• English
  • Login / Register

ಫಾಸ್ಟ್‌ಟ್ಯಾಗ್‌ ಪೇಟಿಎಂ ಮತ್ತು KYC ಡೆಡ್‌ಲೈನ್‌ಗಳನ್ನು ವಿವರಿಸಲಾಗಿದೆ: ಈ ಫೆಬ್ರವರಿ ನಂತರವೂ ನನ್ನ ಫಾಸ್ಟ್‌ಟ್ಯಾಗ್‌ ಕಾರ್ಯನಿರ್ವಹಿಸುತ್ತದೆಯೇ?

ಫೆಬ್ರವಾರಿ 07, 2024 04:00 pm ansh ಮೂಲಕ ಮಾರ್ಪಡಿಸಲಾಗಿದೆ

  • 24 Views
  • ಕಾಮೆಂಟ್‌ ಅನ್ನು ಬರೆಯಿರಿ

ಫೆಬ್ರವರಿ 29, 2024 ರ ನಂತರ, ನಿಮ್ಮ ಫಾಸ್ಟ್‌ಟ್ಯಾಗ್‌ ಗಳನ್ನು ಬ್ಲಾಕ್ ಲಿಸ್ಟ್ ಮಾಡಬಹುದು, ಹಾಗೆಯೇ ಪೇಟಿಎಂ ಮೂಲಕ ನೀಡಲಾದ ಫಾಸ್ಟ್‌ಟ್ಯಾಗ್‌ ಅನ್ನು ಬ್ಯಾಲೆನ್ಸ್ ಮೇಲೆ ಟಾಪ್-ಅಪ್ ಮಾಡಲು ಸಾಧ್ಯವಾಗುವುದಿಲ್ಲ

FASTag Deadlines February 2024

ಟೋಲ್ ಪಾವತಿ ಮಾಡುವ ಪ್ರಾಥಮಿಕ ವಿಧಾನವಾದ ಫಾಸ್ಟ್‌ಟ್ಯಾಗ್ ಎರಡು ಪ್ರಮುಖ ಬೆಳವಣಿಗೆಗಳಿಂದಾಗಿ ಇತ್ತೀಚೆಗೆ ಸುದ್ದಿಯಲ್ಲಿದೆ. ಮೊದಲನೆಯದಾಗಿ, ಭಾರತದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು (NHAI) ನಿಮ್ಮ ಫಾಸ್ಟ್‌ಟ್ಯಾಗ್‌ಗಾಗಿ ಸಂಪೂರ್ಣ KYC ಅನ್ನು ಮಾಡುವ ಗಡುವು ದಿನಾಂಕವನ್ನು ನೀಡಿದೆ ಮತ್ತು ಎರಡನೆಯದಾಗಿ ಪೇಟಿಎಂ ನೀಡಿದ ಫಾಸ್ಟ್‌ಟ್ಯಾಗ್‌ಗಳ ಕುರಿತು ಭಾರತೀಯ ರಿಸರ್ವ್ ಬ್ಯಾಂಕ್ (RBI) ತೆಗೆದುಕೊಂಡಿರುವ ನಿರ್ಧಾರ. ಅದರ ಪ್ರಕಾರ ಪೇಟಿಎಂ ಪಾವತಿ ಬ್ಯಾಂಕ್ ಅನ್ನು ಮುಚ್ಚಲು ಪೇಟಿಎಂಗೆ ತಿಳಿಸಲಾಗಿದೆ. ಈ ಸಮಸ್ಯೆಗಳ ಬಗ್ಗೆ ನೀವು ತಿಳಿದುಕೊಳ್ಳಬೇಕಾದ ವಿಷಯಗಳು ಮತ್ತು ಅದರ ನೀವು ಏನು ಮಾಡಬೇಕು ಎಂಬುದನ್ನು ನಾವು ಸಂಕ್ಷಿಪ್ತವಾಗಿ ವಿವರಿಸಿದ್ದೇವೆ.

 ಫಾಸ್ಟ್‌ಟ್ಯಾಗ್‌ನೊಂದಿಗೆ ಪೂರ್ಣ KYC ಮಾಡಲು NHAI ನಿರ್ಧಾರ ಹೊರಡಿಸಿದೆ

 ಟೋಲ್ ಸಂಗ್ರಹವನ್ನು ಉತ್ತಮಗೊಳಿಸುವ ಮತ್ತು ವಿಳಂಬವನ್ನು ಕಡಿಮೆ ಮಾಡುವ ಪ್ರಯತ್ನದಲ್ಲಿ ತೊಡಗಿರುವ NHAI, ಇತ್ತೀಚೆಗೆ "ಒಂದು ವಾಹನ, ಒಂದು ಫಾಸ್ಟ್‌ಟ್ಯಾಗ್" ಎಂಬ ಇನಿಶಿಯೇಟಿವ್ ಅನ್ನು ಘೋಷಿಸಿತು. ಈ ಉಪಕ್ರಮದ ಭಾಗವಾಗಿ, RBI ಮಾರ್ಗಸೂಚಿಗಳಿಗೆ ಅನುಗುಣವಾಗಿ ತಮ್ಮ ಫಾಸ್ಟ್‌ಟ್ಯಾಗ್‌ಗಳಿಗಾಗಿ KYC ಗಳನ್ನು ಪೂರ್ಣಗೊಳಿಸಲು NHAI ವಾಹನ ಮಾಲೀಕರಿಗೆ ನಿರ್ದೇಶನ ನೀಡಿದೆ. ಮೂಲ ಗಡುವು ಜನವರಿ 31 ಆಗಿತ್ತು ಆದರೆ ಈಗ ಅದನ್ನು ಫೆಬ್ರವರಿ 29 ಕ್ಕೆ ಮುಂದೂಡಲಾಗಿದೆ.

 ಈಗ ಯಾಕೆ?

 ಇದರ ಹಿಂದಿರುವ ಒಂದು ಕಾರಣವೆಂದರೆ, ಒಂದು ವಾಹನಕ್ಕೆ ಅನೇಕ ಫಾಸ್ಟ್‌ಟ್ಯಾಗ್‌ಗಳನ್ನು ನೀಡಿದ ಹಲವಾರು ನಿದರ್ಶನಗಳಿವೆ ಮತ್ತು ಒಂದೇ ಫಾಸ್ಟ್‌ಟ್ಯಾಗ್ ಅನ್ನು ಹಲವಾರು ವಾಹನಗಳು ಬಳಸುತ್ತಿರುವ ಪ್ರಕರಣಗಳನ್ನು ಕೂಡ NHAI ಗಮನಿಸಿದೆ. ಒಮ್ಮೆ KYC ಪೂರ್ಣಗೊಂಡ ನಂತರ, ಪ್ರತಿ ವಾಹನವು ಕೇವಲ ಒಂದು ಮಾನ್ಯವಾದ ಫಾಸ್ಟ್‌ಟ್ಯಾಗ್‌ಗೆ ಮಾತ್ರ ನೋಂದಾಯಿತವಾಗಿರುತ್ತದೆ.

 ನಾನು ಫಾಸ್ಟ್‌ಟ್ಯಾಗ್‌ KYC ಅನ್ನು ಪೂರ್ಣಗೊಳಿಸದಿದ್ದರೆ ಏನಾಗುತ್ತದೆ?

 KYC ಅನ್ನು ಗಡುವಿನ ದಿನಾಂಕದ ಮೊದಲು ಪೂರ್ಣಗೊಳಿಸದಿದ್ದರೆ, ನಿಮ್ಮ ಖಾತೆಯಲ್ಲಿ ಸ್ವಲ್ಪ ಹಣ ಬಾಕಿ ಉಳಿದಿದ್ದರೂ ಕೂಡ ವಾಹನದ ಫಾಸ್ಟ್‌ಟ್ಯಾಗ್‌ ಅನ್ನು ನಿಷ್ಕ್ರಿಯಗೊಳಿಸಲಾಗುತ್ತದೆ. ಇದಲ್ಲದೆ, ಮಾನ್ಯವಾಗಿರುವ KYC ಯೊಂದಿಗೆ ನಿಮ್ಮ ವಾಹನಕ್ಕೆ ನೀವು ಹಲವಾರು ಫಾಸ್ಟ್‌ಟ್ಯಾಗ್‌ಗಳನ್ನು ನೋಂದಾಯಿಸಿದ್ದರೆ, ತೀರಾ ಇತ್ತೀಚೆಗೆ ಖರೀದಿಸಿದ ಫಾಸ್ಟ್‌ಟ್ಯಾಗ್‌ ಮಾತ್ರ ಸಕ್ರಿಯವಾಗಿರುತ್ತದೆ ಮತ್ತು ಇತರ ಫಾಸ್ಟ್‌ಟ್ಯಾಗ್‌ಗಳನ್ನು ಬ್ಲಾಕ್ ಲಿಸ್ಟ್ ಮಾಡಲಾಗುತ್ತದೆ.

 ಇದನ್ನು ಕೂಡ ಓದಿ: ಭಾರತ್ ಮೊಬಿಲಿಟಿ ಎಕ್ಸ್‌ಪೋ ಪ್ರತಿ ವರ್ಷ ನಡೆಯಲಿದೆ - ಇದು ಆಟೋ ಎಕ್ಸ್‌ಪೋ ಸ್ಥಾನವನ್ನು ತೆಗೆದುಕೊಳ್ಳಬಹುದೇ?

 ಮಾಲೀಕರು ಈಗ ಅವರ ಫಾಸ್ಟ್‌ಟ್ಯಾಗ್‌ಗಾಗಿ KYC ಅನ್ನು ಪೂರ್ಣಗೊಳಿಸುವ ಕೆಲಸವನ್ನು ಮಾಡಬೇಕು, ಮತ್ತು ಇದನ್ನು ಆನ್‌ಲೈನ್ ಮತ್ತು ಆಫ್‌ಲೈನ್‌ನಲ್ಲಿ ಮಾಡಬಹುದು ಮತ್ತು ಮುಂದಿನ ದಿನಗಳಲ್ಲಿ ಒಂದು ಫಾಸ್ಟ್‌ಟ್ಯಾಗ್ ಅನ್ನು ಮಾತ್ರ ಬಳಸಬೇಕು.

 ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ಫಾಸ್ಟ್‌ಟ್ಯಾಗ್‌ ಸಮಸ್ಯೆ

 ಇತ್ತೀಚೆಗೆ, ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಪೇಟಿಎಂಗೆ ಅದರ ಅಕ್ರಮಗಳ ಕಾರಣದಿಂದಾಗಿ ತನ್ನ ಪಾವತಿ ಬ್ಯಾಂಕ್ ಅನ್ನು ಮುಚ್ಚಲು ಮತ್ತು ಫೆಬ್ರವರಿ 29 ರ ನಂತರ ಅಸ್ತಿತ್ವದಲ್ಲಿರುವ ಖಾತೆಗಳು ಮತ್ತು ವ್ಯಾಲೆಟ್‌ಗಳಲ್ಲಿ ಹೊಸ ಠೇವಣಿಗಳನ್ನು ಸ್ವೀಕರಿಸುವುದನ್ನು ನಿಲ್ಲಿಸುವಂತೆ ಹೇಳಿದೆ, ಮತ್ತು ಇದರಲ್ಲಿ ಪೇಟಿಎಂ ನೀಡಿದ ಫಾಸ್ಟ್‌ಟ್ಯಾಗ್‌ಗಳು ಕೂಡ ಸೇರಿವೆ. ದಂಡವಿಲ್ಲದೆ ಟೋಲ್ ಪಾವತಿಗಳನ್ನು ಮಾಡಲು ಫಾಸ್ಟ್‌ಟ್ಯಾಗ್‌ಗಳು ಕಡ್ಡಾಯವಾದ ಕಾರಣ, RFID ಟ್ಯಾಗ್ ಅನ್ನು ನೀಡುವ ಅತ್ಯಂತ ಜನಪ್ರಿಯ ಸೇವೆಗಳಲ್ಲಿ ಪೇಟಿಎಂ ಒಂದಾಗಿದೆ ಮತ್ತು ಹಾಗಾಗಿ ಈ ಇತ್ತೀಚಿನ ಬೆಳವಣಿಗೆಯು ಹೆಚ್ಚಿನ ಜನರಿಗೆ ಸಮಸ್ಯೆಗಳನ್ನು ಉಂಟುಮಾಡಬಹುದು.

 ಫೆಬ್ರವರಿ 2024 ರ ಅಂತ್ಯದವರೆಗೆ, ಬಳಕೆದಾರರು ತಮ್ಮ ಪೇಟಿಎಂ ಫಾಸ್ಟ್‌ಟ್ಯಾಗ್‌ ಅನ್ನು ಟಾಪ್ ಅಪ್ ಮಾಡಬಹುದು ಮತ್ತು ಗಡುವಿನ ದಿನಾಂಕದ ನಂತರವೂ ಅವುಗಳನ್ನು ಬಳಸಬಹುದು. ಆದರೆ ಒಮ್ಮೆ ಬ್ಯಾಲೆನ್ಸ್ ಮುಗಿದ ನಂತರ, ನೀವು ಪೇಟಿಎಂ ಫಾಸ್ಟ್‌ಟ್ಯಾಗ್‌ ಅನ್ನು ರೀಚಾರ್ಜ್ ಮಾಡಲು ಸಾಧ್ಯವಾಗುವುದಿಲ್ಲ ಮತ್ತು ಆದ್ದರಿಂದ ಟೋಲ್‌ಗಳಲ್ಲಿ ಪಾವತಿಗಳನ್ನು ಮಾಡಲು ಅದನ್ನು ಬಳಸಲಾಗುವುದಿಲ್ಲ.

 ಅನೇಕ ಸ್ಟಾರ್ಟ್‌ಅಪ್‌ಗಳ ಸಿಇಒಗಳು ಈ ತೀರ್ಪನ್ನು ಹಿಂತೆಗೆದುಕೊಳ್ಳುವಂತೆ ಆರ್‌ಬಿಐಗೆ ಒತ್ತಾಯಿಸುತ್ತಿದ್ದಾರೆ, ಆದರೆ ಆರ್‌ಬಿಐ ಅದನ್ನು ಹಿಂತೆಗೆದುಕೊಳ್ಳುತ್ತದೆಯೇ ಎಂದು ನಮಗೆ ಇನ್ನೂ ತಿಳಿದಿಲ್ಲ. ಮುಂದಿನ ದಿನಗಳಲ್ಲಿ ಸಮಸ್ಯೆಗಳನ್ನು ತಪ್ಪಿಸಲು, ಬ್ಯಾಂಕ್‌ನಂತಹ ಬೇರೊಂದು ಪೂರೈಕೆದಾರರಿಂದ KYC ಅನ್ನು ಪೂರ್ಣಗೊಳಿಸಿ ಹೊಸ ಫಾಸ್ಟ್‌ಟ್ಯಾಗ್ ಅನ್ನು ಪಡೆದುಕೊಳ್ಳಲು ನಾವು ಶಿಫಾರಸು ಮಾಡುತ್ತೇವೆ.

 ಫಾಸ್ಟ್‌ಟ್ಯಾಗ್‌ಗಳ ಕುರಿತು ಮುಂಬರುವ ದಿನಗಳಲ್ಲಿ ಯಾವುದೇ ಇತರ ಬೆಳವಣಿಗೆಗಳಿಗಾಗಿ ನಾವು ಕಾಯುತ್ತಿದ್ದೇವೆ, ಆದ್ದರಿಂದ ಇತ್ತೀಚಿನ ಅಪ್ಡೇಟ್ ಗಳನ್ನು ಪಡೆಯಲು ಕಾರ್ ದೇಖೊ ಲೇಖನಗಳನ್ನು ಓದುತ್ತಿರಿ.

was this article helpful ?

Write your ಕಾಮೆಂಟ್

ಕಾರು ಸುದ್ದಿ

  • ಟ್ರೆಂಡಿಂಗ್ ಸುದ್ದಿ
  • ಇತ್ತಿಚ್ಚಿನ ಸುದ್ದಿ

trending ಕಾರುಗಳು

  • ಲೇಟೆಸ್ಟ್
  • ಉಪಕಮಿಂಗ್
  • ಪಾಪ್ಯುಲರ್
  • ಕಿಯಾ syros
    ಕಿಯಾ syros
    Rs.9.70 - 16.50 ಲಕ್ಷಅಂದಾಜು ದಾರ
    ಫೆಬರವಾರಿ, 2025: ನಿರೀಕ್ಷಿತ ಲಾಂಚ್‌
  • M ಜಿ Majestor
    M ಜಿ Majestor
    Rs.46 ಲಕ್ಷಅಂದಾಜು ದಾರ
    ಫೆಬರವಾರಿ, 2025: ನಿರೀಕ್ಷಿತ ಲಾಂಚ್‌
  • ಹೊಸ ವೇರಿಯೆಂಟ್
    ಮಹೀಂದ್ರ be 6
    ಮಹೀಂದ್ರ be 6
    Rs.18.90 - 26.90 ಲಕ್ಷಅಂದಾಜು ದಾರ
    ಮಾರಚ್‌, 2025: ನಿರೀಕ್ಷಿತ ಲಾಂಚ್‌
  • ಹೊಸ ವೇರಿಯೆಂಟ್
    ಮಹೀಂದ್ರ xev 9e
    ಮಹೀಂದ್ರ xev 9e
    Rs.21.90 - 30.50 ಲಕ್ಷಅಂದಾಜು ದಾರ
    ಮಾರಚ್‌, 2025: ನಿರೀಕ್ಷಿತ ಲಾಂಚ್‌
  • ಆಡಿ ಕ್ಯೂ6 ಈ-ಟ್ರಾನ್
    ಆಡಿ ಕ್ಯೂ6 ಈ-ಟ್ರಾನ್
    Rs.1 ಸಿಆರ್ಅಂದಾಜು ದಾರ
    ಮಾರಚ್‌, 2025: ನಿರೀಕ್ಷಿತ ಲಾಂಚ್‌
×
We need your ನಗರ to customize your experience