Login or Register ಅತ್ಯುತ್ತಮ CarDekho experience ಗೆ
Login

ಭಾರತ್ ಮೊಬಿಲಿಟಿ ಗ್ಲೋಬಲ್ ಎಕ್ಸ್‌ಪೋ ಮೂಲಕ ಭಾರತಕ್ಕೆ ಪಾದಾರ್ಪಣೆ ಮಾಡಿದ BYD Yangwang U8 ಎಸ್‌ಯುವಿ

ಜನವರಿ 19, 2025 06:42 pm ರಂದು shreyash ಮೂಲಕ ಪ್ರಕಟಿಸಲಾಗಿದೆ

ಯಾಂಗ್ವಾಂಗ್ ಯು8 ಬಿವೈಡಿಯ ಪ್ಲಗ್-ಇನ್-ಹೈಬ್ರಿಡ್ ಎಸ್‌ಯುವಿಯಾಗಿದ್ದು, ಇದು ಕ್ವಾಡ್ ಮೋಟಾರ್ ಸೆಟಪ್ ಅನ್ನು ಹೊಂದಿದೆ ಮತ್ತು 1,100 ಪಿಎಸ್‌ಗಿಂತ ಹೆಚ್ಚಿನ ಔಟ್‌ಪುಟ್‌ಅನ್ನು ಉತ್ಪಾದಿಸುತ್ತದೆ

  • U8 ಜಾಗತಿಕವಾಗಿ ಬಿವೈಡಿಯ ಯಾಂಗ್ವಾಂಗ್ ಸಬ್‌-ಬ್ರಾಂಡ್ ಅಡಿಯಲ್ಲಿ ಬರುತ್ತದೆ.

  • ಇದು ಸಾಂಪ್ರದಾಯಿಕ ಎಸ್‌ಯುವಿ ಸಿಲೂಯೆಟ್ ಜೊತೆಗೆ ಪಿಕ್ಸಲೇಟೆಡ್ ಪ್ಯಾಟರ್ನ್ ಗ್ರಿಲ್ ಮತ್ತು ಲೈಟಿಂಗ್ ಅನ್ನು ಪಡೆಯುತ್ತದೆ.

  • U8 ಅನ್ನು 5 ಸೀಟ್‌ಗಳ ಸಂರಚನೆಯಲ್ಲಿ ನೀಡಲಾಗುತ್ತಿದೆ.

  • 1200 ಪಿಎಸ್‌ವರೆಗೆ ಉತ್ಪಾದಿಸುತ್ತದೆ ಮತ್ತು ಕೇವಲ 3.6 ಸೆಕೆಂಡುಗಳಲ್ಲಿ ಶೂನ್ಯದಿಂದ 100 kmph ವೇಗವನ್ನು ತಲುಪುತ್ತದೆ.

  • ಇದು ನೀರಿನ ಮೇಲೆ 30 ನಿಮಿಷಗಳವರೆಗೆ ತೇಲಬಲ್ಲದು.

ಚೀನಾದ ಇವಿ ತಯಾರಕ ಕಂಪನಿಯ ಪ್ರಮುಖ ಎಸ್‌ಯುವಿಯಾದ ಬಿವೈಡಿ ಯಾಂಗ್ವಾಂಗ್ ಯು8, ಭಾರತ್ ಮೊಬಿಲಿಟಿ ಗ್ಲೋಬಲ್ ಎಕ್ಸ್‌ಪೋ 2025ರಲ್ಲಿ ಭಾರತಕ್ಕೆ ಪಾದಾರ್ಪಣೆ ಮಾಡಿದೆ. U8 ಪೆಟ್ರೋಲ್ ಎಂಜಿನ್ ಹೊಂದಿರುವ ಕ್ವಾಡ್-ಮೋಟಾರ್ ರೇಂಜ್-ಎಕ್ಸ್‌ಟೆಂಡರ್ ಪವರ್‌ಟ್ರೇನ್ ಅನ್ನು ಹೊಂದಿದೆ. ಜಾಗತಿಕವಾಗಿ, BYD ತನ್ನ ಪ್ರೀಮಿಯಂ ಹ್ಯಾಂಡ್ ಆಗಿರುವ ಯಾಂಗ್ವಾಂಗ್ ಬ್ರ್ಯಾಂಡಿಂಗ್ ಅಡಿಯಲ್ಲಿ U8 ಫ್ಲ್ಯಾಗ್‌ಶಿಪ್ ಎಸ್‌ಯುವಿಯನ್ನು ಮಾರಾಟ ಮಾಡುತ್ತದೆ. ಈ ಎಸ್‌ಯುವಿ ಬಗ್ಗೆ ನೀವು ತಿಳಿದುಕೊಳ್ಳಬೇಕಾದ ಎಲ್ಲವೂ ಇಲ್ಲಿದೆ.

BYD ಯಾಂಗ್ವಾಂಗ್ ಯು8 ವಿನ್ಯಾಸ

ಬಿವೈಡಿ ಯಾಂಗ್ವಾಂಗ್ U8 ಸಾಂಪ್ರದಾಯಿಕ ಬಾಕ್ಸಿ ಎಸ್‌ಯುವಿ ಬಾಡಿ ಆಕೃತಿಯನ್ನು ಹೊಂದಿದ್ದು, ಅದರ ದೃಢವಾದ ವಿನ್ಯಾಸ ಅಂಶಗಳಿಂದಾಗಿ ದಪ್ಪವಾಗಿ ಕಾಣುತ್ತದೆ. ಮುಂಭಾಗವನ್ನು ಪಿಕ್ಸಲೇಟೆಡ್ ಪ್ಯಾಟರ್ನ್ ಗ್ರಿಲ್‌ನಿಂದ ಅಲಂಕರಿಸಲಾಗಿದೆ ಮತ್ತು ಹೆಡ್‌ಲೈಟ್‌ಗಳು ಮತ್ತು ಡಿಆರ್‌ಎಲ್ ಹೌಸಿಂಗ್‌ಗಳ ಒಳಗೆ ಅದೇ ಮೊಡೆಲ್‌ ಅನ್ನು ಕಾಣಬಹುದು. ಪಕ್ಕದಲ್ಲಿ, ಇದು ಚೌಕಾಕಾರದ ವೀಲ್‌ ಆರ್ಚ್‌ಗಳು ಮತ್ತು ಕಪ್ಪು ಬಣ್ಣದ ಚಕ್ರಗಳನ್ನು ಪಡೆಯುತ್ತದೆ, ಹಾಗೆಯೇ ಇದು ಫ್ಲಶ್-ಟೈಪ್ ಡೋರ್ ಹ್ಯಾಂಡಲ್‌ಗಳನ್ನು ಸಹ ಪಡೆಯುತ್ತದೆ. ಹಿಂಭಾಗದಲ್ಲಿ, ದೊಡ್ಡ ಟೈಲ್‌ಗೇಟ್-ಮೌಂಟೆಡ್ ಸ್ಪೇರ್ ವೀಲ್ ಇದೆ, ಆದರೆ ಎಲ್‌ಇಡಿ ಟೈಲ್ ಲೈಟ್‌ಗಳು ಅದೇ ಪಿಕ್ಸಲೇಟೆಡ್ ಪ್ಯಾಟರ್ನ್‌ನ ವಿನ್ಯಾಸವನ್ನು ಪುನರಾವರ್ತಿಸುತ್ತವೆ.

ಲಕ್ಷುರಿ ಮತ್ತು ಫೀಚರ್‌-ಭರಿತ ಇಂಟೀರಿಯರ್‌

ಒಳಭಾಗದಲ್ಲಿ, U8 ಎಸ್‌ಯುವಿಯು ಕಂದು ಬಣ್ಣದ ಕ್ಯಾಬಿನ್ ಥೀಮ್ ಅನ್ನು ಪಡೆಯುತ್ತದೆ ಮತ್ತು 5 ಸೀಟರ್‌ಗಳ ಸಂರಚನೆಯಲ್ಲಿ ಬರುತ್ತದೆ. ಇದು ಮುಂಭಾಗದ ಪ್ರಯಾಣಿಕರಿಗೆ ಟ್ರಿಪಲ್ ಸ್ಕ್ರೀನ್ ಸೆಟಪ್ ಅನ್ನು ನೀಡುವುದು ಮಾತ್ರವಲ್ಲದೆ, ಹಿಂಭಾಗದ ಪ್ರಯಾಣಿಕರು ಸಹ ಹೆಡ್‌ರೆಸ್ಟ್‌ಗಳ ಮೇಲೆ ಇನ್ಫೋಟೈನ್‌ಮೆಂಟ್ ಸ್ಕ್ರೀನ್‌ಗಳನ್ನು ಪಡೆಯುತ್ತಾರೆ. ಇದರ ಫೀಚರ್‌ಗಳ ಪಟ್ಟಿಯಲ್ಲಿ ಮಲ್ಟಿ-ಝೋನ್‌ ಎಸಿ, ಪನೋರಮಿಕ್ ಸನ್‌ರೂಫ್, 22-ಸ್ಪೀಕರ್ ಸೌಂಡ್ ಸಿಸ್ಟಮ್ ಮತ್ತು ಚಾಲಿತ ಮತ್ತು ವೆಂಟಿಲೇಶನ್‌ ಇರುವ ಮುಂಭಾಗದ ಸೀಟುಗಳು ಸೇರಿವೆ.

ಪವರ್‌ಟ್ರೈನ್ ವಿವರಗಳು

BYD ಯಾಂಗ್ವಾಂಗ್ U8 ಅನ್ನು ಪ್ಲಗ್-ಇನ್ ಹೈಬ್ರಿಡ್ ಪವರ್‌ಟ್ರೇನ್‌ನೊಂದಿಗೆ ನೀಡುತ್ತದೆ, ಇದು ದೊಡ್ಡ ಬ್ಯಾಟರಿ ಪ್ಯಾಕ್ ಮತ್ತು ಪೆಟ್ರೋಲ್ ಎಂಜಿನ್ ಅನ್ನು ಒಳಗೊಂಡಿದೆ. ಇದು ಕ್ವಾಡ್ ಮೋಟಾರ್ ಸೆಟಪ್ ಅನ್ನು ಸಹ ಹೊಂದಿದೆ ಮತ್ತು 1200 ಪಿಎಸ್‌ವರೆಗೆ ಔಟ್‌ಪುಟ್‌ ಅನ್ನು ಉತ್ಪಾದಿಸುತ್ತದೆ. U8 1000 ಕಿ.ಮೀ ವರೆಗಿನ ಕ್ಲೈಮ್‌ ಮಾಡಲಾದ ರೇಂಜ್‌ ಅನ್ನು ನೀಡುತ್ತದೆ. U8 ಕೇವಲ 3.6 ಸೆಕೆಂಡುಗಳಲ್ಲಿ 0 ರಿಂದ 100 ಕಿಮೀ ವೇಗವನ್ನು ತಲುಪಬಲ್ಲದು ಮತ್ತು BYD ಪ್ರಕಾರ, ಇದು 30 ನಿಮಿಷಗಳವರೆಗೆ ನೀರಿನಲ್ಲಿ ತೇಲುತ್ತದೆ.

ಇದು ಭಾರತದಲ್ಲಿ ಬಿಡುಗಡೆಯಾಗಲಿದೆಯೇ?

ಭಾರತದಲ್ಲಿ ಯಾಂಗ್ವಾಂಗ್ U8 SUV ಅನ್ನು ಬಿಡುಗಡೆ ಮಾಡುವುದೇ ಅಥವಾ ಇಲ್ಲವೇ ಎಂಬುದನ್ನು BYD ಇನ್ನೂ ದೃಢಪಡಿಸಿಲ್ಲ. ಬಿಡುಗಡೆಯಾದರೆ, ಇದು ಲ್ಯಾಂಡ್ ರೋವರ್ ರೇಂಜ್ ರೋವರ್, ಬಿಎಮ್‌ಡಬ್ಲ್ಯೂ X7, ಮತ್ತು ಮರ್ಸಿಡಿಸ್-ಬೆಂಜ್‌ GLS ನಂತಹ ಪ್ರೀಮಿಯಂ ಎಸ್‌ಯುವಿಗಳಿಗೆ ಪರ್ಯಾಯವಾಗಬಹುದು.

ಆಟೋಮೋಟಿವ್ ಜಗತ್ತಿನಿಂದ ಕ್ಷಣಕ್ಷಣದ ಆಪ್‌ಡೇಟ್‌ಗಳನ್ನು ಪಡೆಯಲು ಕಾರ್‌ದೇಖೋದ ವಾಟ್ಸಾಪ್ ಚಾನೆಲ್ ಅನ್ನು ಫಾಲೋ ಮಾಡಿ

Share via

Write your ಕಾಮೆಂಟ್

Enable notifications to stay updated with exclusive offers, car news, and more from CarDekho!

trending ಎಲೆಕ್ಟ್ರಿಕ್ ಕಾರುಗಳು

  • ಪಾಪ್ಯುಲರ್
  • ಉಪಕಮಿಂಗ್
ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ