ಹೊಸ ಮರ್ಸಿಡಿಸ್ ಬೆಂಝ್ V-ಕ್ಲಾಸ್'ನ ಬಗ್ಗೆ ನೀವು ತಿಳಿದುಕೊಳ್ಳಬೇಕಾದ 5 ವಿಷಯಗಳು
ಮರ್ಸಿಡಿಸ್ ವಿ-ಕ್ಲಾಸ್ 2024 ಗಾಗಿ tarun ಮೂಲಕ ಜುಲೈ 31, 2023 07:39 pm ರಂದು ಪ್ರಕಟಿಸಲಾಗಿದೆ
- 25 Views
- ಕಾಮೆಂಟ್ ಅನ್ನು ಬರೆಯಿರಿ
ಉತ್ತಮ ವಿನ್ಯಾಸ, ಬೆಲೆಗನುಗುಣವಾದ ಇಂಟೀರಿಯರ್‌ಗಳು, ಉತ್ಕೃಷ್ಟ ತಂತ್ರಜ್ಞಾನ ಇದನ್ನು ಇನ್ನಷ್ಟು ಐಷಾರಾಮಿ ಮಾಡುತ್ತವೆ
ಈ 2024 ಮರ್ಸಿಡಿಸ್ ಬೆಂಝ್ V-ಕ್ಲಾಸ್ ತನ್ನ ಪ್ರಥಮ ಅಂತರಾಷ್ಟ್ರೀಯ ಪ್ರದರ್ಶನ ನೀಡಿದ್ದು ಈ ಐಷಾರಾಮಿ ವ್ಯಾನ್ ಇನ್ನಷ್ಟು ಪ್ರಭಾವಶಾಲಿ ಫೀಚರ್‌ಗಳನ್ನು ಹೊಂದಿದೆ. ಇದು ಕ್ಯಾಬಿನ್ ಮತ್ತು ತಂತ್ರಜ್ಞಾನದಲ್ಲಿ ಮರುವಿನ್ಯಾಸಗೊಳಿಸಲಾದ ಹೆಚ್ಚು ಆಧುನಿಕ ಎಕ್ಸ್‌ಟೀರಿಯರ್ ವಿನ್ಯಾಸವನ್ನು ಪಡೆಯುತ್ತದೆ. ಹೊಸ ವಿ-ಕ್ಲಾಸ್ ಬಗ್ಗೆ ನೀವು ತಿಳಿದುಕೊಳ್ಳಬೇಕಾದ ಐದು ವಿಷಯಗಳು ಇಲ್ಲಿವೆ:
ಸೊಗಸಾದ ನೋಟ
ಹೊಸ V-ಕ್ಲಾಸ್ ಅದೇ ವ್ಯಾನ್ ಮಾದರಿಯ ಸಿಲೂಯೆಟ್ ಅನ್ನು ಹೊಂದಿದ್ದರೂ, ಗಮನಾರ್ಹವಾದ ವಿಭಿನ್ನ ನೋಟವನ್ನು ಹೊಂದಿದೆ. ಪ್ರಕಾಶಿತ ಸರೌಂಡಿಂಗ್‌ನೊಂದಿಗೆ ದೊಡ್ಡ ಗ್ರಿಲ್‌ಗಳು, ತೀಕ್ಷ್ಣವಾದ ಎಲ್‌ಇಡಿ ಲೈಟ್‌ಗಳು, ಗಟ್ಟಿಮುಟ್ಟಾದ ಬಂಪರ್‌ಗಳು, ಈ ವ್ಯಾನ್ ಅನ್ನು ಹೆಚ್ಚು ಐಷಾರಾಮಿ-ವಿಭಾಗದ ಖರೀದಿದಾರರಿಗೆ ಅಧಿಕ ಆಕರ್ಷಕವಾಗಿ ಮಾಡುತ್ತವೆ.
ಇದರ ಪಾರ್ಶ್ವ ಪ್ರೊಫೈಲ್ ಅನ್ನು ಹೆಚ್ಚು ಏರೋಡೈನಾಮಿಕ್ ಆಗಿ ವಿನ್ಯಾಸಗೊಳಿಸಲಾದ ಅಲಾಯ್ ವ್ಹೀಲ್‌ಗಳನ್ನು ತೋರಿಸುತ್ತದೆ, ಇದನ್ನು 17 ರಿಂದ 19 ಇಂಚುಗಳಷ್ಟು ಗಾತ್ರದಲ್ಲಿ ಮಾಡಲಾಗಿದೆ. ಹಿಂಭಾಗದಲ್ಲಿ, ಸ್ವಲ್ಪ ಟ್ವೀಕ್ ಮಾಡಲಾದ ಟೈಲ್ ಲ್ಯಾಂಪ್ ವಿನ್ಯಾಸ ಮತ್ತು ವಿಂಡ್ ಸ್ಕ್ರೀನ್ ವಿವರಗಳೊಂದಿಗೆ ನೀವು ಕನಿಷ್ಟ ಕಾಸ್ಮೆಟಿಕ್ ಬದಲಾವಣೆಗಳನ್ನು ಪಡೆಯುತ್ತೀರಿ.
ಇದಲ್ಲದೇ, V-ಕ್ಲಾಸ್ ಈಗ ಹಿಂದಿನ ಆವೃತ್ತಿಗಿಂತ ಹೆಚ್ಚು ಸುಂದರ ಹಾಗೂ ಆಕರ್ಷಕವಾಗಿ ಕಾಣುತ್ತದೆ.
ಉತ್ತಮ ಕ್ಯಾಬಿನ್ ಅನುಭವ
ಇದರ ಒಳಭಾಗದ ಬದಲಾವಣೆಯು ಹೆಚ್ಚು ಮಹತ್ವದ್ದಾಗಿದ್ದು, V-ಕ್ಲಾಸ್ ಹೊಸ ಆಂತರಿಕ ವಿನ್ಯಾಸವನ್ನು ಮರ್ಸಿಡಿಸ್ ಬೆಂಝ್-ಲೈನ್ಅಪ್‌ನೊಂದಿಗೆ ಪಡೆಯುತ್ತದೆ. ವಿಶಾಲ ವಿನ್ಯಾಸವನ್ನು ಹೊಂದಿರುವ ಡ್ಶಾಶ್‌ಬೋರ್ಡ್ ಲೇಔಟ್ ಸಾಕಷ್ಟು ಪ್ರೀಮಿಯಂ ಆಗಿದ್ದು ಕಣ್ಣಿಗೆ ಹಿತವಾದ ನೋಟವನ್ನು ನೀಡುತ್ತವೆ. ಇದು ಅಂತಿಮವಾಗಿ ಡ್ಯುಯಲ್ ಇಂಟಿಗ್ರೇಟೆಡ್ ಡಿಸ್‌ಪ್ಲೇಗಳೊಂದಿಗೆ ಬರುತ್ತದೆ.
ಹೊಸ ಸ್ಟೀರಿಂಗ್ ವ್ಹೀಲ್, ಸ್ಲೀಕರ್ ಎಸಿ ವೆಂಟ್‌ಗಳು, ಮತ್ತು ಈ ತುದಿಯಿಂದ ಆ ತುದಿಯವರೆಗೆ ಇರುವ ಆ್ಯಂಬಿಯೆಂಟ್ ಲೈಟಿಂಗ್ ಸ್ಟ್ರಿಪ್‌ಗಳು ಮುಂಬರುವ ಹೊಸ ಫೀಚರ್‌ಗಳಾಗಿವೆ.
ಇದನ್ನು ನಾಲ್ಕು ಮತ್ತು ಆರು ಆಸನಗಳ ಸಂರಚನೆಯಲ್ಲಿ ಮಾಡಲಾಗಿದ್ದು ಮೊದಲನೆಯದು ಹೆಚ್ಚು ಐಷಾರಾಮಿ ಅನುಭವವನ್ನು ನೀಡುತ್ತದೆ.
ಇದನ್ನೂ ಓದಿ: ದೊಡ್ಡದು, ಉತ್ತಮವೇr? ವಿಶ್ವದಲ್ಲಿಯೇ ಅತಿ ದೊಡ್ಡ ಡಿಸ್‌ಪ್ಲೇಗಳನ್ನು ಹೊಂದಿರುವ 10 ಕಾರುಗಳು
ಫೀಚರ್-ಭರಿತ
ಮುಂಭಾಗದಲ್ಲಿ ಹೊಸ-ತಲೆಮಾರಿನ ಮರ್ಸಿಡಿಸ್ ಡ್ಯುಯಲ್ ಡಿಸ್‌ಪ್ಲೇ ಸೆಟಪ್ ಇದ್ದು, ಟಚ್‌ಸ್ಕ್ರೀನ್ ಸಿಸ್ಟಮ್‌ಗಾಗಿ ಎರಡು 12.3 ಇಂಚಿನ ಡಿಸ್‌ಪ್ಲೇ ಹೊಂದಿದೆ ಮತ್ತು MBUX ಇನ್‌ಫೊಟೈನ್‌ಮೆಂಟ್ ಅನ್ನು ಒಳಗೊಂಡಿರುವ ವರ್ಚುವಲ್ ಕಾರ್‌ಪಿಟ್ (ಡಿಜಿಟಲ್ ಇನ್‌ಸ್ಟ್ರೂಮೆಂಟ್ ಕ್ಲಸ್ಟರ್) ಅನ್ನು ಹೊಂದಿದೆ.
ಹೆಚ್ಚು ಅನುಕೂಲ ಮತ್ತು ವಿಶ್ರಾಂತಿಗಾಗಿ, ಹೀಟೆಡ್ ಸ್ಟೀರಿಂಗ್ ವ್ಹೀಲ್, 64-ಬಣ್ಣದ ಆ್ಯಂಬಿಯೆಂಟ್ ಲೈಟಿಂಗ್, ಲಂಬರ್ ಬೆಂಬಲದೊಂದಿಗೆ ಎಲೆಕ್ಟ್ರಿಕ್ ಮೂಲಕ ಹೊಂದಿಸಬಹುದಾದ ಸೀಟುಗಳು, ಅಟೆಂನ್ಷನ್ ಅಸಿಸ್ಟ್, ಆ್ಯಕ್ಟಿವ್ ಬ್ರೇಕ್ ಅಸಿಸ್ಟ್, ಅಡಾಪ್ಟಿವ್ ಕ್ರೂಸ್ ಕಂಟ್ರೋಲ್, ಲೇನ್-ಕೀಪ್ ಅಸಿಸ್ಟ್ ಮತ್ತು ಪಾರ್ಕಿಂಗ್ ಅಸಿಸ್ಟೆಂಟ್‌ನಂತಹ ಅನೇಕ ಚಾಲಕ ಸಹಾಯ ಫೀಚರ್‌ಗಳನ್ನು ಇದು ಹೊಂದಿದೆ.
ಖಂಡಿತವಾಗಿ, ಹಿಂಬದಿಗೆ ಕುಳಿತ ಪ್ರಯಾಣಿಕರು V-ಕ್ಲಾಸ್‌ನಲ್ಲಿನ ಐಷಾರಾಮಿಗೆ ಯಾವುದೇ ಕೊರತೆಯನ್ನು ಅನುಭವಿಸುವುದಿಲ್ಲ. ಎಲೆಕ್ಟ್ರಿಕಲ್ ಸ್ಲೈಡಿಂಗ್ ಬಾಗಿಲುಗಳು, ಟಿಂಟ್ ಮಾಡಲಾದ ಹಿಂಬದಿಯ ಕಿಟಕಿಗಳು, ಸೀಟಿನ ಕೆಳಗೆ ಯುಎಸ್‌ಬಿ ಚಾರ್ಜರ್‌ಗಳು, ಮತ್ತು ಬೃಹತ್ ಆಕಾರದ ವಿಹಂಗಮ ಸನ್‌ರೂಫ್ ಅನ್ನು ಹೊಂದಿದೆ.
ನಂತರ ಮಾರ್ಕೊ ಪೊಲೊ ಆವೃತ್ತಿಯು ಮೂಲಭೂತವಾಗಿ ಐಷಾರಾಮಿ ಕ್ಯಾಂಪರ್ ಆಗಿದ್ದು, ಆರಾಮಕ್ಕಾಗಿ ಒರಗಿಕೊಳ್ಳಬಹುದಾದ ಆಸನಗಳು, ಸಿಂಕ್ ಮತ್ತು ಎಲೆಕ್ಟ್ರಿಕ್ ಸ್ಟೌವ್ ಹೊಂದಿರುವ ಸಣ್ಣ ಅಡುಗೆಮನೆ ಮತ್ತು ಸ್ಟೋರೇಜ್ ವಿಭಾಗಗಳನ್ನು ಹೊಂದಿದೆ.
ಎಲೆಕ್ಟ್ರಿಕ್ V-ಕ್ಲಾಸ್ ಕುರಿತು
V-ಕ್ಲಾಸ್‌ನ ಎಲೆಕ್ಟ್ರಿಕ್ ಆವೃತ್ತಿಯಾದ ನವೀಕೃತ ಇಕ್ಯೂವಿ ಅನ್ನು ಮರ್ಸಿಡಿಸ್ ಬಹಿರಂಗಪಡಿಸಿದೆ. ಇಕ್ಯೂವಿ ಮತ್ತು ಹೊಸ V-ಕ್ಲಾಸ್‌ನ ಪವರ್‌ಟ್ರೇನ್ ವಿವರಗಳನ್ನು ಇನ್ನೂ ಬಹಿರಂಗಪಡಿಸಬೇಕಿದೆ. ವಾಣಿಜ್ಯ-ವಿಭಾಗವನ್ನು ಪೂರೈಸುವ ವಿಟೋ ಮತ್ತು ಇ-ವಿಟೋ ಆವೃತ್ತಿಗಳು ಸಹ ಲಭ್ಯವಿವೆ.
ಈ ಇಕ್ಯೂವಿ ಸುಮಾರು 400 ಕಿಲೋಮೀಟರ್‌ಗಳ ರೇಂಜ್ ಅನ್ನು ಕ್ಲೈಮ್ ಮಾಡುತ್ತದೆ ಎಂದು ನಾವು ನಿರೀಕ್ಷಿಸಿದ್ದೇವೆ. ಐಸಿಇ ಆವೃತ್ತಿಗಳು ಅಥವಾ ಸಾಮಾನ್ಯ V- ಕ್ಲಾಸ್ ನಾವು ಇತರ ಮರ್ಸಿಡಿಸ್ ಕೊಡುಗೆಗಳಲ್ಲಿ ನೋಡುವಂತೆ ಲಘು-ಹೈಬ್ರಿಡ್ ತಂತ್ರಜ್ಞಾನದೊಂದಿಗೆ ಪೆಟ್ರೋಲ್ ಮತ್ತು ಡಿಸೇಲ್ ಎಂಜಿನ್‍ಗಳ ಆಯ್ಕೆಯನ್ನು ಒಳಗೊಂಡಿರುತ್ತದೆ.
ಇದನ್ನೂ ಓದಿ: ಹೆಚ್ಚಿನ ಮಾರುಕಟ್ಟೆ ಶ್ರೇಣಿಯನ್ನು ಹೊಂದಿರುವ 10 ಅತ್ಯುತ್ತಮ ಇವಿಗಳು
ಇದು ಭಾರತಕ್ಕೆ ಬರುತ್ತಾ?
V-ಕ್ಲಾಸ್‌ನ ಹಿಂದಿನ ಆವೃತ್ತಿಯನ್ನು 2019 ರಲ್ಲಿ ಪ್ರಾರಂಭಿಸಲಾಗಿದ್ದರೂ 2022 ರಲ್ಲಿ ನಿಲ್ಲಿಸಲಾಯಿತು. ಟೊಯೋಟಾ ವೆಲ್‌ಫೇರ್‌ಗೆ ಪ್ರತಿಸ್ಪರ್ಧಿಯಾಗಿ ಈ ನವೀಕೃತ ಮರ್ಸಿಡಿಸ್ ವ್ಯಾನ್ ರೂ. 90 ಲಕ್ಷ ಸ್ಟಿಕರ್ ಬೆಲೆಯೊಂದಿಗೆ 2024 ರಲ್ಲಿ ಭಾರತವನ್ನು ತಲುಪುತ್ತದೆ ಎಂಬುದು ನಮ್ಮ ನಿರೀಕ್ಷೆಯಾಗಿದೆ.
0 out of 0 found this helpful