• English
  • Login / Register

2025 ರ ಆಟೋ ಎಕ್ಸ್‌ಪೋದಲ್ಲಿ 3.25 ಲಕ್ಷ ರೂ.ಗಳ ಬೆಲೆಗೆ Vayve Eva ಬಿಡುಗಡೆ

ವೇವ್ ಮೊಬಿಲಿಟಿ eva ಗಾಗಿ dipan ಮೂಲಕ ಜನವರಿ 21, 2025 07:06 pm ರಂದು ಪ್ರಕಟಿಸಲಾಗಿದೆ

  • 43 Views
  • ಕಾಮೆಂಟ್‌ ಅನ್ನು ಬರೆಯಿರಿ

ವೇವ್ ಇವಿ ತನ್ನ ರೂಫ್‌ನ ಮೇಲಿನ ಸೋಲಾರ್‌ ಪ್ಯಾನಲ್‌ಗಳ ಮೂಲಕ ಪ್ರತಿದಿನ 10 ಕಿ.ಮೀ ದೂರ ಕ್ರಮಿಸುವಷ್ಟು ಚಾರ್ಜ್‌ ಮಾಡಿಕೊಳ್ಳಬಹುದು

Vayve Eva Launched At Auto Expo 2025 At Rs 3.25 Lakh

  • ಸುತ್ತಿನ ಎಲ್‌ಇಡಿ ಹೆಡ್‌ಲೈಟ್‌ಗಳು, ಟೈಲ್ ಲೈಟ್‌ಗಳು ಮತ್ತು 13-ಇಂಚಿನ ವೀಲ್‌ಗಳೊಂದಿಗೆ ಹೊರಗೆ ಸಿಂಪಲ್‌  ವಿನ್ಯಾಸವನ್ನು ಪಡೆಯುತ್ತದೆ.

  • ಇಂಟೀರಿಯರ್‌ ಸಹ ಸರಳವಾಗಿದ್ದು, ಡ್ಯುಯಲ್ ಡಿಜಿಟಲ್ ಡಿಸ್‌ಪ್ಲೇಗಳು ಮತ್ತು ಮೂರು ಆಸನಗಳನ್ನು ಹೊಂದಿದೆ.

  • ಇತರ ಫೀಚರ್‌ಗಳಲ್ಲಿ ಮ್ಯಾನುವಲ್ ಎಸಿ ಮತ್ತು 6-ರೀತಿಯಲ್ಲಿ ಎಲೆಕ್ಟ್ರಿಕಲ್‌ ಆಗಿ ಹೊಂದಾಣಿಕೆ ಮಾಡಬಹುದಾದ ಚಾಲಕ ಸೀಟು ಸೇರಿವೆ.

  • ಸುರಕ್ಷತಾ ಸೂಟ್ ಚಾಲಕನ ಏರ್‌ಬ್ಯಾಗ್ ಮತ್ತು ಎರಡೂ ಪ್ರಯಾಣಿಕರಿಗೆ 3-ಪಾಯಿಂಟ್ ಸೀಟ್‌ಬೆಲ್ಟ್‌ಗಳನ್ನು ಒಳಗೊಂಡಿದೆ.

  • 250 ಕಿ.ಮೀ ವರೆಗಿನ ಕ್ಲೈಮ್‌ ಮಾಡಿದ ರೇಂಜ್‌ನೊಂದಿಗೆ ಬಹು ಬ್ಯಾಟರಿ ಪ್ಯಾಕ್ ಆಯ್ಕೆಗಳೊಂದಿಗೆ ಬರುತ್ತದೆ.

  • ಇದು ಪ್ರತಿ ಕಿ.ಮೀ.ಗೆ 2 ರೂ. ಶುಲ್ಕ ವಿಧಿಸುವ ಬ್ಯಾಟರಿ ಚಂದಾದಾರಿಕೆ ಯೋಜನೆಯೊಂದಿಗೆ ಬರುತ್ತದೆ.

ಭಾರತದ ಮೊದಲ ಸೌರಶಕ್ತಿ ಚಾಲಿತ ಕಾರು ಆಗಿರುವ ವೇವ್ ಇವಾವನ್ನು ಭಾರತ್ ಮೊಬಿಲಿಟಿ ಗ್ಲೋಬಲ್ ಎಕ್ಸ್‌ಪೋ 2025 ರಲ್ಲಿ 3.25 ಲಕ್ಷ ರೂ.ಗಳಿಗೆ (ಎಕ್ಸ್-ಶೋರೂಂ) ಬಿಡುಗಡೆ ಮಾಡಲಾಗಿದೆ. ಇದನ್ನು ಮೊದಲು ಆಟೋ ಎಕ್ಸ್‌ಪೋ 2023 ರಲ್ಲಿ ಅದರ ಪರಿಕಲ್ಪನೆಯ ಅವತಾರದಲ್ಲಿ ಪ್ರದರ್ಶಿಸಲಾಯಿತು ಮತ್ತು ಭಾರತೀಯ ಮೂಲದ ಈ ಕಾರು ತಯಾರಕರು ಇದನ್ನು ಅದರ ಉತ್ಪಾದನಾ-ಸ್ಪೆಕ್ ಅವತಾರದಲ್ಲಿ ಪ್ರದರ್ಶಿಸಿದ್ದಾರೆ. ಇದು ನೋವಾ, ಸ್ಟೆಲಾ ಮತ್ತು ವೆಗಾ ಎಂಬ ಮೂರು ವೇರಿಯೆಂಟ್‌ಗಳಲ್ಲಿ ಬರುತ್ತದೆ. ವೇವ್ ಇವಾದ ವೇರಿಯೆಂಟ್‌ವಾರು ಬೆಲೆಗಳು ಇಲ್ಲಿವೆ:

ವೇರಿಯೆಂಟ್‌

ಬ್ಯಾಟರಿ ಬಾಡಿಗೆ ಯೋಜನೆಯೊಂದಿಗೆ*

ಬ್ಯಾಟರಿ ಬಾಡಿಗೆ ಯೋಜನೆ ಇಲ್ಲದೆ

ನೋವಾ

3.25 ಲಕ್ಷ ರೂ.

3.99 ಲಕ್ಷ ರೂ.

ಸ್ಟೆಲ್ಲಾ

3.99 ಲಕ್ಷ ರೂ.

4.99 ಲಕ್ಷ ರೂ.

ವೆಗಾ

4.49 ಲಕ್ಷ ರೂ.

5.99 ಲಕ್ಷ ರೂ.

*ಬ್ಯಾಟರಿ ಪ್ಯಾಕ್‌ಗೆ ಚಂದಾದಾರಿಕೆ ವೆಚ್ಚವು ಪ್ರತಿ ಕಿಲೋಮೀಟರ್‌ಗೆ ರೂ 2 ಆಗಿದೆ. ಪರಿಣಾಮವಾಗಿ, ನೀವು ಬ್ಯಾಟರಿ ಪ್ಯಾಕ್ ಖರೀದಿಸದ ಕಾರಣ, ಇದು EV ಯ ಆರಂಭಿಕ ವೆಚ್ಚವನ್ನು ಕಡಿಮೆ ಮಾಡುತ್ತದೆ. ಆದರೂ, ನೀವು ಇವಾವನ್ನು ಓಡಿಸದಿದ್ದರೂ ಸಹ, ನೀವು ಓಡಿಸಬೇಕಾದ ಕಿಲೋಮೀಟರ್‌ಗಳ ಮೇಲೆ ವಾಹನ ತಯಾರಕರು ಕನಿಷ್ಠ ಮಿತಿಯನ್ನು ಹಾಕಿದ್ದಾರೆ. ಆರಂಭಿಕ ಹಂತದ ನೋವಾ ವೇರಿಯೆಂಟ್‌ಗೆ ಇದು 600 ಕಿ.ಮೀ., ಸ್ಟೆಲ್ಲಾಗೆ ಇದು 800 ಕಿ.ಮೀ. ಮತ್ತು ವೇಗಾ ಟ್ರಿಮ್‌ಗೆ ಇದು 1200 ಕಿ.ಮೀ.

ವೇವ್ ಇವಾ ಇವಿ ಬಗ್ಗೆ ನೀವು ತಿಳಿದುಕೊಳ್ಳಬೇಕಾದ ಎಲ್ಲವೂ ಇಲ್ಲಿದೆ:

ಎಕ್ಸ್‌ಟೀರಿಯರ್‌

Vayve EVA side

ವೇವ್ ಇವಾ ಕಾರು ಮಹೀಂದ್ರಾ e2O ಮತ್ತು ರೇವಾ ಕಾರುಗಳಿಗೆ ಹೋಲುವ ವಿನ್ಯಾಸವನ್ನು ಹೊಂದಿದೆ, ಆದರೂ ಆಧುನಿಕ ಶೈಲಿಯ ಅಂಶಗಳನ್ನು ಹೊಂದಿದೆ. ಇದು ಕನೆಕ್ಟೆಡ್‌ ಎಲ್‌ಇಡಿ ಡಿಆರ್‌ಎಲ್‌ಗಳು ಮತ್ತು ವೃತ್ತಾಕಾರದ ಹೆಡ್‌ಲೈಟ್‌ಗಳನ್ನು ಪಡೆಯುತ್ತದೆ. ಗ್ರಿಲ್ ಖಾಲಿಯಾಗಿದೆ ಮತ್ತು ಬ್ಯಾಟರಿ ಪ್ಯಾಕ್ ಮತ್ತು ಎಲೆಕ್ಟ್ರಿಕಲ್‌ಗಳನ್ನು ತಂಪಾಗಿಸಲು ಬಂಪರ್‌ನಲ್ಲಿ ಏರ್‌ ಇನ್ಲೆಟ್‌ ಚಾನಲ್‌ಗಳಿವೆ.

Vayve Eva roof with solar panel

ಇದು 13-ಇಂಚಿನ ಎರೋಡೈನಾಮಿಕ್‌ ಆಗಿ ವಿನ್ಯಾಸಗೊಳಿಸಲಾದ ಚಕ್ರಗಳು ಮತ್ತು ಎರಡೂ ಬದಿಗಳಲ್ಲಿ ಬಾಗಿಲುಗಳೊಂದಿಗೆ ಬರುತ್ತದೆ. ಇವಿಯ ಕೆಳಗಿನ ಭಾಗವು ಆಕ್ರಮಣಕಾರಿ ಕಟ್ ಅನ್ನು ಹೊಂದಿದ್ದು, ಬಾಡಿಯನ್ನು ಎರಡು ಭಾಗಗಳಾಗಿ ವಿಂಗಡಿಸಲಾಗಿದೆ ಎಂದು ಕಾಣುತ್ತದೆ. ರೂಫ್‌ನ ಮೇಲೆ ಸೋಲಾರ್‌ ಪ್ಯಾನಲ್‌ಇದ್ದು, ಇದು ಸೌರಶಕ್ತಿಯ ಮೂಲಕ ಇವಿಯನ್ನು ಚಾರ್ಜ್ ಮಾಡಲು ಅನುವು ಮಾಡಿಕೊಡುತ್ತದೆ.

ಹಿಂಭಾಗದ ವಿನ್ಯಾಸವು ಸರಳವಾಗಿದೆ ಮತ್ತು ಹಿಂಭಾಗದಲ್ಲಿ ಎರಡು ಬಣ್ಣಗಳ ನಡುವೆ LED ಟೈಲ್ ಲೈಟ್ ಸ್ಟ್ರಿಪ್‌ನೊಂದಿಗೆ ಬದಿಯಾಗಿ ಡ್ಯುಯಲ್-ಟೋನ್ ವಿನ್ಯಾಸವನ್ನು ಹೊಂದಿದೆ.

ಇಂಟೀರಿಯರ್‌

Vayve Eva front seat
Vayve Eva rear seats

 ಒಳಭಾಗದಲ್ಲಿ, ಇದು ಚಾಲಕನ ಸೀಟಿನ ಹಿಂದೆ ಎರಡು ಪ್ರಯಾಣಿಕರ ಸೀಟುಗಳನ್ನು ಹೊಂದಿದ್ದು, ಮೂರು ಸೀಟ್‌ಗಳನ್ನು ಪಡೆಯುತ್ತದೆ. ಇದು ಡ್ಯಾಶ್‌ಬೋರ್ಡ್‌ನಲ್ಲಿ ಎರಡು ಡಿಸ್‌ಪ್ಲೇಗಳೊಂದಿಗೆ ಬರುತ್ತದೆ, ಒಂದು ಇನ್ಸ್‌ಟ್ರುಮೆಂಟೇಶನ್‌ಗಾಗಿ ಮತ್ತು ಇನ್ನೊಂದು ಟಚ್‌ಸ್ಕ್ರೀನ್‌ಗಾಗಿ. ಸ್ಟೀರಿಂಗ್ ವೀಲ್ 2-ಸ್ಪೋಕ್ ವಿನ್ಯಾಸವನ್ನು ಹೊಂದಿದೆ. ಟಚ್‌ಸ್ಕ್ರೀನ್ ಕೆಳಗೆ ಮ್ಯಾನ್ಯುವಲ್‌ AC ಗಾಗಿ ಕಂಟ್ರೋಲ್‌ಗಳಿವೆ. ಇದನ್ನು ಹೊರತುಪಡಿಸಿ, ಡೋರ್‌ ಹ್ಯಾಂಡಲ್‌ಗಳು ಮತ್ತು ಸ್ಟೋರೇಜ್‌ ಸ್ಥಳಗಳು ಸೇರಿದಂತೆ ಕ್ಯಾಬಿನ್‌ನಲ್ಲಿ ಉಳಿದೆಲ್ಲವೂ ಬೇಸಿಕ್‌ ಆಗಿದೆ. 

ಫೀಚರ್‌ಗಳು ಮತ್ತು ಸುರಕ್ಷತೆ

Vayve EVA dashboard

ಇದು ಬೇಸಿಕ್‌ ಇವಿ ಆಗಿದ್ದರೂ ಸಹ, ಇದು ಡ್ಯುಯಲ್ ಡಿಜಿಟಲ್ ಡಿಸ್‌ಪ್ಲೇಗಳು (ಮೇಲೆ ಹೇಳಿದಂತೆ), 6-ವೇ ವಿದ್ಯುತ್ ಹೊಂದಾಣಿಕೆ ಮಾಡಬಹುದಾದ ಚಾಲಕ ಸೀಟು ಮತ್ತು ಫಿಕ್ಸ್‌ಡ್‌ ಗ್ಲಾಸ್‌ ರೂಫ್‌ನಂತಹ ಫೀಚರ್‌ಗಳನ್ನು ಪಡೆಯುತ್ತದೆ. ಸುರಕ್ಷತಾ ದೃಷ್ಟಿಯಿಂದ, ಇದು ಚಾಲಕನಿಗೆ ಏರ್‌ಬ್ಯಾಗ್ ಮತ್ತು ಇಬ್ಬರು ಪ್ರಯಾಣಿಕರಿಗೆ 3-ಪಾಯಿಂಟ್ ಸೀಟ್‌ಬೆಲ್ಟ್‌ಗಳನ್ನು ಪಡೆಯುತ್ತದೆ.

ಎಲೆಕ್ಟ್ರಿಕ್ ಪವರ್‌ಟ್ರೈನ್

Vayve Eva rear

ಆಯ್ಕೆಮಾಡಿದ ವೇರಿಯೆಂಟ್‌ಗಳ ಆಧಾರದ ಮೇಲೆ ವೇವ್ ಇವಾ ಬಹು ಬ್ಯಾಟರಿ ಪ್ಯಾಕ್ ಆಯ್ಕೆಗಳೊಂದಿಗೆ ಬರುತ್ತದೆ. ಇದರ ವಿವರವಾದ ವಿಶೇಷಣಗಳು ಈ ಕೆಳಗಿನಂತಿವೆ:

ವೇರಿಯೆಂಟ್‌

ನೊವಾ

ಸ್ಟೆಲ್ಲಾ

ವೆಗಾ

ಬ್ಯಾಟರಿ ಪ್ಯಾಕ್‌

9 ಕಿ.ವ್ಯಾಟ್‌

14 ಕಿ.ವ್ಯಾಟ್‌

18 ಕಿ.ವ್ಯಾಟ್‌

ಎಲೆಕ್ಟ್ರಿಕ್ ಮೋಟರ್‌ಗಳ ಸಂಖ್ಯೆ

1

1

1

ಪವರ್‌

16 ಪಿಎಸ್‌

16 ಪಿಎಸ್‌

20 ಪಿಎಸ್‌

ಡ್ರೈವ್‌ಟ್ರೈನ್‌

RWD

RWD

RWD

ಕ್ಲೈಮ್‌ ಮಾಡಲಾದ ರೇಂಜ್‌

125 ಕಿ.ಮೀ.

175 ಕಿ.ಮೀ.

250 ಕಿ.ಮೀ.

ವೇವ್ ಇವಾ ಸೌರಶಕ್ತಿಯಿಂದ ಚಾರ್ಜ್ ಆಗಬಲ್ಲದು, ಇದು ಪ್ರತಿದಿನ 10 ಕಿ.ಮೀ ವರೆಗೆ ಹೆಚ್ಚುವರಿ ರೇಂಜ್‌ ಅನ್ನು ನೀಡುತ್ತದೆ.

ಪ್ರತಿಸ್ಪರ್ಧಿಗಳು

Vayve Eva rear

ಇದು ಭಾರತದಲ್ಲಿ ಯಾವುದೇ ಪ್ರತಿಸ್ಪರ್ಧಿಗಳಿಲ್ಲದ ವಿಶಿಷ್ಟ ಕಾರು ಆಗಿದೆ. ಆದರೂ, ಇದನ್ನು MG ಕಾಮೆಟ್ EV ಗೆ ಕೈಗೆಟುಕುವ ಪರ್ಯಾಯವೆಂದು ಪರಿಗಣಿಸಬಹುದು. 

was this article helpful ?

Write your Comment on Vayve Mobility eva

17 ಕಾಮೆಂಟ್ಗಳು
1
A
ashish yadav
Jan 24, 2025, 4:12:19 PM

Delar ship lene k liye kisse contact krna hoga.plz cnfrm

Read More...
    ಪ್ರತ್ಯುತ್ತರ
    Write a Reply
    1
    R
    roopkumar
    Jan 24, 2025, 3:56:59 PM

    Delar ship lene k liye kisse contact krna hoga.plz cnfrm

    Read More...
      ಪ್ರತ್ಯುತ್ತರ
      Write a Reply
      1
      G
      gulistan
      Jan 24, 2025, 2:57:29 PM

      Want this from Lucknow

      Read More...
        ಪ್ರತ್ಯುತ್ತರ
        Write a Reply

        explore ಇನ್ನಷ್ಟು on ವೇವ್ ಮೊಬಿಲಿಟಿ eva

        Similar cars to compare & consider

        ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ

        ಕಾರು ಸುದ್ದಿ

        • ಟ್ರೆಂಡಿಂಗ್ ಸುದ್ದಿ
        • ಇತ್ತಿಚ್ಚಿನ ಸುದ್ದಿ

        trending ಎಲೆಕ್ಟ್ರಿಕ್ ಕಾರುಗಳು

        • ಪಾಪ್ಯುಲರ್
        • ಉಪಕಮಿಂಗ್
        • ಹೊಸ ವೇರಿಯೆಂಟ್
          ಮಹೀಂದ್ರ be 6
          ಮಹೀಂದ್ರ be 6
          Rs.18.90 - 26.90 ಲಕ್ಷಅಂದಾಜು ದಾರ
          ಮಾರಚ್‌, 2025: ನಿರೀಕ್ಷಿತ ಲಾಂಚ್‌
        • ಹೊಸ ವೇರಿಯೆಂಟ್
          ಮಹೀಂದ್ರ xev 9e
          ಮಹೀಂದ್ರ xev 9e
          Rs.21.90 - 30.50 ಲಕ್ಷಅಂದಾಜು ದಾರ
          ಮಾರಚ್‌, 2025: ನಿರೀಕ್ಷಿತ ಲಾಂಚ್‌
        • ಆಡಿ ಕ್ಯೂ6 ಈ-ಟ್ರಾನ್
          ಆಡಿ ಕ್ಯೂ6 ಈ-ಟ್ರಾನ್
          Rs.1 ಸಿಆರ್ಅಂದಾಜು ದಾರ
          ಮಾರಚ್‌, 2025: ನಿರೀಕ್ಷಿತ ಲಾಂಚ್‌
        • ಮಹೀಂದ್ರ xev 4e
          ಮಹೀಂದ್ರ xev 4e
          Rs.13 ಲಕ್ಷಅಂದಾಜು ದಾರ
          ಮಾರಚ್‌, 2025: ನಿರೀಕ್ಷಿತ ಲಾಂಚ್‌
        • ಮಾರುತಿ e vitara
          ಮಾರುತಿ e vitara
          Rs.17 - 22.50 ಲಕ್ಷಅಂದಾಜು ದಾರ
          ಮಾರಚ್‌, 2025: ನಿರೀಕ್ಷಿತ ಲಾಂಚ್‌
        ×
        We need your ನಗರ to customize your experience