ವೋಕ್ಸ್ವ್ಯಾಗನ್ ID.3 ಯನ್ನು ಬಹಿರಂಗಪಡಿಸಿದ್ದಾರೆ, ಇದು ಪೂರ್ಣ ಎಲೆಕ್ಟ್ರಿಕ್ ಉತ್ಪನ್ನ ವಾಹನವಾಗಿದೆ, ಫ್ರಾಂಕಫುರ್ಟ್ ನಲ್ಲಿ.

published on ಸೆಪ್ಟೆಂಬರ್ 13, 2019 11:40 am by dhruv

  • 11 Views
  • ಕಾಮೆಂಟ್‌ ಅನ್ನು ಬರೆಯಿರಿ

ವೋಕ್ಸ್ವ್ಯಾಗನ್ ID.3 ಯನ್ನು ಮೂರೂ ವಿಭಿನ್ನ ಬ್ಯಾಟರಿ ಪ್ಯಾಕ್ ಗಳಲ್ಲಿ ಪಡೆಯಬಹುದು ಅದರ  ಡ್ರೈವ್ ವ್ಯಾಪ್ತಿ  550km ವೆರೆಗೂ ಇದೆ.

Volkswagen Reveals ID.3, An All-electric Production Vehicle, At Frankfurt

  • ID.3 ಒಂದು  EV  ಹ್ಯಾಚ್ ಬ್ಯಾಕ್ ಆಗಿದೆ ಮತ್ತು ಅದನ್ನು MEB ವೇದಿಕೆಯಲ್ಲಿ ಮಾಡಲಾಗಿದೆ 
  • ಆನ್ ಬೋರ್ಡ್ ಎಲೆಕ್ಟ್ರಿಕ್ ಮೋಟಾರ್ ಗರಿಷ್ಟ  204PS  ಪವರ್ ಮತ್ತು 310Nm ಟಾರ್ಕ್  ಕೊಡುತ್ತದೆ. 
  • ಬತೇರಿ ಪ್ಯಾಕ್ ಮೂರೂ ಕ್ಯಾಪಾಸಿಟಿ ಯಲ್ಲಿ ದೊರೆಯುತ್ತದೆ:  45kWh, 58kWh ಮತ್ತು  77kWh.
  • ಟಾಪ್ ಸ್ಪೀಡ್ 45kWh and 58kWh ಆವೃತ್ತಿಗಳಿಗೆ 160kmph ವರೆಗೂ ಇದೆ. 
  • ಇದನ್ನು ಶೀಘ್ರವಾಗಿ ಚಾರ್ಜ್ ಮಾಡಬಹುದು ರೇಂಜ್ 290km ಕೇವಲ 30 ನಿಮಿಷದಲ್ಲಿ 
  • ಇದರಲ್ಲಿ ಮ್ಯಾಟ್ರಿಕ್ಸ್ LED ಹೆಡ್ ಲೈಟ್ ಗಳು ಮತ್ತು AR ಹೆಡ್ ಅಪ್ ಡಿಸ್ಪ್ಲೇ ಫೀಚರ್ ಕೊಡಲಾಗಿದೆ.

ಹಿಂದಿನ ಹಲವು ವರ್ಷ ಗಳಲ್ಲಿ ವೋಕ್ಸ್ವ್ಯಾಗನ್ ಬಹಳಷ್ಟು ವಾಹನಗಳನ್ನು ID ಬ್ಯಾನರ್ ನಲ್ಲಿ ಪ್ರಪಂಚದಾದ್ಯಂತ ಆಟೋ ಶೋ ಗಳಲ್ಲಿ ಶೋ ಕೇಸ್ ಮಾಡಿದೆ. ಜರ್ಮನ್ ಕಾರ್ ಮೇಕರ್ ಈಗ ಮುಂದುವರೆದು ID.3 ಯನ್ನು ಬಹಿರಂಗಪಡಿಸಿದ್ದಾರೆ. ಮೊದಲನೇ ಉತ್ಪನ್ನವಾಗಿದೆ ID ವ್ಯಾಪ್ತಿಯಲ್ಲಿ. 

2019 ಫ್ರಾಂಕ್ ಫುರ್ಟ್ ಮೋಟಾರ್ ಶೋ ದಲ್ಲಿ ಬಹಿರಂಗಪಡಿಸಲಾಗಿದ್ದು, ID.3 ಯು ವೋಕ್ಸ್ವ್ಯಾಗನ್ ಹ್ಯಾಚ್ ಬ್ಯಾಕ್ ಆಗಿದೆ ಅದು ಕಂಪನಿಯನ್ನು ಕಾರ್ಬನ್ ನ್ಯೂಟ್ರಲ್ ಆಗಿರುವ ಕಾರ್ ಗಳನ್ನೂ ಮಾಡಲು ಒಂದು ಮಣೆ  ಹಾಕಿಕೊಟ್ಟಂತಿದೆ. ಬ್ರಾಂಡ್ MEB ವೇದಿಕೆಯಡಿ  ವಿಶೇಷವಾಗಿ ಎಲೆಕ್ಟ್ರಿಕ್ ಡ್ರೈವ್ ಸಿಸ್ಟಮ್ ಗಾಗಿ ಮಾಡಲ್ಪಟ್ಟ ಮೊದಲನೇ ಉತ್ಪನ್ನವಾಗಿದೆ. 

ಇಂಟರ್ನಲ್ ಕಂಬಶ್ಚನ್  ಎಂಜಿನ್ ಬದಲು, ID.3 ನ ಪವರ್ ಎಲೆಕ್ಟ್ರಿಕ್ ಮೋಟಾರ್ ನಿಂದ ಪಡೆಯುತ್ತದೆ ಅದು ರೇರ್ ಆಸ್ಲ್ಲೆ ಮೇಲೆ ಇರುತ್ತದೆ ಮತ್ತು 204PS  ಗರಿಷ್ಟ ಪವರ್  ಹಾಗು 310Nm ಗರಿಷ್ಟ  ಟಾರ್ಕ್  ಕೊಡುತ್ತದೆ.

 Volkswagen Reveals ID.3, An All-electric Production Vehicle, At Frankfurt

ವೋಕ್ಸ್ವ್ಯಾಗನ್ ನವರು ಮೂರೂ ವಿಭಿನ್ನ ಕೆಪ್ಯಾಸಿಟಿ ಹೊಂದಿರುವ ಬ್ಯಾಟರಿ ಕೊಡುತ್ತಿದೆ  ID.3 ನಲ್ಲಿ: 45kWh ಬ್ಯಾಟರಿ ಪ್ಯಾಕ್ ಶಕ್ತಿ 330km ಗೆ ಅನುಕೂಲವಾಗಿದೆ, 58kWh  ಬ್ಯಾಟರಿ ಪ್ಯಾಕ್ ವ್ಯಾಪ್ತಿ 420km  ಮತ್ತು ಗರಿಷ್ಟ 77kWh ಬ್ಯಾಟರಿ ಪ್ಯಾಕ್ ವ್ಯಾಪ್ತಿ 550km ಆಗಿರುತ್ತದೆ.  ಈ ಸಂಖ್ಯೆಗಳು  WLTP  ಸೈಕಲ್ ಗೆ ಅನುಗುಣವಾಗಿದೆ ಅದನ್ನು ಯೂರೋಪ್ ನಲ್ಲಿ ರೇಂಜ್ ಪರೀಕ್ಷೆಗೆ ಉಪಯೋಗಿಸುತ್ತಾರೆ. 

ಇದರಲ್ಲಿ 100kWh ಫಾಸ್ಟ್ ಚಾರ್ಜರ್ ಸಹ ಲಭ್ಯವಿರುತ್ತದೆ, ಅದು  ID.3 ಬ್ಯಾಟರಿಯನ್ನು ಚಾರ್ಜ್ ಮಾಡುತ್ತದೆ 290km  ರೇಂಜ್ ಗಾಗಿ ಕೇವಲ  30 ನಿಮಿಷದಲ್ಲಿ! 45kWh ಮತ್ತು 58kWh ಮಾಡೆಲ್ ಗಳ  ಟಾಪ್ ಸ್ಪೀಡ್ 160kmph ವರೆಗೂ ಇರುತ್ತದೆ.

ಹೊರಬದಿಯಲ್ಲಿ, ID.3 ಯ  ಡಿಸೈನ್ ಸಾಂಪ್ರದಾಯಿಕ ಹ್ಯಾಚ್ ಬ್ಯಾಕ್ ಗಳಿಗಿಂತ ವಿಭಿನ್ನವಾಯಿಗಿಲ್ಲ. ಅದರ ನಯವಾದ ಡಿಸೈನ್ ಒಂದು ಪ್ಯಾನೆಲ್ ನಿಂದ ಮತ್ತೊಂದು ಪ್ಯಾನೆಲ್ ಗೆ ಮುಂದುವರೆಯುತ್ತದೆ. ಅದು ಖಂಡಿತವಾಗಿಯೂ ID.3 ಗೆ ಹೆಚ್ಚು ಗಾಳಿಯ ತಡೆಗಳನ್ನು ನಿಭಾಯಿಸಲು ಸಹಕಾರಿಯಾಗಿದೆ.  ಆಂತರಿಕಗಳಲ್ಲಿ, ಮತ್ತೊಮ್ಮೆ ಸಾಂಪ್ರದಾಯಿಕವಾಗಿ ಕಾಣುತ್ತದೆ. ಆದರೆ, ಟಚ್ ಸ್ಕ್ರಿನ್ನ್ ಅನ್ನು ಡ್ರೈವರ್ ಕಡೆಗೆ ಟಿಲ್ಟ್ ಮಾಡಲಾಗಿದೆ ಕ್ಯಾಬಿನ್ ಅನ್ನು ಡ್ರೈವರ್ ಫೋಕಸ್ ಆಗಿರುವಂತೆ ಮಾಡಲು. 

ಫೀಚರ್ ಗಳ ವಿಚಾರದಲ್ಲಿ, VW ನವರು ಉತ್ತಮ ಗಳಾದ ಸ್ಯಾಟಲೈಟ್ ನೇವಿಗೇಶನ್ ಸಿಸ್ಟಮ್, ಹೀಟಡ್ ಫ್ರಂಟ್ ಸೀಟ್, ಮತ್ತು ಸ್ಟಿಯರಿಂಗ್ ವೀಲ್ ಅನ್ನು ಕೊಟ್ಟಿದ್ದಾರೆ. ಇದರಲ್ಲಿ ಮ್ಯಾಟ್ರಿಕ್ಸ್ LED  ಹೆಡ್ ಲೈಟ್ ಗಳು, ಆಗುಮೆಂಟೆಡ್ ರಿಯಾಲಿಟಿ  (AR) ಹೆಡ್ ಅಪ್ ಡಿಸ್ಪ್ಲೇ, ಬೀಟ್ ಸೌಂಡ್ ಸಿಸ್ಟಮ್ ಮತ್ತು ದೊಡ್ಡ ಪಾಣಾರಾಮಿಕ್ ಸ್ಲೈಡಿಂಗ್/ಟಿಲ್ಟಿಂಗ್  ಗ್ಲಾಸ್ ರೂಫ್ ಕೊಡಲಾಗಿದೆ.

Volkswagen Reveals ID.3, An All-electric Production Vehicle, At Frankfurt 

ವೋಕ್ಸ್ವ್ಯಾಗನ್ ನವರು ID.3 ಮೂರೂ ವೇರಿಯೆಂಟ್ ಗಳಲ್ಲಿ ಕೊಡುತ್ತಿದ್ದಾರೆ: ಬೇಸ್, 1st ಪ್ಲಸ್  ಮತ್ತು  1st ಮ್ಯಾಕ್ಸ್. ಬೇಸ್ ವೇರಿಯೆಂಟ್ ಬೆಲೆ 30,000 ಯೂರೋಸ್ ಒಳಗಡೆ ಅಥವಾ ಅಂದಾಜು ರೂ  23.80 ಲಕ್ಷ. ವೋಕ್ಸ್ವ್ಯಾಗನ್ ನ ID.3 ಉತ್ಪಾದನೆ ಈ ವರ್ಷದ ನವೆಂಬರ್ ನಲ್ಲಿ ಪ್ರಾರಂಭವಾಗಲಿದೆ ಮತ್ತು ಜರ್ಮನ್ ಕಾರ್ ಮೇಕರ್ ಈಗಾಗಲೇ ಅದಕ್ಕಾಗಿ 30,000 ಆರ್ಡರ್ ಅನ್ನು ಪಡೆದುಕೊಂಡಿದೆ. ID.3 ಅನ್ನು ಕೇವಲ ಯೂರೋಪ್ ನಲ್ಲಿ ಬಿಡುಗಡೆ ಮಾಡಲಾಗುತ್ತದೆ ಸದ್ಯಕ್ಕೆ VW ನವರು ಅದನ್ನು ಭಾರತದಲ್ಲಿ  ಭವಿಷ್ಯದಲ್ಲಿ ಬಿಡುಗಡೆ ಮಾಡುವ ಬಗ್ಗೆ ಯಾವುದೇ ಮಾಹಿತಿ ಬಹಿರಂಗಪಡಿಸಿಲ್ಲ.

ಅವರಿಂದ ಪ್ರಕಟಿಸಲಾಗಿದೆ
was this article helpful ?

0 out of 0 found this helpful

Write your ಕಾಮೆಂಟ್

Read Full News

ಕಾರು ಸುದ್ದಿ

  • ಟ್ರೆಂಡಿಂಗ್ ಸುದ್ದಿ
  • ಇತ್ತಿಚ್ಚಿನ ಸುದ್ದಿ

trendingಕಾರುಗಳು

  • ಲೇಟೆಸ್ಟ್
  • ಉಪಕಮಿಂಗ್
  • ಪಾಪ್ಯುಲರ್
×
We need your ನಗರ to customize your experience