ಹಾಗು  1.6-ಲೀಟರ್ ಡೀಸೆಲ್. ಪೆಟ್ರೋಲ್ ಎಂಜಿನ್ ಕೇವಲ CVT ಒಂದಿಗೆ ಲಭ್ಯವಿರುತ್ತದೆ ಹಾಗು ಅದು ಗರಿಷ್ಟ 141PS ಹಾಗು 174Nm ಕೊಡುತ್ತದೆ, ಹಾಗು ಡೀಸೆಲ್ 120PS/300Nm ಕೊಡುತ್ತದೆ ಮತ್ತು ಅವುಗಳನ್ನು 6-ಸ್ಪೀಡ್ ಮಾನ್ಯುಯಲ್ ಒಂದಿಗೆ ಕೊಡಲಾಗುತ್ತದೆ. 

ಹೋಂಡಾ ಸಿವಿಕ್ ಮೈಲೇಜ್ : ಅಧಿಕೃತ ಮೈಲೇಜ್ ಸಂಖ್ಯೆಗಳು 16.5kmpl ಪೆಟ್ರೋಲ್ -ಆಟೋಮ್ಯಾಟಿಕ್ ಯುನಿಟ್ ಗೆ ಹಾಗು  26.8kmpl ಡೀಸೆಲ್ ಮಾನ್ಯುಯಲ್ ಗೆ. 

ಹೋಂಡಾ ಸಿವಿಕ್ ಸುರಕ್ಷತೆ: ಅದು ಪಡೆದಿದೆ 5-ಸ್ಟಾರ್  ASEAN NCAP ರೇಟಿಂಗ್. ಸುರಕ್ಷತೆ ತಂತ್ರಜ್ಞಾನ ದಲ್ಲಿ ಸೇರಿದೆ ನಾಲ್ಕು ಫ್ರಂಟ್ ಏರ್ಬ್ಯಾಗ್ ಗಳು, ABS ಜೊತೆಗೆ  EBD, ಹಾಗು ISOFIX ಚೈಲ್ಡ್ ಸೀಟ್ ಮೌಂಟ್ ಗಳು ಸ್ಟ್ಯಾಂಡರ್ಡ್ ಆಗಿ. ಕರ್ಟನ್ ಏರ್ಬ್ಯಾಗ್ ಗಳನ್ನು ಕೇವಲ ಟಾಪ್ ಸ್ಪೆಕ್ ವೇರಿಯೆಂಟ್ ನಲ್ಲಿ ಕೊಡಲಾಗಿದೆ.

ಹೋಂಡಾ ಸಿವಿಕ್ ಫೀಚರ್ ಗಳು: ಹೊಸ ಸಿವಿಕ್ ನಲ್ಲಿ ಫೀಚರ್ ಗಳಾದ ಹೋಂಡಾ ಅವರ ಲೇನ್ ವಾಚ್ ಕ್ಯಾಮೆರಾ, ಮಲ್ಟಿ ವ್ಯೂ ರೇರ್ ಪಾರ್ಕಿಂಗ್ ಕ್ಯಾಮೆರಾ ಹಾಗು ರೇವೂರ್ ಪಾರ್ಕಿಂಗ್ ಸೆನ್ಸರ್ ಗಳು. ಹೋಂಡಾ ಸಿವಿಕ್ ನಲ್ಲಿ 7-ಇಂಚು  IPS ಡಿಸ್ಪ್ಲೇ ಯನ್ನು ಇನ್ಫೋಟೈನ್ಮೆಂಟ್ ಸಿಸ್ಟಮ್ ಜೊತೆಗೆ ಆಂಡ್ರಾಯ್ಡ್ ಆಟೋಹಾಗೂ ಆಪಲ್ ಕಾರ್ ಪ್ಲೇ ಕಂಪ್ಯಾಟಿಬಿಲಿಟಿ , 8-ವೇ ಪವರ್ ಅಳವಡಿಕೆಯ ಡ್ರೈವರ್ ಸೀಟ್, ಡುಯಲ್ ಜೋನ್ AC ಹಾಗು ಎಲೆಕ್ಟ್ರಿಕ್ ಸನ್ ರೂಫ್ ಕೊಡಲಾಗಿದೆ. 

ಹೋಂಡಾ ಸಿವಿಕ್ ಪ್ರತಿಸ್ಪರ್ಧೆ : ಅದರ ಪ್ರತಿಸ್ಪರ್ಧೆ ಟೊಯೋಟಾ ಕಾರೊಲ್ಲ ಆಲ್ಟಿಸ್, ಹುಂಡೈ ಎಲಾನ್ತ್ರ ಹಾಗು ಸ್ಕೊಡಾ  ಓಕ್ಟಾವಿಯಾ ಗಳೊಂದಿಗೆ ಇರುತ್ತದೆ.

ಹೋಂಡಾ ಸಿವಿಕ್‌ ಬೆಲೆ ಪಟ್ಟಿ (ರೂಪಾಂತರಗಳು)

ಸಿವಿಕ್ ವಿ1799 cc, ಸ್ವಯಂಚಾಲಿತ, ಪೆಟ್ರೋಲ್, 16.5 ಕೆಎಂಪಿಎಲ್Rs.17.93 ಲಕ್ಷ *
ವಿಎಕ್ಸ್1799 cc, ಸ್ವಯಂಚಾಲಿತ, ಪೆಟ್ರೋಲ್, 16.5 ಕೆಎಂಪಿಎಲ್Rs.19.44 ಲಕ್ಷ*
ಝಡ್ಎಕ್ಸ್1799 cc, ಸ್ವಯಂಚಾಲಿತ, ಪೆಟ್ರೋಲ್, 16.5 ಕೆಎಂಪಿಎಲ್
ಅಗ್ರ ಮಾರಾಟ
Rs.21.24 ಲಕ್ಷ*
Ask Question

Are you Confused?

Ask anything & get answer ರಲ್ಲಿ {0}

ಪ್ರಶ್ನೆಗಳು & ಉತ್ತರಗಳು

 • ಇತ್ತೀಚಿನ ಪ್ರಶ್ನೆಗಳು

ಹೋಂಡಾ ಸಿವಿಕ್‌ ಇದೇ ಕಾರುಗಳೊಂದಿಗೆ ಹೋಲಿಕೆ

ನವ ದೆಹಲಿ ರಲ್ಲಿ ಎಕ್ಸ್ ಶೋ ರೂಂ ಬೆಲೆ

ಹೋಂಡಾ ಸಿವಿಕ್‌ ವಿಮರ್ಶೆ

ಹೋಂಡಾ ನವರು ಭಾರತದಲ್ಲಿ  ಸಿವಿಕ್ ಅನ್ನು 2006 ನಲ್ಲಿ ಬಿಡುಗಡೆ ಮಾಡಿದಾಗ , ಅದು ಬಿರುಗಾಳಿ ಎಬ್ಬಿಸಿತ್ತು. ಯುವ ಗ್ರಾಹಕರು ಸಿಟಿ ಮಾಡೆಲ್ ಅನ್ನು ಇಷ್ಟ ಪಡುತ್ತಿದ್ದರು ಅಂಥವರಿಗೆ ಇದು ಸಹಜ ನವೀಕರಣ ಆಗಿ ಪರಿಣಮಿಸಿತು, ಹಾಗು ಯಾರು ಉಪಯುಕ್ತ ಆದರೆ ಸಾಮಾನ್ಯ ಶೈಲಿಯ ಕೊರೋಲಾ ವನ್ನು ಇಷ್ಟ ಪಡುತ್ತಿರಲಿಲ್ಲ ಅಂಥವರಿಗೆ ಸಿವಿಕ್ ಆಕರ್ಷಕವಾಗಿ ಕಾಣಿಸಿತು. ಅದರ ಡಿಸೈನ್ ಆಕರ್ಷಕವಿತ್ತು ಹಾಗು ಆಂತರಿಕಗಳು ಈಗಲೂ ಸಹ ಹೆಚ್ಚು ಆಧುನಿಕವಾಗಿ ಕಾಣಿಸುತ್ತದೆ ಮತ್ತು ಅದರಲ್ಲಿರುವ ಮೋಟಾರ್ ಉತ್ಸಾಹ ತುಂಬುವ ಭರವಸೆ ನೀಡಿತ್ತು. 

13 ವರ್ಷಗಳ ನಂತರ ಸಿವಿಕ್ ಈಗಲೂ ಹಾಗೆ ಉಳಿದಿದೆ, ಕೇವಲ ಸಮಯಕ್ಕೆ ತಕ್ಕ ಬದಲಾವಣೆ ಮಾಡಲಾಗಿದೆ, ಅದು ಒಟ್ಟಾರೆ  ಗರಿಷ್ಟ ಉಪಯುಕ್ತತೆ ಹೊಂದಿರುವ ಕಾರ್ ಆಗಿಲ್ಲ. ನಾವು ಹೊಸ ಪೀಳಿಗೆಯ ಮಾಡೆಲ್ ಹೆಚ್ಚು ಆಕರ್ಷಣೆ ಪಡೆದಿದೆಯೇ ಎಂದು ನೋಡೋಣ. 

ಹೋಂಡಾ ಸಿವಿಕ್ ಬೆಲೆ ವ್ಯಾಪ್ತಿ ರೂ  17.7 ಲಕ್ಷ ದಿಂದ ರೂ  22.3 ಲಕ್ಷ ಎಂದು ನಿರೀಕ್ಷಿಸಲಾಗಿದೆ. ನಾವು ಪ್ರಾಮಾಣಿಕವಾಗಿರೋಣ ಅದು ಗರಿಷ್ಟ ಉಪಯುಕ್ತತೆ ಹೊಂದಿರುವ ಕಾರ್ ಆಗಿಲ್ಲ. ಕೆಳ ಮಟ್ಟದ ಸೀಟ್ ಗಳು ವಯಸ್ಕ ಪ್ರಯಾಣಿಕರಿಂದ ಹೆಚ್ಚು ಮೆಚ್ಚುಗೆ ಪಡೆಯುವುದಿಲ್ಲ, CVT ಹೆಚ್ಚು ಉತ್ಸಾಹ ತುಂಬುವುದಿಲ್ಲ ಹಾಗು ವಿಶಾಲತೆ ಬ್ಯಾಕ್ ಸೀಟ್ ನಲ್ಲಿರುವ ಮಾಲೀಕರ ಮೆಚ್ಚುಗೆ ಪಡೆಯುವುದಿಲ್ಲ. ಹಾಗು ಕೆಲವರು ಹೇಳಬಹುದು ಇದರಲ್ಲಿ ಇನ್ನು ಹೆಚ್ಚು ಫೀಚರ್ ಗಳಾದ ಮೆಮೊರಿ ಸೀಟ್ ಗಳು, ಎಲೆಕ್ಟ್ರಿಕ್ ಸರಿಪಡಿಸುವಿಕೆ ಸೀಟ್ ಅನ್ನು ಕೋ ಡ್ರೈವರ್ ಸೀಟ್ ಗಾಗಿ , ಹಾಗು ಮುಂಬದಿ ಪಾರ್ಕಿಂಗ್ ಸೆನ್ಸರ್ ಗಳನ್ನು ಗ್ರಾಹಕರ ಆಕರ್ಷಣೆಗಾಗಿ  ಕೊಡಬಹುದಿತ್ತು ಎಂದು. 

ಆದರೆ ಡೀಲ್ ಇಲ್ಲಿದೆ. ಇವುಗಳಲ್ಲಿ ಯಾವುದೂ ಹೆಚ್ಚು ಪ್ರಾಮುಖ್ಯತೆ ಪಡೆಯುವುದಿಲ್ಲ ನೀವು ಅದನ್ನು ನೋಡಿದಾಗ, ಹಾಗು ಅದರ ಜೊತೆ ಸಮಯ ಕಳೆದಾಗ. ಅದು ಆಶ್ಚರ್ಯಕರ ಡಿಸೈನ್ ಪಡೆದಿದೆ, ಹಾಗು ಆಂತರಿಕಗಳು ಮಕ್ಕಳಿಗೆ ಹೆಚ್ಚು ಮೆಚ್ಚುಗೆ ಆಗಬಹುದು. ನಿಮಗೆ ಹೆಚ್ಚು ಮೈಲೇಜ್ ಬೇಕೆನಿಸಿದರೆ ಡೀಸೆಲ್ ಎಂಜಿನ್ ಆಯ್ಕೆ ಲಭ್ಯವಿದೆ, ಹಾಗು ನಯವಾದ ಪೆಟ್ರೋಲ್ ಎಂಜಿನ್ ಎಂದಿನಂತೆ ಮೆಚ್ಚುಗೆ ಪಡೆಯುತ್ತದೆ.

ಎಕ್ಸ್‌ಟೀರಿಯರ್

ಸಿವಿಕ್ ಏನಾದರು ಮಾತನಾಡುವ ಹಾಗೆ ಇದ್ದಿದ್ದರೆ ಅದು ಹೇಳುವ  ಮೊದಲ ಪದಗಳು "ನನ್ನನ್ನು ನೋಡು !" ಅದು ನೋಡಲು ಐಷಾರಾಮಿಯಾಗಿದೆ ಹಾಗು ಹೋಂಡಾ ಅಕಾರ್ಡ್ ನ ನೇರ ವಂಶಸ್ಥರು ಎಂದು ಹೇಳಬಹುದು. ಪರಿಚಿತ ಹೋಂಡಾ ತುಣುಕುಗಳಾದ ದೊಡ್ಡ ಗ್ರಿಲ್ ಹೆಚ್ಚು ಕ್ರೋಮ್ ಗಳೊಂದಿಗೆ, ಹನಿ ಕಾಂಬ ವಿವರಗಳು ವೆಂಟ್ ಗಳಲ್ಲಿ ಕೊಡಲಾಗಿದ್ದು ಅದು ಆಕರ್ಷಕ ಗೆರೆಗಳನ್ನು ಹೊಂದಿದೆ ಕೂಡ.

ಸ್ವಲ್ಪ ಕಾಯಿರಿ. ನಾವು ಅದನ್ನು ಸೆಡಾನ್ ಎನ್ನಬೇಕೇ? ಏಕೇಂದರೆ  ನಾವು ಅದನ್ನು ಬದಿಗಳಿಂದ ನೋಡಿದಾಗ ಅದು ಹ್ಯಾಚ್ ಬ್ಯಾಕ್ ಜೊತೆಗೆ ಎತ್ತರದ ಹಿಂಬದಿ ಹೊಂದಿರುವಂತೆ ಕಾಣುತ್ತದೆ ಸಾಮಾನ್ಯ ಮೂರು - ಬಾಕ್ಸ್ ಸೆಡಾನ್ ಗಿಂತ  ಭಿನ್ನವಾಗಿ. ಹಳೆಯ ಕಾರ್ ನಂತೆ , ಸಿವಿಕ್ ನಲ್ಲಿ ಲೊ ಸ್ಲಗ್ ಡಿಸೈನ್ ಕೊಡಲಾಗಿದೆ, ಅದರಿಂದ  ಸ್ಪರ್ಧಾತ್ಮಕ ನಿಲುವು ದೊರೆತಿದೆ. ಪೂರ್ಣ -LED ಹೆಡ್ ಲ್ಯಾಂಪ್ ಗಳು, ಹಾಗು ಹೆಚ್ಚು ಆಕರ್ಷಕ 17-ಇಂಚು ಮಷೀನ್ ಫಿನಿಷ್ ಹೊಂದಿರುವ ಅಲಾಯ್ ವೀಲ್ ಗಳು  ಹೆಚ್ಚು ಆಕರ್ಷತೆ ಕೊಡುತ್ತದೆ.

ಹೋಂಡಾ ಸಿವಿಕ್ ಹೆಚ್ಚು ಎತ್ತರ ಹೊಂದಿಲ್ಲ ಅದರ ಪ್ರತಿಸ್ಪರ್ದಿಗಳಿಗೆ ಹೋಲಿಸಿದರೆ. ಆದರೆ, ಅದು ಅಗಲವಾಗಿದೆ , ಬಹಳಷ್ಟು ಅಂತರದಿಂದ ಪ್ರತಿಸ್ಪರ್ದಿಗಳಿಗೆ ಹೋಲಿಸಿದರೆ. XL-ಅಳತೆಯ ತ್ರಿಕೋನ ಟೈಲ್ ಲ್ಯಾಂಪ್ ಗಳು ಬೂಟ್ ಲೀಡ್ ವರೆಗೂ ವ್ಯಾಪಿಸಿದೆ  ರಾತ್ರಿಯಲ್ಲಿ ನೋಡಲು ಆಕರ್ಷಕವಾಗಿದೆ ಏಕೆಂದರೆ ಬೂಟ್ ಲೀಡ್ ಮೇಲೆ ಇರುವ ಟೈಲ್ ಲ್ಯಾಂಪ್ ತುಣುಕುಗಳು ಸಹ ಬೆಳಗುತ್ತದೆ.

ಒಟ್ಟಾರೆ ಸಿವಿಕ್ ನ ಡಿಸೈನ್ ಸದೃಢವಾಗಿದೆ ಹಾಗು ಹಳೆಯ ಪೀಳಿಗೆಯಂತೆ ಆಕರ್ಷಕವಾಗಿದೆ. ಡಿಸೈನ್ ಸಹ ಗಮನಾರ್ಹವಾಗಿ ಇದೆ, ನಮ್ಮ ಅನಿಸಿಕೆಯಂತೆ ಧೀರ್ಘ ಕಾಲದ ವರೆಗೆ ಆಕರ್ಷಕವಾಗಿರುತ್ತದೆ.

 

ಇಂಟೀರಿಯರ್

ಚಿರ ಪರಿಚಿತ , ಎಂದು ಹೇಳಬಹುದು ನೀವು ಕ್ಯಾಬಿನ್ ಅನ್ನು ಪ್ರವೇಶಿಸಿ ನೋಡಿದಾಗ ಡ್ರೈವರ್ ಗೆ ಹೆಚ್ಚು ಪ್ರಾಮುಖ್ಯತೆ ಕೊಡಲಾಗಿದೆ ಎಂದು ತಿಳಿಯುತ್ತದೆ. ಸೀಟಿಂಗ್ ಸ್ಥಿತಿ ಗತಿ ಕಡಿಮೆ ಎತ್ತರ ಹೊಂದಿದೆ ಹಾಗು ಡ್ಯಾಶ್ ಬೋರ್ಡ್ ಅದರ ಸುತ್ತಲೂ ಇದೆ. ಅದು ಪರಿಚಿತ  ಅನುಭವವನ್ನು ಕೊಡುತ್ತದೆ ಕೂಲ್ ಬ್ಲೂ ಹಾಗು ರೆಡ್ ಲೈಟಿಂಗ್ ಗಳನ್ನು ಇನ್ಸ್ಟ್ರುಮೆಂಟ್ ಕ್ಲಸ್ಟರ್ ನಲ್ಲಿ ಕೊಡುವುದರೊಂದಿಗೆ. ಹಾಗು ಸೆಂಟ್ರಲ್ ಕನ್ಸೋಲ್ ಡ್ರೈವರ್ ಕಡೆಗೆ  ಸ್ವಲ್ಪ ಬಾಗಿದೆ. ಆದರೆ ನಮಗೆ ಹಳೆ ಸಿವಿಕ್ ನ  ಡಿಜಿಟಲ್ ಸ್ಪೀಡೊ ಮೀಟರ್ ಅನ್ನು ಮೇಲ್ಬಾಗದಲ್ಲಿ ಕೊಡಲಾಗಿದ್ದ   ಸ್ಪ್ಲಿಟ್ ಡ್ಯಾಶ್ ಬೋರ್ಡ್ ಅನ್ನು ಮಿಸ್ ಮಾಡಿಕೊಂಡ ಅನುಭವ ಉಂಟಾಗುತ್ತದೆ.

ಪ್ರಮುಖ ವಿಷಯಗಳಲ್ಲಿ, ಸಿವಿಕ್ ನಲ್ಲಿ ನಿಮಗೆ ದೊರೆಯುತ್ತದೆ ಟಿಲ್ಟ್ ಹಾಗು ಟೆಲೆಸ್ಕೋಪಿಕ್ ಅಡ್ಜಸ್ಟ್ ಗಳು ಸ್ಟಿಯರಿಂಗ್ ಗಾಗಿ, ಹಾಗು ಸೀಟ್ ಅನ್ನು 8 ವೆ ಗಳಲ್ಲಿ ಸರಿಹೊಂದಿಸಬಹುದು ಅದು ನಿಮಗೆ ಉತ್ತಮ ಡ್ರೈವಿಂಗ್ ಬಂಗಿ ಕೊಡುತ್ತದೆ. ನಿಮಗೆ ಲೊ -ಸೀಟಿಂಗ್ ಕಾರ್ ಅಷ್ಟು ಹೊಂದ್ದಿದ್ದರೆ , ನೀವು ಸಿವಿಕ್ ಅನ್ನು ಹಲವು ಬಾರಿ ಡ್ರೈವ್ ಮಾಡಬೇಕಾಗುತ್ತದೆ ಅದರ ಅಳತೆಗಳ ಬಗ್ಗೆ ಹೊಂದಿಕೊಳ್ಳಲು. 

ಹಾಗು, ಮುಂಬದಿ ಸೀಟ್ ಗಳು ಕಡಿದಾಗಿದೆ. ದಡೂತಿ ದೇಹದ ಪ್ಯಾಸೆಂಜರ್ ಗಳಿಗೆ ಶೌಲ್ಡರ್ ರೂಮ್ ಕಡಿಮೆ ಇರುವ ಅನುಭವ ಉಂಟಾಗುತ್ತದೆ. ಚಪ್ಪಟೆ ಸೀಟ್ ಬೇಸ್ ನಿಮಗೆ ತೊಡೆಗಳಿಗೆ ಕಡಿಮೆ ಬೆಂಬಲ ದೊರೆಯುವ ಹಾಗೆ ಮಾಡುತ್ತದೆ. ಹಾಗಾಗಿ ನಿಮಗೆ ಮೊಣಕಾಲನ್ನು ಸ್ವಲ್ಪ ಮೇಲಕ್ಕೆ ಇರಿಸಿಕೊಳ್ಳುವ ಹಾಗೆ ಮಾಡುತ್ತದೆ. ಅದು ಅಷ್ಟೇನೂ ಸಮಸ್ಯೆ ಆಗುವುದಿಲ್ಲ ಏಕೆಂದರೆ ಸೀಟ್ ಎತ್ತರವನ್ನು ಸರಿಪಡಿಸಬಹುದು ಈ ಸಮಸ್ಯೆ ಬಗೆಹರಿಸಲು. ಕೋ ಡ್ರೈವರ್ ಗೆ ಹೆಚ್ಚು ಸಮಸ್ಯೆ ಆಗಬಹುದು , ವಿಶೇಷವಾಗಿ ದೂರದ ಪ್ರಯಾಣಗಳಲ್ಲಿ. ಅದಕ್ಕೆ ಪರಿಹಾರ ಸೀಟ್ ಅನ್ನು ಪೂರ್ಣ ಹಿಂದಕ್ಕೆ ಎಳೆಯುವುದು ಹಾಗೆ ಮಾಡಿದರೆ ಕಾಲು ಚಾಚಲು ಅನುಕೂಲವಾಗುತ್ತದೆ. 

ಹಿಂಬದಿಯಲ್ಲಿ, ಕಡಿಮೆ ಎತ್ತರ ಇರುವ ಸೀಟ್ ನ ಸ್ಥಿತಿಯನ್ನು ಹೆಚ್ಚಿಸಲಾಗಿದೆ ಏಕೆಂದರೆ ಡೋರ್ ಬಹಳ ಅಗಲವಾಗಿ ತೆರೆದುಕೊಳ್ಳುವುದಿಲ್ಲ. ಒಳಗೆ ಪ್ರವೇಶಿಸಲು ನಿಮ್ಮ ಮೊಣಕಾಲಿನ ಮೇಲೆ ಹೆಚ್ಚು ಭಾರ ಹಾಕುವ ಸಾಧ್ಯತೆ ಇರುತ್ತದೆ. ಹಾಗು ಹೊರಗೆ ಹೋಗಲು ಸಹ ಸ್ವಲ್ಪ ಪರಿಶ್ರಮ ಪಡಬೇಕಾಗುತ್ತದೆ. ಯಾರು ಹಿರಿಯ ನಾಗರೀಕ ಸದ್ಯಸ್ಯರನ್ನು ಕುಟುಂಬದಲ್ಲಿ ಹೊಂದಿರುತ್ತಾರೋ ಅವರು ಇದನ್ನು ಗಮನಿಸಿ. 

ಹೋಂಡಾ ರೇರ್ ಸೀಟ್ ಹೆಚ್ಚು ವಿಶಾಲತೆ ಹೊಂದಿಲ್ಲ . ಅದು ನನ್ನಂತಹ ಆರು ಅಡಿ ಎತ್ತರದ ವ್ಯಕ್ತಿಗಳಿಗೆ ಡ್ರೈವಿಂಗ್ ಸೀಟ್ ಹಿಂಬದಿಯಲ್ಲಿ ಕುಳಿತುಕೊಳ್ಳಲು ಸಹಕಾರಿಯಾಗಿದೆ. ಹಾಗು, ಹೊರಬದಿಯ ಅಗಲತೆ ಹಿಂಬದಿಯಲ್ಲಿ ಮೂರು ಮಂದಿ ಕುಳಿತುಕೊಳ್ಳುವುದಕ್ಕೆ ಅನುಕೂಲವಾಗುವಂತೆ ಅಂತರಿಕಗಳ ವಿಶಾಲತೆ ಆಗಿ ಪರಿವರ್ತನೆ ಹೊಂದಿಲ್ಲ. ಅದು ಸಾಧ್ಯವಿದ್ದರೂ ಸ್ವಲ್ಪ ಪರಿಶ್ರಮ ಪಡಬೇಕಾಗುತ್ತದೆ. ಸೆಂಟ್ರಲ್ ಟನಲ್ ಹಾಗು ಹಿಂಬದಿ  ಸೀಟ್ ನ ಮದ್ಯ ಭಾಗದಲ್ಲಿ ಸ್ವಲ್ಪ ಎತ್ತರ ಮಾಡಿರುವುದು ಅದಕ್ಕೆ ಪೂರಕವಾಗಿದೆ. ಮದ್ಯದ ಪ್ಯಾಸೆಂಜರ್ ಗೆ ಅಷ್ಟು ಆರಾಮದಾಯಕತೆ ಇರುವುದಿಲ್ಲ. ಗಮನಿಸಬೇಕಾದ ವಿಷಯವೆಂದರೆ ಮದ್ಯದ ಪ್ಯಾಸೆಂಜರ್ ಗೆ ಹೆಡ್ ರೆಸ್ಟ್ ಸಹ ಲಭ್ಯವಿರುವುದಿಲ್ಲ. ಹಾಗು ನೀವು 6 ಅಡಿ ಗಿಂತ ಎತ್ತರ ಇದ್ದರೆ ರೂಫ್ ಗೆ ಹತ್ತಿರ ಇರುವಂತೆ ಭಾಸವಾಗುತ್ತದೆ. ವಿಂಡೋ ಲೈನ್ ನೇರವಾಗಿ ಬೆಳೆದಿದೆ ಹಾಗಾಗಿ ಇಲ್ಲಿ ಸ್ವಲ್ಪ ಅನಾನುಕೂಲತೆ ಆಗುವುದು ಸಹಜ. 

ಸಿವಿಕ್ ಉಪಯುಕ್ತತೆಗಳಲ್ಲಿ ಉತ್ತಮ ಅಂಕಗಳನ್ನು ಗಳಿಸುತ್ತದೆ. ಕ್ಯಾಬಿನ್ ನ  ಮೊದಲ ಅರ್ದದ ಭಾಗದಲ್ಲಿ ಬಹಳಷ್ಟು ಉಪಯುಕ್ತತೆಗಳಾದ ಆರ್ಮ್ ಸೀಟ್ ನಲ್ಲಿ ಸ್ಟೋರೇಜ್, ಹಾಗು ಉತ್ತಮ ಉಪಯುಕ್ತತೆಗಳು ಕೊಡಲಾಗಿದೆ. ಹಿಂಬದಿಯಲ್ಲಿ ನಿಮಗೆ ಡೋರ್ ಬಿನ್ ಗಳು ದೊರೆಯುತ್ತದೆ ಹಾಗು ಜೋಡಿ ಕಪ್ ಹೋಲ್ಡರ್ ಗಳು ಸಹ ಮದ್ಯದ ಆರ್ಮ್ ರೆಸ್ಟ್ ನಲ್ಲಿ ಲಭ್ಯವಿದೆ. 430 ಲೀಟರ್ ಬೂಟ್ ಸ್ಪೇಸ್ ಸಾಕಷ್ಟು ಆಗುತ್ತದೆ , ಆದರೆ ಅದು ಈ ವಿಭಾಗದ ಇತರ ಆಯ್ಕೆ ಗಳಿಗೆ ಹೋಲಿಸಿದರೆ ಕಡಿಮೆ ಇದೆ. ನಮಗೆ ಹೋಂಡಾ 60:40 ಸ್ಪ್ಲಿಟ್ ಸೀಟ್ ಅನ್ನು ಹಿಂಬದಿಯಲ್ಲಿ ಕೊಟ್ಟಿದ್ದರೆ ಉಪಯುಕ್ತತೆ ಹೆಚ್ಚು ಆಗುತ್ತಿತ್ತು ಎನಿಸುತ್ತದೆ. 

ಸಿವಿಕ್ ನಲ್ಲಿ ಇರುವ ಉತ್ತಮ ವಿಷಯಗಳು ಎಂದರೆ ಅದು ಗುಣಮಟ್ಟ. ಹಳೆಯ ಕಾರ್ ನ ಕ್ಯಾಬಿನ್ ನಲ್ಲಿ ಪ್ಲಾಸ್ಟಿಕ್ ಸ್ವಲ್ಪ ಗಟ್ಟಿಯಾಗಿತ್ತು , ಹೊಸ ಸಿವಿಕ್ ನಲ್ಲಿ ಅದು ಆಶ್ಚರ್ಯಕರವಾಗಿ ಉತ್ತಮವಾಗಿದೆ. ಡ್ಯಾಶ್ ಬೋರ್ಡ್ ನಲ್ಲಿ ಸಾಫ್ಟ್ ಟಚ್ ಮೆಟೀರಿಯಲ್ ಗಳನ್ನೂ ಬಳಸಲಾಗಿದೆ ಅವುಗಳನ್ನು ಮುಟ್ಟಲು ಚೆನ್ನಾಗಿರುತ್ತದೆ. ಐಷಾರಾಮಿ ಲೆಥರ್ ಸೀಟ್ ಹೊರಪದರಗಳು ,  ಡೋರ್ ಪ್ಯಾಡ್ ಮೇಲೆ ಲೆಥರ್ ಇನ್ಸರ್ಟ್ ಗಳೊಂದಿಗೆ , ನಿಮಗೆ ಉತ್ತಮ ಅನುಭವ ಕೊಡುತ್ತದೆ. ನಮಗೆ ಅವುಗಳು ಉತ್ತಮ ಗುಣಮಟ್ಟ ಹೊಂದಿದೆ ಎಂದು ಭಾಸವಾಯಿತು, ಯುಟೋ ಕಾರ್ ಗಳಲ್ಲಿ ಕಂಡಂತೆ ಹೆಚ್ಚು ಬೇಗ ಕೊಳೆ ಆಗುವುದಿಲ್ಲ. 

 

ಕಾರ್ಯಕ್ಷಮತೆ

ನೀವು ಹೋಂಡಾ ಸಿವಿಕ್ ಅನ್ನು ಆಯ್ಕೆಮಾಡಿಕೊಂಡರೆ ನಿಮಗೆ ಎರೆಡು ಪವರ್ ಟ್ರೈನ್ ಆಯ್ಕೆಗಳು ಲಭ್ಯವಿರುತ್ತದೆ -  1.8- ಲೀಟರ್ ಪೆಟ್ರೋಲ್ ಜೊತೆಗೆ CVT, ಅಥವಾ 1.6- ಲೀಟರ್ ಡೀಸೆಲ್ ಜೊತೆಗೆ  6- ಸ್ಪೀಡ್ ಮಾನ್ಯುಯಲ್ ಗೇರ್ ಬಾಕ್ಸ್. ಆಶ್ಚರ್ಯಕರವಾಗಿ, ಪೆಟ್ರೋಲ್ ನಲ್ಲಿ ಮಾನ್ಯುಯಲ್ ಆಯ್ಕೆ ಕೊಡಲಾಗಿಲ್ಲ. ಹಾಗು ಕಮ್ಯೂಟ್ ಗೆ ಅನುಕೂಲವಾಗುವಂತಹ ಡೀಸೆಲ್ ಅನ್ನು ಆಟೋಮ್ಯಾಟಿಕ್ ಒಂದಿಗೆ  ಕೊಡಲಾಗಿಲ್ಲ !

ಹೋಂಡಾ ಸಿವಿಕ್ ಡೀಸೆಲ್ 

ಮೊದಲಿಗೆ, ನಾವು ಡೀಸೆಲ್ ಪರಿಗಣಿಸೋಣ ಅದು ಸಿವಿಕ್ ನಲ್ಲಿ ಹೊಸದಾಗಿ ಕೊಡಲಾಗಿದೆ. ಎಂಜಿನ್ ಪರಿಚಿತವಾಗಿದೆ , ನಾವು ಅದನ್ನು CR-V. ನಲ್ಲಿ ನೋಡಿದ್ದೇವೆ. ಆದ್ರೆ ಅದು ಪಡೆಯುತ್ತದೆ ಮಾನ್ಯುಯಲ್ ಗೇರ್ ಬಾಕ್ಸ್ ಅನ್ನು  9-ಸ್ಪೀಡ್ ಆಟೋಮ್ಯಾಟಿಕ್ ಬದಲಿಗೆ. ಪ್ರಮುಖವಾಗಿ ಕಾಣಿಸುವ ವಿಷಯವೆಂದರೆ ಅದು ಶಬ್ದ ಹಾಗು ವೈಬ್ರೆಷನ್ ತಡೆಗಳು. ಸ್ವಿಚ್ ಆನ್ ಮಾಡಿದ ನಂತರ 1.6-ಲೀಟರ್ ಮೋಟಾರ್ ಉತ್ತಮ ವೇಗ ಕೊಡುತ್ತದೆ ಅದನ್ನು ನೀವು ಹೊರಗಡೆ ಇದ್ದಾರೆ ಸುಲಭವಾಗಿ ಗಮನಿಸಬಹುದು. ಒಳಗೆಡೆ ಬಂದರೆ ನಿಮಗೆ ಆ ಶಬ್ದ ಎಲ್ಲಿಹೋಯಿತು ಎಂಬಂತೆ ಆಶ್ಚರ್ಯ ಆಗುತ್ತದೆ. ಹೌದು, ನಿಮಗೆ ಸ್ವಲ್ಪ ಶಬ್ದ ಕೇಳಿಬರಬಹುದು (ಹೆಚ್ಚು ವೇಗದಲ್ಲಿ ಅದು ಸಹ ಹೆಚ್ಚಾಗುತ್ತದೆ ) ಹಾಗು ಪೆಡಲ್ ಮೇಲೆ ಗಮನರ್ಹ ವೈಬ್ರೆಷನ್ ಇರುತ್ತದೆ , ಆದರೆ ಅದು ಗರಿಷ್ಠವಾಗಿರುವುದಿಲ್ಲ. 

ಹೋಂಡಾ ಸುಲಭವಾಗಿ ಬಳಸಬಹುದಾದ ಕ್ಲಚ್ ನೊಂದಿಗೆ ಡ್ರೈವ್ ಮಾಡುವುದು ಸರಳವಾಗಿದೆ. ನಮಗೆ ಬಂಪರ್ ನಿಂದ ಬಂಪರ್ ಟ್ರಾಫಿಕ್ ಗಳಲ್ಲಿ ಸಹ ಹೆಚ್ಚು ಸಮಸ್ಯೆ ಆಗುವುದಿಲ್ಲ. ನಗರಗಳಲ್ಲಿ ನಿಮಗೆ ಡ್ರೈವ್ ಮಾಡಲು ಸುಲಭವಾಗುತ್ತದೆ ಏಕೆಂದರೆ ಎಂಜಿನ್ ಸುಲಭವಾಗಿ ಹೆಚ್ಚು ವೇಗ ಪಡೆಯುವುದಕ್ಕೆ ಸಹಕರಿಸುತ್ತದೆ. ನೀವು ಬಹಳಷ್ಟು ಸಮಯ ಎರಡನೇ ಅಥವಾ ಮೂರನೇ ಗೇರ್ ನಲ್ಲಿ ಇರಬಹುದು, ಅದು ಸುಲಭವಾಗಿ ಹೆಚ್ಚು ವೇಗ ಪಡೆಯುವುದಕ್ಕೆ ಸಹಕಾರಿಯಾಗಿದೆ.- ವಿಶೇಷವಾಗಿ 1800rpm ನಂತರ.  ಟರ್ಬೊ ಕೆಲಸ ಮಾಡುತ್ತಿರುವಾಗ ತ್ರೋಟಲ್ ಪ್ರತಿಕ್ರಿಯೆ ಶೀಘ್ರವಾಗಿ  ದೊರೆಯುತ್ತದೆ , ನಿಮಗೆ ನಗರದಲ್ಲಿನ ಕೆಲಸ ಸುಲಭ ಆಗಲು ಅನುಕೂಲವಾಗುವಂತೆ. 

ಹೋಂಡಾ ಇಂಜಿನಿಯರ್ ಗಳು ಮೈಲೇಜ್ ಹೆಚ್ಚು ಮಾಡಲು ಬಹಳಷ್ಟು ಶ್ರಮ ಪಟ್ಟಿದ್ದಾರೆ. ಹಾಗಾಗಿ ನೀವು ಆರನೇ ಗೇರ್ ನಲ್ಲಿ 80kmph ನಲ್ಲಿ ಇರುವಾಗ ಪೆಡಲ್ ಅನ್ನು ಸುಮ್ಮನೆ ಹೆಚ್ಚು ಒತ್ತಿದರೆ ಓವರ್ ಟೇಕ್ ಮಾಡಲು ಸಾಧ್ಯವಿಲ್ಲ. ನೀವು ಐದನೇ ಗೇರ್ ಗೆ ಬರಬೇಕಾಗುತ್ತದೆ ಹೆಚ್ಚು ವೇಗ ಪಡೆಯಲು. ನೀವು ಸುಮಾರು 100-120kmph ನಲ್ಲಿ ಡ್ರೈವ್ ಮಾಡಬಯಸಿದರೆ , ಈ ಮೋಟಾರ್  ದಿನ ಪೂರ್ತಿ ಆ ಕೆಲಸವನ್ನು ಉತ್ಸಾಹಭರಿತವಾಗಿ ಮಾಡುತ್ತದೆ. 

ಇವೆಲ್ಲವನ್ನು ಹೇಳಿದ ನಂತರ , ಡೀಸೆಲ್ ಎಂಜಿನ್ ಉತ್ತಮ ಮೈಲೇಜ್ ಕೊಡುವುದರೊಂದಿಗೆ ಮೆಚ್ಚುಗೆ ಪಡೆಯುತ್ತದೆ. ARAI- ಪ್ರಮಾಣೀಕೃತ ಮೈಲೇಜ್  ಅತ್ಯುತ್ತಮ  26.82kmpl ಕೊಡುತ್ತದೆ. ನಮ್ಮ ಪರೀಕ್ಷೆ ಗಳಲ್ಲಿ, ಸಿವಿಕ್ ಡೀಸೆಲ್ ಉತ್ತಮ 16.81kmpl ಮೈಲೇಜ್ ಅನ್ನು ನಗರದಲ್ಲಿ ಹಾಗು  20.07kmpl ಅನ್ನು ಹೈವೇ ನಲ್ಲಿ ಕೊಟ್ಟಿತು. 

ಹೋಂಡಾ ಸಿವಿಕ್ ಪೆಟ್ರೋಲ್ 

ಹೋಂಡಾ ದಂತಕತೆಯಾಗಿರುವ R18 ಮೋಟಾರ್ ಉತ್ತಮ ನವೀಕರಣ ಹೊಂದಿದೆ ಹಾಗು ಅತಿ ಕಡಿಮೆ ಶಬ್ದ ಹೊರಸೂಸುತ್ತದೆ. ಹೌದು, ಅದು ಸ್ವಲ್ಪ ಬದಲಿಸಲಾದ ಅದೇ ದಶಕಗಳಿಂದ ಬಳಸಲಾದ ಎಂಜಿನ್ ಆಗಿದೆ. ಅದು ಹೇಳಿದ ನಂತರ ಅದು ಔಟ್ ಡೇಟೆಡ್ ಎಂದು ಹೇಳಲಾಗುವುದಿಲ್ಲ.  141PS ಹಾಗು  174Nm ಕೊಡುತ್ತದೆ. ಇದರಲ್ಲಿ ನಿಮ್ಮ ದಿನ ನಿತ್ಯದ ಬಳಕೆಗೆ ಮಿಗಿಲಾಗಿ ಹಾಗು ವಾರಾಂತ್ಯದ ಪ್ರಯಾಣಗಳಿಗೆ ತಕ್ಕ ಹಾಗೆ ಪವರ್ ಹೊಂದಿದೆ. 

ಹೋಂಡಾ ನವರು CVT ಯನ್ನು ಪ್ರತಿದಿನದ ಪ್ರಯಾಣಕ್ಕೆ ಅನುಕೂಲವಾಗುವಂತೆ ಮಾಡಿದ್ದಾರೆ . ಸರಳವಾದ ಡ್ರೈವ್ ಮಾಡಲು ಸಹಕಾರಿಯಾಗಿದೆ, ವಿಶೇಷವಾಗಿ ಅಂತರಿಕಗಳಲ್ಲಿನ ನಿಶಬ್ದ ವಾತಾವರಣ ನಿಮಗೆ ಆರಾಮದಾಯಕತೆ ಕೊಡುತ್ತದೆ. ಸ್ಪೋರ್ಟ್ ಮೋಡ್ ನಲ್ಲೂ ಸಹ ಗೇರ್ ಬಾಕ್ಸ್ ಇತರ  CVT ಗಳಂತೆ ಹೆಚ್ಚಿನ ವೇಗಕ್ಕೆ ಹೊಂದಿಕೊಳ್ಳುತ್ತದೆ. 

ಸಿವಿಕ್ ಅನ್ನು ಆಫೀಸ್ ಗೆ ಹೋಗಿ ಬರಲು ಬಳಸುವವರಿಗೆ ಹೆಚ್ಚು ದೂರುವಂತೆ ಮಾಡುವುದಿಲ್ಲ . ಆದರೆ ಉತ್ಸಾಹಿಗಳಿಗೆ ಸ್ವಲ್ಪ ಹಿನ್ನಡತೆ ಉಂಟಾಗಬಹುದು. ಈ ಸುಲಭವಾಗಿ ಪ್ರತಿಕ್ರಿಯೆ ನೀಡುವ ಎಂಜಿನ್ ಒಂದಿಗೆ ಮಾನ್ಯುಯಲ್ ಸಂಯೋಜನೆ ಇದ್ದಿದರೆ ಹೆಚ್ಚು ಉತ್ಸಾಹಭರಿತವಾಗಿರುತ್ತಿತ್ತು. ನಾವು ಖಂಡಿತವಾಗಿ ಹೇಳಬಲ್ಲೆವು. 

 

Honda ಸಿವಿಕ್‌ Diesel Petrol
0-100kmph 10.96s 11.65s
Quarter Mile 17.60s @ 128.24kmph 18.37s @ 128.86kmph
20-80kmph - 6.99s
30-80kmph, 3rd 9.91s -
40-100kmph, 4th 15.59s -
100-0 kmph 41.32m 38.67m
80-0 kmph 26.41m 25.47m
City Efficiency 16.81kmpl 10.21kmpl
Highway Efficiency 20.07kmpl 15.92kmpl

ಸುರಕ್ಷತೆ

ಹೋಂಡಾ  ಕೊಡುತ್ತಿದೆ ಆರು ಏರ್ಬ್ಯಾಗ್ ಗಳನ್ನು ಸ್ಟ್ಯಾಂಡರ್ಡ್ ಆಗಿ. ABS ಜೊತೆಗೆ  ebd ಲಭ್ಯವಿದೆ ಹಾಗು ಇತರ ತಂತ್ರಜ್ಞಾನ ಸಹ , ಅವುಗಳೆಂದರೆ ವೆಹಿಕಲ್ ಸ್ಟೆಬಿಲಿಟಿ ಮ್ಯಾನೇಜ್ಮೆಂಟ್ (ESC), ಹಾಗು ಹಿಲ್ ಸ್ಟಾರ್ಟ್ ಅಸಿಸ್ಟ್. ಇದರಲ್ಲಿ ಹೋಂಡಾ ಹೇಳುವಂತೆ 'ಎಜಿಲ್ ಹ್ಯಾಂಡಲಿಂಗ್ ಅಸಿಸ್ಟ್' ಕೊಡಲಾಗಿದೆ ಅದು ಕಾರ್ ಅನ್ನು ಯಾವುದೇ ಹೆಚ್ಚು ಪರಿಶ್ರಮ ಪಡದೆ ಗರಿಷ್ಟ ವೇಗದಲ್ಲಿ ತಿರುವುಗಳಲ್ಲಿ ನಿಭಾಯಿಸುವುದಕ್ಕೆ ಸಹಕಾರಿಯಾಗಿದೆ. 

ಹೋಂಡಾ ಸಿವಿಕ್‌

ನಾವು ಇಷ್ಟಪಡುವ ವಿಷಯಗಳು

 • ಸುರಕ್ಷತೆ: ನಾಲ್ಕು ಡಿಸ್ಕ್ ಬ್ರೇಕ್ ಗಳು, ಆರು ಏರ್ಬ್ಯಾಗ್ ಗಳು, ಹಾಗು ತಂತ್ರಜ್ಞಾನಗಳಾದ ವೆಹಿಕಲ್ ಸ್ಟೆಬಿಲಿಟಿ ಕಂಟ್ರೋಲ್ ಮ್ಯಾನೇಜ್ಮೆಂಟ್
 • ಆಶ್ಚರ್ಯಕರ ಡಿಸೈನ್: ಬಹಳಷ್ಟು ಐಷಾರಾಮಿ ಕಾರ್ ಗಳ ತರಹ ಆಕರ್ಷಣೆ ಹೊಂದಿದೆ
 • ರೈಡ್ ಹಾಗು ಹ್ಯಾಂಡಲಿಂಗ್ ಪ್ಯಾಕೇಜ್: ಭಾರತಕ್ಕೆ ಅನುಗುಣವಾಗಿ ಉತ್ತಮ ಶೈಲಿಯಲ್ಲಿ ಮಾಡಲಾಗಿದೆ, ಸಿವಿಕ್ ಪಾಟ್ ಹೋಲ್ ಹಾಗು ಹಾಳಾದ ರಸ್ತೆಗಳಲ್ಲಿ ಚೆನ್ನಾಗಿ ನಿಭಾಯಿಸುತ್ತದೆ ಆದರೆ ತಿರುವುಗಳಲ್ಲಿ ಸ್ವಲ್ಪ ಕಷ್ಟಪಡುತ್ತದೆ.
 • ಬಿಲ್ಡ್ ಗುಣಮಟ್ಟ: ಒಪ್ಪಬಹುದಾದ 'ದೀರ್ಘ ಕಾಲಿನ ಬಳಕೆ ' ಹಾಗು ಐಷಾರಾಮಿಗಳು ಸಿವಿಕ್ ಅನ್ನು ಪ್ರೇಮಿಯಂ ಆಗಿ ಇರುವಂತೆ ತೋರುತ್ತದೆ.

ನಾವು ಇಷ್ಟಪಡದ ವಿಷಯಗಳು

 • ಪೆಟ್ರೋಲ್ ಎಂಜಿನ್ ನಲ್ಲಿ ಮಾನ್ಯುಯಲ್ ಆಯ್ಕೆ ಕೊಡಲಾಗಿಲ್ಲ , ಹಾಗು ಡೀಸೆಲ್ ನಲ್ಲಿ ಆಟೋಮ್ಯಾಟಿಕ್ ಆಯ್ಕೆ ಕೊಡಲಾಗಿಲ್ಲ . ನಗರದಲ್ಲಿನ ಉತ್ಸಾಹಭರಿತ ಡ್ರೈವರ್ ಗಳಿಗೆ ಮೆಚ್ಚುಗೆ ಆಗಲಾರದು.
 • ಕಕೆಳ ಮಟ್ಟ ದಲ್ಲಿರುವ ಸೀಟ್ : ಒಳಗೆ ಬರುವುದು ಹಾಗು ಹೊರಗೆ ಹೋಗುವುದು ಮಂಡಿ ಸಮಸ್ಯೆ ಇರುವ ಹಿರಿಯರಿಗೆ ಸ್ವಲ್ಪ ಕಷ್ಟ ಆಗಬಹುದು.
 • ಮಿಸ್ ಆಗಿರುವ ಸಲಕರಣೆಗಳು: ಮುಂಬದಿ ಪಾರ್ಕಿಂಗ್ ಸೆನ್ಸರ್ ಗಳು, ರೇರ್ ಚಾರ್ಜಿನ್ಗ್ ಸಾಕೆಟ್, ಎಲೆಕ್ಟ್ರಿಕ್ ಅಳವಡಿಕೆ ಕೋ ಡ್ರೈವರ್ ಸೀಟ್ ಗೆ ಕೊಟ್ಟಿದ್ದರೆ ಚೆನ್ನಾಗಿರುತ್ತಿತ್ತು.
space Image

ಹೋಂಡಾ ಸಿವಿಕ್‌ ಬಳಕೆದಾರರ ವಿಮರ್ಶೆಗಳು

4.7/5
ಆಧಾರಿತ266 ಬಳಕೆದಾರರ ವಿಮರ್ಶೆಗಳು
Write a Review and Win
An iPhone 7 every month!
Iphone
 • All (266)
 • Looks (89)
 • Comfort (53)
 • Mileage (24)
 • Engine (44)
 • Interior (28)
 • Space (12)
 • Price (37)
 • More ...
 • ಇತ್ತೀಚಿನ
 • ಸಹಾಯಕವಾಗಿದೆಯೆ
 • VERIFIED
 • CRITICAL
 • Best Car For Businessmen

  It is an automatic transmission with the sunroof. Love to drive it. It is a very comfortable car. It has a very powerful AC. Very comfortable for my family for a long tri...ಮತ್ತಷ್ಟು ಓದು

  ಇವರಿಂದ maaz ghawte
  On: Mar 26, 2020 | 122 Views
 • Awesome Car with Great Features

  The all-new Civic is the best...... it's a pleasure to drive... The rearview camera on the left is the best of the features which is a gift to have in this segment... Dri...ಮತ್ತಷ್ಟು ಓದು

  ಇವರಿಂದ drsingaravelu viswanathan
  On: Mar 01, 2020 | 99 Views
 • Aesthetic car

  This car is great in its segment. The car has great looks and offers great mileage too.

  ಇವರಿಂದ arjun harsoda
  On: Feb 10, 2020 | 33 Views
 • for VX BSIV

  Amazing Car.

  Nice car and especially for the Honda owners who have trusted Honda sedan earlier as it is good up-gradation for the old Honda Civic or Honda city comfort and performance...ಮತ್ತಷ್ಟು ಓದು

  ಇವರಿಂದ sauhard
  On: Jan 22, 2020 | 130 Views
 • Best Car.

  It is a very comfortable car from the HONDA CIVIC. Nice and comfortable car. Also, it is the best car for long drives.

  ಇವರಿಂದ shahid
  On: Jan 07, 2020 | 23 Views
 • ಎಲ್ಲಾ ಸಿವಿಕ್‌ ವಿರ್ಮಶೆಗಳು ವೀಕ್ಷಿಸಿ
space Image

ಹೋಂಡಾ ಸಿವಿಕ್‌ ವೀಡಿಯೊಗಳು

 • Honda Civic 2019 Variants in Hindi: Top-Spec ZX Worth It? | CarDekho.com #VariantsExplained
  10:28
  Honda Civic 2019 Variants in Hindi: Top-Spec ZX Worth It? | CarDekho.com #VariantsExplained
  ಮೇ 20, 2019
 • Honda Civic 2019 Pros, Cons and Should You Buy One | CarDekho.com
  6:57
  Honda Civic 2019 Pros, Cons and Should You Buy One | CarDekho.com
  mar 08, 2019
 • Honda Civic vs Skoda Octavia 2019 Comparison Review In Hindi | CarDekho.com #ComparisonReview
  10:36
  Honda Civic vs Skoda Octavia 2019 Comparison Review In Hindi | CarDekho.com #ComparisonReview
  feb 05, 2020
 • 2019 Honda Civic Diesel I 7000km Long-Term Review I CarDekho
  7:13
  2019 Honda Civic Diesel I 7000km Long-Term Review I CarDekho
  dec 02, 2019
 • 2019 Honda Civic Review: Back With A Bang? | ZigWheels.com
  13:42
  2019 Honda Civic Review: Back With A Bang? | ZigWheels.com
  feb 20, 2019

ಹೋಂಡಾ ಸಿವಿಕ್‌ ಬಣ್ಣಗಳು

 • ಪ್ಲ್ಯಾಟಿನಮ್ ವೈಟ್ ಪರ್ಲ್
  ಪ್ಲ್ಯಾಟಿನಮ್ ವೈಟ್ ಪರ್ಲ್
 • ಆಧುನಿಕ ಉಕ್ಕಿನ ಲೋಹೀಯ
  ಆಧುನಿಕ ಉಕ್ಕಿನ ಲೋಹೀಯ
 • ಗೋಲ್ಡನ್ ಬ್ರೌನ್ ಮೆಟಾಲಿಕ್
  ಗೋಲ್ಡನ್ ಬ್ರೌನ್ ಮೆಟಾಲಿಕ್
 • ರೇಡಿಯೆಂಟ್ ಕೆಂಪು ಮೆಟಾಲಿಕ್
  ರೇಡಿಯೆಂಟ್ ಕೆಂಪು ಮೆಟಾಲಿಕ್
 • ಚಂದ್ರ ಬೆಳ್ಳಿ
  ಚಂದ್ರ ಬೆಳ್ಳಿ

ಹೋಂಡಾ ಸಿವಿಕ್‌ ಚಿತ್ರಗಳು

 • ಚಿತ್ರಗಳು
 • Honda Civic Front Left Side Image
 • Honda Civic Grille Image
 • Honda Civic Front Fog Lamp Image
 • Honda Civic Headlight Image
 • Honda Civic Taillight Image
 • CarDekho Gaadi Store
 • Honda Civic Door Handle Image
 • Honda Civic Side View (Right) Image
space Image

ಹೋಂಡಾ ಸಿವಿಕ್‌ ರಸ್ತೆ ಪರೀಕ್ಷೆ

 • ವಾಸ್ತವಿಕತೆ ಹಾಗು ಹೊರ ನೋಟ ಎವೆರೆಡರ ಅವಶ್ಯಕತೆಯನ್ನಿ ಮಾರುತಿ ವಿಟಾರಾ ದ ಯಶಸ್ಸು ನೋಡಿಸಿದೆ. ಹೋಂಡಾ ದ ಜಾಜ್ ಆಧಾರಿತ WR-V ಇನ್ನೂ ಹೆಚ್ಚು ಪ್ಯಾಕೇಜ್ ಕೊಡುತ್ತದೆಯೇ?

  By alan richardMay 14, 2019
 • ಹೆಚ್ಚಾಗಿ ಕಠಿಣ ಪರಿಶ್ರಮ ಪಡುವ ವಾಹನಗಳನ್ನೇ ಇಷ್ಟ ಪಡುವ ದೇಶದಲ್ಲಿ, ಹೋಂಡಾ ಹೊಸ WR-V ಯನ್ನು ತಂದಿದೆ. ಇದು ಹೆಚ್ಚು ಧೃಡ ಹಾಗು ಎತ್ತರದ ನಿಲುವು ಹೊಂದಿದೆ ಇದರ ಮೂಲ ಆವೃತ್ತಿಯಾದ ಜಾಜ್ ಗೆ ಹೋಲಿಸಿದಾಗ. ಇದು ಭಾರತದ ಪರಿಸರದಲ್ಲಿ ಹೇಗೆ ವರ್ತಿಸುತ್ತದೆ?  

  By alan richardMay 14, 2019
 • ಹೋಂಡಾ ದ WR-V ಒಂದು  ಉತ್ತಮ ಆಲ್ರೌಂಡರ್ ಆಗಿ ಭರವಸೆ ಕೊಡುತ್ತದೆ ಇತರ ಎಲ್ಲ ಸದೃಢ ಹ್ಯಾಚ್ ಗಳ ಜೊತೆಗೆ. ಇದು ಒಂದು ಅತುತ್ತಮ ಪರ್ಯಾಯ ಆಯ್ಕೆ ಹುಂಡೈ  ನ ಪ್ರಖ್ಯಾತ i20 ಆಕ್ಟಿವ್ ಜೊತೆ ಹೋಲಿಸಿದಾಗ ?

  By siddharthMay 14, 2019
 • ಹೋಂಡಾ ಜಾಜ್ ನ ಪ್ರಾಯೋಗಿಕತೆ ಮತ್ತು BR-V ಯ ಡಿಸೈನ್ ಅನ್ನು ಒಟ್ಟುಗೂಡಿಸಿದೆ. ಇದು ಒಂದು ನೀವು ಕೊಳ್ಳಬಹುದಾದ  ಕಾಕ್ಟೈಲ್ ಹೌದ?  

  By tusharMay 14, 2019

Second Hand ಹೋಂಡಾ ಸಿವಿಕ್‌ ಕಾರುಗಳು in

ನವ ದೆಹಲಿ
 • ಹೋಂಡಾ ಸಿವಿಕ್‌ ಹೈಬ್ರಿಡ್
  ಹೋಂಡಾ ಸಿವಿಕ್‌ ಹೈಬ್ರಿಡ್
  Rs1.25 ಲಕ್ಷ
  200790,000 Kmಪೆಟ್ರೋಲ್
  ವಿವರಗಳ ವೀಕ್ಷಣೆ
 • ಹೋಂಡಾ ಸಿವಿಕ್‌ 1.8 ಸಿವಿಕ್ ವಿ ಎಟಿ
  ಹೋಂಡಾ ಸಿವಿಕ್‌ 1.8 ಸಿವಿಕ್ ವಿ ಎಟಿ
  Rs1.27 ಲಕ್ಷ
  200672,000 Kmಪೆಟ್ರೋಲ್
  ವಿವರಗಳ ವೀಕ್ಷಣೆ
 • ಹೋಂಡಾ ಸಿವಿಕ್‌ 1.8 ಎಸ್‌ ಟಿಎಮ್‌ಟಿ
  ಹೋಂಡಾ ಸಿವಿಕ್‌ 1.8 ಎಸ್‌ ಟಿಎಮ್‌ಟಿ
  Rs1.29 ಲಕ್ಷ
  200765,236 Kmಪೆಟ್ರೋಲ್
  ವಿವರಗಳ ವೀಕ್ಷಣೆ
 • ಹೋಂಡಾ ಸಿವಿಕ್‌ 1.8 ಸಿವಿಕ್ ವಿ ಎಟಿ
  ಹೋಂಡಾ ಸಿವಿಕ್‌ 1.8 ಸಿವಿಕ್ ವಿ ಎಟಿ
  Rs1.3 ಲಕ್ಷ
  20061,17,000 Kmಪೆಟ್ರೋಲ್
  ವಿವರಗಳ ವೀಕ್ಷಣೆ
 • ಹೋಂಡಾ ಸಿವಿಕ್‌ 1.8 ಎಸ್‌ ಟಿಎಮ್‌ಟಿ
  ಹೋಂಡಾ ಸಿವಿಕ್‌ 1.8 ಎಸ್‌ ಟಿಎಮ್‌ಟಿ
  Rs1.4 ಲಕ್ಷ
  200788,000 Kmಪೆಟ್ರೋಲ್
  ವಿವರಗಳ ವೀಕ್ಷಣೆ
 • ಹೋಂಡಾ ಸಿವಿಕ್‌ ಹೈಬ್ರಿಡ್
  ಹೋಂಡಾ ಸಿವಿಕ್‌ ಹೈಬ್ರಿಡ್
  Rs1.4 ಲಕ್ಷ
  20061,00,000 Kmಪೆಟ್ರೋಲ್
  ವಿವರಗಳ ವೀಕ್ಷಣೆ
 • ಹೋಂಡಾ ಸಿವಿಕ್‌ 1.8 ಸಿವಿಕ್ ವಿ ಟಿಎಮ್‌ಟಿ
  ಹೋಂಡಾ ಸಿವಿಕ್‌ 1.8 ಸಿವಿಕ್ ವಿ ಟಿಎಮ್‌ಟಿ
  Rs1.5 ಲಕ್ಷ
  20071,30,000 Kmಪೆಟ್ರೋಲ್
  ವಿವರಗಳ ವೀಕ್ಷಣೆ
 • ಹೋಂಡಾ ಸಿವಿಕ್‌ 1.8 ಸಿವಿಕ್ ವಿ ಟಿಎಮ್‌ಟಿ
  ಹೋಂಡಾ ಸಿವಿಕ್‌ 1.8 ಸಿವಿಕ್ ವಿ ಟಿಎಮ್‌ಟಿ
  Rs1.55 ಲಕ್ಷ
  200869,000 Kmಪೆಟ್ರೋಲ್
  ವಿವರಗಳ ವೀಕ್ಷಣೆ

Write your Comment on ಹೋಂಡಾ ಸಿವಿಕ್‌

7 ಕಾಮೆಂಟ್ಗಳು
1
S
shabnas abubacker
Feb 18, 2020 3:46:45 PM

Ciaz is not a competitor for civic from matuto suzuki compare kizashi .Please correct the mistake

  ಪ್ರತ್ಯುತ್ತರ
  Write a Reply
  1
  M
  mochahary tenglung
  Jun 28, 2019 7:59:18 AM

  Honda civic coupe 2019 I like this car. How much is this car?

   ಪ್ರತ್ಯುತ್ತರ
   Write a Reply
   1
   A
   a flash
   May 10, 2019 6:30:37 PM

   It would be great if there is all electric Civic.

    ಪ್ರತ್ಯುತ್ತರ
    Write a Reply
    space Image
    space Image

    ಭಾರತ ರಲ್ಲಿ ಹೋಂಡಾ ಸಿವಿಕ್‌ ಬೆಲೆ

    ನಗರಹಳೆಯ ಶೋರೂಮ್ ಬೆಲೆ
    ಮುಂಬೈRs. 18.04 - 21.35 ಲಕ್ಷ
    ಬೆಂಗಳೂರುRs. 17.93 - 21.24 ಲಕ್ಷ
    ಚೆನ್ನೈRs. 17.93 - 21.24 ಲಕ್ಷ
    ಹೈದರಾಬಾದ್Rs. 17.93 - 21.24 ಲಕ್ಷ
    ತಳ್ಳುRs. 17.93 - 21.24 ಲಕ್ಷ
    ಕೋಲ್ಕತಾRs. 17.93 - 21.24 ಲಕ್ಷ
    ಕೊಚಿRs. 18.06 - 21.39 ಲಕ್ಷ
    ನಿಮ್ಮ ನಗರವನ್ನು ಆರಿಸಿ

    ಟ್ರೆಂಡಿಂಗ್ ಹೋಂಡಾ ಕಾರುಗಳು

    • ಪಾಪ್ಯುಲರ್
    • ಉಪಕಮಿಂಗ್
    ×
    ನಿಮ್ಮ ನಗರವು ಯಾವುದು?