Login or Register ಅತ್ಯುತ್ತಮ CarDekho experience ಗೆ
Login

ಕೊನೆಗೂ ಸಿದ್ಧಗೊಂಡಿದೆ Tesla Cybertruck ! ಮೊದಲ 10 ಗ್ರಾಹಕರು ಡೆಲಿವರಿ ತೆಗೆದುಕೊಳ್ಳುತ್ತಿದ್ದಂತೆ ಪ್ರೊಡಕ್ಷನ್-ಸ್ಪೆಕ್ ವಿವರಗಳನ್ನು ಬಹಿರಂಗ

modified on ಡಿಸೆಂಬರ್ 04, 2023 05:01 pm by sonny for ಟೆಸ್ಲಾ ಸೈಬರ್ ಟ್ರಕ್

ಈ ಎಲೆಕ್ಟ್ರಿಕ್‌ ಪಿಕಪ್‌ ವಾಹನಕ್ಕಾಗಿ ವಿಶೇಷ ಆಲಾಯ್‌ನಿಂದ ತಯಾರಿಸಲಾಗಿದ್ದು ಇದು ತುಕ್ಕು ಹಾಗೂ ಗುಂಡು ನಿರೋಧಕವೆನಿಸಿದೆ.

  • ಅನಾವರಣಗೊಂಡ ಸುಮಾರು 4 ವರ್ಷಗಳ ನಂತರ ಟೆಸ್ಲಾ ಸೈಬರ್‌ ಟ್ರಕ್‌ ವಾಹನವು ಗ್ರಾಹಕರಿಗಾಗಿ ಸಿದ್ಧಗೊಂಡಿದೆ.
  • ಇದು ಮೂರು ಪವರ್‌ ಟ್ರೇನ್‌ ಆಯ್ಕೆಗಳನ್ನು ಹೊಂದಿದ್ದು 550 km ತನಕದ ಶ್ರೇಣಿಯನ್ನು ನೀಡಲಿದೆ.
  • ಟಾಪ್‌ ಸ್ಪೆಕ್‌ ಟ್ರೈ-ಮೋಟರ್‌ ವೇರಿಯಂಟ್‌ ಅನ್ನು ಸೈಬರ್‌ ಬೀಸ್ಟ್‌ ಎಂದು ಕರೆಯಲಾಗಿದ್ದು ಇದು 850 PS ಗಿಂತ ಹೆಚ್ಚಿನ ಸಾಮರ್ಥ್ಯವನ್ನು ಹೊಂದಿದೆ.
  • ಒಳಗಡೆಯಲ್ಲಿ ಸರಕು ಶೇಖರಣೆಗಾಗಿ ಸಾಕಷ್ಟು ಸ್ಥಳಾವಕಾಶವನ್ನು ಹೊಂದಿದ್ದರೆ, ಪೇಲೋಡ್‌ ಸ್ಥಳವು ಒರಟಾದ ವಿನ್ಯಾಸವನ್ನು ಹೊಂದಿದೆ.
  • ಆಲ್‌ ವೀಲ್‌ ಡ್ರೈವ್‌ ವೇರಿಯಂಟ್‌ ಗಳ ವಿತರಣೆಯು 2024ರಲ್ಲಿ ಮುಂದುವರಿಯಲಿದ್ದು, ಬೇಸ್‌ ವೇರಿಯಂಟ್‌ ಗಳು 2025ರಲ್ಲಿ ಮಾರುಕಟ್ಟೆಗೆ ಬರಲಿವೆ.

ಟೆಸ್ಲಾ ಸೈಬರ್‌ ಟ್ರಕ್ ವಾಹನವು ಇತ್ತೀಚಿನ ದಿನಗಳಲ್ಲಿ ಅತ್ಯಂತ ನಿರೀಕ್ಷಿತ ವಾಹನವೆನಿಸಿದ್ದು, 10 ಲಕ್ಷದಷ್ಟು ಆರ್ಡರ್‌ ಅನ್ನು ಈಗಾಗಲೇ ಪಡೆದಿದೆ. ಇದು ಉತ್ಪಾದನಾ ಪೂರ್ವದ ಪರಿಕಲ್ಪನೆಯಾಗಿ 2019ರಲ್ಲಿ ಬಿಡುಗಡೆಯಾಗಿದ್ದು, ತೀರಾ ವಿಶೇಷವಾಗಿ ಕಾಣುವ ಈ ಎಲೆಕ್ಟ್ರಿಕ್‌ ಪಿಕಪ್‌ ಕಾರು ಉತ್ಪಾದನೆಗೆ ಸಿದ್ಧವಾಗುತ್ತಿದ್ದು ಮೊನ್ನೆಯಷ್ಟೇ ರಸ್ತೆಗಿಳಿಯಲು ಸಿದ್ಧವಾಗಿರುವ ಮಾದರಿಯಾಗಿ ಪರಿಚಯಿಸಲಾಗಿದೆ. ಟೆಸ್ಲಾ ಸಂಸ್ಥೆಯ ವಾಹನ ವಿತರಣೆ ಕಾರ್ಯಕ್ರಮದಿಂದ ಸೈಬರ್‌ ಟ್ರಕ್‌ ಕುರಿತು ದೊರೆಯಲಾದ ಎಲ್ಲಾ ಮಾಹಿತಿ ಇಲ್ಲಿದೆ:

ಪವರ್‌ ಟ್ರೇನ್‌ ಆಯ್ಕೆಗಳು

ಟೆಸ್ಲಾ ಸೈಬರ್‌ ಟ್ರಕ್‌ ಕಾರು ಮೂರು ಡ್ರೈವ್‌ ಟ್ರೇನ್‌ ವೇರಿಯಂಟ್‌ ಗಳೊಂದಿಗೆ ಬರಲಿದೆ: ರಿಯರ್‌ ವೀಲ್‌ ಡ್ರೈವ್‌, ಡ್ಯುವಲ್‌ ಮೋಟರ್‌ ಅಲ್‌ ವೀಲ್‌ ಡ್ರೈವ್‌ ಮತ್ತು ಟ್ರೈ ಮೋಟಾರ್‌ ಆಲ್‌ ವೀಲ್‌ ಡ್ರೈವ್. ಸಿಂಗಲ್‌ ಮೋಟಾರ್‌ ಬೇಸ್‌ ಆಯ್ಕೆಯು 2025ರಲ್ಲಿ ಬರಲಿದ್ದು, 400 km ಗಿಂತಲೂ ಹೆಚ್ಚಿನ ಶ್ರೇಣಿಯನ್ನು ಹೊಂದಿದೆ. ಇತರ ಎರಡು ಆಯ್ಕೆಗಳ ಕುರಿತು ನಮ್ಮ ಬಳಿ ಮಾಹಿತಿ ಇಲ್ಲದಿದ್ದರೂ, ಡ್ಯುವಲ್‌ ಮೋಟಾರ್‌ ಸೆಟಪ್ 608 PS/ 10,000 Nm ಅನ್ನು ಹೊಂದಿದ್ದು 4.1 ಸೆಕೆಂಡುಗಳಲ್ಲಿ 0-96 kmph ವೇಗವನ್ನು ಪಡೆಯಬಲ್ಲದು. ಈ ಆವೃತ್ತಿಯು 550 km ವರೆಗಿನ ಶ್ರೇಣಿಯನ್ನು ಹೊಂದಿದೆ.

ಟಾಪ್‌ ಸ್ಪೆಕ್‌ ಟೆಸ್ಲಾ ಸೈಬರ್‌ ಸ್ರಕ್‌ ಅನ್ನು ಸೈಬರ್‌ ಬೀಸ್ಟ್‌ ಎಂದು ಹೆಸರಿಸಲಾಗಿದೆ. ಇದರ ಟ್ರೈ ಮೋಟಾರ್‌ ಸೆಟಪ್‌, 857 PS ನಷ್ಟು ಸಂಯೋಜಿತ ಔಟ್ಪುಟ್‌ ಅನ್ನು ನೀಡಲಿದ್ದು 14,000 Nm ನಷ್ಟು ಗರಿಷ್ಠ ಟಾರ್ಕ್‌ ಅನ್ನು ಹೊಂದಿದೆ. ಇದು 2.6 ಸೆಕೆಂಡುಗಳಲ್ಲಿ 0-96 kmph ವೇಗವನ್ನು (ರೋಲೌಟ್‌ ಕಳೆದು) ಪಡೆಯುವ ಸಾಮರ್ಥ್ಯವನ್ನು ಹೊಂದಿದ್ದು 515 km ನಷ್ಟು ಅಂದಾಜು ಶ್ರೇಣಿಯನ್ನು ಹೊಂದಿದೆ. ಇದರ ವಿನ್ಯಾಸ ಮತ್ತು ಕಾರ್ಯಕ್ಷಮತೆಯು ಗಮನ ಸೆಳೆದರೂ, ಕಿ.ಮೀ ಶ್ರೇಣಿಯು ಈ ಹಿಂದೆ ಹೇಳಲಾದ 800 km ಗಿಂತ ಸಾಕಷ್ಟು ಕಡಿಮೆ ಇದೆ.

ಪೋರ್ಷ್‌ 911 ಗಿಂತ ಹೆಚ್ಚಿನ ವೇಗ

November 30, 2023

ಟೆಸ್ಲಾ EV ಗಳು ತಮ್ಮ ವೇಗವರ್ಧನೆಗೆ ಹೆಸರುವಾಸಿಯಾಗಿದ್ದು ಡ್ರ್ಯಾಗ್‌ ಸ್ಟ್ರಿಪ್‌ ನಲ್ಲಿ ಪ್ರಾಬಲ್ಯ ಮೆರೆಯುತ್ತವೆ. ಸೈಬರ್‌ ಟ್ರಕ್‌ ಕಾರು ಇದಕ್ಕೆ ಭಿನ್ನವಾಗಿಲ್ಲ. ಈ ಕಾರು ತಯಾರಕ ಸಂಸ್ಥೆಯು ಕಾರ್ಯಕ್ರಮದಲ್ಲಿ ಕ್ಲಿಪ್‌ ಒಂದನ್ನು ಪ್ರದರ್ಶಿಸಿದ್ದು, ಡ್ರ್ಯಾಗ್‌ ಸ್ಟ್ರಿಪ್‌ ಅನ್ನು ಸೈಬರ್‌ ಬೀಸ್ಟ್‌ ಕಾರು ಪೋರ್ಷ್‌ 911 (ಬಹುಶಃ ಬೇಸ್‌ ವೇರಿಯಂಟ್)‌ ಅನ್ನು ಹಿಂದಿಕ್ಕುವುದನ್ನು ಮತ್ತು ಪೋರ್ಷ್‌ 911 ಅನ್ನು ಎಳೆದುಕೊಂಡು ಹೋಗುವುದನ್ನು ಇದರಲ್ಲಿ ಕಾಣಬಹುದು.

ವೇಗದ ಚಾರ್ಜಿಂಗ್

ಟೆಸ್ಲಾ ಸಂಸ್ಥೆಯು ಸೈಬರ್‌ ಟ್ರಕ್‌ ನ ಬ್ಯಾಟರಿ ಪ್ಯಾಕ್‌ ಗಾತ್ರದ ಕುರಿತು ಮಾಹಿತಿಯನ್ನುನೀಡದಿದ್ದರೂ, 250kW ನಷ್ಟು ವೇಗದ ಚಾರ್ಜಿಂಗ್‌ ಗಾಗಿ 800V ಎಲೆಕ್ಟ್ರಿಕಲ್‌ ಸೌಕರ್ಯವನ್ನು ಹೊಂದಿದೆ. ಕೇವಲ 15 ನಿಮಿಷಗಳಲ್ಲಿ 218 km ಶ್ರೇಣಿಯನ್ನು ಸೇರ್ಪಡೆಗೊಳಿಸಲು ಈ ವೇಗವು ಧಾರಾಳವಾಗಿ ಸಾಕು.

ಇದನ್ನು ಸಹ ಓದಿರಿ: ಟೆಸ್ಲಾ ಸಂಸ್ಥೆಯು ಭಾರತಕ್ಕೆ ಯಾವಾಗ ಕಾಲಿಡಲಿದೆ? ಇಲ್ಲಿಯತನಕ ನಮಗೇನು ತಿಳಿದಿದೆ?

ಅತ್ಯಾಧುನಿಕ ವಿನ್ಯಾಸದ ಉಳಿಕೆ

ಟೆಸ್ಲಾ ಸೈಬರ್‌ ಟ್ರಕ್‌ ವಾಹನವು ಅನಾವರಣಗೊಂಡ ಸಂದರ್ಭದಲ್ಲಿ ಇದು ಅಪೋಕಾಲಿಪ್ಟಿಕ್‌ ಫ್ಯೂಚರ್ ವೀಡಿಯೋ ಗೇಮ್‌ ಗಳಿಂದ ಪ್ರಭಾವಿತಗೊಂಡ ಬೆಣೆಯಾಕಾರದ ವಿನ್ಯಾಸವನ್ನು ಹೊಂದಿತ್ತು. ಆದರೆ ಉತ್ಪಾದನೆಗೆ ಸಿದ್ಧಗೊಳ್ಳುವ ಮಾದರಿಯು ಕಾಲಕ್ರಮೇಣ ಹೆಚ್ಚು ನೈಜತೆಯನ್ನು ಪಡೆದುಕೊಳ್ಳಲಿದೆ ಎಂದು ನಾವು ನಿರೀಕ್ಷಿಸಿದ್ದೆವು. ಆದರೆ ತನ್ನ ಕನಸನ್ನು ನನಸಾಗಿಸಲು ಟೆಸ್ಲಾ ಸಂಸ್ಥೆಯು ಸಾಕಷ್ಟು ಸಮಯವನ್ನು ತೆಗೆದುಕೊಂಡಿದ್ದು, ʻಲೋಡಿಂಗ್‌ ಬೇʼಗಾಗಿ ರೋಲಿಂಗ್‌ ಟೋನು ಕವರ್‌ ಅನ್ನು ಬಳಸಿಕೊಂಡಿದೆ. ಇನ್ನೂ ಸಹ ಇದು ದೊಡ್ಡದಾದ ಗ್ಲಾಸ್‌ ರೂಪ್‌ ಅನ್ನು ಹೊಂದಿದ್ದು, ಕನಿಷ್ಠ 432mm ನಷ್ಟು ಗ್ರೌಂಡ್‌ ಕ್ಲೀಯರೆನ್ಸ್‌ ಜೊತೆಗೆ 20 ಇಂಚಿನ ವೀಲ್‌ ಗಳಲ್ಲಿ ಚಲಿಸುತ್ತದೆ. ಮುಂಭಾಗದಲ್ಲಿ ಮತ್ತು ಹಿಂಭಾಗದಲ್ಲಿ LED ಲೈಟಿಂಗ್‌ ಸ್ಟ್ರಿಪ್‌ ಗಳು ಇದ್ದು, ಸುತ್ತಲಿನ ನಯವಾದ ಮೇಲ್ಮೈ ವಿನ್ಯಾಸದಲ್ಲಿ ಯಾವುದೇ ಬ್ರೇಕ್‌ ಕಾಣಸಿಗದು.

ಎಲ್ಲದಕ್ಕೂ ಸೈ

November 30, 2023

ಸೈಬರ್‌ ಟ್ರಕ್‌ ವಾಹನದ ಅನಾವರಣದ ಸಂದರ್ಭದಲ್ಲಿ ಕೇಳಿಬಂದ ಒಂದು ಮಾತೆಂದರೆ, ಇದು ಮಾರುಕಟ್ಟೆಯಲ್ಲಿರುವ ಯಾವುದೇ ವಾಹನಕ್ಕಿಂತ ಹೆಚ್ಚು ಗಡುಸಾಗಿದೆ ಎನ್ನುವುದು. ಈ ಕಾರಣಕ್ಕಾಗಿ ಟೆಸ್ಲಾ ಸಂಸ್ಥೆಯು ಬಾಡಿ ಪ್ಯಾನೆಲ್‌ ಗಳಿಗಾಗಿ ತನ್ನದೇ ಆದ ಸ್ಟೇನ್‌ ಲೆಸ್‌ ಸ್ಟೀಲ್‌ ಸೂಪರ್‌ ಅಲೋಯ್‌ ಅನ್ನು ಅಭಿವೃದ್ಧಿಪಡಿಸಿದ್ದು, ಈ ಪಿಕಪ್‌ ವಾಹನಕ್ಕೆ ಸಾಕಷ್ಟು ಗಡಸುತನ ನೀಡುವುದು ಮಾತ್ರವಲ್ಲದೆ ಈ ವಾಹನವನ್ನು ಗುಂಡು ನಿರೋಧಕ ಮಾದರಿಯಾಗಿಯೂ ರೂಪಿಸಿದೆ. ವಾಹನ ವಿತರಣೆಯ ಸಂದರ್ಭದಲ್ಲಿ, 45 ಕ್ಯಾಲಿಬರ್‌ ಟಾಮಿ ಗನ್‌, ಹ್ಯಾಂಡ್‌ ಗನ್‌ ಮತ್ತು ಸಬ್‌ ಮಶಿನ್‌ ಗನ್‌ ನ ದಾಳಿಯನ್ನು ಸೈಬರ್‌ ಟ್ರಕ್‌ ಸುಲಭವಾಗಿ ತಡೆದುಕೊಳ್ಳುವುದನ್ನು ಟೆಸ್ಲಾ ಸಂಸ್ಥೆಯು ತೋರಿಸಿದೆ. ಈ ಕಾರ್ಯಕ್ರಮದಲ್ಲಿ ಟೆಸ್ಲಾ ಸಂಸ್ಥೆಯ CEO ಎಲನ್‌ ಮಸ್ಕ್‌ ಅವರ ಬಳಿ, ಸೈಬರ್‌ ಟ್ರಕ್‌ ಅನ್ನು ಗುಂಡು ನಿರೋಧಕ ವಾಹನವಾಗಿ ಏಕೆ ತಯಾರಿಸಲಾಗಿದೆ ಎಂದು ಕೇಳಿದಾಗ, ʻʻಏಕೆ ತಯಾರಿಸಬಾರದು?” ಎಂದಷ್ಟೇ ಉತ್ತರಿಸಿದ್ದಾರೆ.

ಟೆಸ್ಲಾ ಸೈಬರ್‌ ಟ್ರಕ್‌ ಕಾರಿನಲ್ಲಿ ಬಳಸಲಾಗಿರುವ ಲೋಹದ ತಗಡು ತುಂಬಾ ಗಟ್ಟಿಯಾಗಿರುವುದರಿಂದ ಇದನ್ನು ಇತರ ಆಕಾರಗಳಾಗಿ ಪರಿವರ್ತಿಸಲು ಸಾಧ್ಯವಾಗದ ಕಾರಣ ಈ ವಾಹನವು ಬೆಣೆಯಾಕಾರದ ಬಾಡಿಯನ್ನು ಹೊಂದಿದೆ. ಅಲ್ಲದೆ ಈ ಸೂಪರ್‌ ಮಿಶ್ರಲೋಹವು ತುಕ್ಕು ಹಿಡಿಯದ ಕಾರಣ ಇದಕ್ಕೆ ಯಾವುದೇ ಬಣ್ಣ ಬಳಿಯುವ ಅಗತ್ಯವೂ ಇಲ್ಲ. ಹೀಗಾಗಿ ತಾಂತ್ರಿಕವಾಗಿ ನೀವು ಸೈಬರ್‌ ಟ್ರಕ್‌ ಅನ್ನು ಒಂದೇ ಹೊರಾಂಗಣ ಬಣ್ಣದಲ್ಲಿ ಖರೀದಿಸಬಹುದು.

ಜತೆಗೆ ಈ ಎಲೆಕ್ಟ್ರಿಕ್‌ ಪಿಕಪ್‌ ವಾಹನವು ಆರ್ಮರ್‌ ಗ್ಲಾಸ್‌ ಜೊತೆಗೆ ಬರಲಿದ್ದು ಬಂಡೆಗಳು ಮತ್ತು ಕಠಿಣ ಹವಾಮಾನದ ಪರಿಣಾಮವನ್ನು ತಾಳಿಕೊಳ್ಳಬಲ್ಲದು. ಇದರೊಂದಿಗೆ ಕ್ಯಾಬಿನ್‌ ನಲ್ಲಿ ಸಾಕಷ್ಟು ನಿಶ್ಯಬ್ದತೆಯನ್ನು ಕಾಪಾಡಿಕೊಳ್ಳಬಹುದು. ಆದರೆ ಈ ದೀರ್ಘ ಬಾಳಿಕೆಯ ವಿನ್ಯಾಸವು ಕೆಲವೊಂದು ಅನನುಕೂಲತೆಗಳನ್ನು ಹೊಂದಿದೆ. ಪ್ರಯಾಣಿಕನ ಪಕ್ಕದಿಂದ ಬಾಗಿಲನ್ನು ತೆರೆಯುವ ವ್ಯವಸ್ಥೆಯು ಇದರಲ್ಲಿಲ್ಲ. ಕೆಲವೊಂದು ಆನ್ಲೈನ್‌ ವರದಿಗಳ ಪ್ರಕಾರ, ಇದನ್ನು ಒಳಗಡೆಯಿಂದ ಚಾಲಕನು ಮಾತ್ರವೇ ತೆರೆಯಬಹುದು ಅಥವಾ ಚಾಲಕನ ಪಕ್ಕದಲ್ಲಿ ಒಳಗಡೆಯ ಡೋರ್‌ ಅನ್‌ ಲಾಕ್‌ ಸಿಸ್ಟಂ ಮೂಲಕ ತೆರೆಯಬಹುದು.

ಪ್ರಾಯೋಗಿಕ ಕೂಡಾ

ಟೆಸ್ಲಾ ಸೈಬರ್‌ ಟ್ರಕ್‌ ಕಾರು ತನ್ನೊಳಗಿರುವ ವಿಶೇಷ ಸೌಕರ್ಯಗಳಿಗಾಗಿ ಮಾತ್ರವೇ ಹೆಸರುವಾಸಿಯಾಗಿಲ್ಲ. ಇದು 4ft ಅಗಲ ಮತ್ತು 6ft ಉದ್ದದ ಸ್ಥಳಾವಕಾಶದೊಂದಿಗೆ ಸುಮಾರು 1,100kg ಯಷ್ಟು ಪೇಲೋಡ್‌ ಸಾಮರ್ಥ್ಯವನ್ನು ಹೊಂದುವ ಮೂಲಕ ನಿಜಕ್ಕೂ ಒಂದು ಪ್ರಾಯೋಗಿಕ ಪಿಕಪ್‌ ಎನಿಸಿದೆ. ಜತೆಗೆ ಫ್ರಂಕ್‌ ನಲ್ಲಿ (ಎಂಜಿನ್‌ ನ ಅನುಪಸ್ಥಿತಿಯಲ್ಲಿ ಮುಂಭಾಗದ ಟ್ರಂಕ್)‌ ಹೆಚ್ಚುವರಿ ಸ್ಥಳಾವಕಾಶವನ್ನು ಹೊಂದಿದೆ. ಲಾಕ್‌ ಮಾಡಬಹುದಾದ ಮುಂಭಾಗದ ಮತ್ತು ಹಿಂಭಾಗದ ಡಿಫೆರೆನ್ಶಿಯಲ್‌ ಗಳ ಜೊತೆಗೆ ಸಾಕಷ್ಟು ಸಾಮರ್ಥ್ಯವನ್ನು ಹೊಂದಿರುವ ಆಫ್‌ ರೋಡ್‌ ವಾಹನವಾಗಿ ಇದು ಗುರುತಿಸಿಕೊಂಡಿದ್ದು, ಚಪ್ಪಟೆಯಾಕಾರದ ಅಂಡರ್‌ ಬಾಡಿಯಿಂದಾಗಿ ತನ್ನ 432mm ಗ್ರೌಂಡ್‌ ಕ್ಲಿಯರೆನ್ಸ್‌ ಅನ್ನು ಇದು ಸಂಪೂರ್ಣವಾಗಿ ಬಳಸಿಕೊಳ್ಳಬಹುದಾಗಿದೆ.

ಅನುಕೂಲಕರ ರೈಡ್‌ ಅನ್ನು ಖಚಿತಪಡಿಸುವುದಕ್ಕಾಗಿ ಪ್ರತಿ ಮೂಲೆಯಲ್ಲಿ ಪ್ರತ್ಯೇಕ ಅಡಾಪ್ಟಿವ್‌ ಏರ್‌ ಸಸ್ಪೆನ್ಶನ್‌ ಅನ್ನು ಇದು ಹೊಂದಿದೆ. ಈ ಎಲೆಕ್ಟ್ರಿಕ್‌ ಪಿಕಪ್‌ ಕಾರು ಸುಧಾರಿತ ಚಾಲನಾ ಅನುಭವಕ್ಕಾಗಿ ಫೋರ್‌ ವೀಲ್‌ ಸ್ಟೀಯರಿಂಗ್‌ ಅನ್ನು ಹೊಂದಿದ್ದು, ಮಾಡೆಲ್‌ S ಸೆಡಾನ್‌ ಗಿಂತಲೂ ಕಿರಿದಾದ ಟರ್ನಿಂಗ್‌ ಸರ್ಕಲ್‌ ಅನ್ನು ಇದು ಹೊಂದಿದೆ ಎಂದು ಟೆಸ್ಲಾವು ಹೇಳಿದೆ.

ಸರಳ ಒಳಾಂಗಣ

ಟೆಸ್ಲಾ ಸೈಬರ್‌ ಟ್ರಕ್‌ ವಾಹನವು ಸರಳ ಒಳಾಂಗಣವನ್ನು ಹೊಂದಿದ್ದು, ಸುತ್ತಲೂ ಆಂಬಿಯೆಂಟ್‌ ಲೈಟಿಂಗ್‌ ಅನ್ನು ಹೊಂದಿದೆ. ಇದು ಚೌಕಾಕಾರದ ಸ್ಟೀಯರಿಂಗ್‌ ವೀಲ್‌ ಅನ್ನು ಹೊಂದಿದ್ದು, AC ವೆಂಟ್‌ ಗಳು ಡ್ಯಾಶ್‌ ಬೋರ್ಡ್‌ ವಿನ್ಯಾಸದಲ್ಲಿ ಅಡಗಿಕೊಂಡಿವೆ. ಆದರೆ 18.5 ಇಂಚಿನಷ್ಟು ದೊಡ್ಡದಾದ ಇನ್ಫೊಟೈನ್‌ ಮೆಂಟ್‌ ಯೂನಿಟ್‌ ಮಾತ್ರ ಎದ್ದು ಕಾಣುತ್ತದೆ. ಹಿಂಭಾಗದಲ್ಲಿ ಕುಳಿತುಕೊಳ್ಳುವ ಪ್ರಯಾಣಿಕರು ಸಹ 9.4 ಇಂಚಿನ ಟಚ್‌ ಸ್ಕ್ರೀನ್‌ ಘಟಕವನ್ನು ಪಡೆಯಲಿದ್ದು ಇದನ್ನು ಸೆಂಟರ್‌ ಕನ್ಸೋಲ್‌ ಟನೆಲ್‌ ನ ಹಿಂಭಾಗದಲ್ಲಿ ಇರಿಸಲಾಗಿದೆ. ವಿವಿಧ ಸಾಧನಗಳ ಚಾರ್ಜಿಂಗ್‌ ಗಾಗಿ ಕ್ಯಾಬಿನ್‌ ನಲ್ಲಿ ಅನೇಕ ಆಯ್ಕೆಗಳಿದ್ದು ಇದರಲ್ಲಿ ವೈರ್‌ ಲೆಸ್‌ ಚಾರ್ಜಿಂಗ್, 65W USB-C ಪೋರ್ಟ್‌ ಗಳು, ಮತ್ತು 120V/240V ಪವರ್‌ ಔಟ್ಲೆಟ್‌ ಗಳು ಒಳಗೊಂಡಿವೆ.

ಜತೆಗೆ, ಕ್ಯಾಬಿನ್‌ ಅನ್ನು ಗಾಳಿಯಿಂದ ಬರುವ ಕಣಗಳಿಂದ ರಕ್ಷಿಸುವುದಕ್ಕಾಗಿ ಟೆಸ್ಲಾ ಸೈಬರ್‌ ಟ್ರಕ್‌ ಕಾರು ಬಿಲ್ಟ್‌ ಇನ್‌ HEPA ಫಿಲ್ಟರ್‌ ಅನ್ನು ಹೊಂದಿದೆ. ಕ್ಯಾಬಿನ್‌ ಅನ್ನು ಸಂಪೂರ್ಣವಾಗಿ ಆವರಿಸುವುದಕ್ಕಾಗಿ ಇದನ್ನು ಸಕ್ರಿಯಗೊಳಿಸಿದಾದ ಇದು ಜೈವಿಕ ಆಯುಧವಾಗಿ ಕೆಲಸ ಮಾಡುತ್ತದೆ ಎಂದು ಟೆಸ್ಲಾ ಸಂಸ್ಥೆಯು ಹೇಳಿಕೊಂಡಿದೆ.

ಸಂಬಂಧಿತ: ಸರಿಯಾದ ಏರ್‌ ಪ್ಯೂರಿಫೈರ್‌ ಹೊಂದಿರುವ ಅತ್ಯಂತ ಅಗ್ಗದ 10 ಕಾರುಗಳಿವು

ಸೈಬರ್‌ ಟ್ರಕಲ್‌ ಬೆಲೆ ಮತ್ತು ವಿತರಣೆ

ಸೈಬರ್‌ ಟ್ರಿಕ್‌ ಕಾರಿನ ಮುಂದಿನ ವಿತರಣೆಯು 2024ರಲ್ಲಿ ಪ್ರಾರಂಭಗೊಳ್ಳಲಿದ್ದು, ಇದರಲ್ಲಿ ಡ್ಯುವಲ್‌ ಮೋಟಾರ್‌ ಮತ್ತು ಟ್ರೈ ಮೋಟಾರ್‌ ಆಲ್‌ ವೀಲ್‌ ಡ್ರೈವ್‌ ವೇರಿಯಂಟ್‌ ಗಳು ಮಾತ್ರವೇ ಸೇರಿಕೊಂಡಿವೆ. ಐಚ್ಛಿಕ ಹೆಚ್ಚುವರಿ ಸಾಧನಗಳನ್ನು ಅಳವಡಿಸುವ ಮೊದಲು ಇದರ ಬೆಲೆಯು ಹೀಗಿರಲಿದೆ:

ಟೆಸ್ಲಾ ಸೈಬರ್‌ ಟ್ರಕ್‌ ವೇರಿಯಂಟ್

USD ಬೆಲೆ

ಭಾರತೀಯ ರೂಪಾಯಿಗೆ ಪರಿವರ್ತಿಸಿದಾಗ

ರಿಯರ್‌ ವೀಲ್‌ ಡ್ರೈವ್

$ 60,990

ರೂ 50.80 ಲಕ್ಷ

ಡ್ಯುವಲ್‌ ಮೋಟಾರ್ AWD

$79,990

ರೂ 66.63 ಲಕ್ಷ

ಸೈಬರ್‌ ಬೀಸ್ಟ್ (AWD)

$99,990

ರೂ 83.29 ಲಕ್ಷ

ಇಲ್ಲಿಯೂ ಸಹ ಟೆಸ್ಲಾ ಸಂಸ್ಥೆಯು ಫುಲಿ ಲೋಡೆಡ್‌ ಸೈಬರ್‌ ಟ್ರಕ್‌ ಗೆ USD 70,000 ನಷ್ಟು ಗರಿಷ್ಠ ಮಿತಿಯ ಬೆಲೆಯನ್ನು ನಿಗದಿಪಡಿಸುವಲ್ಲಿ ವಿಫಲವಾಗಿದೆ. ಇದರ ಪರಿಷ್ಕೃತ ಬೆಲೆಗಳು ಸಮರ್ಥನೀಯವೇ ಎಂಬುದನ್ನು ತಿಳಿದುಕೊಳ್ಳಬೇಕಾದರೆ ಗ್ರಾಹಕರ ಅನುಭವಕ್ಕಾಗಿ ನಾವು ಕಾದು ನಿಲ್ಲಬೇಕು. ಟೆಸ್ಲಾ ಸಂಸ್ಥೆಯು ಒಂದು ವರ್ಷದಲ್ಲಿ 2.5 ಲಕ್ಷದಷ್ಟು ಸೈಬರ್‌ ಟ್ರಕ್‌ ವಾಹನಗಳನ್ನು ತಯಾರಿಸುವ ಉದ್ದೇಶವನ್ನು ಹೊಂದಿದ್ದು, ಈ ಸಾಮರ್ಥ್ಯವನ್ನು ಗಳಿಸಿಕೊಳ್ಳಲು ಸಮಯ ಬೇಕಾದೀತು.

s
ಅವರಿಂದ ಪ್ರಕಟಿಸಲಾಗಿದೆ

sonny

  • 38 ವೀಕ್ಷಣಿಗಳು
  • 0 ಕಾಮೆಂಟ್‌ಗಳು

Write your Comment ನಲ್ಲಿ ಟೆಸ್ಲಾ ಸೈಬರ್ ಟ್ರಕ್

Read Full News

explore ಇನ್ನಷ್ಟು on ಟೆಸ್ಲಾ ಸೈಬರ್ ಟ್ರಕ್

trending ಎಲೆಕ್ಟ್ರಿಕ್ ಕಾರುಗಳು

  • ಪಾಪ್ಯುಲರ್
  • ಉಪಕಮಿಂಗ್
Rs.10.99 - 15.49 ಲಕ್ಷ*
Rs.7.99 - 11.89 ಲಕ್ಷ*
Rs.6.99 - 9.40 ಲಕ್ಷ*
Rs.60.95 - 65.95 ಲಕ್ಷ*
ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ