• English
  • Login / Register

ಭಾರತದಲ್ಲಿ $1 ಬಿಲಿಯನ್ ಹೂಡಿಕೆಯ BYDಯ ಪ್ರಸ್ತಾಪ ತಿರಸ್ಕೃತ: ಇಲ್ಲಿವೆ ವಿವರಗಳು

ಜುಲೈ 25, 2023 06:21 pm ರಂದು rohit ಮೂಲಕ ಪ್ರಕಟಿಸಲಾಗಿದೆ

  • 20 Views
  • ಕಾಮೆಂಟ್‌ ಅನ್ನು ಬರೆಯಿರಿ

ಚೀನಾದ EV ತಯಾರಕರು ಭಾರತದಲ್ಲಿ EV ತಯಾರಿಕಾ ಘಟಕವನ್ನು ಸ್ಥಾಪಿಸಲು ಹೈದರಾಬಾದ್ ಮೂಲದ ಖಾಸಗಿ ಕಂಪನಿಯೊಂದಿಗೆ ಕೈಜೋಡಿಸಲು ಯೋಜನೆ ರೂಪಿಸುತ್ತಿದ್ದರು.

BYD E6 and Atto 3

 ಚೀನಾದ EV ತಯಾರಕರಾದ ಬಿಲ್ಡ್ ಯುವರ್ ಡ್ರೀಮ್ಸ್ (BYD), ನಮ್ಮ ಮಾರುಕಟ್ಟೆಯಲ್ಲಿ ಒಂದು ಶತಕೋಟಿ ಡಾಲರ್ ಹೂಡಿಕೆ ಮಾಡುವ ಪ್ರಸ್ತಾತಪವನ್ನು ಮುಂದಿಟ್ಟ ಕೆಲವೇ ದಿನಗಳಲ್ಲಿ, ಭಾರತ ಸರ್ಕಾರ ಈಗ ಅದನ್ನು ತಿರಸ್ಕರಿಸಿದೆ. ಈ ನಿರ್ಧಾರದ ಹಿಂದೆ ಸಾರ್ವಜನಿಕವಾಗಿ ತಿಳಿದಿರುವ ಏಕೈಕ ಕಾರಣವೆಂದರೆ, ಸಂಬಂಧಿಸಿದ ಭದ್ರತಾ ಅಧಿಕಾರಿಗಳು ಎತ್ತಿದ “ಭಾರತದಲ್ಲಿ ಚೀನಾದ ಹೂಡಿಕೆಗಳಿಗೆ ಸಂಬಂಧಿಸಿದಂತೆ ಪರಿಶೀಲನೆಯ ಸಂದರ್ಭದಲ್ಲಿ ಫ್ಲ್ಯಾಗ್ ಮಾಡಲಾದ ಭದ್ರತಾ ಕಾಳಜಿ"ಯ ಆಕ್ಷೇಪ ಎಂದು ದಿ ಇಕಾನಾಮಿಕ್ ಟೈಮ್ಸ್ ವರದಿ ಮಾಡಿದೆ.

 ಯೋಜಿತ ಡೀಲ್ ಬಗೆಗಿನ ವಿವರಗಳು

BYD Atto 3

 2023ರ ಜುಲೈ ಮಧ್ಯದಲ್ಲಿ, BYDಯು “ಮೇಘಾ ಇಂಜಿನಿಯರಿಂಗ್ ಆಂಡ್ ಇನ್ಫ್ರಾಸ್ಟ್ರಕ್ಚರ್ಸ್ ಲಿಮಿಟೆಡ್” ಎಂಬ ಹೈದರಬಾದ್ ಮೂಲದ ಖಾಸಗಿ ಕಂಪನಿಯೊಂದಿಗೆ ಭಾರತದಲ್ಲಿ ಇಲೆಕ್ಟ್ರಿಕ್ ಕಾರುಗಳು ಮತ್ತು ಬ್ಯಾಟರಿಗಳನ್ನು ನಿರ್ಮಿಸಲು ಜಂಟಿ ಉದ್ಯಮವನ್ನು ರೂಪಿಸಲು ಪಾಲುದಾರಿಕೆ ಹೊಂದುವ ಯೋಜನೆ ರೂಪಿಸಿತ್ತು. ಎರಡೂ ಕಂಪನಿಗಳು ಒಟ್ಟಾಗಿ ಹೈದರಾಬಾದ್‌ನಲ್ಲೇ EV ಘಟಕವನ್ನು ಸ್ಥಾಪಿಸಲು ಪ್ರಸ್ತಾಪಿಸಿ ಉದ್ಯಮ ಮತ್ತು ಆಂತರಿಕ ವ್ಯಾಪಾರದ ಉತ್ತೇಜನ ಇಲಾಖೆಗೆ (DPIIT)  ಅರ್ಜಿಯನ್ನು ಸಲ್ಲಿಸಿದ್ದವು.  

 ಈ ಪ್ರಸ್ತಾವನೆಯಲ್ಲಿ, ಎರಡು ಕಂಪನಿಗಳು ವಾರ್ಷಿಕ 10,000 ದಿಂದ 15.000 ಇಲೆಕ್ಟ್ರಿಕ್ ಕಾರುಗಳನ್ನು ತಯಾರಿಸುವ ಯೋಜನೆಯನ್ನು ಉಲ್ಲೇಖಿಸಿದ್ದವು. ಬಂಡವಾಳದ ಅವಶ್ಯಕತೆಗಳನ್ನು ಮೇಘಾ ಇಂಜಿನಿಯರಿಂಗ್ ಆಂಡ್ ಇನ್ಫ್ರಾಸ್ಟ್ರಕ್ಚರ್ಸ್ ಲಿಮಿಟೆಡ್ ಪೂರೈಸಬೇಕಿದ್ದರೆ, ಕೌಶಲ್ಯ ಮತ್ತು ತಂತ್ರಜ್ಞಾನದ ಜವಾಬ್ದಾರಿ BYDಯದ್ದಾಗಿತ್ತು.

 ಇದನ್ನೂ ಓದಿ:  BYDಯ ಈ ಇಲೆಕ್ಟ್ರಿಕ್ ಹ್ಯಾಚ್‌ಬ್ಯಾಕ್ MG ಕಾಮೆಟ್ EVಯ ಬೆವರಿಳಿಸಬಹುದು

 ತಿರಸ್ಕೃತವಾಗಲು ಕಾರಣವೇನು?

BYD E6

 ಚೀನಾದ ಮತ್ತೊಂದು ಅಂಗಸಂಸ್ಥೆ, MG ಮೋಟರ್ ಇಂಡಿಯಾ ಮುಂದಿನ ಕೆಲವು ವರ್ಷಗಳಲ್ಲಿ ಭಾರತೀಯ ಮಾಲಿಕತ್ವವನ್ನು ದುರ್ಬಲಗೊಳಿಸಲು ಪ್ರಯತ್ನಿಸುತ್ತಿರುವುದನ್ನು ನಾವು ನೋಡಿದ್ದೇವೆ. ಆದರೆ ಚೀನಾ ಮೂಲದ ಕಂಪನಿಗಳು ಅಥವಾ ಅಂಗಸಂಸ್ಥೆಗಳು ಇಂತಹ ಪ್ರಯತ್ನಕ್ಕೆ ಕೈಹಾಕಲು ಕಾರಣವೇನು? ಚೀನಾ ಮತ್ತು ಭಾರತದ ನಡುವಿನ ಉದ್ವಿಗ್ನತೆಯು, ವಿದೇಶೀ ನೇರ ಬಂಡವಾಳ ಹೂಡಿಕೆಯ (FDI) ಹರಿವಿಗೆ ಅಡಚಣೆ ಉಂಟುಮಾಡಿದ್ದಲ್ಲದೇ ಭಾರತದಲ್ಲಿ ಬಂಡವಾಳ ಸಂಗ್ರಹಣೆಗೆ ಯೋಜಿಸುತ್ತಿರುವ ಕಾರುತಯಾರಕರಿಗೆ ತೊಂದರೆ ಉಂಟುಮಾಡಿತು.

 ಭಾರತದಲ್ಲಿ ಇಲ್ಲಿಯ ತನಕ BYDಯ ಓಟ

ಪ್ರಸ್ತುತ ಚೀನಾದ EV ತಯಾರಕರು ತನ್ನ ಪ್ರಯಾಣಿಕ ವಾಹನ ಶ್ರೇಣಿಯಲ್ಲಿ E6 MPV ಮತ್ತು ಅಟ್ಟೋ 3 ಇಲೆಕ್ಟ್ರಿಕ್ SUV ಎಂಬ ಕೇವಲ ಎರಡು ಮಾಡೆಲ್‌ಗಳನ್ನು ಮಾತ್ರ ಹೊಂದಿದೆ. ಅಲ್ಲದೇ ಇದು ಆಟೋ ಎಕ್ಸ್‌ಪೋ 2023 ರಲ್ಲಿ ಸೀಲ್ EV ಸೆಡಾನ್‌ರೂಪದಲ್ಲಿ ತನ್ನ ಮುಂದಿನ EV ಅನ್ನು ಪ್ರದರ್ಶಿಸಿದೆ. ಆದಾಗ್ಯೂ BYD ಭಾರತದಲ್ಲಿ ದೀರ್ಘಕಾಲದಿಂದಲೂ ಕಾರ್ಯನಿರ್ವಹಿಸುತ್ತಿದ್ದು ವಸ್ತು ನಿರ್ವಹಣಾ ಸಲಕರಣಗಳು, ಸಾರ್ವಜನಿಕ ವಲಯದ ಸಾರಿಗೆ, ಹೆವಿ-ಡ್ಯೂಟಿ ಟ್ರಕ್‌ಗಳು ಮತ್ತು ಇನ್ನಿತರವುಗಳನ್ನು ವಿವಿಧ ಕ್ಷೇತ್ರಗಳಿಗೆ ಒದಗಿಸುತ್ತಿದೆ.

ಅವರಿಂದ ಪ್ರಕಟಿಸಲಾಗಿದೆ
was this article helpful ?

0 out of 0 found this helpful

Write your ಕಾಮೆಂಟ್

Read Full News

ಕಾರು ಸುದ್ದಿ

  • ಟ್ರೆಂಡಿಂಗ್ ಸುದ್ದಿ
  • ಇತ್ತಿಚ್ಚಿನ ಸುದ್ದಿ

trending ಎಲೆಕ್ಟ್ರಿಕ್ ಕಾರುಗಳು

  • ಪಾಪ್ಯುಲರ್
  • ಉಪಕಮಿಂಗ್
×
We need your ನಗರ to customize your experience