• English
  • Login / Register

BYD e6 ಫೇಸ್‌ಲಿಫ್ಟ್‌ನ ಭಾರತೀಯ ಹೆಸರು eMAX 7

ಸೆಪ್ಟೆಂಬರ್ 11, 2024 07:21 pm ರಂದು shreyash ಮೂಲಕ ಪ್ರಕಟಿಸಲಾಗಿದೆ

  • 21 Views
  • ಕಾಮೆಂಟ್‌ ಅನ್ನು ಬರೆಯಿರಿ

BYD eMAX 7 (e6 ಫೇಸ್‌ಲಿಫ್ಟ್) ಈಗಾಗಲೇ BYD M6 ಎಂಬ ಹೆಸರಿನ ಅಡಿಯಲ್ಲಿ ಅಂತಾರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಮಾರಾಟದಲ್ಲಿದೆ

BYD eMAX7

  •  BYD e6 2022 ರಲ್ಲಿ ಭಾರತದಲ್ಲಿ ಚೀನಾದ ವಾಹನ ತಯಾರಕರ ಮೊದಲ ಕಾರಾಗಿದೆ.

  •  eMAX 7 ಅಂತರಾಷ್ಟ್ರೀಯ ಮಾಡೆಲ್ ಆಗಿರುವ BYD M6 ನಲ್ಲಿರುವ ಡಿಸೈನ್ ಅಪ್ಡೇಟ್ ಗಳನ್ನು ಪಡೆಯುವ ಸಾಧ್ಯತೆಯಿದೆ.

  •  ಹೊರಭಾಗದ ಅಪ್ಡೇಟ್ ಗಳಲ್ಲಿ ಹೊಸ LED ಲೈಟಿಂಗ್ ಮತ್ತು ರೀಡಿಸೈನ್ ಗೊಳಿಸಲಾದ ಅಲೊಯ್ ವೀಲ್ಸ್ ಅನ್ನು ಪಡೆಯುವ ಸಾಧ್ಯತೆಯಿದೆ.

  •  ಫೀಚರ್ ಗಳ ವಿಷಯದಲ್ಲಿ 12.8-ಇಂಚಿನ ಟಚ್‌ಸ್ಕ್ರೀನ್ ಸಿಸ್ಟಮ್, ವೈರ್‌ಲೆಸ್ ಫೋನ್ ಚಾರ್ಜರ್ ಮತ್ತು ಪನರೋಮಿಕ್ ಗ್ಲಾಸ್ ರೂಫ್ ಅನ್ನು ಒಳಗೊಂಡಿರಬಹುದು.

  •  ಹೊರದೇಶದಲ್ಲಿ, M6 ಎರಡು ಬ್ಯಾಟರಿ ಪ್ಯಾಕ್ ಆಯ್ಕೆಗಳೊಂದಿಗೆ ಲಭ್ಯವಿದೆ: 55.4 kWh ಮತ್ತು 71.8 kWh, ಇದು 530 ಕಿಮೀವರೆಗೆ ಕ್ಲೈಮ್ ಮಾಡಲಾದ ರೇಂಜ್ ಅನ್ನು ನೀಡುತ್ತದೆ.

  •  eMAX 7 e6 ಗಿಂತ ಹೆಚ್ಚು ಪ್ರೀಮಿಯಂ ಬೆಲೆ ಹೊಂದಿರಬಹುದು, e6 ಬೆಲೆ ರೂ 29.15 ಲಕ್ಷ (ಎಕ್ಸ್ ಶೋ ರೂಂ ದೆಹಲಿ).

 ಭಾರತದಲ್ಲಿ ಚೀನೀ ವಾಹನ ತಯಾರಕರ ಮೊದಲ ಕಾರಾಗಿರುವ BYD e6, ಶೀಘ್ರದಲ್ಲೇ ಮಿಡ್‌ಲೈಫ್ ಅಪ್ಡೇಟ್ ಅನ್ನು ಪಡೆಯಲಿದೆ. ಅದರ ಬಿಡುಗಡೆಗೆ ಮೊದಲು, BYD ಫೇಸ್‌ಲಿಫ್ಟ್ ಆಗಿರುವ e6 ಅನ್ನು 'eMAX 7' ಎಂದು ಹೆಸರಿಸಿದೆ. ಜಾಗತಿಕವಾಗಿ, BYD ಫೇಸ್‌ಲಿಫ್ಟ್ ಆಗಿರುವ e6 ಅನ್ನು 'M6' ಎಂದು ಮಾರಾಟ ಮಾಡುತ್ತಿದೆ. ಭಾರತದಲ್ಲಿ ಬರಲಿರುವ eMAX 7 ಹೊಸ ಡಿಸೈನ್, ಹೆಚ್ಚುವರಿ ಫೀಚರ್ ಗಳು ಮತ್ತು ಸುಧಾರಿತ ಡ್ರೈವಿಂಗ್ ರೇಂಜ್ ಅನ್ನು ಹೊಂದಿರುತ್ತದೆ ಎಂದು ನಿರೀಕ್ಷಿಸಲಾಗಿದೆ.

 'eMAX 7' ಹೆಸರಿನ ಅರ್ಥವೇನು?

BYD eMAX 7 Front & Rear

 BYD ಪ್ರಕಾರ, e6 ಫೇಸ್‌ಲಿಫ್ಟ್‌ಗೆ ನೀಡಲಾದ ಹೊಸ ಹೆಸರು ಮೂರು ವಿಷಯಗಳನ್ನು ಸೂಚಿಸುತ್ತದೆ: ಹೆಸರಿನಲ್ಲಿರುವ 'e' ಎಂದರೆ EV, MAX ಎಂದರೆ ಉತ್ತಮ ಪರ್ಫಾರ್ಮೆನ್ಸ್ ಮತ್ತು ರೇಂಜ್, ಮತ್ತು '7' ಇದು e6 MPV ನಂತರದ ಮುಂದಿನ ಮಾಡೆಲ್ ಎಂದು ತೋರಿಸುತ್ತದೆ. 'eMAX 7' ಹೆಸರು ಉತ್ತಮ ಎಲೆಕ್ಟ್ರಿಕ್ ಪರ್ಫಾರ್ಮೆನ್ಸ್ ಮತ್ತು ಹೆಚ್ಚು ಕುಟುಂಬ-ಸ್ನೇಹಿ ಅನುಭವವನ್ನು ನೀಡುತ್ತದೆ ಎಂದು ವಾಹನ ತಯಾರಕರು ತಿಳಿಸಿದ್ದಾರೆ. eMAX 7 6 ಮತ್ತು 7-ಸೀಟರ್ ಈ ಎರಡೂ ಆಯ್ಕೆಗಳಲ್ಲಿ ಬರಬಹುದು ಎಂದು ಇದು ಸೂಚಿಸುತ್ತದೆ, ಏಕೆಂದರೆ ಈಗಿರುವ e6 5-ಸೀಟರ್ ಆಗಿ ಮಾತ್ರ ಲಭ್ಯವಿದೆ.

 ಡಿಸೈನ್ ಬದಲಾವಣೆಗಳು

BYD eMAX 7 Side

 BYD eMAX 7 e6 ಅನ್ನು ಹೋಲುತ್ತದೆ, ಆದರೆ ಅಂತರರಾಷ್ಟ್ರೀಯವಾಗಿ ಮಾರಾಟವಾಗುತ್ತಿರುವ M6 ಮಾಡೆಲ್ ನಲ್ಲಿ ಇರುವ ಕೆಲವು ಡಿಸೈನ್ ಅಪ್ಡೇಟ್ ಗಳನ್ನು ಕೂಡ ನೀಡುವ ಸಾಧ್ಯತೆಯಿದೆ. ಇದು BYD ಆಟ್ಟೋ 3 ನಿಂದ ಸ್ಫೂರ್ತಿ ಪಡೆದ ಹೊಸ LED ಹೆಡ್‌ಲೈಟ್‌ಗಳನ್ನು ಮತ್ತು ಹೊಸ ಗ್ರಿಲ್ ಅನ್ನು ಪಡೆಯಲಿದೆ. ನಿರೀಕ್ಷಿಸಲಾಗಿರುವ ಇತರ ಬದಲಾವಣೆಗಳಲ್ಲಿ ಹೊಸದಾಗಿ ಡಿಸೈನ್ ಗೊಳಿಸಲಾದ ಅಲೊಯ್ ವೀಲ್ ಗಳು ಮತ್ತು ಟ್ವೀಕ್ ಮಾಡಲಾದ LED ಟೈಲ್ ಲೈಟ್‌ಗಳು ಸೇರಿವೆ.

 ಇದನ್ನು ಕೂಡ ಓದಿ: MG ವಿಂಡ್ಸರ್ EV: ಯಾವ ಯಾವ ಫೀಚರ್ ಗಳನ್ನು ನಿರೀಕ್ಷಿಸಬಹುದು

 ಕ್ಯಾಬಿನ್ ಮತ್ತು ನಿರೀಕ್ಷಿಸಲಾಗಿರುವ ಫೀಚರ್ ಗಳು

BYD eMAX 7 Interior

 eMAX 7 BYD M6 ನಲ್ಲಿರುವ ಡ್ಯಾಶ್‌ಬೋರ್ಡ್ ಮತ್ತು ಕ್ಯಾಬಿನ್ ಡಿಸೈನ್ ಅನ್ನು ಬಳಸಬಹುದು. eMAX 7 ರ ಜಾಗತಿಕ-ಸ್ಪೆಕ್ ವರ್ಷನ್ ಅಪ್ಡೇಟ್ ಆಗಿರುವ ಡ್ಯಾಶ್‌ಬೋರ್ಡ್ ಡಿಸೈನ್ ಜೊತೆಗೆ ಡ್ಯುಯಲ್-ಟೋನ್ ಕ್ಯಾಬಿನ್ ಥೀಮ್‌ನೊಂದಿಗೆ ಬರುತ್ತದೆ. ಸೆಂಟರ್ ಕನ್ಸೋಲ್ ಅನ್ನು ಕೂಡ ರಿವೈಸ್ ಮಾಡಲಾಗಿದೆ ಮತ್ತು ಹೊಸದಾದ ಡ್ರೈವ್ ಮೋಡ್ ಸೆಲೆಕ್ಟರ್ ಅನ್ನು ಕೂಡ ನೀಡಲಾಗಿದೆ.

 ಫೀಚರ್ ಗಳ ವಿಷಯದಲ್ಲಿ, eMAX 7 ದೊಡ್ಡದಾದ 12.8-ಇಂಚಿನ ಟರ್ನಿಂಗ್ ಟಚ್‌ಸ್ಕ್ರೀನ್, ವೈರ್‌ಲೆಸ್ ಫೋನ್ ಚಾರ್ಜರ್, ಪನರೋಮಿಕ್ ಗ್ಲಾಸ್ ರೂಫ್ ಮತ್ತು ವೆಂಟಿಲೇಟೆಡ್ ಫ್ರಂಟ್ ಸೀಟ್ ಗಳನ್ನು M6 ನಿಂದ ಪಡೆಯಬಹುದು. ಸುರಕ್ಷತೆಯ ವಿಷಯದಲ್ಲಿ ಆರು ಏರ್‌ಬ್ಯಾಗ್‌ಗಳು, 360-ಡಿಗ್ರಿ ಕ್ಯಾಮೆರಾ, ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್ ಮತ್ತು ಆಲ್-ವೀಲ್ ಡಿಸ್ಕ್ ಬ್ರೇಕ್‌ಗಳನ್ನು ಒಳಗೊಂಡಿರಬಹುದು. ಇದು ಆಟೊನೊಮಸ್ ಎಮರ್ಜೆನ್ಸಿ ಬ್ರೇಕಿಂಗ್, ಅಡಾಪ್ಟಿವ್ ಕ್ರೂಸ್ ಕಂಟ್ರೋಲ್, ಲೇನ್ ಸೆಂಟ್ರಿಂಗ್ ಅಸಿಸ್ಟ್, ಬ್ಲೈಂಡ್ ಸ್ಪಾಟ್ ಮಾನಿಟರಿಂಗ್ ಮತ್ತು ಆಟೋಮ್ಯಾಟಿಕ್ ಹೈ ಬೀಮ್ ನಂತಹ ಲೆವೆಲ್ 2 ಅಡ್ವಾನ್ಸ್ಡ್ ಡ್ರೈವರ್ ಅಸ್ಸಿಸ್ಟಂಸ್ ಸಿಸ್ಟಮ್ ಗಳನ್ನು (ADAS) ಕೂಡ ಪಡೆಯಬಹುದು.

 ಪವರ್‌ಟ್ರೇನ್ ವಿವರಗಳು

 ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿರುವ BYD eMAX 7 ಎರಡು ಬ್ಯಾಟರಿ ಪ್ಯಾಕ್ ಆಯ್ಕೆಗಳೊಂದಿಗೆ ಬರುತ್ತದೆ: 55.4 kWh ಪ್ಯಾಕ್ ಮತ್ತು ದೊಡ್ಡದಾದ 71.8 kWh. 55.4 kWh ಅನ್ನು 163 PS ಎಲೆಕ್ಟ್ರಿಕ್ ಮೋಟರ್‌ಗೆ, ಮತ್ತು 71.8 kWh ಅನ್ನು 204 PS ಯೂನಿಟ್ ಗೆ ಜೋಡಿಸಲಾಗಿದೆ. ಇದು NEDC (ನ್ಯೂ ಯುರೋಪಿಯನ್ ಡ್ರೈವಿಂಗ್ ಸೈಕಲ್) ಕ್ಲೇಮ್ ಮಾಡಿರುವ 530 ಕಿಮೀ ರೇಂಜ್ ಅನ್ನು ಹೊಂದಿದೆ ಮತ್ತು ವೆಹಿಕಲ್-ಟು-ಲೋಡ್ (V2L) ಫಂಕ್ಷನ್ ಅನ್ನು ಒಳಗೊಂಡಿದೆ.

 ನಿರೀಕ್ಷಿಸಲಾಗಿರುವ ಬೆಲೆ ಮತ್ತು ಪ್ರತಿಸ್ಪರ್ಧಿಗಳು

 ಈಗಿರುವ e6 ಬೆಲೆಯು ರೂ. 29.15 ಲಕ್ಷ (ಎಕ್ಸ್ ಶೋರೂಂ ಪ್ಯಾನ್ ಇಂಡಿಯಾ) ಇದೆ ಮತ್ತು ಇದಕ್ಕೆ ಹೋಲಿಸಿದರೆ BYD eMAX 7 ಪ್ರೀಮಿಯಂ ಬೆಲೆಯನ್ನು ಹೊಂದುವ ನಿರೀಕ್ಷೆಯಿದೆ. ಇದು ಭಾರತದಲ್ಲಿ ಯಾವುದೇ ನೇರ ಪ್ರತಿಸ್ಪರ್ಧಿಗಳನ್ನು ಹೊಂದಿಲ್ಲ ಆದರೆ MPV ಅನ್ನು ಟೊಯೋಟಾ ಇನ್ನೋವಾ ಹೈಕ್ರಾಸ್ ಮತ್ತು ಟೊಯೋಟಾ ಇನ್ನೋವಾ ಕ್ರಿಸ್ಟಾಗೆ EV ಪರ್ಯಾಯ ಆಯ್ಕೆಯಾಗಿ ಪರಿಗಣಿಸಬಹುದು.

ಎಲ್ಲಾ ಇತ್ತೀಚಿನ ಆಟೋಮೋಟಿವ್ ಆಪ್‌ಡೇಟ್‌ಗಳಿಗಾಗಿ ಕಾರ್‌ದೇಖೋದ ವಾಟ್ಸ್ಆಪ್ ಚಾನಲ್ ಅನ್ನು ಫಾಲೋ ಮಾಡಿ 

 ಇನ್ನಷ್ಟು ಓದಿ: BYD E6 ಆಟೋಮ್ಯಾಟಿಕ್

ಅವರಿಂದ ಪ್ರಕಟಿಸಲಾಗಿದೆ
was this article helpful ?

0 out of 0 found this helpful

Write your ಕಾಮೆಂಟ್

Read Full News

ಕಾರು ಸುದ್ದಿ

  • ಟ್ರೆಂಡಿಂಗ್ ಸುದ್ದಿ
  • ಇತ್ತಿಚ್ಚಿನ ಸುದ್ದಿ

trending ಎಲೆಕ್ಟ್ರಿಕ್ ಕಾರುಗಳು

  • ಪಾಪ್ಯುಲರ್
  • ಉಪಕಮಿಂಗ್
×
We need your ನಗರ to customize your experience