Login or Register ಅತ್ಯುತ್ತಮ CarDekho experience ಗೆ
Login

ಭಾರತದಲ್ಲಿ BMW 220i M ಸ್ಪೋರ್ಟ್ ಶ್ಯಾಡೋ ಎಡಿಷನ್‌ ಬಿಡುಗಡೆ, ಬೆಲೆಗಳು 46.90 ಲಕ್ಷ ರೂ.ನಿಂದ ಪ್ರಾರಂಭ

published on ಮೇ 24, 2024 10:56 pm by dipan for ಬಿಎಂಡವೋ 2 ಸರಣಿ

ಇದು ಸ್ಪೋರ್ಟಿಯರ್ ಲುಕ್‌ಗಾಗಿ ಬ್ಲ್ಯಾಕ್-ಔಟ್ ಎಕ್ಸ್‌ಟೀರಿಯರ್ ಸ್ಟೈಲಿಂಗ್ ಆಂಶಗಳನ್ನು ಪಡೆಯುತ್ತದೆ, ಆದರೆ ರೆಗುಲರ್‌ 220i M ಸ್ಪೋರ್ಟ್‌ನಂತೆಯೇ ಅದೇ ಎಂಜಿನ್ ಅನ್ನು ಪಡೆಯುತ್ತದೆ.

  • 220i M ಸ್ಪೋರ್ಟ್ ಶ್ಯಾಡೋ ಎಡಿಷನ್‌ನ ಬೆಲೆಗಳು 46.90 ಲಕ್ಷ ರೂಪಾಯಿಯಿಂದ (ಎಕ್ಸ್ ಶೋ ರೂಂ) ಪ್ರಾರಂಭವಾಗಲಿದೆ.
  • ಸಂಪೂರ್ಣ ಕಪ್ಪಾದ ಗ್ರಿಲ್ ಮತ್ತು ಕಪ್ಪು ಸ್ಪಾಯ್ಲರ್ ಜೊತೆಗೆ ಡಾರ್ಕ್‌ ಆದ ಎಲ್‌ಇಡಿ ಹೆಡ್‌ಲೈಟ್‌ಗಳನ್ನು ಪಡೆಯುತ್ತದೆ.
  • ಮೆಮೊರಿ ಫಂಕ್ಷನ್‌ನೊಂದಿಗೆ ಎಲೆಕ್ಟ್ರಿಕಲಿ ಎಡ್ಜಸ್ಟ್‌ ಮಾಡಬಹುದಾದ ಸ್ಪೋರ್ಟ್ಸ್‌ ಸೀಟ್‌ಗಳು ಮತ್ತು ಆಂಬಿಯೆಂಟ್ ಲೈಟಿಂಗ್‌ಗಳನ್ನು ಒಳಗೊಂಡಿದೆ.
  • ಇತರ ವೈಶಿಷ್ಟ್ಯಗಳಲ್ಲಿ ಡಿಜಿಟಲ್ ಡ್ರೈವರ್‌ನ ಡಿಸ್‌ಪ್ಲೇ, ಗೆಸ್ಚರ್ ಕಂಟ್ರೋಲ್‌ನೊಂದಿಗೆ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್ ಮತ್ತು ರಿಯರ್‌ವ್ಯೂ ಕ್ಯಾಮೆರಾ ಸೇರಿವೆ.
  • ಬಿಎಮ್‌ಡಬ್ಲ್ಯೂ 2 ಸಿರೀಸ್‌ ರೆಗುಲರ್‌ ಪೆಟ್ರೋಲ್ ಆವೃತ್ತಿಗಳಂತೆ ಅದೇ 190ಪಿಎಸ್‌ ಮತ್ತು 280 ಎನ್‌ಎಮ್‌ ಅನ್ನು ಉತ್ಪಾದಿಸುತ್ತದೆ.

ಭಾರತದಲ್ಲಿ BMW 220i M Sport Shadow Edition ಅನ್ನು 46.90 ಲಕ್ಷ ರೂ.ಗೆ (ಎಕ್ಸ್ ಶೋ ರೂಂ) ಬಿಡುಗಡೆ ಮಾಡಲಾಗಿದೆ. ಸ್ಟ್ಯಾಂಡರ್ಡ್ 2 ಸೀರೀಸ್ ಸೆಡಾನ್‌ಗೆ ಹೋಲಿಸಿದರೆ, ಶ್ಯಾಡೋ ಆವೃತ್ತಿಯು ಸಂಪೂರ್ಣ ಬ್ಲ್ಯಾಕ್‌ ಅಂಶಗಳನ್ನು ಒಳಗೊಂಡಂತೆ ವಿನ್ಯಾಸದಲ್ಲಿ ಕೆಲವು ಆಪ್‌ಡೇಟ್‌ಗಳನ್ನು ಪಡೆಯುತ್ತದೆ. ಇಂಟಿರೀಯರ್‌ ಸಹ ಸೂಕ್ಷ್ಮವಾದ ವಿನ್ಯಾಸ ಬದಲಾವಣೆಗಳಿಗೆ ಒಳಗಾಯಿತು, ಆದರೆ ಪವರ್‌ಟ್ರೇನ್ ರೆಗುಲರ್‌ 220i M ಸ್ಪೋರ್ಟ್‌ನಂತೆಯೇ ಇರುತ್ತದೆ.

ಹೊರಭಾಗ

ಇತರ BMW ಶ್ಯಾಡೋ ಎಡಿಷನ್‌ನ ಮೊಡೆಲ್‌ಗಳಂತೆ, 220i M ಸ್ಪೋರ್ಟ್‌ಗೆ ಅದೇ ರೀತಿಯ ವಿನ್ಯಾಸವು ಕೆಲವು ಸಂಪೂರ್ಣ ಬ್ಲ್ಯಾಕ್‌ ಅಂಶಗಳನ್ನು ತರುತ್ತದೆ, ಇವುಗಳು ಅದನ್ನು ಇತರ ಆವೃತ್ತಿಗಳಿಂದ ಪ್ರತ್ಯೇಕಿಸುತ್ತದೆ. ಪರಿಣಾಮವಾಗಿ, ಕಿಡ್ನಿ ಗ್ರಿಲ್ ಸಂಪೂರ್ಣವಾಗಿ ಕಪ್ಪಾಗಿದೆ, ಹಾಗೆಯೇ ಹಿಂಭಾಗದ ಸ್ಪಾಯ್ಲರ್ ಸಹ. ಇದು ಅಡಾಪ್ಟಿವ್ ಎಲ್‌ಇಡಿ ಹೆಡ್‌ಲೈಟ್‌ಗಳನ್ನು ಹೊಂದಿದೆ ಆದರೆ ಡಾರ್ಕ್‌ ಆದ ಮೇಲ್ಭಾಗದ ಪದರಗಳು ಮತ್ತು BMW ಫ್ಲೋಟಿಂಗ್ ಹಬ್‌ಕ್ಯಾಪ್‌ಗಳನ್ನು ಹೊಂದಿದೆ. ಇದನ್ನು ಹೊರತುಪಡಿಸಿ, ಎಲ್ಲಾ ಇತರ ವಿನ್ಯಾಸ ಅಂಶಗಳು ಒಂದೇ ಆಗಿರುತ್ತವೆ.

ಒಳಾಂಗಣ ಮತ್ತು ವೈಶಿಷ್ಟ್ಯಗಳು

ಶ್ಯಾಡೋ ಎಡಿಷನ್‌ ಮೆಮೊರಿ ಫಂಕ್ಷನ್‌ನೊಂದಿಗೆ ಸ್ಪೋರ್ಟ್ ಸೀಟ್‌ಗಳು, ಕಾರ್ಬನ್-ಫಿನಿಶ್ಡ್ ಗೇರ್ ಸೆಲೆಕ್ಟರ್, ಆಂಬಿಯೆಂಟ್ ಲೈಟಿಂಗ್ ಮತ್ತು ವಿಶೇಷವಾದ ಇಲ್ಯುಮಿನೇಟೆಡ್ ಬರ್ಲಿನ್ ಇಂಟೀರಿಯರ್ ಟ್ರಿಮ್ ಅನ್ನು ಒಳಗೊಂಡಿದೆ. ಎಂಬಿಯಂಟ್‌ ಲೈಟಿಂಗ್‌ ಅನ್ನು ಆರು ಮಬ್ಬಾಗಿಸಬಹುದಾದ ಬಣ್ಣಗಳಲ್ಲಿ ಕಾನ್ಫಿಗರ್ ಮಾಡಬಹುದು. ಕಾರು 12.3-ಇಂಚಿನ ಡಿಜಿಟಲ್ ಇನ್ಸ್‌ಟ್ರುಮೆಂಟ್ ಕ್ಲಸ್ಟರ್ ಮತ್ತು ವೈರ್‌ಲೆಸ್ ಆಪಲ್‌ ಕಾರ್‌ಪ್ಲೇ ಮತ್ತು ಆಂಡ್ರಾಯ್ಡ್ ಆಟೋ ಜೊತೆಗೆ 10.25-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್ ಅನ್ನು ಸಹ ಒಳಗೊಂಡಿದೆ. ಇದು ವೈರ್‌ಲೆಸ್ ಚಾರ್ಜಿಂಗ್ ಮತ್ತು ಬಿಎಮ್‌ಡಬ್ಲ್ಯೂನ ವರ್ಚುವಲ್ ಅಸಿಸ್ಟೆಂಟ್ ಮತ್ತು ಇನ್ಫೋಟೈನ್‌ಮೆಂಟ್ ಸಿಸ್ಟಮ್ ಅನ್ನು ಕಂಟ್ರೋಲ್‌ ಮಾಡಲು ಆರು ಪೂರ್ವ-ನಿರ್ಧರಿತ ಹ್ಯಾಂಡ್ ಗೆಸ್ಚರ್‌ಗಳನ್ನು ಸಹ ಪಡೆಯುತ್ತದೆ.

ಪವರ್‌ಟ್ರೇನ್‌

ಸೆಡಾನ್ 2-ಲೀಟರ್ 4-ಸಿಲಿಂಡರ್ ಟರ್ಬೊ-ಪೆಟ್ರೋಲ್ ಎಂಜಿನ್ ಅನ್ನು ಸ್ಟ್ಯಾಂಡರ್ಡ್ 2 ಸಿರೀಸ್ M ಸ್ಪೋರ್ಟ್‌ನಂತೆಯೇ ಹೊಂದಿದೆ, ಇದು 190 ಪಿಎಸ್‌ ಮತ್ತು 280 ಎನ್‌ಎಮ್‌ ಅನ್ನು ಉತ್ಪಾದಿಸುತ್ತದೆ. ಎಂಜಿನ್ ಅನ್ನು 8-ಸ್ಪೀಡ್ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್‌ಗೆ ಜೋಡಿಸಲಾಗಿದೆ ಮತ್ತು ಇದು 7.1 ಸೆಕೆಂಡುಗಳಲ್ಲಿ 0 ರಿಂದ 100 ಕಿಮೀ ವೇಗವನ್ನು ಪಡೆದುಕೊಳ್ಳುತ್ತದೆ. ಇದರಲ್ಲಿ ಇಕೋ ಪ್ರೊ, ಕಂಫರ್ಟ್ ಮತ್ತು ಸ್ಪೋರ್ಟ್ ಎಂಬ ಮೂರು ಡ್ರೈವ್ ಮೋಡ್‌ಗಳು ಲಭ್ಯವಿದೆ.

ಸುರಕ್ಷತೆ

2 ಸಿರೀಸ್‌ನ ಶ್ಯಾಡೋ ಎಡಿಷನ್‌ ಆರು ಏರ್‌ಬ್ಯಾಗ್‌ಗಳು ಮತ್ತು ಬ್ರೇಕ್ ಅಸಿಸ್ಟ್‌ನೊಂದಿಗೆ ಆಂಟಿ-ಲಾಕ್ ಬ್ರೇಕಿಂಗ್ ಸಿಸ್ಟಮ್ (ABS) ನೊಂದಿಗೆ ಪ್ರಮಾಣಿತವಾಗಿದೆ. ಇತರ ಸುರಕ್ಷತಾ ವೈಶಿಷ್ಟ್ಯಗಳಲ್ಲಿ ರಿಯರ್‌ವ್ಯೂ ಕ್ಯಾಮೆರಾದೊಂದಿಗೆ ಪಾರ್ಕ್ ಅಸಿಸ್ಟ್, ಎಟೆನ್ಶನ್‌ ಆಸಿಸ್ಟ್‌, ಟ್ರಾಕ್ಷನ್‌ ಕಂಟ್ರೋಲ್‌ನೊಂದಿಗೆ ಡೈನಾಮಿಕ್ ಸ್ಟೆಬಿಲಿಟಿ ಕಂಟ್ರೋಲ್ (DSC) ಮತ್ತು ಎಲೆಕ್ಟ್ರಾನಿಕ್ ಡಿಫರೆನ್ಷಿಯಲ್ ಲಾಕ್ ಕಂಟ್ರೋಲ್ (EDLC) ಸೇರಿವೆ.

ಪ್ರತಿಸ್ಪರ್ಧಿಗಳು

ಬಿಎಮ್‌ಡಬ್ಲ್ಯೂ 220i M ಸ್ಪೋರ್ಟ್ ಶ್ಯಾಡೋ ಎಡಿಷನ್‌ ಆಡಿ A4 ಗೆ ಪ್ರತಿಸ್ಪರ್ಧಿಯಾಗಿದೆ ಆದರೆ ಟೊಯೋಟಾ ಕ್ಯಾಮ್ರಿಯಂತಹವುಗಳಿಗೆ ಐಷಾರಾಮಿ ಪರ್ಯಾಯವಾಗಿದೆ.

ಇನ್ನಷ್ಟು ಓದಿ: ಬಿಎಮ್‌ಡಬ್ಲ್ಯೂ 2 ಸಿರೀಸ್‌ ಆಟೋಮ್ಯಾಟಿಕ್‌

d
ಅವರಿಂದ ಪ್ರಕಟಿಸಲಾಗಿದೆ

dipan

  • 38 ವೀಕ್ಷಣಿಗಳು
  • 0 ಕಾಮೆಂಟ್‌ಗಳು

Write your Comment ನಲ್ಲಿ ಬಿಎಂಡವೋ 2 Series

Read Full News

trendingಸೆಡಾನ್‌ ಕಾರುಗಳು

  • ಲೇಟೆಸ್ಟ್
  • ಉಪಕಮಿಂಗ್
  • ಪಾಪ್ಯುಲರ್
ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ