• English
  • Login / Register

ಕಾರ್‌ಪ್ಲೇ ಮತ್ತು ಮ್ಯಾಪ್ಸ್ ಅಪ್ಲಿಕೇಶನ್‌ಗಾಗಿ ಉತ್ತಮ ಹೊಸ ಫೀಚರ್‌ಗಳನ್ನು ಸೇರಿಸಿರುವ ಆ್ಯಪಲ್ iOS 17

ಜೂನ್ 07, 2023 02:00 pm ರಂದು shreyash ಮೂಲಕ ಪ್ರಕಟಿಸಲಾಗಿದೆ

  • 31 Views
  • ಕಾಮೆಂಟ್‌ ಅನ್ನು ಬರೆಯಿರಿ

​​​​​​ಇದು ಆ್ಯಪಲ್ ಕಾರ್‌ಪ್ಲೇ ಸಿಸ್ಟಮ್‌ಗೆ ಶೇರ್‌ಪ್ಲೇ ಅನ್ನು ಸಹ ಸೇರಿಸುತ್ತಿರುವುದರಿಂದ, ಪ್ರಯಾಣಿಕರು ತಮ್ಮ ಸ್ವಂತ ಆ್ಯಪಲ್ ಡಿವೈಸ್ ಮೂಲಕ ಪ್ಲೇಲಿಸ್ಟ್ ಅನ್ನು ನಿಯಂತ್ರಿಸಲು ಸುಲಭವಾಗುತ್ತದೆ.

Apple CarPlay New Updates

  •  ಕಾರಿನಲ್ಲಿ ಸುಧಾರಿತ ಅನುಭವಗಳ ಹೊಸ ಅಪ್‌ಡೇಟ್‌ಗಳ ಕುರಿತು WWDC 2023 ನಲ್ಲಿ ಆ್ಯಪಲ್ ಘೋಷಿಸಿದೆ.
  •  ಶೇರ್‌ಪ್ಲೇ ಮೂಲಕ, ಹಿಂಬದಿಯ ಪ್ರಯಾಣಿಕರು ಸಹ ಕಾರ್‌ಪ್ಲೇನಲ್ಲಿನ ಸಂಗೀತವನ್ನು ನಿಯಂತ್ರಿಸಬಹುದು.
  •  iOS 17 ಪೂರ್ವವೀಕ್ಷಣೆಯಲ್ಲಿ, ಆ್ಯಪಲ್ ಮ್ಯಾಪ್ಸ್ ಅಪ್ಲಿಕೇಶನ್‌ಗಾಗಿ ಆಫ್‌ಲೈನ್ ಫೀಚರ್‌ಗಳನ್ನು ಸಹ ಪ್ರದರ್ಶಿಸುತ್ತಿದೆ.
  •  ಆ್ಯಪಲ್ ಮ್ಯಾಪ್ಸ್ ಪ್ರಯಾಣದಲ್ಲಿರುವಾಗ ಜಾರ್ಜಿಂಗ್-ಸ್ಟೇಷನ್‌ಗಳ ನೈಜ-ಸಮಯದ ಲಭ್ಯತೆಯ ಮಾಹಿತಿಯನ್ನು ಸಹ ನೀಡುತ್ತದೆ.
  •  ಈ ಫೀಚರ್‌ಗಳ ನಿಖರವಾದ ಬಿಡುಗಡೆಯು ದಿನಾಂಕವು ತಿಳಿದಿಲ್ಲ ಮತ್ತು ಕೆಲವು ಕಾರ್ಯಚಟುವಟಿಕೆಗಳು ಮೊದಲು ಕೆಲವು ಪ್ರದೇಶಗಳಿಗೆ ಮಾತ್ರ ಸೀಮಿತವಾಗಿರಬಹುದು.

 WWDC 2023 ಈವೆಂಟ್‌ನಲ್ಲಿ ಆ್ಯಪಲ್ ಆಪರೇಟಿಂಗ್ ಸಿಸ್ಟಮ್ ನವೀಕರಣಗಳು, ಸುಧಾರಣೆಗಳು ಮತ್ತು ಹೊಸ ಫೀಚರ್‌ಗಳನ್ನು ಘೋಷಿಸಿದೆ. ಚಾಲನೆಯಲ್ಲಿ ವಿಶೇಷವಾಗಿ ಉಪಯುಕ್ತವಾಗುವ ಮೂರು ಹೊಸ ಫೀಚರ್‌ಗಳನ್ನು ನಾವು ಈ ಕೆಳಗೆ ವಿವರಿಸಿದ್ದೇವೆ:

 ಶೇರ್‌ಪ್ಲೇ ಮತ್ತು ಕಾರ್‌ಪ್ಲೇ

Share Play In Car Play

 ಕಾರ್‌ಪ್ಲೇನಲ್ಲಿ ಶೇರ್‌ಪ್ಲೇ ಫೀಚರ್ ಅನ್ನು ಆ್ಯಪಲ್ ಸಂಯೋಜಿಸಿರುವುದರಿಂದ, ಕನಿಷ್ಠ ಆ್ಯಪಲ್ ಮ್ಯೂಸಿಕ್ ಬಳಸುವಾಗ ಕಾರಿನಲ್ಲಿ ನಿಮ್ಮ ನೆಚ್ಚಿನ ಸಂಗೀತವನ್ನು ಪ್ಲೇ ಮಾಡುವ ನಿಮ್ಮ ಕಷ್ಟವು ಕೊನೆಗೊಳ್ಳುತ್ತದೆ. ಇದು ಯಾವುದೇ ಪ್ರಯಾಣಿಕರ ಐಫೋನ್ ಸಂಗೀತ ಪ್ಲೇಬ್ಯಾಕ್ ಅನ್ನು ನಿಯಂತ್ರಿಸಲು ಅನುವು ಮಾಡಿಕೊಡುತ್ತದೆ. ಇದು ಒಂದೇ ಡಿವೈಸ್ ಮೇಲಿನ ಅವಲಂಬನೆಯನ್ನು ನಿವಾರಿಸುವುದಲ್ಲದೇ, ಹಾಡನ್ನು ಬದಲಾಯಿಸಲು ನಿಮ್ಮ ಅನ್‌ಲಾಕ್ ಮಾಡಿದ ಫೋನ್ ಅನ್ನು ನೀವು ಬೇರೆ ಯಾರಿಗಾದರೂ ನೀಡುವ ಅವಶ್ಯಕತೆಯಿರುವುದಿಲ್ಲವಾದ್ದರಿಂದ ಇದು ನಿಮ್ಮ ಗೌಪ್ಯತೆಯನ್ನು ಕಾಪಾಡುತ್ತದೆ.

 ಚಾಲಕ ಕಾರ್‌ಪ್ಲೇ ಅನ್ನು ಪ್ರಾರಂಭಿಸಿದಾಗ, ಯಾವುದೇ ಪ್ರಯಾಣಿಕರ ಐಫೋನ್ ಕಾರ್‌ಪ್ಲೇ ಸೆಷನ್‌ಗೆ ಸಂಪರ್ಕಿಸಲು ಸಲಹೆ ನೀಡುತ್ತದೆ. ಈ ಸೆಷನ್‌ಗೆ ಸೇರಿದ ನಂತರ ಬಳಕೆದಾರರು ಸಂಗೀತ ಮತ್ತು ಪ್ಲೇಬ್ಯಾಕ್ ಸೆಟ್ಟಿಂಗ್‌ಗಳನ್ನು ಸುಲಭವಾಗಿ ನಿಯಂತ್ರಿಸಬಹುದು.

 ಇದನ್ನೂ ಪರಿಶೀಲಿಸಿ:  I/O 2023 ನಲ್ಲಿ ಮ್ಯಾಪ್ಸ್‌ಗಾಗಿ ಗೂಗಲ್ ಹೊಸ ವೀಕ್ಷಣಾ ಫೀಚರ್ ಅನ್ನು ಪ್ರದರ್ಶಿಸಿದೆ

 ಆಫ್‌ಲೈನ್ ಮ್ಯಾಪ್ಸ್

Apple Maps

 ರಸ್ತೆಯಲ್ಲಿ ಪ್ರಯಾಣಿಸುವಾಗ ನಾವು ಸಾಮಾನ್ಯವಾಗಿ ಕಳಪೆ ನೆಟ್‌ವರ್ಕ್ ಸಂಪರ್ಕವಿರುವ ಸ್ಥಳಗಳ ಮೂಲಕ ಪ್ರಯಾಣಿಸುತ್ತೇವೆ, ಇದು ಮ್ಯಾಪ್ಸ್‌ನ ಕಾರ್ಯಾಚರಣೆಯನ್ನು ದುರ್ಬಲಗೊಳಿಸುತ್ತದೆ ಮತ್ತು ನ್ಯಾವಿಗೇಶನಲ್ ಸವಾಲುಗಳನ್ನು ನಾವು ಎದುರಿಸಬೇಕಾಗುತ್ತದೆ. ಈ ಸಮಸ್ಯೆಗಳನ್ನು ಪರಿಹರಿಸಲು, ಆ್ಯಪಲ್ ತನ್ನ ಮ್ಯಾಪ್ಸ್ ಅಪ್ಲಿಕೇಶನ್‌ಗೆ ಆಫ್‌ಲೈನ್ ಆಯ್ಕೆಯನ್ನು ನೀಡುತ್ತದೆ, ಬಳಕೆದಾರರು ಆಯ್ಕೆ ಮಾಡಿದ ಆದ್ಯತೆಯ ಮಾರ್ಗವನ್ನು ಆಫ್‌ಲೈನ್ ಅಥವಾ ಆಯ್ಕೆ ಮಾಡಿದ ಸಂಪೂರ್ಣ ಪ್ರದೇಶವನ್ನು ಉಳಿಸಲು ಬಳಕೆದಾರರಿಗೆ ಅವಕಾಶವನ್ನು ಕಲ್ಪಿಸಲಾಗಿದೆ. ಇದು ಸ್ಥಳಗಳಲ್ಲಿನ ಗಂಟೆಗಳು ಮತ್ತು ರೇಟಿಂಗ್‌ಗಳಂತಹ ಮಾಹಿತಿಯನ್ನು ಒಳಗೊಂಡಿರುತ್ತದೆ ಮಾತ್ರವಲ್ಲದೇ, ಚಾಲನೆ, ನಡಿಗೆ, ಸೈಕ್ಲಿಂಗ್ ಅಥವಾ ಸಾರ್ವಜನಿಕ ಸಾರಿಗೆಗಳನ್ನು ತೆಗೆದುಕೊಳ್ಳಲು ಪ್ರತಿ ಸೂಚನೆಗಳನ್ನು ನೀಡುತ್ತದೆ.

 ನೈಜ ಸಮಯದ ಚಾರ್ಜಿಂಗ್ ಸ್ಟೇಷನ್ ಲಭ್ಯತೆ

Hyundai Ioniq 5 At Shell

 ರಸ್ತೆಯಲ್ಲಿ ಎಲೆಕ್ಟ್ರಿಕ್ ವಾಹನಗಳ ಸಂಖ್ಯೆಯು ಹೆಚ್ಚಾದಂತೆ, ಸುದೀರ್ಘ ಮಾರ್ಗಗಳಲ್ಲಿ ಚಾರ್ಜಿಂಗ್ ಸ್ಟೇಷನ್‌ಗಳ ಲಭ್ಯತೆಯು ಕಷ್ಟವಾಗಿದೆ. ಆ್ಯಪಲ್ ಮ್ಯಾಪ್‌ಗಳು ಶೀಘ್ರದಲ್ಲಿಯೇ ಸಮಗ್ರ ಫೀಚರ್‌ಗಳನ್ನು ಹೊಂದಿದ್ದು, ಇದು ಪ್ರಯಾಣದಲ್ಲಿರುವಾಗ ನೈಜ-ಸಮಯದ ಚಾರ್ಜಿಂಗ್ ಸ್ಟೇಷನ್ ಲಭ್ಯತೆಯ ಕುರಿತು ಮಾಹಿತಿಯನ್ನು ಒದಗಿಸುವುದು ಮಾತ್ರವಲ್ಲದೆ, ಇದು ಎಲೆಕ್ಟ್ರಿಕ್ ಕಾರಿಗೆ ನಿರ್ದಿಷ್ಟವಾಗಿ ಸೂಕ್ತವಾದ ಮಾರ್ಗಗಳನ್ನು ಸಹ ಸೂಚಿಸುತ್ತದೆ

 ಹೊಸ ಫೀಚರ್‌ಗಳನ್ನು ಯಾವಾಗ ನಿರೀಕ್ಷಿಸಬಹುದು

 ಆ್ಯಪಲ್ ಈ ಫೀಚರ್‌ಗಳನ್ನು ಯಾವಾಗ ಬಿಡುಗಡೆಗೊಳಿಸುತ್ತದೆಂದು ನಿರ್ದಿಷ್ಟವಾಗಿ ಘೋಷಿಸಿಲ್ಲ ಮತ್ತು ಕೆಲವು ಕಾರ್ಯಚಟುವಟಿಕೆಗಳನ್ನು ಮೊದಲಿಗೆ ಕೆಲವು ದೇಶಗಳಿಗೆ ಮಾತ್ರ ಸೀಮಿತವಾಗಿರಬಹುದು ಎಂದು ನಾವು ನಿರೀಕ್ಷಿಸಿದ್ದೇವೆ. ಹಿಂದಿನ ನವೀಕರಣಗಳ ಬಿಡುಗಡೆಯ ಆಧಾರದ ಮೇಲೆ, ಜಾಗತಿಕ iOS 17 ನವೀಕರಣವು 2023 ರ Q3 ನಲ್ಲಿ ಲಭ್ಯವಾಗಬಹುದೆಂದು ನಾವು ನಂಬಿದ್ದೇವೆ.

was this article helpful ?

Write your ಕಾಮೆಂಟ್

ಕಾರು ಸುದ್ದಿ

  • ಟ್ರೆಂಡಿಂಗ್ ಸುದ್ದಿ
  • ಇತ್ತಿಚ್ಚಿನ ಸುದ್ದಿ

trending ಕಾರುಗಳು

  • ಲೇಟೆಸ್ಟ್
  • ಉಪಕಮಿಂಗ್
  • ಪಾಪ್ಯುಲರ್
  • ಆಡಿ ಆರ್ಎಸ್ ಕ್ಯೂ8 2025
    ಆಡಿ ಆರ್ಎಸ್ ಕ್ಯೂ8 2025
    Rs.2.30 ಸಿಆರ್ಅಂದಾಜು ದಾರ
    ಫೆಬರವಾರಿ, 2025: ನಿರೀಕ್ಷಿತ ಲಾಂಚ್‌
  • ಎಂಜಿ majestor
    ಎಂಜಿ majestor
    Rs.46 ಲಕ್ಷಅಂದಾಜು ದಾರ
    ಫೆಬರವಾರಿ, 2025: ನಿರೀಕ್ಷಿತ ಲಾಂಚ್‌
  • ವೋಲ್ವೋ XC90 2025
    ವೋಲ್ವೋ XC90 2025
    Rs.1.05 ಸಿಆರ್ಅಂದಾಜು ದಾರ
    ಮಾರಚ್‌, 2025: ನಿರೀಕ್ಷಿತ ಲಾಂಚ್‌
  • ಹೊಸ ವೇರಿಯೆಂಟ್
    ಮಹೀಂದ್ರ be 6
    ಮಹೀಂದ್ರ be 6
    Rs.18.90 - 26.90 ಲಕ್ಷಅಂದಾಜು ದಾರ
    ಮಾರಚ್‌, 2025: ನಿರೀಕ್ಷಿತ ಲಾಂಚ್‌
  • ಹೊಸ ವೇರಿಯೆಂಟ್
    ಮಹೀಂದ್ರ xev 9e
    ಮಹೀಂದ್ರ xev 9e
    Rs.21.90 - 30.50 ಲಕ್ಷಅಂದಾಜು ದಾರ
    ಮಾರಚ್‌, 2025: ನಿರೀಕ್ಷಿತ ಲಾಂಚ್‌
×
We need your ನಗರ to customize your experience