• English
  • Login / Register

ಟೆಸ್ಲಾ ಸಂಸ್ಥೆಯು ಭಾರತಕ್ಕೆ ಯಾವಾಗ ಕಾಲಿಡಲಿದೆ? ಇಲ್ಲಿಯತನಕದ ಆಪ್‌ಡೇಟ್‌ಗಳ ಕುರಿತು ಒಂದು ನೋಟ..

ಟೆಸ್ಲಾ ಮಾದರಿ 3 ಗಾಗಿ rohit ಮೂಲಕ ನವೆಂಬರ್ 25, 2023 12:55 pm ರಂದು ಪ್ರಕಟಿಸಲಾಗಿದೆ

  • 39 Views
  • ಕಾಮೆಂಟ್‌ ಅನ್ನು ಬರೆಯಿರಿ

ಭಾರತ ನಿರ್ಮಿತ EV ಕಾರುಗಳನ್ನು ತಯಾರಿಸುವುದಕ್ಕಾಗಿ ಟೆಸ್ಲಾ ಸಂಸ್ಥೆಯು ಮುಂದಿನ ಎರಡು ವರ್ಷಗಳಲ್ಲಿ ಸ್ಥಳೀಯ ಉತ್ಪಾದನಾ ಘಟಕವನ್ನು ಸ್ಥಾಪಿಸಲಿದೆ.

Tesla cars

 ಜೂನ್ 2023ರಲ್ಲಿ ಭಾರತದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಅಮೆರಿಕಕ್ಕೆ ಭೇಟಿ ನೀಡಿದಾಗ ಟೆಸ್ಲಾ ಸಂಸ್ಥೆಯ ಸ್ಥಾಪಕರಾದ ಎಲನ್‌ ಮಸ್ಕ್‌ ಅವರು ಪ್ರಧಾನಿಯವರನ್ನು ಭೇಟಿಯಾಗಿ ತನ್ನ EV ಸಂಸ್ಥೆಯು ಭಾರತಕ್ಕೆ ಕಾಲಿಡುವುದಾಗಿ ಘೋಷಿಸಿದ್ದರು. ಇದೀಗ ನವೆಂಬರ್‌ ತಿಂಗಳು ಮುಗಿಯುತ್ತಾ ಬಂದಿದ್ದು ಟೆಸ್ಲಾದ ವಿಷಯದಲ್ಲಿ ಇನ್ನಷ್ಟು ಬೆಳವಣಿಗೆಗಳು ಉಂಟಾಗಿವೆ. ಟೆಸ್ಲಾ ಸಂಸ್ಥೆಯು ಭಾರತಕ್ಕೆ ಬರುವ ವಿಷಯದಲ್ಲಿ ಏನೆಲ್ಲ ಪ್ರಗತಿ ಉಂಟಾಗಿವೆ ಎನ್ನುವ ಕುರಿತ ಮಾಹಿತಿ ಇಲ್ಲಿದೆ:

ಆಮದು ತೆರಿಗೆಗಳಲ್ಲಿ ಸಂಭಾವ್ಯ ಕಡಿತ

 ಭಾರತೀಯ ಸರ್ಕಾರದ ಆಮದು ದರದ ಕುರಿತು ದೀರ್ಘ ಕಾಲದಿಂದ ಚರ್ಚೆಗಳು ನಡೆಯುತ್ತಿದ್ದು ಈ EV ತಯಾರಕ ಸಂಸ್ಥೆಯು ಭಾರತಕ್ಕೆ ಬರುವುದನ್ನು ವಿಳಂಬಿಸಲು ಇದೂ ಸಹ ಒಂದು ಪ್ರಮುಖ ಕಾರಣವಾಗಿದೆ. ಆದರೆ ಈಗ ಐದು ವರ್ಷಗಳ ಕಾಲ ತೆರಿಗೆ ಕಡಿತಗೊಳಿಸಲು ಭಾರತೀಯ ಅಧಿಕಾರಿಗಳು ಘೋಷಿಸಿರುವ ಕಾರಣ ಟೆಸ್ಲಾದಂತಹ ಜಾಗತಿಕ ಬ್ರಾಂಡುಗಳ ಲಾಭ ಗಳಿಸಲಿವೆ. ಆದರೆ EV ಕಾರು ತಯಾರಕ ಸಂಸ್ಥೆಗಳು ಭಾರತದಲ್ಲಿ ಸ್ಥಳೀಯ ಉತ್ಪಾದನಾ ಘಟಕವನ್ನು ತೆರೆಯಬೇಕು.

ಸದ್ಯವೇ ಸ್ಥಳೀಯ ಉತ್ಪಾದನಾ ಘಟಕ

 ಅಮೆರಿಕಾದ EV ಕಾರು ಉತ್ಪಾದನಾ ಘಟಕವು ಮುಂದಿನ ಎರಡು ವರ್ಷಗಳೊಳಗೆ ಭಾರತದಲ್ಲಿ ಸ್ಥಳೀಯ ಘಟಕವನ್ನು ಸ್ಥಾಪಿಸುವ ಕುರಿತು ಮಾತುಕತೆಗಳು ನಡೆಯುತ್ತಿವೆ. ಟೆಸ್ಲಾ ಸಂಸ್ಥೆಯನ್ನು ಸ್ಥಾಪಿಸುವ ಕುರಿತು ಗುಜರಾತ್‌, ಮಹಾರಾಷ್ಟ್ರ ಮತ್ತು ತಮಿಳುನಾಡು ರಾಜ್ಯಗಳ ಹೆಸರುಗಳು ಕೇಳಿಬರುತ್ತಿದ್ದು, ರೂ. 16,000 ಕೋಟಿಯಷ್ಟು ಹೂಡಿಕೆ ಹರಿದುಬರುವ ಸಾಧ್ಯತೆ ಇದೆ.

ಮೊದಲ ಕೆಲವು ಮಾದರಿಗಳ ಆಮದು

 ಭಾರತದಲ್ಲಿ ಉತ್ಪಾದನಾ ಘಟಕವನ್ನು ಸ್ಥಾಪಿಸಲು ಟೆಸ್ಲಾ ಸಂಸ್ಥೆಗೆ ಸ್ವಲ್ಪ ಕಾಲಾವಕಾಶ ಬೇಕಾಗುವ ಕಾರಣ ಈ EV ಸಂಸ್ಥೆಯು ಇದರ ಕೆಲವು ಜಾಗತಿಕ ಉತ್ಪನ್ನಗಳನ್ನು ಅರಂಭದಲ್ಲಿ ಆಮದು ಮಾಡಿಕೊಳ್ಳುವ ಸಾಧ್ಯತೆ ನಿಚ್ಚಳವಾಗಿದೆ. ಇದು ಚೀನಾದಿಂದ ಎಲೆಕ್ಟ್ರಿಕ್‌ ಕಾರುಗಳನ್ನು ತರುವ ಉದ್ದೇಶವನ್ನು ಹೊಂದಿದ್ದರೂ, ಎರಡು ರಾಷ್ಟ್ರಗಳ ನಡುವಿನ ಇತ್ತೀಚಿನ ಗಡಿ ಘರ್ಷಣೆಯ ನಂತರ ಟೆಸ್ಲಾ ಸಂಸ್ಥೆಯು ಜರ್ಮನಿಯಲ್ಲಿರುವ ತನ್ನ ಘಟಕದಿಂದ ಕಾರಿನ ಮಾದರಿಗಳನ್ನು ಇಲ್ಲಿಗೆ ತರಲು ಉದ್ದೇಶಿಸಿದೆ.

ಇದನ್ನು ಸಹ ಓದಿರಿ: ಮಹೀಂದ್ರಾ XUV.e8 ನ ಕ್ಯಾಬಿನ್‌ ಅನ್ನೇ ಹೊಂದಿರಲಿರುವ ಮಹೀಂದ್ರಾ XUV.e9

 

ಹೊಸ EV ಯ ತಯಾರಿ

ಟೆಸ್ಲಾ ಸಂಸ್ಥೆಯು ಅಭಿವೃದ್ಧಿಪಡಿಸುತ್ತಿರುವ ಆರಂಭಿಕ ಹಂತದ ಹೊಸ ಎಲೆಕ್ಟ್ರಿಕ್‌ ಕಾರಿನ ಕುರಿತು 2023ರ ಆರಂಭದಲ್ಲಿ ನಮಗೆ ಮಾಹಿತಿ ಸಿಕ್ಕಿತ್ತು. ಮುಂಬರುವ ಈ EV ಯು ಟೆಸ್ಲಾದ ಅತ್ಯಂತ ಸಣ್ಣ ಮತ್ತು ವೆಚ್ಚ ಪರಿಣಾಮಕಾರಿ ಮಾದರಿ ಎನಿಸಿದ್ದು ಇದಕ್ಕೆ  ‘ಮಾಡೆಲ್ 2‌ ʼ ಎಂದು ಹೆಸರಿಡಲಾಗುವುದು.  ಟೀಸರ್‌ ಅನ್ನು ಗಮನಿಸಿದಾಗ ಕಡಿದಾದ ರೂಫ್‌ ಲೈನ್‌ ಮತ್ತು ಎದ್ದು ಕಾಣುವ ಶೋಲ್ಡರ್‌ ಲೈನ್‌ ಮೂಲಕ ಎತ್ತರದ ಕ್ರಾಸ್‌ ಓವರ್‌ ನಂತೆ ಕಾಣಿಸಿಕೊಳ್ಳುತ್ತದೆ. ಇದರ ವಿನ್ಯಾಸವನ್ನು ಟೆಸ್ಲಾದ ವಾಹನಗಳಾದ ಮಾಡೆಲ್ Y ಮತ್ತು ಮಾಡೆಲ್ 3‌ ಯಿಂದ ಎರವಲು ಪಡೆಯುವ ಸಾಧ್ಯತೆ ಇದೆ.

ಭಾರತಕ್ಕೆ ಯಾವ ಕಾರು ಮೊದಲಿಗೆ ಬರಲಿದೆ?

ನಮ್ಮ ಪ್ರಕಾರ ಟೆಸ್ಲಾ ಮಾಡೆಲ್‌ 3 ಮತ್ತು ಟೆಸ್ಲಾ ಮಾಡೆಲ್‌ Y ಕಾರುಗಳು ಆಮದು ಪಥದ ಮೂಲಕ ಭಾರತಕ್ಕೆ ಬರಲಿವೆ. ಕೆಲ ಸಮಯದ ಮೊದಲು ಈ ಎರಡೂ ಕಾರುಗಳು ಪರೀಕ್ಷಾರ್ಥ ಓಡಾಟದ ವೇಳೆ ಕಾಣಸಿಕ್ಕಿವೆ. ವರದಿಗಳನ್ನು ನಂಬುವುದಾದರೆ ಟೆಸ್ಲಾ ಸಂಸ್ಥೆಯು ಸಣ್ಣದಾದ ಭಾರತ ನಿರ್ಮಿತ EV ಯೊಂದನ್ನು ಇಲ್ಲಿ ಪರಿಚಯಿಸಲಿದ್ದು ಇದರ ಬೆಲೆಯು ರೂ. 20 ಲಕ್ಷದ ಆಸುಪಾಸಿನಲ್ಲಿ (ಎಕ್ಸ್‌ - ಶೋರೂಂ) ಇರಲಿದೆ.

ನೀವು ಟೆಸ್ಲಾ ಕಾರುಗಳನ್ನು ಭಾರತದ ರಸ್ತೆಗಳಲ್ಲಿ ಯಾವಾಗ ನೋಡಲು ಇಚ್ಛಿಸುತ್ತೀರಿ ಮತ್ತು ನಿಮ್ಮ ಪ್ರಕಾರ ಯಾವ ಕಾರು ಇಲ್ಲಿಗೆ ಮೊದಲಿಗೆ ಬರಬೇಕು? ನಿಮ್ಮ ಪ್ರತಿಕ್ರಿಯೆಗಳನ್ನು ನಮಗೆ ತಿಳಿಸಿರಿ.

was this article helpful ?

Write your Comment on Tesla Model 3

explore similar ಕಾರುಗಳು

ಕಾರು ಸುದ್ದಿ

  • ಟ್ರೆಂಡಿಂಗ್ ಸುದ್ದಿ
  • ಇತ್ತಿಚ್ಚಿನ ಸುದ್ದಿ

trending ಎಲೆಕ್ಟ್ರಿಕ್ ಕಾರುಗಳು

  • ಪಾಪ್ಯುಲರ್
  • ಉಪಕಮಿಂಗ್
×
We need your ನಗರ to customize your experience