• English
  • Login / Register

ಇವಿ ತಯಾರಿಕಾ ಘಟಕ ಸ್ಥಾಪಿಸಲು ಭಾರತದತ್ತ ದೃಷ್ಟಿ ಹರಿಸಿದ ಫಾಕ್ಸ್‌ಕಾನ್

ಆಗಸ್ಟ್‌ 03, 2023 09:33 pm rohit ಮೂಲಕ ಮಾರ್ಪಡಿಸಲಾಗಿದೆ

  • 21 Views
  • ಕಾಮೆಂಟ್‌ ಅನ್ನು ಬರೆಯಿರಿ

ಮೊಬಿಲಿಟಿ ಇನ್ ಹಾರ್ಮನಿ (MIH) ಎಂಬ ಇವಿ-ಪ್ಲಾಟ್‌ಫಾರ್ಮ್-ಅಭಿವೃದ್ಧಿಶೀಲ ವಿಭಾಗವನ್ನು ಫಾಕ್ಸ್‌ಕಾನ್ ಹೊಂದಿದೆ

Foxconn's EV manufacturing in India plans

ಎಲೆಕ್ಟ್ರಿಕ್ ವಾಹನಗಳು (EVಗಳು) ಆಂತರಿಕ ದಹನಕಾರಿ ಎಂಜಿನ್ (ICE) ವಾಹನಗಳೊಂದಿಗೆ ಹೆಚ್ಚು ಸಾಮ್ಯತೆಯನ್ನು ಹೊಂದಿಲ್ಲ ಎಂಬುದು ಆಟೋಮೊಬೈಲ್ ಉದ್ಯಮದ ಹೊರಗಿನ ಬಹಳಷ್ಟು ಬ್ರ್ಯಾಂಡ್‌ಗಳು ಸ್ಪರ್ಧೆಗೆ ಸೇರಲು ಅವಕಾಶ ಮಾಡಿಕೊಟ್ಟಿದೆ. ಅದರಂತೆ ಎಲೆಕ್ಟ್ರಾನಿಕ್ ಬ್ರ್ಯಾಂಡ್‌ಗಳು ಮತ್ತು ಸ್ಮಾರ್ಟ್‌ಫೋನ್ ತಯಾರಕರಾದ ಹುವಾಯಿ, ಒಪ್ಪೊ ಮತ್ತು ಶಿಯೋಮಿ ಸಹ ಇದರಲ್ಲಿ ಪಾಲನ್ನು ಪಡೆಯುವ ಗುರಿಯನ್ನು ಹೊಂದಿವೆ.

 ಒಂದೆರಡು ವರ್ಷಗಳ ಹಿಂದೆ, ಅಮೆರಿಕಾದ ಟೆಕ್ ದೈತ್ಯವಾದ ಹಾಗೂ ಫಾಕ್ಸ್‌ಕಾನ್‌ಗಾಗಿ ಐಫೋನ್ ತಯಾರಿಸುವ ಆ್ಯಪಲ್ ಕಂಪನಿಯು ಇವಿ ಉದ್ಯಮದಲ್ಲಿ ಸ್ಪರ್ಧಿಸಲು ಆಸಕ್ತಿಯನ್ನು ತೋರಿಸಿತ್ತು. ಸ್ಮಾರ್ಟ್‌ಫೋನ್ ತಯಾರಕರು ಈಗ ಭಾರತದಲ್ಲಿ ತನ್ನ ಇವಿಗಳನ್ನು ಉತ್ಪಾದಿಸುವ ಸಾಧ್ಯತೆಗಳನ್ನು ಅನ್ವೇಷಿಸುತ್ತಿದೆ.

 ಚರ್ಚೆಯಾಗುತ್ತಿರುವ ವಿಷಯವೇನು?

ಫಾಕ್ಸ್‌ಕಾನ್ 2021 ರಲ್ಲಿ, ಇವಿಗಳಿಗಾಗಿ ಪ್ಲ್ಯಾಟ್‌ಫಾರ್ಮ್‌ಗಳನ್ನು ಅಭಿವೃದ್ಧಿಪಡಿಸುವಲ್ಲಿ ಕೆಲಸ ಮಾಡುವ ಮೊಬಿಲಿಟಿ ಇನ್ ಹಾರ್ಮನಿ (MIH) ಕನ್ಸೋರ್ಟಿಯಮ್ ಅನ್ನು ಪ್ರಾರಂಭಿಸಿತು. ಇತ್ತೀಚಿಗೆ ರಾಯಿಟರ್ಸ್‌ನೊಂದಿಗೆ ಮಾತನಾಡುವಾಗ, ಅದರ ಸಿಇಓ ಜ್ಯಾಕ್ ಚೆಂಗ್, "ಸಂಭಾವ್ಯ ಮಾರುಕಟ್ಟೆಯಿರುವಲ್ಲಿ ನೀವು ನಿರ್ಮಿಸುತ್ತೀರಿ...ಅಂದರೆ ಭಾರತ ಅಥವಾ ಆಗ್ನೇಯ ಏಷ್ಯಾದಲ್ಲಿ, ಇದೀಗ ನಿಮಗೆ ದೊಡ್ಡ ಪ್ರಮಾಣದ ಅವಕಾಶವಿದೆ" ಎಂದು ಹೇಳಿದರು. ಅವರು ಭಾರತವನ್ನು ಇವಿ ವಲಯದಲ್ಲಿ "ಮುಂದಿನ ತಲೆಮಾರಿನ ಉದಯೋನ್ಮುಖ ಶಕ್ತಿ" ಎಂದು ಕರೆದರು.

ಅವರು ಮುಂದುವರಿದು, "ಇದು ಫಾಕ್ಸ್‌ಕಾನ್ (ಭಾರತದಲ್ಲಿ) ಸ್ಥಾವರವಾದರೆ ಅದ್ಭುತವಾಗಿರುತ್ತದೆ ಹಾಗೂ ಈ ಸ್ಥಾವರವನ್ನು ಫಾಕ್ಸ್‌ಕಾನ್‌ನ ಮಾತೃ ಕಂಪನಿಯಾಗಿ ಮಾಡುತ್ತೇವೆ. ಒಂದೊಮ್ಮೆ ಇದು ಭಾರತದ ಸ್ಥಳೀಯ ಸ್ಥಾವರವಾಗಿದ್ದರೆ ಮತ್ತು ಇದು ಹೆಚ್ಚು ಸ್ಪರ್ಧಾತ್ಮಕವಾಗಿದ್ದರೆ, ಅದನ್ನು ಖಂಡಿತವಾಗಿಯೂ ಭಾರತದ ಸ್ಥಾವರಕ್ಕೆ ನೀಡಲಾಗುತ್ತದೆ"  ಎಂದು ಹೇಳಿದರು. MIH ನ ದೀರ್ಘಾವಧಿಯ ಬೆಳವಣಿಗೆಗೆ ಭಾರತವು ನಿರ್ಣಾಯಕವಾಗಿದೆ ಎಂದು ಅವರು ಭಾವಿಸುತ್ತಾರೆ.

ಫಾಕ್ಸ್‌ಕಾನ್, ಥೈಲ್ಯಾಂಡ್‌ನಂತಹ ಇತರ ಆಗ್ನೇಯ ದೇಶಗಳಲ್ಲಿ ಇವಿ ಯೋಜನೆಯನ್ನು ಹೊಂದಿದ್ದು, ಈಗಾಗಲೇ ಸ್ಥಳೀಯ ಕಂಪನಿಯೊಂದಿಗೆ ಜಂಟಿ ಉದ್ಯಮ ಒಪ್ಪಂದವನ್ನು ಹೊಂದಿದೆ. 

ವಿವರವಾದ  ಇವಿ ಯೋಜನೆಗಳು

MIH Project X

 2022 ರ ನವೆಂಬರ್‌ನಲ್ಲಿ ಮೊದಲ ಬಾರಿಗೆ ಪ್ರಾಜೆಕ್ಟ್ ಎಕ್ಸ್ ಎಂದು ಕರೆಯಲ್ಪಡುವ ಹೊಸ 3-ಸೀಟ್ ಇವಿ ಅನ್ನು ನಿರ್ಮಿಸಲು MIH ತನ್ನ ಮಾತೃ ಕಂಪನಿ ಅಥವಾ ಇನ್ನೊಂದು ಕಂಪನಿಯೊಂದಿಗೆ ಕೆಲಸ ಮಾಡಲು ಸಿದ್ಧವಾಗಿದೆ. ಸಾಕಷ್ಟು ತಂತ್ರಜ್ಞಾನಗಳನ್ನು ಹೊಂದಿದ್ದರೂ ಸಹ, ಇದು $20,000 (ಅಂದರೆ ಸರಿಸುಮಾರು ರೂ. 16.5 ಲಕ್ಷ) ಗಿಂತ ಕಡಿಮೆ ಬೆಲೆಯನ್ನು ಹೊಂದಿದೆ. ಇದರ ಮೂಲ ಮಾದರಿಯನ್ನು 2023 ರ ಅಕ್ಟೋಬರ್‌ನಲ್ಲಿ ಜಪಾನ್‌ನ ಆಟೋ ಟ್ರೇಡ್ ಶೋದಲ್ಲಿ ಅನಾವರಣಗೊಳಿಸಲು ಮತ್ತು 2025ರ ವೇಳಗೆ ಉತ್ಪಾದನೆಯನ್ನು ಪ್ರಾರಂಭಿಸಲು ನಿರ್ಧರಿಸಲಾಗಿದೆ. MIH, ಕ್ರಮವಾಗಿ, 2024 ಮತ್ತು 2025 ರ ವೇಳೆಗೆ  6-ಸೀಟ್‌ಗಳು ಮತ್ತು 9-ಸೀಟ್‌ಗಳ ಎಲೆಕ್ಟ್ರಿಕ್ ವಾಹನಗಳನ್ನು ಪ್ರಾರಂಭಿಸಲು ಯೋಜನೆಯನ್ನು ಹಾಕಿಕೊಂಡಿದೆ.

ಇದನ್ನೂ ಓದಿ: BYD ಯ $1 ಬಿಲಿಯನ್ ಹೂಡಿಕೆ ಪ್ರಸ್ತಾಪ ತಿರಸ್ಕಾರ: ವಿವರಣೆಗಾಗಿ ಇದನ್ನು ಓದಿ

 ಫಾಕ್ಸ್‌ಕಾನ್ ಇವಿಗಳ ವಿವರಣೆ

Foxtron Model B, Model C and Model V

ಫಾಕ್ಸ್‌ಕಾನ್ ಗ್ರೂಪ್ ಮತ್ತು ಯೂಲೋನ್ ಗ್ರೂಪ್, ಫಾಕ್ಸ್‌ಕಾನ್‌ನ ವಾಹನ ವಿಭಾಗದ ಫ್ರಾಕ್ಸ್‌ಟ್ರಾನ್ ಬ್ರ್ಯಾಂಡ್ ಅನ್ನು ರೂಪಿಸಲು ಸಿದ್ಧವಾದವು. 2022 ರ ಅಕ್ಟೋಬರ್‌ನಲ್ಲಿ ಫಾಕ್ಸ್‌ಟ್ರಾನ್ ಮಾಡೆಲ್ ಬಿ (ಹ್ಯಾಚ್‌ಬ್ಯಾಕ್), ಮಾಡೆಲ್ ಸಿ (ಕ್ರಾಸ್ಓವರ್ ಎಸ್‌ಯುವಿ) ಮತ್ತು ಮಾಡೆಲ್ ವಿ (ಪಿಕಪ್) ಎಂಬ ಮೂರು ಹೊಸ ಎಲೆಕ್ಟ್ರಿಕ್ ಕಾರುಗಳನ್ನು ಅನಾವರಣಗೊಳಿಸಿತು. ಅವುಗಳು ಕ್ಲೈಮ್ ಮಾಡಿದ ಅಂಕಿಅಂಶಗಳು ಕ್ರಮವಾಗಿ 450km ಮತ್ತು 700km, ಆಗಿವೆ. ಫಾಕ್ಸ್‌ಟ್ರಾನ್ ಈ ಮೂರು ಇವಿಗಳ ಪವರ್‌ಟ್ರೇನ್ ಕುರಿತು ಯಾವುದೇ ಮಾಹಿತಿಯನ್ನು ಬಹಿರಂಗಪಡಿಸಿಲ್ಲ. ಸ್ಮಾರ್ಟ್‌ಫೋನ್ ತಯಾರಕರು ಈ ಪ್ಲಾಟ್‌ಫಾರ್ಮ್ ತಯಾರಿಕೆಯಲ್ಲಿ ಇವಿ-ಉತ್ಪಾದನೆಗೆ ಅನ್ವಯಿಸುವ ಮೂಲಕ ತನ್ನ ಪರಿಣತಿಯನ್ನು ಬಳಸಿಕೊಳ್ಳುವ ಗುರಿಯನ್ನು ಹೊಂದಿದ್ದಾರೆ. ತನ್ಮೂಲಕ, ಅನೇಕ ಮಾದರಿಗಳು ಒಂದೇ ರೀತಿಯಾದ ಮೂಲ ಪ್ಲಾಟ್‌ಫಾರ್ಮ್‌ಗಳು ಮತ್ತು ಘಟಕಗಳನ್ನು ತಮ್ಮದೇ ಆದ ವಿಶಿಷ್ಟ ಶೈಲಿಯೊಂದಿಗೆ ಸಾಮೂಹಿಕ ಉತ್ಪಾದನೆಯಲ್ಲಿ ಸುಲಭವಾಗಿ ಬಳಸಿಕೊಳ್ಳಬಹುದು.

ಇದನ್ನೂ ಓದಿ: 2023 ರ ಕೊನೆಯ ತ್ರೈಮಾಸಿಕದಲ್ಲಿ ಭಾರತದಲ್ಲಿ ಏಷಿಯನ್ ಎಕ್ಸ್‌ಟ್ರೀಮ್ ವಿಗ್ಯಾನ್ ಆವೃತ್ತಿಯನ್ನು ಪ್ರಾರಂಭಿಸಲಿರುವ ಅಮೇರಿಕನ್ ಇವಿ ಮೇಕರ್ ಫಿಸ್ಕರ್

 

ಅವರಿಂದ ಪ್ರಕಟಿಸಲಾಗಿದೆ
was this article helpful ?

Write your ಕಾಮೆಂಟ್

Read Full News

ಕಾರು ಸುದ್ದಿ

  • ಟ್ರೆಂಡಿಂಗ್ ಸುದ್ದಿ
  • ಇತ್ತಿಚ್ಚಿನ ಸುದ್ದಿ

trending ಎಲೆಕ್ಟ್ರಿಕ್ ಕಾರುಗಳು

  • ಪಾಪ್ಯುಲರ್
  • ಉಪಕಮಿಂಗ್
×
We need your ನಗರ to customize your experience