2025ರ ಮಾರ್ಚ್‌ನಲ್ಲಿ ಬಿಡುಗಡೆಯಾದ ಎಲ್ಲಾ ಕಾರುಗಳ ಪಟ್ಟಿ ಇಲ್ಲಿದೆ..
ಏಪ್ರಿಲ್ 02, 2025 06:59 pm ರಂದು anonymous ಮೂಲಕ ಪ್ರಕಟಿಸಲಾಗಿದೆ
- 20 Views
- ಕಾಮೆಂಟ್ ಅನ್ನು ಬರೆಯಿರಿ
ಮಾರ್ಚ್ ತಿಂಗಳು XUV700 ಎಬೊನಿಯಂತಹ ಸ್ಪೇಷಲ್ ಎಡಿಷನ್‌ಗಳನ್ನು ಬಿಡುಗಡೆ ಮಾಡಿರುವುದು ಮಾತ್ರವಲ್ಲದೆ, ಮೇಬ್ಯಾಕ್ SL 680 ಮೊನೊಗ್ರಾಮ್‌ನಂತಹ ಅಲ್ಟ್ರಾ-ಲಕ್ಷರಿ ಮೊಡೆಲ್‌ಗಳನ್ನು ಸಹ ಪರಿಚಯಿಸಿತು
ಮೊಡೆಲ್ ಇಯರ್ ಆಪ್‌ಡೇಟ್‌ಗಳು, ಫೇಸ್‌ಲಿಫ್ಟ್‌ಗಳು ಮತ್ತು ಮರ್ಸಿಡಿಸ್-ಮೇಬ್ಯಾಕ್ ಎಸ್‌ಎಲ್ 680 ಮಾನೋಗ್ರಾಮ್‌ನಂತಹ ಅಲ್ಟ್ರಾ-ಲಕ್ಷುರಿ ಕಾರುಗಳ ಬಿಡುಗಡೆಯೊಂದಿಗೆ, ಮಾರ್ಚ್‌ನಲ್ಲಿ ಖರೀದಿದಾರರಿಗೆ ಸಾಕಷ್ಟು ನಿರೀಕ್ಷೆಗಳಿದ್ದವು. ಮತ್ತು ಇದು ಕೇವಲ ಒಂದು ಸೆಗ್ಮೆಂಟ್‌ಗೆ ಸೀಮಿತವಾಗಿರಲಿಲ್ಲ, ಏಕೆಂದರೆ ಮಾಸ್ ಮಾರ್ಕೆಟ್ ಬ್ರಾಂಡ್‌ಗಳು ಮತ್ತು ಪ್ರೀಮಿಯಂ ಕಾರು ತಯಾರಕರುಗಳು ತಮ್ಮ ಕಾರರುಗಳ ಪಟ್ಟಿಗೆ ಅಮೂಲ್ಯವಾದ ಸೇರ್ಪಡೆಗಳನ್ನು ಪರಿಚಯಿಸಿದರು. ಮಾರ್ಚ್‌ನಲ್ಲಿ ಬಿಡುಗಡೆಯಾದ ಎಲ್ಲಾ ಕಾರುಗಳನ್ನು ಅವುಗಳ ಪ್ರಮುಖ ಹೈಲೈಟ್‌ಗಳೊಂದಿಗೆ ಮತ್ತಷ್ಟು ಅನ್ವೇಷಿಸೋಣ ಮತ್ತು ವಿವರವಾಗಿ ತಿಳಿಯೋಣ.
2025 ಟಾಟಾ ಟಿಯಾಗೊ ಎನ್‌ಆರ್‌ಜಿ
ಬೆಲೆ: 7.20 ಲಕ್ಷ ರೂ. ನಿಂದ 8.75 ಲಕ್ಷ ರೂ. (ಎಕ್ಸ್ ಶೋರೂಂ)
ಟಾಟಾ ಮೋಟಾರ್ಸ್ ಟಿಯಾಗೊ ಹ್ಯಾಚ್‌ಬ್ಯಾಕ್ ಅನ್ನು ಆಪ್‌ಡೇಟ್ ಮಾಡಿದೆ ಮತ್ತು ಹಾಗೆಯೇ, NRG ವೇರಿಯೆಂಟ್‌ಅನ್ನು ಸಹ ಬಿಡುಗಡೆ ಮಾಡಿದೆ, ಇದು ರೆಗ್ಯುಲರ್ ಮೊಡೆಲ್‌ಗಿಂತ ಹೆಚ್ಚುವರಿ ಕಾಸ್ಮೆಟಿಕ್ ಅಂಶಗಳನ್ನು ಹೊಂದಿದೆ. ಟಿಯಾಗೊ NRG ಕಾರು, ಮರುವಿನ್ಯಾಸಗೊಳಿಸಲಾದ ಬಂಪರ್, ದಪ್ಪವಾದ ಸ್ಕಿಡ್ ಪ್ಲೇಟ್‌ಗಳು, ರಗಡ್ ಆಗಿರುವ ಬಾಡಿ ಕ್ಲಾಡಿಂಗ್ ಮತ್ತು NRG ಬ್ಯಾಡ್ಜಿಂಗ್‌ನೊಂದಿಗೆ ಟೈಲ್‌ಗೇಟ್‌ನಲ್ಲಿ ದಪ್ಪವಾದ ಕಪ್ಪು ಪ್ಯಾನಲ್‌ನೊಂದಿಗೆ ಸ್ಪೋರ್ಟಿಯರ್ ಲುಕ್ ಅನ್ನು ಪ್ರಸ್ತುತಪಡಿಸುತ್ತದೆ.
ಕ್ಯಾಬಿನ್ ಒಳಗಿನ ಆಪ್‌ಡೇಟ್‌ಗಳು ಸಂಪೂರ್ಣ ಕಪ್ಪು ಬಣ್ಣದ ಥೀಮ್‌ಗಳನ್ನು ಒಳಗೊಂಡಿದ್ದು, 10.25-ಇಂಚಿನ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಡಿಜಿಟಲ್ ಡ್ರೈವರ್ ಡಿಸ್‌ಪ್ಲೇ, ಆಟೋಮ್ಯಾಟಿಕ್ ಹೆಡ್‌ಲೈಟ್‌ಗಳು ಮತ್ತು ವಿದ್ಯುತ್ ಹೊಂದಾಣಿಕೆ ಮಾಡಬಹುದಾದ ಮತ್ತು ಮಡಿಸಬಹುದಾದ ORVM ಗಳಂತಹ ಫೀಚರ್‌ಗಳನ್ನು ಉಳಿಸಿಕೊಂಡಿವೆ. ಇದು ಅದೇ 86 ಪಿಎಸ್ 1.2-ಲೀಟರ್ ಪೆಟ್ರೋಲ್ ಎಂಜಿನ್‌ನಿಂದ ಚಾಲಿತವಾಗುವುದನ್ನು ಮುಂದುವರೆಸಿದೆ, ಕಂಪೆನಿಯಲ್ಲಿ ಅಳವಡಿಸಲಾದ CNG ಕಿಟ್‌ನೊಂದಿಗೆ ಇದನ್ನು ಕಾನ್ಫಿಗರ್ ಮಾಡುವ ಆಯ್ಕೆಯನ್ನೂ ಹೊಂದಿದೆ.
2025 ಎಂಜಿ ಕಾಮೆಟ್ ಇವಿ
ಬೆಲೆ: 7 ಲಕ್ಷ ರೂ.ನಿಂದ 9.81 ಲಕ್ಷ ರೂ. (ಎಕ್ಸ್ ಶೋರೂಂ)
ಬೆಲೆ: 5 ಲಕ್ಷ ರೂ.ನಿಂದ 7.80 ಲಕ್ಷ ರೂ. (ಎಕ್ಸ್ ಶೋರೂಂ, ಬ್ಯಾಟರಿ ಚಂದಾದಾರಿಕೆ ಯೋಜನೆಯೊಂದಿಗೆ)
ಎಮ್‌ಜಿಯ ಎಂಟ್ರಿ-ಲೆವೆಲ್‌ನ ಎಲೆಕ್ಟ್ರಿಕ್ ವೆಹಿಕಲ್ ಆದ ಕಾಮೆಟ್ EV, ಮೊಡೆಲ್ ಇಯರ್ ಆಪ್‌ಡೇಟ್‌ಗಳನ್ನು ಪಡೆದುಕೊಂಡಿತು, ಅದು ಅದರ ಕೆಲವು ವೇರಿಯೆಂಟ್‌ಗಳಿಗೆ ಫೀಚರ್‌ಗಳನ್ನು ಸೇರಿಸಿತು. ಮಿಡ್-ಸ್ಪೆಕ್ ಎಕ್ಸೈಟ್ ಟ್ರಿಮ್ ಈಗ ಹಿಂಭಾಗದ ಪಾರ್ಕಿಂಗ್ ಕ್ಯಾಮೆರಾ ಜೊತೆಗೆ ಬಟನ್‌ನಿಂದ ಮಡಿಸಬಹುದಾದ ORVM ಗಳನ್ನು ಹೊಂದಿದೆ, ಆದರೆ ಟಾಪ್-ಸ್ಪೆಕ್ ಎಕ್ಸ್‌ಕ್ಲೂಸಿವ್ ವೇರಿಯೆಂಟ್ ಲೆಥೆರೆಟ್ ಸೀಟ್ ಕವರ್ ಮತ್ತು 4-ಸ್ಪೀಕರ್ ಆಡಿಯೊ ಸಿಸ್ಟಮ್‌ನೊಂದಿಗೆ ಬರುತ್ತದೆ. ಇದು 17.3 ಕಿ.ವ್ಯಾಟ್ ಬ್ಯಾಟರಿ ಪ್ಯಾಕ್ ಅನ್ನು ಹೊಂದಿದ್ದು, 42 ಪಿಎಸ್/110 ಎನ್‌ಎಮ್ ಎಲೆಕ್ಟ್ರಿಕ್ ಮೋಟರ್‌ನೊಂದಿಗೆ ಜೋಡಿಸಲ್ಪಟ್ಟಿದ್ದು, 230 ಕಿಮೀ.ಯಷ್ಟು ಕ್ಲೈಮ್ ಮಾಡಿದ ರೇಂಜ್‌ಅನ್ನು ನೀಡುತ್ತದೆ.
2025 ಸ್ಕೋಡಾ ಕುಶಾಕ್ ಮತ್ತು ಸ್ಲಾವಿಯಾ
2025 ಸ್ಲಾವಿಯಾ ಬೆಲೆ: 10.34 ಲಕ್ಷ ರೂ.ನಿಂದ 18.24 ಲಕ್ಷ ರೂ. (ಎಕ್ಸ್ ಶೋ ರೂಂ)
2025 ಕುಶಾಕ್ ಬೆಲೆ: 11 ಲಕ್ಷ ರೂ.ನಿಂದ 19.01 ಲಕ್ಷ ರೂ. (ಎಕ್ಸ್ ಶೋ ರೂಂ)
ಸ್ಕೋಡಾ ಸ್ಲಾವಿಯಾ ಮತ್ತು ಕುಶಾಕ್ ಅನ್ನು 2025 ರ ಮೊಡೆಲ್ ಇಯರ್ ಆಪ್‌ಡೇಟ್‌ಗಳೊಂದಿಗೆ ರಿಫ್ರೆಶ್ ಮಾಡಿದೆ. ಎಕ್ಸ್‌ಟೀರಿಯರ್ ಅಥವಾ ಇಂಟೀರಿಯರ್‌ನಲ್ಲಿ ಯಾವುದೇ ಬದಲಾವಣೆಗಳಿಲ್ಲದಿದ್ದರೂ, ಎರಡೂ ಕಾರುಗಳ ಲೊವರ್-ಸ್ಪೆಕ್ ವೇರಿಯೆಂಟ್‌ಗಳು ಕನೆಕ್ಟೆಡ್ ಕಾರ್ ಟೆಕ್, ಅಲಾಯ್ ವೀಲ್‌ಗಳು ಮತ್ತು ಸನ್‌ರೂಫ್‌ನಂತಹ ಹೊಸ ಫೀಚರ್‌ಗಳನ್ನು ಪಡೆದುಕೊಂಡು ಅವುಗಳ ಆಕರ್ಷಣೆಯನ್ನು ಹೆಚ್ಚಿಸಿವೆ. ಹೆಚ್ಚುವರಿಯಾಗಿ, ಎರಡೂ ಮೊಡೆಲ್‌ಗಳ ಬೇಸ್ ಕ್ಲಾಸಿಕ್ ವೇರಿಯೆಂಟ್ ಈಗ ವೈರ್ಡ್ ಆಪಲ್ ಕಾರ್‌ಪ್ಲೇ/ಆಂಡ್ರಾಯ್ಡ್ ಆಟೋ ಕನೆಕ್ಟಿವಿಟಿಯನ್ನು ಹೊಂದಿದೆ.
ಪವರ್‌ಟ್ರೇನ್ ವಿಭಾಗದಲ್ಲಿ ಯಾವುದೇ ಬದಲಾವಣೆಗಳಿಲ್ಲ, ಏಕೆಂದರೆ ಎರಡೂ 1-ಲೀಟರ್ ಮತ್ತು 1.5-ಲೀಟರ್ ಟರ್ಬೊ-ಪೆಟ್ರೋಲ್ ಎಂಜಿನ್ ಆಯ್ಕೆಗಳೊಂದಿಗೆ ನೀಡಲಾಗುತ್ತಿದೆ. ಹಾಗೆಯೇ, 2025ರ ಸ್ಲಾವಿಯಾದ ಬೆಲೆಯಲ್ಲಿ 45,000 ರೂ.ಗಳವರೆಗೆ ಇಳಿಕೆ ಕಂಡುಬಂದರೆ, ಕುಶಾಕ್ ಬೆಲೆಯಲ್ಲಿ 69,000 ರೂ.ಗಳವರೆಗೆ ಏರಿಕೆಯಾಗಿದೆ ಎಂಬುದನ್ನು ನಾವಿಲ್ಲಿ ಗಮನಿಸಬೇಕು.
ಇದನ್ನೂ ಓದಿ: 2025ರ ಏಪ್ರಿಲ್‌ನಲ್ಲಿ ಭಾರತದಲ್ಲಿ ಬಿಡುಗಡೆಯಾಗುವ ಅಥವಾ ಅನಾವರಣಗೊಳ್ಳಲಿರುವ ಟಾಪ್ 5 ಕಾರುಗಳು
2025 ಮಹೀಂದ್ರಾ XUV700 ಎಬೊನಿ ಎಡಿಷನ್
2025 ಎಕ್ಸ್‌ಯುವಿ700 ಬೆಲೆಗಳು: 13.99 ಲಕ್ಷ ರೂ.ಗಳಿಂದ (ಎಕ್ಸ್ ಶೋರೂಂ)
ಎಕ್ಸ್‌ಯುವಿ700 ಎಬೊನಿ ಬೆಲೆ: 19.64 ಲಕ್ಷ ರೂ.ಗಳಿಂದ 24.14 ಲಕ್ಷ ರೂ. (ಎಕ್ಸ್ ಶೋರೂಂ)
ಮಹೀಂದ್ರಾ 2025ರ ಎಕ್ಸ್‌ಯುವಿ700 ಅನ್ನು ಬಿಡುಗಡೆ ಮಾಡಿತು ಮತ್ತು ಅದೇ ಸಮಯದಲ್ಲಿ ಅದರ ಎಬೊನಿ ಎಡಿಷನ್‌ಅನ್ನು ಸಹ ಪರಿಚಯಿಸಿತು. ಈ ಆಪ್‌ಡೇಟ್‌ಗಳು ಎರಡನೇ ಸಾಲಿನ ಪ್ರಯಾಣಿಕರಿಗೆ ಸೀಟ್ ಬೆಲ್ಟ್ ರಿಮೈಂಡರ್ ಮುಂತಾದ ಫೀಚರ್‌ಗಳನ್ನು ತರುತ್ತವೆ, ಆದರೆ ಎಬೊನಿ ಎಡಿಷನ್ ಒಳಗೆ ಸಂಪೂರ್ಣವಾಗಿ ಕಪ್ಪು ಬಣ್ಣದ ಥೀಮ್‌ನೊಂದಿಗೆ ತನ್ನನ್ನು ತಾನು ಪ್ರತ್ಯೇಕಿಸುತ್ತದೆ. ಗಮನಾರ್ಹವಾಗಿ, ಎಕ್ಸ್‌ಯುವಿ700 ಎಬೊನಿ ಆವೃತ್ತಿಯು ಟಾಪ್-ಸ್ಪೆಕ್ AX7 ಮತ್ತು AX7 L ವೇರಿಯೆಂಟ್‌ಗಳಿಗೆ ಸೀಮಿತವಾಗಿದೆ ಮತ್ತು ಫ್ರಂಟ್-ವೀಲ್ ಡ್ರೈವ್‌ಟ್ರೇನ್‌ನೊಂದಿಗೆ ಮಾತ್ರ ಲಭ್ಯವಿದೆ. ಇದಲ್ಲದೆ, XUV700 ಎಬೊನಿಯ ಫೀಚರ್‌ಗಳು ಅಥವಾ ಪವರ್‌ಟ್ರೇನ್ ವಿಷಯದಲ್ಲಿ ಬೇರೆ ಯಾವುದೇ ಬದಲಾವಣೆಗಳಿಲ್ಲ.
ಜೀಪ್ ಕಂಪಾಸ್ ಸ್ಯಾಂಡ್‌ಸ್ಟಾರ್ಮ್
ಬೆಲೆ: 19.49 ಲಕ್ಷ ರೂ.ಗಳಿಂದ 27.33 ಲಕ್ಷ ರೂ. (ಎಕ್ಸ್ ಶೋ ರೂಂ)
ಜೀಪ್ ಕಂಪಾಸ್ ಸ್ಯಾಂಡ್‌ಸ್ಟಾರ್ಮ್ ಎಡಿಷನ್‌ಅನ್ನು ಬಿಡುಗಡೆ ಮಾಡಲಾಗಿದ್ದು, ಮಿಡ್-ಸೈಜ್‌ನ ಎಸ್‌ಯುವಿಯ ಎಕ್ಸ್‌ಟೀರಿಯರ್ ಮತ್ತು ಇಂಟೀರಿಯರ್‌ಗೆ ವಿಶುವಲ್ ಆಪ್‌ಡೇಟ್‌ಅನ್ನು ನೀಡುತ್ತದೆ. ಹೊರಭಾಗದಲ್ಲಿನ ಬದಲಾವಣೆಗಳಲ್ಲಿ ಬಾನೆಟ್, ಬಾಗಿಲುಗಳು ಮತ್ತು ಸಿ-ಪಿಲ್ಲರ್‌ಗಳ ಮೇಲಿನ ಡ್ಯೂನ್-ಪ್ರೇರಿತ ಗ್ರಾಫಿಕ್ಸ್ ಸೇರಿವೆ, ಆದರೆ ಒಳಭಾಗವು ಬೀಜ್-ಬಣ್ಣದಲ್ಲಿ ಫಿನಿಶ್ ಮಾಡಿದ ಸೀಟ್ ಕವರ್‌ಗಳು, ಕಸ್ಟಮ್ ಕಾರ್ಪೆಟ್‌ಗಳು ಮತ್ತು ಕಾರ್ಗೋ ಮ್ಯಾಟ್‌ಗಳನ್ನು ಒಳಗೊಂಡಿದೆ. ಇದು ಮುಂಭಾಗ ಮತ್ತು ಹಿಂಭಾಗದ ಡ್ಯಾಶ್ ಕ್ಯಾಮ್‌ಗಳು ಮತ್ತು ಕಸ್ಟಮೈಸ್ ಮಾಡಬಹುದಾದ ಆಂಬಿಯೆಂಟ್ ಲೈಟಿಂಗ್‌ನಂತಹ ಫೀಚರ್‌ಗಳನ್ನು ಸಹ ಪಡೆಯುತ್ತದೆ.
ಸ್ಯಾಂಡ್‌ಸ್ಟಾರ್ಮ್ ಎಡಿಷನ್‌ಅನ್ನು ಕಂಪಾಸ್‌ನ ಸ್ಪೋರ್ಟ್, ಲಾಂಗಿಟ್ಯೂಡ್ ಅಥವಾ ಲಾಂಗಿಟ್ಯೂಡ್ (O) ವೇರಿಯೆಂಟ್‌ಗಳೊಂದಿಗೆ ಒಪ್ಶನಲ್ ಆಡ್-ಆನ್ ಕಿಟ್‌ನಂತೆ ನೀಡಲಾಗುವುದು ಮತ್ತು ಇದರ ಬೆಲೆಗಿಂತ 50,000 ರೂ.ನಷ್ಟು ಹೆಚ್ಚು ಇರಲಿದೆ.
2025 ಬಿವೈಡಿ ಅಟ್ಟೊ 3
ಬೆಲೆ: 24.99 ಲಕ್ಷ ರೂ.ಗಳಿಂದ 33.99 ಲಕ್ಷ ರೂ. (ಎಕ್ಸ್ ಶೋ ರೂಂ)
BYDಯು ಅಟ್ಟೊ 3 ಅನ್ನು ಆಪ್‌ಡೇಟ್ ಮಾಡಿದೆ, ಇದು ಎಲೆಕ್ಟ್ರಿಕ್ ಎಸ್‌ಯುವಿಗೆ ವೆಂಟಿಲೇಶನ್ ಸಿಸ್ಟಮ್ ಇರುವ ಮುಂದಿನ ಸಾಲಿನ ಸೀಟುಗಳಂತಹ ಪ್ರಮುಖ ಫೀಚರ್‌ಗಳನ್ನು ತಂದಿದೆ. ಹೊರಭಾಗದಲ್ಲಿನ ಬದಲಾವಣೆಗಳು ಸಂಪೂರ್ಣ ಕಪ್ಪು ಥೀಮ್ ಅನ್ನು ಒಳಗೊಂಡಿವೆ, ಈ ಹಿಂದಿನ ಡ್ಯುಯಲ್-ಟೋನ್ ಸೆಟಪ್ ಅನ್ನು ಸ್ಪೋರ್ಟಿಯರ್ ಟಚ್‌ಗಾಗಿ ಬದಲಾಯಿಸಲಾಗಿದೆ. ಇದು 49.92 ಕಿ.ವ್ಯಾಟ್ ಮತ್ತು 60.48 ಕಿ.ವ್ಯಾಟ್ ಎಂಬ ಎರಡು ಬ್ಯಾಟರಿ ಪ್ಯಾಕ್ ಆಯ್ಕೆಗಳೊಂದಿಗೆ ನೀಡಲ್ಪಡುತ್ತಲೇ ಇದೆ, ಆದರೆ ಈಗ ಲಿಥಿಯಂ ಐರನ್ ಫಾಸ್ಫೇಟ್ (LFP) ಬ್ಯಾಟರಿ ತಂತ್ರಜ್ಞಾನವನ್ನು ಒಳಗೊಂಡಿದೆ. BYD ಪ್ರಕಾರ ಆಪ್‌ಡೇಟ್ ಮಾಡಲಾದ ಬ್ಯಾಟರಿ ತಂತ್ರಜ್ಞಾನವು 15 ವರ್ಷಗಳ ಜೀವಿತಾವಧಿ ಮತ್ತು ಸುಧಾರಿತ ಸೆಲ್ಫ್-ಡಿಸ್ಚಾರ್ಜ್ ನಿರ್ವಹಣೆಯನ್ನು ನೀಡುತ್ತದೆ.
2025 ಕಿಯಾ EV6 ಫೇಸ್‌ಲಿಫ್ಟ್
ಬೆಲೆ: 65.90 ಲಕ್ಷ ರೂ. (ಎಕ್ಸ್ ಶೋ ರೂಂ)
ಕಿಯಾ ಕಂಪನಿಯು ಇವಿ6 ಅನ್ನು ಫೇಸ್‌ಲಿಫ್ಟ್‌ನೊಂದಿಗೆ ರಿಫ್ರೆಶ್ ಮಾಡಿದೆ, ಇದರಲ್ಲಿ ವಿನ್ಯಾಸ ಬದಲಾವಣೆಗಳು, ಇಂಟೀರಿಯರ್‌ನ ವರ್ಧನೆಗಳು ಮತ್ತು ದೊಡ್ಡ 84 ಕಿ.ವ್ಯಾಟ್ ಬ್ಯಾಟರಿ ಪ್ಯಾಕ್ ಸೇರಿವೆ. ಇದು ಆಪ್‌ಡೇಟ್ ಮಾಡಿದ ಬಂಪರ್, ಹೊಸ ಎಲ್‌ಇಡಿ ಡಿಆರ್‌ಎಲ್‌ಗಳು ಮತ್ತು ಹೆಡ್‌ಲೈಟ್‌ಗಳು ಮತ್ತು ಮರುವಿನ್ಯಾಸಗೊಳಿಸಲಾದ 19-ಇಂಚಿನ ಅಲಾಯ್ ವೀಲ್‌ಗಳೊಂದಿಗೆ ಹೆಚ್ಚು ಆಕ್ರಮಣಕಾರಿ ನೋಟವನ್ನು ಹೊಂದಿದೆ. ಒಳಭಾಗದಲ್ಲಿ, ಇದು ಆಪ್‌ಗ್ರೇಡ್ ಮಾಡಿದ ಸ್ಟೀರಿಂಗ್ ವೀಲ್ ಅನ್ನು ಹೊಂದಿದೆ, ಆದರೆ ಒಟ್ಟಾರೆ ಡ್ಯಾಶ್‌ಬೋರ್ಡ್ ಮತ್ತು ಸೆಂಟರ್ ಕನ್ಸೋಲ್ ವಿನ್ಯಾಸವು ಒಂದೇ ಆಗಿರುತ್ತದೆ. ಬ್ಯಾಟರಿ ಪ್ಯಾಕ್ 325 ಪಿಎಸ್/605 ಎನ್‌ಎಮ್ ಡ್ಯುಯಲ್ ಎಲೆಕ್ಟ್ರಿಕ್ ಮೋಟಾರ್ ಸೆಟಪ್‌ನೊಂದಿಗೆ ಜೋಡಿಸಲ್ಪಟ್ಟಿದ್ದು, ಇದು 663 ಕಿಮೀ.ಯಷ್ಟು ಕ್ಲೈಮ್ ಮಾಡಲಾದ ರೇಂಜ್‌ಅನ್ನು ನೀಡುತ್ತದೆ..
ಇದನ್ನೂ ಓದಿ: ಮೊದಲ ಬಾರಿಗೆ ಹೊಸ Kia Seltosನ ಇಂಟೀರಿಯರ್‌ನ ಸ್ಪೈಶಾಟ್‌ಗಳು ವೈರಲ್..!
2025 ವೋಲ್ವೋ XC90 ಫೇಸ್‌ಲಿಫ್ಟ್
ಬೆಲೆ: 1.03 ಕೋಟಿ ರೂ. (ಎಕ್ಸ್ ಶೋರೂಂ)
ನವೀಕರಿಸಿದ ವಿನ್ಯಾಸ ಮತ್ತು ಆಪ್‌ಡೇಟೆಡ್ ಇಂಟೀರಿಯರ್‌ನೊಂದಿಗೆ, ವೋಲ್ವೋ ಭಾರತದಲ್ಲಿ 2025 XC90 ಫೇಸ್‌ಲಿಫ್ಟ್ ಅನ್ನು ಬಿಡುಗಡೆ ಮಾಡಿತು. ಆಪ್‌ಡೇಟ್ ಮಾಡಿದ ಪೂರ್ಣ-ಗಾತ್ರದ ಎಸ್‌ಯುವಿಯು ಮರುವಿನ್ಯಾಸಗೊಳಿಸಲಾದ ಗ್ರಿಲ್, ನವೀಕರಿಸಿದ ಲೈಟಿಂಗ್ ಸೆಟಪ್‌ಗಳು ಮತ್ತು ಹೊಸ ಅಲಾಯ್ ಚಕ್ರಗಳೊಂದಿಗೆ ಹೆಚ್ಚು ಪರಿಷ್ಕೃತ ನೋಟವನ್ನು ತರುತ್ತದೆ. ಇದು 11.2-ಇಂಚಿನ ದೊಡ್ಡ ಇನ್ಫೋಟೈನ್‌ಮೆಂಟ್ ಡಿಸ್‌ಪ್ಲೇ ಮತ್ತು ಹೆಚ್ಚುವರಿ ಪ್ರಾಯೋಗಿಕತೆಗಾಗಿ ಸುಧಾರಿತ ಸಂಗ್ರಹಣೆಯನ್ನು ಸಹ ಒಳಗೊಂಡಿದೆ.
ಇತರ ಫೀಚರ್‌ಗಳ ಹೈಲೈಟ್‌ಗಳಲ್ಲಿ 12.3-ಇಂಚಿನ ಡಿಜಿಟಲ್ ಡ್ರೈವರ್ ಡಿಸ್‌ಪ್ಲೇ, 19-ಸ್ಪೀಕರ್ ಬೋವರ್ಸ್ & ವಿಲ್ಕಿನ್ಸ್ ಸೌಂಡ್ ಸಿಸ್ಟಮ್, ನಾಲ್ಕು-ಝೋನ್ ಆಟೋಮ್ಯಾಟಿಕ್ ಕ್ಲೈಮೆಟ್ ಕಂಟ್ರೋಲ್, 360-ಡಿಗ್ರಿ ಕ್ಯಾಮೆರಾ ಮತ್ತು ಲೆವೆಲ್-2 ADAS ಸೇರಿವೆ. 2025ರ XC90 ಮೊಡೆಲ್ 205 ಪಿಎಸ್ ಮತ್ತು 360 ಎನ್‌ಎಮ್ ಟಾರ್ಕ್ ಅನ್ನು ಉತ್ಪಾದಿಸುವ ಅದೇ 2-ಲೀಟರ್ ಟರ್ಬೊ-ಪೆಟ್ರೋಲ್ ಎಂಜಿನ್ ಅನ್ನು ಹೊಂದಿದೆ.
2025 ಲೆಕ್ಸಸ್ ಎಲ್ಎಕ್ಸ್
ಬೆಲೆ: 3 ಕೋಟಿ ರೂ.ಗಳಿಂದ 3.12 ಕೋಟಿ ರೂ. (ಎಕ್ಸ್ ಶೋ ರೂಂ)
ಲೆಕ್ಸಸ್ 2025 LX ಅನ್ನು ಭಾರತದಲ್ಲಿ ಅರ್ಬನ್ ಮತ್ತು ಓವರ್‌ಟ್ರೇಲ್ ಎಂಬ ಎರಡು ವೇರಿಯೆಂಟ್‌ಗಳಲ್ಲಿ ಬಿಡುಗಡೆ ಮಾಡಿದೆ. ಅರ್ಬನ್ ವೇರಿಯೆಂಟ್ ಕ್ರೋಮ್‌ನಲ್ಲಿ ಫಿನಿಶ್ ಮಾಡಿದ ನೋಟವನ್ನು ಹೊಂದಿದೆ, ಆದರೆ ಓವರ್‌ಟ್ರೇಲ್ ಕಪ್ಪು ಬಣ್ಣದ ಸ್ಟೈಲಿಂಗ್ ಟ್ವೀಕ್‌ಗಳು ಮತ್ತು ಆಫ್-ರೋಡ್ ವರ್ಧನೆಗಳನ್ನು ಹೊಂದಿದೆ. ಇದರ ಬೆಲೆ ಅರ್ಬನ್ ಟ್ರಿಮ್ ಗಿಂತ 12 ಲಕ್ಷ ರೂ.ನಷ್ಟು ಹೆಚ್ಚಿದೆ. ಎರಡೂ ವೇರಿಯೆಂಟ್‌ಗಳು ಸೆಂಟ್ರಲ್ ಡಿಫರೆನ್ಷಿಯಲ್ ಲಾಕ್ ಅನ್ನು ಹೊಂದಿವೆ, ಆದರೆ ಓವರ್‌ಟ್ರೇಲ್ ವೇರಿಯೆಂಟ್ ಸುಧಾರಿತ ಆಫ್-ರೋಡ್ ಸಾಮರ್ಥ್ಯಕ್ಕಾಗಿ ಮುಂಭಾಗ ಮತ್ತು ಹಿಂಭಾಗದ ಡಿಫರೆನ್ಷಿಯಲ್ ಲಾಕ್‌ಗಳನ್ನು ಸಹ ಪಡೆಯುತ್ತದೆ.
ಎಲ್‌ಎಕ್ಸ್‌ನ ಎರಡೂ ವೇರಿಯೆಂಟ್‌ಗಳು 3.3-ಲೀಟರ್ V6 ಡೀಸೆಲ್ ಎಂಜಿನ್‌ನಿಂದ ನಿಯಂತ್ರಿಸಲ್ಪಡುತ್ತವೆ, ಇದು 309 ಪಿಎಸ್ ಮತ್ತು 700 ಎನ್‌ಎಮ್ ಉತ್ಪಾದಿಸುತ್ತದೆ, 10-ಸ್ಪೀಡ್ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್‌ನೊಂದಿಗೆ ಜೋಡಿಸಲಾಗಿದೆ.
2025 ಲ್ಯಾಂಡ್ ರೋವರ್ ಡಿಫೆಂಡರ್ ಆಕ್ಟಾ
ಬೆಲೆ: 2.59 ಕೋಟಿ ರೂ. (ಎಕ್ಸ್ ಶೋರೂಂ)
2025ರ ಲ್ಯಾಂಡ್ ರೋವರ್ ಡಿಫೆಂಡರ್ ಆಕ್ಟಾವನ್ನು ಭಾರತದಲ್ಲಿ ಬಿಡುಗಡೆ ಮಾಡಲಾಯಿತು, ಆಫ್-ರೋಡ್ ಮತ್ತು ಮೆಕ್ಯಾನಿಕಲ್ ಆಪ್‌ಡೇಟ್‌ಗಳೊಂದಿಗೆ ಇದು ಆಫ್-ರೋಡ್ ಎಸ್‌ಯುವಿಯ ಅತ್ಯಂತ ಸಮರ್ಥ ವೇರಿಯೆಂಟ್ ಆಗಿದೆ. ಇದು ವಿನ್ಯಾಸ ಪರಿಷ್ಕರಣೆಗಳು, ವಿಶಾಲವಾದ ನಿಲುವು ಮತ್ತು ಹೆಚ್ಚಿದ ಗ್ರೌಂಡ್ ಕ್ಲೀಯರೆನ್ಸ್‌ಅನ್ನು ಸಹ ಒಳಗೊಂಡಿದೆ.
ಡಿಫೆಂಡರ್ ಆಕ್ಟಾದಲ್ಲಿನ ಯಾಂತ್ರಿಕ ಆಪ್‌ಡೇಟ್‌ಗಳು 6D ಡೈನಾಮಿಕ್ ಸಸ್ಪೆನ್ಷನ್ ಅನ್ನು ಒಳಗೊಂಡಿವೆ, ಇದು ಬಾಡಿ ರೋಲ್ ಅನ್ನು ಕಡಿಮೆ ಮಾಡುತ್ತದೆ ಮತ್ತು ಚಕ್ರದ ಆರ್ಟಿಕ್ಯುಲೇಷನ್ ಅನ್ನು ಸುಧಾರಿಸುತ್ತದೆ, ಆದರೆ ದೊಡ್ಡ ವಿಶ್‌ಬೋನ್‌ಗಳು ಉತ್ತಮ ಸ್ಥಿರತೆ ಮತ್ತು ಸವಾರಿ ಸೌಕರ್ಯಕ್ಕೆ ಕೊಡುಗೆ ನೀಡುತ್ತವೆ. ಲ್ಯಾಂಡ್ ರೋವರ್ ಡಿಫೆಂಡರ್ ಆಕ್ಟಾವನ್ನು 110 ಬಾಡಿ ಶೈಲಿಯಲ್ಲಿ ಮಾತ್ರ ನೀಡುತ್ತದೆ. ಡಿಫೆಂಡರ್ ಆಕ್ಟಾ 4.4-ಲೀಟರ್ V8 ಪೆಟ್ರೋಲ್ ಎಂಜಿನ್ ಹೊಂದಿದ್ದು ಅದು 635 ಪಿಎಸ್ ಮತ್ತು 750 ಎನ್‌ಎಮ್ ಉತ್ಪಾದಿಸುತ್ತದೆ.
ಆಸ್ಟನ್ ಮಾರ್ಟಿನ್ ವ್ಯಾನ್‌ಕ್ವಿಶ್
ಬೆಲೆ: 8.85 ಕೋಟಿ ರೂ. (ಎಕ್ಸ್ ಶೋ ರೂಂ)
ಕಳೆದ ವರ್ಷ ಜಾಗತಿಕವಾಗಿ ಅನಾವರಣಗೊಳಿಸಿದ ನಂತರ, ಆಸ್ಟನ್ ಮಾರ್ಟಿನ್ ಭಾರತದಲ್ಲಿ ವ್ಯಾನ್‌ಕ್ವಿಶ್ ಅನ್ನು ತನ್ನ ಪ್ರಮುಖ ಕೊಡುಗೆಯಾಗಿ ಬಿಡುಗಡೆ ಮಾಡಿತು. ಇದು ದೊಡ್ಡದಾದ, ಆಕ್ರಮಣಕಾರಿಯಾಗಿ ಕಾಣುವ ಗ್ರಿಲ್ ಮತ್ತು ತೀಕ್ಷ್ಣವಾದ ಎಲ್‌ಇಡಿ ಹೆಡ್‌ಲೈಟ್ ಸೆಟಪ್‌ನೊಂದಿಗೆ ಸ್ಪೋರ್ಟಿ ವಿನ್ಯಾಸವನ್ನು ಹೊಂದಿದೆ. ಕ್ಯಾಬಿನ್ ಚಾಲಕ-ಕೇಂದ್ರಿತ ವಿನ್ಯಾಸದೊಂದಿಗೆ ಪ್ರೀಮಿಯಂ ಮೆಟಿರಿಯಲ್‌ಗಳನ್ನು ಹೊಂದಿದೆ, ಜೊತೆಗೆ 10.25-ಇಂಚಿನ ಇನ್ಫೋಟೈನ್‌ಮೆಂಟ್ ಸಿಸ್ಟಮ್, 10.25-ಇಂಚಿನ ಡಿಜಿಟಲ್ ಡ್ರೈವರ್ ಡಿಸ್‌ಪ್ಲೇ ಮತ್ತು 15-ಸ್ಪೀಕರ್ ಬೋವರ್ಸ್ & ವಿಲ್ಕಿನ್ಸ್ ಆಡಿಯೊ ಸಿಸ್ಟಮ್‌ನಂತಹ ಫೀಚರ್‌ಗಳನ್ನು ಹೊಂದಿದೆ.
2025 ರ ವ್ಯಾನ್‌ಕ್ವಿಶ್ 5.2-ಲೀಟರ್ ಟ್ವಿನ್-ಟರ್ಬೊ V12 ಪೆಟ್ರೋಲ್ ಎಂಜಿನ್‌ನಿಂದ ಚಾಲಿತವಾಗಿದ್ದು, ಇದು 835 ಪಿಎಸ್ ಮತ್ತು 1000 ಎನ್‌ಎಮ್ ಉತ್ಪಾದಿಸುತ್ತದೆ, ಇದು ಕೇವಲ 3.3 ಸೆಕೆಂಡುಗಳಲ್ಲಿ 0 ರಿಂದ 100 kmph ವೇಗವನ್ನು ತಲುಪಲು ಅನುವು ಮಾಡಿಕೊಡುತ್ತದೆ.
ಮರ್ಸಿಡಿಸ್-ಮೇಬ್ಯಾಕ್ SL 680 ಮಾನೋಗ್ರಾಮ್
ಬೆಲೆ: 4.20 ಕೋಟಿ ರೂ. (ಎಕ್ಸ್ ಶೋ ರೂಂ)
ಈ ಪಟ್ಟಿಯಲ್ಲಿರುವ ಕೊನೆಯ ಮೊಡೆಲ್ ಎಂದರೆ ಅದು ಮರ್ಸಿಡಿಸ್-ಮೇಬ್ಯಾಕ್ SL 680 ಮಾನೋಗ್ರಾಮ್. ಇದು ಮೇಬ್ಯಾಕ್ ಆವೃತ್ತಿಯನ್ನು ಪಡೆದ ಮೊದಲ SL ಮೊಡೆಲ್ ಆಗಿದ್ದು, ಭಾರತೀಯ ಮಾರುಕಟ್ಟೆಗೆ ಕೇವಲ ಮೂರು ಕಾರುಗಳನ್ನು ಮಾತ್ರ ಹಂಚಿಕೆ ಮಾಡಲಾಗಿದೆ. SL 680 ಕಾರು ಕ್ಲಾಸಿಕ್ ಮೇಬ್ಯಾಕ್ ವಿನ್ಯಾಸವನ್ನು ಹೊಂದಿದ್ದು, ಕೋನೀಯ ಎಲ್‌ಇಡಿ ಹೆಡ್‌ಲೈಟ್‌ಗಳು ಮತ್ತು ಟೈಲ್ ಲೈಟ್‌ಗಳು, ಜೊತೆಗೆ 21-ಇಂಚಿನ ಅಲಾಯ್ ವೀಲ್‌ಗಳನ್ನು ಹೊಂದಿದೆ. ಒಳಗೆ, ಇದು 11.9-ಇಂಚಿನ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಹೆಡ್ಸ್-ಅಪ್ ಡಿಸ್‌ಪ್ಲೇ (HUD), ಹಿಟಿಂಗ್ ಫಂಕ್ಷನ್‌ನೊಂದಿಗೆ ಸ್ಟೀರಿಂಗ್ ವೀಲ್ ಮತ್ತು ಬರ್ಮೆಸ್ಟರ್ ಸೌಂಡ್ ಸಿಸ್ಟಮ್‌ನಂತಹ ಫೀಚರ್‌ಗಳೊಂದಿಗೆ ಡ್ಯುಯಲ್-ಟೋನ್ ಕಪ್ಪು-ಬಿಳಿ ಕ್ಯಾಬಿನ್ ಥೀಮ್ ಅನ್ನು ಪಡೆಯುತ್ತದೆ.
ಮೇಬ್ಯಾಕ್ ಎಸ್‌ಎಲ್ 680 ಕಾರು 4-ಲೀಟರ್ ವಿ8 ಎಂಜಿನ್ ಹೊಂದಿದ್ದು, 585 ಪಿಎಸ್ ಮತ್ತು 800 ಎನ್‌ಎಮ್ ಉತ್ಪಾದಿಸುತ್ತದೆ, 9-ಸ್ಪೀಡ್ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್‌ಗೆ ಜೋಡಿಸಲ್ಪಟ್ಟಿದೆ, ಇದು ಕೇವಲ 4.1 ಸೆಕೆಂಡುಗಳಲ್ಲಿ 0 ರಿಂದ 100 ಕಿಮೀ ವೇಗವನ್ನು ಪಡೆಯಲು ಅನುವು ಮಾಡಿಕೊಡುತ್ತದೆ.
ಮೇಲೆ ತಿಳಿಸಿದ ಯಾವ ಮೊಡೆಲ್‌ನ ಬಿಡುಗಡೆಗಾಗಿ ನೀವು ಹೆಚ್ಚು ಎದುರು ನೋಡುತ್ತಿದ್ದಿರಿ ಎಂಬುದನ್ನು ಕೆಳಗಿನ ಕಾಮೆಂಟ್‌ಗಳಲ್ಲಿ ನಮಗೆ ತಿಳಿಸಿ.
ಆಟೋಮೋಟಿವ್ ಜಗತ್ತಿನಿಂದ ತ್ವರಿತ ಆಪ್‌ಡೇಟ್‌ಗಳನ್ನು ಪಡೆಯಲು ಕಾರ್‌ದೇಖೋದ ವಾಟ್ಸಾಪ್ ಚಾನೆಲ್ ಅನ್ನು ಫಾಲೋ ಮಾಡಲು ಮಿಸ್ ಮಾಡ್ಬೇಡಿ