Login or Register ಅತ್ಯುತ್ತಮ CarDekho experience ಗೆ
Login

BMW iX1 LWB (ಲಾಂಗ್-ವೀಲ್‌ಬೇಸ್) ಭಾರತದಲ್ಲಿ ಬಿಡುಗಡೆ, ಬೆಲೆ 49 ಲಕ್ಷ ರೂ.ನಿಂದ ಪ್ರಾರಂಭ

ಬಿಎಂಡವೋ ಐಎಕ್ಸ್‌1 ಗಾಗಿ shreyash ಮೂಲಕ ಜನವರಿ 18, 2025 10:18 pm ರಂದು ಪ್ರಕಟಿಸಲಾಗಿದೆ

iX1 ಲಾಂಗ್-ವೀಲ್‌ಬೇಸ್ (LWB) ಹೆಚ್ಚು ಶಕ್ತಿಶಾಲಿ ಎಲೆಕ್ಟ್ರಿಕ್ ಮೋಟರ್ ಅನ್ನು ನೀಡುತ್ತದೆ ಮತ್ತು 531 ಕಿಮೀ ವರೆಗೆ ಹೆಚ್ಚಿನ ಕ್ಲೈಮ್ ಮಾಡಲಾದ ರೇಂಜ್‌ ಅನ್ನು ನೀಡುತ್ತದೆ

  • iX1 LWB ನಲ್ಲಿ ಕ್ಲೋಸ್ಡ್ ಆಫ್ ಗ್ರಿಲ್ ಮತ್ತು ಆಪ್‌ಡೇಟ್‌ ಮಾಡಿದ ಅಲಾಯ್ ವೀಲ್‌ಗಳು ಸೇರಿದಂತೆ ಸಣ್ಣ ವಿನ್ಯಾಸ ಬದಲಾವಣೆಗಳನ್ನು ಮಾತ್ರ ಮಾಡಲಾಗಿದೆ.

  • 10.25-ಇಂಚಿನ ಡಿಜಿಟಲ್ ಡ್ರೈವರ್ ಡಿಸ್ಪ್ಲೇ ಮತ್ತು 10.7-ಇಂಚಿನ ಟಚ್‌ಸ್ಕ್ರೀನ್ ಸೇರಿದಂತೆ ಬಾಗಿದ ಡಿಸ್ಪ್ಲೇ ಸೆಟಪ್ ಅನ್ನು ಪಡೆಯುತ್ತದೆ.

  • ಸುರಕ್ಷತಾ ಫೀಚರ್‌ಗಳಲ್ಲಿ 8 ಏರ್‌ಬ್ಯಾಗ್‌ಗಳು, ಪಾರ್ಕ್ ಅಸಿಸ್ಟ್ ಮತ್ತು ಹಿಂಭಾಗದ ಪಾರ್ಕಿಂಗ್ ಕ್ಯಾಮೆರಾ ಸೇರಿವೆ.

  • ಡ್ಯುಯಲ್ ಮೋಟಾರ್ ಸೆಟಪ್‌ಗೆ ಜೋಡಿಸಲಾದ 66.4 ಕಿ.ವ್ಯಾಟ್‌ ಬ್ಯಾಟರಿ ಪ್ಯಾಕ್ ಅನ್ನು ಬಳಸುತ್ತದೆ, 204 ಪಿಎಸ್‌ ಮತ್ತು 250 ಎನ್‌ಎಮ್‌ನಷ್ಟು ಔಟ್‌ಪುಟ್‌ ಅನ್ನು ಉತ್ಪಾದಿಸುತ್ತದೆ.

  • ಆಲ್-ವೀಲ್-ಡ್ರೈವ್ (AWD) ಡ್ರೈವ್‌ಟ್ರೇನ್‌ನೊಂದಿಗೆ ಬರುತ್ತದೆ.

BMW iX1 ಅನ್ನು ಮೊದಲು ಭಾರತದಲ್ಲಿ 2023 ರಲ್ಲಿ ಪರಿಚಯಿಸಲಾಯಿತು ಮತ್ತು ಈಗ, ಅದರ ಲಾಂಗ್-ವೀಲ್‌ಬೇಸ್ (LWB) ಆವೃತ್ತಿಯನ್ನು ಭಾರತ್ ಮೊಬಿಲಿಟಿ ಎಕ್ಸ್‌ಪೋ 2025ರಲ್ಲಿ ಭಾರತೀಯ ಮಾರುಕಟ್ಟೆಗೆ ಪರಿಚಯಿಸಲಾಗಿದೆ. ಈ ಬಾರಿ iX1 LWB ಸ್ಥಳೀಯವಾಗಿ ಉತ್ಪಾದಿಸಲ್ಪಡುವುದರಿಂದ, ಇದರ ಬೆಲೆ 49 ಲಕ್ಷ ರೂ.ನಿಂದ(ಎಕ್ಸ್-ಶೋರೂಂ ಪ್ಯಾನ್-ಇಂಡಿಯಾ) ಪ್ರಾರಂಭವಾಗಲಿದೆ. BMW ಭಾರತದಲ್ಲಿ iX1 LWB ನ ಡೆಲಿವೆರಿಯನ್ನು ಸಹ ಪ್ರಾರಂಭಿಸಿದೆ.

ರೆಗ್ಯುಲರ್‌ iX1ನಂತೆ ಲುಕ್‌, EV-ನಿರ್ದಿಷ್ಟ ಬದಲಾವಣೆಗಳ ಸೇರ್ಪಡೆ

iX1 LWB ಕಾರು BMW iX1 ನ ರೆಗ್ಯುಲರ್‌ ವೀಲ್‌ಬೇಸ್ ಆವೃತ್ತಿಯಂತೆಯೇ ಒಟ್ಟಾರೆ ವಿನ್ಯಾಸವನ್ನು ಹೊಂದಿದೆ ಮತ್ತು ಸಣ್ಣ ವಿನ್ಯಾಸ ಬದಲಾವಣೆಗಳನ್ನು ಮಾತ್ರ ಪಡೆಯುತ್ತದೆ. ಮುಂಭಾಗದಲ್ಲಿ, ಇದು ಮುಚ್ಚಿದ ಗ್ರಿಲ್ ಮತ್ತು ಆಪ್‌ಡೇಟ್‌ ಮಾಡಿದ ಅಲಾಯ್ ವೀಲ್‌ಗಳನ್ನು ಸಹ ಹೊಂದಿದೆ. ಇದು iX1 ನ ರೆಗ್ಯುಲರ್‌ ಆವೃತ್ತಿಯ ಸ್ಲಿಮ್ ಎಲ್‌ಇಡಿ ಹೆಡ್‌ಲೈಟ್‌ಗಳು ಮತ್ತು ಎಲ್‌ಇಡಿ ಟೈಲ್‌ಲೈಟ್‌ಗಳಂತಹ ಅಂಶಗಳನ್ನು ಉಳಿಸಿಕೊಂಡಿದೆ. iX1 LWB ಯಲ್ಲಿ ಬೇರೆ ಬದಲಾವಣೆಗಳೆಂದರೆ ಅದರ ವೀಲ್‌ಬೇಸ್ ಆಗಿದೆ.

ಕ್ಯಾಬಿನ್ ಮತ್ತು ಫೀಚರ್‌ಗಳು

BMW iX1 LWB ಯ ಡ್ಯಾಶ್‌ಬೋರ್ಡ್ ವಿನ್ಯಾಸದಲ್ಲಿ ಯಾವುದೇ ಬದಲಾವಣೆಗಳನ್ನು ಮಾಡಲಾಗಿಲ್ಲ. 10.25-ಇಂಚಿನ ಡಿಜಿಟಲ್ ಡ್ರೈವರ್ ಡಿಸ್‌ಪ್ಲೇ ಮತ್ತು 10.7-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್ ಅನ್ನು ಒಳಗೊಂಡಿರುವ ಅದರ ಬಾಗಿದ ಸಂಯೋಜಿತ ಡಿಸ್‌ಪ್ಲೇ ಇದರ ಪ್ರಮುಖ ಹೈಲೈಟ್‌ ಆಗಿದೆ. ಈ ಎಸ್‌ಯುವಿಯಲ್ಲಿರುವ ಇತರ ಫೀಚರ್‌ಗಳಲ್ಲಿ 12-ಸ್ಪೀಕರ್ ಹರ್ಮನ್ ಕಾರ್ಡನ್ ಸೌಂಡ್ ಸಿಸ್ಟಮ್, ಮಸಾಜ್ ಫಂಕ್ಷನ್‌ನೊಂದಿಗೆ ವಿದ್ಯುತ್ ಹೊಂದಾಣಿಕೆ ಮಾಡಬಹುದಾದ ಮುಂಭಾಗದ ಸೀಟುಗಳು, ಡ್ಯುಯಲ್-ಜೋನ್ ಕ್ಲೈಮೇಟ್ ಕಂಟ್ರೋಲ್, ಅಪ್‌ಸ್ಟ್ಯಾಂಡಿಂಗ್ ವೈರ್‌ಲೆಸ್ ಫೋನ್ ಚಾರ್ಜಿಂಗ್ ಮತ್ತು ಪನೋರಮಿಕ್ ಸನ್‌ರೂಫ್ ಸೇರಿವೆ. ಸುರಕ್ಷತೆಯ ವಿಷಯದಲ್ಲಿ, ಇದು 8 ಏರ್‌ಬ್ಯಾಗ್‌ಗಳು, ಹಿಂಭಾಗದ ಪಾರ್ಕಿಂಗ್ ಕ್ಯಾಮೆರಾ, ಪಾರ್ಕ್ ಅಸಿಸ್ಟ್ ಮತ್ತು ಬ್ರೇಕ್ ಕಾರ್ಯದೊಂದಿಗೆ ಕ್ರೂಸ್ ಕಂಟ್ರೋಲ್‌ ಮತ್ತು ಮುಂಭಾಗದ ಡಿಕ್ಕಿ ಎಚ್ಚರಿಕೆಯಂತಹ ಚಾಲಕ ಸಹಾಯ ಫೀಚರ್‌ಗಳನ್ನು ಹೊಂದಿದೆ.

ಹೆಚ್ಚು ಕ್ಲೈಮ್‌ ಮಾಡಲಾದ ರೇಂಜ್‌

iX1 LWB 66.4 ಕಿ.ವ್ಯಾಟ್‌ ಬ್ಯಾಟರಿ ಪ್ಯಾಕ್‌ನೊಂದಿಗೆ ಸಜ್ಜುಗೊಂಡಿದೆ, ವಿವರವಾದ ವಿಶೇಷಣಗಳು ಈ ಕೆಳಗಿನಂತಿವೆ:

ಬ್ಯಾಟರಿ ಪ್ಯಾಕ್‌

66.4 ಕಿ.ವ್ಯಾಟ್‌

ಕ್ಲೈಮ್‌ ಮಾಡಲಾದ ರೇಂಜ್‌

531 ಕಿ.ಮೀ. (MIDC)

ಪವರ್‌

204 ಪಿಎಸ್‌

ಟಾರ್ಕ್‌

250 ಎನ್‌ಎಮ್‌

ವೇಗವರ್ಧನೆ (0-100 kmph)

8.6 ಸೆಕೆಂಡ್‌ಗಳು

ಪ್ರತಿಸ್ಪರ್ಧಿಗಳು

BMW iX1 ವೋಲ್ವೋ ಇಎಕ್ಸ್‌40 ರೀಚಾರ್ಜ್ ಮತ್ತು ವೋಲ್ವೋ ಸಿ40 ರೀಚಾರ್ಜ್‌ಗೆ ನೇರ ಪ್ರತಿಸ್ಪರ್ಧಿಯಾಗಲಿದೆ. ಇದನ್ನು ಬಿವೈಡಿ ಆಟ್ಟೋ 3 ಮತ್ತು ಹ್ಯುಂಡೈ ಐಯಾನಿಕ್‌ 5 ಗೆ ಪ್ರೀಮಿಯಂ ಪರ್ಯಾಯವೆಂದು ಪರಿಗಣಿಸಬಹುದು.

ಆಟೋಮೋಟಿವ್ ಜಗತ್ತಿನಿಂದ ಕ್ಷಣಕ್ಷಣದ ಆಪ್‌ಡೇಟ್‌ಗಳನ್ನು ಪಡೆಯಲು ಕಾರ್‌ದೇಖೋ ವಾಟ್ಸಾಪ್ ಚಾನೆಲ್ ಅನ್ನು ಫಾಲೋ ಮಾಡಿ

Share via

Write your Comment on BMW ಐಎಕ್ಸ್‌1

ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ

Enable notifications to stay updated with exclusive offers, car news, and more from CarDekho!

trending ಎಲೆಕ್ಟ್ರಿಕ್ ಕಾರುಗಳು

  • ಪಾಪ್ಯುಲರ್
  • ಉಪಕಮಿಂಗ್
ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ