Login or Register ಅತ್ಯುತ್ತಮ CarDekho experience ಗೆ
Login

BMW iX1 ಎಲೆಕ್ಟ್ರಿಕ್ ಎಸ್‌ಯುವಿಯ ಟೀಸರ್ ಬಂತು; ಅಕ್ಟೋಬರ್‌ನಲ್ಲಿ ಭಾರತಕ್ಕೆ ಪಾದಾರ್ಪಣೆ ನಿರೀಕ್ಷೆ

ಬಿಎಂಡವೋ ಐಎಕ್ಸ್‌1 ಗಾಗಿ ansh ಮೂಲಕ ಸೆಪ್ಟೆಂಬರ್ 25, 2023 01:52 pm ರಂದು ಪ್ರಕಟಿಸಲಾಗಿದೆ

ಇದು X1 ನಂತಹ ವಿನ್ಯಾಸವನ್ನು ಹೊಂದಿದೆ ಮತ್ತು ಎರಡು ಎಲೆಕ್ಟ್ರಿಕ್ ಪವರ್‌ಟ್ರೇನ್‌ಗಳೊಂದಿಗೆ ಬರುತ್ತದೆ

  • ಜಾಗತಿಕವಾಗಿ, eDrive20 ಮತ್ತು xDrive30 ಎಂಬ ಎರಡು ವೇರಿಯೆಂಟ್‌ಗಳಲ್ಲಿ ಲಭ್ಯ.
  • ಇದು 475km ರೇಂಜ್ ಅನ್ನು ಕ್ಲೈಮ್ ಮಾಡಲಾದ 64.7kWh ಬ್ಯಾಟರಿ ಪ್ಯಾಕ್ ಹೊಂದಿದೆ.
  • 10.7 ಇಂಚಿನ ಟಚ್‌ಸ್ಕ್ರೀನ್ ಇನ್‌ಫೊಟೈನ್‌ಮೆಂಟ್ ಸಿಸ್ಟಮ್, ಡ್ಯುಯಲ್-ಝೋನ್ ಕ್ಲೈಮೆಟ್ ಕಂಟ್ರೋಲ್ ಮತ್ತು ವಿಹಂಗಮ ಸನ್‌ರೂಫ್ ಅನ್ನು ಇದು ಒಳಗೊಂಡಿದೆ.
  • ಇದರ ಬೆಲೆಯನ್ನು ರೂ. 60 ಲಕ್ಷದಿಂದ (ಎಕ್ಸ್-ಶೋರೂಮ್) ನಿಗದಿಪಡಿಸಬಹುದೆಂದು ನಿರೀಕ್ಷಿಸಲಾಗಿದೆ.

ಈ ವರ್ಷ ಭಾರತಕ್ಕೆ ಪಾದಾರ್ಪಣೆ ಮಾಡುವ ನಿರೀಕ್ಷೆ ಹೊಂದಿರುವ BMW iX1 ನ ಟೀಸರ್ ಅನ್ನು ಜರ್ಮನ್ ಕಂಪನಿ ಬಿಡುಗಡೆ ಮಾಡಿದೆ. ಕಾರು ತಯಾರಕರು ಮೂರನೇ-ತಲೆಮಾರಿನ X1 ಅನ್ನು ಪ್ರದರ್ಶಿಸಿದಾಗ X1 ಎಸ್‌ಯುವಿಯ ಎಲೆಕ್ಟ್ರಿಕ್ ಆವೃತ್ತಿಯನ್ನು ಕಳೆದ ವರ್ಷ ಜೂನ್‌ನಲ್ಲಿ ಅಂತರಾಷ್ಟ್ರೀಯ ಮಟ್ಟದಲ್ಲಿ ಬಹಿರಂಗಪಡಿಸಲಾಯಿತು. ಮತ್ತು ಈಗ ಎಲೆಕ್ಟ್ರಿಕ್ ಎಸ್‌ಯುವಿಯ ಭಾರತಕ್ಕೆ ಪಾದಾರ್ಪಣೆ ಮಾಡಲು ಸಿದ್ಧವಾಗಿದೆ. ಇದರ ಕುರಿತು ಈವರೆಗೆ ನಮಗೆ ತಿಳಿದಿರುವ ವಿಷಯಗಳು ಇಲ್ಲಿವೆ:

ವಿನ್ಯಾಸ

ಈ iX1 ಯ ಒಟ್ಟಾರೆ ವಿನ್ಯಾಸವು X1 ಗೆ ಹೋಲುತ್ತದೆ. ಇದು ದೊಡ್ಡ ಕ್ಲೋಸ್-ಆಫ್ ಗ್ರಿಲ್‌ನೊಂದಿಗೆ ನೇರವಾದ ಮುಂಭಾಗವನ್ನು ಹೊಂದಿದೆ, ಎಲ್‌ಇಡಿ ಡಿಆರ್‌ಎಲ್‌ಗಳನ್ನು ಹೊಂದಿರುವ ಸ್ಲಿಮ್ ಎಲ್‌ಇಡಿ ಹೆಡ್‌ಲೈಟ್‌ಗಳು ಮತ್ತು ಕ್ರೋಮ್ ಇನ್‌ಸರ್ಟ್ ಜೊತೆಗೆ ದೊಡ್ಡ ಬಂಪರ್ ಅನ್ನು ಇದು ಹೊಂದಿದೆ. ಅದೇ ಅಲಾಯ್ ವ್ಹೀಲ್ ಆಯ್ಕೆಗಳನ್ನು (17-ಇಂಚಿನಿಂದ 21-ಇಂಚಿನ ಯೂನಿಟ್‌ಗಳು) ಹೊಂದಿದೆ, ಅದರ ಪ್ರೊಫೈಲ್ ಪಾರ್ಶ್ವದಲ್ಲಿ ಬ್ಲೂ ಇನ್‌ಸರ್ಟ್‌ನಿಂದ ಸಾಮಾನ್ಯ X1 ಗೆ ಬಹುತೇಕ ಹೋಲುತ್ತದೆ. ಇದರ ಹಿಂಭಾಗವು ಸ್ಪಾಯ್ಲರ್, ಎಲ್-ಆಕಾರದ ಟೈಲ್ ಲ್ಯಾಂಪ್‌ಗಳು ಮತ್ತು ಸ್ಕಿಡ್ ಪ್ಲೇಟ್‌ನೊಂದಿಗೆ ದೊಡ್ಡ ಬಂಪರ್ ಅನ್ನು ಹೊಂದಿದೆ.

X1 ಗಿಂತ ವಿಭಿನ್ನ ಎಂದು ಗುರುತಿಸಿಕೊಳ್ಳಲು ಬಿಎಂಡಬ್ಲ್ಯೂ ಕ್ರೋಮ್ ಅಂಶಗಳ ಸುತ್ತಲೂ ಬ್ಲೂ ಇನ್‌ಸರ್ಟ್‌ಗಳನ್ನು ನೀಡುತ್ತದೆ ಮತ್ತು ಹಿಂಭಾಗದ ಪ್ರೊಫೈಲ್ “iX1” ಎಂಬ ಬ್ಯಾಡ್ಜಿಂಗ್ ಅನ್ನು ಪಡೆಯುತ್ತದೆ.

iX1 ತನ್ನ ಒಳಭಾಗದಲ್ಲಿ ಟೋನ್ ಬ್ಲ್ಯಾಕ್ ಮತ್ತು ಕಂದು ಬಣ್ಣದ ಕ್ಯಾಬಿನ್‌ನೊಂದಿಗೆ ಲೇಯರ್ ಹೊಂದಿರುವ ಮತ್ತು ಡ್ರೈವರ್-ಓರಿಯೆಂಟೆಡ್ ಡ್ಯಾಶ್‌ಬೋರ್ಡ್ ಅನ್ನು ಪಡೆದಿದೆ. ಇದು ಸ್ಲಿಮ್ ಎಸಿ ವೆಂಟ್‌ಗಳು, ಡ್ಯುಯಲ್-ಇಂಟಿಗ್ರೇಟೆಡ್ ಡಿಸ್‌ಪ್ಲೇ ಸೆಟಪ್ ಮತ್ತು ಮಧ್ಯದಲ್ಲಿ ಫ್ಲೋಟಿಂಗ್ ಟನಲ್ ಅನ್ನು ಹೊಂದಿದೆ.

ಫೀಚರ್‌ಗಳು

ಜಾಗತಿಕ ಮಾಡೆಲ್, 10.7-ಇಂಚಿನ ಟಚ್‌ಸ್ಕ್ರೀನ್ ಇನ್‌ಫೊಟೈನ್‌ಮೆಂಟ್ ಸಿಸ್ಟಮ್, ಆ್ಯಂಡ್ರಾಯ್ಡ್ ಆಟೋ ಮತ್ತು ಆ್ಯಪಲ್ ಕಾರ್‌ಪ್ಲೇ, 10.25-ಇಂಚಿನ ಡಿಜಿಟಲ್ ಡ್ರೈವರ್ ಡಿಸ್‌ಪ್ಲೇ, ವಿಹಂಗಮ ಸನ್‌ರೂಫ್, ಡ್ಯುಯಲ್-ಝೋನ್ ಕ್ಲೈಮೆಟ್ ಕಂಟ್ರೋಲ್ ಮತ್ತು ಎಲೆಕ್ಟ್ರಿಕ್ ಸಹಾಯದಿಂದ ಹೊಂದಿಸಬಹುದಾದ ಹಾಗೂ ಮೆಮೊರಿ ಮತ್ತು ಮಸಾಜ್ ಕಾರ್ಯವನ್ನು ಹೊಂದಿರುವ ಮುಂಭಾಗದ ಸೀಟುಗಳನ್ನು ಹೊಂದಿದೆ. ಇದು ಬಹು-ಏರ್‌ಬ್ಯಾಗ್‌ಗಳು, ಹಿಂಬದಿಯ ಪಾರ್ಕಿಂಗ್ ಕ್ಯಾಮರಾ, ಪಾರ್ಕ್ ಅಸಿಸ್ಟ್ ಮತ್ತು ಬ್ರೇಕ್ ಕಾರ್ಯದೊಂದಿಗೆ ಕ್ರೂಸ್ ಕಂಟ್ರೋಲ್ ಮತ್ತು ಮುಂಭಾಗದ ಘರ್ಷಣಾ ವಾರ್ನಿಂಗ್‌ನಂತಹ ಡ್ರೈವರ್ ಅಸಿಸ್ಟ್ ಫೀಚರ್‌ಗಳನ್ನು ಹೊಂದಿದೆ.

ಇದನ್ನೂ ಓದಿ: ಬಿಎಂಡಬ್ಲ್ಯೂ 2 ಸರಣಿಯ ಗ್ರ್ಯಾನ್ ಕೂಪ್ M ಪರ್ಫಾರ್ಮೆನ್ಸ್ ಆವೃತ್ತಿ ಬಿಡುಗಡೆ

ಬ್ಯಾಟರಿ ಪ್ಯಾಕ್ ಮತ್ತು ಮೋಟಾರ್

ಈ iX1, ಅಂತರಾಷ್ಟ್ರೀಯವಾಗಿ, ಎರಡು ವೇರಿಯೆಂಟ್‌ಗಳನ್ನು ನೀಡುತ್ತಿದೆ: eDrive20 ಮತ್ತು xDrive30, ಎರಡೂ ಸಹ 64.7kWh ಬ್ಯಾಟರಿ ಪ್ಯಾಕ್‌ನೊಂದಿಗೆ ಬರಲಿದೆ. ಮೊದಲನೆಯದು 204PS ಮತ್ತು 250Nm ಬಿಡುಗಡೆ ಮಾಡುವ ಫ್ರಂಟ್ ವ್ಹೀಲ್ ಡ್ರೈವ್ ಸಿಂಗಲ್ ಮೋಟಾರ್ ಸೆಟಪ್ ಅನ್ನು ಪಡೆದರೆ ಎರಡನೆಯದು 313PS ಮತ್ತು 494Nm ಬಿಡುಗಡೆ ಮಾಡುವ ಸಂಯೋಜಿತ ಔಟ್‌ಪುಟ್‌ನೊಂದಿಗೆ ಡ್ಯುಯಲ್ ಮೋಟಾರ್ ಆಲ್-ವ್ಹೀಲ್ ಸೆಟಪ್ ಅನ್ನು ಪಡೆಯಲಿದೆ. ಈ ಸೆಟಪ್‌ನೊಂದಿಗೆ, iX1 475km ವರೆಗಿನ WLTP-ಕ್ಲೈಮ್ ರೇಂಜ್ ಅನ್ನು ಪಡೆಯುತ್ತದೆ. ಬಿಎಂಡಬ್ಲ್ಯೂ ಇಂಡಿಯಾ-ಸ್ಪೆಕ್ ಮಾಡೆಲ್‌ನೊಂದಿಗೆ ಯಾವ ಪವರ್‌ಟ್ರೇನ್ ಮಾಡಲ್ ಅನ್ನು ನೀಡುತ್ತಿದೆ ಎಂಬುದನ್ನು ಇಲ್ಲಿಯವರೆಗೆ ದೃಢೀಪಡಿಸಿಲ್ಲ.

ಬಿಡುಗಡೆ, ಬೆಲೆ ಮತ್ತ ಪ್ರತಿಸ್ಪರ್ಧಿಗಳು

ಬಿಎಂಡಬ್ಲ್ಯೂ ಈ ವರ್ಷದ ಅಕ್ಟೋಬರ್‌ನಲ್ಲಿ ಭಾರತದಲ್ಲಿ iX1 ಅನ್ನು ಬಿಡುಗಡೆ ಮಾಡಬಹುದು ಮತ್ತು ಇದರ ಬೆಲೆಯು ರೂ. 60 ಲಕ್ಷದಿಂದ (ಎಕ್ಸ್-ಶೋರೂಮ್) ಇರಬಹುದೆಂದು ನಿರೀಕ್ಷಿಸಲಾಗಿದೆ. ಇದು ಬಿಡುಗಡೆಯಾದ ನಂತರ, ನೇರವಾಗಿ ವೊಲ್ವೋ XC40 ರಿಚಾರ್ಜ್‌ಗೆ ಪ್ರಬಲ ಪ್ರತಿಸ್ಪರ್ಧಿಯಾಗಲಿದೆ.

Share via

Write your Comment on BMW ಐಎಕ್ಸ್‌1

ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ

Enable notifications to stay updated with exclusive offers, car news, and more from CarDekho!

trending ಎಲೆಕ್ಟ್ರಿಕ್ ಕಾರುಗಳು

  • ಪಾಪ್ಯುಲರ್
  • ಉಪಕಮಿಂಗ್
ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ