Login or Register ಅತ್ಯುತ್ತಮ CarDekho experience ಗೆ
Login

2024 BMW 3 ಸಿರೀಸ್ ಅಪ್ಡೇಟ್ ಬಗ್ಗೆ ನೀವು ತಿಳಿದುಕೊಳ್ಳಬೇಕಾದ 3 ವಿಷಯಗಳು

ಮೇ 31, 2024 02:31 pm ರಂದು ansh ಮೂಲಕ ಪ್ರಕಟಿಸಲಾಗಿದೆ
31 Views

ಹೊರಭಾಗದ ಡಿಸೈನ್ ನಲ್ಲಿ ಹೆಚ್ಚು ಬದಲಾವಣೆ ಮಾಡಲಾಗಿಲ್ಲ, ಆದರೆ ಕ್ಯಾಬಿನ್ ಮತ್ತು ಹೈಬ್ರಿಡ್ ಪವರ್‌ಟ್ರೇನ್‌ಗಳಿಗೆ ಕೆಲವು ಸಣ್ಣ ಅಪ್ಡೇಟ್ ಮಾಡಲಾಗಿದೆ

BMW 3 ಸಿರೀಸ್ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಮಾಡೆಲ್ ಇಯರ್ ಅಪ್ಡೇಟ್ ಅನ್ನು ಪಡೆದುಕೊಂಡಿದೆ ಮತ್ತು ಈ ಬದಲಾವಣೆಗಳು ಭಾರತೀಯ ವರ್ಷನ್ ಗೆ ಕೂಡ ಬರುವ ನಿರೀಕ್ಷೆಯಿದೆ. ಹೊಸ 3 ಸಿರೀಸ್ ಸಣ್ಣಮಟ್ಟದ ಡಿಸೈನ್ ಮತ್ತು ಫೀಚರ್ ಬದಲಾವಣೆಗಳನ್ನು ಪಡೆದಿದೆ. ಇಲ್ಲಿ ಹೈಬ್ರಿಡ್ ಪವರ್‌ಟ್ರೇನ್‌ಗಳ ಮೇಲೆ ವಿಶೇಷವಾಗಿ ಗಮನಹರಿಸಲಾಗಿದೆ ಆದರೆ ಅದು ಬಹುಶಃ ಭಾರತದಲ್ಲಿ ಲಭ್ಯವಿರುವುದಿಲ್ಲ. ಅಪ್ಡೇಟ್ ಆಗಿರುವ 3 ಸಿರೀಸ್ ಬಗ್ಗೆ ನೀವು ತಿಳಿದುಕೊಳ್ಳಬೇಕಾದ 3 ವಿಷಯಗಳು ಇಲ್ಲಿವೆ.

ಸಣ್ಣಪುಟ್ಟ ಡಿಸೈನ್ ಬದಲಾವಣೆಗಳು

ನೀವು ಮುಂಭಾಗವನ್ನು ಸೂಕ್ಷ್ಮವಾಗಿ ಪರಿಶೀಲಿಸಿದರೂ ಕೂಡ, ಇತ್ತೀಚಿನ 3 ಸಿರೀಸ್ ಮತ್ತು ಅದರ ಹಿಂದಿನ ಮಾಡೆಲ್ ನಡುವೆ ಯಾವುದೇ ಡಿಸೈನ್ ಬದಲಾವಣೆಗಳು ಕಾಣುವುದಿಲ್ಲ. ಬಂಪರ್, ಏರ್ ವೆಂಟ್ಸ್, ಬಾನೆಟ್ ಮತ್ತು ಲೈಟ್ ಸೆಟಪ್ ಸೇರಿದಂತೆ ಮುಂಭಾಗದ ಪ್ರೊಫೈಲ್ ಅದೇ ರೀತಿ ಇದೆ. ಆದರೆ ಈ ಅಪ್ಡೇಟ್ ನೊಂದಿಗೆ, ನೀವು ಎರಡು ಹೊಸ ಕಲರ್ ಆಯ್ಕೆಗಳನ್ನು ಪಡೆಯುತ್ತೀರಿ: ಆರ್ಕ್ಟಿಕ್ ರೇಸ್ ಬ್ಲೂ ಮೆಟಾಲಿಕ್ ಮತ್ತು ಫೈರ್ ರೆಡ್ ಮೆಟಾಲಿಕ್.

ಈ ಹೊಸ 3 ಸಿರೀಸ್ ನ 19-ಇಂಚಿನ ಅಲೊಯ್ ವೀಲ್ಸ್ ಹೊಸ ಡಿಸೈನ್ ನೊಂದಿಗೆ ಆಲ್ ಬ್ಲಾಕ್ ಅಥವಾ ಡ್ಯುಯಲ್-ಟೋನ್‌ಗಳಲ್ಲಿ ಲಭ್ಯವಿದೆ. ಹಿಂಭಾಗದಲ್ಲಿ ಕೂಡ ಯಾವುದೇ ಡಿಸೈನ್ ಬದಲಾವಣೆಗಳಿಲ್ಲ.

ಶಾರ್ಪರ್ ಕ್ಯಾಬಿನ್

ಒಳಭಾಗದಲ್ಲಿ, ಕ್ಯಾಬಿನ್ ಸಣ್ಣ ಡಿಸೈನ್ ಬದಲಾವಣೆಗಳನ್ನು ಪಡೆದಿದೆ ಮತ್ತು ನೋಡುಗರಿಗೆ ಇದು ಅಪ್ಡೇಟ್ ಆಗಿರುವ 3 ಸಿರೀಸ್ ಎಂದು ತಿಳಿಯಲು ಏಕೈಕ ಸುಳಿವು ಆಗಿರಬಹುದು. ಒಟ್ಟಾರೆ ಲೇಔಟ್ ಒಂದೇ ರೀತಿ ಇದೆ, ಆದರೆ ಕಾರು ತಯಾರಕರು AC ವೆಂಟ್‌ಗಳನ್ನು ರೀಡಿಸೈನ್ ಮಾಡಿದ್ದಾರೆ, ಡ್ಯಾಶ್‌ಬೋರ್ಡ್ ಮತ್ತು ಸೆಂಟರ್ ಕನ್ಸೋಲ್‌ನಲ್ಲಿ ಕಾರ್ಬನ್ ಫೈಬರ್ ಎಲಿಮೆಂಟ್ ಗಳನ್ನು ಸೇರಿಸಿದ್ದಾರೆ ಮತ್ತು ಸ್ಟೀರಿಂಗ್ ವೀಲ್ ಅನ್ನು ಹೊಸ ಫ್ಲಾಟ್-ಬಾಟಮ್ ಯೂನಿಟ್ ಗೆ ಬದಲಾಯಿಸಿದ್ದಾರೆ.

ಇದನ್ನು ಕೂಡ ಓದಿ: BMW 220i M ಸ್ಪೋರ್ಟ್ ಶ್ಯಾಡೋ ವರ್ಷನ್ ಭಾರತದಲ್ಲಿ ಬಿಡುಗಡೆ, ಬೆಲೆ ರೂ 46.90 ಲಕ್ಷ

ಫೀಚರ್ ಗಳು ಬಹುತೇಕ ಒಂದೇ ಆಗಿರುತ್ತವೆ, ಆದರೆ BMW ತನ್ನ 14.9-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್‌ಗಾಗಿ ಆಪರೇಟಿಂಗ್ ಸಿಸ್ಟಮ್ ಅನ್ನು ಅಪ್ಡೇಟ್ ಮಾಡಿದೆ. ಇತರ ಫೀಚರ್ ಗಳಲ್ಲಿ 12.3-ಇಂಚಿನ ಡಿಜಿಟಲ್ ಡ್ರೈವರ್ ಡಿಸ್ಪ್ಲೇ, ಥ್ರೀ-ಜೋನ್ ಕ್ಲೈಮೇಟ್ ಕಂಟ್ರೋಲ್, ಹೀಟೆಡ್ ಮತ್ತು ವೆಂಟಿಲೇಟೆಡ್ ಫ್ರಂಟ್ ಸೀಟುಗಳು, ಹೀಟೆಡ್ ಸ್ಟೀರಿಂಗ್ ವೀಲ್ ಮತ್ತು ಪಾರ್ಕಿಂಗ್ ಅಸಿಸ್ಟ್ ಸೇರಿವೆ.

ಸುಧಾರಿತ ಪವರ್‌ಟ್ರೇನ್

ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್‌ಗಳನ್ನು ಒಳಗೊಂಡಂತೆ BMW 3 ಸಿರೀಸ್ ನಲ್ಲಿ ಅನೇಕ ಪವರ್‌ಟ್ರೇನ್ ಆಯ್ಕೆಗಳು ಲಭ್ಯವಿದ್ದರೂ ಕೂಡ, ಪ್ಲಗ್-ಇನ್ ಹೈಬ್ರಿಡ್ ವರ್ಷನ್ ಇಲ್ಲಿ ಪ್ರಮುಖ ಅಪ್ಡೇಟ್ ಗಳನ್ನು ಪಡೆದಿದೆ. ಪ್ಲಗ್-ಇನ್ ಹೈಬ್ರಿಡ್ ವೇರಿಯಂಟ್ ಗಳು 2-ಲೀಟರ್ ಪೆಟ್ರೋಲ್ ಎಂಜಿನ್ ಮತ್ತು 19.5 kWh ಬ್ಯಾಟರಿಯನ್ನು ಹೊಂದಿದ್ದು, ದೊಡ್ಡ ಬ್ಯಾಟರಿಯಿಂದಾಗಿ 101 ಕಿಮೀ ವರೆಗೆ EV ರೇಂಜ್ ಅನ್ನು ನೀಡುತ್ತದೆ.

ಇದನ್ನು ಕೂಡ ಓದಿ: ಹೆಚ್ಚು ರೇಂಜ್ ನೀಡುವ ಆಡಿ ಕ್ಯೂ6 ಇ-ಟ್ರಾನ್ ರಿಯರ್-ವೀಲ್-ಡ್ರೈವ್ ವೇರಿಯಂಟ್ ವಿವರಗಳು ಲೀಕ್

ಆದರೆ, ಈ ಪವರ್‌ಟ್ರೇನ್ ಆಯ್ಕೆಯನ್ನು ಭಾರತದಲ್ಲಿ ನೀಡಲಾಗುವುದಿಲ್ಲ. ಇಂಡಿಯಾ-ಸ್ಪೆಕ್ ಮಾಡೆಲ್ ಗಳಿಗೆ ಈ ಮುಂಚೆ ಇದ್ದ 190 PS 2-ಲೀಟರ್ ಡೀಸೆಲ್ ಯೂನಿಟ್, 258 PS 2-ಲೀಟರ್ ಟರ್ಬೊ-ಪೆಟ್ರೋಲ್ ಯೂನಿಟ್ ಮತ್ತು 374 PS 3-ಲೀಟರ್ ಇನ್-ಲೈನ್ 6 ಪೆಟ್ರೋಲ್ ಎಂಜಿನ್ ಜೊತೆಗೆ ಇರುವ 48V ಮೈಲ್ಡ್-ಹೈಬ್ರಿಡ್ ಸೆಟಪ್ ಅನ್ನು ಮುಂದುವರಿಸಲಾಗುವುದು. ಈ ಎಲ್ಲಾ ಎಂಜಿನ್‌ಗಳನ್ನು 8-ಸ್ಪೀಡ್ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್ ನೊಂದಿಗೆ ಜೋಡಿಸಲಾಗಿದೆ.

ಅಪ್ಡೇಟ್ ಆಗಿರುವ BMW 3 ಸಿರೀಸ್ ಮುಂಬರುವ ತಿಂಗಳುಗಳಲ್ಲಿ ಭಾರತೀಯ ಮಾರುಕಟ್ಟೆಗೆ ಬರುವ ನಿರೀಕ್ಷೆಯಿದೆ. ಸದ್ಯ ಇರುವ ವರ್ಷನ್ ಬೆಲೆಯು 60.60 ಲಕ್ಷದಿಂದ ಮತ್ತು 72.90 ಲಕ್ಷದವರೆಗೆ (ಎಕ್ಸ್ ಶೋರೂಂ) ಇದೆ ಮತ್ತು ಹೊಸ ಅಪ್ಡೇಟ್ ಆಗಿರುವ ವರ್ಷನ್ ಸ್ವಲ್ಪ ದುಬಾರಿಯಾಗಲಿದೆ. BMW 3 ಸಿರೀಸ್ ಮರ್ಸಿಡೀಸ್-ಬೆಂಜ್ C-ಕ್ಲಾಸ್ ಮತ್ತು ಆಡಿ A4 ಗೆ ಪ್ರತಿಸ್ಪರ್ಧಿಯಾಗಿದೆ.

ಇನ್ನಷ್ಟು ಓದಿ: BMW 3 ಸಿರೀಸ್ ಆಟೋಮ್ಯಾಟಿಕ್

Share via

Write your Comment on BMW 3 ಸರಣಿ

ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ

Enable notifications to stay updated with exclusive offers, car news, and more from CarDekho!

ಟ್ರೆಂಡಿಂಗ್ ಸೆಡಾನ್‌ ಕಾರುಗಳು

  • ಲೇಟೆಸ್ಟ್
  • ಉಪಕಮಿಂಗ್
  • ಪಾಪ್ಯುಲರ್
ಎಲೆಕ್ಟ್ರಿಕ್ಹೊಸ ವೇರಿಯೆಂಟ್
Rs.1.70 - 2.69 ಸಿಆರ್*
ಹೊಸ ವೇರಿಯೆಂಟ್
Rs.6.54 - 9.11 ಲಕ್ಷ*
ಫೇಸ್ ಲಿಫ್ಟ್
ಹೊಸ ವೇರಿಯೆಂಟ್
Rs.12.28 - 16.55 ಲಕ್ಷ*
ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ