BMW Z4ಗೆ ಮೊದಲ ಬಾರಿಗೆ ಮ್ಯಾನುವಲ್ ಟ್ರಾನ್ಸ್ಮಿಷನ್ ಹೊಂದಿರುವ ಹೊಸ M40i ಪ್ಯೂರ್ ಇಂಪಲ್ಸ್ ಎಡಿಷನ್ ಸೇರ್ಪಡೆ
ಏಪ್ರಿಲ್ 14, 2025 04:14 pm ರಂದು dipan ಮೂಲಕ ಪ್ರಕಟಿಸಲಾಗಿದೆ
- ಕಾಮೆಂಟ್ ಅನ್ನು ಬರೆಯಿರಿ
ಪ್ಯೂರ್ ಇಂಪಲ್ಸ್ ಎಡಿಷನ್ ಮ್ಯಾನುವಲ್ ಮತ್ತು ಆಟೋಮ್ಯಾಟಿಕ್ ಟ್ರಾನ್ಸ್ಮಿಷನ್ ಎರಡರಲ್ಲೂ ಲಭ್ಯವಿದೆ, ಮ್ಯಾನ್ಯುವ ಗೇರ್‌ಬಾಕ್ಸ್ ಆಟೋಮ್ಯಾಟಿಕ್‌ಗಿಂತ ಸುಮಾರು 1 ಲಕ್ಷ ರೂ.ಗಳಷ್ಟು ದುಬಾರಿಯಾಗಿದೆ
BMW Z4 M40i ಪ್ಯೂರ್ ಇಂಪಲ್ಸ್ ಎಡಿಷನ್‌ನ ಬಿಡುಗಡೆಯೊಂದಿಗೆ, ಭಾರತದಲ್ಲಿ ಮೊದಲ ಬಾರಿಗೆ ಈ ರೋಡ್‌ಸ್ಟರ್ ಮ್ಯಾನುವಲ್ ಟ್ರಾನ್ಸ್‌ಮಿಷನ್ ಅನ್ನು ಪಡೆದುಕೊಂಡಿದೆ. ಇದು ಹೊಸ ಅಲಾಯ್ ವೀಲ್‌ಗಳು ಮತ್ತು ಹೊಸ ಇಂಟೀರಿಯರ್ ಥೀಮ್ ಅನ್ನು ಪಡೆಯುತ್ತದೆ. ಇದಲ್ಲದೆ, ಈ ಸ್ಪೆಷಲ್ ಎಡಿಷನ್ ಮೊಡೆಲ್ ಆಟೋಮ್ಯಾಟಿಕ್ ಮತ್ತು ಮ್ಯಾನ್ಯುವಲ್ ಗೇರ್‌ಬಾಕ್ಸ್‌ನ ಆಯ್ಕೆಗಳೊಂದಿಗೆ ಲಭ್ಯವಿದೆ ಮತ್ತು ವಿವರವಾದ ಬೆಲೆಗಳು ಇಲ್ಲಿವೆ:
ವೇರಿಯೆಂಟ್ |
ಬೆಲೆ |
ಎಮ್40ಐ (AT) |
92.90 ಲಕ್ಷ ರೂ. |
M40i ಪ್ಯೂರ್ ಇಂಪಲ್ಸ್ ಎಡಿಷನ್ ಆಟೋಮ್ಯಾಟಿಕ್ (ಹೊಸ) |
96.90 ಲಕ್ಷ ರೂ. |
M40i ಪ್ಯೂರ್ ಇಂಪಲ್ಸ್ ಎಡಿಷನ್ ಮ್ಯಾನ್ಯುವಲ್ (ಹೊಸದು) |
97.90 ಲಕ್ಷ ರೂ. |
ಬೆಲೆಗಳು ಭಾರತಾದ್ಯಂತದ ಎಕ್ಸ್-ಶೋರೂಂ ಆಗಿದೆ.
ಪ್ಯೂರ್ ಇಂಪಲ್ಸ್ ಎಡಿಷನ್ ಸಂಪೂರ್ಣವಾಗಿ ವಿದೇಶದಿಂದ ರಫ್ತಾಗುವ ಕಾರು(CBU) ಆಗಿ ಲಭ್ಯವಿರುತ್ತದೆ. ನೀವು ಆಯ್ಕೆ ಮಾಡಿಕೊಳ್ಳುವ ಟ್ರಾನ್ಸ್‌ಮಿಷನ್ ಆಯ್ಕೆಯನ್ನು ಅವಲಂಬಿಸಿ ಇದು ಸ್ಟ್ಯಾಂಡರ್ಡ್ ಕಾರಿನ ಮೇಲೆ ಸುಮಾರು 5 ಲಕ್ಷ ರೂ.ಗಳವರೆಗೆ ಹೆಚ್ಚಿನ ಬೆಲೆಯನ್ನು ಹೊಂದಿರಬಹುದು. ಈಗ ಸ್ಪೇಷಲ್ ಎಡಿಷನ್‌ನ BMW Z4 ನಲ್ಲಿ ಹೊಸದಾಗಿರುವ ಎಲ್ಲವನ್ನೂ ನೋಡೋಣ.
BMW Z4 ಪ್ಯೂರ್ ಇಂಪಲ್ಸ್ ಎಡಿಷನ್: ಹೊಸತೇನಿದೆ ?
ಹೊಸ ಪ್ಯೂರ್ ಇಂಪಲ್ಸ್ ಎಡಿಷನ್‌ನ ಎಕ್ಸ್‌ಟೀರಿಯರ್ ವಿನ್ಯಾಸ ಅಂಶಗಳು ರೆಗ್ಯುಲರ್ M40i ನಂತೆಯೇ ಇದ್ದರೂ, ಸ್ಪೇಷಲ್ ಎಡಿಷನ್ ಮುಂಭಾಗದಲ್ಲಿ 19-ಇಂಚಿನ ಅಲಾಯ್ ವೀಲ್ ಸೆಟಪ್ ಮತ್ತು ಹಿಂಭಾಗದಲ್ಲಿ 20-ಇಂಚಿನ ರಿಮ್‌ಗಳನ್ನು ಹೊಂದಿದ್ದು, ಇದು ಹೊಸ ವಿನ್ಯಾಸವನ್ನು ಪಡೆಯುತ್ತದೆ. ಇದು ಕೆಂಪು ಬ್ರೇಕ್ ಕ್ಯಾಲಿಪರ್‌ಗಳು ಮತ್ತು ಬಾಗಿಲುಗಳ ಮೇಲೆ ಹೊಳಪು ಕಪ್ಪು ಟ್ರಿಮ್ ಅನ್ನು ಸಹ ಪಡೆಯುತ್ತದೆ. ಇದಲ್ಲದೆ, ಇದು ರೋಡ್‌ಸ್ಟರ್‌ನ ಮಿಶ್ರಣದಲ್ಲಿ ಎರಡು ಹೊಸ ಬಣ್ಣಗಳನ್ನು ಪರಿಚಯಿಸುತ್ತದೆ, ಅವುಗಳೆಂದರೆ ಫ್ರೋಜನ್ ಡೀಪ್ ಗ್ರೀನ್ ಮತ್ತು ಸ್ಯಾನ್ರೆಮೊ ಗ್ರೀನ್.
ಒಳಭಾಗದಲ್ಲಿ, ಮ್ಯಾನುವಲ್ M40i ಪ್ಯೂರ್ ಇಂಪಲ್ಸ್ ಎಡಿಷನ್‌ನ ವೇರಿಯೆಂಟ್ ಸ್ಟ್ಯಾಂಡರ್ಡ್ ವೇರಿಯೆಂಟ್‌ಗಳ ಸಂಪೂರ್ಣ ಕಪ್ಪು ಅಥವಾ ಕಪ್ಪು ಮತ್ತು ಕೆಂಪು ವರ್ಣಗಳ ಮಿಶ್ರಣಕ್ಕೆ ಹೋಲಿಸಿದರೆ ವಿಶೇಷವಾದ ಡ್ಯುಯಲ್-ಟೋನ್ ಕಪ್ಪು ಮತ್ತು ಖಾಕಿ ಇಂಟೀರಿಯರ್‌ಅನ್ನು ಪಡೆಯುತ್ತದೆ.
ಇದನ್ನು ಹೊರತುಪಡಿಸಿ, ಹೊಸ ಎಡಿಷನ್‌ನಲ್ಲಿ ಡ್ಯಾಶ್‌ಬೋರ್ಡ್ ವಿನ್ಯಾಸ, ಫೀಚರ್‌ಗಳು, ಸುರಕ್ಷತಾ ತಂತ್ರಜ್ಞಾನ ಮತ್ತು ಪವರ್‌ಟ್ರೇನ್ ಆಯ್ಕೆ ಸೇರಿದಂತೆ ಎಲ್ಲವೂ ರೆಗ್ಯುಲರ್ M40i ವೇರಿಯೆಂಟ್‌ನಂತೆಯೇ ಇರುತ್ತದೆ.
ಇದನ್ನೂ ಓದಿ: ದಕ್ಷಿಣ ಕೊರಿಯಾದಲ್ಲಿ ಹೊಸ ಜನರೇಶನ್‌ನ Hyundai Venue ಪ್ರತ್ಯಕ್ಷ, ಇದರ ಎಕ್ಸ್‌ಟಿರಿಯರ್ ವಿನ್ಯಾಸದ ಕುರಿತು ಒಂದಿಷ್ಟು..
BMW Z4: ಫೀಚರ್‌ಗಳು ಮತ್ತು ಸುರಕ್ಷತೆ
ಫೀಚರ್‌ಗಳ ವಿಷಯದಲ್ಲಿ, BMW Z4 10.25-ಇಂಚಿನ ಸಂಪೂರ್ಣ ಡಿಜಿಟಲ್ ಡ್ರೈವರ್ ಡಿಸ್‌ಪ್ಲೇ, ಇದೇ ಗಾತ್ರದ ಟಚ್‌ಸ್ಕ್ರೀನ್, ಡ್ಯುಯಲ್-ಜೋನ್ ಆಟೋ ಎಸಿ, 6-ಬಣ್ಣದ ಆಂಬಿಯೆಂಟ್ ಲೈಟಿಂಗ್ ಮತ್ತು ಡ್ರೈವರ್ ಸೀಟಿಗೆ ಮೆಮೊರಿ ಫಂಕ್ಷನ್‌ನೊಂದಿಗೆ ಬಟನ್‌ನಲ್ಲಿ ಹೊಂದಾಣಿಕೆ ಮಾಡಬಹುದಾದ ಮುಂಭಾಗದ ಸೀಟುಗಳನ್ನು ಹೊಂದಿದೆ. ಇದು 12-ಸ್ಪೀಕರ್‌ಗಳ ಹರ್ಮನ್ ಕಾರ್ಡನ್ ಸೌಂಡ್ ಸಿಸ್ಟಮ್, ಬಣ್ಣದ ಹೆಡ್ಸ್-ಅಪ್ ಡಿಸ್‌ಪ್ಲೇ, ವೈರ್‌ಲೆಸ್ ಫೋನ್ ಚಾರ್ಜರ್ ಮತ್ತು ವಿದ್ಯುತ್ ಹಿಂತೆಗೆದುಕೊಳ್ಳುವ ಸಾಫ್ಟ್ ಟಾಪ್ ಅನ್ನು ಸಹ ಪಡೆಯುತ್ತದೆ.
ಇದರ ಸುರಕ್ಷತಾ ಸೂಟ್ 6 ಏರ್‌ಬ್ಯಾಗ್‌ಗಳು (ಸ್ಟ್ಯಾಂಡರ್ಡ್ ಆಗಿ), ಡೈನಾಮಿಕ್ ಸ್ಟೆಬಿಲಿಟಿ ಕಂಟ್ರೋಲ್ (DSC), ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್ (TPMS) ಮತ್ತು ಆಕ್ಟಿವ್ ಕ್ರೂಸ್ ಕಂಟ್ರೋಲ್ ಮತ್ತು ಲೇನ್ ಕೀಪ್ ಅಸಿಸ್ಟ್ ಸೇರಿದ ಫೀಚರ್‌ಗಳೊಂದಿಗೆ ಸುಧಾರಿತ ಚಾಲಕ ಸಹಾಯ ವ್ಯವಸ್ಥೆ (ADAS) ಸೂಟ್ ಅನ್ನು ಒಳಗೊಂಡಿದೆ.
BMW Z4: ಪವರ್‌ಟ್ರೇನ್ ಆಯ್ಕೆಗಳು
BMW Z4 3-ಲೀಟರ್ ಆರು-ಸಿಲಿಂಡರ್ ಎಂಜಿನ್‌ನೊಂದಿಗೆ ಲಭ್ಯವಿದೆ, ಈ ಕೆಳಗಿನ ವಿಶೇಷಣಗಳೊಂದಿಗೆ:
ಎಂಜಿನ್ |
3-ಲೀಟರ್ ಸ್ಟ್ರೈಟ್ ಸಿಕ್ಸ್ ಟ್ವಿನ್-ಟರ್ಬೊ ಪೆಟ್ರೋಲ್ ಎಂಜಿನ್ |
ಪವರ್ |
340 ಪಿಎಸ್ |
ಟಾರ್ಕ್ |
500 ಎನ್‌ಎಮ್ |
ಟ್ರಾನ್ಸ್‌ಮಿಷನ್ |
6-ಸ್ಪೀಡ್ ಮ್ಯಾನ್ಯುವಲ್ / 8-ಸ್ಪೀಡ್ ಆಟೋಮ್ಯಾಟಿಕ್ |
*AT = ಟಾರ್ಕ್ ಕನ್ವರ್ಟರ್ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್
BMW Z4 ಆಟೋಮ್ಯಾಟಿಕ್ ಗೇರ್‌ಬಾಕ್ಸ್‌ನೊಂದಿಗೆ 4.5 ಸೆಕೆಂಡುಗಳಲ್ಲಿ ಮತ್ತು ಆಟೋಮ್ಯಾಟಿಕ್ ಸೆಟಪ್‌ನೊಂದಿಗೆ 4.6 ಸೆಕೆಂಡುಗಳಲ್ಲಿ 0-100 ಕಿಮೀ ವೇಗವನ್ನು ತಲುಪುತ್ತದೆ.
BMW Z4: ಪ್ರತಿಸ್ಪರ್ಧಿಗಳು
ರೋಡ್‌ಸ್ಟರ್‌ನ ರೆಗ್ಯುಲರ್ ಆವೃತ್ತಿಯಂತೆ, BMW Z4 ಪ್ಯೂರ್ ಇಂಪಲ್ಸ್ ಎಡಿಷನ್ ಭಾರತದಲ್ಲಿ ಪೋರ್ಷೆ 918 ಸ್ಪೈಡರ್ ಮತ್ತು ಮರ್ಸಿಡಿಸ್-ಬೆನ್ಜ್ CLE ಕ್ಯಾಬ್ರಿಯೊಲೆಟ್‌ಗಳಿಗೆ ಪ್ರತಿಸ್ಪರ್ಧಿಯಾಗಿದೆ.
ಆಟೋಮೋಟಿವ್ ಜಗತ್ತಿನಿಂದ ತ್ವರಿತ ಆಪ್‌ಡೇಟ್‌ಗಳನ್ನು ಪಡೆಯಲು ಕಾರ್‌ದೇಖೋದ ವಾಟ್ಸಾಪ್ ಚಾನೆಲ್ ಅನ್ನು ಫಾಲೋ ಮಾಡಲು ಮಿಸ್ ಮಾಡ್ಬೇಡಿ