EVಗಳಿಗೆ FAME ಸಬ್ಸಿಡಿಯನ್ನು ಇನ್ನೂ 5 ವರ್ಷಗಳ ಕಾಲ ವಿಸ್ತರಿಸಬೇಕು: FICCI
ಡಿಸೆಂಬರ್ 06, 2023 02:47 pm ರಂದು rohit ಮೂಲಕ ಪ್ರಕಟಿಸಲಾಗಿದೆ
- 31 Views
- ಕಾಮೆಂಟ್ ಅನ್ನು ಬರೆಯಿರಿ
ಈ ಯೋಜನೆಯು ಭಾರತದಲ್ಲಿ EVಗಳು 30 ಶೇಕಡಾದಷ್ಟು ಪಾಲನ್ನು ಸಾಧಿಸಲು ಸಹಾಯ ಮಾಡಲಿದೆ ಎಂದು ವ್ಯಾಪಾರಿ ಸಂಘಟನೆಯು ಹೇಳಿದೆ
- FAME-II ಯೋಜನೆಯನ್ನು 2019ರ ಏಪ್ರಿಲ್ ತಿಂಗಳಿನಲ್ಲಿ ಅನುಷ್ಠಾನಕ್ಕೆ ತರಲಾಗಿದ್ದು 2024ರ ಮಾರ್ಚ್ ತಿಂಗಳ ತನಕ ಇದು ಜಾರಿಯಲ್ಲಿರಲಿದೆ.
- FICCIಯು ಹೊಸ FAME-III ಯೋಜನೆಯಲ್ಲಿ ಖಾಸಗಿ EV ಖರೀದಿದಾರರನ್ನು ಒಳಗೊಳ್ಳಬೇಕೆಂದು ಹೇಳಿದೆ.
- ಸದ್ಯಕ್ಕೆ ಭಾರತೀಯ ಮಾರುಕಟ್ಟೆಯಲ್ಲಿ EVಯು ಐದು ಶೇಕಡಾದಷ್ಟು ಪಾಲನ್ನು ಹೊಂದಿದೆ.
- ಹೈಬ್ರೀಡ್ ವಾಹನಗಳನ್ನು ಸಹ ಯೋಜನೆಯ ಅಂಗವಾಗಿ ಒಳಗೊಳ್ಳುವಂತೆಯೂ ಸಲಹೆ ನೀಡಿದೆ.
ಎಲೆಕ್ಟ್ರಿಕ್ ವಾಹನಗಳ (EVಗಳ) ಜನಪ್ರಿಯತೆಯು ಕಳೆದ ಕೆಲವು ವರ್ಷಗಳಲ್ಲಿ ನಮ್ಮ ಮಾರುಕಟ್ಟೆಯಲ್ಲಿ ಗಣನೀಯವಾಗಿ ಏರಿದ್ದು, ಅನೇಕ್ ಬ್ರಾಂಡ್ ಗಳು ವಿವಿಧ ಮಾದರಿಗಳನ್ನು ಪರಿಚಯಿಸಿವೆ. ಈ ಏರಿಕೆಯ ಮೊದಲು, ಕೇಂದ್ರ ಸರ್ಕಾರವು ಫಾಸ್ಟರ್ ಅಡಾಪ್ಷನ್ ಅಂಡ್ ಮ್ಯಾನುಫ್ಯಾಕ್ಚರಿಂಗ್ ಆಫ್ ಹೈಬ್ರೀಡ್ ಅಂಡ್ ಎಲೆಕ್ಟ್ರಿಕ್ ವೆಹಿಕಲ್ಸ್ (FAME) ಎಂಬ ಅಖಿಲ ಭಾರತ ಮಟ್ಟದ ಪ್ರೋತ್ಸಾಹಕ ಯೋಜನೆಯನ್ನು ಜಾರಿಗೆ ತಂದಿತ್ತು. ಇದರ ಪರಿಷ್ಕೃತ ಆವೃತ್ತಿಯಾದ FAME-II ಅನ್ನು 2019ರಲ್ಲಿ ಜಾರಿಗೆ ತರುವ ಮೂಲಕ EV ಗಳ ಸಾಮೂಹಿಕ ಅಳವಡಿಕೆಗೆ ವೇಗವನ್ನು ನೀಡಲು ಯತ್ನಿಸಲಾಯಿತು. ಆದರೆ FAME-II ಯೋಜನೆಯು 2024ರ ಮಾರ್ಚ್ ತಿಂಗಳಿನಲ್ಲಿ ಕೊನೆಗೊಳ್ಳುತ್ತಿದ್ದು, ಈ ಯೋಜನೆಯನ್ನು ಇನ್ನೂ ಐದು ವರ್ಷಗಳ ಕಾಲ ಮುಂದುವರಿಸಬೇಕೆಂದು ಫೆಡರೇಶನ್ ಆಫ್ ಇಂಡಿಯನ್ ಚೇಂಬರ್ ಆಆಪ್ ಕಾಮರ್ಸ್ ಅಂಡ್ ಇಂಡಸ್ಟ್ರಿ (FICCI) ಒತ್ತಾಯಿಸಿದೆ.
FICCI ಯಾವೆಲ್ಲ ಸಲಹೆಯನ್ನು ನೀಡಿದೆ?
FICCI ಹೇಳಿರುವ ಪ್ರಕಾರ ಹಠಾತ್ ಆಗಿ ಪ್ರೋತ್ಸಾಹಕಗಳನ್ನು ಹಿಂಪಡೆದರೆ ಅಥವಾ ರದ್ದುಪಡಿಸಿದರೆ EV ಗಳ ಬೆಲೆಯಲ್ಲಿ ಶೇಕಡಾ 25ರಷ್ಟು ಏರಿಕೆ ಉಂಟಾಗಲಿದ್ದು ಭವಿಷ್ಯದ ಖರೀದಿದಾರರು ಇದರಿಂದಾಗಿ ಹಿಂದಕ್ಕೆ ಸರಿಯಲಿದ್ದು ಈ ಕ್ಷೇತ್ರದಲ್ಲಿ ಹೂಡಿಕೆಯ ಮೇಲೆ ಪೆಟ್ಟು ಬೀಳಲಿದೆ. ಈ ಸಂಘಟನೆಯ ಪ್ರಕಾರ, ಸದ್ಯಕ್ಕೆ ಭಾರತೀಯ ಮಾರುಕಟ್ಟೆಯಲ್ಲಿ EV ಗಳ ಪಾಲು ಐದು ಶೇಕಡಾ ಮಾತ್ರ.
ಒಂದು ವೇಳೆ ಮುಂದಿನ ಐದು ವರ್ಷಗಳ ಕಾಲ ಈ ಪ್ರೋತ್ಸಾಹಕಗಳು ಮುಂದುವರಿದರೆ ವಿವಿಧ ವಿಭಾಗಗಳಲ್ಲಿ ಸುಮಾರು 30.5 ಮಿಲಿಯ ಎಲೆಕ್ಟ್ರಿಕ್ ವಾಹನಗಳು ಹೊರಬರಲಿದ್ದು, ಈ ಕಾರುಗಳು ಉದ್ದೇಶಿತ ಶೇಕಡಾ 30ರಷ್ಟು ಪಾಲನ್ನು ಸಾಧಿಸುವಲ್ಲಿ ಯಶಸ್ವಿಯಾಗಲಿವೆ. EV ಗಳು ಮತ್ತು ಕಂಬಷನ್ ಎಂಜಿನ್ ಗಳ ನಡುವಿನ ಬೆಲೆ ಅಂತರವು ನಗಣ್ಯ ಮಟ್ಟಕ್ಕೆ ತಲುಪಿದಾಗ ಸಬ್ಸಿಡಿಗಳನ್ನು ತಗ್ಗಿಸಿ ಕ್ರಮೇಣ ರದ್ದುಪಡಿಸಬಹುದೆಂದು FICCI ಹೇಳಿದೆ. ಮುಂದಿನ 3-5 ವರ್ಷಗಳಲ್ಲಿ ಬ್ಯಾಟರಿಗಳ ಬೆಲೆಯು ತಗ್ಗಿದಾಗ ಹಾಗೂ EV ಘಟಕಗಳ ವೆಚ್ಚದಲ್ಲಿ ಇಳಿಕೆ ಉಂಟಾದಾಗ ಇದನ್ನು ಸಾಧಿಸಬಹುದು.
FICCIಯ ಇತರ ಶಿಫಾರಸ್ಸುಗಳು
ಮೇಲಿನ ಸಲಹೆಗಳ ಜೊತೆಗೆ FICCI ಯು ಇನ್ನೂ ಕೆಲವು ಅಂಶಗಳನ್ನು ಹಂಚಿಕೊಂಡಿದೆ:
- ಎಲ್ಲಾ ರೀತಿಯ ಹೈಬ್ರೀಡ್ ವಾಹನಗಳು (ಸ್ಟ್ರಾಂಗ್ ಮತ್ತು ಪ್ಲಗ್ ಇನ್ ಹೈಬ್ರೀಡ್ ಗಳು ಸೇರಿದಂತೆ) ಮತ್ತು ಜಲಜನಕ ಚಾಲಿತ ವಾಹನಗಳನ್ನು FAME-III ಯೋಜನೆಯಡಿ ತರಬೇಕೆಂದು ಇದು ವಿನಂತಿಸಿದೆ.
- FAME-III ಯೋಜನೆಯನ್ನು ಎಲೆಕ್ಟ್ರಿಕ್ ಕಾರನ್ನು ಅರಿಸಿಕೊಳ್ಳುವ ಖಾಸಗಿ ಖರೀದಿದಾರನಿಗೂ ವಿಸ್ತರಿಸಬೇಕು.
- ಪ್ರಸ್ತುತ FAME-II ಯೋಜನೆಯಲ್ಲಿ ಉಲ್ಲೇಖಿಸಿದಂತೆ, ಬ್ಯಾಟರಿ ಗಾತ್ರದ ಮೇಲೆ (ಪ್ರತಿ kWh) ಸಬ್ಸಿಡಿಯನ್ನು ಲೆಕ್ಕ ಹಾಕುವುದನ್ನು ಮುಂದುವರಿಸಬೇಕೆಂದು ಇದು ಹೇಳಿದೆ.
ಸುಲಜ್ಜಾ ಫಿರೋದಿಯಾ ಮೋಟ್ವಾನಿ, ಅಧ್ಯಕ್ಷರು, FICCI EV ಸಮಿತಿ, ಈ ಕುರಿತು ಮಾತನಾಡಿ, “ಅನುಕೂಲಕರ ನೀತಿಗಳು ಮತ್ತು ಮುಖ್ಯವಾಗಿ ಭಾರತ ಸರ್ಕಾರದ FAME-II ಯೋಜನೆಯು EVಗಳ ಬೆಲೆಯನ್ನು ತಗ್ಗಿಸುವ ಮೂಲಕ ಬೇಡಿಕೆಯನ್ನು ಹೆಚ್ಚಿಸುವಲ್ಲಿ ಪ್ರಮುಖ ಪಾತ್ರ ವಹಿಸಿದೆ. ಇದು ಧನಾತ್ಮಕ ವಾತಾವರಣವನ್ನು ರೂಪಿಸಲು ಮತ್ತು ದೇಶದಲ್ಲಿ EV ಅಳವಡಿಕೆಯನ್ನು ಉತ್ತೇಜಿಸಲು ಸಹಾಯ ಮಾಡಿದೆ. ಆದರೆ ನಾವು ಉತ್ತಮ ಆರಂಭವನ್ನು ಪಡೆದಿದ್ದರೂ, ಅರ್ಧದಷ್ಟು ಸಾಧನೆಯನ್ನೂ ಮಾಡಿಲ್ಲ. ಯಾವುದೇ ಸಬ್ಸಿಡಿ ಇಲ್ಲದೆ EV ಮತ್ತು ICE ನಡುವಿನ ಬೆಲೆಯ ಅಂತರವು ಗಣನೀಯವಾಗಿದ್ದು, ಈ ವ್ಯತ್ಯಾಸವು ವಿವಿಧ ವಿಭಾಗಗಳಲ್ಲಿ 40ರಿಂದ 130 ಶೇಕಡಾದಷ್ಟು ಇದೆ. ಈ ಕಾರಣದಿಂದಾಗಿ ಬೆಲೆಯ ಅಂತರವನ್ನು ತಗ್ಗಿಸುವುದಕ್ಕಾಗಿ ಬೇಡಿಕೆ ಪ್ರೋತ್ಸಾಹಕ ಅಥವಾ ಸಬ್ಸಿಡಿಯನ್ನು ಮುಂದುವರಿಸಬೇಕಾದುದು ಅನಿವಾರ್ಯ ಮತ್ತು ನಿರ್ಣಾಯಕವೆನಿಸಿದೆ. EV ವಾಹನಗಳಲ್ಲಿ ಗ್ರಾಹಕರ ನಿರಂತರ ಆಸಕ್ತಿಯನ್ನು ಪ್ರಚೋದಿಸಲು ಮತ್ತು ಮುಂದಿನ ಕೆಲವು ವರ್ಷಗಳಲ್ಲಿ ಈ ವಾಹನಗಳ ಪಾಲನ್ನು ಹೆಚ್ಚಿಸಲು FAME-III ಯ ಅಗತ್ಯವಿದೆ.
ಇದನ್ನು ಸಹ ಓದಿರಿ: ಕ್ಯಾಲೆಂಡರ್ ವರ್ಷದ ಕೊನೆಗೆ ಹೊಸ ಕಾರನ್ನು ಖರೀದಿಸುವುದರಿಂದ ಉಂಟಾಗುವ ಅನುಕೂಲತೆಗಳು ಮತ್ತು ಅನನುಕೂಲತೆಗಳು
FAME-II ಯೋಜನೆಯ ಹಿನ್ನೆಲೆ
FAME-II ಯೋಜನೆಯನ್ನು 2019ರ ಏಪ್ರಿಲ್ ತಿಂಗಳಿನಲ್ಲಿ ಪ್ರಾರಂಭಿಸಲಾಗಿದ್ದು ಇದು 2022ರ ಮಾರ್ಚ್ ತಿಂಗಳಿನಲ್ಲಿ ಮುಗಿಯಬೇಕಿತ್ತು. ಆದರೆ ಕೋವಿಡ್ - 19 ಕಾರಣ ಇದರ ಕಾಲಮಿತಿಯನ್ನು ಮಾರ್ಚ್ 31, 2024ರ ತನಕ ವಿಸ್ತರಿಸಿತು. ಇದು ಹೈಬ್ರೀಡ್ ಮತ್ತು ಎಲೆಕ್ಟ್ರಿಕ್ ವಾಹನಗಳೆರಡನ್ನು ಒಳಗೊಂಡಿದ್ದರೂ, ಎರಡನೆಯದ್ದಕ್ಕೆ ಹೆಚ್ಚಿನ ಒತ್ತು ನೀಡುತ್ತದೆ.
ಎಲೆಕ್ಟ್ರಿಕ್ ವಾಹನಗಳ ಖರೀದಿಯ ವೆಚ್ಚದಲ್ಲಿ ಸಬ್ಸಿಡಿ ನೀಡುವುದಕ್ಕಾಗಿ ಇದು ರೂ. 10,000 ಕೋಟಿಯಷ್ಟು ಬಜೆಟ್ ಅನ್ನು ಹೊಂದಿತ್ತು. ಇದು ಮೂರು ವರ್ಷಗಳ ಅವಧಿಯಲ್ಲಿ Li-ion ಬ್ಯಾಟರಿಗಳನ್ನು ಹೊಂದಿರುವ 55,000 ಎಲೆಕ್ಟ್ರಿಕ್ ಕಾರುಗಳು, 10 ಲಕ್ಷ ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳು, 5 ಲಕ್ಷ ತ್ರಿಚಕ್ರ ವಾಹನಗಳು ಮತ್ತು 7,000 ಬಸ್ಸುಗಳಿಗೆ ಸಬ್ಸಿಡಿಯನ್ನು ನೀಡುವ ಇರಾದೆಯನ್ನು ಹೊಂದಿತ್ತು. ಕಾರುಗಳ ವಿಭಾಗದಲ್ಲಿ ಪ್ರೋತ್ಸಾಹಕಗಳನ್ನು ಮುಖ್ಯವಾಗಿ ವಾಣಿಜ್ಯ ಮತ್ತು ಸಾರ್ವಜನಿಕ ಸಾರಿಗೆಗಾಗಿ ಬಳಸುವ ವಾಹನಗಳಿಗೆ ನೀಡಲಾಗುತ್ತದೆ.
ಇವು FICCI ಮಾಡಿರುವ ಸಲಹೆಗಳಷ್ಟೇ ಆಗಿದ್ದು, FAME-III ಯೋಜನೆಯನ್ನು ರೂಪಿಸುವಾಗ ಭಾರತ ಸರ್ಕಾರವು ಇವುಗಳಲ್ಲಿ ಯಾವುದೆಲ್ಲವನ್ನು ಪರಿಗಣಿಸುತ್ತದೆ ಎಂಬುದನ್ನು ಕಾದು ನೋಡಬೇಕು. ಅಂತಿಮ ಪ್ರೋತ್ಸಾಹಕ ಯೋಜನೆಯಲ್ಲಿ ಇವುಗಳಲ್ಲಿ ಯಾವುದನ್ನು ಒಳಗೊಳ್ಳಬೇಕೆಂದು ನೀವು ಭಾವಿಸುತ್ತೀರಿ? ನಿಮ್ಮ ಉತ್ತರವನ್ನು ಪ್ರತಿಕ್ರಿಯೆಯ ರೂಪದಲ್ಲಿ ಹಂಚಿಕೊಳ್ಳಿರಿ.
0 out of 0 found this helpful