• English
  • Login / Register

ಬಿಎಸ್6 ಫೇಸ್ 2 ಮಾನದಂಡಗಳಿಗೆ ಅನುಗುಣವಾಗಿ ರೆಡಿಯಾದ ಇಸುಝುವಿನ ಪಿಕಪ್‌ಗಳು ಮತ್ತು ಎಸ್‌ಯುವಿ

isuzu v-cross ಗಾಗಿ rohit ಮೂಲಕ ಏಪ್ರಿಲ್ 19, 2023 04:38 pm ರಂದು ಪ್ರಕಟಿಸಲಾಗಿದೆ

  • 14 Views
  • ಕಾಮೆಂಟ್‌ ಅನ್ನು ಬರೆಯಿರಿ

ಎಲ್ಲಾ ಮೂರು ಕಾರುಗಳು ಪ್ರಸ್ತುತ ನೂತನ "ವೇಲೆನ್ಸಿಯಾ ಆರೆಂಜ್" ಪೇಂಟ್ ಶೇಡ್‌ನಲ್ಲಿ ಲಭ್ಯವಿದೆ.

Isuzu V-Cross, Hi-Lander and mu-X

  • ಮೂರು ಕಾರುಗಳ ಸಾಮಾನ್ಯ ವೈಶಿಷ್ಟ್ಯದ ಅಪ್‌ಗ್ರೇಡ್‌ಗಳು ಐಡಲ್-ಎಂಜಿನ್ ಸ್ಟಾರ್ಟ್/ಸ್ಟಾಪ್ ಮತ್ತು ಹೊಸ ರೀತಿಯ ಟೈರ್‌ಗಳನ್ನು ಒಳಗೊಂಡಿವೆ.
  •  ವಿ-ಕ್ರಸ್ 4x2 ಎಟಿ ಬೋರ್ಡ್‌ನಲ್ಲಿರುವ ಹೊಸ ವೈಶಿಷ್ಟ್ಯಗಳಲ್ಲಿ ಹಿಲ್ ಡಿಸೆಂಟ್ ಕಂಟ್ರೋಲ್, ಕ್ರೂಸ್ ಕಂಟ್ರೋಲ್ ಮತ್ತು ಇಎಸ್‌ಸಿ ಸೇರಿವೆ.
  •  ಎಂಯು-ಎಕ್ಸ್‌ನ ಏಕೈಕ ಅಪ್‌ಡೇಟ್ ಮರುವಿನ್ಯಾಸಗೊಳಿಸಲಾದ ಗ್ರಿಲ್ ಆಗಿದೆ.
  •  ಇಸುಜು ಈಗ ಹೈ-ಲ್ಯಾಂಡರ್ ಅನ್ನು ಆಟೋ ಎಸಿ ಮತ್ತು ರಿಯರ್ ಡಿಫಾಗರ್‌ ಅನ್ನು ಕೂಡ ಹೊಂದಿದೆ.
  •  ಎಲ್ಲಾ ಮೂರು ಕಾರುಗಳು 1.9-ಲೀಟರ್ ಡೀಸೆಲ್ ಎಂಜಿನ್ ಅನ್ನು ಪಡೆಯುತ್ತವೆ; 4x4 ಮತ್ತು ಎಟಿಗಳು ವಿ-ಕ್ರಾಸ್ ಮತ್ತು ಎಂಯು-ಎಕ್ಸ್‌ನಲ್ಲಿ ಮಾತ್ರ ಲಭ್ಯವಿವೆ.

ಇಸುಜು ತನ್ನ ಎರಡು ಪಿಕಪ್‌ಗಳಾದ ವಿ-ಕ್ರಾಸ್ ಮತ್ತು ಹೈಲ್ಯಾಂಡರ್ ಮತ್ತು ಎಂಯು-ಎಕ್ಸ್ ಅನ್ನು ಭಾರತದಲ್ಲಿ ಬಿಎಸ್6 ಫೇಸ್ 2 ಮಾನದಂಡಗಳ ಪ್ರಕಾರ ಅಪ್‌ಡೇಟ್ ಮಾಡಿದೆ. ಎಲ್ಲಾ ಮೂರು ಕಾರುಗಳು ಕಾಸ್ಮೆಟಿಕ್ ಟ್ವೀಕ್‌ಗಳು ಮತ್ತು ಕೆಲವು ವೈಶಿಷ್ಟ್ಯಗಳ ಅಪ್‌ಡೇಟ್‌ಗಳನ್ನು ಒಳಗೊಂಡಿವೆ. ಅವುಗಳ ಬಗ್ಗೆ ತಿಳಿದುಕೊಳ್ಳೋಣ:

 

ಸಾಮಾನ್ಯ ಅಪ್‌ಡೇಟ್‌ಗಳು

Isuzu V-Cross Valencia Orange shade

 ಕಾರು ತಯಾರಕರು ಎಲ್ಲಾ ಮೂರು ಮಾಡೆಲ್‌ಗಳಲ್ಲಿ ತಾಜಾ "ವೇಲೆನ್ಸಿಯಾ ಆರೆಂಜ್" ಬಣ್ಣದ ಶೇಡ್ ಆಯ್ಕೆಯನ್ನು ಒದಗಿಸಿದ್ದಾರೆ. ಹೊಸ ಬಣ್ಣದ ಆಯ್ಕೆಯ ಹೊರತಾಗಿ, ಎರಡು ಪಿಕಪ್‌ಗಳು ಮತ್ತು ಎಸ್‌ಯುವಿ ಇದೀಗ ಐಡಲ್-ಎಂಜಿನ್ ಸ್ಟಾರ್ಟ್/ಸ್ಟಾಪ್, ಲೋ ಫಿಕ್ಷನ್ ಟೈರ್‌ಗಳು ಮತ್ತು ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್‌ನ (ಎಟಿ) ಇಂಧನ ದಕ್ಷತೆಯ ಸುಧಾರಣೆ ಮತ್ತು ಹೊರಸೂಸುವಿಕೆಯನ್ನು ಇಳಿಕೆಗಾಗಿ ಫ್ಲೂಯಿಡ್ ವಾರ್ಮರ್‌ ಅನ್ನು ಒಳಗೊಂಡಿವೆ.

ಎಲ್ಲಾ 3 ಕಾರುಗಳಿಗೆ ಮಾಡಲಾಗಿರುವ ಬದಲಾವಣೆಗಳು

Isuzu V-Cross cabin

Isuzu V-Cross brown seats

ವಿ-ಕ್ರಾಸ್

ಹೈ-ಲ್ಯಾಂಡರ್

ಎಂಯು-ಎಕ್ಸ್

  • ಕ್ರೂಸ್ ಕಂಟ್ರೋಲ್
  • ಹೊಸದಾಗಿ ವಿನ್ಯಾಸಗೊಳಿಸಲಾದ ಬ್ಲ್ಯಾಕ್ ಅಲಾಯ್ ವ್ಹೀಲ್‌ಗಳು
  • ಗ್ರೇ ಫಿನಿಶ್ ಹೊಂದಿರುವ ಒಆರ್‌ವಿಎಂಗಳು
  • ಫ್ರಂಟ್ ಫಾಗ್ ಲ್ಯಾಂಪ್ ಗಾರ್ನಿಶ್
  • ಟೂ - ಟೋನ್ ಬ್ರೌನ್ ಅಪ್‌ಹೋಲೆಸ್ಟರಿ
  • ಡ್ಯಾಶ್‌ಬೋರ್ಡ್, ಡೋರ್ ಪ್ಯಾಡ್‌ಗಳು ಮತ್ತು ಗೇರ್ ಸೆಲೆಕ್ಟರ್ ಲಿವರ್ ಸುತ್ತಲೂ ಬ್ರೌನ್ ಇನ್ಸರ್ಟ್‌ಗಳು
  • ಟ್ರಾಕ್ಷನ್ ಕಂಟ್ರೋಲ್
  • ಎಲೆಕ್ಟ್ರಾನಿಕ್ ಸ್ಟಬಿಲಿಟಿ ಕಂಟ್ರೋಲ್ (ಇಎಸ್‌ಸಿ)
  • ಹಿಲ್-ಡಿಸೆಂಟ್ ಕಂಟ್ರೋಲ್ 
  • ಹಿಲ್ ಸ್ಟಾರ್ಟ್ ಅಸಿಸ್ಟ್
  • ಆಟೋ ಕ್ಲೈಮೇಟ್ ಕಂಟ್ರೋಲ್
  • ರಿಯರ್ ಡಿಫಾಗರ್
  • ಮರುವಿನ್ಯಾಸಗೊಳಿಸಲಾದ ಗ್ರಿಲ್ 

 ಇಸುಝುವಿನ ವಿ-ಕ್ರಾಸ್ ಝಡ್ 4X2 ಆಟೋಮ್ಯಾಟಿಕ್ ವೇರಿಯಂಟ್‌‌ಗೆ ಗರಿಷ್ಠ ವೈಶಿಷ್ಟ್ಯದ ಅಪ್‌ಡೇಟ್‌ಗಳನ್ನು ಮಾಡಲಾಗಿದೆ, ಆದರೆ ಹೈಲ್ಯಾಂಡರ್ ಮತ್ತು ಎಂಯು-ಎಕ್ಸ್‌ಗೆ ಯಾವುದೇ ಬದಲಾವಣೆಗಳನ್ನು ಮಾಡಲಾಗಿಲ್ಲ.

 ಇದನ್ನೂ ಓದಿ: ಬ್ಲ್ಯಾಕ್ ಎಸ್‌ಯುವಿಗಳ ರೋಸ್ಟರ್ ಅನ್ನು ಒಳಗೊಂಡಿರುವ ಸಲ್ಮಾನ್ ಖಾನ್‌ರ ಹೊಸ ಚಲನಚಿತ್ರ

 

ಪವರ್‌ಟ್ರೇನ್ ವಿವರಗಳು

 ಎಲ್ಲಾ ಮೂರು ಕಾರುಗಳು 1.9-ಲೀಟರ್ ಡೀಸೆಲ್ ಯುನಿಟ್ ಅನ್ನು (163PS/360Nm) ಹೊಂದಿವೆ. ಈ ಮೂರು ಮಾಡೆಲ್‌ಗಳಲ್ಲಿ, ವಿ-ಕ್ರಾಸ್‌ಗೆ ಮಾತ್ರ 6-ಸ್ಪೀಡ್ ಮ್ಯಾನುವಲ್ ಮತ್ತು 6-ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಆಯ್ಕೆಯನ್ನು ನೀಡಲಾಗಿದೆ. ಎಂಯು-ಎಕ್ಸ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಅನ್ನು ಮಾತ್ರ ಪಡೆಯುತ್ತದೆ, ಹಾಗೂ ಹೈಲ್ಯಾಂಡರ್ ಮ್ಯಾನ್ಯುವಲ್ ಟ್ರಾನ್ಸ್‌ಮಿಷನ್ ಅನ್ನು ಮಾತ್ರ ಪಡೆಯುತ್ತದೆ. ಹೈ-ಲ್ಯಾಂಡರ್ 4x2 ಆವೃತ್ತಿಯಲ್ಲಿ ಮಾತ್ರ ಲಭ್ಯವಿದ್ದರೆ ಉಳಿದೆರಡು ಮಾಡೆಲ್‌ಗಳು 4x2 ಮತ್ತು 4x4 ಆವೃತ್ತಿಗಳಲ್ಲಿ ಲಭ್ಯವಿವೆ.

 ಇದನ್ನೂ ಓದಿ: ಮಾರ್ಚ್ 2023 ರಲ್ಲಿ ಹೆಚ್ಚು ಜನಪ್ರಿಯವಾಗಿದ್ದ ಟಾಪ್ 10 ಕಾರು ಬ್ರ್ಯಾಂಡ್‌ಗಳು

 

ಬೆಲೆ ಮತ್ತು ಪ್ರತಿಸ್ಪರ್ಧಿಗಳು

IMG_256

IMG_256

 ಅಪ್‌ಡೇಟ್ ಮಾಡಲಾದ ವಿ-ಕ್ರಾಸ್ ಬೆಲೆ 23.50 ಲಕ್ಷ ರೂ.ಗಳಿಂದ ಪ್ರಾರಂಭವಾದರೆ, ಹೈ-ಲ್ಯಾಂಡರ್ ಬೆಲೆ 19.50 ಲಕ್ಷ ರೂ.ಗಳಿಂದ ಪ್ರಾರಂಭವಾಗುತ್ತದೆ. ಮತ್ತೊಂದೆಡೆ, ಎಂಯು-ಎಕ್ಸ್‌ನ ಆರಂಭಿಕ ಬೆಲೆ 37.90 ಲಕ್ಷ ರೂ.ಗಳಾಗಿವೆ. ಇಸುಝು ಪಿಕಪ್ ಜೋಡಿಯು ಟೊಯೋಟಾ ಹಿಲಕ್ಸ್‌ಗೆ ಕೈಗೆಟುಕುವ ಪರ್ಯಾಯವಾಗಿದೆ, ಆದರೆ ಎಂಯು-ಎಕ್ಸ್‌ ಟೊಯೋಟಾ ಫಾರ್ಚುನರ್ ಮತ್ತು ಎಂಜಿ ಗ್ಲೋಸ್ಟರ್‌ಗೆ ಪ್ರತಿಸ್ಪರ್ಧಿಯಾಗಿದೆ.

ಎಲ್ಲವೂ ಚೆನ್ನೈನ ಎಕ್ಸ್-ಶೋರೂಂ ಬೆಲೆಗಳಾಗಿವೆ

ಇನ್ನಷ್ಟು ಓದಿ: ವಿ-ಕ್ರಾಸ್ ಡೀಸೆಲ್

ಅವರಿಂದ ಪ್ರಕಟಿಸಲಾಗಿದೆ
was this article helpful ?

0 out of 0 found this helpful

Write your Comment on Isuzu v-cross

Read Full News

explore similar ಕಾರುಗಳು

Similar cars to compare & consider

ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ

ಕಾರು ಸುದ್ದಿ

  • ಟ್ರೆಂಡಿಂಗ್ ಸುದ್ದಿ
  • ಇತ್ತಿಚ್ಚಿನ ಸುದ್ದಿ

trending ಪಿಕಪ್ ಟ್ರಕ್ ಕಾರುಗಳು

  • ಲೇಟೆಸ್ಟ್
  • ಉಪಕಮಿಂಗ್
  • ಪಾಪ್ಯುಲರ್
×
We need your ನಗರ to customize your experience