Login or Register ಅತ್ಯುತ್ತಮ CarDekho experience ಗೆ
Login

ಜುಲೈ 8 ರಂದು ಭಾರತದಲ್ಲಿ Mercedes-Benz EQA ಲಾಂಚ್: ಇಲ್ಲಿದೆ ಎಕ್ಸ್‌ಕ್ಲೂಸಿವ್ ವಿವರಗಳು

ಮರ್ಸಿಡಿಸ್ ಇಕ್ಯೂಎ ಗಾಗಿ dipan ಮೂಲಕ ಜುಲೈ 03, 2024 08:24 pm ರಂದು ಪ್ರಕಟಿಸಲಾಗಿದೆ

ನೀವು 1.5 ಲಕ್ಷ ರೂಪಾಯಿಗಳ ಟೋಕನ್ ಮೊತ್ತವನ್ನು ಪಾವತಿಸುವ ಮೂಲಕ ಮರ್ಸಿಡಿಸ್-ಬೆಂಜ್ EQA ಅನ್ನು ಬುಕ್ ಮಾಡಬಹುದು.

  • GLA ಎಸ್‌ಯುವಿಯ ಆಲ್-ಎಲೆಕ್ಟ್ರಿಕ್ ವರ್ಷನ್ ಆಗಿರುವ EQA, ಭಾರತದಲ್ಲಿ ಮರ್ಸಿಡಿಸ್-ಬೆಂಜ್ ನ ಅತ್ಯಂತ ಕೈಗೆಟುಕುವ ಬೆಲೆಯ ಇವಿಯಾಗಿದೆ.
  • ಇದು ಕೇವಲ 250+ ವೇರಿಯಂಟ್‌ನಲ್ಲಿ ಮಾತ್ರ ಲಭ್ಯವಿದೆ.
  • ಈ ವೇರಿಯಂಟ್ 70.5 ಕಿ.ವ್ಯಾಟ್‌ ಬ್ಯಾಟರಿ ಪ್ಯಾಕ್ ಮತ್ತು 190 ಪಿಎಸ್‌ ಮತ್ತು 385 ಎನ್‌ಎಮ್‌ ಉತ್ಪಾದಿಸುವ ಎಲೆಕ್ಟ್ರಿಕ್ ಮೋಟಾರ್ ಅನ್ನು ಪಡೆಯುತ್ತದೆ.
  • ಇದು 560 ಕಿಮೀ ವರೆಗಿನ WLTP-ರೇಟ್ ಮಾಡಿರುವ ರೇಂಜ್ ಅನ್ನು ಹೊಂದಿದೆ.
  • GLA ಗೆ ಹೋಲಿಸಿದರೆ, ಇದು ಹೊಸ ಹೆಡ್‌ಲೈಟ್‌ಗಳು, ಮುಂಭಾಗದ ಗ್ರಿಲ್, ದೊಡ್ಡ ವೀಲ್ ಗಳು ಮತ್ತು ಕನೆಕ್ಟೆಡ್ ಟೈಲ್‌ಲೈಟ್‌ಗಳೊಂದಿಗೆ ಬರುತ್ತದೆ.
  • ಒಳಭಾಗವು GLA ನಂತೆ ಕಾಣುತ್ತದೆ, ಆದರೆ ವಿಭಿನ್ನವಾದ ಡ್ಯುಯಲ್-ಟೋನ್ ಕವರ್‌ಅನ್ನು ನೀಡಲಾಗಿದೆ.
  • ಫೀಚರ್‌ಗಳ ವಿಷಯದಲ್ಲಿ, ಇದು ಎರಡು 10-ಇಂಚಿನ ಡಿಸ್‌ಪ್ಲೇಗಳು, ಹೆಡ್ಸ್-ಅಪ್ ಡಿಸ್‌ಪ್ಲೇ ಮತ್ತು 12-ಸ್ಪೀಕರ್ ಬರ್ಮೆಸ್ಟರ್ ಸೌಂಡ್ ಸಿಸ್ಟಮ್ ಅನ್ನು ಪಡೆಯುತ್ತದೆ.
  • ಜುಲೈ 8 ರಂದು ಮಾರುಕಟ್ಟೆಗೆ ಬರಲಿದ್ದು, ಬೆಲೆಯು 69 ಲಕ್ಷ ರೂ.ನಿಂದ ಪ್ರಾರಂಭವಾಗುವ ನಿರೀಕ್ಷೆಯಿದೆ (ಎಕ್ಸ್ ಶೋರೂಂ).

GLA ಎಸ್‌ಯುವಿ ಯ ಆಲ್-ಎಲೆಕ್ಟ್ರಿಕ್ ವರ್ಷನ್ ಆಗಿರುವ ತನ್ನ ಕಡಿಮೆ ವೆಚ್ಚದ ಎಲೆಕ್ಟ್ರಿಕ್ ವಾಹನ EQA ಅನ್ನು ಮರ್ಸಿಡಿಸ್-ಬೆಂಜ್ ಶೀಘ್ರದಲ್ಲೇ ಭಾರತಕ್ಕೆ ತರುತ್ತಿದೆ. ಜುಲೈ 8 ರಂದು ಬಿಡುಗಡೆಯಾಗುತ್ತಿರುವ ಇಂಡಿಯಾ-ಸ್ಪೆಕ್ ಮರ್ಸಿಡಿಸ್-ಬೆಂಜ್ EQA ಕುರಿತು ನಾವು ವಿಶೇಷ ಮಾಹಿತಿಯನ್ನು ಪಡೆದಿದ್ದೇವೆ. ಇದು ಭಾರತದಲ್ಲಿ ದೊಡ್ಡ ಬ್ಯಾಟರಿ ಪ್ಯಾಕ್‌ನೊಂದಿಗೆ 250 ಕಿಲೋಮೀಟರ್ ರೇಂಜ್ ಅನ್ನು ನೀಡುವ ಒಂದೇ ವೇರಿಯಂಟ್ ಆಗಿ ಲಭ್ಯವಿರುತ್ತದೆ. ಈ ಮುಂಬರುವ ಎಂಟ್ರಿ ಲೆವೆಲ್ ಮರ್ಸಿಡಿಸ್ EV ಯ ವಿವರಗಳನ್ನು ನೋಡೋಣ:

ಬ್ಯಾಟರಿ, ಎಲೆಕ್ಟ್ರಿಕ್ ಮೋಟಾರ್ ಮತ್ತು ರೇಂಜ್

ಭಾರತದ EQA 250+ 70.5 kWh ಬ್ಯಾಟರಿ ಪ್ಯಾಕ್ ಅನ್ನು ಹೊಂದಿದ್ದು, ಅದು ಮುಂಭಾಗದ ಆಕ್ಸಲ್‌ನಲ್ಲಿ ಎಲೆಕ್ಟ್ರಿಕ್ ಮೋಟರ್ ಅನ್ನು ಪವರ್ ಮಾಡುತ್ತದೆ. ಅದರ ವಿವರಗಳು ಈ ಕೆಳಗಿನಂತಿವೆ:

ಸ್ಪೆಸಿಫಿಕೇಷನ್ಸ್

ಮರ್ಸಿಡಿಸ್-ಬೆಂಜ್ EQA 250+

ಬ್ಯಾಟರಿ ಪ್ಯಾಕ್

70.5 kWh

ಎಲೆಕ್ಟ್ರಿಕ್ ಮೋಟಾರ್

1

ಪವರ್

190 PS

ಟಾರ್ಕ್

385 Nm

ರೇಂಜ್

560 ಕಿಮೀ ವರೆಗೆ (WLTP)

ಡ್ರೈವ್ ಟ್ರೈನ್

ಫ್ರಂಟ್-ವೀಲ್-ಡ್ರೈವ್ (FWD)

ಪರ್ಫಾರ್ಮೆನ್ಸ್ ಬಗ್ಗೆ ಹೇಳುವುದಾದರೆ, ಈ ಎಲೆಕ್ಟ್ರಿಕ್ ವಾಹನವು 8.6 ಸೆಕೆಂಡುಗಳಲ್ಲಿ ಪ್ರತಿ ಗಂಟೆಗೆ 0 ರಿಂದ 100 ಕಿಮೀ ವೇಗವನ್ನು ತಲುಪುತ್ತದೆ. ಇತರ ದೇಶಗಳಲ್ಲಿ, ಕಾರಿನ ಬೇರೆ ವೇರಿಯಂಟ್ ಗಳು ಡುಯಲ್ ಮೋಟಾರ್‌ ಸೆಟಪ್ ನೊಂದಿಗೆ ಚಿಕ್ಕದಾದ 66.5 kWh ಬ್ಯಾಟರಿ ಪ್ಯಾಕ್‌ನ ಆಯ್ಕೆಯನ್ನು ಕೂಡ ನೀಡುತ್ತವೆ.

ಚಾರ್ಜ್ ವಿಷಯದಲ್ಲಿ, ಇದು 11 kW AC ಚಾರ್ಜಿಂಗ್ ಅನ್ನು ಸಪೋರ್ಟ್ ಮಾಡುತ್ತದೆ, ಇದು 7 ಗಂಟೆಗಳು ಮತ್ತು 15 ನಿಮಿಷಗಳಲ್ಲಿ 0 ರಿಂದ 100 ಪ್ರತಿಶತದಷ್ಟು ಬ್ಯಾಟರಿಯನ್ನು ಸಂಪೂರ್ಣವಾಗಿ ಚಾರ್ಜ್ ಮಾಡುತ್ತದೆ. ನೀವು 100 kW DC ಫಾಸ್ಟ್ ಚಾರ್ಜಿಂಗ್ ಅನ್ನು ಕೂಡ ಬಳಸಬಹುದು, ಇದು ಕೇವಲ 35 ನಿಮಿಷಗಳಲ್ಲಿ 10 ರಿಂದ 80 ಪ್ರತಿಶತದಷ್ಟು EV ಬ್ಯಾಟರಿಯನ್ನು ಚಾರ್ಜ್ ಮಾಡುತ್ತದೆ.

ಹೊರಭಾಗ

ಹೊಸ ಮರ್ಸಿಡಿಸ್-ಬೆಂಜ್ EQA ಗ್ರಿಲ್‌ನ ಮೇಲಿರುವ LED ಲೈಟ್ ಬಾರ್‌ನೊಂದಿಗೆ ಬ್ಲ್ಯಾಕ್ಡ್-ಔಟ್ ಹೆಡ್‌ಲೈಟ್‌ಗಳನ್ನು ಒಳಗೊಂಡಿರುತ್ತದೆ, ಜೊತೆಗೆ ಮರ್ಸಿಡಿಸ್- ಬೆಂಜ್ GLA ಗಿಂತ ಭಿನ್ನವಾಗಿರುವ ಕನೆಕ್ಟೆಡ್ ಟೈಲ್ ಲೈಟ್‌ಗಳನ್ನು ಕೂಡ ಹೊಂದಿದೆ. ಮುಂಭಾಗದ ಗ್ರಿಲ್ ಅನ್ನು ಕವರ್ ಮಾಡಲಾಗಿದೆ ಮತ್ತು ಗ್ಲೋಸಿ ಬ್ಲಾಕ್ ಫಿನಿಷ್ ನೊಂದಿಗೆ ಸಿಲ್ವರ್ ಸ್ಟಾರಿ ಎಲಿಮೆಂಟ್ ಗಳನ್ನು ಹೊಂದಿದೆ. GLA ನಲ್ಲಿ ಕಂಡುಬರುವ 18-ಇಂಚಿನ ವೀಲ್ ಗಳ ಬದಲಿಗೆ EQA ಗೆ 19-ಇಂಚಿನ ಅಲೊಯ್ ವೀಲ್ಸ್ ಅನ್ನು ನೀಡಲಾಗಿದೆ.

ಇದನ್ನು ಪೋಲಾರ್ ವೈಟ್, ನೈಟ್ ಬ್ಲ್ಯಾಕ್, ಕಾಸ್ಮೊಸ್ ಬ್ಲ್ಯಾಕ್, ಮೌಂಟೇನ್ ಗ್ರೇ, ಹೈಟೆಕ್ ಸಿಲ್ವರ್, ಸ್ಪೆಕ್ಟ್ರಲ್ ಬ್ಲೂ ನಂತಹ 8 ಕಲರ್ ಗಳಲ್ಲಿ ಮತ್ತು ಪ್ಯಾಟಗೋನಿಯಾ ರೆಡ್ ಮೆಟಾಲಿಕ್ ಮತ್ತು ಮೌಂಟೇನ್ ಗ್ರೇ ಮ್ಯಾಗ್ನೋ ಶೇಡ್‌ಗಳ ಎರಡು ಮ್ಯಾನುಫ್ಯಾಕ್ಚರ್ ಪೇಂಟ್ ಸ್ಕೀಮ್‌ಗಳಲ್ಲಿ ನೀಡಲಾಗುವುದು.

ಒಳಭಾಗ, ಫೀಚರ್ ಗಳು ಮತ್ತು ಸುರಕ್ಷತೆ

ಮರ್ಸಿಡಿಸ್-ಬೆಂಜ್ EQA ನ ಕ್ಯಾಬಿನ್ GLA ಯ ಡ್ಯಾಶ್‌ಬೋರ್ಡ್ ಡಿಸೈನ್ ನಂತೆಯೇ ಇದೆ. ಆದರೆ, ಇದು ವಿಭಿನ್ನವಾದ ಡ್ಯುಯಲ್-ಟೋನ್ ರೋಸ್ ಗೋಲ್ಡ್ ಮತ್ತು ಟೈಟಾನಿಯಂ ಗ್ರೇ ಪರ್ಲ್ ಥೀಮ್ ಅನ್ನು ಪಡೆಯುತ್ತದೆ. ಭಾರತಕ್ಕೆ ಬರಲಿರುವ EQA ನಲ್ಲಿನ ಕೆಲವು ಪ್ರಮುಖ ಫೀಚರ್ ಗಳೆಂದರೆ ಎರಡು 10-ಇಂಚಿನ ಡಿಸ್ಪ್ಲೇಗಳು (ಡಿಜಿಟಲ್ ಡ್ರೈವರ್ ಡಿಸ್ಪ್ಲೇ ಮತ್ತು ಇನ್ಫೋಟೈನ್ಮೆಂಟ್ ಸಿಸ್ಟಮ್), ಹೆಡ್-ಅಪ್ ಡಿಸ್ಪ್ಲೇ, 12-ಸ್ಪೀಕರ್ ಬರ್ಮೆಸ್ಟರ್ ಸೌಂಡ್ ಸಿಸ್ಟಮ್, ಡ್ಯುಯಲ್-ಝೋನ್ AC ಮತ್ತು ಕನೆಕ್ಟೆಡ್ ಕಾರ್ ಟೆಕ್ನಾಲಜಿ. ಇದು ಲಂಬಾರ್ ಸಪೋರ್ಟ್ ನೊಂದಿಗೆ ಪವರ್-ಅಡ್ಜಸ್ಟ್ ಮಾಡಬಹುದಾದ ಮೆಮೊರಿ ಸೀಟ್‌ಗಳನ್ನು ಕೂಡ ಪಡೆಯುತ್ತದೆ.

ಸುರಕ್ಷತೆಯ ವಿಷಯದಲ್ಲಿ, ಇದು ಏಳು ಏರ್‌ಬ್ಯಾಗ್‌ಗಳನ್ನು ಮತ್ತು ಪಾರ್ಕ್ ಅಸಿಸ್ಟ್ ಮತ್ತು ಬ್ಲೈಂಡ್ ಸ್ಪಾಟ್ ಅಸಿಸ್ಟ್‌ನೊಂದಿಗೆ 360-ಡಿಗ್ರಿ ಕ್ಯಾಮೆರಾ ಮತ್ತು ಕೆಲವು ಸುಧಾರಿತ ಡ್ರೈವರ್ ಅಸ್ಸಿಸ್ಟಂಸ್ ಸಿಸ್ಟಮ್ ಗಳನ್ನು (ADAS) ಪಡೆಯುತ್ತದೆ.

ಬೆಲೆ ಮತ್ತು ಪ್ರತಿಸ್ಪರ್ಧಿಗಳು

ನೀವು 1.5 ಲಕ್ಷ ರೂಪಾಯಿಗಳ ಟೋಕನ್ ಮೊತ್ತವನ್ನು ಪಾವತಿಸಿ ಮರ್ಸಿಡಿಸ್-ಬೆಂಜ್ EQA ಅನ್ನು ಬುಕ್ ಮಾಡಬಹುದು. ಇದರ ಆರಂಭಿಕ ಬೆಲೆಯು ರೂ 69 ಲಕ್ಷ (ಎಕ್ಸ್ ಶೋರೂಂ) ಎಂದು ನಿರೀಕ್ಷಿಸಲಾಗಿದೆ ಮತ್ತು ಇದು ವೋಲ್ವೋ XC40 ರೀಚಾರ್ಜ್, ವೋಲ್ವೋ C40 ರೀಚಾರ್ಜ್, BMW iX1 ಮತ್ತು ಕಿಯಾ EV6 ಗೆ ಪ್ರತಿಸ್ಪರ್ಧಿಯಾಗಿದೆ.

ಆಟೋಮೋಟಿವ್ ಜಗತ್ತಿನ ನಿರಂತರ ಅಪ್ಡೇಟ್ ಗಳನ್ನು ಪಡೆಯಲು ಕಾರ್ದೇಖೋ ವಾಟ್ಸಾಪ್ ಚಾನೆಲ್ ಅನ್ನು ಫಾಲೋ ಮಾಡಿ.

d
ಅವರಿಂದ ಪ್ರಕಟಿಸಲಾಗಿದೆ

dipan

  • 121 ವೀಕ್ಷಣಿಗಳು
  • 0 ಕಾಮೆಂಟ್‌ಗಳು

Write your Comment on Mercedes-Benz eqa

Read Full News

Enable notifications to stay updated with exclusive offers, car news, and more from CarDekho!

trending ಎಲೆಕ್ಟ್ರಿಕ್ ಕಾರುಗಳು

  • ಪಾಪ್ಯುಲರ್
  • ಉಪಕಮಿಂಗ್
ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ