• English
  • Login / Register

2024 Mercedes-AMG GLC 43 ಕೂಪ್‌ ಮತ್ತು Mercedes-Benz CLE ಕ್ಯಾಬ್ರಿಯೊಲೆಟ್ ಭಾರತದಲ್ಲಿ ಬಿಡುಗಡೆ, ಬೆಲೆ 1.10 ಕೋಟಿ ರೂ. ನಿಗದಿ

ಆಗಸ್ಟ್‌ 08, 2024 04:06 pm ರಂದು dipan ಮೂಲಕ ಪ್ರಕಟಿಸಲಾಗಿದೆ

  • 39 Views
  • ಕಾಮೆಂಟ್‌ ಅನ್ನು ಬರೆಯಿರಿ

ಸಿಎಲ್‌ಇ ಕ್ಯಾಬ್ರಿಯೊಲೆಟ್ ಜರ್ಮನ್ ವಾಹನ ತಯಾರಕರಿಂದ ಮೂರನೇ ಓಪನ್-ಟಾಪ್ ಮೊಡೆಲ್‌ ಆಗಿದೆ, ಆದರೆ 2024 ಎಎಮ್‌ಜಿ ಇಎಲ್‌ಸಿ 43ಯು ಜಿಎಲ್‌ಸಿ ಕಾರುಗಳ ಪಟ್ಟಿಯಲ್ಲಿ ಟಾಪ್‌ ಸ್ಥಾನವನ್ನು ಪಡೆದಿದೆ

  • ಭಾರತದಾದ್ಯಂತ ಎಎಮ್‌ಜಿ ಜಿಎಲ್‌ಸಿ 43 ಕೂಪ್‌ ಮತ್ತು ಸಿಎಲ್‌ಇ ಕ್ಯಾಬ್ರಿಯೊಲೆಟ್‌ನ ಎಕ್ಸ್ ಶೋರೂಂ ಬೆಲೆ 1.10 ಕೋಟಿ ರೂ.ನಷ್ಟು ನಿಗದಿಪಡಿಸಲಾಗಿದೆ. 
  • ಎಎಮ್‌ಜಿ ಜಿಎಲ್‌ಸಿ 43ಯು ರೆಗುಲರ್‌ ಜಿಎಲ್‌ಸಿಯಂತೆಯೇ ವಿನ್ಯಾಸವನ್ನು ಹೊಂದಿದೆ, ಆದರೆ ಎಎಮ್‌ಜಿ-ವಿಶೇಷ ಪನಾಮೆರಿಕಾನಾ ಗ್ರಿಲ್ ಮತ್ತು ಅಲಾಯ್‌ ವೀಲ್‌ಗಳನ್ನು ಪಡೆಯುತ್ತದೆ. 
  • ಸಿಎಲ್‌ಇ ಕ್ಯಾಬ್ರಿಯೊಲೆಟ್‌ ಭಾರತದಲ್ಲಿ ಮರ್ಸಿಡೀಸ್‌ ಬೆಂಝ್‌ನಿಂದ ಮೂರನೇ ಓಪನ್-ಟಾಪ್ ಕೊಡುಗೆಯಾಗಿದೆ ಮತ್ತು ಇದು ಸಿ-ಕ್ಲಾಸ್ ಮತ್ತು ಮುಂಬರುವ ಇ-ಕ್ಲಾಸ್‌ನಿಂದ ಸ್ಫೂರ್ತಿ ಪಡೆಯುತ್ತದೆ.
  • ಎರಡೂ ಕಾರುಗಳು 11.9-ಇಂಚಿನ ಟಚ್‌ಸ್ಕ್ರೀನ್ ಮತ್ತು 12.3-ಇಂಚಿನ ಡ್ರೈವರ್ ಡಿಸ್‌ಪ್ಲೇಯನ್ನು ಪಡೆಯುತ್ತವೆ.
  • ಎಎಮ್‌ಜಿ ಜಿಎಲ್‌ಸಿ43 ಕೂಪ್‌ 2-ಲೀಟರ್ ಎಲೆಕ್ಟ್ರಿಕ್ ಟರ್ಬೋಚಾರ್ಜ್ಡ್ ಪೆಟ್ರೋಲ್ ಎಂಜಿನ್‌ನೊಂದಿಗೆ ಬರುತ್ತದೆ, ಆದರೆ  ಸಿಎಲ್‌ಇ ಕ್ಯಾಬ್ರಿಯೊಲೆಟ್ ಮೈಲ್ಡ್‌-ಹೈಬ್ರಿಡ್ ತಂತ್ರಜ್ಞಾನದೊಂದಿಗೆ 2-ಲೀಟರ್ ಎಂಜಿನ್‌ನೊಂದಿಗೆ ಬರುತ್ತದೆ.

2024ರ ಮರ್ಸಿಡೀಸ್‌ ಬೆಂಝ್‌ ಎಎಮ್‌ಜಿ ಜಿಎಲ್‌ಸಿ 43 ಕೂಪ್‌ ಮತ್ತು ಮರ್ಸಿಡೀಸ್‌-ಬೆಂಝ್‌ ಸಿಎಲ್‌ಇ ಕ್ಯಾಬ್ರಿಯೊಲೆಟ್ ಅನ್ನು ಭಾರತದಲ್ಲಿ ಬಿಡುಗಡೆ ಮಾಡಲಾಗಿದೆ. ಈ ಎರಡೂ ಐಷಾರಾಮಿ ಕಾರುಗಳ ಬೆಲೆಗಳ ವಿವರಗಳು ಇಲ್ಲಿವೆ:

ಮೊಡೆಲ್‌

ಬೆಲೆ

ಮರ್ಸಿಡೀಸ್‌-ಎಎಮ್‌ಜಿ ಜಿಎಲ್‌ಸಿ 43 ಕೂಪ್‌

1.10 ಕೋಟಿ ರೂ.

ಮರ್ಸಿಡೀಸ್‌ ಬೆಂಝ್‌ ಸಿಎಲ್‌ಇ ಕ್ಯಾಬ್ರಿಯೊಲೆಟ್

1.10 ಕೋಟಿ ರೂ.

ಇವುಗಳು ಭಾರತದಾದ್ಯಂತದ ಎಕ್ಸ್ ಶೋರೂಂ ಬೆಲೆಗಳಾಗಿವೆ

ಈ ಹೊಸ ಮರ್ಸಿಡೀಸ್‌ ಬೆಂಝ್‌ ಕಾರುಗಳು ವಿದೇಶದಲ್ಲಿ ಸಂಪೂರ್ಣವಾಗಿ ನಿರ್ಮಿತವಾದ ರೂಪದಲ್ಲಿ ಭಾರತೀಯ ಮಾರುಕಟ್ಟೆಗೆ ಬರುತ್ತವೆ. ಈ ಕಾರುಗಳು ಹೊಂದಿರುವ ಎಲ್ಲಾ ವಿಶೇಷತೆಗಳನ್ನು ನಾವು ನೋಡೋಣ:

ಮರ್ಸಿಡೀಸ್‌-ಎಎಮ್‌ಜಿ ಜಿಎಲ್‌ಸಿ 43 ಕೂಪ್‌

ಹೊರಭಾಗದ ಲುಕ್‌

Mercedes-AMG GLC 43 Coupe front
Mercedes-AMG GLC 43 Coupe rear

 

ಇದು ಎಸ್‌ಯುವಿ-ಕೂಪ್ ಮೊಡೆಲ್‌ ಆಗಿರುವುದರಿಂದ, ಜಿಎಲ್‌ಸಿ 43 ಕೂಪ್‌, ರೆಗುಲರ್‌ ಜಿಎಲ್‌ಸಿ ಎಸ್‌ಯುವಿಯಿಂದ ಪ್ರೇರಿತವಾದ ಮುಂಭಾಗದ ವಿನ್ಯಾಸದೊಂದಿಗೆ ಎಸ್‌ಯುವಿ-ಕೂಪ್ ಶೈಲಿಯನ್ನು ಹೊಂದಿದೆ. ಇದು ಎಲ್ಇಡಿ ಡಿಜಿಟಲ್ ಹೆಡ್‌ಲೈಟ್‌ಗಳು, ದೊಡ್ಡ ಏರ್‌ ಇನ್ಲೆಂಟ್ಸ್‌ ಮತ್ತು ಗ್ರಿಲ್‌ನಲ್ಲಿ ಲಂಬವಾದ ಸ್ಲ್ಯಾಟ್‌ಗಳನ್ನು ಒಳಗೊಂಡಿದೆ. ಈ ಕೂಪ್ ಬಾಡಿ ಕಲರ್‌ನ ವೀಲ್‌ ಆರ್ಚ್‌ಗಳು, ಎಎಮ್‌ಜಿ ಸೈಡ್ ಸ್ಕರ್ಟ್‌ಗಳು ಮತ್ತು ಎಎಮ್‌ಜಿ-ಸ್ಪೆಕ್ ಹಿಂಭಾಗದ ಡಿಫ್ಯೂಸರ್‌ನೊಂದಿಗೆ ಎದ್ದು ಕಾಣುತ್ತದೆ, ಅದು ಅದರ ಸ್ಪೋರ್ಟಿ ಲುಕ್‌ ಅನ್ನು ಇನ್ನಷ್ಟು ಹೆಚ್ಚಿಸುತ್ತದೆ. ವಿಶಿಷ್ಟವಾದ ಎಮ್‌ಜಿ ಅಂಶಗಳಲ್ಲಿ ಪ್ಯಾನಾಮೆರಿಕಾನಾ ಗ್ರಿಲ್, ಸ್ಪೋರ್ಟಿಯರ್ ಫ್ರಂಟ್ ಬಂಪರ್, ದೊಡ್ಡದಾದ ಮುಂಭಾಗದ ಸ್ಪ್ಲಿಟರ್, ಲಿಪ್ ಸ್ಪಾಯ್ಲರ್, ಕ್ವಾಡ್ ಎಕ್ಸಾಸ್ಟ್ ಟಿಪ್ಸ್ ಮತ್ತು ಒಂಬತ್ತು ಬಣ್ಣದ ಆಯ್ಕೆಗಳು ಸೇರಿವೆ. ಇದು 21-ಇಂಚಿನ ಎಮ್‌ಜಿ ವಿಶೇಷ ಸಂಪೂರ್ಣ ಕಪ್ಪು ಬಣ್ಣದ ಅಲಾಯ್‌ ವೀಲ್‌ಗಳನ್ನು ಸಹ ಪಡೆಯುತ್ತದೆ.

Mercedes-AMG GLC 43 Coupe side

ಇಂಟೀರಿಯರ್‌ ಮತ್ತು ಫೀಚರ್‌ಗಳು

Mercedes-AMG GLC 43 interior

ಒಳಭಾಗವನ್ನು ಗಮನಿಸುವಾಗ ಇದರ ಡ್ಯಾಶ್‌ಬೋರ್ಡ್ ಲೇಔಟ್ ರೆಗುಲರ್‌ ಜಿಎಲ್‌ಸಿಯಿಂದ ಯಾವುದೇ ರೀತಿ ಭಿನ್ನವಾಗಿಲ್ಲ. ಆದರೆ ಟ್ರಿಮ್ ಈಗ ಪಿನ್‌ಸ್ಟ್ರೈಪ್‌ಗಳ ಬದಲಿಗೆ ಕಾರ್ಬನ್ ಫೈಬರ್ ಆಗಿದೆ. ಇದು ಎಎಮ್‌ಜಿ-ವಿಶೇಷ ಸ್ಟೀರಿಂಗ್ ವೀಲ್ ಮತ್ತು ಅದರ ಸ್ಪೋರ್ಟಿಯರ್ ಸ್ವಭಾವಕ್ಕೆ ಪೂರಕವಾಗಿ ಸೀಟ್‌ಗಳನ್ನು ಪಡೆಯುತ್ತದೆ. ಇದು ಅದೇ 11.9-ಇಂಚಿನ ಲಂಬವಾದ ಇನ್ಫೋಟೈನ್‌ಮೆಂಟ್ ಟಚ್‌ಸ್ಕ್ರೀನ್ ಅನ್ನು ಪಡೆಯುತ್ತದೆ, ಆದರೆ ಕಾರಿನ ಡ್ರೈವ್ ಸೆಟ್ಟಿಂಗ್‌ಗಳನ್ನು ಬದಲಾಯಿಸಲು AMG ಬಟನ್ ಅನ್ನು ಪಡೆಯುತ್ತದೆ. ಫೀಚರ್‌ಗಳ ಪಟ್ಟಿಯಲ್ಲಿ 12.3-ಇಂಚಿನ ಸಂಪೂರ್ಣ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, ಹೆಡ್ಸ್-ಅಪ್ ಡಿಸ್‌ಪ್ಲೇ, ಪನೋರಮಿಕ್ ಸನ್‌ರೂಫ್, ವೈರ್‌ಲೆಸ್ ಫೋನ್ ಚಾರ್ಜರ್, ವೈರ್‌ಲೆಸ್ ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್ಪ್ಲೇ, ಕ್ರೂಸ್ ಕಂಟ್ರೋಲ್ ಮತ್ತು 360-ಡಿಗ್ರಿ ಕ್ಯಾಮೆರಾವನ್ನು ಒಳಗೊಂಡಿದೆ. 

ಪವರ್‌ಟ್ರೈನ್‌

ಎಂಜಿನ್‌

2-ಲೀಟರ್ ನಾಲ್ಕು ಸಿಲಿಂಡರ್ ಟರ್ಬೊ-ಪೆಟ್ರೋಲ್ ಎಂಜಿನ್

ಪವರ್‌

421 ಪಿಎಸ್

ಟಾರ್ಕ್‌

500 ಎನ್ಎಂ

ಟ್ರಾನ್ಸ್‌ಮಿಷನ್‌

9-ಸ್ಪೀಡ್‌ ಆಟೋಮ್ಯಾಟಿಕ್‌

ಡ್ರೈವ್‌ಟ್ರೈನ್‌

AWD*

*AWD = ಆಲ್‌ವೀಲ್‌ಡ್ರೈವ್‌

ಮರ್ಸಿಡೀಸ್‌ ಬೆಂಝ್‌ ಸಿಎಲ್‌ಇ ಕ್ಯಾಬ್ರಿಯೊಲೆಟ್

ಸಿಎಲ್‌ಇ ಕ್ಯಾಬ್ರಿಯೊಲೆಟ್ ಜಾಗತಿಕವಾಗಿ ಮರ್ಸಿಡಿಸ್-ಬೆಂಝ್‌ಗೆ ಹೊಚ್ಚಹೊಸ ಕಾರಾಗಿದ್ದು, ಇದು ಕೂಪ್ ಮತ್ತು ಕ್ಯಾಬ್ರಿಯೊಲೆಟ್ ಆವೃತ್ತಿಗಳಲ್ಲಿ ಲಭ್ಯವಿದೆ. ಹಾಗೆಯೇ ಇದು ಭಾರತದಲ್ಲಿ, ಕ್ಯಾಬ್ರಿಯೊಲೆಟ್ ಆವೃತ್ತಿಯಲ್ಲಿ ಮಾತ್ರ ಲಭ್ಯವಾಗಲಿದೆ, ಇದು ಇ-ಕ್ಲಾಸ್ ಕ್ಯಾಬ್ರಿಯೊಲೆಟ್ ಮತ್ತು ಎಸ್‌ಎಲ್ ರೋಡ್‌ಸ್ಟರ್ ನಂತರ ಕಾರು ತಯಾರಕರಿಂದ ಮೂರನೇ ಓಪನ್-ಟಾಪ್ ಕಾರು ಆಗಿದೆ. 

ಹೊರಭಾಗದ ಕುರಿತು

Mercedes-Benz CLE Cabriolet

ಮರ್ಸಿಡೀಸ್‌ ಬೆಂಝ್‌ ಸಿಎಲ್‌ಇ ಕ್ಯಾಬ್ರಿಯೊಲೆಟ್ ನಯವಾದ, ಸ್ಪೋರ್ಟಿ ವಿನ್ಯಾಸವನ್ನು ಹೊಂದಿದ್ದು, ಉದ್ದವಾದ ವೀಲ್‌ಬೇಸ್ ಮತ್ತು ಕಡಿಮೆ-ಸ್ಲಂಗ್ ಪ್ರೊಫೈಲ್‌ನೊಂದಿಗೆ ಇದು ಸೊಗಸಾದ ಲುಕ್‌ ಅನ್ನು ಹೊಂದಿದೆ. ಮುಂಭಾಗದಲ್ಲಿ, ಇದು ಸಿ-ಕ್ಲಾಸ್ ಸೆಡಾನ್-ಪ್ರೇರಿತ ಗ್ರಿಲ್ ಮತ್ತು ಮಲ್ಟಿಬೀಮ್ ಎಲ್ಇಡಿ ಹೆಡ್‌ಲೈಟ್‌ಗಳನ್ನು ಒಪ್ಶನಲ್‌ ಅಡಾಪ್ಟಿವ್ ಹೈ-ಬೀಮ್ ಅಸಿಸ್ಟ್ ಜೊತೆಗೆ ಏರ್ ಇನ್‌ಟೇಕ್‌ಗಳನ್ನು ಒಳಗೊಂಡಿರುವ ಸ್ಪೋರ್ಟಿ ಬಂಪರ್ ಅನ್ನು ಹೊಂದಿದೆ. ಕಾರಿನ ಆಕಾರವನ್ನು ಫ್ರೇಮ್‌ಲೆಸ್ ಬಾಗಿಲುಗಳು ಮತ್ತು ಮೃದುವಾಗಿ-ಇಳಿಜಾರದ ರೂಫ್‌ಲೈನ್‌ನಿಂದ ಹೈಲೈಟ್ ಮಾಡಲಾಗಿದೆ, ಬದಿಗಳಲ್ಲಿ ಸೂಕ್ಷ್ಮ ರೇಖೆಗಳು ಸ್ನಾಯುವಿನ ಸ್ಪರ್ಶವನ್ನು ಸೇರಿಸುತ್ತವೆ. ಹಿಂಭಾಗವು ಕನೆಕ್ಟೆಡ್‌ ಎಲ್‌ಇಡಿ ಟೈಲ್‌ಲೈಟ್‌ಗಳನ್ನು ಒಳಗೊಂಡಿದೆ, ಅದು ಮಧ್ಯದಲ್ಲಿ ಸಂಪೂರ್ಣ ಕಪ್ಪು ಅಂಶವನ್ನು ಹೊಂದಿದೆ. ಇದು 19 ಇಂಚಿನ ಅಲಾಯ್‌ ವೀಲ್‌ಗಳೊಂದಿಗೆ ಬರುತ್ತದೆ.  ಸಾಫ್ಟ್‌ ಟಾಪ್‌ ಬಗ್ಗೆ ಹೇಳುವುದಾದದರೆ, ಮರ್ಸಿಡಿಸ್-ಬೆಂಜ್‌ ಇದನ್ನು ಕಪ್ಪು ಮತ್ತು ಕೆಂಪು ಎಂಬ ಎರಡು ಬಣ್ಣಗಳ ಆಯ್ಕೆಯಲ್ಲಿ ನೀಡುತ್ತಿದೆ. ಸಾಫ್ಟ್-ಟಾಪ್ 60 kmph ಗಿಂತ ಕಡಿಮೆ ವೇಗದಲ್ಲಿ 20 ಸೆಕೆಂಡುಗಳಲ್ಲಿ ತೆರೆಯುತ್ತದೆ ಮತ್ತು ಮುಚ್ಚುತ್ತದೆ.

ಇಂಟೀರಿಯರ್‌ ಮತ್ತು ಫೀಚರ್‌ಗಳು

Mercedes-Benz CLE Cabriolet interior

ಮರ್ಸಿಡೀಸ್‌ ಬೆಂಝ್‌ ಸಿಎಲ್‌ಇ ಕ್ಯಾಬ್ರಿಯೊಲೆಟ್12.3-ಇಂಚಿನ ಡಿಜಿಟಲ್ ಡಿಸ್‌ಪ್ಲೇ ಮತ್ತು 11.9-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್‌ನೊಂದಿಗೆ ಅತ್ಯಾಧುನಿಕ ಮತ್ತು ಹೈಟೆಕ್ ಇಂಟಿರೀಯರ್‌ ಅನ್ನು ಹೊಂದಿದೆ. ಕ್ಯಾಬಿನ್ ಅನ್ನು 2+2 ಆಸನಗಳ ಸಂರಚನೆಯಲ್ಲಿ ವಿನ್ಯಾಸಗೊಳಿಸಲಾಗಿದೆ, ತಾಪನ ಮತ್ತು ಲುಂಬರ್‌ ಸಪೋರ್ಟ್‌ನೊಂದಿಗೆ ಮುಂಭಾಗದ ಆಸನಗಳನ್ನು ಒಳಗೊಂಡಿದೆ. 

ಫೀಚರ್‌ಗಳು ಪ್ರೀಮಿಯಂ ಆಡಿಯೊ ಗುಣಮಟ್ಟಕ್ಕಾಗಿ ಡಾಲ್ಬಿ ಅಟ್ಮಾಸ್‌ನೊಂದಿಗೆ 17-ಸ್ಪೀಕರ್ ಬರ್ಮೆಸ್ಟರ್ ಸೌಂಡ್ ಸಿಸ್ಟಮ್, ವೆಂಟಿಲೇಟೆಡ್ ಸೀಟ್‌ಗಳು ಮತ್ತು ವರ್ಧಿತ ಸೌಕರ್ಯಕ್ಕಾಗಿ ಏಳು-ಝೋನ್‌ ಮಸಾಜ್ ಕಾರ್ಯವನ್ನು ಒಳಗೊಂಡಿವೆ. ಹೆಚ್ಚುವರಿಯಾಗಿ, ಕಾರು ಚಾಲಕನ ಆದ್ಯತೆಗಳನ್ನು ಕಲಿಯುವ AI ಸಹಾಯಕವನ್ನು ಹೊಂದಿದೆ, ಉದಾಹರಣೆಗೆ ತಂಪಾಗಿರುವಾಗ ಬಿಸಿಯಾದ ಆಸನಗಳನ್ನು ಆಟೋಮ್ಯಾಟಿಕ್‌ ಆಗಿ ಸಕ್ರಿಯಗೊಳಿಸುತ್ತದೆ.

Mercedes-Benz CLE Cabriolet rear seats

ಪವರ್‌ಟ್ರೈನ್‌

ಮರ್ಸಿಡೀಸ್‌ ಬೆಂಝ್‌ ಸಿಎಲ್‌ಇ ಕ್ಯಾಬ್ರಿಯೊಲೆಟ್ ಅನ್ನು ಭಾರತದಲ್ಲಿ ಒಂದೇ ಎಂಜಿನ್ ಆಯ್ಕೆಯೊಂದಿಗೆ ನೀಡಲಾಗುತ್ತಿದೆ:

ಎಂಜಿನ್‌

48V ಮೈಲ್ಡ್‌ ಹೈಬ್ರಿಡ್ ಟೆಕ್ನಾಲಾಜಿಯೊಂದಿಗೆ 2-ಲೀಟರ್ 4-ಸಿಲಿಂಡರ್ ಟರ್ಬೊ-ಪೆಟ್ರೋಲ್ ಎಂಜಿನ್

ಪವರ್‌

258 ಪಿಎಸ್‌

ಟಾರ್ಕ್‌

400 ಎನ್‌ಎಮ್‌

ಗೇರ್‌ಬಾಕ್ಸ್‌

9-ಸ್ಪೀಡ್ ಆಟೋಮ್ಯಾಟಿಕ್‌ 

Mercedes-Benz CLE Cabriolet rear

ಪ್ರತಿಸ್ಪರ್ಧಿಗಳು

ಮರ್ಸಿಡೀಸ್‌- ಎಎಮ್‌ಜಿ ಜಿಎಲ್‌ಸಿ 43 4Matic ಭಾರತದಲ್ಲಿ ಪೋರ್ಷೆ ಮ್ಯಾಕಾನ್‌ಗೆ ಪ್ರತಿಸ್ಪರ್ಧಿಯಾಗಿದೆ, ಆದರೆ ಮರ್ಸಿಡೀಸ್‌ ಬೆಂಝ್‌ ಸಿಎಲ್‌ಇ ಕ್ಯಾಬ್ರಿಯೊಲೆಟ್ ಭಾರತದಲ್ಲಿ ಯಾವುದೇ ನೇರ ಪ್ರತಿಸ್ಪರ್ಧಿಗಳನ್ನು ಹೊಂದಿಲ್ಲ, ಇದನ್ನು ಬಿಎಮ್‌ಡಬ್ಲ್ಯೂ ಜೆಡ್‌4 ಗೆ ಪ್ರೀಮಿಯಂ ಪರ್ಯಾಯವೆಂದು ಪರಿಗಣಿಸಬಹುದು.

ಕಾರಿನ ಲೋಕದ ತ್ವರಿತ ಆಪ್‌ಡೇಟ್‌ಗಳನ್ನು ಪಡೆಯಲು ಕಾರ್‌ದೇಖೋದ ವಾಟ್ಸಾಪ್‌ ಚಾನೆಲ್‌ ಅನ್ನು ಫಾಲೋ ಮಾಡಿ

ಅವರಿಂದ ಪ್ರಕಟಿಸಲಾಗಿದೆ
was this article helpful ?

0 out of 0 found this helpful

Write your ಕಾಮೆಂಟ್

3 ಕಾಮೆಂಟ್ಗಳು
1
J
jagjeet
Aug 12, 2024, 7:54:19 AM

What is the price of this car in delhi

Read More...
    ಪ್ರತ್ಯುತ್ತರ
    Write a Reply
    1
    J
    jagjeet
    Aug 12, 2024, 7:53:55 AM

    What is the price of this car?

    Read More...
      ಪ್ರತ್ಯುತ್ತರ
      Write a Reply
      1
      J
      jagjeet
      Aug 12, 2024, 7:51:54 AM

      Great car I would love to buy

      Read More...
      ಪ್ರತ್ಯುತ್ತರ
      Write a Reply
      2
      J
      jagjeet
      Aug 12, 2024, 7:53:27 AM

      Good one + ?

      Read More...
        ಪ್ರತ್ಯುತ್ತರ
        Write a Reply
        Read Full News

        ಕಾರು ಸುದ್ದಿ

        • ಟ್ರೆಂಡಿಂಗ್ ಸುದ್ದಿ
        • ಇತ್ತಿಚ್ಚಿನ ಸುದ್ದಿ

        trending ಕಾರುಗಳು

        • ಲೇಟೆಸ್ಟ್
        • ಉಪಕಮಿಂಗ್
        • ಪಾಪ್ಯುಲರ್
        ×
        We need your ನಗರ to customize your experience