Login or Register ಅತ್ಯುತ್ತಮ CarDekho experience ಗೆ
Login

Enable notifications to stay updated with exclusive offers, car news, and more from CarDekho!

ಶೋರೂಮ್‌ನಲ್ಲಿ ಸೆರೆ ಹಿಡಿದ ಈ 10 ಫೋಟೋಗಳಲ್ಲಿ BMW 5 ಸೀರೀಸ್ ಲಾಂಗ್‌ ವೀಲ್‌ಬೇಸ್‌ನ ಸಂಪೂರ್ಣ ಚಿತ್ರಣ

published on ಜುಲೈ 25, 2024 09:38 pm by samarth for ಬಿಎಂಡವೋ 5 ಸರಣಿ

ಬಿಎಮ್‌ಡಬ್ಲ್ಯೂ ಭಾರತದಲ್ಲಿ ಐಷಾರಾಮಿ ಸೆಡಾನ್ ಅನ್ನು ಒಂದೇ ಆವೃತ್ತಿ ಮತ್ತು ಪವರ್‌ಟ್ರೇನ್ ಆಯ್ಕೆಯಲ್ಲಿ ನೀಡುತ್ತದೆ

ಎಂಟನೇ ತಲೆಮಾರಿನ ಬಿಎಮ್‌ಡಬ್ಲ್ಯೂ 5 ಸಿರೀಸ್‌ ಅನ್ನು ಭಾರತದಲ್ಲಿ ಬಿಡುಗಡೆ ಮಾಡಲಾಗಿದೆ ಮತ್ತು ಇಲ್ಲಿ ಮೊದಲ ಬಾರಿಗೆ ಲಾಂಗ್‌ ವೀಲ್‌ಬೇಸ್ ಆಯ್ಕೆಯನ್ನು ನೀಡಲಾಗುತ್ತಿದೆ. ಇದು 530Li M ಸ್ಪೋರ್ಟ್ ಎಂಬ ಒಂದೇ ಆವೃತ್ತಿಯಲ್ಲಿ ಲಭ್ಯವಿದೆ. ಈ ಸುದ್ದಿಯಲ್ಲಿ, ನಾವು ನಿಮಗೆ ಹೊಸ ಬಿಎಮ್‌ಡಬ್ಲ್ಯೂ ಸೆಡಾನ್‌ ಸಂಪೂರ್ಣ ಚಿತ್ರಣವನ್ನು 10 ವಿವರವಾದ ರಿಯಲ್‌-ಟೈಮ್‌ ಫೋಟೊಗಳಲ್ಲಿ ವಿವರಿಸಲಿದ್ದೇವೆ.

ಮುಂಭಾಗದಿಂದ ಪ್ರಾರಂಭಿಸುವುದಾದರೆ, ಬಿಎಮ್‌ಡಬ್ಲ್ಯೂ 530Li ಪ್ರಕಾಶದೊಂದಿಗೆ ಸಿಗ್ನೇಚರ್ ಬಿಎಮ್‌ಡಬ್ಲ್ಯೂನ ಕಿಡ್ನಿ ಗ್ರಿಲ್ ಅನ್ನು ಹೊಂದಿದೆ, ಇದು ದೂರದೃಷ್ಟಿಯ ನೋಟವನ್ನು ನೀಡುತ್ತದೆ ಮತ್ತು ಜೊತೆಗೆ, ಇದು ಗಮನ ಸೆಳೆಯುವ ನಯವಾದ ಎಲ್‌ಇಡಿ ಹೆಡ್‌ಲೈಟ್‌ಗಳ ಸೆಟಪ್ ಅನ್ನು ಸಹ ಪಡೆಯುತ್ತದೆ. ಸ್ಪೋರ್ಟಿ ಬಂಪರ್ ಮತ್ತು ಮುಂಭಾಗದ ಬಂಪರ್‌ ಕೆಲಭಾಗದ ಮೇಲೆ ತೀಕ್ಷ್ಣವಾದ ಕಟ್ ಮತ್ತು ಕ್ರೀಸ್‌ಗಳು ಆಕ್ರಮಣಕಾರಿ ನೋಟವನ್ನು ನೀಡುತ್ತದೆ.

ಹೊಸ 5 ಸಿರೀಸ್‌ನ ಸೈಡ್ ಪ್ರೊಫೈಲ್ ಕನಿಷ್ಠ ನೋಟವನ್ನು ಹೊಂದಿದೆ. 3105 ಮಿ.ಮೀ ವಿಸ್ತೃತ ವೀಲ್‌ಬೇಸ್ ಮತ್ತು ಇಳಿಜಾರಾದ ರೂಫ್‌ಲೈನ್ ಮುಖ್ಯ ಹೈಲೈಟ್ ಆಗಿದೆ. ಹತ್ತಿರದಿಂದ ಗಮನಿಸುವಾಗ, ಹೊಸ ಸೆಡಾನ್‌ನ ಸಿ-ಪಿಲ್ಲರ್‌ನಲ್ಲಿ ಇರುವ “5” ಬ್ರ್ಯಾಂಡಿಂಗ್ ಇಲ್ಲಿ ಹೊಸ ಸೇರ್ಪಡೆಯಾಗಿದೆ.

ಇದು 18-ಇಂಚಿನ ಸಿಲ್ವರ್-ಫಿನಿಶ್ಡ್ ಅಲಾಯ್ ವೀಲ್‌ಗಳೊಂದಿಗೆ ಸ್ಟ್ಯಾಂಡರ್ಡ್ ಆಗಿ ಬರುತ್ತದೆ, ಒಪ್ಶನಲ್‌ ಆಗಿ 19-ಇಂಚಿನ ಡ್ಯುಯಲ್-ಟೋನ್ M-ನಿರ್ದಿಷ್ಟ ಆಲಾಯ್‌ ವೀಲ್‌ಗಳಿಗೆ ಅಪ್‌ಗ್ರೇಡ್ ಮಾಡಬಹುದಾಗಿದೆ.

ಹಿಂಭಾಗವನ್ನು ಗಮನಿಸುವಾಗ, ಇದು ಕ್ಲೀಯರ್ ಲುಕಿಂಗ್ ಪ್ರೊಫೈಲ್ ಅನ್ನು ಪಡೆಯುತ್ತದೆ, ರೌಂಡ್‌ ಎಲ್ಇಡಿ ಟೈಲ್ ಲೈಟ್‌ಗಳು ಅದರ ದೂರದೃಷ್ಟಿಯ ನೋಟವನ್ನು ಸೇರಿಸುತ್ತದೆ, ಆದರೆ ಡಿಫ್ಯೂಸರ್ ಎಫೆಕ್ಟ್‌ನೊಂದಿಗೆ ಹಿಂಭಾಗದ ಬಂಪರ್‌ಗಳು ಆಕ್ರಮಣಕಾರಿ ನಿಲುವನ್ನು ನೀಡುತ್ತದೆ.

ಇದನ್ನೂ ಸಹ ಓದಿ: ಭಾರತದಲ್ಲಿ BMW 5 ಸೀರೀಸ್ LWB ಬಿಡುಗಡೆ, ಬೆಲೆ 72.9 ಲಕ್ಷ ರೂ.ನಿಗದಿ

ಬಿಎಮ್‌ಡಬ್ಲ್ಯೂಯು ತನ್ನ ಹೊಸ 5 ಸೀರೀಸ್‌ನ ಒಳಭಾಗಕ್ಕಾಗಿ ಡ್ಯುಯಲ್-ಟೋನ್ ಕ್ಯಾಬಿನ್ ಥೀಮ್ ಅನ್ನು ಆಯ್ಕೆ ಮಾಡಿದೆ. ಇದು ಕನಿಷ್ಠ ನೋಟಕ್ಕೆ ಸರಿಹೊಂದಲ ಅಂಟಿಕೊಳ್ಳಲು ಡ್ಯಾಶ್‌ಬೋರ್ಡ್-ಸಂಯೋಜಿತ AC ವೆಂಟ್‌ಗಳನ್ನು ಸಹ ಪಡೆಯುತ್ತದೆ ಮತ್ತು ಲೆದರ್‌-ಮುಕ್ತ ಮೆಟಿರೀಯಲ್‌ಗಳಿಂದ ಮಾಡಲ್ಪಟ್ಟಿದೆ. ಮಾಡರ್ನ್‌ ಬಿಎಮ್‌ಡಬ್ಲ್ಯೂ ಕಾರುಗಳಲ್ಲಿ ಕಂಡುಬರುವ ಬಾಗಿದ ಡ್ಯುಯಲ್ ಡಿಸ್‌ಪ್ಲೇಗಳ ಉಪಸ್ಥಿತಿಯನ್ನು ನೀವು ಇಲ್ಲಿ ಗಮನಿಸಬಹುದು.

ಬಿಎಮ್‌ಡಬ್ಲ್ಯೂನ ಇತರ ಮೊಡೆಲ್‌ಗಳಲ್ಲಿ ಕಂಡುಬರುವಂತೆ 5 ಸಿರೀಸ್‌ನ ಒಳಭಾಗದಲ್ಲಿ ಎರಡು ಇಂಟಿಗ್ರೇಟೆಡ್ ಡಿಸ್‌ಪ್ಲೇಗಳನ್ನು ಪಡೆಯುತ್ತದೆ, ಅವುಗಳು 14.9-ಇಂಚಿನ ಇನ್ಫೋಟೈನ್ಮೆಂಟ್ ಸಿಸ್ಟಮ್ ಮತ್ತು ಬಾಗಿದ 12.3-ಇಂಚಿನ ಡಿಜಿಟಲ್ ಡ್ರೈವರ್ ಡಿಸ್‌ಪ್ಲೇ.

ಬಿಎಮ್‌ಡಬ್ಲ್ಯೂಸೆಡಾನ್ ಬೋವರ್ಸ್ ಮತ್ತು ವಿಲ್ಕಿನ್ಸ್ ಸ್ಪೀಕರ್‌ಗಳನ್ನು ಹೊಂದಿದೆ ಮತ್ತು ಹಿಂದಿನ ಡೋರ್ ಪ್ಯಾಡ್‌ಗಳಲ್ಲಿ ಮೂರು-ಟೋನ್ ಫಿನಿಶ್ ಅನ್ನು ಹೊಂದಿದೆ.

ಹಿಂಬದಿಯ ಕ್ಯಾಬಿನ್‌ನಲ್ಲಿ, ಎಲ್ಲಾ ಮೂರು ಪ್ರಯಾಣಿಕರಿಗೆ ಸರಿಹೊಂದಿಸಬಹುದಾದ ಹೆಡ್‌ರೆಸ್ಟ್, ISOFIX ಚೈಲ್ಡ್ ಸೀಟ್ ಆಂಕಾರೇಜ್‌ಗಳು ಮತ್ತು ವೈರ್‌ಲೆಸ್ ಫೋನ್ ಚಾರ್ಜರ್ ಮತ್ತು ಸ್ಟೋರೆಜ್‌ ಸ್ಥಳವನ್ನು ಒಳಗೊಂಡಿರುವ ಫೋಲ್ಡ್‌ ಮಾಡಬಹುದಾದ ರಿಯರ್ ಸೆಂಟರ್ ಆರ್ಮ್‌ರೆಸ್ಟ್ ಅನ್ನು ನಾವು ನೋಡಬಹುದು.

ನಾಲ್ಕು-ಝೋನ್‌ ಕ್ಲೈಮೇಟ್‌ ಕಂಟ್ರೋಲ್‌ನಿಂದಾಗಿ ಹಿಂಭಾಗದ ಪ್ರಯಾಣಿಕರು ಸಹ ವೈಯಕ್ತಿಕ ನಿಯಂತ್ರಣಗಳೊಂದಿಗೆ AC ವೆಂಟ್‌ಗಳಿಂದ ಪ್ರಯೋಜನ ಪಡೆಯುತ್ತಾರೆ.

ಪವರ್‌ಟ್ರೈನ್‌

ಹೊಸ-ಜನರೇಶನ್‌ನ 5 ಸಿರೀಸ್‌ ಅನ್ನು ಒಂದೇ 258 PS 2-ಲೀಟರ್ ಟರ್ಬೊ-ಪೆಟ್ರೋಲ್ ಎಂಜಿನ್ ಆಯ್ಕೆಯೊಂದಿಗೆ ನೀಡಲಾಗುತ್ತದೆ, ಮೈಲ್ಡ್‌-ಹೈಬ್ರಿಡ್ ತಂತ್ರಜ್ಞಾನದೊಂದಿಗೆ ನೀಡಲಾದ 8-ಸ್ಪೀಡ್ ಆಟೋಮ್ಯಾಟಿಕ್‌ ಟ್ರಾನ್ಸ್‌ಮಿಷನ್‌ನೊಂದಿಗೆ ಸಂಯೋಜಿಸಲಾಗಿದೆ.

ಬೆಲೆ ಮತ್ತು ಪ್ರತಿಸ್ಪರ್ಧಿಗಳು

ಬಿಎಮ್‌ಡಬ್ಲ್ಯೂನ 5 ಸಿರೀಸ್‌ನ ಲಾಂಗ್‌ ವೀಲ್‌ಬೇಸ್‌ನ ಒಂದೇ ಆವೃತ್ತಿಯ ಪರಿಚಯಾತ್ಮಕ, ಎಕ್ಸ್ ಶೋರೂಂ ಬೆಲೆಯು 72.90 ಲಕ್ಷ ರೂಪಾಯಿ ಎಂದು ನಿಗದಿಪಡಿಸಲಾಗಿದೆ. ಇದು ಆಡಿ ಎ6 ಮತ್ತು ವೋಲ್ವೋ ಎಸ್‌90 ಹಾಗೂ ಮುಂಬರುವ ಹೊಸ-ಜನ್ ಮರ್ಸೀಡೀಸ್‌ ಬೆಂಝ್‌ ಇ-ಕ್ಲಾಸ್‌ಗೆ ಪ್ರತಿಸ್ಪರ್ಧಿಯಾಗಿದೆ.

ಎಲ್ಲಾ ಇತ್ತೀಚಿನ ಆಟೋಮೋಟಿವ್ ಆಪ್‌ಡೇಟ್‌ಗಳಿಗಾಗಿ ಕಾರ್‌ದೇಖೋದ ವಾಟ್ಸಾಪ್‌ ಚಾನೆಲ್‌ ಅನ್ನು ಫಾಲೋ ಮಾಡಿ

ಇನ್ನಷ್ಟು ಓದಿ : 5 ಸೀರೀಸ್‌ ಆಟೋಮ್ಯಾಟಿಕ್‌

s
ಅವರಿಂದ ಪ್ರಕಟಿಸಲಾಗಿದೆ

samarth

  • 43 ವೀಕ್ಷಣಿಗಳು
  • 0 ಕಾಮೆಂಟ್‌ಗಳು

Write your Comment on BMW 5 ಸರಣಿ

J
janardhan rama kadekar
Jul 27, 2024, 1:16:33 PM

Looks so modern, stylish look

Read Full News

trending ಸೆಡಾನ್‌ ಕಾರುಗಳು

  • ಲೇಟೆಸ್ಟ್
  • ಉಪಕಮಿಂಗ್
  • ಪಾಪ್ಯುಲರ್
ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ