- + 4ಬಣ್ಣಗಳು
- + 33ಚಿತ್ರಗಳು
- ವೀಡಿಯೋಸ್
ಎಂಜಿ ಜೆಡ್ಎಸ್ ಇವಿ
ಎಂಜಿ ಜೆಡ್ಎಸ್ ಇವಿ ನ ಪ್ರಮುಖ ಸ್ಪೆಕ್ಸ್
ರೇಂಜ್ | 461 km |
ಪವರ್ | 174.33 ಬಿಹೆಚ್ ಪಿ |
ಬ್ಯಾಟರಿ ಸಾಮರ್ಥ್ಯ | 50.3 kwh |
ಚಾರ್ಜಿಂಗ್ time ಡಿಸಿ | 60 min 50 kw (0-80%) |
ಚಾರ್ಜಿಂಗ್ time ಎಸಿ | upto 9h 7.4 kw (0-100%) |
ಬೂಟ್‌ನ ಸಾಮರ್ಥ್ಯ | 488 Litres |
- ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್
- wireless charger
- ಆಟೋ ಡಿಮ್ಮಿಂಗ್ ಐಆರ್‌ವಿಎಮ್
- ಹಿಂಭಾಗದ ಕ್ಯಾಮೆರಾ
- ಕೀಲಿಕೈ ಇಲ್ಲದ ನಮೂದು
- ಸ್ಬಯಂಚಾಲಿತ ಹವಾಮಾನ ನಿಯಂತ್ರಣ
- ರಿಯರ್ ಏಸಿ ವೆಂಟ್ಸ್
- ಏರ್ ಪ್ಯೂರಿಫೈಯರ್
- ಕ್ರುಯಸ್ ಕಂಟ್ರೋಲ್
- ಪಾರ್ಕಿಂಗ್ ಸೆನ್ಸಾರ್‌ಗಳು
- ಸನ್ರೂಫ್
- advanced internet ಫೆಅತುರ್ಸ್
- adas
- key ವಿಶೇಷಣಗಳು
- top ವೈಶಿಷ್ಟ್ಯಗಳು

ಜೆಡ್‌ಎಸ್ ಇವಿ ಇತ್ತೀಚಿನ ಅಪ್ಡೇಟ್
MG ZS EV ಕುರಿತ ಇತ್ತೀಚಿನ ಆಪ್‌ಡೇಟ್ ಏನು ?
MG ZS EV ಬ್ಯಾಟರಿ ಬಾಡಿಗೆ ಪ್ರೋಗ್ರಾಮ್‌ನೊಂದಿಗೆ ನೀಡಲಾಗುತ್ತಿದ್ದು, ಇದು 4.99 ಲಕ್ಷ ರೂ.ಗಳವರೆಗೆ ಬೆಲೆ ಕಡಿತಕ್ಕೆ ಕಾರಣವಾಗುತ್ತದೆ.
MG ZS EVಯ ಬ್ಯಾಟರಿ ಬಾಡಿಗೆ ಪ್ರೊಗ್ರಾಮ್ ಬಗ್ಗೆ ಹೇಳುವುದಾದದರೆ..
ಎಮ್‌ಜಿ ಜೆಡ್‌ಎಸ್ ಇವಿಯ ಬ್ಯಾಟರಿ ಬಾಡಿಗೆ ಕಾರ್ಯಕ್ರಮವು ಗ್ರಾಹಕರಾದ ನೀವು ವಾಹನದ ಬ್ಯಾಟರಿ ಪ್ಯಾಕ್ ಬಳಕೆಗೆ ಅನುಸಾರವಾಗಿ ಪಾವತಿಸುವ ಕಾರ್ಯಕ್ರಮವಾಗಿದೆ. ಬ್ಯಾಟರಿಯ ಬೆಲೆಯನ್ನು ವಾಹನದ ಬೆಲೆಯಲ್ಲಿ ಸೇರಿಸಲಾಗಿಲ್ಲ ಮತ್ತು ನೀವು ಬ್ಯಾಟರಿಯ ಬಳಕೆಗೆ ಪಾವತಿಸಬೇಕಾಗುತ್ತದೆ, ಇದರ ಬೆಲೆ ಪ್ರತಿ ಕಿ.ಮೀ.ಗೆ 4.5 ರೂ. ನಷ್ಟಿದೆ. ನೀವು ಕನಿಷ್ಠ 1,500 ಕಿ.ಮೀ.ಗಳಿಗೆ ಅದನ್ನು ರೀಚಾರ್ಜ್ ಮಾಡಬೇಕಾಗುತ್ತದೆ.
ಭಾರತದಲ್ಲಿ MG ZS EVಯ ಬೆಲೆ ಎಷ್ಟು?
ಎಮ್‌ಜಿ ಜೆಡ್‌ಎಸ್ ಇವಿಯ ಬೆಲೆ 18.98 ಲಕ್ಷ ರೂ.ನಿಂದ 25.75 ಲಕ್ಷ ರೂ.ಗಳವರೆಗೆ (ಎಕ್ಸ್ ಶೋ ರೂಂ, ಭಾರತಾದ್ಯಂತ) ಇದೆ. ಬ್ಯಾಟರಿ ಬಾಡಿಗೆ ಯೋಜನೆಯನ್ನು ಆರಿಸಿಕೊಳ್ಳುವುದರಿಂದ ಆರಂಭಿಕ ಬೆಲೆ 13.99 ಲಕ್ಷ ರೂ.ಗಳಿಗೆ ಇಳಿದು 20.76 ಲಕ್ಷ ರೂ.ಗಳವರೆಗೆ ಇರಲಿದೆ(ಎಲ್ಲಾ ಬೆಲೆಗಳು ಭಾರತದಾದ್ಯಂತದ ಎಕ್ಸ್-ಶೋರೂಂ ಆಗಿದೆ). ಆದರೆ, ಈ ಯೋಜನೆಯಡಿಯಲ್ಲಿ, ನೀವು ಬ್ಯಾಟರಿ ಚಂದಾದಾರಿಕೆ ಶುಲ್ಕವಾಗಿ ಪ್ರತಿ ಕಿ.ಮೀ.ಗೆ 4.5 ರೂ.ಗಳನ್ನು ಪಾವತಿಸಬೇಕಾಗುತ್ತದೆ.
MG ZS EV ಯಲ್ಲಿ ಎಷ್ಟು ವೇರಿಯೆಂಟ್‌ಗಳಿವೆ ?
ಎಮ್‌ಜಿಯು ಜೆಡ್‌ಎಸ್ ಇವಿಯನ್ನು ನಾಲ್ಕು ವಿಶಾಲ ವೇರಿಯೆಂಟ್‌ಗಳಲ್ಲಿ ನೀಡುತ್ತಿದೆ:
-
ಎಕ್ಸಿಕ್ಯುಟಿವ್
-
ಎಕ್ಸೈಟ್ ಪ್ರೊ
-
ಎಕ್ಸ್‌ಕ್ಲೂಸಿವ್ ಪ್ಲಸ್
-
ಎಸೆನ್ಸ್
ಎಕ್ಸ್‌ಕ್ಲೂಸಿವ್ ಪ್ಲಸ್ ವೇರಿಯೆಂಟ್ ಅನ್ನು ಆಧರಿಸಿದ ಲಿಮಿಟೆಡ್ ಸಂಖ್ಯೆಯ 100-ವರ್ಷಗಳ ಎಡಿಷನ್ ಟ್ರಿಮ್ ಸಹ ಇದೆ.
MG ZS EVಯಲ್ಲಿ ಆಸನ ಸಾಮರ್ಥ್ಯ ಎಷ್ಟು?
ಎಮ್‌ಜಿ ಜೆಡ್‌ಎಸ್ ಇವಿಯು 5 ಪ್ರಯಾಣಿಕರಿಗೆ ಅವಕಾಶ ಕಲ್ಪಿಸುತ್ತದೆ.
MG ZS EV ಯಾವ ಫೀಚರ್‌ಗಳನ್ನು ಹೊಂದಿದೆ?
ಜೆಡ್‌ಎಸ್ ಇವಿಯಲ್ಲಿರುವ ಪ್ರಮುಖ ಫೀಚರ್‌ಗಳಲ್ಲಿ 10.1-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, 7-ಇಂಚಿನ ಡಿಜಿಟಲ್ ಡ್ರೈವರ್ ಡಿಸ್‌ಪ್ಲೇ, ಪನೋರಮಿಕ್ ಸನ್‌ರೂಫ್ ಮತ್ತು 6-ವೇ ಚಾಲಿತ ಡ್ರೈವರ್ ಸೀಟ್ ಸೇರಿವೆ. ಇದು ಹಿಂಭಾಗದ ಎಸಿ ವೆಂಟ್‌ಗಳೊಂದಿಗೆ ಆಟೋ ಎಸಿ, PM 2.5 ಫಿಲ್ಟರ್ ಮತ್ತು ಎರಡು ಟ್ವೀಟರ್‌ಗಳನ್ನು ಒಳಗೊಂಡಿರುವ 6-ಸ್ಪೀಕರ್ ಸೆಟಪ್ ಅನ್ನು ಸಹ ಹೊಂದಿದೆ. ಈ ಎಲೆಕ್ಟ್ರಿಕ್ ಎಎಸ್‌ಯುವಿಯಲ್ಲಿ ಕನೆಕ್ಟೆಡ್ ಕಾರ್ ಟೆಕ್ ಮತ್ತು ವೈರ್‌ಲೆಸ್ ಫೋನ್ ಚಾರ್ಜರ್ ಸಹ ಒದಗಿಸಲಾಗಿದೆ.
ZS EV ಯ ಬ್ಯಾಟರಿ ಪವರ್‌ಟ್ರೇನ್ ವಿಶೇಷಣಗಳು ಮತ್ತು ರೇಂಜ್ ಬಗ್ಗೆ..
ಎಮ್‌ಜಿ ಜೆಡ್‌ಎಸ್ ಇವಿಯ 50.3 ಕಿ.ವ್ಯಾಟ್ ಬ್ಯಾಟರಿ ಪ್ಯಾಕ್ ಅನ್ನು ಎಲೆಕ್ಟ್ರಿಕ್ ಮೋಟರ್‌ಗೆ ಜೋಡಿಸಲಾಗಿದ್ದು, ಇದು 177 ಪಿಎಸ್ ಮತ್ತು 280 ಎನ್‌ಎಮ್‌ಅನ್ನು ಉತ್ಪಾದಿಸುತ್ತದೆ. ಎಮ್‌ಜಿಯ ಈ ಇವಿಯು 461 ಕಿ.ಮೀ.ಯಷ್ಟು ಕ್ಲೈಮ್ ಮಾಡಲಾದ ರೇಂಜ್ ಅನ್ನು ಹೊಂದಿದೆ.
7.4 ಕಿ.ವ್ಯಾಟ್ ಎಸಿ ಚಾರ್ಜರ್ ಬಳಸಿ 0 ರಿಂದ 100 ಪ್ರತಿಶತದವರೆಗೆ ಸಂಪೂರ್ಣವಾಗಿ ಚಾರ್ಜ್ ಮಾಡಲು 8.5 ರಿಂದ 9 ಗಂಟೆಗಳು ಬೇಕಾಗುತ್ತದೆ, ಆದರೆ 50 ಕಿ.ವ್ಯಾಟ್ ಡಿಸಿ ಫಾಸ್ಟ್ ಚಾರ್ಜರ್ ಕೇವಲ 60 ನಿಮಿಷಗಳಲ್ಲಿ 0 ರಿಂದ 80 ಪ್ರತಿಶತದವರೆಗೆ ಚಾರ್ಜ್ ಮಾಡಬಹುದು.
MG ZS EV ಎಷ್ಟು ಸುರಕ್ಷಿತವಾಗಿದೆ?
ಎಮ್‌ಜಿ ಜೆಡ್‌ಎಸ್ ಇವಿಯನ್ನು ಗ್ಲೋಬಲ್ NCAP ಅಥವಾ ಭಾರತ್ NCAP ಇನ್ನೂ ಕ್ರ್ಯಾಶ್-ಪರೀಕ್ಷೆಗೆ ಒಳಪಡಿಸಿಲ್ಲ. ಆದರೂ, ಇದರ ಸುರಕ್ಷತಾ ಸೂಟ್ ಆರು ಏರ್‌ಬ್ಯಾಗ್‌ಗಳು (ಸ್ಟ್ಯಾಂಡರ್ಡ್ ಆಗಿ), ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್, 360-ಡಿಗ್ರಿ ಕ್ಯಾಮೆರಾ ಮತ್ತು ಹಿಲ್ ಡಿಸೆಂಟ್ ಕಂಟ್ರೋಲ್ ಅನ್ನು ಒಳಗೊಂಡಿದೆ. MG ಲೇನ್ ಕೀಪ್ ಅಸಿಸ್ಟ್ ಮತ್ತು ನಿರ್ಗಮನ ಎಚ್ಚರಿಕೆ, ಅಡಾಪ್ಟಿವ್ ಕ್ರೂಸ್ ಕಂಟ್ರೋಲ್ ಮತ್ತು ಆಟೋನೊಮಸ್ ಎಮೆರ್ಜೆನ್ಸಿ ಬ್ರೇಕಿಂಗ್ ಸೇರಿದಂತೆ ಸುಧಾರಿತ ಚಾಲಕ ಸಹಾಯ ವ್ಯವಸ್ಥೆಗಳ (ADAS) ಸೂಟ್ ಅನ್ನು ಸಹ ನೀಡುತ್ತದೆ.
ಎಷ್ಟು ಬಣ್ಣ ಆಯ್ಕೆಗಳಿವೆ?
ಎಮ್‌ಜಿಯ ಈ ಎಲೆಕ್ಟ್ರಿಕ್ ಎಸ್‌ಯುವಿ ನಾಲ್ಕು ಬಣ್ಣಗಳಲ್ಲಿ ಲಭ್ಯವಿದೆ:
-
ಗ್ಲೇಜ್ ರೆಡ್
-
ಅರೋರಾ ಸಿಲ್ವರ್
-
ಸ್ಟಾರಿ ಬ್ಲ್ಯಾಕ್
-
ಕ್ಯಾಂಡಿ ವೈಟ್
100-ವರ್ಷಗಳ ಎಡಿಷನ್ ವೇರಿಯೆಂಟ್ ವಿಶೇಷವಾದ ಬ್ರಿಟಿಷ್ ರೇಸಿಂಗ್ ಗ್ರೀನ್ ಬಣ್ಣದ ಥೀಮ್‌ನಲ್ಲಿ ಬರುತ್ತದೆ.
ನೀವು MG ZS EV ಖರೀದಿಸಬೇಕೇ?
ನೀವು 300 ಕಿ.ಮೀ.ಗಿಂತ ಹೆಚ್ಚು ಕ್ಲೈಮ್ ಮಾಡಲಾದ ರೇಂಜ್‌ನೊಂದಿಗೆ ಪ್ರಾಯೋಗಿಕ ಮತ್ತು ಆರಾಮದಾಯಕ ಇವಿಯನ್ನು ಹುಡುಕುತ್ತಿದ್ದರೆ, ನೀವು ಎಮ್‌ಜಿ ಜೆಡ್‌ಎಸ್ ಇವಿಯನ್ನು ಆಯ್ಕೆ ಮಾಡಬಹುದು. ಎಲೆಕ್ಟ್ರಿಕ್ ಕ್ರಾಸ್ಒವರ್ ಪ್ರೀಮಿಯಂ ಫೀಚರ್‌ಗಳೊಂದಿಗೆ ಬರುತ್ತದೆ ಮತ್ತು ಉತ್ತಮ ಸುರಕ್ಷತಾ ಫೀಚರ್‌ಗಳನ್ನು ಸಹ ನೀಡುತ್ತದೆ..
MG ZS EV ಗೆ ಪ್ರತಿಸ್ಪರ್ಧಿಗಳು ಯಾವುವು?
ಎಮ್‌ಜಿ ಜೆಡ್‌ಎಸ್ ಇವಿಯು ಮಹೀಂದ್ರಾ ಬಿಇ 6ಇ, ಟಾಟಾ ಕರ್ವ್ ಇವಿ, ಬಿವೈಡಿ ಆಟ್ಟೋ3 ಮತ್ತು ಮುಂಬರುವ ಮಾರುತಿ ಇವಿಎಕ್ಸ್‌ಗಳಿಗೆ ಪ್ರತಿಸ್ಪರ್ಧಿಯಾಗಿದೆ. ಇದು ಟಾಟಾ ನೆಕ್ಸಾನ್ ಇವಿ ಮತ್ತು ಮಹೀಂದ್ರಾ ಎಕ್ಸ್‌ಯುವಿ400 ಇವಿಗಳಿಗೆ ದುಬಾರಿ ಪರ್ಯಾಯವೆಂದು ಪರಿಗಣಿಸಬಹುದು, ಇವುಗಳು ಕೆಳಗಿನ ಸೆಗ್ಮೆಂಟ್‌ನಲ್ಲಿವೆ.
ಜೆಡ್ಎಸ್ ಇವಿ ಎಕ್ಸಿಕ್ಯೂಟಿವ್(ಬೇಸ್ ಮಾಡೆಲ್)50.3 kwh, 461 km, 174.33 ಬಿಹೆಚ್ ಪಿ1 ತಿಂಗಳು ಕಾಯುತ್ತಿದೆ | Rs.18.98 ಲಕ್ಷ* | ||
ಜೆಡ್‌ಎಸ್ ಇವಿ ಎಕ್ಸೈಟ್ ಪ್ರೊ50.3 kwh, 461 km, 174.33 ಬಿಹೆಚ್ ಪಿ1 ತಿಂಗಳು ಕಾಯುತ್ತಿದೆ | Rs.20.48 ಲಕ್ಷ* | ||
ಜೆಡ್‌ಎಸ್ ಇವಿ ಎಕ್ಸ್ಕ್ಲೂಸಿವ್ ಪ್ಲಸ್50.3 kwh, 461 km, 174.33 ಬಿಹೆಚ್ ಪಿ1 ತಿಂಗಳು ಕಾಯುತ್ತಿದೆ | Rs.25.15 ಲಕ್ಷ* | ||
ಜೆಡ್‌ಎಸ್ ಇವಿ 100 year ಲಿಮಿಟೆಡ್ ಎಡಿಷನ್50.3 kwh, 461 km, 174.33 ಬಿಹೆಚ್ ಪಿ1 ತಿಂಗಳು ಕಾಯುತ್ತಿದೆ | Rs.25.35 ಲಕ್ಷ* | ||
ಅಗ್ರ ಮಾರಾಟ ಜೆಡ್‌ಎಸ್ ಇವಿ ಎಕ್ಸ್ಕ್ಲೂಸಿವ್ ಪ್ಲಸ್ dt50.3 kwh, 461 km, 174.33 ಬಿಹೆಚ್ ಪಿ1 ತಿಂಗಳು ಕಾಯುತ್ತಿದೆ | Rs.25.35 ಲಕ್ಷ* | ||
ಜೆಡ್‌ಎಸ್ ಇವಿ essence50.3 kwh, 461 km, 174.33 ಬಿಹೆಚ್ ಪಿ1 ತಿಂಗಳು ಕಾಯುತ್ತಿದೆ | Rs.26.44 ಲಕ್ಷ* | ||
ಜೆಡ್‌ಎಸ್ ಇವಿ essence dt(ಟಾಪ್ ಮೊಡೆಲ್)50.3 kwh, 461 km, 174.33 ಬಿಹೆಚ್ ಪಿ1 ತಿಂಗಳು ಕಾಯುತ್ತಿದೆ | Rs.26.64 ಲಕ್ಷ* |
ಎಂಜಿ ಜೆಡ್ಎಸ್ ಇವಿ comparison with similar cars
![]() Rs.18.98 - 26.64 ಲಕ್ಷ* |