ಬಂದೇಬಿಡ್ತು ಭಾರತ್ ನ್ಯೂ ಕಾರ್ ಅಸೆಸ್‌ಮೆಂಟ್ ಪ್ರೋಗ್ರಾಂ!

published on ಆಗಸ್ಟ್‌ 23, 2023 08:14 pm by rohit

  • 12 Views
  • ಕಾಮೆಂಟ್‌ ಅನ್ನು ಬರೆಯಿರಿ

ಭಾರತ ಸರ್ಕಾರವು ಹೊಸ ಭಾರತ್ ನ್ಯೂ ಕಾರ್ ಅಸೆಸ್‌ಮೆಂಟ್ ಪ್ರೋಗ್ರಾಂ (BNCAP) ಅನ್ನು ಅಕ್ಟೋಬರ್ 1, 2023ರಂದು ಕಾರ್ಯರೂಪಕ್ಕೆ ತರಲಿದೆ

Bharat New Car Assessment Program Is Finally Here!

ಇದೀಗ ಅಧಿಕೃತವಾಗಿದೆ, ಸುರಕ್ಷತಾ ರೇಟಿಂಗ್‌ಗಳನ್ನು ನಿಯೋಜಿಸುವ ಉದ್ದೇಶದಿಂದ ದೇಶದಲ್ಲಿ ಮಾರಾಟವಾಗುತ್ತಿರುವ ಹೊಸ ಮತ್ತು ಅಸ್ತಿತ್ವದಲ್ಲಿರುವ ಕಾರುಗಳ ಕ್ರ್ಯಾಶ್ ಪರೀಕ್ಷೆಗಳನ್ನು ಕೈಗೊಳ್ಳಲು ಭಾರತ ಈಗ ತನ್ನದೇ ಆದ ಸಂಸ್ಥೆಯನ್ನು ಹೊಂದಿದೆ. ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವರಾದ (MoRTH) ನಿತಿನ್ ಗಡ್ಕರಿಯವರು ಭಾರತ್ NCAP (ಹೊಸ ಕಾರುಗಳ ಮೌಲ್ಯಮಾಪನಾ ಪ್ರೋಗ್ರಾಂ) ಅನ್ನು ಹೊಸತಾಗಿ ಪರಿಚಯಿಸಿದ್ದಾರೆ. 

 

ಭಾರತ್ NCAPಯ ಅಗತ್ಯ

 ಭಾರತ ಸರ್ಕಾರವು ತನ್ನದೇ ಆದ ಕ್ರ್ಯಾಶ್-ಟೆಸ್ಟಿಂಗ್ ಏಜೆನ್ಸಿಯನ್ನು ಬಿಡುಗಡೆ ಮಾಡಿದ್ದು ಇದು ಗ್ಲೋಬಲ್ NCAP, ಯೂರೋ NCAP, ಆಸ್ಟ್ರೇಲಿಯನ್ NCAP ಮತ್ತು ಲ್ಯಾಟಿನ್ NCAP ಮುಂತಾದ ಅಂತಾರಾಷ್ಟ್ರೀಯವಾಗಿ ಸ್ಥಾಪನೆಗೊಂಡ ಘಟಕಗಳಿಗೆ ಸರಿಸಮಾನವಾಗಿದೆ.

Mahindra Scorpio N Global NCAP

ಸ್ಥಳೀಯವಾಗಿ ಕ್ರ್ಯಾಶ್ ಟೆಸ್ಟ್ ನಡೆಸುವುದರಿಂದ, ಕಾರುತಯಾಕರು ಜಾಗತಿಕ ಸಂಸ್ಥೆಗಳಿಗೆ ಕಳುಹಿಸುವ ವೆಚ್ಚವನ್ನು ಅವರು ಭರಿಸಬೇಕಾಗಿಲ್ಲ. ಅಲ್ಲದೇ ಅಂತರಾಷ್ಟ್ರೀಯವಾಗಿ ಕಾರನ್ನು ಪರೀಕ್ಷಿಸಲು 2.5 ಕೋಟಿಗಳಷ್ಟು ವೆಚ್ಚವಿದ್ದರೆ, ಭಾರತ್ NCAP ಅನ್ನು ಆಯ್ಕೆ ಮಾಡುವುದರಿಂದ ಇದರ ವೆಚ್ಚ ರೂ 60 ಲಕ್ಷಕ್ಕೆ ಇಳಿಯಬಹುದು ಎಂದು ಭಾರತ್ NCAP ಪ್ರಕಟಣೆಯ ವೇಳೆ ಗಡ್ಕರಿಯವರು ಬಹಿರಂಗಪಡಿಸಿದರು. ಇದೇ ವೇಳೆ ಕಾರ್ ಟೆಸ್ಟ್ ರೇಟಿಂಗ್‌ಗಳು ನಿರ್ದಿಷ್ಟವಾಗಿ ಇಂಡಿಯಾ ಸ್ಪೆಕ್ ಮಾಡೆಲ್‌ಗಳಿಗೆ ಇರುವುದರಿಂದ, ಭಾರತೀಯರು ಇಲ್ಲಿ ಮಾರಾಟದಲ್ಲಿರುವ ಕಾರುಗಳನ್ನು ಖರೀದಿಸುವಾಗ ಮಾಹಿತಿಯುಕ್ತ ನಿರ್ಧಾರವನ್ನು ತೆಗೆದುಕೊಳ್ಳಲು ಭಾರತ್ NCAP ನೆರವಾಗುತ್ತದೆ.

ಭಾರತದಲ್ಲಿ ಪ್ರತಿ ವರ್ಷ ಹೆಚ್ಚಿನ ಸಂಖ್ಯೆಯ ರಸ್ತೆ ಅಪಘಾತಗಳಿಂದ ಸಾವುಗಳು ಉಂಟಾಗುವ ಕಾರಣಕ್ಕಾಗಿ ಸುಧಾರಿತ ಸುರಕ್ಷತೆಯ ಅವಶ್ಯಕತೆಯು ಮುಖ್ಯವಾಗುತ್ತದೆ. ಹೆಚ್ಚಿನ ಸರಾಸರಿ ಮೋಟರಿಂಗ್ ವೇಗವನ್ನು ಒಳಗೊಂಡಿರುವ ಅಭಿವೃದ್ಧಿ ಹೊಂದಿರುವ ರಾಷ್ಟ್ರವಾಗಲು ದೇಶದ ದೀರ್ಘಾವಧಿ ಮಾರ್ಗಸೂಚಿ ಅವಶ್ಯವಾಗಿದೆ ಮತ್ತು ಇಂತಹ ಸಂದರ್ಭದಲ್ಲಿ ವಾಹನಗಳು ಸುರಕ್ಷಿತವಾಗಿರಬೇಕಾಗುತ್ತದೆ. ಮಾತ್ರವಲ್ಲ, ಉನ್ನತ ಕಾರ್ಯಕ್ಷಮತೆಯ ಮಾಡೆಲ್‌ಗಳು ಅದೇ ರೀತಿಯ ಕಟ್ಟುನಿಟ್ಟಾದ ಸುರಕ್ಷತಾ ಪರೀಕ್ಷೆಗಳನ್ನು ಹೊಂದಿರುವ ಜಾಗತಿಕ ಮಾರುಕಟ್ಟೆಗಳಿಗೆ ಭಾರತ-ನಿರ್ಮಿತ ಕಾರುಗಳ ರಫ್ತು ಸಾಮರ್ಥ್ಯವನ್ನು ವಿಸ್ತರಿಸಬಹುದು.

 ಇದನ್ನೂ ಓದಿ: ಕವರ್ ಆಗಿರುವ ಹೊಚ್ಚ ಹೊಸ ಮಹೀಂದ್ರಾ BE.05 ದ ವಿಶೇಷತೆಯೇನು

 

ಯಾವೆಲ್ಲಾ ಪರೀಕ್ಷೆಗಳನ್ನು ನಡೆಸಲಾಗುತ್ತದೆ?

 ಜಾಗತಿಕ NCAP ಮತ್ತು ಈ ಮೊದಲು ಉಲ್ಲೇಖಿಸಲಾದ ಸಂಸ್ಥೆಗಳು ಫ್ರಂಟಲ್ ಆಫ್‌ಸೆಟ್, ಸೈಡ್ ಇಂಪ್ಯಾಕ್ಟ್ ಮತ್ತು ಸೈಡ್ ಪೋಲ್ ಇಂಪ್ಯಾಕ್ಟ್ ಟೆಸ್ಟ್ ಮುಂತಾದ ಅನೇಕ ಕ್ರ್ಯಾಶ್ ಟೆಸ್ಟ್‌ಗಳನ್ನು ನಡೆಸಿರುವುದನ್ನು ನೀವು ನೋಡಿರಬಹುದು. ಭಾರತ್ NCAP ಕೂಡಾ ಅದೇ ಟೆಸ್ಟ್‌ಗಳನ್ನು ನಡೆಸುತ್ತದೆ.

Kia Carens crash-tested

 ಫ್ರಂಟಲ್ ಆಫ್‌ಸೆಟ್ ಟೆಸ್ಟ್ ಅನ್ನು 64kmph ನಲ್ಲಿ ನಡೆಸಿದರೆ, ಸೈಡ್ ಇಂಪ್ಯಾಕ್ಟ್ ಮತ್ತು ಸೈಡ್ ಪೋಲ್ ಇಂಪ್ಯಾಕ್ಟ್ ಟೆಸ್ಟ್‌ಗಳನ್ನು ಕ್ರಮವಾಗಿ 50kmph ಮತ್ತು 29kmph ರಲ್ಲಿ ನಡೆಸಲಾಗುತ್ತದೆ. ವಾಹನದ ರಚನಾತ್ಮಕ ಸಂಯೋಜನೆ ಮತ್ತು ಅದರಲ್ಲಿರುವ ಸುರಕ್ಷತಾ ನೆರವು ತಂತ್ರಜ್ಞಾನದ ಅಂಶಗಳನ್ನು ಆಧರಿಸಿ ಟೆಸ್ಟ್ ಸ್ಕೋರ್ ಅನ್ನು ನೀಡಲಾಗುತ್ತದೆ.

ಟೆಸ್ಟ್‌ಗಳ ಬಗೆಗಿನ ಅನೇಕ ವಿವರಗಳು ಮತ್ತು ನಿರೀಕ್ಷಿತ ಕಾರ್ಯಕ್ಷಮತೆ ಮಾನದಂಡಗಳ ಬಗ್ಗೆ AIS-197 ನಲ್ಲಿ ನೀಡಲಾಗಿದ್ದು ಇದು ಭಾರತ್ NCAPಯಿಂದ ಪಡೆದ ಕಾರಿನ ಅಂತಿಮ ಸ್ಕೋರ್ ಅನ್ನೂ ಹೊಂದಿರುತ್ತದೆ.

 

ರೇಟಿಂಗ್ ಸಿಸ್ಟಮ್

Global NCAP To Start Crash Tests In India By End Of 2023

 ಪರೀಕ್ಷಿಸಲಾದ ಎಲ್ಲಾ ಕಾರುಗಳ ವಯಸ್ಕ ಪ್ರಯಾಣಿಕ ರಕ್ಷಣೆ (AOP) ಮತ್ತು ಪ್ರಯಾಣಿಕ ಶಿಶುವಿನ ರಕ್ಷಣೆ (COP) ಯನ್ನು ಈ ಕೆಳಗಿನ ಮಾನದಂಡಗಳಿಗೆ ಅನುಸಾರವಾಗಿ ರೇಟ್ ಮಾಡಲಾಗುತ್ತದೆ.

AOP

COP

ಸ್ಟಾರ್ ರೇಟಿಂಗ್

ಸ್ಕೋರ್

ಸ್ಟಾರ್ ರೇಟಿಂಗ್

ಸ್ಕೋರ್

5 ಸ್ಟಾರ್‌ಗಳು

27

5 ಸ್ಟಾರ್‌ಗಳು

41

4 ಸ್ಟಾರ್‌ಗಳು

22

4 ಸ್ಟಾರ್‌ಗಳು

35

3 ಸ್ಟಾರ್‌ಗಳು

16

3 ಸ್ಟಾರ್‌ಗಳು

27

2 ಸ್ಟಾರ್‌ಗಳು

10

2 ಸ್ಟಾರ್‌ಗಳು

18

1 ಸ್ಟಾರ್‌ಗಳು

4

1 ಸ್ಟಾರ್‌ಗಳು

9

 ಮೂರು ಅಥವಾ ಹೆಚ್ಚು ಸ್ಟಾರ್‌ಗಳನ್ನು ಪಡೆದ ವಾಹನಗಳು ಮಾತ್ರವೇ ಪೋಲ್‌ ಸೈಡ್ ಇಂಪ್ಯಾಕ್ಟ್ ಟೆಸ್ಟ್‌ಗೆ ಒಳಪಡುತ್ತವೆ.

 

ಯಾವ ಕಾರುಗಳನ್ನು ಪರೀಕ್ಷಿಸಲಾಗುತ್ತದೆ?

ಭಾರತ್ NCAP, ಕಾರುಗಳ ಕ್ರ್ಯಾಶ್ ಟೆಸ್ಟಿಂಗ್ ಅನ್ನು ಸ್ವಯಂಪ್ರೇರಿತ ಆಧಾರದ ಮೇಲೆ ಮಾಡುತ್ತದೆ. M1ವರ್ಗದ (ಅಡಿಯಲ್ಲಿ ಬರುವ ಯಾವುದೇ ವಾಹನವೂ ಈ ಟೆಸ್ಟ್‌ಗಳಿಗೆ ಅರ್ಹವಾಗಿರುತ್ತದೆ. (ಡ್ರೈವರ್ ಸೇರಿದಂತೆ ಎಂಟು ಪ್ರಯಾಣಿಕರ ತನಕದ ಸೀಟಿಂಗ್ ಸಾಮರ್ಥ್ಯವನ್ನು ಹೊಂದಿರುವ ಕಾರುಗಳ ಕ್ರ್ಯಾಶ್ ಟೆಸ್ಟಿಂಗ್ ಅನ್ನು ಸ್ವಯಂಪೇರಿತ ಆಧಾರದಲ್ಲಿ ಭಾರತ್ NCAPಯ ಮಾಡಲಾಗುತ್ತದೆ). ಮಾತ್ರವಲ್ಲ, ಆಯ್ಕೆ ಮಾಡಿದ ವಾಹನವು 3.5 ಟನ್‌ಗಳು ಅಥವಾ 3500kg ಗಿಂತ ಕಡಿಮೆ ಇರಬೇಕು.

It’ll Be Harder To Get A 5-Star GNCAP Crash Test Rating From July 2022

ಇದು ಜನಪ್ರಿಯ ಮಾಡೆಲ್‌ಗಳ (ಹಿಂದಿನ ಕ್ಯಾಲೆಂಡರ್ ವರ್ಷದಲ್ಲಿ 30,000 ಯೂನಿಟ್‌ಗಳನ್ನು ಮಾರಾಟ ಮಾಡಲಾದ ಯಾವುದೇ ಕಾರು ಎಂದು ವ್ಯಾಖ್ಯಾನಿಸಲಾಗುತ್ತದೆ), ಆರಂಭಿಕ ಮಟ್ಟದ ಸುರಕ್ಷತಾ ಸಾಧನವನ್ನು ಹೊಂದಿರುವ ಆರಂಭಿಕ ವೇರಿಯೆಂಟ್ ಅನ್ನು ಪರೀಕ್ಷಿಸುತ್ತದೆ. ಆಯ್ಕೆ ಮಾಡಲಾದ ಮಾಡೆಲ್ ಅನ್ನು ಶೀಘ್ರದಲ್ಲೇ ಹೊಸ ಪುನರಾವರ್ತಿತ ಮಾಡೆಲ್‌ನೊಂದಿಗೆ ಬದಲಾಯಿಸುವುದಿದ್ದರೆ, ಕಾರು ತಯಾರಕರು ನವೀಕೃತ ಆವೃತ್ತಿಯ ಮೇಲೆ ಪರೀಕ್ಷೆ ನಡೆಸಲು ಭಾರತ್ NCAP ಅಧಿಕಾರಿಗಳನ್ನು ವಿನಂತಿಸಿಕೊಳ್ಳಬಹುದು.

ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯವೂ (MoRTH) ಕಾರು ಮಾರುಕಟ್ಟೆ ಪ್ರತಿಕ್ರಿಯೆ ಮತ್ತು ವಿಶ್ಲೇಷಣೆಯ ಆಧಾರದ ಮೇಲೆ ಭಾರತ್ NCAP ಯ  ಪ್ರೋಟೋಕಾಲ್ ಅಡಿಯಲ್ಲಿ ಬರುವ ಯಾವುದೇ ಕಾರುಗಳನ್ನು ಶಿಫಾರಸು ಮಾಡಬಹುದು. ನಂತರ ಭಾರತ ಸರ್ಕಾರವು- ಬಯಸಿದಲ್ಲಿ- ಸಾರ್ವಜನಿಕ ಸುರಕ್ಷತೆಯ ಹಿತಾಸಕ್ತಿಯಲ್ಲಿ ಮೌಲ್ಯಮಾಪನಕ್ಕಾಗಿ ನಿರ್ದಿಷ್ಟ ವೇರಿಯೆಂಟ್ ಅನ್ನು ಆಯ್ಕೆ ಮಾಡಲು ಅಧಿಕಾರಿಗಳನ್ನು ವಿನಂತಿಸಿಕೊಳ್ಳಬಹುದು.

 ಇದನ್ನೂ ಓದಿ:  ಇಲ್ಲಿಯ ತನಕ 2023 ರನ್ನು ಪರಿಸರ ಸ್ನೇಹಿಯನ್ನಾಗಿಸಿದ  6 ಇಲೆಕ್ಟ್ರಿಕ್ ಕಾರುಗಳು

ಭಾರತ್ NCAP ಶೀಘ್ರದಲ್ಲೇ ಕಾರ್ಯಾರಂಭ

 ಭಾರತೀಯ ಕ್ರ್ಯಾಶ್-ಟೆಸ್ಟಿಂಗ್ ಪ್ರಾಧಿಕಾರ ಅಕ್ಟೋಬರ್ 1, 2023 ರಂದು ಕಾರ್ಯಾರಂಭ ಮಾಡಲಿದೆ.

ಅವರಿಂದ ಪ್ರಕಟಿಸಲಾಗಿದೆ
was this article helpful ?

0 out of 0 found this helpful

Write your ಕಾಮೆಂಟ್

Read Full News

ಕಾರು ಸುದ್ದಿ

  • ಟ್ರೆಂಡಿಂಗ್ ಸುದ್ದಿ
  • ಇತ್ತಿಚ್ಚಿನ ಸುದ್ದಿ

trendingಕಾರುಗಳು

  • ಲೇಟೆಸ್ಟ್
  • ಉಪಕಮಿಂಗ್
  • ಪಾಪ್ಯುಲರ್
×
We need your ನಗರ to customize your experience