ಎಲೆಟ್ರೆ ಎಲೆಕ್ಟ್ರಿಕ್‌ SUV ಮೂಲಕ ಭಾರತದ ಮಾರುಕಟ್ಟೆಗೆ ಕಾಲಿಟ್ಟ ಲೋಟಸ್

published on ನವೆಂಬರ್ 10, 2023 04:22 pm by shreyash

  • 56 Views
  • ಕಾಮೆಂಟ್‌ ಅನ್ನು ಬರೆಯಿರಿ

ಈ ಬ್ರಿಟೀಷ್‌ ಕಾರು ತಯಾರಕ ಸಂಸ್ಥೆಯು ಭಾರತದಲ್ಲಿ ತನ್ನ ಮೊದಲ ಶೋರೂಮ್‌ನ್ನು ನವದೆಹಲಿಯಲ್ಲಿ ಉದ್ಘಾಟಿಸಿದೆ

Lotus Eletre Electric SUV

  • ಲೋಟಸ್‌ ಎಲೆಟ್ರೆ SUV ಯು ಮುಂಭಾಗದಲ್ಲಿ ಗ್ರಿಲ್‌ ಮತ್ತು ಮ್ಯಾಟ್ರಿಕ್‌ LED ಹೆಡ್‌ ಲೈಟುಗಳನ್ನು ಹೊಂದಿದೆ
  • ಒಳಗಡೆಗೆ ಇದು ತನ್ನ ಸರಳ ಕ್ಯಾಬಿನ್‌ ವಿನ್ಯಾಸದಲ್ಲಿ 15.1 ಇಂಚಿನ ಟಚ್‌ ಸ್ಕ್ರೀನ್‌ ಇನ್ಫೊಟೈನ್‌ ಮೆಂಟ್‌ ಡಿಸ್ಪ್ಲೇಯನ್ನು ಪಡೆದಿದೆ
  • ಈ ಎಲೆಟ್ರೆ SUVಯು 3 ಪವರ್‌ ಟ್ರೇನ್‌ ಆಯ್ಕೆಗಳೊಂದಿಗೆ ಬರಲಿದ್ದು, ಎಲ್ಲವೂ 112 kWh ಬ್ಯಾಟರಿ ಪ್ಯಾಕ್‌ ಅನ್ನು ಹೊಂದಿವೆ.
  • ಪವರ್‌ ಟ್ರೇನ್‌ ಆಯ್ಕೆಯನ್ನು ಹೊಂದಿಕೊಂಡು ಲೋಟಸ್‌ ಎಲೆಟ್ರೆ ಕಾರು 600 km ಶ್ರೇಣಿ ಅಥವಾ 900 PS ಗಿಂತಲೂ ಹೆಚ್ಚಿನ ಕಾರ್ಯಕ್ಷಮತೆಯನ್ನು ಒದಗಿಸುತ್ತದೆ.

ಬ್ರಿಟನ್ನಿನ ಲೋಟಸ್‌ ಕಾರು ತಯಾರಕ ಸಂಸ್ಥೆಯು ಲೋಟಸ್‌ ಎಲೆಟ್ರೆ ಎಲೆಕ್ಟ್ರಿಕ್ SUV‌ ಮೂಲಕ ಭಾರತದ ಅಟೋಮೊಬೈಲ್‌ ಕ್ಷೇತ್ರಕ್ಕೆ ಪ್ರವೇಶ ಪಡೆದಿದೆ. ಇದು ಮೂರು ವೇರಿಯಂಟ್‌ ಗಳಲ್ಲಿ ದೊರೆಯಲಿದ್ದು ಬೆಲೆಯು ರೂ. 2.55 ಕೋಟಿಯಿಂದ ಪ್ರಾರಂಭವಾಗಲಿದೆ (ಎಕ್ಸ್‌ - ಶೋರೂಂ, ಪಾನ್‌ ಇಂಡಿಯಾ) ಈ ಬ್ರಿಟೀಷ್‌ ಸಂಸ್ಥೆಯು ಭಾರತದ ಮೊದಲ ಮಳಿಗೆಯನ್ನು ನವದೆಹಲಿಯಲ್ಲಿ ಉದ್ಘಾಟಿಸಿದೆ ಸಂಪೂರ್ಣ ವಿವರವನ್ನು ಈ ಕೆಳಗೆ ನೀಡಲಾಗಿದೆ:

 

ವೇರಿಯಂಟ್‌

ಎಕ್ಸ್‌ - ಶೋರೂಂ

ಎಲೆಟ್ರೆ 

ರೂ 2.55 ಕೋಟಿ 

ಎಲೆಟ್ರೆ S

ರೂ 2.75 ಕೋಟಿ

ಎಲೆಟ್ರೆ R

ರೂ 2.99 ಕೋಟಿ

ಲೋಟಸ್‌ ಎಲೆಟ್ರೆ ವಾಹನವು  ಟಾಪ್‌ ಸ್ಪೆಕ್‌ R ವೇರಿಯಂಟ್‌ ನಲ್ಲಿ ಭಾರತದಲ್ಲಿ ಪಾದಾರ್ಪಣೆ ಮಾಡಿದೆ.

 

ಆಕ್ರಮಣಕಾರಿ ನೋಟ

ಎಲೆಟ್ರೆ ಎಲೆಕ್ಟ್ರಿಕ್ SUV‌ ಯು ಅತ್ಯಂತ ಆಕ್ರಮಣಕಾರಿ ನೋಟ ಮತ್ತು ನವಿರಾದ ಸಿಲೂಯೆಟ್‌ ಅನ್ನು ಹೊಂದಿದೆ. ಮುಂಭಾಗದಲ್ಲಿ ಇದು ಸಕ್ರಿಯ ಗ್ರಿಲ್‌ ಮತ್ತು ದೊಡ್ಡದಾದ ಏರ್‌ ಡ್ಯಾಮ್‌ ಜೊತೆಗೆ L ಆಕಾರದ LED ಹೆಡ್‌ ಲೈಟ್‌ ಗಲನ್ನು ಹೊಂದಿದೆ. ಇನ್ನೊಂದೆಡೆ 22 ಇಂಚಿನ 10 ಸ್ಪೋಕ್‌ ಅಲೋಯ್‌ ವೀಲ್‌ ಗಳನ್ನು (20 ಇಂಚ್‌ ಮತ್ತು 23 ಇಂಚಿನ ಐಚ್ಛಿಕ ಅಲೋಯ್‌ ವೀಲ್‌ ಗಳು ಲಭ್ಯ) ನೀವು ಗಮನಿಸಬಹುದಾಗಿದ್ದು ಈ SUV ಯ ಒಟ್ಟಾರೆ ಪ್ರೊಫೈಲ್‌, ಲಾಂಬೋರ್ಗಿನಿ ಉರುಸ್‌ ಮತ್ತು ಫೆರಾರಿ ಪುರೊಸಾಂಗ್‌ ಮುಂತಾದ ಅಧಿಕ ಕಾರ್ಯಕ್ಷಮತೆಯ ಇತರ SUV ಗಳನ್ನು ಹೋಲುತ್ತದೆ.

 ಹಿಂಭಾಗದಲ್ಲಿ, ಇಳಿಜಾರಾದ ರೂಫ್‌ ಲೈನ್‌ ಮುಂದೆ ಸಾಗಿ ಟೇಲ್‌ ಗೇಟ್‌ ಆಗಿ ಪರಿವರ್ತನೆಯಾಗುತ್ತದೆ. ಇಲ್ಲಿ ದೊಡ್ಡದಾದ ರಿಯರ್‌ ಸ್ಪಾಯ್ಲರ್‌ ಅನ್ನು ಸಹ ನೋಡಬಹುದು. ಈ SUV ಯು ಸಂಪರ್ಕಿತ LED ಟೇಲ್‌ ಲ್ಯಾಂಪ್‌ ಗಳು, ಕಪ್ಪು ಬಣ್ಣದ ಹಿಂಭಾಗದ ಬಂಪರ್‌ ಜೊತೆಗೆ ಎದ್ದು ಕಾಣುವ ನೋಟವನ್ನು ಹೊಂದಿದೆ.

ಇದನ್ನು ಸಹ ನೋಡಿರಿ: ಭಾರತದಲ್ಲಿ 2024ರಲ್ಲಿ ಬಿಡುಗಡೆಗೆ ಮೊದಲೇ ಹೊಸ ಕಿಯಾ ಕಾರ್ನಿವಲ್‌ ಕಾರಿನ ಒಳಭಾಗದ ಅನಾವರಣ

 

 ಆಕರ್ಷಕ, ಉತ್ಕೃಷ್ಟ ಒಳಾಂಗಣ

ಲೋಟಸ್‌ ಎಲೆಟ್ರೆ SUV ಯು ಒಳಭಾಗದಲ್ಲಿ ಕಪ್ಪು ಬಣ್ಣದ ಸೀಟ್‌ ಅಫೋಲ್ಸ್ಟರಿ ಜೊತೆಗೆ ಸಂಪೂರ್ಣ ಕಪ್ಪಗಿನ ಇಂಟೀರಿಯರ್‌ ಥೀಮ್‌ ಅನ್ನು ಹೊಂದಿದೆ. ಇದರಲ್ಲಿ 15.1 ಇಂಚಿನ ಫ್ಲೋಟಿಂಗ್‌ ಇನ್ಫೊಟೈನ್‌ ಮೆಂಟ್‌ ಟಚ್‌ ಸ್ಕ್ರೀನ್‌ ಎದ್ದು ಕಾಣುತ್ತಿದ್ದು, ಇದು ಕಾರಿನ ಎಲ್ಲಾ ಫಂಕ್ಷನಾಲಿಟಿಗಳನ್ನು ನಿಯಂತ್ರಿಸುತ್ತದೆ. ಅಲ್ಲದೆ ಚಾಲಕನ ಮತ್ತು ಸಹಚಾಲಕನ ಸ್ಲಿಮ್‌ ಡಿಸ್ಪ್ಲೇಗಳನ್ನು ಡ್ಯಾಶ್‌ ಬೋರ್ಡ್‌ ಜೊತೆಗೆ ಏಕೀಕರಿಸಲಾಗಿದೆ. ಹಿಂಭಾಗದ ಪ್ರಯಾಣಿಕನಿಗಾಗಿ ಪ್ರತ್ಯೇಕ ಇನ್ಫೊಟೈನ್‌ ಮೆಂಟ್‌ ಡಿಸ್ಪ್ಲೇಯು ಲಭ್ಯ.

 ಈ ವಾಹನವು 1,380 W ಔಟ್ಪುಟ್‌ ಜೊತೆಗೆ ಪ್ರಮಾಣಿತ 15-ಸ್ಪೀಕರ್ KEF‌ ಸೌಂಡ್‌ ಸಿಸ್ಟಂ ಅನ್ನು ಸಹ ಹೊಂದಿದೆ. ಆದರೆ ಈ SUV ಯ ಟಾಪ್‌ ಸ್ಪೆಕ್‌ ಆವೃತ್ತಿಯು 2,160 W ಜೊತೆಗೆ 23 ಸ್ಪೀಕರ್‌ ಸೆಟಪ್‌ ಅನ್ನು ಹೊಂದಿದ್ದು 3D ಸರೌಂಡ್‌ ಸೌಂಡ್‌ ಅನ್ನು ಒದಗಿಸುತ್ತದೆ. ಈ ಎಲೆಟ್ರೆಯು ಲಿಡರ್‌ ಸೆನ್ಸಾರ್‌ ಗಳನ್ನು ಹೊಂದಿದ್ದು, ಅಟೋನೋಮಸ್‌ ಡ್ರೈವಿಂಗ್‌ ತಂತ್ರಜ್ಞಾನದ ಜೊತೆಗೆ ಬರುತ್ತದೆ. 

 ಲೋಟಸ್‌ ಸಂಸ್ಥೆಯು ಎಲೆಟ್ರೆಯಲ್ಲಿ ಪಾರ್ಕಿಂಗ್‌ ಪ್ಯಾಕ್‌ ಮತ್ತು ಹೈವೇ ಅಸಿಸ್ಟ್‌ ಪ್ಯಾಕ್‌ ಜೊತೆಗೆ ಎರಡೂ ಅಡ್ವಾನ್ಸ್ಡ್‌ ಡ್ರೈವರ್‌ ಅಸಿಸ್ಟೆನ್ಸ್‌ ಸಿಸ್ಟಂ ಪ್ಯಾಕ್‌ ಗಳನ್ನು ಒದಗಿಸುತ್ತದೆ. ಇದೇ ವೇಳೆ ಎಲೆಟ್ರೆ R ಕಾರು ಸಹ ಲೋಟಸ್‌ ಡೈನಾಮಿಕ್‌ ಹ್ಯಾಂಡ್ಲಿಂಗ್‌ ಪ್ಯಾಕ್‌, ಕಾರ್ಬನ್‌ ಫೈಬರ್‌ ಪ್ಯಾಕ್‌, ಹೈ ಫರ್ಮಾಮೆನ್ಸ್‌ ಟೈರ್‌ ಗಳ ಜೊತೆಗೆ ಬರುವ ಗ್ಲೋಸ್‌ ಬ್ಲ್ಯಾಕ್‌ ವೀಲ್‌ ಗಳು ಮತ್ತು ಸ್ಟೇನ್‌ ಲೆಸ್‌ ಸ್ಟೀಲ್‌ ಪೆಡಲ್‌ ಗಳೊಂದಿಗೆ ಬರಲಿದೆ. 

 

  1.  ಪವರ್‌ ಟ್ರೇನ್‌ ಗಳ ಪರಿಶೀಲನೆ

ಲೋಟಸ್‌ ಎಲೆಟ್ರೆ ಎಲೆಕ್ಟ್ರಿಕ್‌ SUV ಯು 3 ಪವರ್‌ ಟ್ರೇನ್‌ ಆಯ್ಕೆಗಳೊಂದಿಗೆ ಬರಲಿದ್ದು, ಅವೆಲ್ಲವೂ 112 kWh ಬ್ಯಾಟರಿ ಪ್ಯಾಕ್‌ ಅನ್ನು ಬಳಸಲಿವೆ. ಅವುಗಳ ವಿವರಗಳನ್ನು ಕೆಳಗೆ ನೀಡಲಾಗಿದೆ.

 

ಲೋಟಸ್‌ ಎಲೆಟ್ರೆ

ಲೋಟಸ್‌ ಎಲೆಟ್ರೆ S

ಲೋಟಸ್‌ ಎಲೆಟ್ರೆ R

ಪವರ್ (PS)

611 PS

611 PS

918 PS

ಟಾರ್ಕ್ (Nm)

710 Nm

710 Nm

985 Nm

ಬ್ಯಾಟರಿ ಸಾಮರ್ಥ್ಯ

112 kWh

112 kWh

112 kWh

WLTP ಕ್ಲೇಮು ಮಾಡಿರುವ ಶ್ರೇಣಿ

600 km

600 km

490 km

0-100 kmph

4.5 ಸೆಕೆಂಡುಗಳು

4.5 ಸೆಕೆಂಡುಗಳು

2.95 ಸೆಕೆಂಡುಗಳು

ಗರಿಷ್ಠ ವೇಗ

258 kmph

258 kmph

265 kmph

 ಪ್ರತಿಸ್ಪರ್ಧಿಗಳು

 ಭಾರತದಲ್ಲಿ ಲೋಟಸ್‌ ಎಲೆಟ್ರೆ SUVಯನ್ನು ಜಾಗ್ವರ್ I-ಪೇಸ್ ಮತ್ತು BMW iX ಬದಲಿಗೆ ದೊರೆಯುವ ಪ್ರೀಮಿಯಂ ಆಯ್ಕೆ ಎಂದು ಪರಿಗಣಿಸಲಾಗಿದ್ದು ಲಂಬೋರ್ಗಿನಿ ಉರುಸ್ S ಬದಲಿಗೆ ಇರುವ ಬದಲಿ ಎಲೆಕ್ಟ್ರಿಕ್‌ ಆಯ್ಕೆ ಎಂದು ಸಹ ಪರಿಗಣಿಸಲಾಗಿದೆ.

 ಈ ಬ್ರಿಟೀಷ್‌ ಕಾರು ತಯಾರಕ ಸಂಸ್ಥೆಯು ತಮ್ಮ ಮಿಡ್‌ ಎಂಜಿನ್‌ ಸ್ಪೋರ್ಟ್ಸ್‌ ಕಾರು ಆಗಿರುವ ಲೋಟಸ್‌ ಎಮಿರಾ ವನ್ನು 2024ರಲ್ಲಿ ಭಾರತಕ್ಕೆ ತರಲಿದೆ.

ಇಲ್ಲಿ ಇನ್ನಷ್ಟು ಮಾಹಿತಿ ಪಡೆಯಿರಿ: ಎಲೆಟ್ರೆ ಅಟೋಮ್ಯಾಟಿಕ್

ಅವರಿಂದ ಪ್ರಕಟಿಸಲಾಗಿದೆ
was this article helpful ?

0 out of 0 found this helpful

Write your ಕಾಮೆಂಟ್

Read Full News

ಕಾರು ಸುದ್ದಿ

  • ಟ್ರೆಂಡಿಂಗ್ ಸುದ್ದಿ
  • ಇತ್ತಿಚ್ಚಿನ ಸುದ್ದಿ

trending ಎಲೆಕ್ಟ್ರಿಕ್ ಕಾರುಗಳು

  • ಪಾಪ್ಯುಲರ್
  • ಉಪಕಮಿಂಗ್
×
We need your ನಗರ to customize your experience