• English
  • Login / Register

ವೈರಲ್ ಆದ ಟಾಟಾ ನ್ಯಾನೋದೊಂದಿಗಿನ ಅಪಘಾತದಲ್ಲಿ ಮಹೀಂದ್ರಾ ಥಾರ್ ಪಲ್ಟಿಯಾಗಿದ್ದೇಕೆ

ಮಹೀಂದ್ರ ಥಾರ್‌ ಗಾಗಿ shreyash ಮೂಲಕ ಫೆಬ್ರವಾರಿ 27, 2023 03:53 pm ರಂದು ಪ್ರಕಟಿಸಲಾಗಿದೆ

  • 25 Views
  • ಕಾಮೆಂಟ್‌ ಅನ್ನು ಬರೆಯಿರಿ

ಅದೃಷ್ಟವಶಾತ್ ಈ ಅಪಘಾತದಲ್ಲಿ ಯಾರಿಗೂ ಗಾಯಗಳಾಗಿಲ್ಲ ಎಂದು ವರದಿಯಾಗಿದ್ದರೂ, ಕಾರು ಮಾಲೀಕರ ಅಹಂಗೆ ಪೆಟ್ಟಾಗಿರಬಹುದು  

Mahindra Thar and Tata Nano Accident

ಕಳೆದ ಕೆಲವು ದಶಕಗಳಿಂದ ರಸ್ತೆ ಅಪಘಾತಗಳು ಭಾರತೀಯ ಸಾರ್ವಜನಿಕರಿಗೆ ಹಾಗೂ ಕಾರು ತಯಾರಕರಿಗೆ ಆತಂಕದ ವಿಷಯವಾಗಿದೆ. ಇಂಟರ್‌ನೆಟ್‌ನಲ್ಲಿ ಮಾಹಿತಿಯನ್ನು ಹಂಚಿಕೊಳ್ಳುವ ಪ್ರವೃತ್ತಿ ಹೆಚ್ಚಾದಾಗಿನಿಂದ, ಗ್ರಾಹಕರು ಕಾರಿನ ಸುರಕ್ಷತೆ ಮತ್ತು ನಿರ್ಮಾಣ ಗುಣಮಟ್ಟದ ಬಗ್ಗೆ ತಮ್ಮದೇ ಆದ ಅಭಿಪ್ರಾಯವನ್ನು ಹೇಳುತ್ತಿದ್ದಾರೆ. ವಾಹನದ ಸುರಕ್ಷತೆಯನ್ನು ಸುಧಾರಿಸಲು ಮತ್ತು ರಸ್ತೆ ಅಪಘಾತಗಳಿಂದ ಉಂಟಾಗುವ ಮರಣಗಳನ್ನು ತಪ್ಪಿಸಲು ಸರ್ಕಾರ ಮತ್ತು ಕಾರು ತಯಾರಕರು ಜೊತೆಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಆದಾಗ್ಯೂ, ಕೆಲವೊಮ್ಮೆ ನಿರ್ಮಾಣ ಗುಣಮಟ್ಟ ಹಾಗೂ ಸುರಕ್ಷತಾ ತಂತ್ರಜ್ಞಾನಕ್ಕಿಂತ ಮೂಲಭೂತ ಭೌತಶಾಸ್ತ್ರದ ಬಗ್ಗೆ ಗಮನಹರಿಸಬೇಕಾಗುತ್ತದೆ.

ಇತ್ತೀಚೆಗೆ, ಮಹೀಂದ್ರಾ ಥಾರ್ ಹಾಗೂ ಟಾಟಾ ನ್ಯಾನೋ ನಡುವೆ ಸಂಭವಿಸಿದ ಅಪಘಾತದಲ್ಲಿ ಬಲಿಷ್ಠ ಆಫ್-ರೋಡ್ ಎಸ್‌ಯುವಿ ತಲೆಕೆಳಗಾಗಿ ಬಿದ್ದಿರುವ ಸುದ್ದಿ ಆನ್‌ಲೈನ್‌ನಲ್ಲಿ ವೈರಲ್ ಆಗಿತ್ತು. ಈ ಘಟನೆಯು ಚತ್ತೀಸ್‌ಘಡದ ದರ್ಗ್ ಜಿಲ್ಲೆಯ ಪದ್ಮನಾಭಪುರ ಮಿನಿ ಸ್ಟೇಡಿಯಂ ಬಳಿ ನಡೆದಿದ್ದು, ಪ್ರತ್ಯಕ್ಷದರ್ಶಿಗಳು ಹೇಳುವ ಪ್ರಕಾರ ಥಾರ್ ಒಂದು ಜಂಕ್ಷನ್ ಅನ್ನು ದಾಟುವಾಗ ನ್ಯಾನೋ ಅದನ್ನು ಬದಿಯಿಂದ ಡಿಕ್ಕಿ ಹೊಡೆದಾಗ ಅದು ಪಲ್ಟಿ ಹೊಡೆಯಿತು. ಅದೃಷ್ಟವಶಾತ್, ಅಪಘಾತದಲ್ಲಿ ಯಾರಿಗೂ ಗಾಯಗಳಾಗಿಲ್ಲ. ಆದರೆ ಅದು ಹೇಗೆ ಸಂಭವಿಸಿತು ಎಂಬ ಆಸಕ್ತಿದಾಯಕ ಚರ್ಚೆಯನ್ನು ಅಂತರ್ಜಾಲದಲ್ಲಿ ಹುಟ್ಟುಹಾಕಿತು.

ಸಣ್ಣ ಹ್ಯಾಚ್‌ಬ್ಯಾಕ್‌ಗೆ ಡಿಕ್ಕಿ ಹೊಡೆದ ನಂತರ ದೊಡ್ಡ  SUV ಪಲ್ಟಿಯಾದಾಗ ಇದು ವಿಚಿತ್ರವಾಗಿ ಕಾಣಬಹುದು ಮತ್ತು ನಂಬಲು ಕಷ್ಟವಾಗಬಹುದು, ಆದರೆ, ಈ ಘಟನೆಗೆ ಅನೇಕ ಸಮಂಜಸ ಕಾರಣಗಳಿವೆ. ಈ ಫಲಿತಾಂಶಕ್ಕೆ ಸಂಭವನೀಯ ಕಾರಣಗಳನ್ನು ನಾವು ಊಹಿಸೋಣ.

ಥಾರ್‌ನ ಹೆಚ್ಚಿನ ಸೆಂಟರ್ ಆಫ್ ಗ್ರಾವಿಟಿ

Mahindra Thar 4X2

226mm ನ ಹೆಚ್ಚಿನ ಗ್ರೌಂಡ್ ಕ್ಲಿಯರೆನ್ಸ್ ಹೊಂದಿರುವ ಥಾರ್‌ನ ಸೆಂಟರ್ ಆಫ್ ಗ್ರ್ಯಾವಿಟಿ (CG) ಕೂಡಾ ಹೆಚ್ಚಿದ್ದು ಅಫಘಾತದಲ್ಲಿ ಥಾರ್ ಪಲ್ಟಿ ಹೊಡೆಯಲು ಇದೊಂದು ಮೂಲ ಕಾರಣವಾಗಿದೆ. ಹೆಚ್ಚಿನ ಸೆಂಟರ್ ಆಫ್ ಗ್ರ್ಯಾವಿಟಿಯನ್ನು ಹೊಂದಿರುವ ವಾಹನವು ಉರುಳಿವಿಕೆಗೆ ಗುರಿಯಾಗುವ ಸಂಭವವಿರುತ್ತದೆ ಏಕೆಂದರೆ, ಇದು ಹೆಚ್ಚಿನ ವೇಗದಲ್ಲಿ ತಿರುವುಗಳನ್ನು ತೆಗೆದುಕೊಂಡಾಗ ಲಂಬ ಹಾಗೂ ಅಡ್ಡ ಚಲನೆಯನ್ನು ಉಂಟುಮಾಡಿ ವಾಹನದ ಸ್ಥಿರತೆಯ ಮೇಲೆ ಪರಿಣಾಮ ಬೀರುತ್ತದೆ.

ಇದನ್ನೂ ಓದಿ: ChatGPT ಪ್ರಕಾರ ಇಲ್ಲಿವೆ ಭಾರತೀಯರಿಗೆ ಸೂಕ್ತವಾದ 4 ಕಾರುಗಳು

ಇದೇವೇಳೆ, ಕಡಿಮೆ ಗ್ರೌಂಡ್ ಕ್ಲಿಯರೆನ್ಸ್ ಹೊಂದಿರುವ ಕಾರುಗಳು ತುಲನಾತ್ಮಕವಾಗಿ ಸ್ಥಿರವಾಗಿರುತ್ತದೆ, ಏಕೆಂದರೆ ಅದರ ಗುರುತ್ವದ ಕೇಂದ್ರ ಸುಲಭವಾಗಿ ಬದಲಾಗುವುದಿಲ್ಲ, ಇದು ಉತ್ಕೃಷ್ಟ ರೈಡ್ ಮತ್ತು ನಿರ್ವಹಣೆಗೆ ಅನುವು ಮಾಡಿಕೊಡುತ್ತದೆ.

ಥಾರ್‌ನ ಬಾಕ್ಸಿ ಡಿಸೈನ್

Mahindra Thar 4X4 Exterior

ಮಹೀಂದ್ರಾ ಥಾರ್‌ನ ಡಿಸೈನ್ ಸಂಪೂರ್ಣ ಬಾಕ್ಸಿಯಾಗಿದ್ದು, ಇದು ಅದಕ್ಕೆ ದೃಢವಾದ ಮತ್ತು ಕಠಿಣ ನೋಟವನ್ನು ನೀಡುತ್ತದೆ. ಅದೇನೇ ಇದ್ದರೂ, ಬಾಕ್ಸಿ ಆಕಾರವು ವಾಹನದ ನಿರ್ವಹಣೆ ಮತ್ತು ಡೈನಾಮಿಕ್ಸ್ ಮೇಲೆ ಪರಿಣಾಮ ಬೀರುತ್ತದೆ ಮತ್ತು ಇದು ಹೆಚ್ಚು ಏರೋ ಡೈನಾಮಿಕ್ ಮತ್ತು ಸುಂದರಾಕೃತಿಯ ಕಾರು ವಿನ್ಯಾಸಗಳಿಗೆ ಹೋಲಿಸಿದರೆ ಸ್ಥಿರತೆಯನ್ನು  ಕಡಿಮೆ ಮಾಡುತ್ತದೆ.

ಇದನ್ನೂ ಓದಿ: ಇಎಸ್‌ಸಿಯನ್ನು ಸ್ಟಾಂಡರ್ಡ್ ಆಗಿ ಪಡೆದಿವೆ ರೂ. 10 ಲಕ್ಷಕ್ಕಿಂತ ಕೆಳಗಿನ ಬೆಲೆಯ ಈ 10 ಕಾರುಗಳು 

ಟಾಟಾ ನ್ಯಾನೋದ ರ‍್ಯಾಂಪ್‌ನಂತಹ ಡಿಸೈನ್

Tata Nano

ಟಾಟಾ ನ್ಯಾನೋ ಡಿಸೈನ್‌ಗೆ ಬಂದಾಗ, ಅದರ ಚೂಪಾದ ತುದಿಯ ಮುಂಭಾಗವು ಅದರ ಹಿಂಭಾಗಿಸಿದ A-ಪಿಲ್ಲರ್‌ಗೆ ಅನುಗುಣವಾಗಿದ್ದು, ರ‍್ಯಾಂಪ್‌ ಅನ್ನು ಹೋಲುತ್ತದೆ. ಥಾರ್ ಪಲ್ಟಿ ಹೊಡೆಯಲು ಈ ಡಿಸೈನ್ ಅಂಶವೂ ಒಂದು ಸಂಭವನೀಯ ಕಾರಣ.

ಮಹೀಂದ್ರಾ ಥಾರ್‌ಗೆ ನ್ಯಾನೋ ಡಿಕ್ಕಿ ಹೊಡೆದಾಗ ಅದು ಪಲ್ಟಿಯಾಗಲು ಇವುಗಳು ಸಂಭಾವ್ಯ ಕಾರಣಗಳಾಗಿವೆ. ಹಾಗೆಯೇ, ಅಪಘಾತಗಳು ನಗುವಂತಹ ವಿಷಯವಲ್ಲದಿದ್ದರೂ, ಈ ಘಟನೆಯು ಥಾರ್‌ನ ಸಂಭಾವ್ಯ ದೌರ್ಬಲ್ಯಗಳ ಬಗ್ಗೆ ಜ್ಞಾಪನೆಯಾಗಿ ಕಾರ್ಯ ನಿರ್ವಹಿಸುತ್ತದೆ ಹಾಗೂ ಕಾರು ಮಾಲಿಕರು ಸುರಕ್ಷಿತವಾಗಿ ಡ್ರೈವ್ ಮಾಡಲು ಉತ್ತೇಜಿಸುತ್ತದೆ. 

ಇನ್ನಷ್ಟು : ಮಹೀಂದ್ರಾ ಥಾರ್ ಡೀಸೆಲ್

ಅವರಿಂದ ಪ್ರಕಟಿಸಲಾಗಿದೆ
was this article helpful ?

0 out of 0 found this helpful

Write your Comment on Mahindra ಥಾರ್‌

Read Full News

Similar cars to compare & consider

ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ

ಕಾರು ಸುದ್ದಿ

  • ಟ್ರೆಂಡಿಂಗ್ ಸುದ್ದಿ
  • ಇತ್ತಿಚ್ಚಿನ ಸುದ್ದಿ

trending ಎಸ್‌ಯುವಿ ಕಾರುಗಳು

  • ಲೇಟೆಸ್ಟ್
  • ಉಪಕಮಿಂಗ್
  • ಪಾಪ್ಯುಲರ್
×
We need your ನಗರ to customize your experience