ಟ್ರಾಫಿಕ್ ನಲ್ಲಿ ಸಿಲುಕಿಕೊಂಡಾಗ ನಿಮ್ಮ ಕಾರನ್ನು ರಕ್ಷಿಸಲು ಇರುವ 7 ಸಲಹೆಗಳು
ಡಿಸೆಂಬರ್ 28, 2023 03:51 pm ರಂದು rohit ಮೂಲಕ ಪ್ರಕಟಿಸಲಾಗಿದೆ
- 56 Views
- ಕಾಮೆಂಟ್ ಅನ್ನು ಬರೆಯಿರಿ
ಪ್ರಸಿದ್ಧ ಎಕ್ಸ್ ಪ್ರೆಸ್ ವೇ ಒಂದರಲ್ಲಿ ಅನೇಕ ಕಾರುಗಳು ಢಿಕ್ಕಿ ಹೊಡೆದಿರುವ ಇತ್ತೀಚಿನ ವೀಡಿಯೋ ಒಂದು ಅಂತಹ ಸಂದರ್ಭದಲ್ಲಿ ತಮ್ಮ ಕಾರುಗಳ ಕುರಿತು ಹೇಗೆ ಕಾಳಜಿ ವಹಿಸಬೇಕು ಎಂಬ ಕುರಿತು ಕಾರಿನ ಮಾಲೀಕರಿಗೆ ಮಾಹಿತಿ ನೀಡುವ ಅಗತ್ಯತೆಯು ಉದ್ಭವಿಸಿದೆ
ಪ್ರವಾಸಕ್ಕೆ ಹೋಗುವ ಯೋಚನೆ ಇದ್ದರೆ ದೀರ್ಘ ವಾರಾಂತ್ಯಗಳು ಸೂಕ್ತ. ರಸ್ತೆ ಪ್ರವಾಸಗಳಿಗೆ ಇಂತಹ ಸನ್ನಿವೇಶವು ಸಕಾಲವೂ ಕೂಡಾ. ದೈನಂದಿನ ಒತ್ತಡದಿಂದ ಮುಕ್ತಿ ಪಡೆಯಲು ಇದು ಸೂಕ್ತ ಸಮಯ. ಆದರೆ ನಿಮ್ಮಂತೆಯೇ ಸಾವಿರಾರು ಜನರು ಇದೇ ವಾರಾಂತ್ಯದಲ್ಲಿ ಪ್ರವಾಸದ ಯೋಜನೆಯನ್ನು ರೂಪಿಸಿರುತ್ತಾರೆ ಎಂಬುದನ್ನು ಮರೆಯಬಾರದು. ಇಂತಹ ಹೆಚ್ಚಿನ ಸಂದರ್ಭದಲ್ಲಿ, ಇಂತಹ ಸನ್ನಿವೇಶವು ಮೆಟ್ರೊ ನಗರದ ಹೊರಗಿರುವ ಎಕ್ಸ್ ಪ್ರೆಸ್ ವೇ ಗಳಲ್ಲಿ ವಿಪರೀತ ಟ್ರಾಫಿಕ್ ಅನ್ನು ಉಂಟು ಮಾಡುತ್ತದೆ. ಈ ಸಮಸ್ಯೆಯನ್ನು ಮುಂಬೈ - ಪುಣೆ ಎಕ್ಸ್ ಪ್ರೆಸ್ ವೇಯಲ್ಲಿ ಯಾವಾಗಲೂ ಗಮನಿಸಬಹುದು. ಮೂರು ದಿನಗಳ ಕ್ರಿಸ್ಮಸ್ 2023 ವಾರಾಂತ್ಯದಲ್ಲಿ, ತಾಂತ್ರಿಕ ದೋಷದ ಕಾರಣ ಕಾರುಗಳು ಕೆಟ್ಟು ಹೋಗಿ ರಸ್ತೆ ಬದಿಯಲ್ಲಿ ನಿಂತ ಕಾರಣ 12 ಕಿಲೋಮೀಟರ್ ನಷ್ಟು ದೂರಕ್ಕೆ ವಾಹನಗಳು ಸರದಿ ಸಾಲಿನಲ್ಲಿ ನಿಂತಿದ್ದು ವರದಿಯಾಗಿದೆ.
ಅಂತಹ ಟ್ರಾಫಿಕ್ ಸಮಸ್ಯೆಯು ಕಾರಿನ ವಿವಿಧ ಘಟಕಗಳ ಮೇಲೆ ಸಾಕಷ್ಟು ಒತ್ತಡವನ್ನುಂಟು ಮಾಡುತ್ತದೆ. ಆದರೆ ಎಕ್ಸ್ ಪ್ರೆಸ್ ವೇಯು ಘಟ್ಟಗಳ ನಡುವೆ ಹಾವಿನಂತೆ ಸಾಗುವ ಕಾರಣ ಉದ್ದನೆಯ ಇಳಿಜಾರಾದ ರಸ್ತೆಗಳಲ್ಲಿ ವಾಹನದ ಮೇಲೆ ಇನ್ನಷ್ಟು ಒತ್ತಡ ಉಂಟಾಗುತ್ತದೆ. ಹೀಗಾಗಿಯೇ ಅಧಿಕ ಬಿಸಿ ಮತ್ತು ಕ್ಲಚ್ ಗೆ ಉಂಟಾಗುವ ಹಾನಿಯ ಕಾರಣ ಅನೇಕ ವಾಹನಗಳು ಕೆಟ್ಟು ಹೋಗಿ ರಸ್ತೆ ಬದಿಯಲ್ಲಿ ನಿಂತು ಬಿಡುತ್ತವೆ. ಆದರೆ ಅಂತಹ ಸನ್ನಿವೇಶದಲ್ಲಿ ನೀವು ಸಿಲುಕಿಕೊಳ್ಳಬಾರದು ಎಂದುಕೊಂಡರೆ, ನಿಮ್ಮ ಕಾರಿನಲ್ಲಿ ತಾಂತ್ರಿಕ ಸಮಸ್ಯೆ ಉಂಟಾಗದಂತೆ ನೋಡಿಕೊಳ್ಳಲು ಈ ಕೆಳಗಿನ ಕೆಲವು ಸಲಹೆಗಳನ್ನು ಪಾಲಿಸಿರಿ:
ಎಂಜಿನ್ ತಾಪಮಾನ
ಯಾವುದೇ ರೀತಿಯ ಇನ್ಸ್ ಟ್ರುಮೆಂಟಲ್ ಕ್ಲಸ್ಟರ ಇರಲಿ, ಎಂಜಿನ್ ತಾಪಮಾನವನ್ನು ತೋರಿಸುವ ಗೇಜ್ ಅನ್ನು ನೀವು ಪಡೆಯುತ್ತೀರಿ (ಇದು C ಅಥವಾ H ಅಕ್ಷರಗಳಂತೆ ಕಾಣುತ್ತದೆ). ಹೆಚ್ಚಿನ ಸೌಲಭ್ಯಗಳನ್ನು ಹೊಂದಿರುವ ಕಾರುಗಳು MID ಅಥವಾ ಚಾಲಕನ ಡಿಜಿಟಲ್ ಡಿಸ್ಪ್ಲೇಯಲ್ಲಿ ತಾಪಮಾನವನ್ನು ತೋರಿಸುತ್ತವೆ. ಒಂದು ವೇಳೆ ಗೇಜ್, ‘H’ ಸಮೀಪಕ್ಕೆ ಬಂದರೆ ಅಥವಾ 100 ಡಿಗ್ರಿ ಸೆಲ್ಶಿಯಸ್ ಗಡಿಯನ್ನು ದಾಟಿದರೆ, ಎಂಜಿನ್ ತಾಪಮಾನದ ಎಚ್ಚರಿಕೆ ದೀಪವನ್ನು ನೀವು ನೋಡುತ್ತೀರಿ. ತಕ್ಷಣವೇ ನೀವು ನಿಮ್ಮ ಕಾರನ್ನು ಪಕ್ಕದಲ್ಲಿ ನಿಲ್ಲಿಸಿ ಎಂಜಿನ್ ಅನ್ನು ಆಫ್ ಮಾಡಿ ಅದಕ್ಕೆ ಗಂಭೀರ ಹಾನಿಯುಂಟಾಗುವುದನ್ನು ತಪ್ಪಿಸಬೇಕು. ರೇಡಿಯೇಟರ್, ಕೂಲಂಟ್ ಪಂಪ್ ಅಥವಾ ಥರ್ಮೋಸ್ಟಾಟ್ ಸರಿಯಾಗಿ ಕೆಲಸ ಮಾಡದೆ ಇದ್ದರೆ ಅತಿಯಾದ ಬಿಸಿ ಉಂಟಾಗಬಹುದು.
ಎಂಜಿನ್ ಪವರ್ ಉಳಿಸಿ
ವಿಪರೀತ ಟ್ರಾಫಿಕ್ ಇರುವಾಗ ಎಂಜಿನ್ ಅನ್ನು ದೀರ್ಘ ಕಾಲದ ವರೆಗೆ ಚಾಲನೆಯಲ್ಲಿಟ್ಟರೆ ಎಂಜಿನ್ ಕೆಟ್ಟು ಹೋಗಬಹುದು. ಹೀಗಾಗಿ, ದೀರ್ಘ ಕಾಲದವರೆಗೆ ನೀವು ಟ್ರಾಫಿಕ್ ನಲ್ಲಿ ಸಿಕ್ಕಿ ಬೀಳುವ ಸಾಧ್ಯತೆ ಕಾಣಿಸಿಕೊಂಡರೆ ಎಂಜಿನ್ ಅನ್ನು ಸ್ವಿಚ್ ಆಫ್ ಮಾಡುವುದು ಒಳ್ಳೆಯದು. ಈ ಸಂದರ್ಭದಲ್ಲಿ ಐಡಲ್ ಸ್ಟಾಪ್/ಸ್ಟಾರ್ಟ್ ಸೌಲಭ್ಯವು ಪ್ರಯೋಜನಕ್ಕೆ ಬರುತ್ತದೆ. ಕಾರು ಟ್ರಾಫಿಕ್ ನಲ್ಲಿ ಸಿಲುಕಿ ಬಿದ್ದಾಗ ಎಂಜಿನ್ ಎಷ್ಟು ಕಾಲ ಚಾಲನೆಯಲ್ಲಿರಬೇಕು ಎಂಬುದನ್ನು ಇದು ನೋಡಿಕೊಳ್ಳುತ್ತದೆ. ಎಂಜಿನ್ ಎಚ್ಚರಿಕೆ ಪರಿಶೀಲನಾ ದೀಪದ ಮೇಲೆಯೂ ಕಣ್ಣಿಡುವಂತೆ ನಾವು ಸಲಹೆ ನೀಡುತ್ತೇವೆ. ಎಂಜಿನ್ ಮಿಸ್ ಫೈರಿಂಗ್ ಅಥವಾ ಇಂಧನ ವ್ಯವಸ್ಥೆಯ ವೈಫಲ್ಯ ಮುಂತಾದ ಸಮಸ್ಯೆಗಳನ್ನು ಇದು ಸೂಚಿಸುತ್ತದೆ.
ಕಿಟಕಿಗಳನ್ನು ಕೆಳಗೆ ಮಾಡಿ
ಇಂತಹ ಸಂದರ್ಭದಲ್ಲಿ ನೆನಪಿಡಬೇಕಾದ ಒಂದು ಪ್ರಮುಖ ವಿಷಯವೆಂದರೆ ಎಸಿಯನ್ನು ಆಫ್ ಮಾಡುವುದು ಮತ್ತು ಕಿಟಕಿಗಳನ್ನು ಕೆಳಗೆ ಮಾಡುವುದು. ಬೆಟ್ಟವನ್ನೇರುವಾಗ ಅಥವಾ ವಿಪರೀತ ವಾಹನಗಳು ಇರುವಾಗ ಈ ಅನುಕೂಲತೆಯು ವಾಹನದ ವ್ಯವಸ್ಥೆಯ ಮೇಲೆ ಇನ್ನಷ್ಟು ಒತ್ತಡವನ್ನು ಹಾಕುತ್ತದೆ. ಸಾಮಾನ್ಯ ಸನ್ನಿವೇಶದಲ್ಲಿ ಇದು ಸಮಸ್ಯೆಯನ್ನುಂಟು ಮಾಡುವುದಿಲ್ಲ. ಆದರೆ ವಾಹನಗಳ ದೀರ್ಘ ಸಾಲು ಇರುವಾಗ ಸಮಸ್ಯೆಯನ್ನುಂಟು ಮಾಡಬಹುದು. ಎಂಜಿನ್ ವಿಪರೀತವಾಗಿ ಬಿಸಿಯಾಗಲು ಸಹ ಇದು ಕಾರಣವಾಗಬಹುದು. ಟ್ರಾಫಿಕ್ ನಲ್ಲಿ ಸಿಲುಕಿಕೊಂಡಿರುವ ವೇಳೆ ಹೊರಗಿನ ವಾತಾವರಣವು ಬಿಸಿಯಾಗಿದ್ದರೆ ಎಸಿಯನ್ನು ದೀರ್ಘ ಕಾಲಕ್ಕೆ ಸ್ವಿಚ್ ಆನ್ ಮಾಡಿ ಇಡುವ ಬದಲಿಗೆ ಅಗತ್ಯಕ್ಕೆ ತಕ್ಕಂತೆ ಹಿತಮಿತವಾಗಿ ಅದನ್ನು ನೀವು ಬಳಸಬಹುದು. ಇದರಿಂದಾಗಿ ಎಕ್ಸ್ ಪ್ರೆಸ್ ವೇಗಳಲ್ಲಿ ನಿಮ್ಮ ಕಾರಿನ ಇಂಧನ ದಕ್ಷತೆಯಲ್ಲಿಯೂ ವೃದ್ಧಿ ಉಂಟಾಗಲಿದೆ.
ಗೇರ್ ಬದಲಾಯಿಸಲು ಸಕಾಲ
ಕಾರು ಕೆಟ್ಟು ಹೋಗಲು ಅಥವಾ ಎಂಜಿನ್ ಗಳು ವಿಪರೀತವಾಗಿ ಬಿಸಿಯಾಗಲು ಇರುವ ಪ್ರಮುಖ ಕಾರಣವೆಂದರೆ, ಸಾಲುಗಟ್ಟಿದ ವಾಹನಗಳ ನಡುವೆ ಚಲಿಸುವಾಗ ಅಥವಾ ಡಾಂಬರಿನ ವಿಪರೀತ ತೇಪೆಯ ಮೇಲೆ ಕ್ಲಚ್ ಗಳ ವಿಪರೀತ ಬಳಕೆ. ವಾಹನವು ನಿಲ್ಲುವುದನ್ನು ಅಥವಾ ಹಿಂದಕ್ಕೆ ಚಲಿಸುವುದನ್ನು ತಪ್ಪಿಸಲು ವಿಪರೀತವಾಗಿ ಕ್ಲಚ್ ಪ್ಲೇಟ್ ಅನ್ನು ಬಳಸಿದಾಗ ಕ್ಲಚ್ ಪ್ಲೇಟ್ ಗಳ ಮೇಲೆ ವಿಪರೀತ ಒತ್ತಡ ಉಂಟಾಗುತ್ತದೆ ಮಾತ್ರವಲ್ಲದ ಅವು ಸುಟ್ಟು ಹೋಗುವ ಸಂಭವವೂ ಇರುತ್ತದೆ.
ನೀವು ಬಳಸುವ ಟ್ರಾನ್ಸ್ ಮಿಶನ್ ಮ್ಯಾನುವಲ್ ಆಗಿರಲಿ ಅಥವಾ ಅಟೋಮ್ಯಾಟಿಕ್ ಆಗಿರಲಿ, ಮೇಲಿನ ಸನ್ನಿವೇಶ ಉಂಟಾಗದಂತೆ ನೋಡಿಕೊಳ್ಳುವುದಕ್ಕಾಗಿ, ನಿಮ್ಮ ಕಾರು ನಿಂತಾಗ ಅನ್ನು ನ್ಯೂಟ್ರಲ್ ಗೆ ವರ್ಗಾಯಿಸಿ ಹ್ಯಾಂಡ್ ಬ್ರೇಕ್ ಅನ್ನು ಹಾಕಲು ಸಲಹೆ ನೀಡಲಾಗಿದೆ.
ನಿಧಾನವಾಗಿ ಚಲಾಯಿಸಿ, ಅಂತರವನ್ನು ಕಾಪಾಡಿ
ಉದ್ದನೆಯ ಟ್ರಾಫಿಕ್ ಸಾಲುಗಳಲ್ಲಿ, ಎತ್ತರದ ಪ್ರದೇಶದಲ್ಲಿ ಹಿಂದಕ್ಕೆ ಸರಿದಾಗ ಅಥವಾ ಹಠಾತ್ ಆಗಿ ಬ್ರೇಕ್ ಹಾಕಿದಾಗ ಸುರಕ್ಷತೆಯನ್ನು ಕಾಪಾಡುವುದಕ್ಕಾಗಿ, ಮುಂದಿನ ವಾಹನದಿಂದ ಸುರಕ್ಷಿತ ಅಂತರವನ್ನು ಕಾಯ್ದುಕೊಳ್ಳಲು ಸಲಹೆ ಮಾಡಲಾಗಿದೆ. ರಸ್ತೆಯಲ್ಲಿ ವಿಪರೀತ ಟ್ರಾಫಿಕ್ ಇದ್ದು, ಮುಂಭಾಗವು ಕಾಣದೆ ಇದ್ದಲ್ಲಿ ಈ ಮೂಲಭೂತ ನಿಯಮವನ್ನು ಪಾಲಿಸುವುದು ಅಗತ್ಯ.
ಇದನ್ನು ಸಹ ಓದಿರಿ: 2023ರಲ್ಲಿ ADAS ಪಡೆದ ರೂ. 30 ಲಕ್ಷಕ್ಕಿಂತ ಕಡಿಮೆ ಬೆಲೆಯ 7 ಕಾರುಗಳಿವು
ಕ್ಷಿಪ್ರವಾಗಿ ಕಾರಿನ ಪೂರ್ವಭಾವಿ ತಪಾಸಣೆ
ನಿಮ್ಮ ಪ್ರಯಾಣದ ವೇಳೆ ವಾಹನಗಳ ವಿಪರೀತ ಸಾಲನ್ನು ನೀವು ನಿರೀಕ್ಷಿಸಿದ್ದರೆ, ನಿಮ್ಮ ವಾಹನದ ನಿರ್ವಹಣೆಯ ಕುರಿತು ನೀವು ಸಕ್ರಿಯವಾಗಿ ಯೋಚಿಸಬಹುದು. ಇಂತಹ ಪ್ರಯಾಣವನ್ನು ಪ್ರಾರಂಭಿಸುವ ಮೊದಲು, ಕಾರಿನ ಎಲ್ಲಾ ಘಟಕಗಳು ಸರಿಯಾಗಿ ಕೆಲಸ ಮಾಡುತ್ತಿರುವುದನ್ನು ಖಚಿತಪಡಿಸಲು ಅದರ ತಪಾಸಣೆ ನಡೆಸುವುದು ಅಥವಾ ಸರ್ವಿಸ್ ಮಾಡಿಸುವುದು ಒಳ್ಳೆಯದು. ಇದರಲ್ಲಿ ಎಂಜಿನ್ ಆಯಿಲ್, ವಿವಿಧ ಫ್ಲೂಯಿಡ್ ಗಳು, ಬ್ಯಾಟರಿಯ ಆರೋಗ್ಯ, ಟೈರ್ ಪ್ರೆಶರ್, ಮತ್ತು ಬ್ರೇಕ್ ಗಳು ಒಳಗೊಂಡಿವೆ.
ತಾಳಿದವನು ಬಾಳಿಯಾನು
ಇಂತಹ ಸನ್ನಿವೇಶದಲ್ಲಿ ನೆನಪಿಡಬೇಕಾದ ಪ್ರಮುಖ ಅಂಶವೆಂದರೆ ತಾಳ್ಮೆ ಮತ್ತು ಸಂಯವನ್ನು ಕಾಪಾಡುವುದು. ಮೆಲ್ಲನೆ ಚಲಿಸುವ ಟ್ರಾಫಿಕ್ ಸಾಲಿನ ನಡುವೆ ನೀವು ನುಸುಳಬೇಕಾದ ಅಗತ್ಯವಿಲ್ಲ ಅಥವಾ ಮುಂದಿನ ವಾಹನಕ್ಕೆ ತಾಗಿಸಿಕೊಂಡೇ ಮುಂದುವರಿಯಬೇಕಿಲ್ಲ. ಇದು ದಕ್ಷ ವಾಹನ ಚಾಲನೆಯನ್ನು ಖಚಿತಪಡಿಸುತ್ತದೆ ಮಾತ್ರವಲ್ಲದೆ ಏನಾದರೂ ಅನಪೇಕ್ಷಿತ ಘಟನೆ ನಡೆದಾಗ ಅದನ್ನು ಸೂಕ್ತ ರೀತಿಯಲ್ಲಿ ನಿಭಾಯಿಸಲು ಸಹಾಯ ಮಾಡುತ್ತದೆ.
ಒಟ್ಟಾರೆಯಾಗಿ, ವಿಪರೀತ ಟ್ರಾಫಿಕ್ ಒತ್ತಡವಿರುವ ರಸ್ತೆಗಳಲ್ಲಿ ಪ್ರಯಾಣವನ್ನು ಕೈಗೊಳ್ಳುವ ಮೊದಲು ಇಂತಹ ಮೂಲಭೂತ ಮಾರ್ಗಸೂಚಿಗಳನ್ನು ಪಾಲಿಸಲು ನಮ್ಮ ಓದುಗರಿಗೆ ನಾವು ಸಲಹೆ ನೀಡುತ್ತೇವೆ. ಏಕೆಂದರೆ ಇಂತಹ ಸನ್ನಿವೇಶದಲ್ಲಿ ನೀವು ಮಾತ್ರವಲ್ಲದೆ ನಿಮ್ಮ ಕಾರು ಸಹ ಒತ್ತಡದ ಪರಿಸ್ಥಿತಿಯನ್ನು ಎದುರಿಸುತ್ತದೆ. ಜತೆಗೆ ನಿಮಗೆ ನಾವು ಶುಭ ಪ್ರಯಾಣ ಮತ್ತು ಅವಿಸ್ಮರಣೀಯ ಕ್ಷಣಗಳನ್ನು ಬಯಸುತ್ತೇವೆ.