• English
  • Login / Register

ಕಾರ್‌ದೇಖೋ ಗ್ರೂಪ್ ಮೆಡ್ಯುಲೆನ್ಸ್‌ನೊಂದಿಗಿನ ಸಹಭಾಗಿತ್ವದಲ್ಲಿ ಒದಗಿಸುತ್ತಿದೆ ತುರ್ತು ವೈದ್ಯಕೀಯ ಸೇವೆ

modified on ಫೆಬ್ರವಾರಿ 27, 2023 04:11 pm by shreyash

  • 11 Views
  • ಕಾಮೆಂಟ್‌ ಅನ್ನು ಬರೆಯಿರಿ

ಕಾರ್‌ದೇಖೋ ಗ್ರೂಪ್‌ನ CEO ಮತ್ತು ಸಹ-ಸಂಸ್ಥಾಪಕ, ಮತ್ತು ಹೊಸ ಶಾರ್ಕ್ ಆಗಿರುವಂತಹ ಅಮಿತ್ ಜೈನ್, ಮೆಡ್ಯುಲೆನ್ಸ್ ಕಂಪನಿಯಲ್ಲಿ ರೂ. 5 ಕೋಟಿ ಹೂಡಿಕೆ ನಡೆಸಿ ಪಡೆದುಕೊಂಡಿದ್ದಾರೆ ಶೇಕಡಾ ಐದು ಈಕ್ವಿಟಿ.

Amit Jain, CEO and Co-Founder, CarDekho

ಜನರಿಗೆ ವೈದ್ಯಕೀಯ ತುರ್ತು ಸೇವೆಗಳನ್ನು ಒದಗಿಸುವ ಉದ್ದೇಶದಿಂದ ಕಾರ್‌ದೇಖೋ ಗ್ರೂಪ್ ಈಗ ತನ್ನ ಆ್ಯಪ್ ಹಾಗೂ ವೆಬ್‌ಸೈಟ್‌ಗೆ ಮೆಡ್ಯುಲೆನ್ಸ್ ಅನ್ನು ಸಂಯೋಜಿಸಿದೆ. ಮೆಡ್ಯುಲೆನ್ಸ್ ಭಾರತದಲ್ಲಿನ ಆನ್‌ಬೋರ್ಡ್ ಜಿಪಿಎಸ್ ಸಕ್ರಿಯಗೊಳಿಸಿದ ಆ್ಯಂಬುಲೆನ್ಸ್ ಸೇವಾ ಪೂರೈಕೆದಾರರಾಗಿದ್ದು, ಅದು ಶಾರ್ಕ್ ಟ್ಯಾಂಕ್ ಟಿವಿ ಷೋನಲ್ಲಿ ತನ್ನ ಕಲ್ಪನೆಯನ್ನು ಪ್ರಸ್ತುತಪಡಿಸಿತು. ನಮ್ಮ CEO ಮತ್ತು ಸಹ-ಸಂಸ್ಥಾಪಕರಾದಂತಹ ಅಮಿತ್ ಜೈನ್, ಶೇಕಡಾ 5 ಈಕ್ವಿಟಿಗೆ ಪ್ರತಿಯಾಗಿ ರೂ.5 ಕೋಟಿ ಹೂಡಿಕೆ ಮಾಡುವ ಮೂಲಕ ಒಪ್ಪಂದವನ್ನು ಮಾಡಿಕೊಂಡಿದ್ದಾರೆ.

ಕಾರ್‌ದೇಖೋ ಆ್ಯಪ್ ಮತ್ತು ವೆಬ್‌ಸೈಟ್‌ನಲ್ಲಿ ಮೆಡ್ಯುಲೆನ್ಸ್ ಸೇವೆಯನ್ನು ಜೋಡಿಸುವ ಮೂಲಕ ಭಾರತದಲ್ಲಿ ರಸ್ತೆ ಅಪಘಾತದಿಂದ ಮರಣ ಹೊಂದುವವರ ಸಂಖ್ಯೆಯನ್ನು ತಗ್ಗಿಸಲು ಸಹಾಯ ಮಾಡುವ ಗುರಿಯನ್ನು ಹೊಂದಿದೆ. ಮೊಬೈಲ್ ಆ್ಯಪ್ ಮೂಲಕ ಯಾರಾದರೂ ತುರ್ತು ಸಂದರ್ಭದಲ್ಲಿ ಆ್ಯಂಬುಲೆನ್ಸ್ ಅನ್ನು ಬುಕ್ ಮಾಡಬಹುದು. ಇದು ನಿಖರವಾಗಿ ನಿಮ್ಮ ಸ್ಮಾರ್ಟ್ ಫೋನ್‌ನಲ್ಲಿ ನೀವು ಕ್ಯಾಬ್ ಸೇವೆಗಳನ್ನು ಬುಕ್ ಮಾಡುವ ಪ್ರಕ್ರಿಯೆಯಂತೆಯೇ ಕಾರ್ಯನಿರ್ವಹಿಸುತ್ತದೆ.

ಇದನ್ನೂ ಓದಿ: ವೈರಲ್ ಆದ ಟಾಟಾ ನ್ಯಾನೋದೊಂದಿಗಿನ ಅಪಘಾತದಲ್ಲಿ ಮಹೀಂದ್ರಾ ಥಾರ್ ಪಲ್ಟಿಯಾಗಿದ್ದೇಕೆ 

ಮೆಡ್ಯುಲೆನ್ಸ್ ಆ್ಯಂಬುಲೆನ್ಸ್ ಸೇವೆಯು ಈಗಾಗಲೇ ಭಾರತದಾದ್ಯಂತ 500 ನಗರಗಳಲ್ಲಿ ಪ್ರಾರಂಭವಾಗಿದೆ. ಪಾಲುದಾರಿಕೆಯ ಕುರಿತು ಪ್ರತಿಕ್ರಿಯಿಸಿದ ಕಾರ್‌ದೇಖೋ ಗ್ರೂಪ್‌ನ CEO ಮತ್ತು ಸಹ-ಸಂಸ್ಥಾಪಕರಾದಂತಹ ಅಮಿತ್ ಜೈನ್ ಅವರು, “ವರದಿಯ ಪ್ರಕಾರ ಪ್ರತಿ ವರ್ಷ ರಸ್ತೆ ಅಪಘಾತದಿಂದ ಭಾರತದಲ್ಲಿ ಸಾವುಗಳು ಹೆಚ್ಚಿನ ಸಂಖ್ಯೆಯಲ್ಲಿ ಸಂಭವಿಸುತ್ತಿದ್ದು, ಮೌಲ್ಯಯುತ ಜೀವಗಳು ದಾರುಣ ಅಂತ್ಯವನ್ನು ಹೊಂದುತ್ತವೆ. ಗಾಯಗೊಂಡವರು ಸಕಾಲಿಕವಾಗಿ ವೈದ್ಯಕೀಯ ಆರೈಕೆಯನ್ನು ಪಡೆದರೆ ಇದರಲ್ಲಿ ಅರ್ಧದಷ್ಟು ಜೀವಗಳನ್ನು ಉಳಿಸಬಹುದು, ಮತ್ತು ಇವುಗಳ ನಡುವಿನ ಅಂತರವನ್ನು ಕಡಿಮೆ ಮಾಡುವಲ್ಲಿ ಮೆಡ್ಯುಲೆನ್ಸ್ ಪ್ರಮುಖ ಪಾತ್ರವನ್ನು ವಹಿಸುತ್ತದೆ. ಒಂದು ಜವಾಬ್ದಾರಿಯುತ ಗ್ರೂಪ್ ಆಗಿರುವ, ಕಾರ್‌ದೇಖೋ ತನ್ನ ಮೊಬೈಲ್ ಆ್ಯಪ್ ಮತ್ತು ವೆಬ್‌ಸೈಟ್‌ನಲ್ಲಿ ಮೆಡ್ಯುಲೆನ್ಸ್ ಅನ್ನು ಸಂಯೋಜಿಸಿದೆ, ಮತ್ತು ಜೀವಗಳನ್ನು ಉಳಿಸಲು ಸಹಾಯ ಮಾಡುವ ಸೇವೆಯ ಬಗ್ಗೆ ಜಾಗೃತಿ ಮೂಡಿಸಲು ಸಹಾಯ ಮಾಡುವಲ್ಲಿ ತನ್ನ ಪಾತ್ರವನ್ನು ನಿರ್ವಹಿಸುತ್ತಿದೆ,” ಎಂದು ಹೇಳಿದರು.

ಹೆಚ್ಚಿನ ವಿವರಗಳಿಗಾಗಿ ಸಂಪೂರ್ಣ ಪ್ರಕಟಣೆ ಇಲ್ಲಿದೆ:

60 ಮಿಲಿಯನ್ ಸಂದರ್ಶಕರಿಗೆ ತುರ್ತು ವೈದ್ಯಕೀಯ ಸೇವೆಗಳನ್ನು ಒದಗಿಸಲು ಕಾರ್‌ದೇಖೋ ತನ್ನ ಪ್ಲ್ಯಾಟ್‌ಫಾರ್ಮ್‌ಗಳಲ್ಲಿ ಸೇರಿಸುತ್ತಿದೆ ಮೆಡ್ಯುಲೆನ್ಸ್

ಮುಂಬೈ, 22 ಜನವರಿ 2023: ತ್ವರಿತ ವೈದ್ಯಕೀಯ ಸೇವೆಯೊಂದಿಗೆ ಜನರಿಗೆ ಆಧಾರವಾಗುವ ಗುರಿಯನ್ನು ಹೊಂದಿರುವ ಕಾರ್‌ದೇಖೋ ತನ್ನ ಮೊಬೈಲ್ ಆ್ಯಪ್ ಮತ್ತು ವೆಬ್‌ಸೈಟ್‌ನಲ್ಲಿ ಆನ್-ಬೋರ್ಡ್ ಆ್ಯಂಬುಲೆನ್ಸ್ ಸೇವಾ ಪೂರೈಕೆದಾರರಾದ ಮೆಡ್ಯುಲೆನ್ಸ್ ಅನ್ನು ಹೊಂದಿದೆ. ಶಾರ್ಕ್ ಟ್ಯಾಂಕ್ ಇಂಡಿಯಾ ಷೋನಲ್ಲಿ ಹೊಸ ಶಾರ್ಕ್ ಆಗಿರುವ ಅಮಿತ್ ಜೈನ್, ಯಾವುದೇ ಹಣಕಾಸಿನ ವಹಿವಾಟು ಇಲ್ಲದೆ, ಆ್ಯಂಬುಲೆನ್ಸ್ ಸೇವೆಗಳನ್ನು ಸಕ್ರಿಯಗೊಳಿಸುವ ಜಿಪಿಎಸ್ ಆಧಾರಿತ ಪ್ಲ್ಯಾಟ್‌ಫಾರ್ಮ್ ಆಗಿರುವಂತಹ ಹಾಗೂ  ವ್ಯವಸ್ಥಿತವಾಗಿರುವಂತಹ ಮೆಡ್ಯುಲೆನ್ಸ್ ಅನ್ನು ಸೇರಿಸಿಕೊಳ್ಳಲು ಷೋನಲ್ಲಿ ನಿರ್ಧರಿಸಿದರು.   ಭಾರತದ ಅತಿ ದೊಡ್ಡ ಆಟೋ ಟೆಕ್ ಕಂಪನಿ – ಕಾರ್‌ದೇಖೋ ಗ್ರೂಪ್‌ನ ಸಹ-ಸಂಸ್ಥಾಪಕ  ಮತ್ತು CEO ಆಗಿರುವಂತಹ ಅಮಿತ್ ಜೈನ್ ಅವರು ತುರ್ತು ಪ್ರಥಮ ಚಿಕಿತ್ಸಾ ಸೇವೆಯ ವ್ಯಾಪ್ತಿಯನ್ನು ವಿಸ್ತರಿಸಲು ಮತ್ತು ರಸ್ತೆ ಅಪಘಾತದ ಸಾವಿನ ಸಂಖ್ಯೆಯನ್ನು ಕಡಿಮೆ ಮಾಡಲು ಸಹಾಯ ಮಾಡುವ ಉದ್ದೇಶದಿಂದ ಇದನ್ನು ಕೈಗೊಂಡಿದ್ದಾರೆ. ಇದು ಶಾರ್ಕ್ ಟ್ಯಾಂಕ್ ಇಂಡಿಯಾ ಇತಿಹಾಸದಲ್ಲಿ ಅತಿದೊಡ್ಡ ಆಫರ್‌ ಆಗಿದ್ದು, ಅಮಿತ್ ಜೈನ್ ಅವರು ಮೆಡ್ಯುಲೆನ್ಸ್‌ನಲ್ಲಿ 5% ಈಕ್ವಿಟಿಗೆ ಪ್ರತಿಯಾಗಿ ರೂ. 5 ಕೋಟಿಗಳ ಹೂಡಿಕೆಯನ್ನು ಮಾಡಿದ್ದಾರೆ. 

ಕಾರ್‌ದೇಖೋ ಆ್ಯಪ್ ಮತ್ತು ವೆಬ್‌ಸೈಟ್‌ನಲ್ಲಿ ಮೆಡ್ಯುಲೆನ್ಸ್‌ನ ಉಚಿತ ಸಂಯೋಜನೆಯು ಅಪಾಘಾತದ ಸಂದರ್ಭದಲ್ಲಿ ಆ್ಯಪ್ ಮತ್ತು ವೆಬ್‌ಸೈಟ್ ಮೂಲಕ ಬಳಕೆದಾರರು ಆ್ಯಂಬುಲೆನ್ಸ್‌ಗೆ ಕರೆ ಮಾಡಲು ಸಹಾಯ ಮಾಡುತ್ತದೆ. ಇದು ಉದ್ದೇಶ-ಆಧಾರಿತ ಉದ್ಯಮಗಳನ್ನು ಬೆಂಬಲಿಸುವ ಅಮಿತ್ ಜೈನ್ ಅವರ ದೃಷ್ಟಿಕೋನಕ್ಕೆ ಅನುಗುಣವಾಗಿದೆ ಮತ್ತು ಭಾರತದಲ್ಲಿ ರಸ್ತೆ ಅಪಘಾತದಿಂದ ಉಂಟಾಗುವ ಸಾವುಗಳನ್ನು ತಡೆಯಲು ಪ್ರಯತ್ನಿಸುತ್ತದೆ.

500 ನಗರಗಳಲ್ಲಿ ಪ್ರಾರಂಭವಾಗಿರುವ ಮೆಡ್ಯುಲೆನ್ಸ್, ಭಾರತದ ಮೊದಲ ಜಿಪಿಎಸ್-ಆಧಾರಿತ ತಂತ್ರಜ್ಞಾನ ವೇದಿಕೆಯಾಗಿದ್ದು ವೇಗವಾದ ಮತ್ತು ವಿಶ್ವಾಸಾರ್ಹವಾದ ಪ್ರಥಮ ಹಂತದ ವೈದ್ಯಕೀಯ ಆರೈಕೆಯಾಗಿದೆ. 2017 ರಲ್ಲಿ ಪ್ರಾರಂಭವಾದ ಮೆಡ್ಯುಲೆನ್ಸ್, ಇತ್ತೀಚಿನ ದಿನಗಳಲ್ಲಿ, ಆಹಾರ ಮತ್ತು ಟ್ಯಾಕ್ಸಿಗಳನ್ನು ಹುಡುಕುವಷ್ಟೇ ಸುಲಭವಾಗಿ ಜೀವವನ್ನು ಉಳಿಸುವ ಆ್ಯಂಬುಲೆನ್ಸ್ ಅನ್ನು ಹುಡುಕಲು ಸಹಾಯ ಮಾಡುವ ಸದುದ್ದೇಶವನ್ನು ಹೊಂದಿದೆ.

ಈ ಸಹಭಾಗಿತ್ವದ ಕುರಿತು ಮಾತನಾಡಿದ ಕಾರ್‌ದೇಖೋ ಗ್ರೂಪ್‌ನ CEO ಮತ್ತು ಸಹ-ಸಂಸ್ಥಾಪಕರಾದಂತಹ ಶ್ರೀ ಅಮಿತ್ ಜೈನ್ ಅವರು, ವರದಿಯ ಪ್ರಕಾರ ಪ್ರತಿ ವರ್ಷ ರಸ್ತೆ ಅಪಘಾತದಿಂದ ಭಾರತದಲ್ಲಿ ಸಾವುಗಳು ಹೆಚ್ಚಿನ ಸಂಖ್ಯೆಯಲ್ಲಿ ಸಂಭವಿಸುತ್ತಿದ್ದು, ಮೌಲ್ಯಯುತ ಜೀವಗಳು ದಾರುಣ ಅಂತ್ಯವನ್ನು ಹೊಂದುತ್ತವೆ. ಗಾಯಗೊಂಡವರು ಸಕಾಲಿಕವಾಗಿ ವೈದ್ಯಕೀಯ ಆರೈಕೆಯನ್ನು ಪಡೆದರೆ ಇದರಲ್ಲಿ ಅರ್ಧದಷ್ಟು ಜೀವಗಳನ್ನು ಉಳಿಸಬಹುದು, ಮತ್ತು ಇವುಗಳ ನಡುವಿನ ಅಂತರವನ್ನು ಕಡಿಮೆ ಮಾಡುವಲ್ಲಿ ಮೆಡ್ಯುಲೆನ್ಸ್ ಪ್ರಮುಖ ಪಾತ್ರವನ್ನು ವಹಿಸುತ್ತದೆ. ಒಂದು ಜವಾಬ್ದಾರಿಯುತ ಗ್ರೂಪ್ ಆಗಿರುವ, ಕಾರ್‌ದೇಖೋ ತನ್ನ ಮೊಬೈಲ್ ಆ್ಯಪ್ ಮತ್ತು ವೆಬ್‌ಸೈಟ್‌ನಲ್ಲಿ ಮೆಡ್ಯುಲೆನ್ಸ್ ಅನ್ನು ಸಂಯೋಜಿಸಿದೆ, ಮತ್ತು ಜೀವಗಳನ್ನು ಉಳಿಸಲು ಸಹಾಯ ಮಾಡುವ ಸೇವೆಯ ಬಗ್ಗೆ ಜಾಗೃತಿ ಮೂಡಿಸಲು ಸಹಾಯ ಮಾಡುವಲ್ಲಿ ತನ್ನ ಪಾತ್ರವನ್ನು ನಿರ್ವಹಿಸುತ್ತಿದೆ,” ಎಂದು ಹೇಳಿದರು.

ಮೆಡ್ಯುಲೆನ್ಸ್‌ನ ಸಿಇಒ ಆಗಿರುವಂತಹ ಪ್ರಣವ್ ಬಜಾಜ್, “ಅಪಘಾತದ ಸಂದರ್ಭದಲ್ಲಿ ಆರಂಭಿಕ ಪ್ರಥಮ ಚಿಕಿತ್ಸೆಗಾಗಿ ಕರೆ ಮಾಡುವ ಜನರಿಗೆ ಸಹಾಯ ಮಾಡುವ ಉದ್ದೇಶದಿಂದ ಮೆಡ್ಯುಲೆನ್ಸ್ ಅನ್ನು ಪ್ರಾರಂಭಿಸಲಾಗಿದೆ. ನಮ್ಮ ಪ್ರಯತ್ನವು ಇಲ್ಲಿಯವರೆಗೆ ನೂರಾರು ಜೀವಗಳನ್ನು ಉಳಿಸಿವೆ ಮತ್ತು ಶಾರ್ಕ್ ಅಮಿತ್ ಜೈನ್ ಅವರ ಈ ಸಾಮಾಜಿಕ ನಡವಳಿಕೆಯು ಮೆಡ್ಯುಲೆನ್ಸ್‌ನ ವ್ಯಾಪ್ತಿಯನ್ನು ಇನ್ನಷ್ಟು ವರ್ಧಿಸುತ್ತದೆ ಮಾತ್ರವಲ್ಲದೇ ಆ್ಯಂಬುಲೆನ್ಸ್‌ಗಳ ಲಭ್ಯತೆಗೆ ಹಾಗೂ ಜೀವಹಾನಿಗಳನ್ನು ತಡೆಯಲು ಅನುವು ಮಾಡಿಕೊಡುತ್ತದೆ” ಎಂದು ಹೇಳಿದರು.

ಶಾರ್ಕ್ ಟ್ಯಾಂಕ್ 2.0 ಸಾಮಾಜಿಕ ಸಮಸ್ಯೆಗಳೊಂದಿಗೆ ಹೋರಾಡುತ್ತಿರುವ ಮತ್ತು ತಮ್ಮ ಉದ್ಯಮಗಳ ಮೂಲಕ ಸಮಸ್ಯೆಗಳನ್ನು ಪರಿಹರಿಸಲು ಉತ್ಸುಕರಾಗಿರುವ ಉದ್ಯಮಿಗಳಿಂದ ಹೆಚ್ಚಿನ ಭಾಗವಹಿಸುವಿಕೆಗೆ ಸಾಕ್ಷಿಯಾಗಿದೆ. ಅಮಿತ್ ಜೈನ್ ಅವರು ಲಾಭವನ್ನು ಮೀರಿ ನೋಡುವ ಮೂಲಕ ಮತ್ತು ಭಾರತವನ್ನು ಮುನ್ನಡೆಸಲು ಸಹಾಯ ಮಾಡುವ ಉದ್ಯಮಗಳಲ್ಲಿ ಹೂಡಿಕೆ ಮಾಡುವ ಮೂಲಕ ಉದ್ಯಮಗಳನ್ನು ಉತ್ತೇಜಿಸುವಲ್ಲಿ ಮುಂಚೂಣಿಯಲ್ಲಿದ್ದಾರೆ.

ಅವರಿಂದ ಪ್ರಕಟಿಸಲಾಗಿದೆ
was this article helpful ?

0 out of 0 found this helpful

Write your ಕಾಮೆಂಟ್

Read Full News

ಕಾರು ಸುದ್ದಿ

  • ಟ್ರೆಂಡಿಂಗ್ ಸುದ್ದಿ
  • ಇತ್ತಿಚ್ಚಿನ ಸುದ್ದಿ

trendingಕಾರುಗಳು

  • ಲೇಟೆಸ್ಟ್
  • ಉಪಕಮಿಂಗ್
  • ಪಾಪ್ಯುಲರ್
×
We need your ನಗರ to customize your experience