Login or Register ಅತ್ಯುತ್ತಮ CarDekho experience ಗೆ
Login

ನಾಳೆ ಬಿಡುಗಡೆಯಾಗಲಿದೆ ಭಾರತ್ NCAP: ನಾವು ಏನನ್ನು ನೀರಿಕ್ಷಿಸಬಹುದು ?

published on ಆಗಸ್ಟ್‌ 21, 2023 08:27 pm by rohit

ವಯಸ್ಕ ಪ್ರಯಾಣಿಕರ ರಕ್ಷಣೆ ಮತ್ತು ಪ್ರಯಾಣಿಕ ಶಿಶು ರಕ್ಷಣೆಗಾಗಿ ಭಾರತ್ NCAP ನಾಳೆ ಹೊಸ ಕಾರುಗಳ ಕ್ರ್ಯಾಶ್-ಟೆಸ್ಟ್ ರೇಟಿಂಗ್ ನೀಡಲಿದೆ

  • ಭಾರತ್ NCAPಯು, ಗ್ಲೋಬಲ್ NCAP ಮತ್ತು ಲ್ಯಾಟಿನ್ NCAP ಯಂತಹ ಅಂತರಾಷ್ಟ್ರೀಯ ಹೊಸ ಕಾರುಗಳ ಮೌಲ್ಯಮಾಪನಾ ಪ್ರೋಗ್ರಾಂಗಳನ್ನು ಹೋಲುತ್ತದೆ.

  • ಕಾರುತಯಾರಕರು ಸ್ವಯಂಪ್ರೇರಿತರಾಗಿ 3.5 ಟನ್‌ಗಳ ತನಕದ ತೂಕ ಹೊಂದಿರುವ ತಮ್ಮ ಕಾರುಗಳನ್ನು ಪರೀಕ್ಷೆಗೆ ಕಳುಹಿಸಲಿದ್ದಾರೆ.

  • ಅಲ್ಲದೇ ಈ ಮೌಲ್ಯಮಾಪನವನ್ನು ನಡೆಸಲು ಹೊಸ ಪರೀಕ್ಷಾ ಸೌಲಭ್ಯವನ್ನೂ ಸ್ಥಾಪಿಸಲಾಗಿದೆ.

  • ಕೆಲವು ಭಾರತೀಯ ಕಾರುತಯಾರಕರು ತಮ್ಮ ಕೆಲವು ಕಾರುಗಳು ಭಾರತ್ NCAP ರೇಟಿಂಗ್‌ಗಳನ್ನು ಸಾಧಿಸಿರುವುದನ್ನು ಪ್ರಕಟಿಸುವ ಸಂಭವವೂ ಇದೆ.

ನಮ್ಮ ಆಟೋಮೇಟಿವ್ ಉದ್ಯಮ ಸ್ಥಳೀಯವಾಗಿ ಪ್ರಮಾಣೀಕರಿಸದ ಒಂದು ಸಂಗತಿ ಇದ್ದರೆ ಅದು ಕ್ರ್ಯಾಶ್ ಟೆಸ್ಟ್ ಮೌಲ್ಯಮಾಪನಗಳು. ಹೊಸ ಕಾರುಗಳನ್ನು ಕಟ್ಟುನಿಟ್ಟಾದ ಸುರಕ್ಷತಾ ಪರಿಶೀಲನೆಗಳಿಗೆ ಒಳಪಡಿಸಿ ಅವುಗಳ ಕಾರ್ಯಕ್ಷಮತೆಯನ್ನು ಆಧರಿಸಿ ಅವುಗಳಿಗೆ ಸ್ಕೋರ್ ಮತ್ತು ರೇಟಿಂಗ್ ನೀಡುವಂತಹ ಗ್ಲೋಬಲ್ NCAP, ಯೂರೋ NCAP ಮತ್ತು ಲ್ಯಾಟಿನ್ NCAP ಮುಂತಾದ ಅನೇಕ ಅಂತರಾಷ್ಟ್ರೀಯ ಸಂಸ್ಥೆಗಳು ಮತ್ತು ಹೊಸ ಕಾರು ಮೌಲ್ಯಮಾಪನಾ ಪ್ರೋಗ್ರಾಂಗಳು (NCAPಗಳು) ಅಸ್ತಿತ್ವದಲ್ಲಿವೆ. ನಮ್ಮದೇ ಆದ NCAP (ಭಾರತ್ NCAP ಎಂದು ಕರೆಯಲಾಗುತ್ತದೆ) ಅನ್ನು ಹೊಂದುವ ಭಾರತ ಸರ್ಕಾರದ ಯೋಜನೆಯ ವರದಿಯು 2022ರ ಆರಂಭದಲ್ಲಿ ಆನ್‌ಲೈನ್‌ನಲ್ಲಿ ಕಂಡುಬಂದಿತ್ತು. ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವರಾದ ನಿತಿನ್ ಗಡ್ಕರಿಯವರು 22ನೇ ಆಗಸ್ಟ್ 2023ರಂದು ಭಾರತ್ NCAP ಅನ್ನು ಬಿಡುಗಡೆ ಮಾಡಲಿದ್ದಾರೆ ಎಂಬುದು ಇದೀಗ ದೃಢಪಟ್ಟಿದೆ.

ಪ್ರಕಟಣೆಯಲ್ಲಿ ಏನಿರಲಿದೆ?

ಸಾರಿಗೆ ಸಚಿವಾಲಯವು ಭಾರತ್ NCAP ವಿವರಗಳು ಮತ್ತು ನಿಯತಾಂಕಗಳು ಮಾತ್ರವಲ್ಲದೇ ಹೊಸತಾಗಿ ಸ್ಥಾಪಿಸಲಾದ ಭಾರತೀಯ ಪರೀಕ್ಷಾ ಸೌಲಭ್ಯವನ್ನೂ ಬಹಿರಂಗಪಡಿಸುತ್ತದೆ ಎಂಬುದು ನಮ್ಮ ನಿರೀಕ್ಷೆಯಾಗಿದೆ. ಅಲ್ಲದೇ ಒಂದೆರಡು ಭಾರತೀಯ ಕಾರು ತಯಾರಕ ಸಂಸ್ಥೆಗಳು ಒಂದು ಅಥವಾ ಅನೇಕ ಮಾಡೆಲ್‌ಗಳಿಗೆ ಭಾರತೀಯ NCAP ಕ್ರ್ಯಾಶ್-ಟೆಸ್ಟೆಡ್ ರೇಟಿಂಗ್‌ಗಳನ್ನು ಪ್ರಕಟಿಸುವ ನಿರೀಕ್ಷೆಯೂ ಇದೆ. ಸಾರಿಗೆ ಸಚಿವಾಲಯವು ಪರೀಕ್ಷೆಯಲ್ಲಿ ಒಳಗೊಂಡ ಹಂತಗಳನ್ನು ವಿವರಿಸುವ ಸಾಧ್ಯತೆ ಇದೆ.

ಜಾಗತಿಕ ಮಾನದಂಡಗಳ ಗುರಿ

“ಭಾರತ್ NCAPಯ ಪರೀಕ್ಷಾ ಪ್ರೋಟೋಕಾಲ್ ಅನ್ನು ಅಸ್ತಿತ್ವದಲ್ಲಿರುವ ಭಾರತೀಯ ನಿಬಂಧನೆಗಳ ಪ್ರಕಾರ ಗ್ಲೋಬಲ್ ಕ್ರ್ಯಾಶ್ ಟೆಸ್ಟ್ ಪ್ರೋಟೋಕಾಲ್‌ಗಳ ಅಂಶಗಳಿಗೆ ಸರಿಸಮಾನವಾಗಿಸಲಾಗುತ್ತದೆ, ಇದು OEM ಗಳು ತಮ್ಮ ವಾಹನಗಳನ್ನು ಭಾರತದ ಆಂತರಿಕ ಪರೀಕ್ಷಾ ಸೌಲಭ್ಯಗಳಲ್ಲಿ ಪರೀಕ್ಷಿಸಲು ಅನುವು ಮಾಡಿಕೊಡುತ್ತದೆ” ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿಯವರು 2022ರಲ್ಲಿಯೇ ಹೇಳಿದ್ದರು.

ಇದನ್ನೂ ಓದಿ: ಇಲ್ಲಿಯ ತನಕ 2023 ರನ್ನು ಪರಿಸರ ಸ್ನೇಹಿಯನ್ನಾಗಿಸಿದ 6 ಇಲೆಕ್ಟ್ರಿಕ್ ಕಾರುಗಳು

ಭಾರತ್ NCAP ವಿವರಗಳು

ಈ ಹೊಸ ಭಾರತೀಯ ಕ್ರ್ಯಾಶ್-ಟೆಸ್ಟ್ ಮೌಲ್ಯಮಾಪನಾ ಪ್ರೋಗ್ರಾಂ 3.5 ಟನ್‌ಗಳು ಅಥವಾ 3,500kg ತನಕದ ತೂಕ ಹೊಂದಿರುವ ವಾಹನಗಳ ಸುರಕ್ಷತಾ ಮಾನದಂಡಗಳನ್ನು ಮಾಪನ ಮಾಡುತ್ತದೆ. ಪ್ರಸ್ತಾವಿತ ಆಟೋಮೇಟಿವ್ ಇಂಡಸ್ಟ್ರಿ ಸ್ಟಾಂಡರ್ಡ್ಸ್ 197 (AIS-197) ಪ್ರಕಾರ ಕಾರುತಯಾರಕರು ಸ್ವಯಂಪ್ರೇರಿತರಾಗಿ ಈ ಪ್ರೋಗ್ರಾಂನಲ್ಲಿ ತಮ್ಮ ಕಾರುಗಳನ್ನು ಪರೀಕ್ಷೆಗೆ ಒಳಪಡಿಸಬಹುದು. AIS-197 ಪ್ರಕಾರ ಭಾರತ್ NCAPಯು ಫ್ರಂಟ್ ಇಂಪ್ಯಾಕ್ಟ್ ಟೆಸ್ಟ್, ಸೈಡ್ ಇಂಪ್ಯಾಕ್ಟ್ ಟೆಸ್ಟ್ ಮತ್ತು ಪೋಲ್ ಸೈಡ್ ಇಂಪ್ಯಾಕ್ಟ್ ಟೆಸ್ಟ್ ಅನ್ನು ನೆಡೆಸುತ್ತದೆ. ಈ ಟೆಸ್ಟ್‌ಗಳು ವಯಸ್ಕ ಪ್ರಯಾಣಿಕ ರಕ್ಷಣೆ (AOP) ಮತ್ತು ಪ್ರಯಾಣಿಕ ಮಗುವಿನ ರಕ್ಷಣೆಗೆ (COP) ಸ್ಟಾರ್ ರೇಟಿಂಗ್ ನೀಡುತ್ತದೆ.

ಈ ರೇಟಿಂಗ್‌ಗಳು ಆರು ಏರ್‌ಬ್ಯಾಗ್‌ಗಳು, ಇಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್ (ESC), ಎಲ್ಲಾ ಪ್ರಯಾಣಿಕರಿಗೆ 3- ಪಾಯಿಂಟ್ ಸೀಟ್‌ಬೆಲ್ಟ್‌ಗಳು ಮತ್ತು ಅಡ್ವಾನ್ಸ್‌ಡ್ ಎಮರ್ಜನ್ಸಿ ಬ್ರೇಕಿಂಗ್ ಸಿಸ್ಟಮ್ ಮುಂತಾದ ಕಡ್ಡಾಯ ಫೀಚರ್‌ಗಳನ್ನು ಸೇರಿಸುವಂತೆ ಹಿಂದಿನ ಸರ್ಕಾರಿ ದಾಖಲೆ ಸೂಚಿಸಿದೆ. ಆದ್ದರಿಂದ, ಈಗ ಪರೀಕ್ಷಿಸಲಿರುವ ಕಾರುಗಳಲ್ಲಿ ಈ ಫೀಚರ್‌ಗಳು ಸ್ಟಾಂಡರ್ಡ್ ಆಗಿದ್ದರೆ, ಉತ್ತಮ ರೇಟಿಂಗ್ ಗಳಿಸಬಹುದು.

ಪ್ರಸ್ತುತ ಕಡ್ಡಾಯಗೊಳಿಸಲಾದ ಸುರಕ್ಷತಾ ಮಾನದಂಡಗಳು

ಸದ್ಯಕ್ಕೆ, ಭಾರತದ ಎಲ್ಲಾ ಕಾರುಗಳು ಮುಂಭಾಗದ ಎರಡು ಏರ್‌ಬ್ಯಾಗ್‌ಗಳು, ABS ಜೊತೆಗೆ EBD, ಹಿಂಭಾಗದ ಪಾರ್ಕಿಂಗ್ ಅಸಿಸ್ಟ್, ಮುಂಭಾಗದ ಸೀಟ್‌ಬೆಲ್ಟ್ ರಿಮೈಂಡರ್ ಮತ್ತು ಸ್ಪೀಡ್ ಅಲರ್ಟ್ ಸಿಸ್ಟಮ್ ಅನ್ನು ಹೊಂದಿರಬೇಕು. ಸರ್ಕಾರವು ಈಗಾಗಲೇ ಎಂಟು ಪ್ರಯಾಣಿಕರ ಸಾಮರ್ಥ್ಯದ ಕಾರುಗಳಲ್ಲಿ ಆರು ಏರ್‌ಬ್ಯಾಗ್ ಅನ್ನು ಕಡ್ಡಾಯಗೊಳಿಸುವ ಕುರಿತಾದ ಕಾರ್ಯದಲ್ಲಿದೆ. ಅಲ್ಲದೇ ಸುಧಾರಿತ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಮ್‌ಗಳನ್ನು (ADAS) ಸ್ಟಾಂಡರ್ಡ್ ಆಗಿ ಮಾಡುವ ಕಾರ್ಯದಲ್ಲೂ ತೊಡಗಿದೆ.

ಇದನ್ನೂ ಓದಿ: ಮಹೀಂದ್ರಾ ಸ್ಕಾರ್ಪಿಯೋ N-ಆಧಾರಿತ ಗ್ಲೋಬಲ್ ಪಿಕಪ್ ಕಾನ್ಸೆಪ್ಟ್‌ನ 5 ಪ್ರಮುಖ ಸಾರಾಂಶಗಳು

r
ಅವರಿಂದ ಪ್ರಕಟಿಸಲಾಗಿದೆ

rohit

  • 23 ವೀಕ್ಷಣಿಗಳು
  • 0 ಕಾಮೆಂಟ್‌ಗಳು

Write your ಕಾಮೆಂಟ್

Read Full News

trendingಕಾರುಗಳು

  • ಲೇಟೆಸ್ಟ್
  • ಉಪಕಮಿಂಗ್
  • ಪಾಪ್ಯುಲರ್
ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ