Login or Register ಅತ್ಯುತ್ತಮ CarDekho experience ಗೆ
Login

ಈಗ 5 ಸೀಟರ್‌ ವೇರಿಯೆಂಟ್‌ ಅನ್ನು ಪಡೆಯಲಿರುವ ಮರ್ಸಿಡಿಸ್-ಬೆಂಜ್‌ EQS SUV 450, ಬೆಲೆಗಳು 1.28 ಕೋಟಿ ರೂ.ನಿಗದಿ

ಮರ್ಸಿಡಿಸ್ ಇಕ್ಯೂಎಸ್‌ ಎಸ್ಯುವಿ ಗಾಗಿ shreyash ಮೂಲಕ ಜನವರಿ 14, 2025 07:34 pm ರಂದು ಪ್ರಕಟಿಸಲಾಗಿದೆ

ಭಾರತ-ಸ್ಪೆಕ್ EQS ಎಲೆಕ್ಟ್ರಿಕ್ ಎಸ್‌ಯುವಿ ಈಗ EQS 450 (5-ಸೀಟರ್‌) ಮತ್ತು EQS 580 (7-ಸೀಟರ್‌) ಎರಡು ವೇರಿಯೆಂಟ್‌ಗಳಲ್ಲಿ ಲಭ್ಯವಿದೆ

  • ಹೊಸ EQS SUV 450 5-ಸೀಟರ್ ವೇರಿಯೆಂಟ್‌ ಅದರ 7-ಸೀಟರ್ ಪ್ರತಿರೂಪಕ್ಕಿಂತ 14 ಲಕ್ಷ ರೂ.ಗಳಷ್ಟು ಕಡಿಮೆ ಬೆಲೆಯನ್ನು ಹೊಂದಿದೆ.

  • ಮರುವಿನ್ಯಾಸಗೊಳಿಸಲಾದ ಅಲಾಯ್ ವೀಲ್‌ಗಳನ್ನು ಹೊರತುಪಡಿಸಿ, EQS ಎಸ್‌ಯುವಿ 450 ಗೆ ಯಾವುದೇ ಪ್ರಮುಖ ವಿನ್ಯಾಸ ಬದಲಾವಣೆಗಳನ್ನು ಮಾಡಲಾಗಿಲ್ಲ.

  • MBUX ಹೈಪರ್‌ಸ್ಕ್ರೀನ್ ಸೆಟಪ್ ಜೊತೆಗೆ ಅದೇ ಇಂಟೀರಿಯರ್‌ ವಿನ್ಯಾಸವನ್ನು ಪಡೆಯುತ್ತದೆ.

  • ಅದೇ 122 ಕಿ.ವ್ಯಾಟ್‌ ಬ್ಯಾಟರಿ ಪ್ಯಾಕ್ ಅನ್ನು ಬಳಸುತ್ತದೆ, ಆದರೆ ವಿದ್ಯುತ್ ಮೋಟಾರ್ 360 ಪಿಎಸ್‌ ಮತ್ತು 800 ಎನ್‌ಎಮ್‌ಅನ್ನು ಉತ್ಪಾದಿಸುತ್ತದೆ.

  • ಇದು ARAI- ಕ್ಲೈಮ್‌ ಮಾಡಿದ 821 ಕಿ.ಮೀ ರೇಂಜ್‌ ಅನ್ನು ಹೊಂದಿದೆ.

  • EQS ಎಲೆಕ್ಟ್ರಿಕ್ ಎಸ್‌ಯುವಿ ಈಗ 1.28 ಕೋಟಿ ರೂ.ನಿಂದ 1.42 ಕೋಟಿ ರೂ.ವರೆಗೆ(ಎಕ್ಸ್ ಶೋ ರೂಂ ಪ್ಯಾನ್-ಇಂಡಿಯಾ) ಬೆಲೆಯನ್ನು ಹೊಂದಿದೆ.

ಮರ್ಸಿಡಿಸ್-ಬೆಂಝ್‌ ಇಕ್ಯೂಎಸ್‌ ಎಲೆಕ್ಟ್ರಿಕ್ ಎಸ್‌ಯುವಿ ಈಗ ಹೊಸ 5-ಸೀಟರ್ ಆವೃತ್ತಿಯಾದ ಇಕ್ಯೂಎಸ್‌ ಎಸ್‌ಯುವಿ 450 ವೇರಿಯೆಂಟ್‌ ಅನ್ನು ಬಿಡುಗಡೆ ಮಾಡುವುದರೊಂದಿಗೆ ಹೆಚ್ಚು ಕೈಗೆಟುಕುವಂತಾಗಿದೆ, ಇದರ ಬೆಲೆ 1.28 ಕೋಟಿ ರೂ.ನಿಂದ ಪ್ರಾರಂಭವಾಗುತ್ತದೆ. ಮರ್ಸಿಡಿಸ್‌ನ ಈ ಹೊಸ ಎಲೆಕ್ಟ್ರಿಕ್ ಎಸ್‌ಯುವಿ ವೇರಿಯೆಂಟ್‌ ವಿನ್ಯಾಸದಲ್ಲಿ ಯಾವುದೇ ಪ್ರಮುಖ ಬದಲಾವಣೆಗಳನ್ನು ಹೊಂದಿಲ್ಲ ಮತ್ತು ಅದೇ ಬ್ಯಾಟರಿ ಪ್ಯಾಕ್ ಅನ್ನು ಉಳಿಸಿಕೊಂಡಿದೆ, ಆದರೆ ಎಲೆಕ್ಟ್ರಿಕ್ ಮೋಟಾರ್ ಈಗ ಕಡಿಮೆ ಮಟ್ಟದ ಟ್ಯೂನ್ ಅನ್ನು ನೀಡುತ್ತದೆ. ಹೆಚ್ಚಿನ ವಿವರಗಳನ್ನು ತಿಳಿಯುವ ಮೊದಲು, ಆಲ್-ಎಲೆಕ್ಟ್ರಿಕ್ ಇಕ್ಯೂಎಸ್‌ ಎಸ್‌ಯುವಿಯ ವೇರಿಯೆಂಟ್‌-ವಾರು ಬೆಲೆಗಳನ್ನು ತಿಳಿಯೋಣ.

ವೇರಿಯೆಂಟ್‌

ಬೆಲೆಗಳು

ಇಕ್ಯೂಎಸ್‌ 450 (5-ಸೀಟರ್‌) (ಹೊಸ)

1.28 ಕೋಟಿ ರೂ.*

ಇಕ್ಯೂಎಸ್‌ 580 (7-ಸೀಟರ್‌)

1.42 ಕೋಟಿ ರೂ.

*ಪರಿಚಯಾತ್ಮಕ ಬೆಲೆಗಳು

ಇಕ್ಯೂಎಸ್‌ ಎಸ್‌ಯುವಿಯ ಹೊಸ 5-ಸೀಟರ್ ವೇರಿಯೆಂಟ್‌ ಅದರ 7-ಸೀಟರ್ ಆವೃತ್ತಿಗಿಂತ ಸುಮಾರು 14 ಲಕ್ಷ ರೂ.ಗಳಷ್ಟು ಕೈಗೆಟುಕುವಂತಿದೆ. ಎರಡೂ ಇಕ್ಯೂಎಸ್‌ ಎಸ್‌ಯುವಿಯ ವೇರಿಯೆಂಟ್‌ಗಳನ್ನು ಮರ್ಸಿಡಿಸ್-ಬೆಂಜ್‌ನ ಚಕನ್ (ಪುಣೆ) ಉತ್ಪಾದನಾ ಘಟಕದಲ್ಲಿ ಸ್ಥಳೀಯವಾಗಿ ಜೋಡಿಸಲಾಗಿದೆ ಎಂಬುದನ್ನು ನಾವಿಲ್ಲಿ ಗಮನಿಸಬೇಕು.

ಯಾವುದೇ ವಿನ್ಯಾಸ ಬದಲಾವಣೆಗಳಿಲ್ಲ

ಮರ್ಸಿಡಿಸ್ ಇಕ್ಯೂಎಸ್‌ ಎಲೆಕ್ಟ್ರಿಕ್ ಎಸ್‌ಯುವಿಯ ಒಟ್ಟಾರೆ ವಿನ್ಯಾಸದಲ್ಲಿ ಯಾವುದೇ ಮಹತ್ವದ ಬದಲಾವಣೆಗಳನ್ನು ಮಾಡಿಲ್ಲ. ಇದು ಇನ್ನೂ ಮುಚ್ಚಿದ ಗ್ರಿಲ್ ಅನ್ನು ಹೊಂದಿದ್ದು, ಮಧ್ಯದಲ್ಲಿ ದೊಡ್ಡ ಮರ್ಸಿಡಿಸ್-ಬೆಂಝ್‌ನ ಲೋಗೋ, ನಯವಾದ LED ಹೆಡ್‌ಲೈಟ್‌ಗಳಿಂದ ಸುತ್ತುವರೆದಿದೆ. ಬಾನೆಟ್‌ನ ಅಗಲದ ಉದ್ದಕ್ಕೂ ಕನೆಕ್ಟೆಡ್‌ ಎಲ್‌ಇಡಿ ಡಿಆರ್‌ಎಲ್‌ ಸ್ಟ್ರಿಪ್ ಇದ್ದು, ಆಕ್ರಮಣಕಾರಿಯಾಗಿ ಕಾಣುವ ಬಂಪರ್‌ನಿಂದ ಪೂರಕವಾಗಿದೆ. ಮರುವಿನ್ಯಾಸಗೊಳಿಸಲಾದ ಅಲಾಯ್ ವೀಲ್‌ಗಳನ್ನು ಹೊರತುಪಡಿಸಿ, ಸೈಡ್‌ನ ಭಾಗವೂ ಬದಲಾಗದೆ ಉಳಿದಿದೆ. ಇದು ಫ್ಲಶ್-ಫಿಟ್ಟಿಂಗ್ ಡೋರ್ ಹ್ಯಾಂಡಲ್‌ಗಳು ಮತ್ತು ಪ್ರಯಾಣಿಕರ ಬದಿಯಲ್ಲಿರುವ ಮುಂಭಾಗದ ಫೆಂಡರ್‌ನಲ್ಲಿ ಚಾರ್ಜಿಂಗ್ ಫ್ಲಾಪ್ ಅನ್ನು ಸಹ ಒಳಗೊಂಡಿದೆ. ಒಟ್ಟಾರೆ ವಿನ್ಯಾಸವನ್ನು ಪೂರ್ಣಗೊಳಿಸುವುದು ಕನೆಕ್ಟೆಡ್‌ ಎಲ್‌ಇಡಿ ಟೈಲ್ ಲ್ಯಾಂಪ್‌ಗಳ ಸೆಟ್‌ ಆಗಿದೆ.

ಇದನ್ನೂ ಓದಿ: Mercedes-Benz G-Class Electric, All-electric G Wagon, ಭಾರತದಲ್ಲಿ 3 ಕೋಟಿ ರೂ.ಗೆ ಬಿಡುಗಡೆ

ಹಿಂದಿನಂತೆಯೇ ಇಂಟೀರಿಯರ್‌ ವಿನ್ಯಾಸ

ಒಳಗಿನಿಂದ ಗಮನಿಸುವಾಗ, ಕ್ಯಾಬಿನ್ ಕೂಡ EQS 580 ರಂತೆಯೇ ಇರುತ್ತದೆ. ಡ್ಯಾಶ್‌ಬೋರ್ಡ್‌ನ ಪ್ರಮುಖ ಹೈಲೈಟ್‌ ಎಂದರೆ, ಅದರ MBUX ಹೈಪರ್‌ಸ್ಕ್ರೀನ್ ಸೆಟಪ್ ಆಗಿದ್ದು, ಇದು 17.7-ಇಂಚಿನ ಟಚ್‌ಸ್ಕ್ರೀನ್, 12.3-ಇಂಚಿನ ಡಿಜಿಟಲ್ ಡ್ರೈವರ್ ಡಿಸ್‌ಪ್ಲೇ, ಮತ್ತು ಸಹ-ಚಾಲಕನಿಗೆ 12.3-ಇಂಚಿನ ಟಚ್‌ಸ್ಕ್ರೀನ್, ಇವೆಲ್ಲವೂ ಒಟ್ಟಾಗಿ 55.5 ಇಂಚುಗಳಷ್ಟು ಜಾಗವನ್ನು ಒಳಗೊಂಡಿದೆ.

ಇದು ಹೆಡ್ಸ್-ಅಪ್ ಡಿಸ್‌ಪ್ಲೇ, ಬಹು-ಬಣ್ಣದ ಆಂಬಿಯೆಂಟ್ ಲೈಟಿಂಗ್ ಮತ್ತು ಹಿಂಭಾಗದ ಪ್ರಯಾಣಿಕರಿಗಾಗಿ ಹಿಂಭಾಗದ ಮಧ್ಯದ ಆರ್ಮ್‌ರೆಸ್ಟ್‌ನಲ್ಲಿ ಪ್ರತ್ಯೇಕ ಪರದೆಯನ್ನು ಸಹ ಪಡೆಯುತ್ತದೆ. ಇಕ್ಯೂಎಸ್‌ ಎಸ್‌ಯುವಿಯ ಸುರಕ್ಷತಾ ಜಾಲವು 360-ಡಿಗ್ರಿ ಕ್ಯಾಮೆರಾ, ಬಹು ಏರ್‌ಬ್ಯಾಗ್‌ಗಳು, ವಿವಿಧ ಚಾಲಕ-ಸಹಾಯ ವ್ಯವಸ್ಥೆಗಳು ಮತ್ತು ISOFIX ಚೈಲ್ಡ್ ಸೀಟ್ ಮೌಂಟ್‌ಗಳನ್ನು ಹೊಂದಿದೆ.

ಪವರ್‌ಟ್ರೈನ್ ಆಯ್ಕೆಗಳು

ಇಕ್ಯೂಎಸ್‌ 450 ಮತ್ತು ಇಕ್ಯೂಎಸ್‌ 580 ಎರಡೂ ಒಂದೇ ಬ್ಯಾಟರಿ ಪ್ಯಾಕ್ ಅನ್ನು ಹೊಂದಿದ್ದರೂ, ಅವುಗಳ ಔಟ್‌ಪುಟ್ ಅಂಕಿಅಂಶಗಳು ಭಿನ್ನವಾಗಿರುತ್ತವೆ.

ವೇರಿಯೆಂಟ್‌

ಇಕ್ಯೂಎಸ್‌ 450 (5-ಸೀಟರ್‌)

ಇಕ್ಯೂಎಸ್‌ 580 (7-ಸೀಟರ್‌)

ಬ್ಯಾಟರಿ ಪ್ಯಾಕ್‌

122 ಕಿ.ವ್ಯಾಟ್‌

122 ಕಿ.ವ್ಯಾಟ್‌

ಕ್ಲೈಮ್‌ ಮಾಡಲಾದ ರೇಂಜ್‌

821 ಕಿ.ಮೀ.

809 ಕಿ.ಮೀ.

ಡ್ರೈವ್‌ಟೈಪ್‌

ಆಲ್-ವೀಲ್-ಡ್ರೈವ್ (AWD)

ಆಲ್-ವೀಲ್-ಡ್ರೈವ್ (AWD)

ಪವರ್‌

360 ಪಿಎಸ್‌

544 ಪಿಎಸ್‌

ಟಾರ್ಕ್‌

809 ಎನ್‌ಎಮ್‌

858 ಎನ್‌ಎಮ್‌

ಹೊಸ ಇಕ್ಯೂಎಸ್‌ 450, ಇಕ್ಯೂಎಸ್‌ 580 ಗಿಂತ 184 ಪಿಎಸ್‌ ಕಡಿಮೆ ಔಟ್‌ಪುಟ್‌ ಅನ್ನು ಉತ್ಪಾದಿಸುತ್ತದೆ, ಆದರೆ 12 ಕಿಮೀ ಹೆಚ್ಚುವರಿ ಕ್ಲೈಮ್ ಮಾಡಿದ ಚಾಲನಾ ರೇಂಜ್‌ ಅನ್ನು ನೀಡುತ್ತದೆ.

ಪ್ರತಿಸ್ಪರ್ಧಿಗಳು

ಭಾರತದಲ್ಲಿ ಮರ್ಸಿಡಿಸ್-ಬೆಂಝ್‌ ಇಕ್ಯೂಎಸ್‌ ಎಸ್‌ಯುವಿಯು ಆಡಿ Q8 ಇ-ಟ್ರಾನ್ ಮತ್ತು ಬಿಎಮ್‌ಡಬ್ಲ್ಯೂ ಐಎಕ್ಸ್‌ ಕಾರುಗಳಿಗೆ ಪೈಪೋಟಿ ನೀಡುತ್ತದೆ.

ಕಾರುಗಳ ಲೋಕದ ನಿರಂತರ ಆಪ್‌ಡೇಟ್‌ಗಳನ್ನು ಪಡೆಯಲು ಕಾರ್‌ದೇಖೋದ ವಾಟ್ಸ್ಆಪ್ ಚಾನಲ್ ಅನ್ನು ಫಾಲೋ ಮಾಡಿ

Share via

Write your Comment on Mercedes-Benz ಇಕ್ಯೂಎಸ್‌ ಎಸ್‌ಯುವಿ

ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ

Enable notifications to stay updated with exclusive offers, car news, and more from CarDekho!

trending ಎಲೆಕ್ಟ್ರಿಕ್ ಕಾರುಗಳು

  • ಪಾಪ್ಯುಲರ್
  • ಉಪಕಮಿಂಗ್
Rs.18.90 - 26.90 ಲಕ್ಷ*
Rs.48.90 - 54.90 ಲಕ್ಷ*
Rs.21.90 - 30.50 ಲಕ್ಷ*
Rs.17.49 - 21.99 ಲಕ್ಷ*
ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ