• English
  • Login / Register

2026 ರ ವೇಳೆಗೆ ಭಾರತಕ್ಕೆ ಬರಲಿರುವ ಕಿಯಾ EVಗಳು

ಕಿಯಾ ಇವಿ9 ಗಾಗಿ ansh ಮೂಲಕ ಮೇ 28, 2024 09:04 pm ರಂದು ಪ್ರಕಟಿಸಲಾಗಿದೆ

  • 26 Views
  • ಕಾಮೆಂಟ್‌ ಅನ್ನು ಬರೆಯಿರಿ

ಕಿಯಾ ಭಾರತಕ್ಕೆ ತರಲು ನೋಡುತ್ತಿರುವ ಮೂರು EV ಗಳಲ್ಲಿ ಎರಡು ಅಂತರಾಷ್ಟ್ರೀಯ ಮಾಡೆಲ್ ಗಳು ಮತ್ತು ಒಂದು ಕ್ಯಾರೆನ್ಸ್‌ MPV ಯ ಎಲೆಕ್ಟ್ರಿಕ್ ವರ್ಷನ್ ಆಗಿದೆ.

All Kia EVs Launching By 2026

ಭಾರತೀಯ EV ಮಾರುಕಟ್ಟೆಯು ಮುಂದಿನ ಕೆಲವು ವರ್ಷಗಳಲ್ಲಿ ತ್ವರಿತವಾಗಿ ಬೆಳೆಯಲು ಸಿದ್ಧವಾಗಿದೆ ಮತ್ತು ಇದಕ್ಕೆ ಸಹಾಯ ಮಾಡಲು ವಿವಿಧ ಬ್ರಾಂಡ್‌ಗಳಿಂದ ಹಲವಾರು ಹೊಸ ಮಾಡೆಲ್ ಗಳು, ವಿವಿಧ ಸೆಗ್ಮೆಂಟ್ ಗಳು ಮತ್ತು ಬೆಲೆ ರೇಂಜ್ ಗಳನ್ನು ಒಳಗೊಂಡಿವೆ. ಅಂತರಾಷ್ಟ್ರೀಯ ಕಾರು ತಯಾರಕರಾಗಿರುವ ಕಿಯಾ ಭಾರತದಲ್ಲಿ ತನ್ನ EV ಶ್ರೇಣಿಯನ್ನು ವಿಸ್ತರಿಸಲು ನೋಡುತ್ತಿದೆ. 2026 ರ ವೇಳೆಗೆ, ಅದು ಮೂರು ಹೊಸ EV ಗಳನ್ನು ಮತ್ತು ಫೇಸ್‌ಲಿಫ್ಟ್ ಆಗಲಿರುವ ಮಾಡೆಲ್ ಅನ್ನು ಪರಿಚಯಿಸಲಿದೆ.

 ಕಿಯಾ EV9

Kia EV9

 ಕೊರಿಯನ್ ತಯಾರಕರು ಪರಿಚಯಿಸಲಿರುವ ಮೊದಲ ಹೊಸ EV, ಕಿಯಾ EV9 ಆಗಿರುತ್ತದೆ. ಈ ಫುಲ್-ಸೈಜ್ ಎಲೆಕ್ಟ್ರಿಕ್ SUV ಈ ವರ್ಷ ಭಾರತದ ಮಾರುಕಟ್ಟೆಗೆ ಬರಲಿದೆ ಮತ್ತು ಇದರ ಬೆಲೆಯು 80 ಲಕ್ಷ ರೂಪಾಯಿಗಳಿಂದ (ಎಕ್ಸ್ ಶೋರೂಂ) ಶುರುವಾಗುವ ನಿರೀಕ್ಷೆಯಿದೆ. ಜಾಗತಿಕವಾಗಿ, EV9 99.8 kWh ಬ್ಯಾಟರಿ ಪ್ಯಾಕ್‌ನೊಂದಿಗೆ ಎರಡು ಪವರ್‌ಟ್ರೇನ್ ಆಯ್ಕೆಗಳೊಂದಿಗೆ ಬರುತ್ತದೆ: 204 PS ಮತ್ತು 350 Nm ಉತ್ಪಾದಿಸುವ ಸಿಂಗಲ್-ಮೋಟಾರ್ ರಿಯರ್-ವೀಲ್-ಡ್ರೈವ್ ಸೆಟಪ್ ಮತ್ತು 383 PS ಮತ್ತು 700 Nm ಉತ್ಪಾದಿಸುವ ಡ್ಯುಯಲ್-ಮೋಟರ್ ಆಲ್-ವೀಲ್-ಡ್ರೈವ್ ಸೆಟಪ್. ಈ ಎರಡೂ ಸೆಟಪ್‌ಗಳಲ್ಲಿ, EV9 WLTP ಕ್ಲೈಮ್ ಮಾಡಲಾದ 600 ಕಿಮೀ ರೇಂಜ್ ಅನ್ನು ಪಡೆಯುತ್ತದೆ.

Kia EV9 Cabin

 ಇದು ಡ್ಯುಯಲ್ 12.3-ಇಂಚಿನ ಸ್ಕ್ರೀನ್ ಗಳು (ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಮತ್ತು ಡಿಜಿಟಲ್ ಡ್ರೈವರ್ ಡಿಸ್ಪ್ಲೇ), 14-ಸ್ಪೀಕರ್ ಮೆರಿಡಿಯನ್ ಸೌಂಡ್ ಸಿಸ್ಟಮ್, ವೆಹಿಕಲ್-ಟು-ಲೋಡ್ (V2L), 9 ಏರ್‌ಬ್ಯಾಗ್‌ಗಳು ಮತ್ತು 360-ಡಿಗ್ರಿ ಕ್ಯಾಮೆರಾದಂತಹ ಫೀಚರ್ ಗಳನ್ನು ಪಡೆಯುತ್ತದೆ. ಲೆವೆಲ್ 3 ಆಟೊನೊಮಸ್ ಡ್ರೈವಿಂಗ್ ಹೊಂದಿರುವ ವಿಶ್ವದ ಏಕೈಕ ಪ್ರೊಡಕ್ಷನ್-ಸ್ಪೆಕ್ ಕಾರು ಇದಾಗಿದೆ, ಆದರೆ ಭಾರತದಲ್ಲಿ ಬರಲಿರುವ ಮಾಡೆಲ್ ಲೆವೆಲ್ 2 ADAS ಫೀಚರ್ ಗಳನ್ನು ಮಾತ್ರ ಹೊಂದಿರಬಹುದು.

 ಕಿಯಾ EV3

Kia EV3

 ಜಾಗತಿಕವಾಗಿ ಪಾದಾರ್ಪಣೆ ಮಾಡಲಿರುವ ಕೋರಿಯನ್ ತಯಾರಕರ ಇತ್ತೀಚಿನ EV, ಕಾಂಪ್ಯಾಕ್ಟ್ ಎಲೆಕ್ಟ್ರಿಕ್ SUV ಆಗಿರುವ ಕಿಯಾ EV3 ಆಗಿದೆ. ಇದು ಬಹುಶಃ ಕಿಯಾ ಸೆಲ್ಟೋಸ್‌ನ ಗಾತ್ರದಲ್ಲೇ ಎಲೆಕ್ಟ್ರಿಕ್ ವರ್ಷನ್ ಆಗಿ ಭಾರತಕ್ಕೂ ಬರಲಿದೆ. EV3 ಬೆಲೆಯು 30 ಲಕ್ಷ ರೂಪಾಯಿಗಳಿಂದ (ಎಕ್ಸ್ ಶೋ ರೂಂ) ಶುರುವಾಗುವ ನಿರೀಕ್ಷೆಯಿದೆ ಮತ್ತು 2026 ರ ವೇಳೆಗೆ ಭಾರತೀಯ ಮಾರುಕಟ್ಟೆಗೆ ಬರಬಹುದು.

Kia EV3 Cabin

 ಜಾಗತಿಕವಾಗಿ, ಇದನ್ನು ಎರಡು ಬ್ಯಾಟರಿ ಪ್ಯಾಕ್‌ಗಳೊಂದಿಗೆ ನೀಡಲಾಗುತ್ತಿದೆ: 58.3 kWh ಮತ್ತು 81.4 kWh, ಆದರೆ ಭಾರತ-ಸ್ಪೆಕ್ ವರ್ಷನ್ ಅನ್ನು ಚಿಕ್ಕ ಬ್ಯಾಟರಿ ಪ್ಯಾಕ್‌ನೊಂದಿಗೆ ನೀಡುವ ಸಾಧ್ಯತೆಯಿದೆ. ಇದು ಮುಂಭಾಗದ ಚಕ್ರಗಳನ್ನು ಓಡಿಸಲು, 204 PS ಮತ್ತು 283 Nm ಅನ್ನು ಉತ್ಪಾದಿಸುವ ಒಂದೇ ಎಲೆಕ್ಟ್ರಿಕ್ ಮೋಟರ್‌ನೊಂದಿಗೆ ಬರುತ್ತದೆ ಮತ್ತು ಜಾಗತಿಕ ವರ್ಷನ್ 400 ಕಿ.ಮೀಗಿಂತಲೂ ಹೆಚ್ಚಿನ ರೇಂಜ್ ಅನ್ನು ನೀಡುತ್ತದೆ. ಫೀಚರ್ ಗಳ ವಿಷಯಕ್ಕೆ ಬಂದರೆ, ಇದು ಡ್ಯುಯಲ್ 12.3-ಇಂಚಿನ ಸ್ಕ್ರೀನ್‌ಗಳು, ಟಚ್-ಆಧಾರಿತ ಕ್ಲೈಮೇಟ್ ಕಂಟ್ರೊಲ್ಸ್, ಪನರೋಮಿಕ್ ಸನ್‌ರೂಫ್, ವೆಹಿಕಲ್-ಟು-ಲೋಡ್, ಮಲ್ಟಿಪಲ್ ಏರ್‌ಬ್ಯಾಗ್‌ಗಳು ಮತ್ತು ಲೇನ್ ಕೀಪ್ ಅಸಿಸ್ಟ್, ಅಡಾಪ್ಟಿವ್ ಕ್ರೂಸ್ ಕಂಟ್ರೋಲ್ ಮತ್ತು ಆಟೊನೊಮಸ್ ಎಮರ್ಜೆನ್ಸಿ ಬ್ರೆಕಿಂಗ್ ನಂತಹ ಲೆವೆಲ್ 2 ADAS ಫೀಚರ್ ಗಳನ್ನು ಪಡೆಯಲಿದೆ.

 ಕಿಯಾ ಕ್ಯಾರೆನ್ಸ್ EV

Kia Carens EV confirmed for India

 ಕಿಯಾ ವಿಶೇಷವಾಗಿ ಭಾರತದಂತಹ ಪ್ರದೇಶಗಳಿಗೆ ಕೆರೆನ್ಸ್ MPV ಯ ಎಲೆಕ್ಟ್ರಿಕ್ ವರ್ಷನ್ ಅನ್ನು ತಯಾರಿಸುತ್ತಿದೆ. ಕಿಯಾ ಕೆರೆನ್ಸ್ EV ಬೆಲೆಯು ರೂ. 25 ಲಕ್ಷಗಳಿಂದ (ಎಕ್ಸ್ ಶೋರೂಂ) ಶುರುವಾಗುವ ನಿರೀಕ್ಷೆಯಿದೆ ಮತ್ತು ಮುಂದಿನ ವರ್ಷದಲ್ಲಿ ಮಾರುಕಟ್ಟೆಗೆ ಬರಲಿದೆ.

 ಇದನ್ನು ಕೂಡ ಓದಿ: 2030 ರ ವೇಳೆಗೆ ಮಹೀಂದ್ರಾ 6 ICE SUV ಗಳನ್ನು ಬಿಡುಗಡೆ ಮಾಡಲಿದೆ: ಬನ್ನಿ, ಅವುಗಳ ವಿವರ ನೋಡೋಣ!

 ಇದರ ಬ್ಯಾಟರಿ ಪ್ಯಾಕ್ ಮತ್ತು ಪವರ್‌ಟ್ರೇನ್‌ನ ವಿವರಗಳನ್ನು ಇನ್ನೂ ಬಹಿರಂಗಪಡಿಸಲಾಗಿಲ್ಲ, ಆದರೆ ಇದು ಸುಮಾರು 400-500 ಕಿಮೀ ರೇಂಜ್ ಅನ್ನು ನೀಡುವ ನಿರೀಕ್ಷೆಯಿದೆ. ಇದು ICE ಕೆರೆನ್ಸ್ ನಲ್ಲಿರುವ ಫೀಚರ್ ಗಳಾದ ಡ್ಯುಯಲ್ 10.25-ಇಂಚಿನ ಡಿಸ್ಪ್ಲೇಗಳು, ಆಟೋಮ್ಯಾಟಿಕ್ ಕ್ಲೈಮೇಟ್ ಕಂಟ್ರೋಲ್, ವೈರ್‌ಲೆಸ್ ಫೋನ್ ಚಾರ್ಜಿಂಗ್, ವೆಂಟಿಲೇಟೆಡ್ ಫ್ರಂಟ್ ಸೀಟ್‌ಗಳು, ಸನ್‌ರೂಫ್, 6 ಏರ್‌ಬ್ಯಾಗ್‌ಗಳು, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್ (ESC) ಮತ್ತು ಇದು ಕೆಲವು ADAS ನಂತಹ ಫೀಚರ್ ಗಳನ್ನು ಕೂಡ ಪಡೆಯಬಹುದು.

 ಕಿಯಾ EV6 ಫೇಸ್‌ಲಿಫ್ಟ್

2025 Kia EV6

 EV6, ಬ್ಯಾಟರಿ ಎಲೆಕ್ಟ್ರಿಕ್ ವಾಹನಗಳಿಗೆ ಮಾತ್ರ ಮೀಸಲಾಗಿರುವ E-GMP ಪ್ಲಾಟ್‌ಫಾರ್ಮ್ ಅನ್ನು ಆಧರಿಸಿರುವ ಕಿಯಾದ ಮೊದಲ EV ಕೊಡುಗೆಯಾಗಿದೆ. ಇದು 2022 ರಲ್ಲಿ ಭಾರತದಲ್ಲಿ ಬಿಡುಗಡೆಯಾದ ಕಿಯಾದ ಮೊದಲ ಎಲೆಕ್ಟ್ರಿಕ್ ಮಾಡೆಲ್ ಆಗಿದೆ. EV6ಗೆ ದೊಡ್ಡ ಬ್ಯಾಟರಿ ಮತ್ತು ಮುಂಭಾಗದ ಡಿಸೈನ್ ಬದಲಾವಣೆಗಳೊಂದಿಗೆ ವಿಶ್ವಾದ್ಯಂತ ಫೇಸ್‌ಲಿಫ್ಟ್ ಅನ್ನು ನೀಡಲಾಗಿದೆ. ಈ ಫೇಸ್‌ಲಿಫ್ಟ್ ಆಗಿರುವ ಕಿಯಾ EV6 ಮುಂದಿನ 12-18 ತಿಂಗಳೊಳಗೆ ಭಾರತಕ್ಕೆ ಬರಲಿದೆ ಎಂಬುದು ನಮ್ಮ ನಿರೀಕ್ಷೆಯಾಗಿದೆ. ಇದು ಈಗಾಗಲೇ ಇರುವ EV6 ಗೆ ಹೋಲಿಸಿದರೆ 60.95 ಲಕ್ಷ ರೂಪಾಯಿಗಳ (ಎಕ್ಸ್ ಶೋ ರೂಂ) ಪ್ರೀಮಿಯಂ ಬೆಲೆಯಿಂದ ಶುರುವಾಗಲಿದೆ.

2025 Kia EV6 Cabin

ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಯೂನಿಟ್ ಮತ್ತು ಡ್ರೈವರ್ ಡಿಸ್‌ಪ್ಲೇಗಾಗಿ ಡ್ಯುಯಲ್ 12.3-ಇಂಚಿನ ಸ್ಕ್ರೀನ್‌ಗಳು, ಮಲ್ಟಿ-ಜೋನ್ ಟಚ್-ಬೇಸ್ಡ್ ಕ್ಲೈಮೇಟ್ ಕಂಟ್ರೋಲ್, ಪವಾರ್ಡ್ ಸೀಟ್ ಗಳು ಮತ್ತು ಲೆವೆಲ್ 2 ADAS ಸೂಟ್‌ನೊಂದಿಗೆ ಕೆಲವು ಹೆಚ್ಚಿನ ಫೀಚರ್ ಗಳೊಂದಿಗೆ ಅದೇ ಪ್ರೀಮಿಯಂ ರೀತಿಯ ಕ್ಯಾಬಿನ್ ಅನ್ನು ನಿರೀಕ್ಷಿಸಬಹುದು. ಇಲ್ಲಿ ನಾವು 700 ಕಿಲೋಮೀಟರ್‌ಗಳಿಗಿಂತಲೂ ಹೆಚ್ಚಿನ ARAI-ಕ್ಲೇಮ್ ಮಾಡಿರುವ ರೇಂಜ್ ಅನ್ನು ನಿರೀಕ್ಷಿಸಬಹುದು, ಆದರೆ ರಸ್ತೆಯಲ್ಲಿ ಇದು ಸುಮಾರು 500 ಕಿಲೋಮೀಟರ್‌ಗಳಷ್ಟು ನೀಡಬಹುದು.

ಇದನ್ನು ಕೂಡ ಓದಿ: ಭಾರತದಲ್ಲಿ ಪೇಟೆಂಟ್ ಪಡೆದ Suzuki eWX ಎಲೆಕ್ಟ್ರಿಕ್ ಹ್ಯಾಚ್‌ಬ್ಯಾಕ್, ಇದು ಮಾರುತಿ ವ್ಯಾಗನ್ R EV ಆಗಿರಬಹುದೇ?

ಈ ಎಲೆಕ್ಟ್ರಿಕ್ ವಾಹನಗಳು 2026 ರವರೆಗೆ ಮಾರುಕಟ್ಟೆಗೆ ಬರಲಿದೆ ಮತ್ತು ಅದರ ನಂತರ ಕಿಯಾ ತನ್ನ ಇನ್ನಷ್ಟು ಜಾಗತಿಕ ಎಲೆಕ್ಟ್ರಿಕ್ ಕಾರುಗಳನ್ನು ಪರಿಚಯಿಸಬಹುದು. ಭಾರತೀಯ ಮಾರುಕಟ್ಟೆಗೆ ಬರಲಿರುವ EV ಗಳ ವಿವರಗಳನ್ನು ನಿಮಗೆ ನೀಡಿದ್ದೇವೆ. ಇವುಗಳಲ್ಲಿ, ನೀವು ಯಾವುದರ ಬಗ್ಗೆ ಹೆಚ್ಚು ಉತ್ಸುಕರಾಗಿದ್ದೀರಿ ಎಂದು ಕೆಳಗೆ ಕಾಮೆಂಟ್‌ ಮಾಡಿ ನಮಗೆ ತಿಳಿಸಿ!

was this article helpful ?

Write your Comment on Kia ಇವಿ9

explore similar ಕಾರುಗಳು

Similar cars to compare & consider

ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ

ಕಾರು ಸುದ್ದಿ

  • ಟ್ರೆಂಡಿಂಗ್ ಸುದ್ದಿ
  • ಇತ್ತಿಚ್ಚಿನ ಸುದ್ದಿ

trending ಎಲೆಕ್ಟ್ರಿಕ್ ಕಾರುಗಳು

  • ಪಾಪ್ಯುಲರ್
  • ಉಪಕಮಿಂಗ್
  • ಹೊಸ ವೇರಿಯೆಂಟ್
    ಮಹೀಂದ್ರ be 6
    ಮಹೀಂದ್ರ be 6
    Rs.18.90 - 26.90 ಲಕ್ಷಅಂದಾಜು ದಾರ
    ಮಾರಚ್‌, 2025: ನಿರೀಕ್ಷಿತ ಲಾಂಚ್‌
  • ಹೊಸ ವೇರಿಯೆಂಟ್
    ಮಹೀಂದ್ರ xev 9e
    ಮಹೀಂದ್ರ xev 9e
    Rs.21.90 - 30.50 ಲಕ್ಷಅಂದಾಜು ದಾರ
    ಮಾರಚ್‌, 2025: ನಿರೀಕ್ಷಿತ ಲಾಂಚ್‌
  • ಆಡಿ ಕ್ಯೂ6 ಈ-ಟ್ರಾನ್
    ಆಡಿ ಕ್ಯೂ6 ಈ-ಟ್ರಾನ್
    Rs.1 ಸಿಆರ್ಅಂದಾಜು ದಾರ
    ಮಾರಚ್‌, 2025: ನಿರೀಕ್ಷಿತ ಲಾಂಚ್‌
  • ಮಹೀಂದ್ರ xev 4e
    ಮಹೀಂದ್ರ xev 4e
    Rs.13 ಲಕ್ಷಅಂದಾಜು ದಾರ
    ಮಾರಚ್‌, 2025: ನಿರೀಕ್ಷಿತ ಲಾಂಚ್‌
  • ಮಾರುತಿ ಇ vitara
    ಮಾರುತಿ ಇ vitara
    Rs.17 - 22.50 ಲಕ್ಷಅಂದಾಜು ದಾರ
    ಮಾರಚ್‌, 2025: ನಿರೀಕ್ಷಿತ ಲಾಂಚ್‌
×
We need your ನಗರ to customize your experience