• ಕಿಯಾ ಇವಿ6 ಮುಂಭಾಗ left side image
1/1
  • icon50 ಚಿತ್ರಗಳು
  • 6 ವೀಡಿಯೋಸ್
  • icon4 ಬಣ್ಣಗಳು
  • iconView

ಕಿಯಾ ಇವಿ6

ಕಿಯಾ ಇವಿ6 is a 5 ಸಿಟರ್‌ electric car. ಕಿಯಾ ಇವಿ6 Price starts from ₹ 60.95 ಲಕ್ಷ & top model price goes upto ₹ 65.95 ಲಕ್ಷ. It offers 2 variants It can be charged in 18min-dc 350 kw-(10-80%) & also has fast charging facility. This model has 8 safety airbags. It delivers a top speed of 192 kmph. This model is available in 5 colours.
4.4108 ವಿರ್ಮಶೆಗಳುrate & win ₹ 1000
Rs.60.95 - 65.95 ಲಕ್ಷ
Ex-Showroom Price in ನವ ದೆಹಲಿ
EMI starts @ Rs.1,45,744/ತಿಂಗಳು
view ಏಪ್ರಿಲ್ offer
  • shareShortlist
  • iconAdd Review
  • iconCompare
  • iconVariants

ಕಿಯಾ ಇವಿ6 ನ ಪ್ರಮುಖ ಸ್ಪೆಕ್ಸ್

ರೇಂಜ್708 km
ಪವರ್225.86 - 320.55 ಬಿಹೆಚ್ ಪಿ
ಬ್ಯಾಟರಿ ಸಾಮರ್ಥ್ಯ77.4 kwh
ಚಾರ್ಜಿಂಗ್‌ time ಡಿಸಿ73min 50 kw-(10%-80%)
top ಸ್ಪೀಡ್192 ಪ್ರತಿ ಗಂಟೆಗೆ ಕಿ.ಮೀ )
no. of ಗಾಳಿಚೀಲಗಳು8
360 degree camera
memory function ಸೀಟುಗಳು
ಹೊಂದಾಣಿಕೆ ಹೆಡ್‌ರೆಸ್ಟ್
wireless android auto/apple carplay
ಸನ್ರೂಫ್
advanced internet ಫೆಅತುರ್ಸ್
adas
heads ಅಪ್‌ display
  • key ವಿಶೇಷಣಗಳು
  • top ವೈಶಿಷ್ಟ್ಯಗಳು

ಇವಿ6 ಇತ್ತೀಚಿನ ಅಪ್ಡೇಟ್

ಇತ್ತೀಚಿನ ಅಪ್ಡೇಟ್: ಕಿಯಾ EV6 ಬೆಲೆಗಳನ್ನು ಹೆಚ್ಚಿಸಿದೆ. ಇದೀಗ 1 ಲಕ್ಷ ರೂ.ಗಳಷ್ಟು ದುಬಾರಿಯಾಗಿದೆ.

ಬೆಲೆ: Kia EV6ನ ಬೆಲೆ ಈಗ ರೂ 60.95 ಲಕ್ಷ ಮತ್ತು ರೂ 65.95 ಲಕ್ಷ (ಎಕ್ಸ್ ಶೋ ರೂಂ) ನಡುವೆ ಇದೆ.

ವೆರಿಯೆಂಟ್: Kia EV6 ಅನ್ನು ಒಂದೇ ಟಾಪ್-ಆಫ್-ಲೈನ್ GT ಆಯ್ಕೆಯಲ್ಲಿ ಪಡೆಯಬಹುದು. ಇದು ಎರಡು ವೆರಿಯೆಂಟ್ ಗಳನ್ನು ಹೊಂದಿದೆ: GT ಲೈನ್ RWD ಮತ್ತು GT ಲೈನ್ AWD.

ಆಸನ ಸಾಮರ್ಥ್ಯ: EV6 ಐದು ಪ್ರಯಾಣಿಕರವರೆಗೆ ಕುಳಿತುಕೊಳ್ಳಬಹುದು.

ಬ್ಯಾಟರಿ ಪ್ಯಾಕ್, ಎಲೆಕ್ಟ್ರಿಕ್ ಮೋಟಾರ್ ಮತ್ತು ರೇಂಜ್: ಇಂಡಿಯಾ-ಸ್ಪೆಕ್ EV6 77.4kWh ಬ್ಯಾಟರಿ ಪ್ಯಾಕ್‌ನಿಂದ ಚಾಲಿತವಾಗಿದೆ ಮತ್ತು ಎರಡು ಪವರ್‌ಟ್ರೇನ್ ಆಯ್ಕೆಗಳನ್ನು ಪಡೆಯುತ್ತದೆ: ಸಿಂಗಲ್ ಮೋಟರ್ ರಿಯರ್-ವೀಲ್ ಡ್ರೈವ್ (229PS ಮತ್ತು 350Nm ತಯಾರಿಸುವುದು), ಮತ್ತು ಡ್ಯುಯಲ್ ಮೋಟಾರ್ ಆಲ್-ವೀಲ್ ಡ್ರೈವ್ ( 325PS ಮತ್ತು 605Nm) ಸೆಟಪ್. EV6 708km ನಷ್ಟು ARAI-ಹಕ್ಕು ವ್ಯಾಪ್ತಿಯನ್ನು ಹೊಂದಿದೆ.

ಚಾರ್ಜಿಂಗ್: ವೇಗದ ಚಾರ್ಜರ್ ಅನ್ನು ಬಳಸಿಕೊಂಡು EV6 ಬ್ಯಾಟರಿಯನ್ನು 18 ನಿಮಿಷಗಳಲ್ಲಿ 10 ರಿಂದ 80 ಪ್ರತಿಶತದವರೆಗೆ ಚಾರ್ಜ್ ಮಾಡಬಹುದು. 50kW ಚಾರ್ಜರ್ ಅನ್ನು ಬಳಸಿಕೊಂಡು ಶೇಕಡಾ 10 ರಿಂದ 80 ರಷ್ಟು ರೀಫಿಲ್ ಮಾಡಲು 73 ನಿಮಿಷಗಳನ್ನು ತೆಗೆದುಕೊಳ್ಳುತ್ತದೆ ಮತ್ತು ಹೋಮ್ ಚಾರ್ಜರ್ ಚಾರ್ಜ್ ಆಗಲು 36 ಗಂಟೆಗಳನ್ನು ತೆಗೆದುಕೊಳ್ಳುತ್ತದೆ.

ವೈಶಿಷ್ಟ್ಯಗಳು: ಇನ್ಸ್ಟ್ರುಮೆಂಟ್ ಕ್ಲಸ್ಟರ್ ಮತ್ತು ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್‌ಗಾಗಿ ಡ್ಯುಯಲ್ ಕರ್ವ್ಡ್ 12.3-ಇಂಚಿನ ಡಿಸ್ಪ್ಲೇಗಳೊಂದಿಗೆ ಕಿಯಾ EV6 ಅನ್ನು ಸಜ್ಜುಗೊಳಿಸಲಾಗಿದೆ. 14-ಸ್ಪೀಕರ್ ಮೆರಿಡಿಯನ್ ಸೌಂಡ್ ಸಿಸ್ಟಮ್, ವೈರ್‌ಲೆಸ್ ಫೋನ್ ಚಾರ್ಜಿಂಗ್, ಡ್ಯುಯಲ್ ಝೋನ್ ಕ್ಲೈಮೇಟ್ ಕಂಟ್ರೋಲ್, ವೆಂಟಿಲೇಟೆಡ್ ಮತ್ತು ಬಟನ್ ಚಾಲಿತ ಮುಂಭಾಗದ ಸೀಟ್‌ಗಳು ಮತ್ತು ಸನ್‌ರೂಫ್ (ಪನೋರಮಿಕ್ ಯೂನಿಟ್ ಅಲ್ಲ)

ಸುರಕ್ಷತೆ: ಎಂಟು ಏರ್‌ಬ್ಯಾಗ್‌ಗಳು, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್ ಮತ್ತು ಸ್ವಯಂಚಾಲಿತ ತುರ್ತು ಬ್ರೇಕಿಂಗ್, ಅಡಾಪ್ಟಿವ್ ಕ್ರೂಸ್ ಕಂಟ್ರೋಲ್, ಲೇನ್-ಕೀಪ್ ಅಸಿಸ್ಟ್ ಮತ್ತು ಬ್ಲೈಂಡ್ ಸ್ಪಾಟ್ ಮಾನಿಟರಿಂಗ್ ಸೇರಿದಂತೆ ಹಲವಾರು ADAS ಕಾರ್ಯಚಟುವಟಿಕೆಗಳಿಂದ ಪ್ರಯಾಣಿಕರ ಸುರಕ್ಷತೆಯನ್ನು ಖಾತ್ರಿಪಡಿಸಲಾಗಿದೆ.

ಪ್ರತಿಸ್ಪರ್ಧಿಗಳು: Kia ನ ಎಲೆಕ್ಟ್ರಿಕ್ ಕ್ರಾಸ್ಒವರ್ ಹುಂಡೈ Ioniq 5, Skoda Enyaq iV, BMW i4 ಮತ್ತು Volvo XC40 ರೀಚಾರ್ಜ್‌ಗೆ ಪ್ರತಿಸ್ಪರ್ಧಿಯಾಗಿದೆ.

ಮತ್ತಷ್ಟು ಓದು
ಕಿಯಾ ಇವಿ6 Brochure

download brochure for detailed information of specs, ಫೆಅತುರ್ಸ್ & prices.

download brochure
ಕರಪತ್ರವನ್ನು ಡೌನ್ಲೋಡ್ ಮಾಡಿ
ಇವಿ6 ಜಿಟಿ ಲೈನ್(Base Model)77.4 kwh, 708 km, 225.86 ಬಿಹೆಚ್ ಪಿmore than 2 months waitingRs.60.95 ಲಕ್ಷ*
ಇವಿ6 ಜಿಟಿ ಲೈನ್ ಆಲ್‌ವೀಲ್‌ಡ್ರೈವ್‌(Top Model)
ಅಗ್ರ ಮಾರಾಟ
77.4 kwh, 708 km, 320.55 ಬಿಹೆಚ್ ಪಿmore than 2 months waiting
Rs.65.95 ಲಕ್ಷ*

ಕಿಯಾ ಇವಿ6 ಇದೇ ಕಾರುಗಳೊಂದಿಗೆ ಹೋಲಿಕೆ

ಕಿಯಾ ಇವಿ6 ವಿಮರ್ಶೆ

ಐಷಾರಾಮಿ EV + ನ ಬೆಲೆಯನ್ನು ಗಮನಿಸಿದಾಗ ಬಲು ದುಬಾರಿ ಎನಿಸಬಹುದು, ಆದರೆ EV6 ಸಾಕಷ್ಟು ಉತ್ಸಾಹ ಮತ್ತು ವಿಶೇಷತೆಯನ್ನು ಒಳಗೊಂಡಿದೆ. ನೀವು ಅದನ್ನು ಪರಿಗಣಿಸುತ್ತೀರಾ?

ಇಲೆಕ್ಟ್ರಾನಿಕ್ ವೆಹಿಕಲ್ ಗಳ ಜಗತ್ತಿಗೆ ಕಿಯಾ ಪ್ರವೇಶ ಮಾಡಿದಾಗ ಎಲ್ಲರ ಗಮನವನ್ನು ಸೆಳೆಯಿತು. ಇದು EV6 ಕಾಣುವ ರೀತಿಯಲ್ಲಿ ಮಾತ್ರವಲ್ಲ, ಸೊಗಸಾದ ಬಂಪರ್‌ಗಳ ನಡುವೆ ಮಿಶ್ರಣ ಆಗಿರುವ ತಂತ್ರಜ್ಞಾನದ ಕಾರಣದಿಂದಾಗಿ. ಇದು ಸ್ಪೋರ್ಟ್ಸ್ ಕಾರಿನಂತಹ ಕಾರ್ಯಕ್ಷಮತೆ ಮತ್ತು ಐಷಾರಾಮಿ ಕಾರಿನಂತಹ ವೈಶಿಷ್ಟ್ಯಗಳನ್ನು ಭರವಸೆ ನೀಡಿದೆ ಮತ್ತು ನಾವು ಅದನ್ನು ಅನುಭವಿಸುವ ಸಮಯ ಬಂದಿದೆ. ಆದಾಗ್ಯೂ, ಇದು ಸಂಪೂರ್ಣ ಆಮದು ಆಗಲಿದೆ, ಅಂದರೆ ಇದು ಐಷಾರಾಮಿ ವಿಭಾಗದಲ್ಲಿ ಸ್ಥಾನ ಪಡೆಯಲಿದೆ. ಆಮದು ಆಗಿದ್ದರೂ ಅದನ್ನು ಪರಿಗಣಿಸಲು EV6 ಸಾಕಷ್ಟು ಉತ್ತೇಜಕವಾಗಿರಬಹುದೇ?

ಎಕ್ಸ್‌ಟೀರಿಯರ್

ಅದರ ಆಲ್-ಇವಿ ಪ್ಲಾಟ್‌ಫಾರ್ಮ್‌ನೊಂದಿಗೆ, ಕಿಯಾ ವಿನ್ಯಾಸದಲ್ಲಿ ಕ್ರಾಂತಿಕಾರಿಯಾದ ಹೆಜ್ಜೆಯನ್ನಿಟ್ಟಿದೆ. EV6 ಸಾಂಪ್ರದಾಯಿಕ ಹ್ಯಾಚ್‌ಬ್ಯಾಕ್ ಆಗಲಿ ಅಥವಾ ಸೆಡಾನ್ ಅಥವಾ ಎಸ್‌ಯುವಿಯೂ ಅಲ್ಲ.  ಇದು ಈ ಮೂರರ ಸಂಯೋಜನೆಯಾಗಿದೆ ಮತ್ತು ನೀವು EV6 ನ ಗಾತ್ರ ಮತ್ತು ವಿನ್ಯಾಸದ ವಿವರಗಳನ್ನು ಗಣನೆಗೆ ತೆಗೆದುಕೊಂಡಾಗ, ಭಾರತೀಯ ರಸ್ತೆಗಳಲ್ಲಿ ನಾವು ಇಂತಹ ಕಾರುಗಳನ್ನು ನೋಡಿಲ್ಲದಂತೆ ಅನಿಸುತ್ತದೆ.

ಇಳಿಜಾರಾದ ಬಾನೆಟ್, ನಯವಾದ ಗ್ರಿಲ್ ಮತ್ತು ದೊಡ್ಡ ಹೆಡ್‌ಲ್ಯಾಂಪ್‌ಗಳೊಂದಿಗೆ ಮುಂಭಾಗವು ತುಂಬಾ ಶಾರ್ಪ್‌ ಆಗಿ ಕಾಣುತ್ತದೆ. ಈ ಕಾರಿನ ಸೈಡ್‌ ಪ್ರೊಫೈಲ್‌ನ ಗಮನಿಸುವಾಗ ಇದರ ದೊಡ್ಡ ಪ್ರಮಾಣವು ನಮ್ಮನ್ನು ಮೋಡಿ ಮಾಡಲು ಪ್ರಾರಂಭಿಸುತ್ತದೆ. ಆದರೆ, ವಿವರಗಳಿಗೆ ಗಮನ ನೀಡುವುದು ಎದ್ದು ಕಾಣುತ್ತದೆ. ಹೆಡ್‌ಲ್ಯಾಂಪ್‌ಗಳು ಸಂಕೀರ್ಣವಾದ ಡಿಆರ್‌ಎಲ್‌ಎಸ್‌ ಮತ್ತು ಲೈಟಿಂಗ್‌ಗಾಗಿ ಪೂರ್ಣ ಮ್ಯಾಟ್ರಿಕ್ಸ್ ಎಲ್‌ಇಡಿ ಸೆಟಪ್ ಅನ್ನು ಪಡೆಯುತ್ತವೆ. ಮೇಲಿನ DRL ಸಹ ಅನುಕ್ರಮ ಟರ್ನ್‌ ಇಂಡಿಕೇಟರ್‌ ಆಗಿ ಕಾರ್ಯನಿರ್ವಹಿಸುತ್ತದೆ.

EV6 4695mm ಉದ್ದ, 1890mm ಅಗಲ, 1550mm ಎತ್ತರ ಮತ್ತು 2900mm ವ್ಹೀಲ್‌ಬೇಸ್ ಅನ್ನು ಹೊಂದಿದೆ. ಹೀಗಾಗಿ, EV6 ಟಾಟಾ ಸಫಾರಿಯಂತೆ ಉದ್ದವಾಗಿದೆ ಮತ್ತು ಅಗಲವಾಗಿದೆ, ಹಾಗೆಯೇ ಇದು ಟೊಯೊಟಾ ಫಾರ್ಚುನರ್‌ಗಿಂತ ಉದ್ದವಾದ ವೀಲ್‌ಬೇಸ್ ಅನ್ನು ಹೊಂದಿದೆ!

ಇದರಿಂದಾಗಿ EV ಯ ಚಕ್ರಗಳನ್ನು ಕಾರ್ನರ್‌ಗೆ ತಳ್ಳಲಾಗುತ್ತದೆ, ಇದರ ಎಲ್ಲಾ ಪ್ರಶಂಸೆ EV ಪ್ಲಾಟ್‌ಫಾರ್ಮ್‌ಗೆ ಸೇರಬೇಕು. ಮತ್ತು ಅಂತಹ ಗಾತ್ರದೊಂದಿಗೆ, ಫಾಸ್ಟ್‌ಬ್ಯಾಕ್ ವಿನ್ಯಾಸದಿಂದಾಗಿ EV ಇನ್ನಷ್ಟು ಸ್ಪೋರ್ಟಿಯರ್ ಆಗಿ ಕಾಣುತ್ತದೆ. ತದನಂತರ 19-ಇಂಚಿನ ಚಕ್ರಗಳು, ಏರೋ-ಸ್ಪೆಸಿಫಿಕ್‌ ORVM ಗಳು ಮತ್ತು ಫ್ಲಶ್-ಫಿಟ್ಟಿಂಗ್ ಡೋರ್ ಹ್ಯಾಂಡಲ್‌ಗಳಂತಹ ವಿನ್ಯಾಸದಲ್ಲಿ ನೀಡಿರುವ ಅಂಶಗಳು ಈ ಕಾರನ್ನು ಇನ್ನಷ್ಟು ಸ್ವಚ್ಛವಾಗಿ ಕಾಣುವಂತೆ ಮಾಡುತ್ತದೆ.

ಹಿಂಭಾಗದಲ್ಲಿ, ವಿನ್ಯಾಸದಲ್ಲಿನ ತೀಕ್ಷ್ಣತೆಯು ಸುಂದರವಾಗಿ ಸೇರಿಸಲಾಗಿರುವ ಕನೆಕ್ಟೆಡ್‌ ಟೈಲ್ ಲ್ಯಾಂಪ್ ಮತ್ತು ಟರ್ನ್ ಇಂಡಿಕೇಟರ್‌ಗಳಲ್ಲಿ 3D ಮಾದರಿಯೊಂದಿಗೆ ಮರಳುತ್ತದೆ. ಸ್ಪಾಯ್ಲರ್ ಕೂಡ ನೋಡಲು ಸ್ಪೋರ್ಟಿಯಾಗಿದೆ ಮತ್ತು ನೀವು ಅವುಗಳನ್ನು ಒಮ್ಮೆ ನೋಡಿದ ನಂತರ ನೀವು ಮಿಸ್‌ ಮಾಡಿಕೊಳ್ಳಬಾರದು ಎಂಬ ದೃಷ್ಟಿಕೋನದಲ್ಲಿ ನಿರ್ದಿಷ್ಟ ಹೈಪರ್‌ಕಾರ್‌ನಿಂದ ಸ್ಫೂರ್ತಿ ಪಡೆಯುವ ರಿವರ್ಸ್‌ ಲೈಟ್‌ಗಳಾಗಿವೆ. 

ಒಟ್ಟಾರೆಯಾಗಿ, Kia EV6 ಎಲ್ಲರ ಗಮನವನ್ನು ತನ್ನತ್ತ ಸೆಳೆಯುವ ಕಾರಾಗಿದೆ. ಇದು ತನ್ನ ದೊಡ್ಡದಾದ ಗಾತ್ರದೊಂದಿಗೆ ಅದರ ಉಪಸ್ಥಿತಿಯನ್ನು ಅನುಭವಿಸುವಂತೆ ಮಾಡುತ್ತದೆ ಮತ್ತು ವಿನ್ಯಾಸದಲ್ಲಿನ ನೂತನ ಅಂಶಗಳೊಂದಿಗೆ ನಿಮ್ಮ ಗಮನವನ್ನು ಸೆಳೆಯುತ್ತದೆ. ಇದು ಕೆಲವು ಸ್ಥಳದಲ್ಲಿ ಅತಿಯಾಗಿ ಕಾಣಿಸಬಹುದು, ಆದರೆ ಖಂಡಿತವಾಗಿಯೂ ರಸ್ತೆಯಲ್ಲಿ ಬೇರೆ ಯಾವುದೂ ಕಾಣಿಸುವುದಿಲ್ಲ.

ಇಂಟೀರಿಯರ್

EV6 ನ ಡ್ಯಾಶ್‌ಬೋರ್ಡ್ ವಿನ್ಯಾಸವು ಇನ್ನೋವೇಟಿವ್ ಆಗಿದೆ. ಇದು ಮೇಲ್ಭಾಗದಲ್ಲಿ ಆಸಕ್ತಿದಾಯಕ ಶೇಪ್‌ನ್ನು ಹೊಂದಿದೆ, ಇದು ನಾವು ಈ ಹಿಂದೆ ನೋಡಿದ ಯಾವುದೇ ಕಾರಿನಂತಿಲ್ಲ. ಕನಿಷ್ಠ ಲೇಔಟ್, ಕೇವಲ ಎರಡು ಬಾಗಿದ ಸ್ಕ್ರೀನ್‌ಗಳೊಂದಿಗೆ, ಇದು ನಿಜವಾಗಿಯೂ ಸ್ವಚ್ಛವಾಗಿ ಕಾಣಲು ಸಹಾಯ ಮಾಡುತ್ತದೆ. 2 ಸ್ಪೋಕ್‌ ಸ್ಟೀರಿಂಗ್ ಈ ಕನಿಷ್ಠ ವಿನ್ಯಾಸವನ್ನು ಇನ್ನಷ್ಟು ಬಲಗೊಳಿಸಲು ಸಹಾಯ ಮಾಡುತ್ತದೆ.

EV6 ಪ್ಯೂರ್‌ EV ಪ್ಲಾಟ್‌ಫಾರ್ಮ್ ಅನ್ನು ಆಧರಿಸಿದೆ, ಹಾಗಾಗಿ ಇದು ಸಮತಟ್ಟಾದ ಫ್ಲೋರ್‌ನ್ನು ಪಡೆಯುತ್ತದೆ. ಇದು ವಿನ್ಯಾಸಕಾರರಿಗೆ ಸಾಕಷ್ಟು ಜಾಗವನ್ನು ತೆರೆಯಲು ಮತ್ತು ಸೆಂಟರ್ ಕನ್ಸೋಲ್‌ಗೆ ತೇಲುವ ಅನುಭವವನ್ನು ನೀಡಲು ಸಹಾಯ ಮಾಡಿದೆ. ಇದು ಕಾರನ್ನು ವಿಭಿನ್ನವಾಗಿ ಅನುಭವಿಸಲು ಸಹಾಯ ಮಾಡುವುದು ಮಾತ್ರವಲ್ಲದೆ, ಕ್ಯಾಬಿನ್‌ನಲ್ಲಿ ಸ್ಟೋರೇಜ್‌ ಸ್ಥಳಗಳಿಗೆ ಬೇಕಾಗುವಷ್ಟು ಸ್ಥಳಾವಕಾಶವನ್ನು ತೆರೆಯುತ್ತದೆ. ಅದನ್ನು ನಾವು ಸ್ವಲ್ಪ ಸಮಯದ ನಂತರ ಪಡೆಯುತ್ತೇವೆ.

ಇದರ ಆಸನಗಳು ತುಂಬಾ ಆರಾಮದಾಯಕ ಮತ್ತು ಸಪೋರ್ಟಿವ್‌ ಮತ್ತು 10-ವೇ ಪವರ್ ಹೊಂದಾಣಿಕೆಯನ್ನು ಹೊಂದಿವೆ. ಯವುದೇ ಗಾತ್ರದ ಹೊರತಾಗಿಯೂ ನ್ಯಾಚುರಲ್‌ ಆಗಿರುವ ಡ್ರೈವಿಂಗ್‌ ಸ್ಥಾನವನ್ನು ಪಡೆಯಲು ಇದು ನಿಮಗೆ ಸಹಾಯ ಮಾಡುತ್ತದೆ. ಅಲ್ಲದೆ, ಚಾರ್ಜ್ ಮಾಡುವಾಗ - ಈ ಆಸನಗಳು ಬಹುತೇಕ ಸಮತಲ ಮಟ್ಟಕ್ಕೆ (ಶೂನ್ಯ-ಗುರುತ್ವಾಕರ್ಷಣೆ) ಒರಗಿಕೊಳ್ಳಬಹುದು, ಇದು ನಿಮಗೆ ವಿಶ್ರಾಂತಿ ಮತ್ತು ನಿದ್ರೆಗೆ ಸಹಾಯ ಮಾಡುತ್ತದೆ. ಅಂತರಾಷ್ಟ್ರೀಯವಾಗಿ, ಸೀಟ್ ಕವರ್‌ಗಳನ್ನು ಮರುಬಳಕೆಯ ಪ್ಲಾಸ್ಟಿಕ್‌ನಿಂದ ನಿರ್ಮಿಸಲಾಗಿದೆ ಆದರೆ ಭಾರತದಲ್ಲಿ ಈ ಆಯ್ಕೆಗಳು ಹೊಲಿದ ಮತ್ತು ಸಿಂತೆಟಿಕ್‌ ಲೆದರ್‌ನ್ನು ಒಳಗೊಂಡಿರುತ್ತವೆ. ಇದರೊಂದಿಗೆ, ಮರುಬಳಕೆಯ PET ಬಾಟಲಿಗಳಿಂದ ನಿರ್ಮಿಸಲಾದ ಡೋರ್ ಪ್ಯಾಡ್‌ಗಳನ್ನು ನೀವು ಇನ್ನೂ ಪಡೆಯುತ್ತೀರಿ.

ವೈಶಿಷ್ಟ್ಯಗಳು

EV6 ನ್ನು ವೈಶಿಷ್ಟ್ಯಗಳೊಂದಿಗೆ ಪ್ಯಾಕ್ ಮಾಡಲಾಗಿದೆ. ಡ್ಯಾಶ್‌ಬೋರ್ಡ್‌ನಲ್ಲಿ ಎರಡು ಬಾಗಿದ 12.3-ಇಂಚಿನ ಡಿಸ್‌ಪ್ಲೇಗಳು ಚಾಲಕ ಮತ್ತು ಇನ್ಫೋಟೈನ್‌ಮೆಂಟ್‌ಗಾಗಿ ಜೋಡಿಸಲಾಗಿದೆ. ಡಿಸ್‌ಪ್ಲೇಯ ಸ್ಪಷ್ಟತೆ ಮತ್ತು ಸಾಫ್ಟ್‌ವೇರ್‌ನ ಮೃದುತ್ವವು ಅದ್ಭುತವಾಗಿದೆ ಮತ್ತು ನುಣುಪಾಗಿದೆ. ಹಾಗೆಯೇ ಮರ್ಸಿಡೀಸ್‌-ಬೆಂಜ್‌ನಲ್ಲಿ ಬಳಸುವ ವ್ಯವಸ್ಥೆಗಳೊಂದಿಗೆ ಇದು ಸುಲಭವಾಗಿ ಸ್ಪರ್ಧೆಯನ್ನು ಒಡ್ಡುವಂತಹ ಸೌಕರ್ಯವನ್ನು ಹೊಂದಿದೆ. ಡ್ರೈವರ್‌ನ ಡಿಸ್‌ಪ್ಲೇಯು ವಿವಿಧ ಲೇಔಟ್‌ಗಳನ್ನು ಪಡೆಯುತ್ತದೆ, ಅದು ಉತ್ತಮವಾದ ಅನಿಮೇಷನ್‌ಗಳೊಂದಿಗೆ ಬದಲಾಗುತ್ತದೆ ಮತ್ತು ಇಂಫೊಎಂಟಟೈನ್‌ಮೆಂಟ್‌ ಡಿಸ್‌ಪ್ಲೇಯು ಸರಳವಾದ ಮತ್ತು ಉಪಯುಕ್ತವಾದ ಗ್ರಾಫಿಕ್ಸ್ ಅನ್ನು ಪಡೆಯುತ್ತದೆ.  ನಾನು ವಿಶೇಷವಾಗಿ ಬ್ಯಾಟರಿ ಮತ್ತು ರೇಂಜ್‌ನ್ನು ಡಿಸ್‌ಪ್ಲೇ ಮಾಡುವುದನ್ನು ನಾವು  ಇಷ್ಟಪಡುತ್ತೇವೆ, ಆದರೆ ಸ್ಕ್ರೀನ್‌ನ ಮೇಲೆ ಪ್ರದರ್ಶಿಸಲಾದ ಕಾರು EV6 ಆಗಿರಬೇಕು ಎಂದು ನಾವು ಬಯಸುತ್ತೇವೆ.

ಐಷಾರಾಮಿ ಕಾರುಗಳಂತೆಯೇ ಉತ್ತಮ ಸೌಂಡ್‌ಗಾಗಿ 3D ಅಕೌಸ್ಟಿಕ್ ಸೌಂಡ್‌ನ್ನು ಹೊಂದಿರುವ 14-ಸ್ಪೀಕರ್ ಮೆರಿಡಿಯನ್ ಸೌಂಡ್ ಸಿಸ್ಟಂನೊಂದಿಗೆ ಇನ್ಫೋಟೈನ್‌ಮೆಂಟ್ ಅನ್ನು ಜೋಡಿಸಲಾಗಿದೆ. ಇದರ ಹೊರತಾಗಿ, ನೀವು ವೆಂಟಿಲೇಟೆಡ್‌ ಮತ್ತು ಬಿಸಿಯಾದ ಸೀಟ್‌ಗಳು, ಹೀಟೆಡ್ ಸ್ಟೀರಿಂಗ್, ಡ್ಯುಯಲ್-ಜೋನ್ ಕ್ಲೈಮೇಟ್ ಕಂಟ್ರೋಲ್, ಆಂಬಿಯೆಂಟ್ ಲೈಟ್‌ಗಳು, ಸನ್‌ರೂಫ್ ಮತ್ತು 360-ಡಿಗ್ರಿ ಕ್ಯಾಮೆರಾವನ್ನು ಸಹ ಪಡೆಯುತ್ತೀರಿ, ಈ ಮೂಲಕ ನೀವು ನಿಮ್ಮ ಕಾರನ್ನು ಚಾರ್ಜ್ ಮಾಡುವಾಗ ದೂರದಿಂದಲೇ ನೀವು ಮೇಲ್ವಿಚಾರಣೆ ಮಾಡಬಹುದು.

ಭಾರತದಲ್ಲಿ ಅಡಾಪ್ಟಿವ್ ಕ್ರೂಸ್ ಕಂಟ್ರೋಲ್, ಲೇನ್ ಕೀಪ್ ಅಸಿಸ್ಟ್, ಎಮರ್ಜೆನ್ಸಿ ಬ್ರೇಕ್‌ಗಳು ಮತ್ತು ಹೆಚ್ಚಿನವುಗಳೊಂದಿಗೆ ಪೂರ್ಣ ADAS ಸೂಟ್ ಅನ್ನು ಪಡೆಯುವ ಕಿಯಾದ ಮೊದಲ EV ಆಗಲಿದೆ. ವೈಶಿಷ್ಟ್ಯ ವಿಭಾಗದಲ್ಲಿ ಹೆಡ್ಸ್-ಅಪ್ ಡಿಸ್ಪ್ಲೇ ವಿಶೇಷ ಉಲ್ಲೇಖ ಆಗಿದೆ, ಇದು ನ್ಯಾವಿಗೇಷನ್ ಮತ್ತು ವಾರ್ನಿಂಗ್‌ಗಾಗಿ ವರ್ಧಿತ ರಿಯಾಲಿಟಿ ಡಿಸ್ಪ್ಲೇಗಳನ್ನು ಪಡೆಯುತ್ತದೆ. ಇದು ನಿಮಗೆ ಉತ್ತಮ ಮಾರ್ಗದರ್ಶನ ನೀಡಲು ಮುಂದಿನ ರಸ್ತೆಯ ಮೇಲೆ ಚಿತ್ರವನ್ನು ಅತಿಕ್ರಮಿಸಬಹುದು.

ಪ್ರಾಯೋಗಿಕತೆ

ನಾವು ಹೇಳಿದಂತೆ, ಕಿಯಾ EV6 EV-ಸ್ಪೇಸಿಫಿಕ್‌ ಪ್ಲಾಟ್‌ಫಾರ್ಮ್ ಅನ್ನು ಆಧರಿಸಿದೆ, ಅದು ಸಾಕಷ್ಟು ಸ್ಥಳಾವಕಾಶ ಮತ್ತು ಪ್ರಾಯೋಗಿಕತೆಯನ್ನು ನೀಡಲು ಸಹಾಯ ಮಾಡುತ್ತದೆ. ಸೆಂಟರ್ ಕನ್ಸೋಲ್‌ನ ಕೆಳಗಿರುವ ಸ್ಟೋರೇಜ್‌ನಲ್ಲಿ ಸಣ್ಣ ಬ್ಯಾಗ್‌ಗಳನ್ನು ಸುಲಭವಾಗಿ ಇಡಬಹುದು ಮತ್ತು ಆರ್ಮ್‌ರೆಸ್ಟ್‌ನ ಅಡಿಯಲ್ಲಿ ಸ್ಥಳಾವಕಾಶವು ತುಂಬಾ ಆಳವಾಗಿದೆ ಮತ್ತು ಸಣ್ಣ ಬ್ಯಾಗ್‌ಗೆ ಬೇಕಾಗುವ ಜಾಗವನ್ನು ಹೊಂದಿದೆ. ಗ್ಯಾಜೆಟ್ ಚಾರ್ಜಿಂಗ್ ಆಯ್ಕೆಯು ಎರಡು ಟೈಪ್-ಸಿ, ಒಂದು ಯುಎಸ್‌ಬಿ, ಒಂದು 12-ವೋಲ್ಟ್ ಮತ್ತು ಮುಂಭಾಗದಲ್ಲಿ ವೈರ್‌ಲೆಸ್ ಚಾರ್ಜರ್‌ನೊಂದಿಗೆ ಬರುತ್ತದೆ. ಹಿಂದಿನ ಪ್ರಯಾಣಿಕರು ಎರಡು ಸೀಟ್-ಮೌಂಟೆಡ್ ಟೈಪ್ ಸಿ ಪೋರ್ಟ್‌ಗಳು ಮತ್ತು ಲ್ಯಾಪ್‌ಟಾಪ್ ಚಾರ್ಜರ್ ಅನ್ನು ಪಡೆಯುತ್ತಾರೆ.

ಹಿಂದಿನ ಆಸನ

ಹಿಂದಿನ ಸೀಟುಗಳು 6 ಅಡಿ ಎತ್ತರದವರಿಗೆ ಆರಾಮವಾಗಿ ಕೂತು ಪ್ರಯಾಣಿಸಲು ಉತ್ತಮ ಸ್ಥಳಾವಕಾಶವನ್ನು ನೀಡುತ್ತವೆ. ಮೊಣಕಾಲು ಇಡುವಲ್ಲಿ ಮತ್ತು ಹೆಡ್‌ರೂಮ್ ನಲ್ಲಿ ಸಹ ಸಾಕಷ್ಟು ಜಾಗವಿದೆ ಇದೆ, ಆದರೆ,  ಮುಂಭಾಗದ ಸೀಟಿನ ಕೆಳಗೆ ಸಾಕಷ್ಟು ಜಾಗ ಇಲ್ಲದಿರುವುದರಿಂದ ನೀವು ನಿಮ್ಮ ಪಾದಗಳನ್ನು ಚಾಚಿ ಆರಾಮವಾಗಿ ಕುಳಿತುಕೊಳ್ಳಲು ಸಾಧ್ಯವಿಲ್ಲ. ಸೀಟ್‌ಗೆ ಮತ್ತು ಕಾರಿನ ಫ್ಲೋರ್‌ನ ಮಧ್ಯೆ ಸಾಕಷ್ಟು ಜಾಗವಿಲ್ಲದ ಕಾರಣ, ತೊಡೆಯ ಕೆಳಭಾಗದ ಸಪೋರ್ಟ್‌ನ ಕೊರತೆಗೆ ಕಾರಣವಾಗುತ್ತದೆ. ಹಿಂಬದಿಯ ಸೀಟ್‌ನ್ನು ನೇರವಾಗಿ ಜೋಡಿಸಿರುವುದರಿಂದ ಲಾಂಗ್‌ ಟ್ರಿಪ್‌ ನಂತಹ ಪ್ರಯಾಣದಲ್ಲಿ ಹಿಂಬದಿ ಸೀಟಿನಲ್ಲಿ ಕುಳಿತುಕೊಳ್ಳುವ ಪ್ರಯಾಣಿಕರಿಗೆ EV6 ಆರಾಮದಾಯಕವಿಲ್ಲ. ಆದಾಗಿಯೂ, ನಗರದೊಳಗಿನ ಪ್ರಯಾಣದಲ್ಲಿ ಐದು ವಿಮಾನಗಳಿದ್ದರೂ ಪ್ರಯಾಣಿಕರಿದ್ದರೂ ಸಹ ಪ್ರಯಾಣವು ಉತ್ತಮವಾಗಿರುತ್ತದೆ.

ಬೂಟ್‌ನ ಸಾಮರ್ಥ್ಯ

EV6 520 ಲೀಟರ್ ನಷ್ಟು ಬೂಟ್ ನಲ್ಲಿ ಜಾಗವನ್ನು ಹೊಂದಿದ್ದು ಮತ್ತು ಹಿಂಬದಿಯ ಆಸನಗಳನ್ನು ಮಡಿಸುವ  ಮೂಲಕ ಇದನ್ನು ಇನ್ನಷ್ಟು ವಿಸ್ತರಿಸಬಹುದು.ಆದರೆ, EV ಯಲ್ಲಿನ ಈ ದೊಡ್ಡ ಬೂಟ್ ನಲ್ಲಿ ಒಂದು ಸ್ಪೇರ್‌ ವೀಲ್‌ಗೂ ಜಾಗ ನೀಡಬೇಕಾಗುತ್ತದೆ. ಅಲ್ಲದೆ, ಬೂಟ್ ನ ಫ್ಲೋರ್‌ ಮೇಲಿನ ಜಾಗವು ಚಾರ್ಜರ್ ಮತ್ತು ಮೊಬಿಲಿಟಿ ಕಿಟ್ ಗಾಗಿ (ಪಂಕ್ಚರ್ ಸಂದರ್ಭದಲ್ಲಿ ಬಳಸಲು) ಮೀಸಲಿಡಬೇಕಾಗುತ್ತದೆ.

ಇದರೊಂದಿಗೆ, ಮುಂಭಾಗದ ಬಾನೆಟ್ ನ ಅಡಿಯಲ್ಲಿ ಸಣ್ಣ ಸ್ಟೋರೇಜ್‌ಗಾಗಿ ಸ್ಥಳವನ್ನು ಪಡೆಯುತ್ತೀರಿ. ಆಲ್‌ ವೀಲ್‌ ಡ್ರೈವ್‌ ಆವೃತ್ತಿಯಲ್ಲಿ 20 ಲೀಟರ್ ಮತ್ತು  ಹಿಂಬದಿ ವೀಲ್‌ ಡ್ರೈವ್‌ ಮೊಡೆಲ್‌ನಲ್ಲಿ  52 ಲೀಟರ್ ನಷ್ಟು ಜಾಗವಿದೆ. ಸಣ್ಣ ಗ್ರೋಸರಿ ಚೀಲಗಳನ್ನು ಇಡಲು ಇದನ್ನು ಬಳಸಬಹುದು, ಆದರೆ ನೀವು ಪ್ರತಿ ಬಾರಿ ಒಳಗಿನಿಂದ ಬಾನೆಟ್ ಅನ್ನು ತೆರೆಯಬೇಕಾಗಿರುವುದರಿಂದ, 'ಫ್ರೂಟ್' ಅನ್ನು ಬಳಸಲು ನಾವು ಸಲಹೆ ನೀಡುವುದಿಲ್ಲ.

ಕಾರ್ಯಕ್ಷಮತೆ

EV6 ಅನ್ನು ಚಾಲನೆ ಮಾಡಲು ಪ್ರಾರಂಭಿಸಿದಾಗ ಇದು ಯಾವುದೇ ಇತರ EV ಅನ್ನು ಚಾಲನೆ ಮಾಡುವಂತೆ ಭಾಸವಾಗುತ್ತದೆ. ಇದು ಶಾಂತ, ನಯವಾದ ಮತ್ತು ಶ್ರಮರಹಿತ ಡ್ರೈವ್ ಅನ್ನು ನೀಡುತ್ತದೆ. ಇದರಲ್ಲಿನ ಕ್ಯಾಬಿನ್ ನಿರೋಧನವು ಇತ್ತೀಚಿನ ದಿನಗಳಲ್ಲಿ ನಾವು ಅನುಭವಿಸಿದ ಅತ್ಯುತ್ತಮವಾದವುಗಳಲ್ಲಿ ಒಂದಾಗಿದೆ. ಇದು EV ಡ್ರೈವ್‌ನಲ್ಲಿ ವಾಹನದ ಒಳಗೆ ಶಾಂತತೆಯ ಅನುಭವ ನೀಡಲು ಮತ್ತಷ್ಟು ಸಹಾಯ ಮಾಡುತ್ತದೆ.

ಆದಾಗಿಯೂ, EV6 ಮತ್ತು ಇತರ ಸಾಮಾನ್ಯ EVಗಳ ನಡುವಿನ ವ್ಯತ್ಯಾಸವು ನೀವು ಥ್ರೊಟಲ್‌ಗೆ ಹೆಚ್ಚಿನ ಕೆಲಸ ನೀಡಲು ಪ್ರಾರಂಭಿಸಿದಾಗ ಕಾರ್ಯರೂಪಕ್ಕೆ ಬರುತ್ತದೆ. 'ಸ್ಪೋರ್ಟ್' ಮೋಡ್‌ನಲ್ಲಿ, ನೀವು ನೀಡುವ ಪ್ರತಿಯೊಂದು ತೀಕ್ಷ್ಣವಾದ ಕಮಾಂಡ್‌, ಎಷ್ಟೇ ಚಿಕ್ಕದಾಗಿದ್ದರೂ ಸಹ EV6 ಸುಗಮವಾಗಿ ಮುನ್ನಡೆಯುತ್ತದೆ. 40kmph ಅಥವಾ 140kmph ಆಗಿರಲಿ, ಹೆಚ್ಚುವರಿ ಥ್ರೊಟಲ್ ಯಾವಾಗಲೂ ಬಲವಾದ ಎಕ್ಸಿಲೆರೆಷನ್‌ಗೆ ಕಾರಣವಾಗುತ್ತದೆ.

EV6 ಯ ಟಾಪ್‌ ಸ್ಪೀಡ್‌ನ್ನು ವಿದ್ಯುನ್ಮಾನವಾಗಿ ಸೂಚಿಸಲಾದ 192kmphಗೆ ಸೀಮಿತಗೊಳಿಸಲಾಗಿದೆ ಮತ್ತು ನೊಯ್ಡಾದ ಬುದ್ಧ್ ಇಂಟರ್ನ್ಯಾಷನಲ್ ಸರ್ಕ್ಯೂಟ್ (BIC) ನಲ್ಲಿ  ನಾವು ಮಾಡಿದ ರೈಡ್‌ನಲ್ಲಿ ಪ್ರತಿ ಬಾರಿಯೂ ಟಾಪ್‌ ಸ್ಪೀಡ್‌ನ್ನು ತಲುಪಲು ಪ್ರಯತ್ನಿಸಿದ್ದೆವೆ. ಸೂಚಿಸಲಾದ ಟಾಪ್‌ ಸ್ಪೀಡ್‌ನ್ನು ನಮಗೆ ತಲುಪಲು ಕೇವಲ 20 ಸೆಕೆಂಡುಗಳನ್ನು ತೆಗೆದುಕೊಂಡಿತು, ಇದು ಅತ್ಯಂತ ತ್ವರಿತ ಮತ್ತು ಇದರ ವೇಗವರ್ಧನೆಯು ಜೀವನದ ನೀರಸ ದಿನಗಳಲ್ಲಿ ಪ್ರತಿ ಬಾರಿಯೂ ನಿಮ್ಮನ್ನು ಪ್ರಚೋದಿಸುವಷ್ಟು ಪ್ರಬಲವಾಗಿದೆ.

ವಿಭಿನ್ನವಾದ 'ಸ್ಪೋರ್ಟ್ ಬ್ರೇಕ್' ಮೋಡ್ ಕೂಡ ಇದೆ, ಇದು ಬ್ರೇಕ್‌ಗಳನ್ನು ಇನ್ನಷ್ಟು ಶಾರ್ಪ್‌ ಆಗಿ ಮಾಡುತ್ತದೆ ಮತ್ತು ಇದನ್ನು ರೇಸ್‌ಟ್ರಾಕ್‌ಗೆ ಬಿಡುವುದು ಉತ್ತಮವಾಗಿದೆ. ಇತರ ಡ್ರೈವ್ ಮೋಡ್‌ಗಳಿಗೆ (ಇಕೋ ಮತ್ತು ಡ್ರೈವ್) ಬದಲಿಸಿದಾಗ ಥ್ರೊಟಲ್ ಕಡಿಮೆ ಆಕ್ರಮಣಕಾರಿಯಾಗಿದೆ. ಇದು ಎಕ್ಸಿಲರೇಷನ್ ಪ್ರಕ್ರಿಯೆಯನ್ನು ಹೆಚ್ಚು ಪ್ರಗತಿಶೀಲವಾಗಿಸುತ್ತದೆ ಮತ್ತು ನಿಯಂತ್ರಿಸುತ್ತದೆ. ಅಲ್ಲದೆ BIC ಶಾರ್ಟ್ ಲೂಪ್‌ನಲ್ಲಿ ನಿರಂತರವಾಗಿ ಟಾಪ್‌ ಸ್ಪೀಡ್‌ನಲ್ಲಿ ಡ್ರೈವ್‌ ಮಾಡುತ್ತಾ 8 ರಿಂದ 10 ರೌಂಡ್‌ಗಳನ್ನು ಮಾಡಿದರೂ, ಬ್ಯಾಟರಿ ಅಷ್ಟೇನು ಹೆಚ್ಚಾಗಿ ವ್ಯಯಿಸದ ಕಾರಣ ಬ್ಯಾಟರಿಯ ಮೇಲೆ ಗೌರವ ಹೆಚ್ಚಾಯಿತು. ಈ ಸಮಯದಲ್ಲಿ ಬ್ಯಾಟರಿ ಸೂಚಕವು 90 ಪ್ರತಿಶತದಿಂದ ಕೇವಲ 60 ಪ್ರತಿಶತಕ್ಕೆ ಕಡಿಮೆಯಾಯಿತು.

ರೇಂಜ್‌ನ ಕುರಿತು ಹೇಳುವುದಾದರೆ, EV6 ಫುಲ್‌ ಚಾರ್ಜ್‌ ಮಾಡಿದಾಗ 500km ಗಿಂತ ಹೆಚ್ಚು ದೂರವನ್ನು ತಲುಪಬಲ್ಲದು ಎಂದು ಹೇಳಿಕೊಳ್ಳುತ್ತದೆ. ಆದರೆ ವಾಸ್ತವದಲ್ಲಿ ಫುಲ್‌ ಚಾರ್ಜ್‌ ಮಾಡಿದಾಗ ಕನಿಷ್ಠ 400km ದೂರವನ್ನು ತಲುಪುತ್ತದೆ.  ಇದು ಖಂಡಿತವಾಗಿಯೂ ನಿಮ್ಮ ಎಲ್ಲಾ ರೇಂಜ್‌ ನ ಆತಂಕದ ಕುರಿತ ಸಮಸ್ಯೆಗಳನ್ನು ಕಡಿಮೆ ಮಾಡುತ್ತದೆ. ಅಲ್ಲದೆ, 350kW ಚಾರ್ಜರ್‌ನಲ್ಲಿ 10-80 ಶೇಕಡಾ ಚಾರ್ಜ್ ಅನ್ನು ಕೇವಲ 18 ನಿಮಿಷಗಳಲ್ಲಿ ಮಾಡಬಹುದು.

ಆದರೆ ಇಲ್ಲಿರುವ ಒಂದೇ ಸಮಸ್ಯೆಯೆಂದರೆ ಭಾರತದಲ್ಲಿ ಈ ಸೂಪರ್‌ಫಾಸ್ಟ್ ಚಾರ್ಜರ್‌ಗಳಿಲ್ಲ. ನೀವು 50kW ಚಾರ್ಜರ್ ಅನ್ನು ಹುಡುಕುವಷ್ಟು ಅದೃಷ್ಟವಂತರಾಗಿದ್ದರೆ, ಇದರಲ್ಲಿ 10-80 ಪ್ರತಿಶತ ಚಾರ್ಜ್ ಮಾಡಲು 1 ಗಂಟೆ 13 ನಿಮಿಷಗಳನ್ನು ತೆಗೆದುಕೊಳ್ಳುತ್ತದೆ. ಸಾಮಾನ್ಯ 25kW ಮತ್ತು 15kW ಚಾರ್ಜರ್‌ಗಳು ಸ್ವಲ್ಪ ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ ಮತ್ತು 0 ರಿಂದ 100 ಪ್ರತಿಶತದವರೆಗೆ ಹೋಮ್ ಸಾಕೆಟ್ ಮೂಲಕ ಚಾರ್ಜ್ ಮಾಡಲು 36 ಗಂಟೆಗಳು ಬೇಕಾಗುತ್ತದೆ.

ರೈಡ್ ಅಂಡ್ ಹ್ಯಾಂಡಲಿಂಗ್

 ಇದರಲ್ಲಿರುವ ಆಲ್‌-ವೀಲ್‌-ಡ್ರೈವ್‌ ಸೆಟಪ್, ಕಾರು ಹೆಚ್ಚು ಎಳೆತ ಅಥವಾ ವೇಗವರ್ಧನೆಯ ಅಗತ್ಯವಿದೆ ಎಂದು ನಿರ್ಧರಿಸುವವರೆಗೆ ಇದರ ಹಿಂದಿನ ಚಕ್ರ ಚಾಲನೆಯಲ್ಲಿ ಇರುತ್ತದೆ. ಮೃದುವಾದ ಟ್ರಾಕ್ಷನ್‌ ಕಂಟ್ರೋಲ್‌ಗೆ ಇದನ್ನು ಸೇರಿಸಿ, ಮತ್ತು ನೀವು ತಿರುವುಗಳಲ್ಲಿ ಸ್ವಲ್ಪ ಮೋಜು ಮಾಡಬಹುದು. ತೀವ್ರವಾಗಿ ತಿರುಗಿ ಮತ್ತು ಎಳೆತದ ವೇಗಕ್ಕೆ ಅಡ್ಡಿಪಡಿಸದೆಯೇ ಹಿಂಬದಿಯನ್ನು ಸ್ವಲ್ಪ ಜಾರುವ ಮೂಲಕ EV6 ನಿಮ್ಮನ್ನು ಸ್ವಾಗತಿಸುತ್ತದೆ.

ಸ್ಟೀರಿಂಗ್ ಉತ್ತಮ ತೂಕವನ್ನು ಹೊಂದಿದೆ ಮತ್ತು ಇದು ನಿಮ್ಮಲ್ಲಿ ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ. ಆದಾಗ್ಯೂ, ಕಾರಿನ ದೊಡ್ಡದಾದ ಗಾತ್ರವು ಅನಪೇಕ್ಷಿತ ತೂಕ ವರ್ಗಾವಣೆಗೆ ಕಾರಣವಾಗುತ್ತದೆ, ಇದು ನಿಮ್ಮನ್ನು ಸ್ವಲ್ಪ ನಿಧಾನವಾಗಿ ಕಾರ್ನರ್‌ನಲ್ಲಿ ಎಳೆಯುವಂತೆ ಮಾಡುತ್ತದೆ. ಆದರೆ ಇದು ಖಂಡಿತವಾಗಿಯೂ ಎತ್ತರದ ಪ್ರದೇಶಗಳಿಗೆ ಅಥವಾ ಹಿಲ್‌ ಸ್ಟೇಷನ್‌ಗಳಿಗೆ ಡ್ರೈವ್‌ ಮಾಡಲು ಮೋಜಿನ ಕಾರ್ ಆಗಿರುತ್ತದೆ.

ನಾವು ಇದನ್ನು F1 ರೇಸ್ ಟ್ರ್ಯಾಕ್‌ನಲ್ಲಿ ಡ್ರೈವ್‌ ಮಾಡಿರುವುದರಿಂದ ಇದರ ರೈಡಿಂಗ್‌ ಗುಣಮಟ್ಟವನ್ನು ನಿರ್ಧರಿಸಲಾಗುವುದಿಲ್ಲ. ಆದ್ದರಿಂದ ನಮ್ಮ ಸಾರ್ವಜನಿಕ ರಸ್ತೆಗಳಲ್ಲಿ EV6 ಅನ್ನು ಓಡಿಸುವವರೆಗೆ ನಾವು ನಮ್ಮ ಕಾಮೆಂಟ್‌ಗಳನ್ನು ಕಾಯ್ದಿರಿಸುತ್ತೇವೆ. ನಾವು ನಿಮಗೆ ಹೇಳುವುದೇನೆಂದರೆ, ಕಾರು ಹೆಚ್ಚಿನ ವೇಗದಲ್ಲಿ ಸರಿಯಾಗಿ ಸ್ಥಿರವಾಗಿರುತ್ತದೆ ಮತ್ತು ಟ್ರ್ಯಾಕ್‌ನಲ್ಲಿನ ಕರ್ಬ್‌ಗಳ ಮೇಲೆ ಹೋಗುತ್ತಿದೆ, ಸವಾರಿ ಎಂದಿಗೂ ಅಸ್ಥಿರ ಅಥವಾ ಒಳನುಗ್ಗುವಂತೆ ನಿಮಗೆ ಅನಿಸುವುದಿಲ್ಲ.

ರೂಪಾಂತರಗಳು

EV6 ಎರಡು ಪವರ್‌ಟ್ರೇನ್ ಆಯ್ಕೆಗಳೊಂದಿಗೆ GT ಲೈನ್ ಟ್ರಿಮ್‌ನಲ್ಲಿ ಮಾತ್ರ ಲಭ್ಯವಿರುತ್ತದೆ. ಸಿಂಗಲ್ ರಿಯರ್ ಮೋಟಾರ್, ಹಿಂಬದಿ-ಚಕ್ರ ಚಾಲನೆಯ ಆವೃತ್ತಿಯು 229PS ಮತ್ತು 350Nm ಟಾರ್ಕ್ ಅನ್ನು  ಉತ್ಪಾದಿಸುತ್ತದೆ ಮತ್ತು 100kmph ಅನ್ನು ಪಡೆಯಲು 7.3s ತೆಗೆದುಕೊಳ್ಳುತ್ತದೆ. ನಾವು ಚಾಲನೆ ಮಾಡಿದ 325PS ಡ್ಯುಯಲ್ ಮೋಟಾರ್, 605Nm ಟಾರ್ಕ್ ಹೊಂದಿರುವ ಆಲ್-ವೀಲ್ ಡ್ರೈವ್ ಕಾರ್ ಮತ್ತು ಇದು ಕೇವಲ 5.2 ಸೆಕೆಂಡುಗಳಲ್ಲಿ 100kmph ಗೆ ತಲುಪುತ್ತದೆ.

ವರ್ಡಿಕ್ಟ್

ಬೆಲೆಯು ಸುಮಾರು 70 ಲಕ್ಷ ರೂಪಾಯಿ ಗಳಾಗಿರಬಹುದೆಂದು ನಿರೀಕ್ಷಿಸಲಾಗಿದೆ, ಈ ಮೂಲಕ Kia EV6 ದುಬಾರಿ ಖರೀದಿಯಾಗಲಿದೆ. ದುಬಾರಿಯಾಗಿರುವುದರಿಂದ ಇದು ನಿಸ್ಸಂಶಯವಾಗಿ ಅನೇಕ ಭಾರತೀಯರಿಗೆ ತಲುಪುವುದಿಲ್ಲ ಮತ್ತು ಇದಕ್ಕೆ ಈ ವಿಭಾಗದಲ್ಲಿ ವೋಲ್ವೋ XC40 ರೀಚಾರ್ಜ್‌ನಂತಹ ಐಷಾರಾಮಿ ಕಾರು ಸ್ಪರ್ಧೆ ನೀಡುತ್ತದೆ.

EV6 ನ ಬಗ್ಗೆ ಕಾರು ಪ್ರೀಯರಿಗೆ ಇರುವ ಉತ್ಸಾಹವೇ ಇದರ ಪ್ಲಸ್‌ ಪಾಯಿಂಟ್‌. ಅದರ ನೋಟ, ಲೈಟಿಂಗ್‌ಗಳು, ತಂತ್ರಜ್ಞಾನ, ವೈಶಿಷ್ಟ್ಯಗಳು ಅಥವಾ ಚಾಲನಾ ಅನುಭವವೇ ಆಗಿರಲಿ, ಈ  EV ನಿಸ್ಸಂಶಯವಾಗಿ ಅತ್ಯಾಕರ್ಷಕ ಕಾರು ಆಗಿದೆ. ಜೊತೆಗೆ, ಕೇವಲ 100 ಕಾರುಗಳನ್ನು ಭಾರತಕ್ಕೆ ಆಮದು ಮಾಡಿಕೊಳ್ಳುವುದರೊಂದಿಗೆ, ವಿಶೇಷತೆಯನ್ನು ಪ್ಯಾಕೇಜ್‌ನಲ್ಲಿ ಜೋಡಿಸಲಾಗಿದೆ. ಮತ್ತು ಈ ಎಲ್ಲಾ ಅಂಶವನ್ನು ಗಮನಿಸುವಾಗ ಇದಕ್ಕೆ ಭಾರತದಲ್ಲಿ ಸ್ಪರ್ಧೆಯನ್ನು ನೀಡಲು ಸಾಧ್ಯವಾಗದೇ ಇರಬಹುದು.

ಕಿಯಾ ಇವಿ6

ನಾವು ಇಷ್ಟಪಡುವ ವಿಷಯಗಳು

  • ಓಡಿಸಲು ಮೋಜು
  • ಅತ್ಯುತ್ತಮ ಧ್ವನಿ ನಿರೋಧನ
  • ತಂತ್ರಜ್ಞಾನದಿಂದ ತುಂಬಿದೆ
  • AWD ಅತ್ಯಾಕರ್ಷಕ ವೇಗವರ್ಧಕವನ್ನು ನೀಡುತ್ತದೆ
  • 500+ಕಿಮೀ ವ್ಯಾಪ್ತಿ

ನಾವು ಇಷ್ಟಪಡದ ವಿಷಯಗಳು

  • ಇದು ಸಂಪೂರ್ಣ ಆಮದು ಆಗಿರುವುದರಿಂದ ದುಬಾರಿಯಾಗಿದೆ
  • ಹಿಂದಿನ ಸೀಟಿನ ಸೌಕರ್ಯದಲ್ಲಿ ರಾಜಿ ಮಾಡಿಕೊಂಡಿದ್ದಾರೆ

ಒಂದೇ ರೀತಿಯ ಕಾರುಗಳೊಂದಿಗೆ ಇವಿ6 ಅನ್ನು ಹೋಲಿಕೆ ಮಾಡಿ

Car Name
ಸ೦ಚಾರಣೆಆಟೋಮ್ಯಾಟಿಕ್‌ಆಟೋಮ್ಯಾಟಿಕ್‌ಆಟೋಮ್ಯಾಟಿಕ್‌ಆಟೋಮ್ಯಾಟಿಕ್‌ಆಟೋಮ್ಯಾಟಿಕ್‌ಆಟೋಮ್ಯಾಟಿಕ್‌ಆಟೋಮ್ಯಾಟಿಕ್‌ಆಟೋಮ್ಯಾಟಿಕ್‌ಆಟೋಮ್ಯಾಟಿಕ್‌ಆಟೋಮ್ಯಾಟಿಕ್‌
Rating
108 ವಿರ್ಮಶೆಗಳು
78 ವಿರ್ಮಶೆಗಳು
3 ವಿರ್ಮಶೆಗಳು
7 ವಿರ್ಮಶೆಗಳು
81 ವಿರ್ಮಶೆಗಳು
80 ವಿರ್ಮಶೆಗಳು
78 ವಿರ್ಮಶೆಗಳು
106 ವಿರ್ಮಶೆಗಳು
49 ವಿರ್ಮಶೆಗಳು
22 ವಿರ್ಮಶೆಗಳು
ಇಂಧನಎಲೆಕ್ಟ್ರಿಕ್ಎಲೆಕ್ಟ್ರಿಕ್ಎಲೆಕ್ಟ್ರಿಕ್ಎಲೆಕ್ಟ್ರಿಕ್ಪೆಟ್ರೋಲ್ಎಲೆಕ್ಟ್ರಿಕ್ಎಲೆಕ್ಟ್ರಿಕ್ಎಲೆಕ್ಟ್ರಿಕ್ಎಲೆಕ್ಟ್ರಿಕ್ಪೆಟ್ರೋಲ್
Charging Time 18Min-DC 350 kW-(10-80%)-27Min (150 kW DC)6.3H-11kW (100%)-28 Min 150 kW6.25 Hours6H 55Min 11 kW AC2H 30 min-AC-11kW (0-80%)-
ಹಳೆಯ ಶೋರೂಮ್ ಬೆಲೆ60.95 - 65.95 ಲಕ್ಷ72.50 - 77.50 ಲಕ್ಷ62.95 ಲಕ್ಷ66.90 ಲಕ್ಷ65.18 - 70.45 ಲಕ್ಷ54.95 - 57.90 ಲಕ್ಷ74.50 ಲಕ್ಷ46.05 ಲಕ್ಷ53.50 ಲಕ್ಷ67.35 - 74.24 ಲಕ್ಷ
ಗಾಳಿಚೀಲಗಳು8878877648
Power225.86 - 320.55 ಬಿಹೆಚ್ ಪಿ335.25 ಬಿಹೆಚ್ ಪಿ402.3 ಬಿಹೆಚ್ ಪಿ308.43 ಬಿಹೆಚ್ ಪಿ245.59 ಬಿಹೆಚ್ ಪಿ237.99 - 408 ಬಿಹೆಚ್ ಪಿ225.29 ಬಿಹೆಚ್ ಪಿ214.56 ಬಿಹೆಚ್ ಪಿ181.03 ಬಿಹೆಚ್ ಪಿ187.74 ಬಿಹೆಚ್ ಪಿ
Battery Capacity77.4 kWh70.2 - 83.9 kWh78 kWh66.4 kWh-69 - 78 kWh66.5 kWh72.6 kWh32.6 kWh-
ರೇಂಜ್708 km483 - 590 km 530 km440 km13.47 ಕೆಎಂಪಿಎಲ್592 km423 km 631 km270 km9.5 ಕೆಎಂಪಿಎಲ್

ಕಿಯಾ ಇವಿ6 ಕಾರು ಸುದ್ದಿ ಮತ್ತು ಅಪ್ಡೇಟ್ಸ್

  • ಇತ್ತೀಚಿನ ಸುದ್ದಿ

ಕಿಯಾ ಇವಿ6 ಬಳಕೆದಾರರ ವಿಮರ್ಶೆಗಳು

4.4/5
ಆಧಾರಿತ108 ಬಳಕೆದಾರರ ವಿಮರ್ಶೆಗಳು
  • ಎಲ್ಲಾ (108)
  • Looks (36)
  • Comfort (42)
  • Mileage (13)
  • Engine (6)
  • Interior (31)
  • Space (6)
  • Price (15)
  • More ...
  • ಇತ್ತೀಚಿನ
  • ಸಹಾಯಕವಾಗಿದೆಯೆ
  • The Best Electric Cars Of 2024

    The car is with a stable balance and it has good mileage and with 73 min fast charging with reaching...ಮತ್ತಷ್ಟು ಓದು

    ಇವರಿಂದ deepak ramimeni
    On: Apr 13, 2024 | 28 Views
  • Best Car

    The kia Ev6 seems to be well -equipped electric suv . With a large 77.4 Kwh battery capacity of offe...ಮತ್ತಷ್ಟು ಓದು

    ಇವರಿಂದ tanmay ray
    On: Apr 12, 2024 | 50 Views
  • for GT line AWD

    Great Car

    The Kia EV6 stands out as the top car of 2024 in the electric segment, boasting extraordinary looks ...ಮತ್ತಷ್ಟು ಓದು

    ಇವರಿಂದ hemanth kumar mellacharavu
    On: Apr 11, 2024 | 73 Views
  • Best Ev If Kia

    As a customer, my journey with the EV 6 has been nothing short of exceptional. From the moment I lai...ಮತ್ತಷ್ಟು ಓದು

    ಇವರಿಂದ end gaming
    On: Mar 17, 2024 | 44 Views
  • Good Car

    The design of the car is very different, hence the car itself looks cool and the most important thin...ಮತ್ತಷ್ಟು ಓದು

    ಇವರಿಂದ mohd sufiyan
    On: Jan 25, 2024 | 313 Views
  • ಎಲ್ಲಾ ಇವಿ6 ವಿರ್ಮಶೆಗಳು ವೀಕ್ಷಿಸಿ

ಕಿಯಾ ಇವಿ6 Range

motor ಮತ್ತು ಟ್ರಾನ್ಸ್ಮಿಷನ್ಎಆರ್‌ಎಐ ರೇಂಜ್
ಎಲೆಕ್ಟ್ರಿಕ್ - ಆಟೋಮ್ಯಾಟಿಕ್‌708 km

ಕಿಯಾ ಇವಿ6 ವೀಡಿಯೊಗಳು

  • Kia EV6 Launched in India | Prices, Rivals, Styling, Features, Range, And More | #in2Mins
    2:42
    Kia EV6 Launched in India | Prices, Rivals, Styling, Features, Range, And More | #in2Mins
    10 ತಿಂಗಳುಗಳು ago | 5.1K Views
  • Kia EV6 Review: इसको Exciting क्या बनाता है? | Electric Car Performance, Features, Expected Price
    12:04
    Kia EV6 Review: इसको Exciting क्या बनाता है? | Electric Car Performance, Features, Expected Price
    10 ತಿಂಗಳುಗಳು ago | 164 Views
  • Kia EV6 GT-Line | A Whole Day Of Driving - Pune - Mumbai - Pune! | Sponsored Feature
    5:52
    Kia EV6 GT-Line | A Whole Day Of Driving - Pune - Mumbai - Pune! | Sponsored Feature
    8 ತಿಂಗಳುಗಳು ago | 10.8K Views

ಕಿಯಾ ಇವಿ6 ಬಣ್ಣಗಳು

  • ಅರೋರಾ ಬ್ಲಾಕ್ ಪರ್ಲ್
    ಅರೋರಾ ಬ್ಲಾಕ್ ಪರ್ಲ್
  • moonscape
    moonscape
  • runway ಕೆಂಪು
    runway ಕೆಂಪು
  • ಸ್ನೋ ವೈಟ್ ಪರ್ಲ್
    ಸ್ನೋ ವೈಟ್ ಪರ್ಲ್
  • yatch ನೀಲಿ
    yatch ನೀಲಿ

ಕಿಯಾ ಇವಿ6 ಚಿತ್ರಗಳು

  • Kia EV6 Front Left Side Image
  • Kia EV6 Side View (Left)  Image
  • Kia EV6 Front View Image
  • Kia EV6 Top View Image
  • Kia EV6 Grille Image
  • Kia EV6 Headlight Image
  • Kia EV6 Taillight Image
  • Kia EV6 Side Mirror (Body) Image
space Image

ಕಿಯಾ ಇವಿ6 Road Test

ಪರಿಗಣಿಸಲು ಹೆಚ್ಚಿನ ಕಾರು ಆಯ್ಕೆಗಳು
Ask QuestionAre you confused?

Ask anything & get answer ರಲ್ಲಿ {0}

ಪ್ರಶ್ನೆಗಳು & ಉತ್ತರಗಳು

  • ಇತ್ತೀಚಿನ ಪ್ರಶ್ನೆಗಳು

What are the offers available in Kia EV6?

Devyani asked on 16 Nov 2023

Offers and discounts are provided by the brand or the dealership and may vary de...

ಮತ್ತಷ್ಟು ಓದು
By CarDekho Experts on 16 Nov 2023

What is the range of the Kia EV6?

Abhi asked on 23 Oct 2023

The range of the Kia EV6 is 708 km.

By CarDekho Experts on 23 Oct 2023

What is the wheel base of Kia EV6?

Abhi asked on 12 Oct 2023

The wheel base of Kia EV6 is 2900 mm.

By CarDekho Experts on 12 Oct 2023

What are the safety features of the Kia EV6?

Prakash asked on 26 Sep 2023

On the safety front, it gets eight airbags, electronic stability control (ESC) a...

ಮತ್ತಷ್ಟು ಓದು
By CarDekho Experts on 26 Sep 2023

What is the range of the Kia EV6?

Abhi asked on 15 Sep 2023

Kia’s electric crossover locks horns with the Hyundai Ioniq 5, Skoda Enyaq iV, B...

ಮತ್ತಷ್ಟು ಓದು
By CarDekho Experts on 15 Sep 2023
space Image

ಭಾರತ ರಲ್ಲಿ ಇವಿ6 ಬೆಲೆ

ನಗರರಸ್ತೆ ಬೆಲೆ
ಬೆಂಗಳೂರುRs. 63.98 - 69.22 ಲಕ್ಷ
ಮುಂಬೈRs. 64.09 - 69.33 ಲಕ್ಷ
ತಳ್ಳುRs. 64.09 - 69.33 ಲಕ್ಷ
ಹೈದರಾಬಾದ್Rs. 64.09 - 69.33 ಲಕ್ಷ
ಚೆನ್ನೈRs. 64.09 - 69.33 ಲಕ್ಷ
ಅಹ್ಮದಾಬಾದ್Rs. 64.09 - 69.33 ಲಕ್ಷ
ಲಕ್ನೋRs. 64.09 - 69.33 ಲಕ್ಷ
ಜೈಪುರRs. 64.09 - 69.33 ಲಕ್ಷ
ಪಾಟ್ನಾRs. 64.09 - 69.33 ಲಕ್ಷ
ಚಂಡೀಗಡ್Rs. 64.09 - 69.33 ಲಕ್ಷ
ನಿಮ್ಮ ನಗರವನ್ನು ಆರಿಸಿ
space Image

ಟ್ರೆಂಡಿಂಗ್ ಕಿಯಾ ಕಾರುಗಳು

  • ಪಾಪ್ಯುಲರ್
  • ಉಪಕಮಿಂಗ್
  • ಕಿಯಾ ಕ್ರೀಡಾ
    ಕಿಯಾ ಕ್ರೀಡಾ
    Rs.25 ಲಕ್ಷಅಂದಾಜು ದಾರ
    ನಿರೀಕ್ಷಿತ ಲಾಂಚ್‌: ಜುಲೈ 20, 2024
  • ಕಿಯಾ ಇವಿ9
    ಕಿಯಾ ಇವಿ9
    Rs.80 ಲಕ್ಷಅಂದಾಜು ದಾರ
    ನಿರೀಕ್ಷಿತ ಲಾಂಚ್‌: ಜೂನ್ 01, 2024

ಪಾಪ್ಯುಲರ್ ಐಷಾರಾಮಿ ಕಾರುಗಳು

  • ಟ್ರೆಂಡಿಂಗ್
  • ಲೇಟೆಸ್ಟ್
  • ಉಪಕಮಿಂಗ್
  • ಜೀಪ್ ರಂಗ್ಲರ್ 2024
    ಜೀಪ್ ರಂಗ್ಲರ್ 2024
    Rs.65 ಲಕ್ಷಅಂದಾಜು ದಾರ
    ನಿರೀಕ್ಷಿತ ಲಾಂಚ್‌: ಏಪ್ರಿಲ್ 22, 2024
  • ಬಿಎಂಡವೋ i5
    ಬಿಎಂಡವೋ i5
    Rs.1 ಸಿಆರ್ಅಂದಾಜು ದಾರ
    ನಿರೀಕ್ಷಿತ ಲಾಂಚ್‌: ಏಪ್ರಿಲ್ 30, 2024
  • ಲೆಕ್ಸಸ್ UX
    ಲೆಕ್ಸಸ್ UX
    Rs.40 ಲಕ್ಷಅಂದಾಜು ದಾರ
    ನಿರೀಕ್ಷಿತ ಲಾಂಚ್‌: ಮೇ 06, 2024
  • ಮರ್ಸಿಡಿಸ್ eqa
    ಮರ್ಸಿಡಿಸ್ eqa
    Rs.60 ಲಕ್ಷಅಂದಾಜು ದಾರ
    ನಿರೀಕ್ಷಿತ ಲಾಂಚ್‌: ಮೇ 06, 2024
  • ಆಡಿ ಎ4 2024
    ಆಡಿ ಎ4 2024
    Rs.35 ಲಕ್ಷಅಂದಾಜು ದಾರ
    ನಿರೀಕ್ಷಿತ ಲಾಂಚ್‌: ಮೇ 15, 2024

ಪಾಪ್ಯುಲರ್ ಎಲೆಕ್ಟ್ರಿಕ್ ಕಾರುಗಳು

  • ಟ್ರೆಂಡಿಂಗ್
  • ಉಪಕಮಿಂಗ್
  • ಜೀಪ್ ರಂಗ್ಲರ್ 2024
    ಜೀಪ್ ರಂಗ್ಲರ್ 2024
    Rs.65 ಲಕ್ಷಅಂದಾಜು ದಾರ
    ನಿರೀಕ್ಷಿತ ಲಾಂಚ್‌: ಏಪ್ರಿಲ್ 22, 2024
  • ಬಿಎಂಡವೋ i5
    ಬಿಎಂಡವೋ i5
    Rs.1 ಸಿಆರ್ಅಂದಾಜು ದಾರ
    ನಿರೀಕ್ಷಿತ ಲಾಂಚ್‌: ಏಪ್ರಿಲ್ 30, 2024
  • ಲೆಕ್ಸಸ್ UX
    ಲೆಕ್ಸಸ್ UX
    Rs.40 ಲಕ್ಷಅಂದಾಜು ದಾರ
    ನಿರೀಕ್ಷಿತ ಲಾಂಚ್‌: ಮೇ 06, 2024
  • ಮರ್ಸಿಡಿಸ್ eqa
    ಮರ್ಸಿಡಿಸ್ eqa
    Rs.60 ಲಕ್ಷಅಂದಾಜು ದಾರ
    ನಿರೀಕ್ಷಿತ ಲಾಂಚ್‌: ಮೇ 06, 2024
  • ಆಡಿ ಎ4 2024
    ಆಡಿ ಎ4 2024
    Rs.35 ಲಕ್ಷಅಂದಾಜು ದಾರ
    ನಿರೀಕ್ಷಿತ ಲಾಂಚ್‌: ಮೇ 15, 2024
view ಏಪ್ರಿಲ್ offer
view ಏಪ್ರಿಲ್ offer
Found what ನೀವು were looking for?
ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ
×
We need your ನಗರ to customize your experience