• ಟಾಟಾ ಪಂಚ್‌ ev ಮುಂಭಾಗ left side image
1/1
  • Tata Punch EV
    + 21ಚಿತ್ರಗಳು
  • Tata Punch EV
  • Tata Punch EV
    + 4ಬಣ್ಣಗಳು
  • Tata Punch EV

ಟಾಟಾ ಪಂಚ್‌ ಇವಿ

ಟಾಟಾ ಪಂಚ್‌ ಇವಿ is a 5 ಸಿಟರ್‌ electric car. ಟಾಟಾ ಪಂಚ್‌ ಇವಿ Price starts from ₹ 10.99 ಲಕ್ಷ & top model price goes upto ₹ 15.49 ಲಕ್ಷ. It offers 20 variants It can be charged in 56 min-50 kw(10-80%) & also has fast charging facility. This model has 6 safety airbags. & 366 litres boot space. It can reach 0-100 km in just 9.5 Seconds. This model is available in 5 colours.
change car
107 ವಿರ್ಮಶೆಗಳುrate & win ₹ 1000
Rs.10.99 - 15.49 ಲಕ್ಷ*
*ಹಳೆಯ ಶೋರೂಮ್ ಬೆಲೆ ನವ ದೆಹಲಿ
view ಏಪ್ರಿಲ್ offer
ಈ ತಿಂಗಳ ಅತ್ಯುತ್ತಮ ಕೊಡುಗೆಗಳನ್ನು ಕಳೆದುಕೊಳ್ಳಬೇಡಿ

ಟಾಟಾ ಪಂಚ್‌ ಇವಿ ನ ಪ್ರಮುಖ ಸ್ಪೆಕ್ಸ್

  • key ವಿಶೇಷಣಗಳು
  • top ವೈಶಿಷ್ಟ್ಯಗಳು

ಪಂಚ್‌ ಇವಿ ಇತ್ತೀಚಿನ ಅಪ್ಡೇಟ್

ಇತ್ತೀಚಿನ ಆಪ್‌ಡೇಟ್‌: ನಾವು 8 ಚಿತ್ರಗಳಲ್ಲಿ ಟಾಟಾ ಪಂಚ್ EV ಯ ಮಿಡ್-ಸ್ಪೆಕ್ ಅಡ್ವೆಂಚರ್ ಲಾಂಗ್‌ ರೇಂಜ್‌ ಆವೃತ್ತಿಯನ್ನು ವಿವರಿಸಿದ್ದೇವೆ. ಪಂಚ್ ಇವಿಯ ಟಾಪ್-ಎಂಡ್‌ ವೇರಿಯೆಂಟ್‌ನ ಇಂಟಿರಿಯರ್‌ನ ಫೋಟೋ ಗ್ಯಾಲರಿಯನ್ನು ಸಹ ನೀವು ಪರಿಶೀಲಿಸಬಹುದು.

ಬೆಲೆ: ಭಾರತದಾದ್ಯಂತ ಟಾಟಾ ಪಂಚ್ ಇವಿಯ ಪರಿಚಯಾತ್ಮಕ, ಎಕ್ಸ್ ಶೋರೂಂ ಬೆಲೆಯು 10.99 ಲಕ್ಷ ರೂ.ನಿಂದ  15.49 ಲಕ್ಷ ರೂ.ವರೆಗೆ ಇದೆ. 

ವೇರಿಯೆಂಟ್‌ಗಳು: ಟಾಟಾ ಇದನ್ನು ಸ್ಮಾರ್ಟ್, ಸ್ಮಾರ್ಟ್ ಪ್ಲಸ್, ಅಡ್ವೆಂಚರ್, ಎಂಪವರ್ಡ್ ಮತ್ತು ಎಂಪವರ್ಡ್ ಪ್ಲಸ್ ಎಂಬ ಐದು ವಿಶಾಲವಾದ ವೇರಿಯೆಂಟ್‌ಗಳಲ್ಲಿ ನೀಡುತ್ತಿದೆ. 

ಬಣ್ಣ ಆಯ್ಕೆಗಳು: ಟಾಟಾ ಟಿಯಾಗೊ 5 ಡ್ಯುಯಲ್‌ ಟೋನ್‌ ಬಣ್ಣದ ಆಯ್ಕೆಗಳನ್ನು ನೀಡುತ್ತದೆ: ಫಿಯರ್‌ಲೆಸ್ ರೆಡ್ ಡ್ಯುಯಲ್ ಟೋನ್, ಡೇಟೋನಾ ಗ್ರೇ ಡ್ಯುಯಲ್ ಟೋನ್, ಸೀವೀಡ್ ಡ್ಯುಯಲ್ ಟೋನ್, ಪ್ರಿಸ್ಟಿನ್ ವೈಟ್ ಡ್ಯುಯಲ್ ಟೋನ್ ಮತ್ತು ಎಂಪವರ್ಡ್ ಆಕ್ಸೈಡ್ ಡ್ಯುಯಲ್ ಟೋನ್.

ಆಸನ ಸಾಮರ್ಥ್ಯ: ಇದು 5-ಆಸನಗಳ ಮೈಕ್ರೋ ಎಲೆಕ್ಟ್ರಿಕ್ ಎಸ್‌ಯುವಿ ಆಗಿದೆ.

ಬ್ಯಾಟರಿ ಪ್ಯಾಕ್ ಮತ್ತು ರೇಂಜ್‌: ಪಂಚ್ ಇವಿಯು ಎರಡು ಬ್ಯಾಟರಿ ಆಯ್ಕೆಗಳೊಂದಿಗೆ ಬರುತ್ತದೆ. ಮೊದಲನೆಯದು 25 kWh (82 PS/ 114 Nm) ಮತ್ತು 35 kWh (122 PS/ 190 Nm). 25 kWh ಬ್ಯಾಟರಿಯು ಅಂದಾಜು 315 ಕಿಮೀ ರೇಂಜ್‌ನ್ನು ನೀಡುತ್ತದೆ, ಹಾಗೆಯೇ ದೊಡ್ಡ 35 kWh ಬ್ಯಾಟರಿಯು 421 ಕಿಮೀ ಯಷ್ಟು ಒದಗಿಸುತ್ತದೆ.

ಅವರ ಚಾರ್ಜಿಂಗ್ ಸಮಯಗಳು ಈ ಕೆಳಗಿನಂತಿವೆ:

  • ಡಿಸಿ-ಫಾಸ್ಟ್ ಚಾರ್ಜರ್: 56 ನಿಮಿಷಗಳು (10-80 ಪ್ರತಿಶತ)

  • 7.2 kW ಎಸಿ ಹೋಮ್‌: 3.6 ಗಂಟೆಗಳು ಮತ್ತು ಲಾಂಗ್‌ ರೇಂಜ್‌ಗೆ 5 ಗಂಟೆಗಳು (10-100 ಪ್ರತಿಶತ)

  • ಎಸಿ ಹೋಮ್‌: 9.4 ಗಂಟೆಗಳು ಮತ್ತು ಲಾಂಗ್‌ ರೇಂಜ್‌ಗೆ 13.5 ಗಂಟೆಗಳು (10-100 ಪ್ರತಿಶತ)

  • 15ಎ ಪೋರ್ಟಬಲ್-ಚಾರ್ಜರ್: 9.4 ಗಂಟೆಗಳು ಮತ್ತು ಲಾಂಗ್‌ ರೇಂಜ್‌ಗೆ 13.5 ಗಂಟೆಗಳ ದೀರ್ಘ ಶ್ರೇಣಿಗೆ (10-100 ಪ್ರತಿಶತ)

ವೈಶಿಷ್ಟ್ಯಗಳು: ಟಾಟಾವು ತನ್ನ ಪಂಚ್ ಇವಿ ಅನ್ನು ವೈರ್‌ಲೆಸ್ ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್‌ಪ್ಲೇ ಜೊತೆಗೆ 10.25-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, 10.25-ಇಂಚಿನ ಸಂಪೂರ್ಣ ಡಿಜಿಟಲ್ ಡ್ರೈವರ್ ಡಿಸ್ಪ್ಲೇ, ಏರ್ ಪ್ಯೂರಿಫೈಯರ್, ವೆಂಟಿಲೇಟೆಡ್ ಫ್ರಂಟ್ ಸೀಟ್‌ಗಳು ಮತ್ತು ಸನ್‌ರೂಫ್ ಮೂಲಕ ಸಜ್ಜುಗೊಳಿಸಿದೆ. 

ಸುರಕ್ಷತೆ: ಪ್ರಯಾಣಿಕರ ಸುರಕ್ಷತೆಯನ್ನು ಆರು ಏರ್‌ಬ್ಯಾಗ್‌ಗಳು, 360-ಡಿಗ್ರಿ ಕ್ಯಾಮೆರಾ, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್ (ESC), ಮತ್ತು ಆಟೋ ಹೋಲ್ಡ್‌ನೊಂದಿಗೆ ಎಲೆಕ್ಟ್ರಾನಿಕ್ ಪಾರ್ಕಿಂಗ್ ಬ್ರೇಕ್ ಮೂಲಕ ಕಾಳಜಿ ವಹಿಸಲಾಗುತ್ತದೆ.

ಪ್ರತಿಸ್ಪರ್ಧಿಗಳು: ಪಂಚ್ EV ಯು ಮಾರುಕಟ್ಟೆಯಲ್ಲಿ ಸಿಟ್ರೊಯೆನ್ eC3 ನೊಂದಿಗೆ ಸ್ಪರ್ಧಿಸುತ್ತದೆ. ಹಾಗೆಯೇ ಇದು ಟಾಟಾ ಟಿಯಾಗೊ ಇವಿ ಮತ್ತು ಎಮ್‌ಜಿ ಕಾಮೆಟ್ ಇವಿಗೆ ಪ್ರೀಮಿಯಂ ಪರ್ಯಾಯವಾಗಿದೆ.

ಮತ್ತಷ್ಟು ಓದು
ಪಂಚ್‌ ev ಸ್ಮಾರ್ಟ್(Base Model)25 kwh, 315 km, 80.46 ಬಿಹೆಚ್ ಪಿ2 months waitingRs.10.99 ಲಕ್ಷ*
ಪಂಚ್‌ ev ಸ್ಮಾರ್ಟ್ ಪ್ಲಸ್25 kwh, 315 km, 80.46 ಬಿಹೆಚ್ ಪಿ2 months waitingRs.11.49 ಲಕ್ಷ*
ಪಂಚ್‌ ev ಆಡ್ವೆನ್ಚರ್25 kwh, 315 km, 80.46 ಬಿಹೆಚ್ ಪಿ2 months waitingRs.11.99 ಲಕ್ಷ*
ಪಂಚ್‌ ev ಆಡ್ವೆನ್ಚರ್ ಎಸ್‌25 kwh, 315 km, 80.46 ಬಿಹೆಚ್ ಪಿ2 months waitingRs.12.49 ಲಕ್ಷ*
ಪಂಚ್‌ ev ಎಂಪವರ್‌ಡ್‌25 kwh, 315 km, 80.46 ಬಿಹೆಚ್ ಪಿ2 months waitingRs.12.79 ಲಕ್ಷ*
ಪಂಚ್‌ ev ಆಡ್ವೆನ್ಚರ್ lr35 kwh, 421 km, 120.69 ಬಿಹೆಚ್ ಪಿ2 months waitingRs.12.99 ಲಕ್ಷ*
ಪಂಚ್‌ ev ಎಂಪವರ್‌ಡ್‌ ಪ್ಲಸ್25 kwh, 315 km, 80.46 ಬಿಹೆಚ್ ಪಿ2 months waitingRs.13.29 ಲಕ್ಷ*
ಪಂಚ್‌ ev ಎಂಪವರ್‌ಡ್‌ ಎಸ್‌25 kwh, 315 km, 80.46 ಬಿಹೆಚ್ ಪಿ2 months waitingRs.13.29 ಲಕ್ಷ*
ಪಂಚ್‌ ev ಆಡ್ವೆನ್ಚರ್ lr ಎಸಿ fc35 kwh, 421 km, 120.69 ಬಿಹೆಚ್ ಪಿ2 months waitingRs.13.49 ಲಕ್ಷ*
ಪಂಚ್‌ ev ಆಡ್ವೆನ್ಚರ್ ಎಸ್‌ lr35 kwh, 421 km, 120.69 ಬಿಹೆಚ್ ಪಿ2 months waitingRs.13.49 ಲಕ್ಷ*
ಪಂಚ್‌ ev ಎಂಪವರ್‌ಡ್‌ ಪ್ಲಸ್ ಎಸ್‌25 kwh, 315 km, 80.46 ಬಿಹೆಚ್ ಪಿ2 months waitingRs.13.79 ಲಕ್ಷ*
ಪಂಚ್‌ ev ಎಂಪವರ್‌ಡ್‌ lr35 kwh, 421 km, 120.69 ಬಿಹೆಚ್ ಪಿ2 months waitingRs.13.99 ಲಕ್ಷ*
ಪಂಚ್‌ ev ಆಡ್ವೆನ್ಚರ್ ಎಸ್‌ lr ಎಸಿ fc35 kwh, 421 km, 120.69 ಬಿಹೆಚ್ ಪಿ2 months waitingRs.13.99 ಲಕ್ಷ*
ಪಂಚ್‌ ev ಎಂಪವರ್ಡ್ ಪ್ಲಸ್ ಎಲ್ಆರ್35 kwh, 421 km, 120.69 ಬಿಹೆಚ್ ಪಿ2 months waitingRs.14.49 ಲಕ್ಷ*
ಪಂಚ್‌ ev ಎಂಪವರ್‌ಡ್‌ ಎಸ್‌ lr35 kwh, 421 km, 120.69 ಬಿಹೆಚ್ ಪಿ2 months waitingRs.14.49 ಲಕ್ಷ*
ಪಂಚ್‌ ev ಎಂಪವರ್‌ಡ್‌ lr ಎಸಿ fc35 kwh, 421 km, 120.69 ಬಿಹೆಚ್ ಪಿ2 months waitingRs.14.49 ಲಕ್ಷ*
ಪಂಚ್‌ ev ಎಂಪವರ್‌ಡ್‌ ಪ್ಲಸ್ lr ಎಸಿ fc35 kwh, 421 km, 120.69 ಬಿಹೆಚ್ ಪಿ2 months waitingRs.14.99 ಲಕ್ಷ*
ಪಂಚ್‌ ev ಎಂಪವರ್‌ಡ್‌ ಪ್ಲಸ್ ಎಸ್‌ lr35 kwh, 421 km, 120.69 ಬಿಹೆಚ್ ಪಿ2 months waitingRs.14.99 ಲಕ್ಷ*
ಪಂಚ್‌ ev ಎಂಪವರ್‌ಡ್‌ ಎಸ್‌ lr ಎಸಿ fc35 kwh, 421 km, 120.69 ಬಿಹೆಚ್ ಪಿ2 months waitingRs.14.99 ಲಕ್ಷ*
ಪಂಚ್‌ ev ಎಂಪವರ್‌ಡ್‌ ಪ್ಲಸ್ ಎಸ್‌ lr ಎಸಿ fc(Top Model)35 kwh, 421 km, 120.69 ಬಿಹೆಚ್ ಪಿ2 months waitingRs.15.49 ಲಕ್ಷ*
ಎಲ್ಲಾ ರೂಪಾಂತರಗಳು ವೀಕ್ಷಿಸಿ

ಟಾಟಾ ಪಂಚ್‌ ಇವಿ ಇದೇ ಕಾರುಗಳೊಂದಿಗೆ ಹೋಲಿಕೆ

ಟಾಟಾ ಪಂಚ್‌ ಇವಿ ವಿಮರ್ಶೆ

 ಟಾಟಾ ಪಂಚ್ ಇವಿಯು ಒಂದು ಸಣ್ಣ ಎಲೆಕ್ಟ್ರಿಕ್ ಎಸ್‌ಯುವಿ ಆಗಿದ್ದು, ಇದರ ಬೆಲೆ 12 ರಿಂದ 16 ಲಕ್ಷ ರೂ. ವರೆಗೆ ಇದೆ. Citroen eC3 ಹೊರತುಪಡಿಸಿ, ಪಂಚ್ ಇವಿ ಯಾವುದೇ ನೇರ ಪ್ರತಿಸ್ಪರ್ಧಿಗಳನ್ನು ಹೊಂದಿಲ್ಲ. ಆದಾಗಿಯೂ, ನೀವು ಕಡಿಮೆ ಬಜೆಟ್‌ನ ಇವಿಯನ್ನು ಖರೀದಿಸಲು ಬಯಸಿದರೆ Tata Tiago/Tigor EV ಅಥವಾ MG ಕಾಮೆಟ್ ನ್ನು ಪರಿಗಣಿಸಬಹುದು. ಅಥವಾ ನೀವು ದೊಡ್ಡ ಎಲೆಕ್ಟ್ರಿಕ್‌ ವಾಹನವನ್ನು ಬಯಸಿದರೆ Tata Nexon EV/Mahindra XUV400 ನಂತಹ ಇತರವುಗಳನ್ನು ನಿಮ್ಮ ಆಯ್ಕೆಯಲ್ಲಿ ಸೇರಿಸಬಹುದು.

ಎಕ್ಸ್‌ಟೀರಿಯರ್

Tata Punch EV Front

ಟಾಟಾ ವಾಹನಗಳಿಗೆ ಫ್ಯಾಮಿಲಿ ಲುಕ್‌ನ್ನು ನೀಡಿರುವುದರಿಂದ ಇದೀಗ ಟಾಟಾ ಕಾರುಗಳನ್ನು ಗುರುತಿಸುವುದು ಸುಲಭವಾಗುತ್ತಿದೆ. ಪಂಚ್ ಇವಿಯು ಸಣ್ಣ ಎಸ್‌ಯುವಿಯಾಗಿ ಆಪ್‌ಡೇಟ್‌ ಆಗಿರುವ ವಿನ್ಯಾಸವನ್ನು ಪ್ರಾರಂಭಿಸುತ್ತದೆ, ಹೆಚ್ಚಿನ ಬದಲಾವಣೆಗಳನ್ನು ಮುಂಭಾಗದಲ್ಲಿ ಕೇಂದ್ರೀಕರಿಸಲಾಗಿದೆ. ಈ ಸುಧಾರಿಸಿದ ವಿನ್ಯಾಸವು ಪಂಚ್ EV ಗಾಗಿ ಸುಮಾರು ಒಂದು ವರ್ಷದವರೆಗೆ ಎಕ್ಸ್‌ಕ್ಲೂಸಿವ್‌ ಆಗಿ ಉಳಿಯುತ್ತದೆ, ಪಂಚ್ ಪೆಟ್ರೋಲ್‌ನ ಫೇಸ್‌ಲಿಫ್ಟ್ ಬಿಡುಗಡೆಯನ್ನು 2025 ರ ಮಧ್ಯದಲ್ಲಿ ನಿಗದಿಪಡಿಸಲಾಗಿದೆ. ಪಂಚ್ ಇವಿಯು ಸರಿಯಾದ ಮಿನಿ ಎಸ್ಯುವಿಯಂತೆ ಕಾಣುತ್ತದೆ ಎಂಬ ಸಂಗತಿ ನಮಗೆ ಇಷ್ಟವಾಗಿದೆ. ಎತ್ತರದ ಬಾನೆಟ್, ವಾಹನದ ಎತ್ತರ ಮತ್ತು 190 ಎಂಎಂ ಗ್ರೌಂಡ್ ಕ್ಲಿಯರೆನ್ಸ್ ಪಂಚ್‌ಗೆ ಆತ್ಮವಿಶ್ವಾಸದ ನೋಟವನ್ನು ನೀಡುತ್ತದೆ.

ಪಂಚ್‌ನ ವಿನ್ಯಾಸವು ನೆಕ್ಸಾನ್ ಇವಿಗೆ ಹೋಲುತ್ತದೆ, ಪೂರ್ಣ-ಅಗಲದ ಡೇಟೈಮ್ ರನ್ನಿಂಗ್ ಲ್ಯಾಂಪ್‌ಗಳು,ಎಲ್‌ಇಡಿ ಹೆಡ್‌ಲೈಟ್‌ಗಳು ಮತ್ತು ಮಂಜು ದೀಪಗಳನ್ನು ಬಂಪರ್‌ನಲ್ಲಿ ಇರಿಸಲಾಗಿದೆ. ಹಾಗೆಯೇ ಇದರಲ್ಲಿ ಸಾಂಪ್ರದಾಯಿಕ ಗ್ರಿಲ್ ನ್ನು ನೀಡಲಾಗುತ್ತಿಲ್ಲ. ನೆಕ್ಸಾನ್‌ ಇವಿಯಂತೆಯೇ, ಪಂಚ್ ಇವಿ ಅನುಕ್ರಮ ಟರ್ನ್‌ ಇಂಡಿಕೇಟರ್‌ ಮತ್ತು ವೆಲ್‌ಕಮ್‌/ಗುಡ್‌ಬೈ ಅನಿಮೇಶನ್ ಅನ್ನು ಸಹ ಪಡೆಯುತ್ತದೆ. 

Tata Punch EV Rear

ಟಾಟಾ ಚಾರ್ಜಿಂಗ್ ಫ್ಲಾಪ್ ಅನ್ನು ಸಹ ಮುಂಭಾಗಕ್ಕೆ ಸರಿಸಿದೆ. ನೀವು ರಿಲೀಸ್‌ ಬಟನ್ ಅನ್ನು ಒತ್ತಿದಾಗ ಅದು ಸ್ಮೂತ್‌ ಆಕ್ಷನ್‌ನಲ್ಲಿ ತೆರೆದುಕೊಳ್ಳುತ್ತದೆ. ಫ್ಲಾಪ್‌ನಲ್ಲಿ ಪಂಚ್ EV ಯೊಂದಿಗೆ  ಟಾಟಾ ಮೋಟಾರ್ಸ್ ಪಾದಾರ್ಪಣೆ ಮಾಡುತ್ತಿರುವ ಹೊಸ ಲೋಗೋ ಇರುತ್ತದೆ. ಈ ಲೋಗೋ ಎರಡು ಆಯಾಮಗಳನ್ನು ಹೊಂದಿದೆ ಮತ್ತು ಬ್ಲ್ಯಾಕ್‌ ಮತ್ತು ವೈಟ್‌ ಬಣ್ಣದಲ್ಲಿ ಫಿನಿಶ್‌ ಮಾಡಲಾಗಿದೆ. ಮುಂದೆ ಬರಲಿರುವ ಹೆಚ್ಚಿನ ಟಾಟಾ EV ಗಳಲ್ಲಿ ಇದನ್ನು ನೋಡಲು ಬಯಸುತ್ತೇವೆ. 

ಬದಿ ಮತ್ತು ಹಿಂಭಾಗದಿಂದ ನೋಡಿದಾಗ, ವಿನ್ಯಾಸದಲ್ಲಿ ಯಾವುದೇ ದೊಡ್ಡ ಬದಲಾವಣೆಳನ್ನು ನಾವು ಗಮನಿಸುವುದಿಲ್ಲ. ನೀವು 16-ಇಂಚಿನ ಡ್ಯುಯಲ್-ಟೋನ್ ಅಲಾಯ್‌ ವೀಲ್‌ಗಳನ್ನು ಮತ್ತು ಹಿಂಭಾಗದ ಬಂಪರ್‌ನಲ್ಲಿ ಕೆಲವು ಗ್ರೇ ಬಣ್ಣದ ಕ್ಲಾಡಿಂಗ್ ಅನ್ನು ಪಡೆಯುತ್ತೀರಿ. ಕಾರಿನ ವೆಚ್ಚವನ್ನು ಕಡಿಮೆ ಮಾಡುವ ಉದ್ದೇಶದಿಂದ ಹಿಂಭಾಗದಲ್ಲಿ ಹೊಸವಿನ್ಯಾಸದ ಸೇರ್ಪಡೆ ಮಾಡಲಾಗಿರುವುದಿಲ್ಲ.  ಅದೃಷ್ಟವಶಾತ್ ಇದು ಹಳೆಯದಾಗಿ ಕಾಣುವುದಿಲ್ಲ ಮತ್ತು ಹೊಸ ಮುಖದೊಂದಿಗೆ ಹೊಂದಾಣಿಕೆ ಆಗುತ್ತದೆ. 

ಪಂಚ್ EV ಸಹ ಸ್ಮಾರ್ಟ್, ಅಡ್ವೆಂಚರ್ ಮತ್ತು ಎಂಪವರ್‌ಡ್‌ ಎಂಬ ಮೂರು ಆವೃತ್ತಿಗಳನ್ನು  ಹೊಂದಿದೆ. ಇವೆಲ್ಲವೂ ವಿಶಿಷ್ಟವಾಗಿರುವ ಇಂಟಿರಿಯರ್‌ ಮತ್ತು ಬಾಹ್ಯ ಬಣ್ಣವನ್ನು ಹೊಂದಿವೆ.

ಇಂಟೀರಿಯರ್

Tata Punch EV Interior

ಇದರ ಇಂಟಿರೀಯರ್‌ನ ಗಮನಿಸುವಾಗ, ಟಾಟಾ ಮತ್ತೊಮ್ಮೆ ನೆಕ್ಸಾನ್‌ನಿಂದ ಸ್ಫೂರ್ತಿ ಪಡೆದಿದೆ. ಇಂಟಿರೀಯರ್‌ನ ಅನುಭವವು ಮೂರು ಪ್ರಮುಖ ವಿನ್ಯಾಸ ಬದಲಾವಣೆಗಳೊಂದಿಗೆ ಇನ್ನಷ್ಟು ಪ್ರಿಮಿಯಂ ಆಗಿದೆ. ಅವುಗಳೆಂದರೆ, ಪ್ರಕಾಶಿತ ಲೋಗೋದೊಂದಿಗೆ ಹೊಸ ಟ್ವಿನ್-ಸ್ಪೋಕ್ ಸ್ಟೀರಿಂಗ್ ವೀಲ್, ಟಚ್‌ ಆಧಾರಿತ ಕ್ಲೈಮೇಟ್‌ ಕಂಟ್ರೋಲ್‌ ಪ್ಯಾನೆಲ್‌ ಮತ್ತು ಮರುವಿನ್ಯಾಸಗೊಳಿಸಲಾದ ಫ್ಲೋರ್‌ ಕನ್ಸೋಲ್. ಟಾಪ್-ಸ್ಪೆಕ್ ಎಂಪವರ್ಡ್+ ವೇರಿಯೆಂಟ್‌ನಲ್ಲಿ, ವೈಟ್-ಗ್ರೇ ಥೀಮ್‌ನ ಡ್ಯಾಶ್‌ಬೋರ್ಡ್ ಮತ್ತು ಅಪ್‌ಹೊಲ್ಸ್‌ಟೆರಿ ತುಂಬಾನೇ ಕ್ಲಾಸಿಯಾಗಿ ಕಾಣುತ್ತದೆ.

ಈ ಬೆಲೆಯ ರೇಂಜ್‌ನಲ್ಲಿ ಇಂಟಿರೀಯರ್‌ನ ಕ್ವಾಲಿಟಿ ಗುಣಮಟ್ಟಗಳು ಸ್ವೀಕಾರಾರ್ಹ. ಟಾಟಾ ಗಟ್ಟಿಯಾದ (ಹಾಗೆಯೇ ಉತ್ತಮ ಗುಣಮಟ್ಟದ) ಪ್ಲಾಸ್ಟಿಕ್ ಅನ್ನು ಬಳಸಿದೆ ಮತ್ತು ಡ್ಯಾಶ್‌ಬೋರ್ಡ್‌ನಲ್ಲಿ ವಿಭಿನ್ನ ಟೆಕಶ್ಚರ್‌ಗಳನ್ನು ನೀಡಿದೆ, ಅದು ಟಚ್‌ ಮಾಡುವಾಗ ಉತ್ತಮ ಅನುಭವವನ್ನು ನೀಡುತ್ತದೆ. ಫಿಟ್ ಮತ್ತು ಫಿನಿಶ್ ಕೂಡ ಕ್ಯಾಬಿನ್ ಒಳಗೆ ಸ್ಥಿರವಾಗಿದೆ.

ಪೆಟ್ರೋಲ್ ಚಾಲಿತ ಆವೃತ್ತಿಗೆ ಹೋಲಿಸಿದರೆ ಈ ಎಲೆಕ್ಟ್ರಿಕ್‌ ಕಾರಿನಲ್ಲಿ ನೆಲಭಾಗವು ಹೆಚ್ಚಿದೆ. ಆದರೆ ನೀವು ಅವುಗಳಲ್ಲಿ ಒಬ್ಬರ ಹಿಂದೆ ಮತ್ತೊಬ್ಬರು ಕುಳಿತುಕೊಳ್ಳದ ಹೊರತು ವ್ಯತ್ಯಾಸವನ್ನು ಹೇಳಲು ನೀವು ಕಷ್ಟಪಡುತ್ತೀರಿ. ಟಾಟಾ ಅನುಭವ ಮತ್ತು ಪ್ರಾಯೋಗಿಕತೆಯಲ್ಲಿ ಯಾವುದೇ ನಷ್ಟವಿಲ್ಲದೆ ಇಂಟಿರೀಯರ್‌ನ್ನು ಚೆನ್ನಾಗಿ ಪ್ಯಾಕೇಜ್ ಮಾಡಲು ನಿರ್ವಹಿಸಿದೆ. 

Tata Punch EV Interior

ಮುಂಭಾಗದಲ್ಲಿ, ಆಸನಗಳು ಅಗಲವಾಗಿರುತ್ತವೆ ಮತ್ತು ದಪ್ಪವಾದ ಬದಿಯನ್ನು ಹೆಚ್ಚಿಸುತ್ತವೆ. ನೀವು XL ಗಾತ್ರದ ವ್ಯಕ್ತಿಯಾಗಿದ್ದರೂ ಸಹ, ಆಸನಗಳು ನಿಮ್ಮನ್ನು ಚೆನ್ನಾಗಿ ಹಿಡಿದಿಟ್ಟುಕೊಳ್ಳುತ್ತವೆ. ಸೆಂಟ್ರಲ್‌ ಆರ್ಮ್ ರೆಸ್ಟ್ ಕೂಡ ಇದೆ. ಡ್ರೈವರ್‌ ಸೀಟ್‌ನ ಎತ್ತರವನ್ನು ಸರಿಹೊಂದಿಸಬಹುದು, ಹಾಗೆಯೇ ಸ್ಟೀರಿಂಗ್ ಕೂಡ ಟಿಲ್ಟ್ ಎಡ್ಜೆಸ್ಟ್‌ಮೆಂಟ್‌ನ್ನು ಪಡೆಯುತ್ತದೆ. ನೀವು ಡ್ರೈವಿಂಗ್‌ಗೆ ಹೊಸಬರಾಗಿದ್ದರೆ,  ಎತ್ತರದ ಸೀಟಿಂಗ್‌ ಪೊಶಿಷನ್‌ನ್ನು ನೀವು ಪ್ರಶಂಸಿಸುತ್ತೀರಿ. ನೀವು ಬಾನೆಟ್‌ನ ಎಡ್ಜ್‌ನ್ನು ಬಹಳ ಸುಲಭವಾಗಿ ಗುರುತಿಸಲು ಸಾಧ್ಯವಾಗುತ್ತದೆ, ಮತ್ತು ತಿರುಗುವಾಗ/ಪಾರ್ಕಿಂಗ್ ಮಾಡುವಾಗ ಕಿಟಕಿಗಳ ಹೊರಗಿನ ನೋಟಕ್ಕೂ ಯಾವುದೇ ಅಡೆತಡೆಯಿಲ್ಲ. 

ಹಿಂಭಾಗದ ಅನುಭವವನ್ನು ಗಮನಿಸುವಾಗ, ಇಲ್ಲಿ ಸ್ವಲ್ಪ ರಾಜಿ ಮಾಡಿಕೊಂಡಂತೆ ತೋರುತ್ತದೆ. ಸ್ಥಳಾವಕಾಶವು ಸೀಮಿತವಾಗಿದೆ, ಮತ್ತು 6 ಅಡಿ ಎತ್ತರವಿರುವ ಪ್ರಯಾಣಿಕರಿಗೆ ತಮ್ಮ ಮೊಣಕಾಲುಗಳನ್ನು ಮುಂಭಾಗದ ಸೀಟಿಗೆ ಒತ್ತಿ ಕೂತಂತೆ ಭಾಸವಾಗಬಹುದು. ಹೆಡ್‌ರೂಮ್‌ನ ಕೆಲವು ಹೆಚ್ಚುವರಿ ಮಿಲಿಮೀಟರ್‌ಗಳನ್ನು ಕೆತ್ತಲು ಟಾಟಾವು ಹೆಡ್‌ಲೈನರ್ ಅನ್ನು ಹೊರತೆಗೆದಿದೆ. ಅಗಲಕ್ಕೆ ಸಂಬಂಧಿಸಿದಂತೆ, ಎರಡು ಪ್ರಯಾಣಿಕರಿಗೆ ಮಾತ್ರ ಆರಾಮದಾಯಕವಾಗಿ ಕುಳಿತು ಪ್ರಯಾಣಿಸಬಹುದು. ಮೂರನೇ ಪ್ರಯಾಣಿಕನನ್ನು ಒತ್ತಾಯ ಪೂರ್ವಕವಾಗಿ ಕುಳಿತುಕೊಳ್ಳುವುದನ್ನು ನಾವು ಶಿಫಾರಸು ಮಾಡುವುದಿಲ್ಲ.

ಸುರಕ್ಷತೆ

Tata Punch EV Safety

ಬೇಸ್‌ ವೇರಿಯೆಂಟ್‌ಗಳಿಂದಲೇ ಇದು ಆರು ಏರ್‌ಬ್ಯಾಗ್‌ಗಳು, ಇಬಿಡಿ ಜೊತೆಗೆ ಎಬಿಎಸ್‌, ಟ್ರಾಕ್ಷನ್ ಕಂಟ್ರೋಲ್, ಹಿಲ್ ಅಸಿಸ್ಟ್ ಅನ್ನು ನೀಡಲಾಗುತ್ತದೆ. ಲಾಂಗ್‌ ರೇಂಜ್‌ನ ಆವೃತ್ತಿಗಳು ಹೆಚ್ಚುವರಿಯಾಗಿ ಹಿಂಭಾಗದ ಡಿಸ್ಕ್ ಬ್ರೇಕ್‌ಗಳನ್ನು ಪಡೆಯುತ್ತವೆ. 

ಈವರೆಗೆ ಈ ವಾಹನವನ್ನು ಕ್ರ್ಯಾಶ್ ಟೆಸ್ಟ್ ಮಾಡಲಾಗಿಲ್ಲ. ಆದರೆ, ಶೀಘ್ರದಲ್ಲೇ ಭಾರತ್ ಎನ್‌ಸಿಎಪಿ ರೇಟಿಂಗ್ ಅನ್ನು ಹೊಂದಲಿದೆ ಎಂದು ಟಾಟಾ ಖಚಿತಪಡಿಸಿದೆ.

ಬೂಟ್‌ನ ಸಾಮರ್ಥ್ಯ

Tata Punch EV Boot Space

ಪಂಚ್ ಇವಿಯು 366 ಲೀಟರ್ ನಷ್ಟು ಬೂಟ್ ಸ್ಪೇಸ್ ಅನ್ನು ಹೊಂದಿದೆ. ಇದು ಪೆಟ್ರೋಲ್ ಆವೃತ್ತಿಯಷ್ಟೇ ಇರುತ್ತದೆ. ಯಾವುದೇ ಸಮಸ್ಯೆಗಳಿಲ್ಲದೆ ನೀವು 4 ಕ್ಯಾಬಿನ್ ಗಾತ್ರದ ಟ್ರಾಲಿ ಬ್ಯಾಗ್‌ಗಳನ್ನು ಇಲ್ಲಿ ಇಡಬಹುದು. ಬೂಟ್ ಆಳ ಮತ್ತು ಅಗಲವನ್ನು ಹೊಂದಿಲ್ಲ, ಆದ್ದರಿಂದ ನೀವು ದೊಡ್ಡ ಟ್ರಾಲಿ ಬ್ಯಾಗ್‌ಗಳನ್ನು ಸಾಗಿಸಲು ಸಾಧ್ಯವಾಗದಿರಬಹುದು. ಹೆಚ್ಚಿನ ಬ್ಯಾಗ್‌ ಅಥವಾ ಬೂಟ್‌ಸ್ಪೇಸ್‌ಗಾಗಿ ಹಿಂದಿನ ಸೀಟುಗಳನ್ನು 60:40 ಅನುಪಾತದಲ್ಲಿ ಬೆಂಡ್‌ ಮಾಡಬಹುದು.

ಕಾರ್ಯಕ್ಷಮತೆ

ಪಂಚ್ ಇವಿ ಅನ್ನು ಎರಡು ಬ್ಯಾಟರಿ ಪ್ಯಾಕ್‌ಗಳೊಂದಿಗೆ ನೀಡಲಾಗುತ್ತದೆ. ಮೊದಲನೆಯದು, 25 kWh ಮತ್ತು ಎರಡನೆಯದು 35 kWh. ಚಿಕ್ಕ ಬ್ಯಾಟರಿ ಪ್ಯಾಕ್ ಅನ್ನು 82 PS/114 Nm ಮೋಟಾರ್‌ನೊಂದಿಗೆ ಜೋಡಿಸಲಾಗಿದೆ (ಸರಿಸುಮಾರು ಪೆಟ್ರೋಲ್ ಪಂಚ್‌ಗೆ ಸಮನಾಗಿರುತ್ತದೆ) ಮತ್ತು ದೊಡ್ಡ ಬ್ಯಾಟರಿಯು ಶಕ್ತಿಯುತ 122 PS/190 Nm ಮೋಟಾರ್ ಅನ್ನು ಪಡೆಯುತ್ತದೆ.

ಪಂಚ್ ಇವಿಯಯ ಬ್ಯಾಟರಿಯನ್ನು ಚಾರ್ಜ್ ಮಾಡಲು, ನೀವು ಮನೆಯಲ್ಲಿ ಎಸಿ ಚಾರ್ಜರ್ ಅನ್ನು ಬಳಸಬಹುದು ಅಥವಾ ಪಬ್ಲಿಕ್‌ ಸ್ಥಳಗಳಲ್ಲಿ ಡಿಸಿ ಫಾಸ್ಟ್ ಚಾರ್ಜರ್‌ಗಳನ್ನು ಬಳಸಬಹುದು. ಚಾರ್ಜಿಂಗ್ ಸಮಯಗಳು ಈ ಕೆಳಗಿನಂತಿವೆ:

ಚಾರ್ಜರ್  ಮೀಡಿಯಂ ರೇಂಜ್ (25 ಕಿ.ವ್ಯಾ) ಲಾಂಗ್ ರೇಂಜ್ (35 ಕಿ.ವ್ಯಾ)
50 ಕಿ.ವ್ಯಾ ಡಿಸಿ ಫಾಸ್ಟ್ ಚಾರ್ಜರ್ (10-80%) 56 ನಿಮಿಷಗಳು 56 ನಿಮಿಷಗಳು
7.2 ಕಿ.ವ್ಯಾ ಎಸಿ ಹೋಂ ಚಾರ್ಜರ್ (10-100%) 3.6 ಗಂಟೆಗಳು 5 ಗಂಟೆಗಳು
3.3 ಕಿ.ವ್ಯಾ ಎಸಿ ಹೋಂ ಚಾರ್ಜರ್ (10-100%) 9.4 ಗಂಟೆಗಳು 13.5 ಗಂಟೆಗಳು

ಪಂಚ್ ಇವಿ ಲಾಂಗ್ ರೇಂಜ್

ನಾವು ಡ್ರೈವ್ ಅನುಭವವನ್ನು ಒಂದೇ ಪದದಲ್ಲಿ ವಿವರಿಸುವುದಾದರೆ, ಇದು ಸುಲಭ. ಇಲ್ಲಿ ಮಾಡಲು ಯಾವುದೇ ಕಲಿಕೆ ಇಲ್ಲ, ನೀವು ಸರಳವಾಗಿ ಕಾರಿಗೆ ಹತ್ತಿ ಕುಳಿತುಕೊಳ್ಳಬಹುದು ಮತ್ತು ಅದು ಚಾಲನೆ ಮಾಡುವ ವಿಧಾನವನ್ನು ಬಳಸಿಕೊಳ್ಳಬಹುದು. ಆಯ್ಕೆ ಮಾಡಲು ಇಕೋ, ಸಿಟಿ ಮತ್ತು ಸ್ಪೋರ್ಟ್ ಎಂಬ ಮೂರು ಡ್ರೈವ್‌ ಮೋಡ್‌ ಹಾಗು ಹಂತ 1-3, ಮತ್ತು ಆಫ್ ಎಂಬ ನಾಲ್ಕು ಹಂತದ ಬ್ರೇಕ್ ಎನರ್ಜಿ ರಿಜನರೇನ್‌ ಇದೆ. 

ಇಕೋ ಮೋಡ್‌ನಲ್ಲಿ, ಮೋಟಾರ್‌ನಿಂದ ಬರುವ ಪ್ರತಿಕ್ರಿಯೆಯು ಮಂದವಾಗಿರುತ್ತದೆ. ಭಾರೀ ದಟ್ಟಣೆಯ ರಸ್ತೆಯಲ್ಲಿ ಡ್ರೈವ್‌ ಮಾಡುವಾಗ ಸಹಾಯಕ್ಕೆ ಬರುವ ಮೋಡ್ ಇದು. ಸುಗಮ ಪವರ್‌ ವಿತರಣೆಯು ಹೊಸ ಚಾಲಕರಿಗೆ ಇನ್ನೂ ಸ್ನೇಹಪರವಾಗಿದೆ.

ನಿಮ್ಮ ಪ್ರಯಾಣವು ಸ್ವಲ್ಪ ತೆರೆದಿರುವ ನಗರ ಹೆದ್ದಾರಿಗಳಲ್ಲಿ ಮತ್ತು ಸುಗಮ ಸಂಚಾರವಿರುವ ಟ್ರಾಫಿಕ್‌ನ ಮಿಶ್ರಣವಾಗಿದ್ದರೆ ನೀವು ಸಿಟಿ ಮೋಡ್‌ಗೆ ಬದಲಾಯಿಸಬಹುದು. ಎಕ್ಸಿಲರೇಶನ್‌ನಲ್ಲಿ ಸೇರಿಸಲಾದ ತುರ್ತುಸ್ಥಿತಿಯನ್ನು ನೀವು ಆನಂದಿಸುವಿರಿ.

ಸ್ಪೋರ್ಟ್ ಮೋಡ್‌ನ್ನು ಫನ್‌ಗಾಗಿ ಕಾಯ್ದಿರಿಸಲಾಗಿದೆ. ಈ ಮೋಡ್‌ನಲ್ಲಿ ವಾಹನವು ಕೇವಲ 9.5 ಸೆಕೆಂಡುಗಳಲ್ಲಿ ಗಂಟೆಗೆ 0 ದಿಂದ 100 ಕಿಮೀ ವೇಗವನ್ನು ಸಾಧಿಸುವ ಸಾಮರ್ಥ್ಯವನ್ನು ಹೊಂದಿದೆ. ಆಗೊಮ್ಮೆ ಈಗೊಮ್ಮೆ ನಕ್ಕರೆ ಒಳ್ಳೆಯದು. ಇಲ್ಲದಿದ್ದರೆ ನೀವು ಸ್ಪೋರ್ಟ್ ಮೋಡ್ ಅನ್ನು ಬಳಸುವ ಅಗತ್ಯವಿಲ್ಲ.

ಗಮನಿಸಿ: ಬ್ರೇಕ್ ಎನರ್ಜಿ ರಿಜನರೇಶನ್‌

ಬ್ರೇಕ್ ಎನರ್ಜಿ ರಿಜನರೇಶನ್‌ ವ್ಯವಸ್ಥೆಯು ಬ್ರೇಕಿಂಗ್/ಕೋಸ್ಟಿಂಗ್ ಸಮಯದಲ್ಲಿ ಕಳೆದುಹೋಗುವ ಶಕ್ತಿಯನ್ನು ಸೆರೆಹಿಡಿಯುತ್ತದೆ ಮತ್ತು ಅದನ್ನು ಸಿಸ್ಟಮ್‌ಗೆ ಹಿಂತಿರುಗಿಸುತ್ತದೆ. ಇದು ಬ್ಯಾಟರಿಯ ರೇಂಜ್‌ನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.

ಹಂತ 3: ವೇಗದ ನಿಧಾನವು ತುಂಬಾ ಪ್ರಬಲವಾಗಿದೆ. ನೀವು ಥ್ರೊಟಲ್ ಅನ್ನು ಮೇಲಕ್ಕೆತ್ತಿದ ಕ್ಷಣದಲ್ಲಿ ವಾಹನವು ನಿಧಾನಗೊಳ್ಳುವ ಮೊದಲು ಸ್ವಲ್ಪಮಟ್ಟಿಗೆ ಪ್ರಗತಿ ರಹಿತವಾಗುವುದನ್ನು ನೀವು ಅನುಭವಿಸುವಿರಿ. ಇದು ಇನ್ನೂ ಸುಗಮವಾಗಿರಬಹುದಿತ್ತು. ನೀವು ಎಕ್ಸಿಲರೇಟರ್‌ನ್ನು ಸರಿಯಾಗಿ ಬಿಡುಗಡೆ ಮಾಡಿದರೆ, ನೀವು ಕೇವಲ ಒಂದು ಪೆಡಲ್ ಅನ್ನು ಬಳಸಿಕೊಂಡು ನಗರದ ಸುತ್ತಲೂ ಓಡಿಸಬಹುದು. ವಾಹನವು ನಿಧಾನವಾಗುವಾಗ ವಾಹನವು ಸಂಪೂರ್ಣವಾಗಿ ಸ್ಥಗಿತಗೊಳ್ಳುವುದಿಲ್ಲ ಎಂಬುದನ್ನು ಗಮನಿಸಿ - ಇದು ಗಂಟೆಗೆ 5 ಕಿಮೀ ವೇಗದಲ್ಲಿ ಸಾಗುತ್ತಿರುತ್ತದೆ. 

ಹಂತ 2: ನಗರದ ಒಳಗೆ ದೈನಂದಿನ ಉಪಯುಕ್ತತೆಗಾಗಿ ಇದು ಪರಿಪೂರ್ಣ. ನೀವು ಥ್ರೊಟಲ್ ಅನ್ನು ಎತ್ತಿದಾಗ ಪುನರುತ್ಪಾದನೆಗೆ ಪರಿವರ್ತನೆಯು ಹೆಚ್ಚು ಸುಗಮವಾಗಿರುತ್ತದೆ.

ಹಂತ 1: ತೆರೆದ ಹೆದ್ದಾರಿಗಳಲ್ಲಿ ಬಳಸುವುದನ್ನು ಪರಿಗಣಿಸಿ ಅಥವಾ ಹಂತ 2 ಅಥವಾ 3 ನೀವು ವೇಗವನ್ನು ಕಳೆದುಕೊಳ್ಳುವಂತೆ ಮಾಡುವಲ್ಲಿ ನಿರಾಕರಿಸಿ. 

ಹಂತ 0: ವಾಹನವು ತೇಲಿದಂತೆ ಸಾಗುತ್ತದೆ, 'ನ್ಯುಟ್ರಲ್‌'ನಲ್ಲಿರುವ ವಾಹನದಂತಹ ರೀತಿಯ ಅನುಭವವನ್ನು ನೀಡುತ್ತದೆ.

ರೈಡ್ ಅಂಡ್ ಹ್ಯಾಂಡಲಿಂಗ್

ಪಂಚ್ ಇವಿಯು ಹಗುರವಾದ ಸ್ಟೀರಿಂಗ್ ಅನ್ನು ಹೊಂದಿದ್ದು, ನಗರದೊಳಗೆ ಓಡಿಸಲು ಮತ್ತು ದಟ್ಟಣೆಯ ಸ್ಥಳಗಳಲ್ಲಿ ನಿಲುಗಡೆ ಮಾಡಲು ಸುಲಭವಾಗುತ್ತದೆ. ವೇಗವು 80 kmph ಅನ್ನು ದಾಟಿದಂತೆ ಸ್ಟೀರಿಂಗ್‌ನ ತೂಕವು ಹೆಚ್ಚಾಗುತ್ತದೆ.

ರೈಡ್ ಸೌಕರ್ಯವು ಒಂದು ಪ್ರಮುಖ ಅಂಶವಾಗಿದೆ, ಇದು ಕಾರು ಕೆಟ್ಟ ರಸ್ತೆಯ ಅಪೂರ್ಣತೆಗಳನ್ನು ಕಡಿಮೆ ಮಾಡಲು ನಿರ್ವಹಿಸುತ್ತದೆ. ಸಸ್ಪೆನ್ಸನ್‌ ಸೈಲೆಂಟ್‌ ಆಗಿ ಕಾರ್ಯನಿರ್ವಹಿಸುತ್ತದೆ ಮತ್ತು ಪ್ರಯಾಣಿಕರನ್ನು ಯೋಗ್ಯವಾದ ಸೌಕರ್ಯದಲ್ಲಿ ಇರಿಸುತ್ತದೆ. ಇದು ಅತಿ ಕಳಪೆ ಮೇಲ್ಮೈಗಳ ಮೇಲೆ ಮಾತ್ರ ಪ್ರಯಾಣಿಕರು ಆಚೀಚೆ ಚಲಿಸುವ ಅನುಭವ ನಿಮಗಾಗುತ್ತದೆ. 

ಪಂಚ್ ಇವಿಯ ಹೆದ್ದಾರಿ ನಡವಳಿಕೆಗಳು ಸ್ವೀಕಾರಾರ್ಹವಾಗಿವೆ. ಸ್ಥಿರತೆಯು ವಿಶ್ವಾಸ-ಸ್ಫೂರ್ತಿದಾಯಕವಾಗಿದೆ ಮತ್ತು ಲೇನ್‌ಗಳನ್ನು ತ್ವರಿತವಾಗಿ ಬದಲಾಯಿಸುವುದರಿಂದ ಅದನ್ನು ಅಸ್ಥಿರಗೊಳಿಸುವುದಿಲ್ಲ.

ವರ್ಡಿಕ್ಟ್

ಪಂಚ್ ಇವಿಗಾಗಿ ಟಾಟಾವು ನಿಗದಿಪಡಿಸಿರುವ ಬೆಲೆಯು ಕಾರಿನ ಒಟ್ಟಾರೆ ಗಾತ್ರವನ್ನು ಗಮನಿಸುವಾಗ ಸ್ವಲ್ಪ ಹೆಚ್ಚಾದಂತೆ ತೋರುತ್ತದೆ. ಆದಾಗಿಯೂ, ಇದರ ವಿನ್ಯಾಸ, ತಂತ್ರಜ್ಞಾನ ಮತ್ತು ಕಾರ್ಯಕ್ಷಮತೆಯು ಅದನ್ನು ಸಮರ್ಥಿಸುತ್ತದೆ.  ಹಿಂದಿನ ಸೀಟಿನ ಜಾಗದಲ್ಲಿ ಮಾತ್ರ ನಿಜವಾದ ಸಮಸ್ಯೆ ಇದೆ, ಇದು ಸ್ವಲ್ಪ ಕಿರಿದಾಗಿದ್ದು, ಇಬ್ಬರು ಪ್ರಯಾಣಿಕರಿಗೆ ಯೋಗ್ಯವಾಗಿದೆ. ಇದೇ ಬಜೆಟ್‌ನಲ್ಲಿ, ನೀವು ಬ್ರೆಝಾ/ನೆಕ್ಸಾನ್‌ನ ಪೆಟ್ರೋಲ್ ಮೊಡೆಲ್‌ಗಳನ್ನು ಪರಿಗಣಿಸಬಹುದು, ಏಕೆಂದರೆ ಅಲ್ಲಿ ಈ ಸಮಸ್ಯೆ ಉದ್ಭವಿಸುವುದಿಲ್ಲ.

ಆದಾಗಿಯೂ ಹಿಂಬದಿಯ ಆಸನದ ಸ್ಥಳವು ನಿಮಗೆ ನಿರ್ಣಾಯಕ ಅಂಶವಾಗದಿದ್ದರೆ ಅಥವಾ ನೀವು ಅನೇಕ ವೈಶಿಷ್ಟ್ಯಗಳೊಂದಿಗೆ ಮತ್ತು ಕಡಿಮೆ ಚಾಲನೆಯ ವೆಚ್ಚವನ್ನು ಹೊಂದಿರುವ ಕಾರನ್ನು ಬಯಸಿದರೆ, ಪಂಚ್ EV ಅತ್ಯುತ್ತಮ ಆಯ್ಕೆಯಾಗಿದೆ.

ಟಾಟಾ ಪಂಚ್‌ ಇವಿ

ನಾವು ಇಷ್ಟಪಡುವ ವಿಷಯಗಳು

  • 25 kWh/35 kWh ಎಂಬ ಎರಡು ಬ್ಯಾಟರಿ ಪ್ಯಾಕ್ ಆಯ್ಕೆಗಳು, ವಾಸ್ತವದಲ್ಲಿ ಇದು ಕ್ರಮವಾಗಿ 200 ಮತ್ತು 300 ಕಿ.ಮೀ.ಯ ವ್ಯಾಪ್ತಿಯನ್ನು ಹೊಂದಿದೆ.
  • 10.25 ಇಂಚಿನ ಎರಡು ಸ್ಕ್ರೀನ್‌ಗಳು, ಸನ್‌ರೂಫ್, ವೆಂಟಿಲೇಟೆಡ್‌ ಸೀಟ್‌ಗಳು ಹಾಗು 360° ಕ್ಯಾಮೆರಾ ದಂತಹ ವೈಶಿಷ್ಟ್ಯಗಳಿಂದ ಲೋಡ್‌ ಮಾಡಲಾಗಿದೆ.
  • ಮೋಜಿನ-ಡ್ರೈವ್: ಕೇವಲ 9.5 ಸೆಕೆಂಡುಗಳಲ್ಲಿ 0 ದಿಂದ100 ಕಿ.ಮೀ ವರೆಗಿನ ವೇಗ (ಲಾಂಗ್‌ ರೇಂಜ್‌ನ ಮೊಡೆಲ್‌ಗಳಲ್ಲಿ)

ನಾವು ಇಷ್ಟಪಡದ ವಿಷಯಗಳು

  • ಹಿಂದಿನ ಸೀಟಿನಲ್ಲಿ ಸ್ಥಳಾವಕಾಶವು ಅಷ್ಟೇನು ದೊಡ್ಡದಾಗಿಲ್ಲ.
  • ವಾಹನದ ಗಾತ್ರಕ್ಕೆ ಅನುಗುಣವಾಗಿ ಇದರ ಬೆಲೆ ಸ್ವಲ್ಪ ಹೆಚ್ಚಾದಂತೆ ತೋರುತ್ತದೆ.

ಒಂದೇ ರೀತಿಯ ಕಾರುಗಳೊಂದಿಗೆ ಪಂಚ್‌ ಇವಿ ಅನ್ನು ಹೋಲಿಕೆ ಮಾಡಿ

Car Nameಟಾಟಾ ಪಂಚ್‌ ಇವಿಟಾಟಾ ನೆಕ್ಸಾನ್ ಇವಿಟಾಟಾ ಟಿಯಾಗೋ ಇವಿಮಹೀಂದ್ರ ಎಕ್ಸ್‌ಯುವಿ 400 ಇವಿಟಾಟಾ ಟಿಗೊರ್ ಇವಿಸಿಟ್ರೊನ್ ಇಸಿ3ಟಾಟಾ ಪಂಚ್‌ಟಾಟಾ ನೆಕ್ಸ್ಂನ್‌ಟಾಟಾ ಟಿಯಾಗೋವೋಕ್ಸ್ವ್ಯಾಗನ್ ಟೈಗುನ್
ಸ೦ಚಾರಣೆಆಟೋಮ್ಯಾಟಿಕ್‌ಆಟೋಮ್ಯಾಟಿಕ್‌ಆಟೋಮ್ಯಾಟಿಕ್‌ಆಟೋಮ್ಯಾಟಿಕ್‌ಆಟೋಮ್ಯಾಟಿಕ್‌ಆಟೋಮ್ಯಾಟಿಕ್‌ಮ್ಯಾನುಯಲ್‌ / ಆಟೋಮ್ಯಾಟಿಕ್‌ಆಟೋಮ್ಯಾಟಿಕ್‌ / ಮ್ಯಾನುಯಲ್‌ಆಟೋಮ್ಯಾಟಿಕ್‌ / ಮ್ಯಾನುಯಲ್‌ಮ್ಯಾನುಯಲ್‌ / ಆಟೋಮ್ಯಾಟಿಕ್‌
Rating
107 ವಿರ್ಮಶೆಗಳು
166 ವಿರ್ಮಶೆಗಳು
282 ವಿರ್ಮಶೆಗಳು
248 ವಿರ್ಮಶೆಗಳು
129 ವಿರ್ಮಶೆಗಳು
113 ವಿರ್ಮಶೆಗಳು
1.1K ವಿರ್ಮಶೆಗಳು
499 ವಿರ್ಮಶೆಗಳು
750 ವಿರ್ಮಶೆಗಳು
236 ವಿರ್ಮಶೆಗಳು
ಇಂಧನಎಲೆಕ್ಟ್ರಿಕ್ಎಲೆಕ್ಟ್ರಿಕ್ಎಲೆಕ್ಟ್ರಿಕ್ಎಲೆಕ್ಟ್ರಿಕ್ಎಲೆಕ್ಟ್ರಿಕ್ಎಲೆಕ್ಟ್ರಿಕ್ಪೆಟ್ರೋಲ್ / ಸಿಎನ್‌ಜಿಡೀಸಲ್ / ಪೆಟ್ರೋಲ್ಪೆಟ್ರೋಲ್ / ಸಿಎನ್‌ಜಿಪೆಟ್ರೋಲ್
Charging Time 56 Min-50 kW(10-80%)4H 20 Min-AC-7.2 kW (10-100%)2.6H-AC-7.2 kW (10-100%)6 H 30 Min-AC-7.2 kW (0-100%)59 min| DC-25 kW(10-80%)57min----
ಹಳೆಯ ಶೋರೂಮ್ ಬೆಲೆ10.99 - 15.49 ಲಕ್ಷ14.74 - 19.99 ಲಕ್ಷ7.99 - 11.89 ಲಕ್ಷ15.49 - 19.39 ಲಕ್ಷ12.49 - 13.75 ಲಕ್ಷ11.61 - 13.35 ಲಕ್ಷ6.13 - 10.20 ಲಕ್ಷ8.15 - 15.80 ಲಕ್ಷ5.65 - 8.90 ಲಕ್ಷ11.70 - 20 ಲಕ್ಷ
ಗಾಳಿಚೀಲಗಳು6622-6222622-6
Power80.46 - 120.69 ಬಿಹೆಚ್ ಪಿ127.39 - 142.68 ಬಿಹೆಚ್ ಪಿ60.34 - 73.75 ಬಿಹೆಚ್ ಪಿ147.51 - 149.55 ಬಿಹೆಚ್ ಪಿ73.75 ಬಿಹೆಚ್ ಪಿ56.21 ಬಿಹೆಚ್ ಪಿ72.41 - 86.63 ಬಿಹೆಚ್ ಪಿ113.31 - 118.27 ಬಿಹೆಚ್ ಪಿ72.41 - 84.48 ಬಿಹೆಚ್ ಪಿ113.42 - 147.94 ಬಿಹೆಚ್ ಪಿ
Battery Capacity25 - 35 kWh30 - 40.5 kWh19.2 - 24 kWh34.5 - 39.4 kWh26 kWh29.2 kWh----
ರೇಂಜ್315 - 421 km325 - 465 km250 - 315 km375 - 456 km315 km320 km18.8 ಗೆ 20.09 ಕೆಎಂಪಿಎಲ್17.01 ಗೆ 24.08 ಕೆಎಂಪಿಎಲ್19 ಗೆ 20.09 ಕೆಎಂಪಿಎಲ್17.23 ಗೆ 19.87 ಕೆಎಂಪಿಎಲ್

ಟಾಟಾ ಪಂಚ್‌ ಇವಿ ಕಾರು ಸುದ್ದಿ ಮತ್ತು ಅಪ್ಡೇಟ್ಸ್

  • ಇತ್ತೀಚಿನ ಸುದ್ದಿ

ಟಾಟಾ ಪಂಚ್‌ ಇವಿ ಬಳಕೆದಾರರ ವಿಮರ್ಶೆಗಳು

4.2/5
ಆಧಾರಿತ107 ಬಳಕೆದಾರರ ವಿಮರ್ಶೆಗಳು
  • ಎಲ್ಲಾ (107)
  • Looks (23)
  • Comfort (26)
  • Mileage (7)
  • Engine (7)
  • Interior (18)
  • Space (10)
  • Price (22)
  • More ...
  • ಇತ್ತೀಚಿನ
  • ಸಹಾಯಕವಾಗಿದೆಯೆ
  • Critical
  • Punch EV Good Acceleration And Fun To Drive

    I bought the Tata Punch EV in September last year after reading the good reviews. Now it?s my time t...ಮತ್ತಷ್ಟು ಓದು

    ಇವರಿಂದ shailesh
    On: Apr 26, 2024 | 248 Views
  • A Small Electric Car That's Stylish, Efficient, And Innovative

    I have utilized this vehicle and it is Consistent with its name, the Tata Punch EV flaunts a strong ...ಮತ್ತಷ್ಟು ಓದು

    ಇವರಿಂದ kalpesh
    On: Apr 18, 2024 | 786 Views
  • Tata Punch EV Is Stylish, Efficient And Electric Marvel

    The Tata Punch EV is an electric car that's provident, satiny, and excellent. This electric vehicle ...ಮತ್ತಷ್ಟು ಓದು

    ಇವರಿಂದ adrineil
    On: Apr 17, 2024 | 233 Views
  • Punch EV Is Excellent Value For Money

    I love my tata punch EV as it is one of my favourite model. The Tata Punch EV in the electric vehicl...ಮತ್ತಷ್ಟು ಓದು

    ಇವರಿಂದ jaya
    On: Apr 15, 2024 | 524 Views
  • Spare Not Providing

    Tata Motors' decision not to provide a spare wheel means that stepney tires are not included, potent...ಮತ್ತಷ್ಟು ಓದು

    ಇವರಿಂದ santosh
    On: Apr 15, 2024 | 155 Views
  • ಎಲ್ಲಾ ಪಂಚ್‌ ev ವಿರ್ಮಶೆಗಳು ವೀಕ್ಷಿಸಿ

ಟಾಟಾ ಪಂಚ್‌ ಇವಿ Range

motor ಮತ್ತು ಟ್ರಾನ್ಸ್ಮಿಷನ್ಎಆರ್‌ಎಐ ರೇಂಜ್
ಎಲೆಕ್ಟ್ರಿಕ್ - ಆಟೋಮ್ಯಾಟಿಕ್‌between 315 - 421 km

ಟಾಟಾ ಪಂಚ್‌ ಇವಿ ವೀಡಿಯೊಗಳು

  • Tata Punch EV 2024 Review: Perfect Electric Mini-SUV?
    9:50
    ಟಾಟಾ ಪಂಚ್‌ EV 2024 Review: Perfect ಎಲೆಕ್ಟ್ರಿಕ್ Mini-SUV?
    3 ತಿಂಗಳುಗಳು ago | 11.2K Views
  • Tata Punch EV Launched | Everything To Know | #in2mins
    2:21
    Tata Punch EV Launched | Everything To Know | #in2mins
    3 ತಿಂಗಳುಗಳು ago | 9.5K Views
  •  Will the new Nexon.ev Drift? | First Drive Review | PowerDrift
    6:59
    Will the new Nexon.ev Drift? | First Drive Review | PowerDrift
    2 ತಿಂಗಳುಗಳು ago | 5.8K Views
  •  Tata Punch EV - Perfect First EV? | First Drive | PowerDrive
    5:54
    Tata Punch EV - Perfect First EV? | First Drive | PowerDrive
    2 ತಿಂಗಳುಗಳು ago | 25.4K Views

ಟಾಟಾ ಪಂಚ್‌ ಇವಿ ಬಣ್ಣಗಳು

  • pristine-white ಡುಯಲ್ ಟೋನ್
    pristine-white ಡುಯಲ್ ಟೋನ್
  • seaweed ಡುಯಲ್ ಟೋನ್
    seaweed ಡುಯಲ್ ಟೋನ್
  • ಎಂಪವರ್‌ಡ್‌ oxide ಡುಯಲ್ ಟೋನ್
    ಎಂಪವರ್‌ಡ್‌ oxide ಡುಯಲ್ ಟೋನ್
  • ಫಿಯರ್‌ಲೆಸ್ ಕೆಂಪು ಡುಯಲ್ ಟೋನ್
    ಫಿಯರ್‌ಲೆಸ್ ಕೆಂಪು ಡುಯಲ್ ಟೋನ್
  • ಡೇಟೋನಾ ಗ್ರೇ ಡುಯಲ್ ಟೋನ್
    ಡೇಟೋನಾ ಗ್ರೇ ಡುಯಲ್ ಟೋನ್

ಟಾಟಾ ಪಂಚ್‌ ಇವಿ ಚಿತ್ರಗಳು

  • Tata Punch EV Front Left Side Image
  • Tata Punch EV Grille Image
  • Tata Punch EV Front Fog Lamp Image
  • Tata Punch EV Side Mirror (Body) Image
  • Tata Punch EV Exterior Image Image
  • Tata Punch EV Exterior Image Image
  • Tata Punch EV Parking Camera Display Image
  • Tata Punch EV Interior Image Image
space Image

ಟಾಟಾ ಪಂಚ್‌ ಇವಿ Road Test

ಪರಿಗಣಿಸಲು ಹೆಚ್ಚಿನ ಕಾರು ಆಯ್ಕೆಗಳು
Ask QuestionAre you confused?

Ask anything & get answer ರಲ್ಲಿ {0}

ಪ್ರಶ್ನೆಗಳು & ಉತ್ತರಗಳು

  • ಇತ್ತೀಚಿನ ಪ್ರಶ್ನೆಗಳು

What is the maximum torque of Tata Punch EV?

Anmol asked on 19 Apr 2024

The maximum torque of Tata Punch EV is 190Nm.

By CarDekho Experts on 19 Apr 2024

What is the max power of Tata Punch EV?

Anmol asked on 11 Apr 2024

The max power of Tata Punch EV is 120.69bhp.

By CarDekho Experts on 11 Apr 2024

How many colours are available in Tata Punch EV?

Anmol asked on 6 Apr 2024

The Tata Punch EV is available in 5 different colours - Pristine-White Dual Tone...

ಮತ್ತಷ್ಟು ಓದು
By CarDekho Experts on 6 Apr 2024

What is the range of Tata Punch EV?

Devyani asked on 5 Apr 2024

The Tata Punch EV has two battery options. The 25 kWh battery offers an estimate...

ಮತ್ತಷ್ಟು ಓದು
By CarDekho Experts on 5 Apr 2024

What are the available colour options in Tata Punch EV?

Anmol asked on 2 Apr 2024

Tata Punch EV is available in 5 different colours - Pristine-White Dual Tone, Se...

ಮತ್ತಷ್ಟು ಓದು
By CarDekho Experts on 2 Apr 2024
space Image

ಭಾರತ ರಲ್ಲಿ ಪಂಚ್‌ ಇವಿ ಬೆಲೆ

ನಗರರಸ್ತೆ ಬೆಲೆ
ಬೆಂಗಳೂರುRs. 11.98 - 16.93 ಲಕ್ಷ
ಮುಂಬೈRs. 11.54 - 16.31 ಲಕ್ಷ
ತಳ್ಳುRs. 11.92 - 16.67 ಲಕ್ಷ
ಹೈದರಾಬಾದ್Rs. 13.36 - 18.68 ಲಕ್ಷ
ಚೆನ್ನೈRs. 11.54 - 16.31 ಲಕ್ಷ
ಅಹ್ಮದಾಬಾದ್Rs. 12.22 - 17.31 ಲಕ್ಷ
ಲಕ್ನೋRs. 11.64 - 16.35 ಲಕ್ಷ
ಜೈಪುರRs. 11.79 - 16.49 ಲಕ್ಷ
ಪಾಟ್ನಾRs. 11.54 - 16.31 ಲಕ್ಷ
ಚಂಡೀಗಡ್Rs. 11.54 - 16.31 ಲಕ್ಷ
ನಿಮ್ಮ ನಗರವನ್ನು ಆರಿಸಿ
space Image

ಟ್ರೆಂಡಿಂಗ್ ಟಾಟಾ ಕಾರುಗಳು

  • ಪಾಪ್ಯುಲರ್
  • ಉಪಕಮಿಂಗ್

Popular ಎಸ್ಯುವಿ Cars

  • ಟ್ರೆಂಡಿಂಗ್
  • ಲೇಟೆಸ್ಟ್
  • ಉಪಕಮಿಂಗ್

ಪಾಪ್ಯುಲರ್ ಎಲೆಕ್ಟ್ರಿಕ್ ಕಾರುಗಳು

  • ಟ್ರೆಂಡಿಂಗ್
  • ಉಪಕಮಿಂಗ್
view ಏಪ್ರಿಲ್ offer
view ಏಪ್ರಿಲ್ offer
Did ನೀವು find this information helpful?
ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ
×
We need your ನಗರ to customize your experience