• English
  • Login / Register

ಹೊಸ ಕಾರು ಖರೀದಿಸಲು ಯೋಚಿಸುತ್ತಿರುವಿರಾ? ನಿಮ್ಮ ಹಳೆಯದನ್ನು ಗುಜರಿಗೆ ಹಾಕುವುದರಿಂದಾಗುವ ಎಲ್ಲಾ ಪ್ರಯೋಜನಗಳನ್ನು ಗಮನಿಸಿ

ಫೆಬ್ರವಾರಿ 16, 2024 08:17 pm shreyash ಮೂಲಕ ಮಾರ್ಪಡಿಸಲಾಗಿದೆ

  • 25 Views
  • ಕಾಮೆಂಟ್‌ ಅನ್ನು ಬರೆಯಿರಿ

ನಿಮ್ಮ ಹಳೆಯ ಕಾರನ್ನು ಸ್ಕ್ರ್ಯಾಪ್ ಮಾಡಲು ನೀವು ಪ್ರಮಾಣಪತ್ರವನ್ನು ಸ್ವೀಕರಿಸುತ್ತೀರಿ, ಇದರಿಂದ ಹೊಸ ಕಾರನ್ನು ಖರೀದಿಸುವಾಗ ನೀವು ಹಲವಾರು ಪ್ರಯೋಜನಗಳನ್ನು ಪಡೆದುಕೊಳ್ಳಬಹುದು

ಹಳೆಯ ವಾಹನಗಳಿಂದ ಉಂಟಾಗುವ ಮಾಲಿನ್ಯವನ್ನು ಕಡಿಮೆ ಮಾಡಲು ಮತ್ತು ವಾಹನ ಮಾರಾಟವನ್ನು ಉತ್ತೇಜಿಸಲು ಯೋಜಿಸಲಾದ ಅನೇಕ ಕ್ರಮಗಳ ಪೈಕಿ, ಭಾರತ ಸರ್ಕಾರವು ವಾಹನ ಸ್ಕ್ರ್ಯಾಪೇಜ್ ನೀತಿಗಾಗಿ ಕರಡನ್ನು ಬಿಡುಗಡೆ ಮಾಡಿದೆ. ಹೊಸದನ್ನು ಖರೀದಿಸುವ ಮೊದಲು ನಿಮ್ಮ ಹಳೆಯ ಕಾರನ್ನು ಸ್ಕ್ರ್ಯಾಪ್ ಮಾಡಲು ನೀವು ಆರಿಸಿದರೆ ಈ ನೀತಿಯು ವಿವಿಧ ಪ್ರಯೋಜನಗಳನ್ನು ಮತ್ತು ಉಳಿತಾಯಗಳನ್ನು ನೀಡುತ್ತದೆ. ಭಾರತ್ ಮೊಬಿಲಿಟಿ ಗ್ಲೋಬಲ್ ಎಕ್ಸ್‌ಪೋ 2024 ರ ಇತ್ತೀಚಿನ ಭೇಟಿಯ ಸಮಯದಲ್ಲಿ, ನಾವು ಸಂಪೂರ್ಣವಾಗಿ ಸ್ಕ್ರ್ಯಾಪ್ ಮಾಡಿದ ವಾಹನವನ್ನು ಪ್ರದರ್ಶನದಲ್ಲಿ ಗಮನಿಸಿದ್ದೇವೆ ಮತ್ತು ಅಂತಿಮವಾಗಿ ಅದು ಎಷ್ಟು ಸಣ್ಣದಾಗಿದೆ ಎಂಬುದನ್ನು ಕೆಳಗಿನ ವಿಡಿಯೋದ ಲಿಂಕ್‌ ನಲ್ಲಿ ನಾವು ನೋಡಬಹುದು:

 A post shared by CarDekho India (@cardekhoindia)

ಈ ನೀತಿಯ ಪ್ರಕಾರ, ಸ್ಕ್ರ್ಯಾಪೇಜ್ ಸೆಂಟರ್ ನಿಮಗೆ ವಾಹನದ ಎಕ್ಸ್ ಶೋ ರೂಂ ಬೆಲೆಯ ಸರಿಸುಮಾರು 4 ರಿಂದ 6 ಪ್ರತಿಶತವನ್ನು ತಕ್ಷಣವೇ ಒದಗಿಸುತ್ತದೆ. ಖಾಸಗಿ ಖರೀದಿದಾರರಿಗೆ ಹೆಚ್ಚುವರಿ ಪ್ರಯೋಜನಗಳಾಗಿ ತಮ್ಮ ಹೊಸ ಕಾರಿಗೆ ರಸ್ತೆ ತೆರಿಗೆಯಲ್ಲಿ 25 ಪ್ರತಿಶತದವರೆಗೆ ರಿಯಾಯಿತಿಯನ್ನು ಒಳಗೊಂಡಿವೆ. ಇದಲ್ಲದೆ, ಸ್ಕ್ರ್ಯಾಪ್‌ಪೇಜ್ ಸೆಂಟರ್ ನಿಮ್ಮ ಹಳೆಯ ಕಾರನ್ನು ಸ್ಕ್ರ್ಯಾಪ್ ಮಾಡಲು ಪ್ರಮಾಣಪತ್ರವನ್ನು ನೀಡುತ್ತದೆ, ಇದನ್ನು ಹೊಸ ಕಾರಿನ ನೋಂದಣಿ ಶುಲ್ಕದಲ್ಲಿ 100 ಪ್ರತಿಶತ ಮನ್ನಾ ಪಡೆಯಲು ಬಳಸಿಕೊಳ್ಳಬಹುದು. ಈ ಪ್ರಮಾಣಪತ್ರವನ್ನು ನಿಮ್ಮ ಸ್ನೇಹಿತರು ಮತ್ತು ಕುಟುಂಬದವರೊಂದಿಗೆ ಹಂಚಿಕೊಳ್ಳಬಹುದು ಇದರಿಂದ ಅವರು ಹೊಸ ಕಾರಿನ ಖರೀದಿಯಲ್ಲಿ ಪ್ರಯೋಜನಗಳನ್ನು ಪಡೆಯಬಹುದು.

ಕರಡು ಪತ್ರದ ಪ್ರಕಾರ, ನಿಮ್ಮ ಹಳೆಯ ಕಾರಿನ ಸ್ಕ್ರ್ಯಾಪೇಜ್ ಪ್ರಮಾಣಪತ್ರವನ್ನು ತೋರಿಸಿದ ನಂತರ ಹೊಸ ವಾಹನದ ಬೆಲೆಯಲ್ಲಿ ಶೇಕಡಾ 5 ರಷ್ಟು ರಿಯಾಯಿತಿಯನ್ನು ನೀಡಲು ವಾಹನ ತಯಾರಕರಿಗೆ ಸಲಹೆ ನೀಡಲಾಗಿದೆ.

 ಗಮನಕ್ಕಾಗಿ: ವಾಹನ ಸ್ಕ್ರ್ಯಾಪೇಜ್ ನೀತಿಯ ಅಡಿಯಲ್ಲಿ ಮೇಲೆ ತಿಳಿಸಲಾದ ಪ್ರಯೋಜನಗಳನ್ನು ಇನ್ನೂ ಕಾರ್ಯಗತಗೊಳಿಸಲಾಗಿಲ್ಲ ಎಂಬುದನ್ನು ದಯವಿಟ್ಟು ಗಮನಿಸಬೇಕು. ಆದ್ದರಿಂದ, ಈ ಪ್ರೋತ್ಸಾಹಕಗಳ ಅನ್ವಯವು ಬ್ರ್ಯಾಂಡ್‌ಗಳು ಮತ್ತು ಮೊಡೆಲ್‌ಗಳ ನಡುವೆ ಬದಲಾಗಬಹುದು. ಹೆಚ್ಚಿನ ಮಾಹಿತಿಗಾಗಿ, ದಯವಿಟ್ಟು ನಿಮ್ಮ ಹತ್ತಿರದ ಕಾರ್ ಡೀಲರ್‌ಶಿಪ್ ಅನ್ನು ಸಂಪರ್ಕಿಸಿ.

ಇದನ್ನು ಸಹ ಗಮನಿಸಿ: 2024ರ ಜನವರಿಯಲ್ಲಿ 90 ಪ್ರತಿಶತಕ್ಕಿಂತ ಹೆಚ್ಚಿನ Mahindra Scorpio ಖರೀದಿದಾರರಿಂದ ಡೀಸೆಲ್ ಪವರ್‌ಟ್ರೇನ್‌ಗೆ ಆದ್ಯತೆ 

ಸ್ಕ್ರ್ಯಾಪೇಜ್ ನೀತಿ ಏಕೆ ಮುಖ್ಯ?

Vehicles for Scrap

ವಾಹನದ ಸ್ಕ್ರ್ಯಾಪೇಜ್ ನೀತಿಯು ಅನರ್ಹವಾಗಿರುವ ಅಥವಾ ಎಮಿಶನ್‌ ಮಾನದಂಡಗಳನ್ನು ಪಾಲಿಸಲು ವಿಫಲವಾದ ಹಳೆಯ ವಾಹನಗಳ ಸಂಖ್ಯೆಯನ್ನು ಕಡಿಮೆ ಮಾಡುವಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ. ಇದು ಕೆಟ್ಟ ಹಳೆಯ ವಾಹನಗಳಿಂದ ಕಡಿಮೆ ಅಡೆತಡೆಗಳನ್ನು ಉಂಟುಮಾಡುತ್ತದೆ, ಅಷ್ಟೇ ಅಲ್ಲದೆ ವಾಹನಗಳ ವಾಯುಮಾಲಿನ್ಯದಲ್ಲಿ ಒಟ್ಟಾರೆ ಕಡಿಮೆಯಾಗಲಿದೆ. ಹೆಚ್ಚುವರಿಯಾಗಿ, ಇದು ಆಟೋಮೋಟಿವ್, ಸ್ಟೀಲ್ ಮತ್ತು ಎಲೆಕ್ಟ್ರಾನಿಕ್ಸ್‌ನಂತಹ ವಿವಿಧ ಕೈಗಾರಿಕೆಗಳಿಗೆ ಕಚ್ಚಾ ವಸ್ತುಗಳ ಬೆಲೆ ಏರಿಕೆಯ ಪರಿಣಾಮವನ್ನು ಕಡಿಮೆ ಮಾಡುತ್ತದೆ.

ಅನೇಕ ಖರೀದಿದಾರರಿಗೆ, ತುಲನಾತ್ಮಕವಾಗಿ ಹೊಸದನ್ನು ನಿರ್ವಹಿಸುವುದಕ್ಕಿಂತ ಹಳೆಯ ಕಾರನ್ನು ನಿರ್ವಹಿಸುವುದು ಸಾಮಾನ್ಯವಾಗಿ ಹೆಚ್ಚು ದುಬಾರಿಯಾಗಿದೆ. 15 ವರ್ಷಕ್ಕಿಂತ ಹಳೆಯದಾದ ವಾಹನಗಳಿಗೆ ಹೋಲಿಸಿದರೆ ಹೊಸ ಕಾರುಗಳು ಅತ್ಯುತ್ತಮವಾದ ಕಾರ್ಯಕ್ಷಮತೆ ಮತ್ತು ಇಂಧನ ದಕ್ಷತೆಯ ಪ್ರಯೋಜನವನ್ನು ನೀಡುತ್ತವೆ ಮತ್ತು ಅವು ಕಟ್ಟುನಿಟ್ಟಾದ ಎಮಿಶನ್‌ ಮಾನದಂಡಗಳಿಗೆ ಅನುಗುಣವಾಗಿರುವುದರಿಂದ ಅವು ಕಡಿಮೆ ಮಾಲಿನ್ಯವನ್ನು ಉಂಟುಮಾಡುತ್ತವೆ. ಆದ್ದರಿಂದ, ಈ ನೀತಿಯು ಖರೀದಿದಾರರು ತಮ್ಮ ಹಳೆಯ ಕಾರುಗಳನ್ನು ಬೇಗ ಹೊಸ ಕಾರುಗಳೊಂದಿಗೆ ಬದಲಾಯಿಸಲು ಪ್ರೋತ್ಸಾಹಿಸುತ್ತದೆ.

ಆದಾಗಿಯೂ, ಸ್ಕ್ರ್ಯಾಪ್‌ಪೇಜ್ ನೀತಿಯ ಕರಡು ಪ್ರಕಾರ, ವಾಹನದ ಫಿಟ್‌ನೆಸ್ ಪರೀಕ್ಷೆಯಲ್ಲಿ ಮೌಲ್ಯಮಾಪನ ಮಾಡಲಾಗುವ ಅಗತ್ಯ ಮಾನದಂಡಗಳನ್ನು ಪೂರೈಸಿದರೆ 15 ವರ್ಷಕ್ಕಿಂತ ಹಳೆಯದಾದ ಕಾರುಗಳನ್ನು ಇನ್ನೂ ಬಳಸಬಹುದು. ಮುಂದಿನ ಐದು ವರ್ಷಗಳವರೆಗೆ ನಿಮ್ಮ ಹಳೆಯ ಕಾರನ್ನು ಬಳಸುವುದನ್ನು ಮುಂದುವರಿಸಲು ನೀವು ಮರು-ನೋಂದಣಿ ಶುಲ್ಕವನ್ನು ಸಹ ಪಾವತಿಸಬೇಕಾಗುತ್ತದೆ.

ಗಮನಿಸಿ: ಹಳೆಯ ಕಾರನ್ನು ಮರು-ನೋಂದಣಿ ಮಾಡುವ ಈ ನೀತಿಯು ದೆಹಲಿ NCR ನಲ್ಲಿ ಅನ್ವಯಿಸುವುದಿಲ್ಲ, ಅಲ್ಲಿ ವಿಭಿನ್ನ ಅನುಸರಣೆ ನಿಯಮಗಳು ಕಾರ್ಯನಿರ್ವಹಿಸುತ್ತವೆ.

ವಾಹನ ಸ್ಕ್ರ್ಯಾಪೇಜ್ ನೀತಿಯ ಕುರಿತು ನಿಮ್ಮ ಅಭಿಪ್ರಾಯ ಏನು? ನಿಮ್ಮ ಹೊಸ ಖರೀದಿಯಲ್ಲಿ ಪ್ರಯೋಜನಗಳನ್ನು ಪಡೆಯಲು ನಿಮ್ಮ ಹಳೆಯ ಕಾರನ್ನು ಸ್ಕ್ರ್ಯಾಪ್ ಮಾಡಲು ನೀವು ಸಿದ್ಧರಿದ್ದೀರಾ? ಕಾಮೆಂಟ್‌ಗಳಲ್ಲಿ ನಮಗೆ ತಿಳಿಸಿ.

was this article helpful ?

Write your ಕಾಮೆಂಟ್

ಕಾರು ಸುದ್ದಿ

  • ಟ್ರೆಂಡಿಂಗ್ ಸುದ್ದಿ
  • ಇತ್ತಿಚ್ಚಿನ ಸುದ್ದಿ

trending ಕಾರುಗಳು

  • ಲೇಟೆಸ್ಟ್
  • ಉಪಕಮಿಂಗ್
  • ಪಾಪ್ಯುಲರ್
  • ಆಡಿ ಆರ್ಎಸ್ ಕ್ಯೂ8 2025
    ಆಡಿ ಆರ್ಎಸ್ ಕ್ಯೂ8 2025
    Rs.2.30 ಸಿಆರ್ಅಂದಾಜು ದಾರ
    ಫೆಬರವಾರಿ, 2025: ನಿರೀಕ್ಷಿತ ಲಾಂಚ್‌
  • ಎಂಜಿ majestor
    ಎಂಜಿ majestor
    Rs.46 ಲಕ್ಷಅಂದಾಜು ದಾರ
    ಫೆಬರವಾರಿ, 2025: ನಿರೀಕ್ಷಿತ ಲಾಂಚ್‌
  • ವೋಲ್ವೋ XC90 2025
    ವೋಲ್ವೋ XC90 2025
    Rs.1.05 ಸಿಆರ್ಅಂದಾಜು ದಾರ
    ಮಾರಚ್‌, 2025: ನಿರೀಕ್ಷಿತ ಲಾಂಚ್‌
  • ಹೊಸ ವೇರಿಯೆಂಟ್
    ಮಹೀಂದ್ರ be 6
    ಮಹೀಂದ್ರ be 6
    Rs.18.90 - 26.90 ಲಕ್ಷಅಂದಾಜು ದಾರ
    ಮಾರಚ್‌, 2025: ನಿರೀಕ್ಷಿತ ಲಾಂಚ್‌
  • ಹೊಸ ವೇರಿಯೆಂಟ್
    ಮಹೀಂದ್ರ xev 9e
    ಮಹೀಂದ್ರ xev 9e
    Rs.21.90 - 30.50 ಲಕ್ಷಅಂದಾಜು ದಾರ
    ಮಾರಚ್‌, 2025: ನಿರೀಕ್ಷಿತ ಲಾಂಚ್‌
×
We need your ನಗರ to customize your experience