Login or Register ಅತ್ಯುತ್ತಮ CarDekho experience ಗೆ
Login

2025ರಲ್ಲಿ ಭಾರತಕ್ಕೆ ಆಗಮಿಸಲಿರುವ Kia Carens EV, ಎಷ್ಟಿರಬಹುದು ಇದರ ಬೆಲೆ ?

ಕಿಯಾ ಕೆರೆನ್ಸ್ ಇವಿ ಗಾಗಿ rohit ಮೂಲಕ ಏಪ್ರಿಲ್ 15, 2024 07:19 pm ರಂದು ಪ್ರಕಟಿಸಲಾಗಿದೆ

ಇದು ಭಾರತದಲ್ಲಿ ಅತ್ಯಂತ ಕೈಗೆಟುಕುವ ಎಲೆಕ್ಟ್ರಿಕ್ ಎಮ್‌ಪಿವಿ ಆಗಿರಬಹುದು, ಇದು 400 ಕಿಮೀ ರೇಂಜ್‌ ಅನ್ನು ಹೊಂದಿದೆ

  • ಕಿಯಾವು ಭಾರತ-ಕೇಂದ್ರಿತ EV ಅನ್ನು 2025 ರಲ್ಲಿ ಬಿಡುಗಡೆ ಮಾಡುವುದಾಗಿ 2022 ರಲ್ಲಿಯೇ ಘೋಷಿಸಿತ್ತು.
  • ಭಾರತ-ಕೇಂದ್ರಿತ ಇವಿಯು ಎಲೆಕ್ಟ್ರಿಕ್ ಎಮ್‌ಪಿವಿ ಆಗಿರುವ ಕ್ಯಾರೆನ್ಸ್ EV ಎಂದು ದೃಢಪಡಿಸಲಾಗಿದೆ.
  • ಇದು 2027 ರ ವೇಳೆಗೆ ಜಾಗತಿಕವಾಗಿ 15 ಇವಿಗಳನ್ನು ನೀಡುವ ಕಿಯಾದ ಯೋಜನೆಗಳ ಭಾಗವಾಗಿರುತ್ತದೆ.
  • 10.25-ಇಂಚಿನ ಡ್ಯುಯಲ್ ಡಿಸ್‌ಪ್ಲೇಗಳು, ಸನ್‌ರೂಫ್‌ ಮತ್ತು ಎಡಿಎಸ್‌ನಂತಹ ಪ್ರೀಮಿಯಂ ವೈಶಿಷ್ಟ್ಯಗಳನ್ನು ಪಡೆಯಬಹುದೆಂದು ನಿರೀಕ್ಷಿಸಲಾಗಿದೆ.
  • 2025ರಲ್ಲಿ ಭಾರತದಲ್ಲಿ ಬಿಡುಗಡೆಯಾಗಬಹುದೆಂದು ನಿರೀಕ್ಷಿಸಲಾಗಿದೆ, ಮತ್ತು ಇದರ ಎಕ್ಸ್ ಶೋರೂಂ ಬೆಲೆಗಳು 20 ಲಕ್ಷ ರೂ.ನಿಂದ ಪ್ರಾರಂಭವಾಗಬಹುದು.

2024ರ ಕಿಯಾ ಹೂಡಿಕೆದಾರರ ದಿನದ ಸಭೆಯನ್ನು ಅದರ ತಾಯ್ನಾಡಿನಲ್ಲಿ ನಡೆಸಲಾಗಿತ್ತು, ಈ ಸಭೆಯಲ್ಲಿ ವಿಶ್ವಾದ್ಯಂತ ಅದರ ಭವಿಷ್ಯದ ಯೋಜನೆಗಳ ಕುರಿತ ತಾಜಾ ಮಾಹಿತಿಗಳನ್ನು ವಿವರಿಸಿದೆ. ಹೊಸ ಕಾರುಗಳ ಕುರಿತ ಮಾಹಿತಿಯಲ್ಲಿ, ಈ ಕೊರಿಯನ್ ಕಾರು ತಯಾರಕರು ಭಾರತೀಯ ಮಾರುಕಟ್ಟೆಗಾಗಿ ಕ್ಯಾರೆನ್ಸ್ ಇವಿ ಅಭಿವೃದ್ಧಿಪಡಿಸುತ್ತಿರುವುದಾಗಿ ದೃಢಪಡಿಸಿದ್ದಾರೆ. ಕಿಯಾ ಕ್ಯಾರೆನ್ಸ್ ಇವಿಯನ್ನು ಮೊದಲ ಬಾರಿಗೆ 2022 ರಲ್ಲಿ ಭಾರತ-ಕೇಂದ್ರಿತ ಆರಾಮದಾಯಕ ಇವಿ ಎಂದು ಉಲ್ಲೇಖಿಸಲಾಗಿದೆ, ಇದು 3-ಸಾಲು ಎಮ್‌ಪಿವಿಯನ್ನು ಆಧರಿಸಿದೆ ಎಂದು ನಾವು ನಂಬಿದ್ದೇವೆ. ಪ್ರಸ್ತುತ ಕಿಯಾ EV6 ಭಾರತದಲ್ಲಿ ಈ ಕೊರಿಯನ್ ಕಾರು ತಯಾರಕರ ಏಕೈಕ ಆಲ್‌-ಎಲೆಕ್ಟ್ರಿಕ್ ಕಾರು ಆಗಿದೆ ಮತ್ತು ಬಹು ನಿರೀಕ್ಷಿತ Kia EV9 ಎಸ್‌ಯುವಿಯು 2024ರ ಕೊನೆಯಲ್ಲಿ ಬರಲಿದೆ.

ನಿರೀಕ್ಷಿತ ಎಲೆಕ್ಟ್ರಿಕ್ ಪವರ್‌ಟ್ರೇನ್

ಭಾರತಕ್ಕಾಗಿ ಮುಂಬರುವ ಕ್ಯಾರೆನ್ಸ್ EV ಯ ಯಾವುದೇ ತಾಂತ್ರಿಕ ವಿವರಗಳನ್ನು ಕಾರು ತಯಾರಕರು ಈವರೆಗೆ ನೀಡಿಲ್ಲ. ಒಂದೇ ಮೋಟಾರ್ ಸೆಟಪ್‌ನೊಂದಿಗೆ ಇದು ಸುಮಾರು 400-500 ಕಿಮೀ ವ್ಯಾಪ್ತಿಯನ್ನು ಹೊಂದಬಹುದು ಎಂದು ನಾವು ಅಂದಾಜಿಸುತ್ತೇವೆ. ಇದು ಡಿಸಿ ಫಾಸ್ಟ್‌ ಚಾರ್ಜಿಂಗ್ ಮತ್ತು V2L (ವಾಹನದಿಂದ ಲೋಡ್) ಕಾರ್ಯವನ್ನು ಸಹ ಒಳಗೊಂಡಿರಬಹುದು.

ಹೊಸ ಮೊಡೆಲ್‌ಗಳ ಭಾಗಗಳು ಪ್ರಕಟ

ಇತ್ತೀಚೆಗೆ ಅನಾವರಣಗೊಂಡ EV5 ಸೇರಿದಂತೆ 2027 ರ ವೇಳೆಗೆ ಕಿಯಾದ ಜಾಗತಿಕ ಲೈನ್‌ಆಪ್‌ನ ಭಾಗವಾಗಿರುವ 15 EV ಗಳ ಭಾಗವಾಗಿ ಕ್ಯಾರೆನ್ಸ್ EV ಅನ್ನು ಘೋಷಿಸಲಾಗಿದೆ. ಈ ಮೊಡೆಲ್‌ಗಳನ್ನು ನಿರ್ದಿಷ್ಟ ಮಾರುಕಟ್ಟೆಗಳಿಗೆ ಬಿಡುಗಡೆಯ ಕುರಿತು ಮಾಹಿತಿ ನೀಡಲಾಗಿದ್ದು, ಅದರಲ್ಲಿ ಕ್ಯಾರೆನ್ಸ್ EV ಅನ್ನು ಇದೀಗ ಭಾರತಕ್ಕೆ ಘೋಷಿಸಲಾಗಿದೆ. ಇವಿಗಳು ಮತ್ತು ಆಂತರಿಕ ದಹನಕಾರಿ ಎಂಜಿನ್ (ICE) ಮೊಡೆಲ್‌ಗಳನ್ನು ಜಾಗತಿಕವಾಗಿ ಕಿಯಾದ 13 ಕಾರ್ಖಾನೆಗಳಲ್ಲಿ ಉತ್ಪಾದಿಸಲಾಗುವುದು, ದಕ್ಷಿಣ ಕೊರಿಯಾದಲ್ಲಿ ಇನ್ನೂ ಎರಡು EV-ನಿರ್ದಿಷ್ಟ ಉತ್ಪಾದನಾ ಘಟಕಗಳು ಕಾರ್ಯನಿರ್ವಹಿಸಲಿವೆ.

ಇದನ್ನು ಸಹ ಓದಿ: Hyundai-Kia; EV ಬ್ಯಾಟರಿ ಉತ್ಪಾದನೆಯನ್ನು ಭಾರತದಲ್ಲೆ ಪ್ರಾರಂಭಿಸಲು ಎಕ್ಸೈಡ್ ಎನರ್ಜಿ ಜೊತೆ ಸಹಭಾಗಿತ್ವ

ಸೌಕರ್ಯ-ಭರಿತ ಆಫರ್ ಆಗಿರಬಹುದು

ಕ್ಯಾರೆನ್ಸ್ ಇವಿಯ ಸೌಕರ್ಯಗಳ ಪಟ್ಟಿಗೆ ಸಂಬಂಧಿಸಿದ ವಿವರಗಳು ಇನ್ನೂ ಲಭ್ಯವಾಗದಿದ್ದರೂ, ಕಿಯಾ ಅದನ್ನು ಸಮೃದ್ಧಭರಿತ ವೈಶಿಷ್ಟ್ಯಗಳಿಂದ ಪ್ಯಾಕ್ ಮಾಡಬಹುದು ಎಂದು ನಾವು ಅಂದಾಜಿಸುತ್ತೇವೆ. ಈ ಎಲೆಕ್ಟ್ರಿಕ್ ಎಮ್‌ಪಿವಿಯು ಅದೇ ಡ್ಯುಯಲ್ ಡಿಜಿಟಲ್ ಡಿಸ್‌ಪ್ಲೇಗಳೊಂದಿಗೆ (ಇನ್ಫೋಟೈನ್ಮೆಂಟ್ ಮತ್ತು ಇನ್ಸ್ಟ್ರುಮೆಂಟೇಶನ್‌ಗಾಗಿ ತಲಾ 10.25-ಇಂಚಿನ), ವಯರ್‌ಲೆಸ್‌ ಫೋನ್ ಚಾರ್ಜಿಂಗ್, ವೆಂಟಿಲೇಟೆಡ್ ಫ್ರಂಟ್ ಸೀಟ್‌ಗಳು ಮತ್ತು ರೆಗುಲರ್‌ ಕ್ಯಾರೆನ್ಸ್‌ನಿಂದ ಸನ್‌ರೂಫ್‌ ಅನ್ನು ಪಡೆಯುವ ನಿರೀಕ್ಷೆಯಿದೆ.

ಸುರಕ್ಷತಾ ತಂತ್ರಜ್ಞಾನದ ವಿಷಯದಲ್ಲಿ, ಇದು ಆರು ಏರ್‌ಬ್ಯಾಗ್‌ಗಳನ್ನು (ರೆಗುಲರ್‌ನಂತೆ), ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್ (ESC) ಮತ್ತು ಮುಂಭಾಗ ಮತ್ತು ಹಿಂಭಾಗದ ಪಾರ್ಕಿಂಗ್ ಸೆನ್ಸಾರ್‌ಗಳನ್ನು ಪಡೆಯುವ ಸಾಧ್ಯತೆ ಇದೆ. 2026 ರ ವೇಳೆಗೆ Kia ತನ್ನ 63 ಪ್ರತಿಶತದಷ್ಟು ಮೊಡೆಲ್‌ಗಳನ್ನು ಹೇಳಲಾದ ಸುರಕ್ಷತಾ ತಂತ್ರಜ್ಞಾನದೊಂದಿಗೆ ಸಜ್ಜುಗೊಳಿಸಲು ಯೋಜಿಸುತ್ತಿರುವುದರಿಂದ ಕ್ಯಾರೆನ್ಸ್ EV ಬಹುಶಃ ಕೆಲವು ಸುಧಾರಿತ ಚಾಲಕ ಸಹಾಯ ವ್ಯವಸ್ಥೆಗಳನ್ನು (ADAS) ಪಡೆಯಬಹುದು.

ನಿರೀಕ್ಷಿತ ಬಿಡುಗಡೆ ಮತ್ತು ಬೆಲೆ

ಕಿಯಾ ಕ್ಯಾರೆನ್ಸ್‌ ಇವಿಯು 2025 ರಲ್ಲಿ ಭಾರತೀಯ ಮಾರುಕಟ್ಟೆಗೆ ಪ್ರವೇಶಿಸಬಹುದು ಎಂದು ನಾವು ನಿರೀಕ್ಷಿಸುತ್ತೇವೆ, ಇದು ದೇಶದಲ್ಲಿ ಅತ್ಯಂತ ಕೈಗೆಟುಕುವ ಎಲೆಕ್ಟ್ರಿಕ್‌ ಎಮ್‌ಪಿವಿ ಆಗಲಿದೆ. ಇದರ ಬೆಲೆಗಳು 20 ಲಕ್ಷ ರೂ.ನಿಂದ (ಎಕ್ಸ್ ಶೋರೂಂ) ಪ್ರಾರಂಭವಾಗುವ ಸಾಧ್ಯತೆಯಿದೆ ಮತ್ತು ಪ್ರಸ್ತುತ ಇದು ಯಾವುದೇ ನೇರ ಪ್ರತಿಸ್ಪರ್ಧಿಯನ್ನು ಹೊಂದಿರುವುದಿಲ್ಲ. ಆದರೆ, ಇದು BYD E6 ಗೆ ಹೆಚ್ಚು ಕೈಗೆಟುಕುವ ಆಯ್ಕೆಯಾಗಲಿದೆ. ನಾವು ಮಾರುತಿಯಿಂದ ಎಲೆಕ್ಟ್ರಿಕ್ ಎಮ್‌ಪಿವಿಯನ್ನು ನಿರೀಕ್ಷಿಸುತ್ತಿದ್ದೇವೆ, ಆದರೆ ಇದು 2026 ರ ಮೊದಲು ಬರುವ ಸಾಧ್ಯತೆಗಳು ತೀರ ಕಡಿಮೆ. ಹಾಗೆಯೇ, ನೀವು ಹೈಬ್ರಿಡ್ ಆಯ್ಕೆಯಲ್ಲಿ ಆಸಕ್ತಿ ಹೊಂದಿದ್ದರೆ ಈಗಾಗಲೇ ಟೊಯೋಟಾ ಇನ್ನೋವಾ ಹೈಕ್ರಾಸ್/ಮಾರುತಿ ಇನ್ವಿಕ್ಟೋ ಆಯ್ಕೆಯು ಮಾರುಕಟ್ಟೆಯಲ್ಲಿ ಲಭ್ಯವಿದೆ.

ಇಲ್ಲಿ ಇನ್ನಷ್ಟು ಓದಿ : ಕ್ಯಾರೆನ್ಸ್‌ ಡೀಸೆಲ್

Share via

Write your Comment on Kia ಕೆರೆನ್ಸ್ ಇವಿ

explore similar ಕಾರುಗಳು

ಕಿಯಾ ಕೆರೆನ್ಸ್

4.4452 ವಿರ್ಮಶೆಗಳುಈ ಕಾರಿಗೆ ಅಂಕಗಳನ್ನು ನೀಡಿ
ಟ್ರಾನ್ಸ್ಮಿಷನ್ಮ್ಯಾನುಯಲ್‌/ಆಟೋಮ್ಯಾಟಿಕ್‌

ಕಿಯಾ ಕೆರೆನ್ಸ್ ಇವಿ

51 ವಿಮರ್ಶೆಈ ಕಾರಿಗೆ ಅಂಕಗಳನ್ನು ನೀಡಿ
Rs.16 ಲಕ್ಷ* Estimated Price
ಜೂನ್ 25, 2025 Expected Launch
ಟ್ರಾನ್ಸ್ಮಿಷನ್ಆಟೋಮ್ಯಾಟಿಕ್‌
ಲಾಂಜ್‌ ಮಾಡಿದಾಗ ನನ್ನಗೆ ಎಚ್ಚರಿಸಿ

Enable notifications to stay updated with exclusive offers, car news, and more from CarDekho!

trending ಎಲೆಕ್ಟ್ರಿಕ್ ಕಾರುಗಳು

  • ಪಾಪ್ಯುಲರ್
  • ಉಪಕಮಿಂಗ್
ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ