• English
  • Login / Register

ಫೋನ್‌ಗಳ ನಂತರ, ಭಾರತದಲ್ಲಿ SU7 ಎಲೆಕ್ಟ್ರಿಕ್ ಕಾರನ್ನು ಪರಿಚಯಿಸಲು ಸಿದ್ಧವಾಗಿರುವ Xiaomi

xiaomi su7 ಗಾಗಿ shreyash ಮೂಲಕ ಜುಲೈ 11, 2024 04:22 pm ರಂದು ಪ್ರಕಟಿಸಲಾಗಿದೆ

  • 31 Views
  • ಕಾಮೆಂಟ್‌ ಅನ್ನು ಬರೆಯಿರಿ

ಈ ಎಲೆಕ್ಟ್ರಿಕ್ ಸೆಡಾನ್ ತನ್ನ ತಾಯ್ನಾಡು ಚೀನಾದಲ್ಲಿ ಈಗಾಗಲೇ ಮಾರಾಟದಲ್ಲಿದೆ

After Phones, Xiaomi Showcases SU7 Electric Car In India

  • ಎಸ್‌ಯು7 ಅಂತಾರಾಷ್ಟ್ರೀಯವಾಗಿ ಮೂರು ಬ್ಯಾಟರಿ ಪ್ಯಾಕ್ ಆಯ್ಕೆಗಳನ್ನು ಪಡೆಯುತ್ತದೆ, ಅವುಗಳೆಂದರೆ 73.6 ಕಿ.ವ್ಯಾಟ್‌, 94.3 ಕಿ.ವ್ಯಾಟ್‌, ಮತ್ತು 101 ಕಿ.ವ್ಯಾಟ್‌.
  • ಹಿಂಬದಿ-ಚಕ್ರ-ಡ್ರೈವ್ ಮತ್ತು ಆಲ್-ವೀಲ್-ಡ್ರೈವ್ ಆಯ್ಕೆಗಳಲ್ಲಿ ಲಭ್ಯವಿರುತ್ತದೆ.
  • ಬ್ಯಾಟರಿ ಪ್ಯಾಕ್ ಆಯ್ಕೆಯನ್ನು ಅವಲಂಬಿಸಿ, ಇದು 830 ಕಿಮೀ ವರೆಗೆ ಕ್ಲೈಮ್ ಮಾಡಲಾದ ರೇಂಜ್‌ ಅನ್ನು ನೀಡುತ್ತದೆ.
  • ಫೀಚರ್‌ನ ಹೈಲೈಟ್ಸ್‌ಗಳು 16.1-ಇಂಚಿನ ಟಚ್‌ಸ್ಕ್ರೀನ್, 56-ಇಂಚಿನ ಹೆಡ್ಸ್-ಅಪ್ ಡಿಸ್‌ಪ್ಲೇ ಮತ್ತು ADAS ಅನ್ನು ಒಳಗೊಂಡಿವೆ.

ಆಟೋಮೊಬೈಲ್ ಉದ್ಯಮವು ಎಲೆಕ್ಟ್ರಿಕ್ ಕಾರುಗಳು ಮತ್ತು ಸಂಬಂಧಿತ ಹೊಸ ತಂತ್ರಜ್ಞಾನಗಳ ಕಡೆಗೆ ಗಮನಾರ್ಹ ಬದಲಾವಣೆಗೆ ಒಳಗಾಗುತ್ತಿದೆ. ಇದೇ ಸಮಯದಲ್ಲಿ, ಕ್ಸಿಯೋಮಿನಂತಹ ಅನಿರೀಕ್ಷಿತ ತಂತ್ರಜ್ಞಾನ ಬ್ರ್ಯಾಂಡ್‌ಗಳು ಸೇರಿದಂತೆ EV ಮಾರುಕಟ್ಟೆಯಲ್ಲಿ ವಿವಿಧ ಹೊಸ ಬ್ರ್ಯಾಂಡ್‌ಗಳ ಹೊರಹೊಮ್ಮುವಿಕೆಯನ್ನು ನಾವು ಗಮನಿಸುತ್ತಿದ್ದೇವೆ. ಸಾಮಾನ್ಯವಾಗಿ ಸ್ಮಾರ್ಟ್‌ಫೋನ್ ಬ್ರ್ಯಾಂಡ್ ಎಂದು ಕರೆಯಲ್ಪಡುವ ಮತ್ತು ವಿವಿಧ ವಲಯಗಳಲ್ಲಿ ಗ್ರಾಹಕರ ಎಲೆಕ್ಟ್ರಾನಿಕ್ ಸಾಧನಗಳಲ್ಲಿ ಪರಿಣತಿ ಹೊಂದಿದ್ದು, Xiaomi ತನ್ನ ಮೊದಲ ಎಲೆಕ್ಟ್ರಿಕ್ ಸೆಡಾನ್, SU7 ಅನ್ನು ಭಾರತೀಯ ಮಾರುಕಟ್ಟೆಗೆ ಪ್ರದರ್ಶಿಸಿದೆ.

ಇದು ನೋಡಲು ಹೇಗಿದೆ?

Xiaomi SU7 EV front
Xiaomi SU7 EV

The Xiaomi SU7 ಕ್ಸಿಯೋಮಿ ಎಸ್‌ಯು7 4-ಬಾಗಿಲಿನ ಎಲೆಕ್ಟ್ರಿಕ್ ಸೆಡಾನ್ ಆಗಿದ್ದು, ಮೊದಲ ನೋಟದಲ್ಲಿ, ಅದರ ಕಡಿಮೆ-ಸ್ಲಂಗ್ ವಿನ್ಯಾಸದಿಂದಾಗಿ ಪೋರ್ಷೆ ಟೇಕಾನ್ ಅನ್ನು ನಿಮಗೆ ನೆನಪಿಸುತ್ತದೆ. ಇದು ಮುಂಭಾಗದಲ್ಲಿ ಟಿಯರ್‌ಡ್ರಾಪ್-ಆಕಾರದ ಎಲ್‌ಇಡಿ ಹೆಡ್‌ಲೈಟ್‌ಗಳು, ಬದಿಗಳಲ್ಲಿ 21-ಇಂಚಿನ ಅಲಾಯ್‌ ವೀಲ್‌ಗಳು ಮತ್ತು ಹಿಂಭಾಗದಲ್ಲಿ ಸಂಪರ್ಕಿಸಲಾದ ಎಲ್‌ಇಡಿ ಟೈಲ್ ಲೈಟ್‌ಗಳನ್ನು ಹೊಂದಿದೆ, ಇದು ಆಕ್ಟಿವ್‌ ಆದ ಹಿಂಭಾಗದ ಸ್ಪಾಯ್ಲರ್‌ನಿಂದ ಪೂರಕವಾಗಿದೆ. ಅದರ ಎರೋಡೈನಾಮಿಕ್‌ ವಿನ್ಯಾಸದಿಂದಾಗಿ ಎಸ್‌ಯು7 0.195 ರ ಏರ್ ಡ್ರ್ಯಾಗ್ ಗುಣಾಂಕವನ್ನು ಸಾಧಿಸುತ್ತದೆ.

ಇದನ್ನು ಸಹ ಓದಿ: ಸಣ್ಣ ಬ್ಯಾಟರಿ ಪ್ಯಾಕ್ ಆಯ್ಕೆಯೊಂದಿಗೆ ಹೊಸ ಆವೃತ್ತಿಗಳನ್ನು ಪರಿಚಯಿಸಿದ BYD Atto 3, ಬೆಲೆಗಳು 24.99 ಲಕ್ಷ ರೂ.ನಿಂದ ಪ್ರಾರಂಭ

ಇಂಟಿರೀಯರ್‌ ಮತ್ತು ಫೀಚರ್‌ಗಳು

ಒಳಗೆ, ಕ್ಸಿಯೋಮಿ ಎಸ್‌ಯು7 ಮೂರು-ಸ್ಪೋಕ್ ಸ್ಟೀರಿಂಗ್ ವೀಲ್ ಮತ್ತು ದೊಡ್ಡ 16.1-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್ ಅನ್ನು ಒಳಗೊಂಡ ಕನಿಷ್ಠ ಇಂಟಿರೀಯರ್‌ ಅನ್ನು ಹೊಂದಿದೆ. ಸ್ಟೀರಿಂಗ್ ಚಕ್ರವು ಪೋರ್ಷೆ ಮೊಡೆಲ್‌ಗಳನ್ನು ನೆನಪಿಸುವ ಎರಡು ಬಟನ್‌ಗಳನ್ನು ಒಳಗೊಂಡಿದೆ: ಒಂದು ಆಟೋನೊಮಸ್‌ ಡ್ರೈವಿಂಗ್‌ ಅನ್ನು ಆಕ್ಟಿವ್‌ ಮಾಡಲು ಮತ್ತು ಇನ್ನೊಂದು ಬೂಸ್ಟ್ ಮೋಡ್‌ಗಾಗಿ.

ಎಸ್‌ಯು7 ಬೋರ್ಡ್‌ನಲ್ಲಿರುವ ಇತರ ಫೀಚರ್‌ಗಳೆಂದರೆ 7-ಇಂಚಿನ ಡಿಜಿಟಲ್ ಡ್ರೈವರ್ ಡಿಸ್‌ಪ್ಲೇ, 56-ಇಂಚಿನ ಹೆಡ್‌ಸ್ ಅಪ್ ಡಿಸ್‌ಪ್ಲೇ, ವೈರ್‌ಲೆಸ್ ಫೋನ್ ಚಾರ್ಜಿಂಗ್, ಪನೋರಮಿಕ್ ಗ್ಲಾಸ್ ರೂಫ್, ಆಕ್ಟಿವ್‌ ಸೈಡ್ ಸಪೋರ್ಟ್‌ನೊಂದಿಗೆ ಚಾಲಿತ ಮುಂಭಾಗದ ಸೀಟುಗಳು ಮತ್ತು 25-ಸ್ಪೀಕರ್ ಸೌಂಡ್ ಸಿಸ್ಟಮ್ ಆಗಿದೆ. ಪ್ರಯಾಣಿಕರ ಸುರಕ್ಷತೆಯನ್ನು ಏಳು ಏರ್‌ಬ್ಯಾಗ್‌ಗಳು, ಇಬಿಡಿ ಜೊತೆಗೆ ಎಬಿಎಸ್‌, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್ ಮತ್ತು ಸುಧಾರಿತ ಚಾಲಕ ಸಹಾಯ ವ್ಯವಸ್ಥೆ (ADAS) ಮೂಲಕ LiDAR ತಂತ್ರಜ್ಞಾನವನ್ನು ಬಳಸಿಕೊಂಡು ಆಟೋನೊಮಸ್‌ ಎಮೆರ್ಜೆನ್ಸಿ ಬ್ರೇಕಿಂಗ್, ಲೇನ್ ಕೀಪ್ ಅಸಿಸ್ಟ್ ಮತ್ತು ಅಡಾಪ್ಟಿವ್ ಹೈ ಬೀಮ್ ಸೇರಿದಂತೆ ಫೀಚರ್‌ಗಳೊಂದಿಗೆ ಕಾಳಜಿವಹಿಸಲಾಗುತ್ತದೆ.

ಬ್ಯಾಟರಿ ಪ್ಯಾಕ್ & ರೇಂಜ್

ಅಂತರಾಷ್ಟ್ರೀಯವಾಗಿ, ಕ್ಸಿಯೋಮಿ ಎಸ್‌ಯು7 ಅನ್ನು ಮೂರು ಬ್ಯಾಟರಿ ಪ್ಯಾಕ್ ಆಯ್ಕೆಗಳೊಂದಿಗೆ ನೀಡುತ್ತದೆ ಮತ್ತು ಅವುಗಳ ವಿಶೇಷಣಗಳನ್ನು ಕೆಳಗೆ ವಿವರಿಸಲಾಗಿದೆ:

 

ಕ್ಸಿಯೋಮಿ ಎಸ್‌ಯು7

ಕ್ಸಿಯೋಮಿ ಎಸ್‌ಯು7 ಪ್ರೋ

ಕ್ಸಿಯೋಮಿ ಎಸ್‌ಯು7 ಮ್ಯಾಕ್ಸ್‌ 

ಬ್ಯಾಟರಿ ಪ್ಯಾಕ್‌

73.6 ಕಿ.ವ್ಯಾಟ್‌

94.3  ಕಿ.ವ್ಯಾಟ್‌

101  ಕಿ.ವ್ಯಾಟ್‌

ಪವರ್‌

299 ಪಿಎಸ್‌

299 ಪಿಎಸ್‌

673 ಪಿಎಸ್‌

ಟಾರ್ಕ್‌

400 ಎನ್‌ಎಮ್‌

400 ಎನ್‌ಎಮ್‌

838 ಎನ್‌ಎಮ್‌

ರೇಂಜ್‌ (CLTC ಕ್ಲೈಮ್ ಮಾಡಿದ ರೇಂಜ್‌)

700 ಕಿ.ಮೀ

830 ಕಿ.ಮೀ

800 ಕಿ.ಮೀ

ಡ್ರೈವ್ ಪ್ರಕಾರ

RWD (ಹಿಂಭಾಗದ-ಚಕ್ರ-ಡ್ರೈವ್‌)

RWD (ಹಿಂಭಾಗದ-ಚಕ್ರ-ಡ್ರೈವ್‌)

ಡ್ಯುಯಲ್‌ ಮೋಟಾರ್‌ AWD (ಆಲ್‌-ವೀಲ್‌-ಡ್ರೈವ್‌)

ವೇಗವರ್ಧನೆ (0-100 kmph)

5.28 ಸೆಕೆಂಡ್‌ಗಳು

5.7 ಸೆಕೆಂಡ್‌ಗಳು

2.78 ಸೆಕೆಂಡ್‌ಗಳು

ಚಾರ್ಜಿಂಗ್‌

ಎಸ್‌ಯು7 ಎಲೆಕ್ಟ್ರಿಕ್ ಸೆಡಾನ್‌ನ ಚಾರ್ಜಿಂಗ್ ಸಮಯಗಳು ಈ ಕೆಳಗಿನಂತಿವೆ:

ಬ್ಯಾಟರಿ ಪ್ಯಾಕ್‌

73.6 ಕಿ.ವ್ಯಾಟ್‌

94.3 ಕಿ.ವ್ಯಾಟ್‌

101 ಕಿ.ವ್ಯಾಟ್‌

ಫಾಸ್ಟ್‌ ಚಾರ್ಜಿಂಗ್‌ ಸಮಯ (10-80 ಪ್ರತಿಶತ)

25 ನಿಮಿಷಗಳು

30 ನಿಮಿಷಗಳು

19 ನಿಮಿಷಗಳು

ಭಾರತದಲ್ಲಿ ಬಿಡುಗಡೆ ಮತ್ತು ಪ್ರತಿಸ್ಪರ್ಧಿಗಳು

ಭಾರತದಲ್ಲಿ ಎಸ್‌ಯು7ನ ಬಿಡುಗಡೆಯನ್ನು Xiaomi ಇನ್ನೂ ದೃಢಪಡಿಸಿಲ್ಲ. ಚೀನಾದಲ್ಲಿ, ಪ್ರಸ್ತುತ ಇದರ ಬೆಲೆ ¥ 215,900 ಮತ್ತು ¥ 299,900 (24.78 ಲಕ್ಷ ರೂ.ನಿಂದ 34.43 ಲಕ್ಷ ರೂ.) ಆಗಿದೆ. ಭಾರತದಲ್ಲಿ, ಇದು BYD ಸೀಲ್ ಮತ್ತು ಹ್ಯುಂಡೈ ಐಯೋನಿಕ್ 5 ಗೆ ಸ್ಪರ್ಧೆಯನ್ನು ಒಡ್ಡುತ್ತದೆ, ಆದರೆ ಬಿಎಮ್‌ಡಬ್ಲ್ಯೂ ಐ4 ಗೆ ಕೈಗೆಟುಕುವ ಪರ್ಯಾಯವಾಗಿ ಕಾರ್ಯನಿರ್ವಹಿಸುತ್ತದೆ.

ರೆಗುಲರ್‌ ಆಪ್‌ಡೇಟ್‌ಗಳಿಗಾಗಿ ಕಾರ್‌ದೇಖೋ ವಾಟ್ಸಾಪ್‌ ಚಾನೆಲ್‌ ಅನ್ನು ಫಾಲೋ ಮಾಡಿ.

was this article helpful ?

Write your Comment on Xiaom ಐ su7

explore ಇನ್ನಷ್ಟು on xiaomi su7

space Image

ಕಾರು ಸುದ್ದಿ

  • ಟ್ರೆಂಡಿಂಗ್ ಸುದ್ದಿ
  • ಇತ್ತಿಚ್ಚಿನ ಸುದ್ದಿ

trending ಎಲೆಕ್ಟ್ರಿಕ್ ಕಾರುಗಳು

  • ಪಾಪ್ಯುಲರ್
  • ಉಪಕಮಿಂಗ್
  • ಆಡಿ ಕ್ಯೂ6 ಈ-ಟ್ರಾನ್
    ಆಡಿ ಕ್ಯೂ6 ಈ-ಟ್ರಾನ್
    Rs.1 ಸಿಆರ್ಅಂದಾಜು ದಾರ
    ಮಾರಚ್‌, 2025: ನಿರೀಕ್ಷಿತ ಲಾಂಚ್‌
  • ಮಹೀಂದ್ರ xev 4e
    ಮಹೀಂದ್ರ xev 4e
    Rs.13 ಲಕ್ಷಅಂದಾಜು ದಾರ
    ಮಾರಚ್‌, 2025: ನಿರೀಕ್ಷಿತ ಲಾಂಚ್‌
  • ಹೊಸ ವೇರಿಯೆಂಟ್
    ಮಹೀಂದ್ರ xev 9e
    ಮಹೀಂದ್ರ xev 9e
    Rs.21.90 - 30.50 ಲಕ್ಷಅಂದಾಜು ದಾರ
    ಮಾರಚ್‌, 2025: ನಿರೀಕ್ಷಿತ ಲಾಂಚ್‌
  • ಮಾರುತಿ e vitara
    ಮಾರುತಿ e vitara
    Rs.17 - 22.50 ಲಕ್ಷಅಂದಾಜು ದಾರ
    ಮಾರಚ್‌, 2025: ನಿರೀಕ್ಷಿತ ಲಾಂಚ್‌
  • ಕಿಯಾ ಇವಿ6 2025
    ಕಿಯಾ ಇವಿ6 2025
    Rs.63 ಲಕ್ಷಅಂದಾಜು ದಾರ
    ಮಾರಚ್‌, 2025: ನಿರೀಕ್ಷಿತ ಲಾಂಚ್‌
×
We need your ನಗರ to customize your experience