• English
  • Login / Register

ಆಟೋಮ್ಯಾಟಿಕ್ ಡಾಟ್ಸನ್ GO, GO+ ವೇರಿಯೆಂಟ್ ಗಳನ್ನು ಸೆಪ್ಟೆಂಬರ್ 23 ನಲ್ಲಿ ಬಿಡುಗಡೆ ಮಾಡಬಹುದು

ಸೆಪ್ಟೆಂಬರ್ 14, 2019 12:04 pm ರಂದು sonny ಮೂಲಕ ಪ್ರಕಟಿಸಲಾಗಿದೆ

  • 26 Views
  • ಕಾಮೆಂಟ್‌ ಅನ್ನು ಬರೆಯಿರಿ

ಎರೆಡೂ GO ಮತ್ತು  GO+ ಗಳು ಈ ವಿಭಾಗದಲ್ಲಿ  CVT ಆಯ್ಕೆ ಕೊಡುತ್ತಿರುವ ಮೊದಲುವುಗಳಾಗಿವೆ.

  • ಡಾಟ್ಸನ್ GO ಮತ್ತು  GO+ ಗಳು ಅದೇ 1.2-ಲೀಟರ್ ಪೆಟ್ರೋಲ್ ಎಂಜಿನ್ ನಿಂದ ಪವರ್ ಪಡೆಯುತ್ತದೆ. 
  • ಡಾಟ್ಸನ್ ಈ ವಿಭಾಗದಲ್ಲಿ CVT ಕೊಡುವುದರಲ್ಲಿ ಮೊದಲನೆಯದಾಗಿದೆ 
  • ಇದರಲ್ಲಿ ಇತರ AMT ಕೊಡುತ್ತಿರುವ ಇತರ ಪ್ರತಿಸ್ಪರ್ದಿಗಳಿಗಿಂತ ಉತ್ತಮ ಅನುಭವ ದೊರೆಯುತ್ತದೆ. 
  • GO+ ನಲ್ಲಿ ಹೆಚ್ಚಾಗಿ CVT ಆಟೋಮ್ಯಾಟಿಕ್ ವೇರಿಯೆಂಟ್ ದೊರೆಯುತ್ತದೆ ಅದರ ಲೈನ್ ಅಪ್ ನಲ್ಲಿ. 
  • ಇತ್ತೀಚಿಗೆ ಬಿಡುಗಡೆಯಾದ GO+  ಪ್ರತಿಸ್ಪರ್ದಿ, ರೆನಾಲ್ಟ್ ಟ್ರೈಬರ್ ನಲ್ಲೂ ಸಹ  AMT ದೊರೆಯುತ್ತದೆ ಎಂದು ನಿರೀಕ್ಷಿಸಲಾಗಿದೆ. 
  • ಹೊಸ CVT ವೇರಿಯೆಂಟ್ ಅನ್ನು ಟಾಪ್ ಸ್ಪೆಕ್ ನಲ್ಲಿ ಮಾತ್ರ ಕೊಡಲಾಗುತ್ತದೆ ಮತ್ತು ಪ್ರೀಮಿಯಂ ರೂ  60,000 ಹೆಚ್ಚಾಗಿರುತ್ತದೆ.

 Automatic Datsun GO, GO+ Variants To be Introduced In October 2019

ಹೆಚ್ಚುಯು ಹೆಚ್ಚಾಗಿ ಆರಂಭಿಕ ಹಂತದ ಕಾರ್ ಗ್ರಾಹಕರು ಆಟೋಮ್ಯಾಟಿಕ್ ಟ್ರಾನ್ಸ್ಮಿಷನ್ ಆಯ್ಕೆಯನ್ನು ಬಯಸುತ್ತಿದ್ದಾರೆ. ಆ ಬೇಡಿಕೆಗೆ ಅನುಗುಣವಾಗಿ, ಡಾಟ್ಸನ್ ನವರು  CVT ವೇರಿಯೆಂಟ್ ಅನ್ನು GO ಮತ್ತು GO+ ಮಾಡೆಲ್ ಗಳಲ್ಲಿ 23 ಸೆಪ್ಟೆಂಬರ್ 2019ನಲ್ಲಿ ಬಿಡುಗಡೆ ಮಾಡುತ್ತಿದ್ದಾರೆ. ಇದರ ಆ ವಿಭಾಗದ ಪ್ರತಿಸ್ಪರ್ದಿಗಳಾದ ಮಾರುತಿ ವ್ಯಾಗನ್ R, ಹುಂಡೈ ಸ್ಯಾಂಟ್ರೋ ಮತ್ತು ಟಾಟಾ ಟಿಯಾಗೋ ಗಳು ಈ ಅನುಕೂಲವನ್ನು ಈಗಾಗಲೇ ಕೊಟ್ಟಿದ್ದಾರೆ ಮತ್ತು ಎಲ್ಲದರಲ್ಲೂ AMT ಆಯ್ಕೆ ಲಭ್ಯವಿದೆ.

ಆದರೆ, ಡಾಟ್ಸನ್ ನವರು ಹೆಚ್ಚು ಸಲಕರಣೆಗಳನ್ನು ಪಡೆದಿರುವ  CVT  ಟ್ರಾನ್ಸ್ಮಿಸಿಯೋನ್ ಟೆಕ್ನಲಾಜಿ ಯನ್ನು GO and GO+ ನಲ್ಲಿ ಕೊಡುತ್ತಿದೆ.  ಎರೆಡೂ GO ಮತ್ತು  GO+  ಗಳು 1.2-ಲೀಟರ್ , 3- ಸಿಲಿಂಡರ್ ಪೆಟ್ರೋಲ್ ಎಂಜಿನ್ ನಿಂದ ಪವರ್ ಪಡೆಯುತ್ತದೆ ಅದು  68PS  ಪವರ್ ಮತ್ತು 104Nm ಟಾರ್ಕ್ ಕೊಡುತ್ತದೆ. ಅದು  5- ಸ್ಪೀಡ್ ಮಾನ್ಯುಯಲ್ ಒಂದಿಗೆ ದೊರೆಯುತ್ತಿದೆ ಮತ್ತು ಅಧಿಕೃತ ಮೈಲೇಜ್ 19.83kmpl ಆಗಿದೆ. ಈ ಎಂಜಿನ್ ಈಗಲೂ  BS4-  ಕಂಪ್ಲೇಂಟ್ ಆಗಿದೆ ಮತ್ತು ಅದನ್ನು ಮುಂಬರುವ  BS6 ಎಮಿಷನ್ ನಾರ್ಮ ಗೆ ನವೀಕರಣ ಮಾಡಬೇಕಿದೆ.

Automatic Datsun GO, GO+ Variants To be Introduced In October 2019

ಗೇರ್ ಬಾಕ್ಸ್ ಒಂದು ಗೌರವಾರ್ಹ CVT ಯ ಅವತರಣಿಕೆ ಆಗಿದೆ,ಅದನ್ನು ಡಾಟ್ಸನ್ ಪೋಷಕ ಕಂಪನಿ, ನಿಸ್ಸಾನ್, ಮೈಕ್ರಾ ದಲ್ಲಿ ಬಳಸಿತ್ತು. ನಾವು ಈ ಎಂಜಿನ್  ನಯವಾದ ಹಾಗು ಉತ್ತಮ ಕಾರ್ಯದಕ್ಷತೆ ಮತ್ತು ಉತ್ತಮ ಮೈಲೇಜ್ ಸಹ ಕೊಡುತ್ತದೆ ಎಂದು ನಿರೀಕ್ಷಿಸಿದ್ದೇವೆ. CVT ಟ್ರಾನ್ಸ್ಮಿಷನ್ ಹೆಚ್ಚು ಮೈಲೇಜ್ ಕೊಡಬಹುದು, ಅದು ಈ ವಿಭಾಗದಲ್ಲಿ ಅವಶ್ಯಕತೆ ಆಗಿದೆ. ಆದರೆ, ಇದರ ಬೆಲೆ ಪ್ರತಿಸ್ಪರ್ದಿಗಳು ಬಳಸಿರುವ AMT ಟೆಕ್ನಲಾಜಿ ಗಿಂತಲೂ ಹೆಚ್ಚು ಬೆಲೆ ಹೊಂದಿದೆ. GO+  ಸಬ್ -4m MPV ಗೆ ನೇರವಾದ ಪ್ರತಿಸ್ಪರ್ದಿಗಳು ಇಲ್ಲ, ರೆನಾಲ್ಟ್ ಟ್ರೈಬರ್ ಬಿಡುಗಡೆ ಆಗುವವರೆಗೂ. ಟ್ರೈಬರ್ ನಲ್ಲಿ ಬಿಡುಗಡೆ ಸಮಯದಲ್ಲಿ ಲಭ್ಯವಿಲ್ಲದಿದ್ದರೂ ಅದು ಒಂದು ಆಟೋಮ್ಯಾಟಿಕ್ ಟ್ರಾನ್ಸ್ಮಿಷನ್ ಆಯ್ಕೆಯನ್ನು ಪಡೆಯುತ್ತದೆ ಕೂಡ.

Automatic Datsun GO, GO+ Variants To be Introduced In October 2019

ಹೊಸ  CVT  ಆಟೋ ವನ್ನು ಟಾಪ್ ವೇರಿಯೆಂಟ್ ಗಳಾದ  GO ಮತ್ತು  GO+  ಗಳು , ಅದರ ಬೆಲೆ  ರೂ  5.17 ಲಕ್ಷ ಮತ್ತು ರೂ 5.94 ಲಕ್ಷ ಅನುಗುಣವಾಗಿ (ಎಕ್ಸ್ ಶೋ ರೂಮ್ , ದೆಹಲಿ). ಹೆಚ್ಚುವರಿಯಾದ CVT ಯು ಬೆಲೆ ಪಟ್ಟಿಯನ್ನು ರೂ 60,000  ವರೆಗೂ ಹೆಚ್ಚಿಸುತ್ತದೆ. ಬೆಲೆ ಹೆಚ್ಚು ಆಗಿದ್ದರೂ , ಈ ಕಾರ್ ಗಳು ಹೆಚ್ಚು ಕೈಗೆಟಕುವ CVT ಮಾಡೆಲ್ ಆಗಿಡುತ್ತದೆ ಮಾರ್ಕೆಟ್ ನಲ್ಲಿ ಬಿಡುಗಡೆ ಆದಾಗ.

ಅವರಿಂದ ಪ್ರಕಟಿಸಲಾಗಿದೆ
was this article helpful ?

0 out of 0 found this helpful

Write your ಕಾಮೆಂಟ್

Read Full News

ಕಾರು ಸುದ್ದಿ

  • ಟ್ರೆಂಡಿಂಗ್ ಸುದ್ದಿ
  • ಇತ್ತಿಚ್ಚಿನ ಸುದ್ದಿ

trending ಕಾರುಗಳು

  • ಲೇಟೆಸ್ಟ್
  • ಉಪಕಮಿಂಗ್
  • ಪಾಪ್ಯುಲರ್
×
We need your ನಗರ to customize your experience